Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹಬ್ಬಾರ್ ಅವರು ದಾರಿ ತಪ್ಪಿದ ಮಕ್ಕಳು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ ಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈಗಾಗಲೇ ಇಬ್ಬರೂ ಶಾಸಕರಿಗೂ ಪಕ್ಷ ನೋಟಿಸ್ ನೀಡಿದೆ. ಎಂಪಿ ಚುನಾವಣೆ ಫಲಿತಾಂಶದ ಬಳಿಕ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದರು. ಈ ವರ್ಷ ಬಿಬಿಎಂಪಿ ಚುನಾವಣೆ ನಡೆಸುವುದರ ಕುರಿತು ಮಾತನಾಡಿದ ಅವರು, ನಮಗೆ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಲ್ಲವಾಗಿದೆ mp ಚುನಾವಣೆ ಫಲಿತಾಂಶ ನೋಡಿ ಸರ್ಕಾರ ನಿರ್ಧರಿಸಬಹುದು ಮುದಿ ಪ್ರಧಾನಿ ಆಗುತ್ತಾರಾ ಇಲ್ಲವಾ ಅಂತ ನೋಡಿ ನಿರ್ಧರಿಸಬಹುದು ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ತೀರ್ಮಾನ ಮಾಡಬಹುದು…
ಬೆಳಗಾವಿ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನಾದ್ರಿ ಹನುಮ ಮಂದಿರದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ನೂರು ಕೋಟಿ ನೀಡಿದ್ದಾರೆ. ಆದರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಹಣ ನೀಡಿಲ್ಲ ಎಂದು ಸಿಎಂ ವಿರುದ್ಧ ನಟ ಚೇತನ್ ಅಹಿಂಸಾ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ನಟ ಚೇತನ್, ಅಂಜನಾದ್ರಿ ಅಭಿವೃದ್ಧಿಗೆ ಸಿಎಂ ನೂರು ಕೋಟಿ ಹಣ ನೀಡಿರುವ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಆ ಹಣವನ್ನು ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಬಳಸುವಂತೆ ಒತ್ತಾಯಿಸಿದರು. ತಾನು ಅಹಿಂದ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ನಿಜವಾಗಲೂ ಅಹಿಂದಪರ ಕೆಲಸ ಮಾಡುತ್ತಿಲ್ಲ.ಅಹಿಂದ ಪರ ಕೆಲಸ ಮಾಡದೇ ಸೋಮಾರಿಯಾಗಿದ್ದಾರೆ.ಸರ್ಕಾರ ಜಾತಿಗಣತಿ ಬಿಡುಗಡೆ ಮಾಡಿ ಶ್ರೀಮಂತರ ಆಸ್ತಿಯನ್ನ ಬಡವರಿಗೆ ಮರುಹಂಚಿಕೆ ಮಾಡುವಂತೆ ಒತ್ತಾಯಿಸಿದರು. ಸೋಮಾರಿ ಸಿದ್ದರಾಮಯ್ಯ ಅಲೆಮಾರಿ ಜನಾಂಗಕ್ಕೆ ಬಜೆಟ್‌ನಲ್ಲಿ ಒಂದು ರೂಪಾಯಿ ಹಣವನ್ನೂ ನೀಡಿಲ್ಲ. ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಮುಂದಾಗದೇ ಹನುಮಾನ ಜನ್ಮಭೂಮಿ ಅಭಿವೃದ್ಧಿಗೆ 100 ಕೋಟಿ ಕೊಟ್ಟಿದ್ದೇ ಎಂದು ಹೇಳುವ…
ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ವಿದೇಶಕ್ಕೆ ಹೋಗಲು ಆತನಿಗೆ ಪಾಸ್ಪೋರ್ಟ್ ನೀಡಿದ್ದು ಕೇಂದ್ರ ಸರ್ಕಾರ ತಾನೇ ಹಾಗಾದರೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಯಾಕೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಎಸ್ಆರ್ ಪಾಟೀಲ್ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಕೇಸ್ ನಲ್ಲಿ ಎರಡು ಬಾರಿ ಪತ್ರ ಬರೆದಿದ್ದಾರೆ. ಎರಡು ಬಾರಿ ಪತ್ರ ಬರೆದರು ಪಾಸ್ಪೋರ್ಟ್ ರದ್ದಾಗಿಲ್ಲ. ಪಾಸ್ ಪೋರ್ಟ್ ರದ್ದು ಮಾಡದಿರುವುದು ಯಾರ ತಪ್ಪು? ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್ಆರ್ ಪಾಟೀಲ್ ಪ್ರಶ್ನಿಸಿದ್ದಾರೆ. ಬಾಯಿಗೆ ಬಂದಂತೆ ಮಾತಾಡಿ ಗೂಬೆ ಕೂರಿಸುವುದು ಒಳ್ಳೆಯದಲ್ಲ. ಕಾನೂನಿನ ಮುಂದೆ ಎಲ್ಲರೂ ಕೂಡ ಒಂದೇ.ಪ್ರಜ್ವಲ್ ಗೆ ಪಾಸ್ಪೋರ್ಟ್ ನೀಡಿದ್ಯಾರು? ಕೇಂದ್ರ ಸರ್ಕಾರ ತಾನೇ? ಪ್ರಜ್ವಲ್ ವಿದೇಶಕ್ಕೆ ಹೋಗಿದ್ದು FIR ಆದಮೇಲೆ ಅಲ್ಲ. ಎಫ್ ಐ ಆರ್ ಗಿಂತ ಮೊದಲೇ ಆತ ವಿದೇಶಕ್ಕೆ ಹೋಗಿದ್ದಾನೆ. ದೇವೇಗೌಡರಿಗೆ ಕಳಂಕ ತರವ ಕೆಲಸ ನಮ್ಮ ಪಕ್ಷ ಮಾಡಿಲ್ಲ ಪ್ರಜ್ವಲ್ ಗೆ…
ತುಮಕೂರು : ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಕ್ಷೇತ್ರದಲ್ಲಿ ಪುಂಡರು ಗಲಾಟೆ ನಡೆಸಿದ್ದು, ಕೇವಲ ದಾರಿ ಬಿಡಿ ಎಂದಿದಕ್ಕೆ ಯೋಧನ ಮೇಲೆ ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಕ್ರಾಸ್ಬಳಿ ನಡೆದಿದೆ. ಹೌದು, ಕೇವಲ ದಾರಿ ಬಿಡಿ ಎಂದಿದಕ್ಕೆ ಯೋಧನ ಮೇಲೆ ಮರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ಒಳಗಾಗಿರುವ ಯೋಧನನ್ನು ಗೋವಿಂದರಾಜು (30) ಎಂದು ಹೇಳಲಾಗಿತ್ತಿದೆ. ಭರತ್, ಪುನೀತ್, ಗೌರಿಶಂಕರ, ಶಿವಾ, ದಿಲೀಪ್ ಯೋಧನ ಮೇಲೆ ಹಲ್ಲೆ ಮಾಡಿರುವ ಪುಂಡರು ಎಂದು ತಿಳಿದುಬಂದಿದೆ. ಹಲ್ಲೆಗೆ ಒಳಗಾಗಿರುವ ಯೋಧ ಗೋವಿಂದರಾಜು ಅವರು ಜಮ್ಮುಕಾಶ್ಮಿರದ ರಜೌರಿನಲ್ಲಿ ಭಾರತೀಯ ಭೂಸೇನೆ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ರಜೆಯ ಮೇಲೆ ಊರಿಗೆ ಬಂದಿದ್ದು, ಬೈರೇನಹಳ್ಳಿ ಕ್ರಾಸ್ಗೆ ಬರುತ್ತಿದ್ದರು. ಈ ವೇಳೆ ದಾರಿ ಮಧ್ಯೆ ನಿಂತಿದ್ದವರಿಗೆ ಯೋಧ ಗೋವಿಂದರಾಜು ಅವರು ದಾರಿ ಬಿಡಿ ಎಂದಿದ್ದಾರೆ. ಈ ವೇಳೆ ಕುಡಿದ ಮತ್ತಲ್ಲಿ ಐವರು ಮದ್ಯದ ಬಾಟಲಿಯಿಂದ ಯೋಧ ಗೋವಿಂದರಾಜು ಅವರ ಮೇಲೆ ಹಲ್ಲೆ…
ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಜಿ ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾನು ಪಾರ್ಟಿಯಲ್ಲಿ ಇಲ್ಲ ಹೈದರಾಬಾದ್ ನಲ್ಲಿ ಇದ್ದೇನೆ ಎಂದಿದ್ದ ನಟಿ ಹೇಮಾ ಇದೀಗ ಬೆಂಗಳೂರಿಗೆ ಹೇಮಾ ಬಂದಿರುವ ವಿಮಾನದ ಟಿಕೆಟ್ ಮಾಹಿತಿ ಲಭ್ಯವಾಗಿದೆ. ನಟಿ ಹೇಮಾ ಜೊತೆಗೆ ಮೂವರು ಬೆಂಗಳೂರಿಗೆ ಬಂದಿದ್ದ ಮಾಹಿತಿ ಲಭ್ಯವಾಗಿದೆ. ಇಂಡಿಗೋ 6E-6305 ವಿಮಾನದಲ್ಲಿ ನಟಿ ಹೇಮಾ ಬೆಂಗಳೂರಿಗೆ ಬಂದಿದ್ದರು.ಮಧ್ಯಾಹ್ನ 1:55ಕ್ಕೆ ಶಾಂಶಾಬಾದ್ ನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು. ಮಧ್ಯಾಹ್ನ 3 15ಕ್ಕೆ ಬೆಂಗಳೂರು ಏರ್ಪೋರ್ಟ್ಗೆ ವಿಮಾನ ಆಗಮಿಸಿದ್ದು, ನಟಿ ಹೇಮಾ ಜೊತೆ ಮತ್ತಿಬರು ಬಂದಿರುವ ಬಗ್ಗೆ ಟಿಕೆಟ್ ದಾಖಲೆ ಲಭ್ಯವಾಗಿದೆ. ನಾನು ಎಲ್ಲೂ ಹೋಗಿಲ್ಲವೆಂದು ನಂಬಿಸಲು ನಟಿ ಹೇಮ ಡ್ರಾಮಾ ಮಾಡಿದ್ದರು ಒಂದು ದಿನ ರೆಸಾರ್ಟ್ ನಲ್ಲಿದ್ದೇನೆ ಎಂದು ನಟಿ ಹೇಮ ವಿಡಿಯೋ ಬಿಡುಗಡೆ ಮಾಡಿದ್ದರು ಅಲ್ಲದೆ ಮನೆಯಲ್ಲಿ ಬಿರಿಯಾನಿ ಮಾಡುತ್ತಿರುವ ಇನ್ನೊಂದು ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ಮೈಸೂರಿನ ಅರಮನೆ ಮಂಡಳಿ ಕಚೇರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಇದೀಗ ಲೋಕಾಯುಕ್ತ ಅಧಿಕಾರಿಗಳು ಮೈಸೂರಿನ ಅರಮನೆ ಆಡಳಿತ ಕಚೇರಿಯ ಮೇಲೆ ದಾಳಿ ನಡೆಸಿ ಲೆಕ್ಕಕ್ಕೆ ಸಿಗದ 4.10 ಲಕ್ಷ ರೂಪಾಯಿ ವಶ ಪಡೆಯಲಾಗಿದೆ ಹೌದು ಮೈಸೂರಿನ ಅರಮನೆ ಮಂಡಳಿ ಕಚೇರಿಯ ಮೇಲೆ ಇದೀಗ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದು, ಈ ವೇಳೆ ಲೆಕ್ಕಕ್ಕೆ ಸಿಗದ 4.10 ಲಕ್ಷ ರೂಪಾಯಿ ವಶಕ್ಕೆ ಪಡೆದ ಲೋಕಾಯುಕ್ತ. ಪ್ರವೇಶ ದ್ವಾರ ಪಾರ್ಕಿಂಗ್ ಲಾಟ್ ನಲ್ಲಿ ಲೆಕ್ಕಕ್ಕೆ ಸಿಗದ ಹಣ ಪತ್ತೆಯಾಗಿದೆ. ಪ್ರವೇಶ ಟಿಕೇಟ್ ಪಾರ್ಕಿಂಗ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಎಂಬ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ದೂರನ್ನು ಆಧರಿಸಿದ ಲೋಕಾಯುಕ್ತ ಎಸ್ ಪಿ ಸಚಿತ್ ನೇತೃತ್ವದಲ್ಲಿ ಇದೀಗ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮೈಸೂರು ಚಾಮರಾಜನಗರ, ಮಂಡ್ಯ, ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಗಳು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.
ಬೆಂಗಳೂರು : ರಾಜ್ಯದ ಎಲ್ಲೆಡೆ ವರ್ಷದ ಮೊದಲ ಮಳೆಯಾಗುತ್ತಿದ್ದು, ಇದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಹಾನಿ ಸಂಭವಿಸಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು,ಬೆಂಗಳೂರಿನ ಜನತೆಗೆ ಶುದ್ಧ ನೀರು ಪೂರೈಸುವಂತೆ ‘BWSSB’ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಈ ಬಾರಿ 7,000 ಬೋರ್ವೆಲ್ ಡ್ರೈ ಆಗಿದೆ. ನೀರು ಇದ್ದರೆ ಒತ್ತುವರಿ ಆಗಲ್ಲ ಹಾಗೂ ಅಂತರ್ಜಲ ಮಟ್ಟ ಕುಸಿಯಲ್ಲ. ಹೀಗಾಗಿ ಕೆರೆ ತುಂಬಿಸಲು ಬಿಡಬ್ಲ್ಯೂಎಸ್‌ಎಸ್‌ಬಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಟ್ಯಾಂಕರ್ ನೀರು ವಿಚಾರ ಸಂಬಂಧ ಪಟ್ಟಂತೆ ಹಾಗೂ ಕೆರೆ ತುಂಬಿಸುವ ಕೆಲಸ ಬಿ ಡಬ್ಲ್ಯೂ ಎಸ್ ಎಸ್ ಬಿ ಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು. ನಿನ್ನೆ ಸಿಎಂ ಹಾಗೂ ನಾನು ಬೆಂಗಳೂರು ಸಿಟಿ ರೌಂಡ್ ನಡೆಸಿದ್ದೇವೆ. ಬೆಂಗಳೂರು ಸಿಟಿ ರೌಂಡ್ಸ್ ವೇಳೆ ನಾವು ಹಲವು ಸಮಸ್ಯೆಗಳನ್ನು ಗಮನಿಸಿದ್ದೇವೆ. ಬೆಂಗಳೂರಿನ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದೇನೆ.ಅಧಿಕಾರಿಗಳಿಗೆ 5 ಪ್ರೋಗ್ರಾಮ್ ಕೊಟ್ಟಿದ್ದೇನೆ ಶುದ್ಧ ನೀರು ಪೂರೈಸುವಂತೆ…
ಬೆಂಗಳೂರು : ಅಣ್ಣ ತಾಳೆ ಪರೀಕ್ಷೆ ಮಾಡಬೇಡ ಎಲ್ಲಿದ್ದರೂ ಪೊಲೀಸರಿಗೆ ಬಂದು ಶರಣಾಗು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಪತ್ರದ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆಸಿದ್ದು, ಇದು ಅವರ ಕುಟುಂಬದ ವಿಚಾರ ಅದರ ಬಗ್ಗೆ ನನಗೇನು ಕೇಳಬೇಡಿ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್ ಡಿ ದೇವೇಗೌಡರು ಪತ್ರ ಬರೆದಿರುವುದು ಅವರ ಕುಟುಂಬದ ವಿಚಾರ. ದೇವೇಗೌಡರು ಉಂಟು ಅವರ ಕುಟುಂಬ ಉಂಟು. ಎಚ್ ಡಿ ದೇವೇಗೌಡರ ಕುಟುಂಬದ ವಿಚಾರದ ಬಗ್ಗೆ ಏನು ಕೇಳಬೇಡಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ಎಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ನನ್ನ ತಾಳ್ಮೆ ಪರೀಕ್ಷಿಸಬೇಡ ಎಲ್ಲೇ ಇದ್ದರೂ ಬಂದು ಪೊಲೀಸರಿಗೆ ಶರಣಾಗು ಎಂದು ತಿಳಿಸಿದ್ದಾರೆ. ಇದು ಅವನಿಗೆ ಕೊಡುತ್ತಿರುವ ಎಚ್ಚರಿಕೆ ಎಂದು…
ಬೆಂಗಳೂರು : ಸಾಮಾನ್ಯವಾಗಿ ಕಳ್ಳರು ಮನೆಗಳಲ್ಲಿ, ಬ್ಯಾಂಕ್ ಗಳನ್ನು ದರೋಡೆ ಮಾಡುವುದನ್ನು ನೋಡಿರುತ್ತೇವೆ. ಆದರೆ ಬೆಂಗಳೂರಲ್ಲಿ ಖದೀಮರು ಟ್ರಾಫಿಕ್ ಪೋಲೀಸರ ಹೆಸರಲ್ಲಿ ವಾಟ್ಸಪ್ ಮೂಲಕ ದಂಡ ವಸೂಲಿ ಮಾಡಿದ್ದಾರೆ. ಇದೀಗ ಖದೀಮರ ಕೈಗೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಮೃತ ಹೆಡ್ ಕಾನ್ಸ್ಟೇಬಲ್ವೊಬ್ಬರ ಐಡಿ ಕಾರ್ಡ್ ಬಳಸಿ ಟ್ರಾಫಿಕ್ ಫೈನ್ ವಸೂಲಿ ಮಾಡುತ್ತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇವರು ವ್ಯಾಟ್ಸಪ್ ಮೂಲಕ ಮೆಸೇಜ್ ಕಳಿಸಿ ದಂಡ ಕಟ್ಟಿಸಿಕೊಳ್ಳುತ್ತಿದ್ದರು. ಈ ಹಿನ್ನಲೆ ಮೂವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ ಹಾಗೂ ಸುಭಿರ್ ಮಲ್ಲಿಕ್ ಬಂಧಿತರು ಎಂದು ತಿಳಿದುಬಂದಿದೆ. ಕಳ್ಳರ ಖತರ್ನಾಕ್ ಕೆಲಸಕ್ಕೆ ಪೋಲೀಸರೆ ದಂಗಾಗಿದ್ದಾರೆ.ಈ ಬಗ್ಗೆ ಮಾಹಿತಿ ತಿಳಿದ ಮೃತ ಹೆಡ್ ಕಾನ್ಸ್ ಟೇಬಲ್ ಮಗಳು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು.ಮೃತ ಹೆಡ್ ಕಾನ್ಸ್ಟೇಬಲ್ವೊಬ್ಬರ ಐಡಿ ಕಾರ್ಡ್…
ಹುಬ್ಬಳ್ಳಿ : ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡವು ಇದೀಗ ಮೃತ ಅಂಜಲಿಯ ಅಜ್ಜಿ ಹಾಗೂ ಸಹೋದರಿ ಯಶೋಧ ಹತ್ತಿರ CID ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಹೌದು ಇಂದು CID ಅಧಿಕಾರಿಗಳು ಮೃತ ಅಂಜಲಿ ಮನೆಗೆ ಭೇಟಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಅಂಜಲಿ ಅಜ್ಜಿ ಹಾಗೂ ಸಹೋದರಿ ಯಶೋಧ ಬಳಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೆ ಅಂಜಲಿ ಮನೆಯ ಸುತ್ತ ಮುತ್ತಲಿನ ಸ್ಥಳೀಯರಲ್ಲಿ ಕೂಡ CID ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ವಿಶ್ವ 15 ದಿನ ‘CID’ ಕಸ್ಟಡಿಗೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಶ್ವನನ್ನು ಎಂಟು ದಿನ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಮೂರ್ತಿ ನಾಗೇಶ್ ನಾಯ್ಕ್ ಅವರು ಆದೇಶಿಸಿದ್ದಾರೆ. ವಿಶ್ವ ಅಲಿಯಾಸ್ ಗಿರೀಶ್ನನ್ನು ಮತ್ತೆ 15 ದಿನ ಕಸ್ಟಡಿಗೆ ನೀಡುವಂತೆ ಸಿಐಡಿ(CID) ಮನವಿ ಮಾಡಿತ್ತು. ಈ ಹಿನ್ನಲೆ ಇಂದು ಹುಬ್ಬಳ್ಳಿ ಒಂದನೇ ಸಿವಿಲ್ ನ್ಯಾಯಾಲಯ, ಜೆಎಂಎಫ್ಸಿ ಕೋರ್ಟ್ ವಿಚಾರಣೆ ನಡೆಸಿತ್ತು.…