Author: kannadanewsnow05

ತುಮಕೂರು : ಈಗಾಗಲೇ ದೇಶದಲ್ಲಿ ಅಂತಿಮ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಜೂನ್ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ ಈ ಕುರಿತಂತೆ ಮಾತನಾಡಿದ ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ಜೂ ನಾಲ್ಕರಂದು ಫಲಿತಾಂಶ ಬಂದ ಬಳಿಕ ಇಡೀ ಸರ್ಕಾರವನ್ನೇ ಬದಲಾಯಿಸಿ ಬಿಡೋಣ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ನಾಲ್ಕರಂದು ಲೋಕಸಭಾ ಚುನಾವಣೆಯ ಫಲಿತಾಂಶ ಬರುತ್ತದೆ ದಾವಣಗೆರೆಯಲ್ಲಿ ಯಾರೋ ಒಬ್ಬರು ಬಂದು ಮನವಿ ಸಲ್ಲಿಸಿದರು. ಸಂಬಳ ಹೆಚ್ಚಿಸಲು ಅಥವಾ ಅನುದಾನಕ್ಕೋ ಮನವಿ ಅಂತ ಅಂದುಕೊಂಡಿದ್ವಿ, ಆದರೆ ಅವರು ಏನಾದರೂ ಮಾಡಿ ಶಿಕ್ಷಣ ಸಚಿವರನ್ನು ಬದಲಿಸಿ ಎಂದು ಮನವಿ ಸಲ್ಲಿಸಿದರು. ರೀಟೈಲ್ ಆಗಿ ಒಬ್ಬೊಬ್ಬ ಸಚಿವರನ್ನು ಬದಲಾಯಿಸುವ ಬದಲು ಹೋಲ್ ಸೇಲ್ ಆಗಿ ಎಲ್ಲರನ್ನೂ ಬದಲಾಯಿಸಿ ಬಿಡೋಣ. ಶಿಕ್ಷಣ ಸಚಿವರನ್ನು ಬದಲಿಸಲ್ಲ ಎನ್ಟೈರ್ ಸರ್ಕಾರನೇ ಬದಲಿಸೋಣ ಹೇಗೂ ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಬರುತ್ತದೆ. ರಿಸಲ್ಟ್ ಬಳಿಕ ಇಡೀ ಸರ್ಕಾರವನ್ನೇ ಬದಲಾಯಿಸಿ ಬಿಡೋಣ…

Read More

ಮಾಂಡ್ಯ : ಮಾವಿನ ಕಾಯಿ ಕೀಳುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ 16 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹೌದು ಮಾವಿನ ಕಾಯಿ ಕೀಳಲು ಮರದ ಮೇಲೆ ಏರಿದ ಸಂಜಯ್ (16) ಮಾವಿನ ಮರದ ಮೇಲೆ ಮೃತಪಟ್ಟಿದ್ದಾನೆ. ಘಟನೆಯು ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಹಲಗೂರು ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Read More

ಬೆಳಗಾವಿ : ಪ್ರೀತಿ ನಿರಾಕರಿಸಿದ್ದಕ್ಕೆ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ್ ಯುವತಿಯ ಭೀಕರ ಕೊಲೆಯಾಗಿತ್ತು. ಇದೀಗ ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯೊಬ್ಬ ಹುಚ್ಚಾಟ ನಡೆಸಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ದಾಳಿ ಮಾಡಿದ್ದಾನೆ.ಅಲ್ಲದೆ ಯುವತಿಯ ಜೊತೆ ಮದುವೆ ಮಾಡದಿದ್ದರೆ ನೇಹಾ, ಅಂಜಲಿ ರೀತಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಹೌದು ಬೆಳಗಾವಿ ತಾಲೂಕಿನ ಕಿಣೈ ಗ್ರಾಮದ ತಿಪ್ಪಣ್ಣ ಡೋಕರೆ (27) ಎಂಬ ಪಾಗಲ್ ಪ್ರೇಮಿಯ ಕಾಟದಿಂದ ಯುವತಿ ಕುಟುಂಬ ಕಂಗಾಲಾಗಿದೆ. ಯುವತಿ ಅದೇ ಗ್ರಾಮದ ಕಿಣೈಯಲ್ಲಿರುವ ಮನೆಯಲ್ಲಿ ತಾಯಿ ಜೊತೆಗೆ ವಾಸವಿದ್ದಾಳೆ. ಬಿಕಾಂ ಓದುತ್ತಿರುವ ಈಕೆ ನಿತ್ಯ ಕಾಲೇಜಿಗೆ ಹೋಗುವಾಗಲೇ ಫಾಲೋ ಮಾಡಿ ತಿಪ್ಪಣ್ಣ ರೇಗಿಸುತ್ತಿದ್ದನು. ತಿಪ್ಪಣ್ಣ ಹುಚ್ಚಾಟಕ್ಕೆ ಕಾಲೇಜಿಗೆ ಹೋಗುವುದನ್ನೇ ಯುವತಿ ನಿಲ್ಲಿಸಿದ್ದಳಂತೆ. ಕಿಣೈಯಲ್ಲಿರುವ ಮನೆಯಲ್ಲಿ ತಾಯಿ ಜತೆಗೆ ಯುವತಿ ವಾಸವಿದ್ದಳು. ಯುವತಿಯನ್ನು ಮದುವೆ ಮಾಡಿಕೊಡುವಂತೆ ಧಮ್ಕಿಯನ್ನು ಹಾಕಿದ್ದನಂತೆ. ಕೆಲಸ ಇಲ್ಲದೆ ಊರಲ್ಲಿ ಸೋಮಾರಿಯಾಗಿರುವ ತಿಪ್ಪಣ್ಣ ಡೋಕರೆ, ಒಂದೇ…

Read More

ದಾವಣಗೆರೆ : ಒಂದು ತಿಂಗಳು ಮಾಮೂಲಿ ಕೊಡದಿದ್ದಕ್ಕೆ ನನ್ನ ಪತಿಯನ್ನು ಪೊಲೀಸರು ಹೊಡೆದು ಸಾಯಿಸಿದ್ದಾರೆ ಎಂದು ಮೃತ ಆದಿಲ್ ಪತ್ನಿ ಹೀನಾಬಾನು ಚನ್ನಗಿರಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಟ್ಕಾ ಆಡುತ್ತಿದ್ದ ಎಂದು ಆರೋಪಿಸಿ ಚೆನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ನಿನ್ನೆ ಆದಿಲ್ಲನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಠಾಣೆಯಲ್ಲಿ ಕುಸಿದುಬಿದ್ದು ಮತಪಟ್ಟಿದ್ದ ಈ ಒಂದು ಘಟನೆಗೆ ಸಂಬಂಧಿಸಿದಂತೆ ನನ್ನ ಗಂಡನನ್ನು ಪೊಲೀಸರೇ ಸಾಯಿಸಿದ್ದಾರೆ ಎಂದು ಮೃತ ಆದಿಲ್ ಪತ್ನಿ ಹೀನಾಬಾನು ಚನ್ನಗಿರಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂಬ ಅನುಮಾನ ಇದೆ. ಆದ ಕಾರಣ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡಿ. ‌ಬೆಳಗ್ಗೆ ನನಗೆ ಮಾತನಾಡುವ ಧೈರ್ಯ ಇರಲಿಲ್ಲ. ನನಗೆ ಬಿಪಿ ಇದೆ ಎಂದು ಹೇಳುವ ಬದಲು ನನ್ನ ಮಗನಿಗೆ ಲೋ ಬಿಪಿ ಇದೆ ಎಂದು ತಪ್ಪು ಹೇಳಿದ್ದೇನೆ. ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಈ ವಯಸ್ಸಲ್ಲಿ ನನಗೆ ದುಡಿಯೋಕೆ…

Read More

ಮಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಶಕ್ತಿ ಯೋಜನೆಯಿಂದ ಧರ್ಮಸ್ಥಳಕ್ಕೆ ಸಾವಿರಾರು ಜನರು ಬಂದಿದ್ದಾರೆ ಎಂದು ಹೇಳಿದರು. ಮಂಜುನಾಥನ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಹಾಗೂ ಸಿಎಂ ಸಿದ್ದರಾಮಯ್ಯನವರು ಮಂಜುನಾಥನ ದರ್ಶನ ಪಡೆದಿದ್ದೇವೆ. ಸಿಎಂ ಒಳ್ಳೆಯ ಮಳೆ ಬೆಳೆಯಾಗಲಿ ಅಂತ ಪ್ರಾರ್ಥನೆ ಮಾಡಿದ್ದಾರೆ. ನಮ್ಮ ಧರ್ಮದ ಸಂಪ್ರದಾಯದಂತೆ ಬಂದು ದರ್ಶನ ಮಾಡಿದ್ದೇವೆ. ಜನತೆಯ ಪರವಾಗಿ ಹಾಗೂ ವೈಯಕ್ತಿಕ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು. ಶಕ್ತಿ ಯೋಜನೆಯಿಂದ ಧರ್ಮಸ್ಥಳಕ್ಕೆ ಸಾವಿರಾರು ಜನ ಬಂದಿದ್ದಾರೆ. ಈಗಲೂ ಸಿಎಂ ಸಿದ್ದರಾಮಯ್ಯ ನನ್ನ ಬಳಿ ಸಂತೋಷ ವ್ಯಕ್ತಪಡಿಸಿದರು. ದೇಗುಲದ ಒಳಗೆ ಮಹಿಳೆಯರು 2000 ಸಿಗುತ್ತಿದೆ ಅಂತ ಹೇಳಿದರು. ಅವರೆಲ್ಲರ ಆಶೀರ್ವಾದ ನಮಗೆ ಶಕ್ತಿ ತುಂಬಿದೆ. ಎಂದು ಧರ್ಮಸ್ಥಳದಲ್ಲಿ ಉಪಮುಖ್ಯಮಂತ್ರಿ ಡಿಕೆ…

Read More

ಮೈಸೂರು : ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದಾಳಿಯ ವೇಳೆ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಐವರು ಯುವತಿಯರನ್ನು ಇದೆ ವೇಳೆ ರಕ್ಷಣೆ ಮಾಡಿರುವ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ. ಹೌದು ಮೈಸೂರಿನ ವಿಜಯನಗರದಲ್ಲಿ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಐವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಐವರು ಯುವತಿಯರನ್ನು ಇದೆ ವೇಳೆ ಪೊಲೀಸರು ರಕ್ಷಣೆ ಮಾಡಿದ್ದಾರೆ ಮೈಸೂರಿನ ವಿಜಯನಗರದ ರಾಯಲ್ ಇಷಾ ಸ್ಪಾ ಹೆಸರಲ್ಲಿ ವೇಶ್ಯಾ ವಾಟಿಕೆ ದಂದೇ ನಡೆಸುತ್ತಿದ್ದ ಆರೋಪ ಕೇಳಿ ಬಂದಿದೆ ದಂಧೆಯ ಬಗ್ಗೆ ಒಡನಾಡಿ ಸಂಸ್ಥೆಗೆ ನಾಗರೀಕರು ದೂರು ನೀಡಿದ್ದರು ಎಂದು ಹೇಳಲಾಗುತ್ತಿದೆ. ವಿಜಯನಗರ ಪೊಲೀಸರ ಜೊತೆ ಎಸಿಪಿ ಗಜೇಂದ್ರ ಪ್ರಸಾದ್ ಸಿಬ್ಬಂದಿಗಳ ಜೊತೆಗೆ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಐವರು ಯುವತಿಯರನ್ನು ರಕ್ಷಿಸಿದ್ದಾರೆ.

Read More

ಚಿತ್ರದುರ್ಗ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಪೆನ್ ಡ್ರೈವ್ ಹಂಚಿಕೆ ಹಿಂದೆ ಎಚ್ಡಿಕೆ ಇದ್ದಾರೆ ಎಂದು ಆರೋಪಿಸಿದ್ದಾರೆ ಈ ಒಂದು ಆರೋಪಕ್ಕೆ ಬಿಜೆಪಿಯ ಮಾರಿ ಸಚಿವ ಸಿಟಿ ರವಿ ತಿರುಗೇಟು ನೀಡಿದ್ದು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಎಲ್ಲಾ ಯಾಕೆ ಸಚಿವ ಕೆ ಎನ್ ರಾಜಣ್ಣ ಅವರೇ ಚಾರ್ಜ್ ಶೀಟ್ ಸಲ್ಲಿಸಲಿ ಎಂದು ಲೇವಡಿ ಮಾಡಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಕೇಸ್ ಹಿಂದೆ ಎಚ್ಡಿಕೆ ಇದ್ದರೆ ಆರೋಪ ವಿಚಾರವಾಗಿ ಸಚಿವ ರಾಜಣ್ಣ ಹೇಳಿಕೆಗೆ ಮಾಜಿ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದು, ಎಸ್ಐಟಿ ಯಾಕೆ ರಾಜಣ್ಣ ಅವರೇ ಚಾರ್ಜ್ ಶೀಟ್ ಹಾಕಲಿ.ಪ್ರಕರಣವನ್ನು ರಾಜಕೀಯಕ್ಕೆ ದುರ್ಬಳಕೆ ಮಾಡಬಾರದು ಎಂದರು. ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಬೇಕು. ಎಸ್ ಐ ಟಿ ಅವರು ರಾಜಣ್ಣರನ್ನೇ ವಿಚಾರಣೆಗೆ ಒಳಪಡಿಸಬೇಕು. ಸತ್ಯಾಸತ್ಯತೆ ಹೊರಬರಲಿ.ಪ್ರಜ್ವಲ್…

Read More

ಬೆಂಗಳೂರು : ಪಕ್ಕದ ತೆಲಂಗಾಣದ ರೀತಿ ರಾಜ್ಯದಲ್ಲೂ ಚಿತ್ರಮಂದಿರನಗಳನ್ನು ಬಂದ್ ಮಾಡಬೇಕೆಂಬ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಚಿತ್ರರಂಗದ ನಿರ್ಮಾಪಕರು ಪ್ರದರ್ಶಕರ ಸಂಘ ಫಿಲಂ ಚೇಂಬರ್ ನೇತೃತ್ವದಲ್ಲಿ ಸಭೆ ನಡೆಸಿತ್ತು. ಸ್ಯಾಂಡಲ್ ವುಡ್ ಬಂದ್ ವಿಚಾರಕ್ಕೆ ಕುರಿತಾಗಿ ನಟ ಹಾಗೂ ನಿರ್ಮಾಪಕ ಬೇಸರ ವ್ಯಕ್ತಪಡಿಸಿದ್ದು ನಾನು 10 ಸಿನಿಮಾ ಮಾಡಲು ರೆಡಿ ಇದ್ದೇನೆಬನ್ನಿ ನನ್ನ ಹತ್ತಿರ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಡಲ್ ವುಡ್ ಬಂದ್ ವಿಚಾರಕ್ಕೆ ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದು. ಸಮಸ್ಯೆ ಇವೆ ಅಂತ ಚಿತ್ರರಂಗ ಬಂದ್ ಮಾಡೋಕೆ ಆಗುತ್ತಾ? ನಾನು ಹತ್ತು ಸಿನಿಮಾ ಮಾಡಲು ರೆಡಿ ಇದ್ದೇನೆ. ನನ್ನತ್ರ ಬನ್ನಿ ಎಂದು ನಟ ಹಾಗೂ ನಿರ್ಮಾಪಕ ರವಿಚಂದ್ರನ್ ತಿಳಿಸಿದರು. ದರ್ಶನ್ , ಯಶ್ ಅವರು ವರ್ಷಕ್ಕೆ ಮೂರು ಸಿನಿಮಾ ಮಾಡೋಕೆ ಆಗುತ್ತಾ? ಅವರಿಗೂ ಸ್ಟೋರಿ ಸಿಗಬೇಕು. ಅದಕ್ಕೆ ಟೈಮ್ ತೆಗೆದುಕೊಳ್ಳಬೇಕು. ಇಂಡಸ್ಟ್ರಿಯಲ್ ಏರುಪೇರು ಇದ್ದಿದ್ದೆ. ಅದು ಇಂದು ನಿನ್ನೆಯದಲ್ಲ ಅವಾಗಿನಿಂದಲೂ ಇದೆ ಎಂದು ಸ್ಯಾಂಡಲ್…

Read More

ಕೊಪ್ಪಳ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆದರೆ ತಮ್ಮ ದೇವಸ್ಥಾನವನ್ನು ತಾವೇ ಕಟ್ಟಿಕೊಳ್ಳುತ್ತಾರೆ ಎಂದು ಕೊಪ್ಪಳದ ಕಾರಟಗಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾತನಾಡಿದ ಅವರು, ಮೋದಿ ಮತ್ತೊಮ್ಮೆ ಗೆದ್ದರೆ ತಮ್ಮ ದೇವಸ್ಥಾನ ತಾವೇ ಕಟ್ಟಿಕೊಳ್ಳುತ್ತಾರೆ. ರಾಮನ ದೇಗುಲ ಆಯ್ತು ಇನ್ನು ನನ್ನ ದೇಗುಲ ಅಂತ ಕಟ್ಟಿಕೊಳ್ಳುತ್ತಾರೆ. ಯಾಕೆಂದರೆ ಮೋದಿ ಸ್ಟೇಟ್ಮೆಂಟ್ ಗಳು ಹಾಗೆ ಇವೆ ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ ಅಂತ ನರೇಂದ್ರ ಮೋದಿ ಹೇಳುತ್ತಾರೆ. ಜನ ಮತ್ತೊಮ್ಮೆ ಅವಕಾಶ ಕೊಟ್ಟರೆ ಮೋದಿ ದೇಗುಲ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಪ್ರತಿ ಊರಲ್ಲಿ ಮೋದಿ ದೇವಸ್ಥಾನ ಕಟ್ಟಿ ಅನ್ನೋ ಸ್ಥಿತಿ ಬರುತ್ತದೆ. ಪುರಿ ಜಗನ್ನಾಥರು ಮೋದಿ ಭಕ್ತರು ಅಂತಾರೆ. ಎಲ್ಲಿಗೆ ಬಂದಿದೆ ಸ್ಥಿತಿ ನೋಡಿ. ಮೋದಿ ಸಬ್ ಕಾ ಸಾಥ್ ಅಂತಾರೆ ವೇದಿಕೆಯಲ್ಲಿ ಹಿಂದುತ್ವ ಅಂತಾರೆ ಎಂತಹ ಮಾತನ್ನು ಹಿಂದಿನ…

Read More

ಉತ್ತರಪ್ರದೇಶ : ನಿನ್ನೆ ರಾತ್ರಿ ಅಯೋಧ್ಯೆಯ ಬಳಿ ಲಾರಿ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ ಆಗಿದೆ.ಅಪಘಾತದಲ್ಲಿ ಕಲಬುರ್ಗಿ ಮೂಲದ ಒಂದೇ ಕುಟುಂಬದ ಮೂವರು ಸಾವನಪ್ಪಿದ್ದು, ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ. ಶಿವರಾಜ್, ಕಾಶಿನಾಥ್ ಹಾಗೂ ತಂಗೆಮ್ಮ ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ. ಗಾಯಾಳುಗಳಿಗೆ ಅಯೋಧ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕುಟುಂಬದ 22 ಜನ ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಟಿಟಿ ವಾಹನದಲ್ಲಿದ್ದವರು ಕಾಶಿ ವಿಶ್ವನಾಥನ ದರ್ಶನವನ್ನು ಪಡೆದು ವಾಪಸಾಗುತ್ತಿದ್ದ ವೇಳೆ ಲಾರಿಗೆ ಟಿಟಿ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ವೇಳೆ ಕಲಬುರ್ಗಿ ಜಿಲ್ಲೆಯ ಮೂವರು ಸಾವನಪ್ಪಿದ್ದಾರೆ.ಅಲ್ಲದೆ ಟಿಟಿ ವಾಹನದಲ್ಲಿದ್ದ ಇನ್ನೂ ಉಳಿದ ಹಲವರಿಗೆ ಗಂಭೀರವಾದಂತಹ ಗಾಯಗಳಾಗಿದ್ದು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More