Subscribe to Updates
Get the latest creative news from FooBar about art, design and business.
Author: kannadanewsnow05
ನವದೆಹಲಿ : ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಪ್ರಭಾವ ಇದೀಗ ಹೆಚ್ಚಾಗಿದ್ದು, ವ್ಯೂವ್ಸ್ ನಲ್ಲಿ ನರೇಂದ್ರ ಮೋದಿಯನ್ನು ರಾಹುಲ್ ಗಾಂಧಿ ಇದೀಗ ಮೀರಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರಾಹುಲ್ ಗಾಂಧಿ ವಿಡಿಯೋಗಳು 601 ಮಿಲಿಯನ್ ವೀಕ್ಷಣೆ ಗಳಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋಗಳು 350 ಮಿಲಿಯನ್ ವೀಕ್ಷಣೆ ಗಳಿಸಿವೆ. ಅದೇ ರೀತಿ ಫಾಲೋವರ್ಸ್ ಸೇರ್ಪಡೆಯಲು ಕೂಡ ರಾಹುಲ್ ಗಾಂಧಿ ಮೋದಿಗಿಂತ ಮುಂಚೂಣಿಯಲ್ಲಿದ್ದಾರೆ. ರಾಹುಲ್ ಗಾಂಧಿಗೆ 13 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದರೆ, ನರೇಂದ್ರ ಮೋದಿಗೆ 2.2 ಲಕ್ಷ ಸೇರ್ಪಡೆಯಾಗಿದ್ದಾರೆ. ಇನ್ನು ಫೇಸಬುಕ್ಕಿನಲ್ಲಿ ಸಹ ರಾಹುಲ್ ಗಾಂಧಿ ವಿಡಿಯೋಗಳಿಗೆ 148 ಮಿಲಿಯನ್ ವೀಕ್ಷಣೆಗಳು ಬಂದರೆ ನರೇಂದ್ರ ಮೋದಿ ವಿಡಿಯೋಗಳಿಗೆ 72 ಮಿಲಿಯನ್ ವೀಕ್ಷಣೆ ಗಳಿಸಿವೆ. ಫೇಸ್ಬುಕ್ ಫಾಲೋವರ್ಸ್ ಸೇರ್ಪಡೆಯಲ್ಲೂ ಕೂಡ ರಾಹುಲ್ ಮುನ್ನಡೆ ಸಾಧಿಸಿದ್ದು ರಾಹುಲ್ ಗಾಂಧಿ 6 ಲಕ್ಷ ಫಾಲೋವರ್ಸ್ ಗಳಿಸಿದರೆ, ಫೇಸ್ಬುಕ್ ನಲ್ಲಿ ನರೇಂದ್ರ ಮೋದಿ 1.8 ಲಕ್ಷ ಗಳಿಸಿದ್ದಾರೆ. ಇನ್ನು ಯುಟ್ಯೂಬ್ ನಲ್ಲೂ ಸಹ ರಾಹುಲ್ ಗಾಂಧಿ ವಿಡಿಯೋಗಳಿಗೆ…
ರಾಜ್ಯದ ಪಡಿತರರ ಗಮನಕ್ಕೆ : `ರೇಷನ್ ಕಾರ್ಡ್’ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಇಂದೇ ಕೊನೆಯ ದಿನ | Ration card
ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಹೆಸರು ಸೇರ್ಪಡೆ/ತಿದ್ದುಪಡಿಗೆ ಇಂದು ಕೊನೆಯ ದಿನವಾಗಿದೆ. ಪಡಿತರ ಚೀಟಿದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ,ಹೆಸರು ತೆಗೆಯುವುದಕ್ಕೆ ಅವಕಾಶ ನೀಡಲಾಗಿದೆ. ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ವೆಬ್ ಸೈಟ್ ಸ್ವಯಂ ಆಗಿ ಅರ್ಜಿ ಸಲ್ಲಿಸಬಹುದು. ಎಪಿಎಲ್ ಕಾರ್ಡ್ ಪಡೆಯುವವರು ಕೂಡ ಆನ್ನೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗುವುದು. http://ahara.kar.nic.in ವೆಬ್ಟ್ ಗಮನಿಸಬಹುದಾಗಿದೆ. ಆರಂಭ ದಿನಾಂಕ: ಆಗಸ್ಟ್ 01, 2025 ಕೊನೆಯ ದಿನಾಂಕ: ಆಗಸ್ಟ್ 31, 2025 (ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ) ಹೊಸ ಸದಸ್ಯರ ಸೇರ್ಪಡೆ * ಪೋಟೋ ಬದಲಾವಣೆ * ಹೆಸರು ಡಿಲೆಟ್ * ಅಂಗಡಿ. ನಂ. ಬದಲಾವಣೆ * ಹೆಸರು ತಿದ್ದುಪಡಿ * ಮುಖ್ಯಸ್ಥರ…
ಬೆಂಗಳೂರು : ವಿದ್ಯುತ್, ನೀರು, ಹಾಲು, ಬಸ್ಸು ಹಾಗೂ ಮೆಟ್ರೋ ಪ್ರಯಾಣ ದರ, ಮುದ್ರಾಂಕ ಶುಲ್ಕ ಸೇರಿ ವಿವಿಧ ದರ ಹೆಚ್ಚಳ ಬೆನ್ನಲ್ಲೇ ಇದೀಗ ಆಸ್ತಿಗಳ ನೋಂದಣಿ ಶುಲ್ಕವನ್ನೂ ದುಪ್ಪಟ್ಟು ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ಇಂದಿನಿಂದ ಅನ್ವಯವಾಗುವಂತೆ ನೋಂದಣಿ ಶುಲ್ಕ ಶೇ.1 ರಿಂದ ಶೇ.2ಕ್ಕೆ ಹೆಚ್ಚಳ ಆಗಲಿದೆ. ಸ್ಥಿರಾಸ್ತಿ ಶುದ್ಧ ಕ್ರಯ ಪತ್ರ, ಸ್ವಾಧೀನ ಭೋಗ್ಯ ಪತ್ರ, ಕ್ರಯ ಉದ್ದೇಶದ ಜಿಪಿಎ ಸೇರಿ ವಿವಿಧ ಆಸ್ತಿ ಖರೀದಿ ನೋಂದಣಿಗೆ ಈ ಶುಲ್ಕ ಅನ್ವಯವಾಗಲಿದೆ. ಈವರೆಗೆ ರಾಜ್ಯದಲ್ಲಿ ನಿವೇಶನ, ಭೂಮಿ, ಫ್‌ಲ್ಯಾಟ್, ಮನೆ ಸೇರಿ ಯಾವುದೇ ಸ್ಥಿರಾಸ್ತಿ ಖರೀದಿ ವೇಳೆ ಶೇ.1 ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6 ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು ಶೇ.6.6 ರಷ್ಟು ಶುಲ್ಕ ಭರಿಸಬೇಕಾಗಿತ್ತು. ಇದೀಗ ನೋಂದಣಿ ಶುಲ್ಕ ರಷ್ಟಾಗಿರುವುದರಿಂದ ಆಸ್ತಿಯ ಮಾರುಕಟ್ಟೆ ಬೆಲೆಯ ಶೇ.7.6 ರಷ್ಟನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕಕ್ಕೆ ಭರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಈ ಬಗ್ಗೆ ಕಂದಾಯ ಇಲಾಖೆ…
ಅಲಹಾಬಾದ್ : ವಿವಾಹ ನೋಂದಣಿ ಇಲ್ಲದಿರುವುದು ಅಮಾನ್ಯಗೊಳಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ರಾಜ್ಯ ಸರ್ಕಾರಗಳು ವಿವಾಹ ನೋಂದಣಿಗೆ ನಿಯಮ ರೂಪಿಸಬ ಹುದಾದರೂ, ಅಂತಹ ನೋಂದಣಿ ಉದ್ದೇಶ ಕೇವಲ ಮದುವೆಯ ಸುಲಭ ಸಾಕ್ಷ್ಯವನ್ನು ಒದಗಿಸುವುದಕ್ಕೆ ಮಾತ್ರ. ನೋಂದಣಿ ಆಗದಿದ್ದರೆ ಮದುವೆಯ ಸಿಂಧುತ್ವಕ್ಕೆ ಯಾವುದೇ ಧಕ್ಕೆಯಾಗಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅರ್ಜಿದಾರ ಸುನೀಲ್ ದುಬೆ ದಂಪತಿ ವಿಚ್ಛೇದನಕ್ಕಾಗಿ ಅರ್ಜಿಸಲ್ಲಿಸಿದ್ದರು. ಆದರೆವಿವಾಹನೋಂದಣಿ ಪ್ರಮಾಣಪತ್ರ ಸಲ್ಲಿಸು ವಂತೆ ಆಜಂಗಢದ ಕೌಟುಂಬಿಕ ನ್ಯಾಯಾಲಯ ಗಡುವು ನೀಡಿತ್ತು. ವಿವಾಹ ನೋಂದಣಿ ಪ್ರಮಾಣ ಪತ್ರದಿಂದ ವಿನಾಯಿತಿ ಕೊಡು ವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಯನ್ನೂ ವಿವಾಹ ವನ್ನು ಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ದುಬೆ ಹೈಕೋಟ್ ಹಾಬಾದ್ರ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಪೀಠ, ‘ಹಿಂದೂ ವಿವಾಹ ಕಾಯ್ದೆ, 1955ರ ನಿಬಂಧನೆಗಳ ಪ್ರಕಾರ ಹಿಂದೂ ವಿವಾಹ ನಡೆದರೆ, ಅಂತಹ ಮದುವೆಯ ಸಾಕ್ಷ್ಯವನ್ನು ಸುಗಮಗೊಳಿಸಲು ರಾಜ್ಯ ಸರ್ಕಾರಗಳಿಗೆ ನೋಂದಣಿಗಾಗಿ ನಿಯಮ ರೂಪಿಸುವ ಅಧಿಕಾರವಿದೆ. ಆದರೆ, ಮದು…
ಬೆಂಗಳೂರು : ನಾಡಿನ ನದಿಯ ಅಚ್ಚುಮೆಚ್ಚಿನ ನಂದಿನಿ ಉತ್ಪನ್ನಗಳು ಇತ್ತೀಚಿಗೆ ರಾಜ್ಯ ಅಷ್ಟೇ ಅಲ್ಲದೆ ದೈಲಿಯವರೆಗೂ ತನ್ನ ಹವಾ ಎಬ್ಬಿಸಿತ್ತು ಆದರೆ ಇದೀಗ ನಂದಿನಿ ಪ್ರಾಡಕ್ಟ್ ಗಳು ಕೇವಲ ರಾಷ್ಟ್ರ ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ತನ್ನ ಹೆಸರುವಾಸಿಯಾಗಿದ್ದು ಅಮೆರಿಕಾದಲ್ಲಿ ನಡೆದ ನಾವಿಕ ಸಮ್ಮೇಳನದಲ್ಲಿ ನಂದಿನಿ ಬ್ರಾಂಡಿನ ಎಲ್ಲಾ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಹೌದು ಕನ್ನಡ ನಾಡಿನ ಹೆಮ್ಮೆಯ ಕೆಎಂಎಫ್ ನಂದಿನಿ ಬ್ರಾಂಡಿನ ಎಲ್ಲ ಉತ್ಪನ್ನಗಳನ್ನು ಅಮೆರಿಕ ದೇಶದ ಫ್ಲೋರಿಡಾದ ಲೇಕ್ ಲ್ಯಾಂಡ್ ನಲ್ಲಿ ನಿನ್ನೆ ಅಧಿಕೃತವಾಗಿ ನಡೆದ ನಾವಿಕ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು. ಕೆಎಂಎಫ್ MD ಶಿವಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಶಾಸಕರಾದ ರವಿ ಗಾಣಿಗ, ಅರವಿಂದ ಬೆಲ್ಲದ್ ನಟಿ ರಮ್ಯ, ನಟರಾದ ಶ್ರೀನಾಥ್,ರಕ್ಷಿತ್ ಶೆಟ್ಟಿ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು. ನಾವಿಕದ ಶಿವಕುಮಾರ್ ಮತ್ತು ಹರ್ಷಿತ್ ಗೌಡ ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಜಾಮೀನು ರದ್ದು ಹಿನ್ನೆಲೆಯಲ್ಲಿ ಸದ್ಯ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರನ್ನು ಬಳ್ಳಾರಿಗೆ ಸ್ಥಳಾಂತರಿಸಬೇಕು ಎಂದು ಪ್ರಸಿಕ್ಯೂಶನ್ ಅರ್ಜಿ ಸಲ್ಲಿಸಿದ್ದು ಇಂದು ಬೆಂಗಳೂರಿನ ಸೇಷನ್ಸ್ ಕೋರ್ಟ್ ನಲ್ಲಿ ಈ ಕುರಿತು ವಿಚಾರಣೆ ನಡೆಯಿತು. ವಿಚಾರಣೆ ಬಳಿಕ ನ್ಯಾಯಾಧೀಶರು ಸೆಪ್ಟೆಂಬರ್ 2ಕ್ಕೆ ಅರ್ಜಿಯ ವಿಚಾರಣೆ ಮುಂದೂಡಿದರು. ಹೌದು ನಟ ದರ್ಶನ್ ಅವರನ್ನು ಬಳ್ಳಾರಿಗೆ ಸ್ಥಳಾಂತರಿಸಬೇಕು ಎಂದು ಪ್ರಾಸಿಕ್ಯೂಶನ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಈ ವಿಚಾರವಾಗಿ ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಬಳಿಕ ಜಡ್ಜ್ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿದರು. ಇದೆ ಸಂದರ್ಭದಲ್ಲಿ ನಟ ದರ್ಶನ್ ಅವರಿಗೆ ದಿಂಬು, ಬೆಡ್ ಶೀಟ್ ಸೇರಿದಂತೆ ಇತರೆ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ದರ್ಶನ್ ಪರವಾಗಿ ಅರ್ಜಿ ಸಲ್ಲಿಸಿದ್ದು ಆ ವಿಚಾರಣೆ ಕೂಡ ಮುಂದೂಡಿ ಕೋರ್ಟ್ ಆದೇಶಿಸಿದೆ.
ಚಿತ್ರದುರ್ಗ : ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧ ವಿಚಾರವಾಗಿ ಚಾಮುಂಡಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ ಹಿಂದೂಗಳಿಗೆ ಸೇರಿದ್ದು ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೇಷ್ಟೆ ಮಾಡದಿದ್ದರೆ ಬಿಜೆಪಿ ಅವರಿಗೆ ನಿದ್ದೆ ಬರುವುದಿಲ್ಲ. ಚಾಮುಂಡೇಶ್ವರಿ ಪ್ರಾಧಿಕಾರ ಅಧಿಕೃತ ಹೌದು ಅಲ್ಲವೋ ಈ ಬಗ್ಗೆ ಕೋರ್ಟು ತೀರ್ಮಾನಿಸುತ್ತದೆ. ದಸರಾ ಏಳುಕೋಟೆ ಜನರಿಗೆ ಸೇರಿರುವಂತಹ ಹಬ್ಬ. ಬಿಎಸ್ ವೈ ಕಾಲದಲ್ಲಿ ಅಬ್ದುಲ್ ಕಲಾಂ ಅವರನ್ನು ಆಹ್ವಾನಿಸಿದ್ದರು. ಈ ಹಿಂದೆ ಕವಿ ನಿಸಾರ್ ಅಹಮದ್ ದಸರಾ ಉದ್ಘಾಟಿಸಿದರು. ಆಗ ಬಿಜೆಪಿಗರು ಕುಂಕುಮ ಹಚ್ಚಿಕೊಂಡು ಬನ್ನಿ ಅಂತ ಅವರಿಗೆ ಹೇಳಿದ್ಧರಾ? ಅವರವರ ಧರ್ಮ ಅವರವರಿಗೆ ಶ್ರೇಷ್ಠ ಯಾವುದೇ ಧರ್ಮವನ್ನು ಯಾರು ದ್ವೇಷಿಸಬಾರದು ಅದಕ್ಕಾಗಿ ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ ಬಿಜೆಪಿ ಅವರಿಗೆ ಜನ ನೆಮ್ಮದಿಯಿಂದ ಇರುವುದು ಬೇಕಾಗಿಲ್ಲ ಬೆಂಕಿ ಹಚ್ಚಿ ಬೆಳೆಕಾಳು ಬೇಯಿಸಿಕೊಳ್ಳುವ ಕೆಲಸ ಮಾಡುತ್ತಾರೆ ಈಗಾಗಲೇ ಬಾನು ಮುಷ್ತಾಕ್…
ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎಸ್ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ಚಿನಯ್ಯನನ್ನು ಬೆಂಗಳೂರಿನ ಮೂಲಕ ತಮಿಳುನಾಡಿಗೆ ಕರೆದೋಯುತ್ತಿದ್ದೂ, ಧರ್ಮಸ್ಥಳದಲ್ಲಿ ತನಿಖೆ ನಡೆಸುವಾಗ ನಾನು ಶವ ಹೂತು ಹಾಕುತ್ತಿರುವುದನ್ನು ನೋಡಿದ್ದೇನೆ ಎಂದು ಮತ್ತೋರ್ವ ಸಾಕ್ಷಿದಾರ ಜಯಂತ್ ಮನೆಯಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ. ಹೌದು ಧರ್ಮಸ್ಥಳ ವಿರುದ್ಧ ಷಡ್ಯಂತರ ನಡೆಸುತ್ತಿರುವ ಕುರಿತು SIT ಅಧಿಕಾರಿಗಳು ಯಾವ ರೀತಿ ಯೋಜನೆ ರೂಪಿಸಿದ್ದರು ಎನ್ನುವುದರ ಕುರಿತು ಘಟನೆಯನ್ನು ಮರು ಸೃಷ್ಟಿಸಲಿದ್ದಾರೆ. ಬೆಂಗಳೂರಿನ ಜಯಂತ್ ಮನೆಯಲ್ಲಿ ಮಹಜರು ಸಾಧ್ಯತೆ ನಡೆಸಲಾಗುತ್ತಿದೆ. ತಮಿಳುನಾಡಿಗೆ ಹೋಗುವ ಮುನ್ನ ಮಹಜರು ಸಾಧ್ಯತೆ ಇದೆ ಚಿನ್ನಯ್ಯನ ಸಮ್ಮುಖದಲ್ಲಿಯೇ ಮಹಜರು ನಡೆಸಲಾಗುತ್ತದೆ. ಪಿಣ್ಯದಲ್ಲಿರುವ ದೂರುದಾರ ಜಯಂತ ಮನೆಯಲ್ಲಿ ಅಧಿಕಾರಿಗಳು ಸ್ಥಳ ಮಹಜರು ನಡೆಸಲಿದ್ದಾರೆ.
ಬೆಂಗಳೂರು : ಗಣೇಶ ವಿಸರ್ಜನೆಯ ವೇಳೆ ಪಟಾಕಿ ಸಿಡಿದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿಡಿಮದ್ದುಗಳ ಬಳಕೆ ನಿಷೇಧ ಮಾಡಲಾಗಿದೆ. ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಪಟಾಕಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಪಟಾಕಿ ನಿಷೇಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜ್ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಟಾಕಿ ನಿಷೇಧಿಸಲಾಗಿದೆ. ಪಟಾಕಿ ಬಳಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ನಿನ್ನೆ ಮುತ್ತೂರು ಗ್ರಾಮದಲ್ಲಿ ಪಟಾಕಿ ಸಿಡಿದು ಬಾಲಕ ಸಾವನ್ನಪ್ಪಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿತ್ತು. ಇದೀಗ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಸೇರಿದಂತೆ ಸಾರ್ವಜನಿಕ ಮತ್ತು ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಪಟಾಕಿ ಸಿಡಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಖಡಕ್ ಆದೇಶ ಹೊರಡಿಸಿದ್ದಾರೆ.
ಹಾಸನ : ಮಕ್ಕಳ ಗಲಾಟೆಯ ವಿಚಾರಕ್ಕೆ ದೊಡ್ಡವರ ನಡುವೆ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮುಜಾವರ್ ಮೊಹಲ್ಲಾದಲ್ಲಿ ಗಾಯಗೊಂಡಿದ್ದ ತೌಫಿಕ್ (28) ಸಾವನಪ್ಪಿದ್ದಾನೆ. ಹಾಸನ ಜಿಲ್ಲೆಯ ಅರಸೀಕೆರೆಯ ಮುಜಾವರ್ ಮೊಹಲ್ಲಾ ಎಂಬಲ್ಲಿ ಒಂದು ಘಟನೆ ನಡೆದಿದೆ ಖಾಸಗಿ ಶಾಲೆಯಲ್ಲಿ ತೌಫಿಕ್ ಹಾಗು ಫರ್ಹನ ಇಬ್ಬರು ಮಕ್ಕಳು ಓದುತ್ತಿದ್ದರು. ಶಾಲೆಯಲ್ಲಿ ಮಕ್ಕಳು ಏನೋ ಸಣ್ಣ ವಿಚಾರವಾಗಿ ಗಲಾಟೆ ಮಾಡಿದ್ದಾರೆ ಇದು ಪೋಷಕರವರೆಗೂ ಹೋಗಿದೆ. ಖಾಸಗಿ ಶಾಲೆಯ ಬಳಿ ತೌಫಿಕ್ ಮತ್ತು ಫರಾನ್ ಗಲಾಟೆ ಮಾಡಿದ್ದಾರೆ. ಆಗಸ್ಟ್ 25ರಂದು ಕ್ಷುಲ್ಲಕ ಕಾರಣಕ್ಕೆ ಶಾಲೆಯ ಬಳಿ ಗಲಾಟೆ ಮಾಡಿದ್ದಾರೆ. ಬಿಹೆಚ್ ರಸ್ತೆಯ ಲಸ್ಸಿ ಶಾಪ್ ನಲ್ಲಿ ನಡುವೆ ಗಲಾಟೆ ಅಗಲ ಆಗಿದ್ದು ಮಕ್ಕಳ ಜಗಳದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿದೆ ಗಲಾಟೆ ಅತಿರೇಕಕ್ಕೆ ತಿರುಗಿ ತೌಫಿಕ್ ನನ್ನು ತಳ್ಳಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ತೌಫಿಕ್ ನಿನ್ನೆ ರಾತ್ರಿ ಮೃತಾಪಟ್ಟಿದ್ದಾನೆ. ಇದರಿಂದ ತೌಫಿಕ್ ಸಂಬಂಧಿಕರು ನಿನ್ನೆ ರಾತ್ರಿ ಫರ್ಹನ್ ಮನೆಗೆ…











