Author: kannadanewsnow05

ಮೈಸೂರು : ಧರ್ಮಸ್ಥಳ ಪ್ರಕರಣದಲ್ಲಿ ರಾಜಕೀಯ ಲಾಭ ಸಿಗುತ್ತೆ ಅಂದುಕೊಂಡಿದ್ದಾರೆ ಆದರೆ ಸಿಗಲ್ಲ ಎಂದು ಬಿಜೆಪಿ ಧರ್ಮಸ್ಥಳ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಧರ್ಮಸ್ಥಳದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದೇವೆ. ಹಿಂದೂ ಅಂದರೆ ಅಪಪ್ರಚಾರ ಮಾಡುವುದಲ್ಲ. ಸುಳ್ಳು ಹೇಳೋದಲ್ಲ. ಧರ್ಮಸ್ಥಳ ವಿಚಾರದಲ್ಲಿ ರಾಜಕಾರಣ ಮಾಡಿದವರು ಯಾರು? ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ಏನಾದರೂ ಬರುತ್ತದ? ಬಾನು ಮುಷ್ತಾಕ್ ಉದ್ಘಾಟನೆ ಮಾಡಿಸುತ್ತಿದ್ದೇವೆ. ದಸರಾ ನಾಡ ಹಬ್ಬ ಅಲ್ವಾ? ಹಿಂದೂ ಮುಸಲ್ಮಾನರು ಕ್ರಿಶ್ಚಿಯನ್ ಯಲ್ಲರು ಸೇರಿ ಎಲ್ಲರೂ ಆಚರಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದರು.

Read More

ಶಿವಮೊಗ್ಗ : ಕೆಲ ದಿನಗಳ ಹಿಂದೆ ಯಾದಗಿರಿ ಜಿಲ್ಲೆಯಲ್ಲಿ ಶಾಲಾ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದ ಘಟನೆ ವರದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ, ಮನೆಯ ಶೌಚಾಲಯದಲ್ಲಿ 15 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.‌ ಬಾಲಕಿಗೆ ಹೆರಿಗೆಯಾದ ನಂತರ ಬಾಲಕಿಗೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಬಾಲಕಿಯ ಪೋಷಕರು ದೂರು ನೀಡಿರುವ ದೂರಿನ ಅನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಹೋದರನಿಂದ ಹೇಯ ಕೃತ್ಯ! 15 ವರ್ಷದ ಬಾಲಕಿಯು ಗರ್ಭ ಧರಿಸಲು ಆಕೆಯ 16 ವರ್ಷದ ಅಣ್ಣನೇ ಕಾರಣ ಎಂದು ಪೋಷಕರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ. ಬಾಲಕಿಯು 9ನೇ ತರಗತಿ‌ ಓದಿದ್ದು, ಶಾಲೆ ಬಿಟ್ಟು ಮನೆಯಲ್ಲಿಯೇ ಇರುತ್ತಿದ್ದಳು. ಪೋಷಕರು ಕೆಲಸಕ್ಕೆ ಹೋದಾಗ ಸಹೋದರ ದುಷ್ಕೃತ್ಯ ಎಸಗಿದ್ದಾನೆ. ಬಾಲಕಿಯು ಏಳೂವರೆ ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ…

Read More

ಹಾಸನ : ನಿನ್ನೆ ರಾಜ್ಯಾದ್ಯಂತ ಗಣೇಶ ಮೆರವಣಿಗೆ ವೇಳೆ ಹಲವು ಅವಗಡಗಳು ಸಂಭವಿಸಿದ್ದು, ಹಾಸನ ಮೈಸೂರು ಹಾಗೂ ಮಂಡ್ಯದಲ್ಲಿ ದುರಂತ ನಡೆದಿದೆ. ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಹಾಸನ ಜಿಲ್ಲೆಯ ಆನಂದಪುರದ ಮಂಜುನಾಥ (30) ಎನ್ನುವವರು ಸಾವನ್ನಪ್ಪಿದ್ದಾರೆ. ಇನ್ನು ಮಂಡ್ಯದಲ್ಲೂ ಕೂಡ ಗಣೇಶ ವಿಸರ್ಜನೆ ಮಾಡುವಾಗಲೇ ಮಂಜುನಾಥ (55) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಕೆ ಆರ್ ಪೇಟೆ ತಾಲೂಕಿನ ಜೊಸ್ತನಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ಇನ್ನೂ ಮೈಸೂರಲ್ಲಿ ಮೆರವಣಿಗೆ ವೇಳೆ ಟ್ಯಾಕ್ಟರ್ ನಿಂದ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ ಡಾಕ್ಟರ್ ನಿಂದ ರಾಜು (34) ನಡೆದಿದೆ

Read More

ಚಾಮರಾಜನಗರ : ಚಾಮರಾಜನಗರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಮದ್ದೂರು ಗ್ರಾಮದ ಬಳಿ ಲಾರಿ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಲಾರಿ ಚಾಲಕ ಸ್ಥಳದಲ್ಲಿದ್ದ ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮದ್ದೂರುನಲ್ಲಿ ನಡೆದಿದೆ. ಉಡುಪಿ ಮೂಲದ ಲಾರಿ ಚಾಲಕ ಅನಂತಪದ್ಮನಾಭ (70) ಸಾವನ್ನಪ್ಪಿದ್ದು ಟ್ರ್ಯಾಕ್ಟರ್ ನಲ್ಲಿ ಗಂಭೀರವಾದ ಗಾಯಗಳಾಗಿವೆ. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಅಪಘಾತ ಕುರಿತಂತೆ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಎಂವಿಜೆ ಕಾಲೇಜು ಬಳಿ ಈ ಒಂದು ಘಟನೆ ನಡೆದಿದೆ. ನಿನ್ನೆ ರಾತ್ರಿ ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ವ್ಯಕ್ತಿಯ ಮೇಲೆ ಹರಿದಿತ್ತು. ಪಾದಚಾರಿಯನ್ನು ಸ್ಥಳೀಯರು ತಕ್ಷಣ ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಪಾದಚಾರಿ ಸಾವನ್ನಪ್ಪಿದ್ದಾನೆ KA 41 D 2741 ಸಂಖ್ಯೆಯ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಪೋ ನಂಬರ್ 29ರ ಐಬಿಎಮ್ ಕಂಪನಿಯ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಇದಾಗಿದ್ದು, ಟಿನ್ ಫ್ಯಾಕ್ಟರಿಯಿಂದ ಚನ್ನಸಂದ್ರ ಕಡೆಗೆ ಸಂಚಾರ ಮಾಡುತ್ತಿತ್ತು ಸದ್ಯ ವೈಟ್ ಫೀಲ್ಡ್ ಸಂಚಾರಿ ಠಾಣೆ ಪೊಲೀಸರು ಬಸ್ ವಶಕ್ಕೆ ಪಡೆದಿದ್ದಾರೆ.

Read More

ಶಾಸ್ತ್ರಾನುಸಾರ ಪ್ರಾಕ್ ಶಿರಾ ಶಯನೇ ವಿಂದ್ಯಾತ್ ಧನಮಾಯುಶ್ಚ ದಕ್ಷಿಣೇ | ಪಶ್ಚಿಮೇ ಪ್ರಬಲಾ ಚಿಂತಾ ಹಾನಿಮೃತ್ಯುರಥೋತ್ತರೇ || ಪೂರ್ವಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಧನ ಪ್ರಾಪ್ತಿಯಾಗುವುದು.ಲೌಕಿಕ ಐಶ್ವರ್ಯ ಬಯಸಿದರೆ ಆ ಪ್ರಕಾರ ಸಂಕಲ್ಪ ಮಾಡಿಕೊಂಡು ಪೂರ್ವಕ್ಕೆ ನಿತ್ಯ ರಾತ್ರಿಯಲ್ಲಿ ಮಲಗುವಾಗ ತಲೆಯನ್ನು ಹಾಕಬಹುದು. ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಆಯುಸ್ಸು, ಮಾನಸಿಕ ನೆಮ್ಮದಿ, ಶಾಂತಿ ಹೆಚ್ಚುತ್ತದೆ. ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ, ಪ್ರಬಲವಾದ ಚಿಂತೆಗಳು ಯಾವಾಗಲೂ ಎಲ್ಲಾ ವಿಭಾಗಗಳಲ್ಲಿಯೂ ಬರುತ್ತಲೇ ಇರುತ್ತವೆ. ಉತ್ತರಕ್ಕೆ ತಲೆ ಇಟ್ಟು ಮಲಗಿದರೆ,ಧನ ನಷ್ಟ ಮತ್ತು ಮರಣ ಸಂಭವಿಸುತ್ತದೆ, ಅಂದರೆ ಆಯುಷ್ಯ ಹಾನಿಯಾಗುತ್ತದೆ. ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕು. ಆರೋಗ್ಯಂ ಭಾಸ್ಕರಾದಿಚ್ಛೇತ್, ಸೂರ್ಯನಿಂದ ಆರೊಗ್ಯವನ್ನು ಬಯಸಿ, ಎಂಬುದು ಸ್ಮೃತಿ ವಾಕ್ಯ. ಸೂರ್ಯನು ಐಶ್ವರ್ಯಕ್ಕೆ, ಆರೋಗ್ಯಕ್ಕೆ ಪ್ರಧಾನ ದೇವತೆ. ಪೂರ್ವಕ್ಕೆ ತಲೆ ಮಾಡಿ ಮಲಗಿದರೆ, ಐಶ್ವರ್ಯ ಮತ್ತು ಆರೋಗ್ಯ ಸಿದ್ಧಿಸುತ್ತದೆ. ದಕ್ಷಿಣವು ಪಿತೃದೇವತೆಗಳು ಮತ್ತು ಯಮನ ದಿಕ್ಕು. ದಕ್ಷಿಣಕ್ಕೆ ತಲೆಮಾಡಿ ಮಲಗಿದರೆ ಆಯುಸ್ಸು ವೃದ್ಧಿಯಾಗುತ್ತದೆ. ಪಶ್ಚಿಮಕ್ಕೆ ತಲೆ ಇಟ್ಟು…

Read More

ಚಿಕ್ಕಬಳ್ಳಾಪುರ : ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿದೆ. ಹೀಗಾಗಿ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವಂತ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಕಳೆದ ರಾತ್ರಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯಾಘಾತ ಉಂಟಾಗಿದೆ. ಡ್ಯಾನ್ಸ್ ಮಾಡುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್ ನಿಂದಾಗಿ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬೋದಗೂರು ಗ್ರಾಮದಲ್ಲಿ 40 ವರ್ಷದ ಲಕ್ಷ್ಮೀಪತಿ ಎಂಬಾತ ಡ್ಯಾನ್ಸ್ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

Read More

ಮೈಸೂರು : ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಹಿನ್ನೆಲೆಯಲ್ಲಿ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮೈಸೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆ 10 ನಿಮಿಷಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಲ್ಲಿದ್ದಾರೆ.ಮಧ್ಯಾಹ್ನ 3:45 ಕ್ಕೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಯಾರ್ಡಿಸನ್ ಬ್ಲೂ ಹೋಟೆಲ್ ಗೆ ದ್ರೌಪದಿ ಮುರ್ಮು ಭೇಟಿ ನೀಡಲಿದ್ದಾರೆ. ಬಳಿಕ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದು ಇಂದು ರಾತ್ರಿ ಯಾರ್ಡಿಸನ್ ಬ್ಲೂ ಹೋಟೆಲಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 8:50ಕ್ಕೆ ಮೈಸೂರು ಅರಮನೆಗೆ ಭೇಟಿ ನೀಡಲಿದ್ದು ಅರಮನೆಯಲ್ಲಿ ರಾಜಾತಿಥ್ಯ ಸ್ವೀಕರಿಸಿ ಉಪಹಾರ ಸೇವಿಸಲಿದ್ದಾರೆ.ನಂತರ ಅರಮನೆ ವೀಕ್ಷಣೆ ಮಾಡಲಿದ್ದಾರೆ ಅರಮನೆ ವೀಕ್ಷಣೆ ನಂತರ ಮೈಸೂರು ವಿಮಾನ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಲಿದ್ದು ಬೆಳಿಗ್ಗೆ 10:30 ಕ್ಕೆ ಚೆನ್ನೈಗೆ ತೆರಳಲಿದ್ದಾರೆ.

Read More

ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ವೇಳೆ ನಾನು ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಎರಡು ಕೋಟಿ ರೂಪಾಯಿ ಸಾಲ ನೀಡಿದ್ದು ನಿಜ ಎಂದು ಹೇಳಿಕೆ ದಾಖಲಿಸಿದ್ದಾರೆ. ಎರಡು ಕೋಟಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ವಿಚಾರಣೆಗೆ ಒಳಪಟ್ಟಿದ್ದು ಚಿತ್ರ ನಿರ್ಮಾಣದಿಂದ ಬಂದ ಹಣದಿಂದ ಜಮೀರ್ ಅಹ್ಮದ್ಗೆ ನೆರವು ನೀಡಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳ ತನಿಖೆಯ ವೇಳೆ ಹಣಕಾಸು ವ್ಯವಹಾರ ಬೆಳಕಿಗೆ ಬಂದಿದೆ ಈ ಬಗ್ಗೆ ವಿವರಣೆ ನೀಡುವಂತೆ ಲೋಕಾಯುಕ್ತ ನೋಟಿಸ್ ನೀಡಿದೆ ನೋಟಿಸ್ ಹಿನ್ನೆಲೆ ಕಳೆದ ವಾರ ರಾಧಿಕಾ ಕುಮಾರಸ್ವಾಮಿ ವಿಚಾರಣೆಗೆ ಹಾಜರಾಗಿದ್ದರು.ಹಣಕಾಸು ವ್ಯವಹಾರದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿಕೆ ದಾಖಲಿಸಿದ್ದಾರೆ.

Read More

ಬೆಂಗಳೂರು : ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಇರುವುದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಹೆಚ್ಚಿನ ಪ್ರಮಾಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಸೆ.1 ಮತ್ತು ಸೆ.4 ರಿಂದ 6 ರವರೆಗೆ ಯೆಲ್ಲೋ ಅಲರ್ಟ್, ಸೆ.2 ಮತ್ತು 3 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

Read More