Subscribe to Updates
Get the latest creative news from FooBar about art, design and business.
Author: kannadanewsnow05
ವಿಜಯಪುರ : ಜಿಲ್ಲೆಯ ತಿಕೋಟಾ ಸಮೀಪ ನಿನ್ನೆ ತಡರಾತ್ರಿ ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ನಡೆದ ರಸ್ತೆ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರನ್ನು ರಾಮು ರಾಠೋಡ್ ಹಾಗೂ ಕಿಟ್ಟು ಎಂದು ಹೇಳಲಾಗುತ್ತಿದ್ದು, ಬಸ್ ತೆರಳುತ್ತಿದ್ದ ವೇಳೆ ಬೈಕ್ ಗೆ ಡಿಕ್ಕಿಯಾಗಿ ರಾಮು ಕಿಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯ ರತ್ನಾಪುರ ಕ್ರಾಸ್ ಬಳಿ ಈ ಒಂದು ಅಪಘಾತ ನಡೆದಿದೆ. ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ರಾಜ್ಯಾದ್ಯಂತ ಇಂದು ನೈರುತ್ಯ ಮನ್ಸೂನ್ ಪ್ರವೇಶ ಮಾಡಿದ್ದೂ, ಇಂದು ಬೆಂಗಳೂರಿನ ಹಲವಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕೂಡ ಭಾರಿ ಮಳೆಯಾಗಿದೆ. ಅಲ್ಲದೆ ಇತ್ತ ಮಹಾಲಕ್ಷ್ಮಿ ಲೇಔಟ್ ನ ಮಾರುತಿ ನಗರದ ಮುಖ್ಯ ರಸ್ತೆಯಲ್ಲಿ ಬೃಹತ್ ಮರ ಧರೆಗೊಳದಿದ್ದರಿಂದ ಕಾರಿನ ಮುಂಭಾಗ ಭಾಗಶಹ ಜಿತಮ್ಗೊಂಡಿದೆ ಚಾಲಕ ಕಾರು ನಿಲ್ಲಿಸಿ ತೆರಳಿದ ಬಳಿಕ ಮರ ಬಿದ್ದಿದ್ದರಿಂದ ದುರಂತ ಒಂದು ತಪ್ಪಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಬೆಂಗಳೂರಿನ ಹೊಸನಗರ, ಶಾಂತಿನಗರ, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ರಾಜಾಜಿನಗರ ಬನಶಂಕರಿ ಸಿಟಿ ಮಾರ್ಕೆಟ್ ನಗರದ ಬಹುತೇಕ ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ ಮಳೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸಿದ ಘಟನೆ ನಡೆಯಿತು. ಮೆಜೆಸ್ಟಿಕ್ ರಾಜಾಜಿನಗರ ಮಲ್ಲೇಶ್ವರಂ, ಶಾಂತಿನಗರ, ವಿಧಾನಸೌಧ ಟೌನ್ ಹಾಲ್ ಕೆಆರ್ ಮಾರ್ಕೆಟ್ ಶಾಂತಿನಗರ, ವಿಧಾನಸೌಧ, ಕಾರ್ಪೊರೇಷನ್ ಶಿವಾಜಿನಗರ, ಜಯನಗರ, ಸದಾಶಿವನಗರ, ಹೆಬ್ಬಾಳ, ಯಲಹಂಕ ವಿಜಯನಗರ, ಮೈಸೂರು ರಸ್ತೆ, ಕೆಂಗೇರಿ, ಮಾಗಡಿ ರಸ್ತೆ,…
ಶಿವಮೊಗ್ಗ : ವಾಲ್ಮೀಕಿ ನಿಗಮದ 180 ಕೋಟಿ ರುಪಾಯಿಗಳ 7-8 ಬ್ಯಾಂಕ್ ಖಾತೆಗಳಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಿರ್ದೇಶನದಲ್ಲಿ ವರ್ಗಾಯಿಸಲಾಗಿದೆ.ಈ ಬಗ್ಗೆ ಜೂ.7ರ ನಂತರ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮಾಜಿ ಸಚಿವ ಅರಗ ಜ್ಞಾನೇಂದ್ರ ಹರಿಹಾಯ್ದರು. ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಬರೆದಿಟ್ಟಿರುವ ಡೆತ್ ನೋಟ್ ಅನೇಕ ಆಶ್ಚರ್ಯಕರ ಸಂಗತಿಗಳ ಹೊರಹಾಕಿದೆ. ದಲಿತರಿಗೆ ಪರಿಶಿಷ್ಟ ಜನಾಂಗದವರಿಗೆ ಮೀಸಲಿಟ್ಟ ಅನುದಾನ 187 ಕೋಟಿ ಅಕ್ರಮ ವರ್ಗಾವಣೆ ಆಗಿದೆ. ₹85 ಕೋಟಿಯಷ್ಟು ಅವ್ಯವಹಾರ ನಡೆದಿದೆ ಈ ಹಗರಣಕ್ಕೆ ಕಾರಣರಾರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಇದರ ಬಗ್ಗೆ ಸರಿಯಾದ ತನಿಖೆಯಾಗಬೇಕು ಎಂದು ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ರಾಜ್ಯ ಸರ್ಕಾರ ಮದ ಏರಿದ ಆನೆಯಂತೆ ವರ್ತಿಸುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಸ್ಟ್ಯಾಂಪ್ ಡ್ಯೂಟಿ, ಮದ್ಯದ ಧಾರಣೆ ಮತ್ತು ವಿದ್ಯುತ್ ಶುಲ್ಕ ಏರಿಕೆ ಯಾಗಿದೆ. ಸಾರ್ವಜನಿಕರಿಗೆ ಆಗಿರುವ ಅನಾನುಕೂಲದ ಬಗ್ಗೆ…
ಮಂಡ್ಯ : ಹಣ ಪಾವತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಹಾಗೂ ಟೋಲ್ ಸಿಬ್ಬಂದಿ ಮಧ್ಯ ಗಲಾಟೆ ನಡೆದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಗೂರು ನಾಗ ಬಳಿ ಈ ಒಂದು ಘಟನೆ ನಡೆದಿದೆ. ಕಾರ್ ಚಾಲಕ ಹಾಗೂ ಟೋಲ್ ಸಿಬ್ಬಂದಿ ನಡುವೆ ಕಿರಿಕ್ ಉಂಟಾಗಿದ್ದು, ಗಣಂಗುರು ಟೋಲ್ ಬಳಿ ಹಣ ಪಾವತಿ ವಿಚಾರಕ್ಕೆ ಗಲಾಟೆ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣನೂರು ಟೋಲ್ ಬಳಿ ಈ ಒಂದು ಘಟನೆ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಚಾಲಕನ ಜೊತೆಗೆ ಟೋಲ್ ಸಿಬ್ಬಂದಿ ಕಿರಿಕ್ ಮಾಡಿಕೊಂಡಿದ್ದಾನೆ ಇಬ್ಬರ ಗಲಾಟೆಯಿಂದಾಗಿ ಇತರೆ ವಾಹನ ಸವಾರರು ಪರದಾಟ ನಡೆಸುವಂತಾಯಿತು ಹಾಗಾಗಿ ಗಡಂಗೂರು ಟೋಲ್ ಸಿಬ್ಬಂದಿ ವಿರುದ್ಧ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ : ಇಂದು ಬೆಂಗಳೂರಿನಲ್ಲಿ ಪಲ್ಲಕ್ಕಿ ಹೊತ್ತಿದ್ದ ಟ್ರಾಕ್ಟರ್ ಗೆ ವಿದ್ಯುತ್ ಪ್ರವಹಿಸಿ ಇಬ್ಬರು ದಾರುಣವಾಗಿ ಸಾವನ್ನುಪ್ಪಿರುವ ಘಟನೆ ನಡೆದ ಬೆನ್ನೆಲೆ, ಇದೀಗ ಯಾದಗಿರಿಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಇದೀಗ ಝಸ್ಕಾಂ ಹೊರಗುತ್ತಿಗೆ ನೌಕರರ ಒಬ್ಬ ವಿದ್ಯುತ್ ಪ್ರವಹಿಸಿ ಸಾವನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ನಡೆದಿದೆ. ಹೌದು ಕೆಂಭಾವಿ ಪಟ್ಟಣದಲ್ಲಿ ಮಳೆಯಿಂದ ಮರ ಮುರಿದುಕೊಂಡು ಕಂಬದ ಮೇಲೆ ಬಿದ್ದಿರುವುದರಿಂದ ಅದನ್ನು ದುರಸ್ಥಿ ಮಾಡುವ ವೇಳೆ ನಾಗಪ್ಪ ಕುಂಬಾರ (35) ವಿದ್ಯುತ್ ಪ್ರವಹಿಸಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಘಟನೆ ಕುರಿತಂತೆ ಇದೀಗ ಕೆಂಭಾವಿ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆ ನಡಯಲಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ದಿಂಗಾಲೇಶ್ವರ ಶ್ರೀಗಳು ಪೂರ್ಣ ಪ್ರಮಾಣದ ರಾಜಕೀಯ ಅಖಾಡಕ್ಕಿಳಿದ್ದಾರೆ. ಬಾಗಲಕೋಟೆಯ ಎಸ್.ಆರ್.ಪಾಟೀಲ್ ಪರ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದು, ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿರುವ ಎನ್ನಲಾದ ಸ್ಫೋಟಕ ಆಡಿಯೋ ಒಂದು ವೈರಲ್ ಆಗಿದೆ. ಹೌದು ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿರುವ ಎನ್ನಲಾದ ಸ್ಫೋಟಕ ಆಡಿಯೋದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಒಪ್ಪಿಸುತ್ತೇನೆ ಎಂದು ಸ್ಪೋಟಕ ಆಡಿಯೋ ಒಂದು ಹರಿದಾಡುತ್ತಿದೆ. ನೀವು ಇದೊಂದು ಕೆಲಸ ಮಾಡಿನೋಡಿ ನೀವು ಮುಂದೆ ಸಿಎಂ ಆಗುವ ತನಕ ಏನೇನು ಕೆಲಸ ಮಾಡ್ತೀವಿ ನೋಡಿ’ ಎಂದಿರುವ ಸ್ವಾಮೀಜಿ. ನೀವು ಮಾಡಿ ತೋರಿಸಿ ಆಗ ನಾವು ಏನು ಇದೀವಿ ಅಂತಾ ತೋರಿಸುತ್ತೇವೆ ಎಂದಿರುವ ಶ್ರೀಗಳು. ಈ ಆಡಿಯೋದಿಂದಾಗಿ ಡಿಕೆ ಶಿವಕುಮಾರ ಒಕ್ಕಲಿಗ ಸಮುದಾಯದ ಜೊತೆಗೆ ಲಿಂಗಾಯತ ಸಮುದಾಯಕ್ಕೂ ಹತ್ತಿರವಾಗುತ್ತಿದ್ದಾರಾ? ಎಂಬ ಬಗ್ಗೆ ಇದೀಗ ಬಿಸಿ ಬಿಸಿ ಚರ್ಚೆ ಆಗ್ತಿದೆ. ಒಕ್ಕಲಿಗ ಜೊತೆ…
ಕಲಬುರಗಿ : ಲೋಕಸಭಾ ಚುನಾವಣೆಯ ನಿಖರ ಫಲಿತಾಂಶ ಇದೆ ನಾಲ್ಕರಂದು ಹೊರ ಬೀಳಲಿದೆ ಆದರೆ ಅದಕ್ಕೂ ಮುನ್ನ ನಿನ್ನೆ ಬಿಜೆಪಿ ಬಹುಮತ ಪಡಿದಿದೆ ಎಂದು ಸಮೀಕ್ಷೆ ಬಹಿರಂಗಗೊಳಿಸಿತು ಇನ್ನು ಈ ಒಂದು ಎಕ್ಸಿಟ್ ಪೋಲ್ ಸಮೀಕ್ಷೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು,ಇಂಡಿಯಾ ಒಕ್ಕೂಟ 295ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದರು. ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಸಂಸ್ಥೆಗಳು ಪ್ರಕಟಿಸಿರುವ ಮತಗಟ್ಟೆ ಸಮೀಕ್ಷೆಗಳು ಹಿಂದೆಯೂ ಸುಳ್ಳಾಗಿದ್ದವು. ಅಖಿಲ ಭಾರತ ಮಟ್ಟದಲ್ಲಿ ‘ಇಂಡಿಯಾ’ ಒಕ್ಕೂಟ 295ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ರಾಜ್ಯದಲ್ಲಿ ಕಾಂಗ್ರೆಸ್‌ಗೆ 18 ಸ್ಥಾನಗಳು ಬರಲಿವೆ ಎಂದು ಅವರು ತಿಳಿಸಿದರು. ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಹೇಳಿರಲಿಲ್ಲ.ಬಿಜೆಪಿ ಮೊದಲಿನಿಂದಲೂ 400 ಪಾರ್ ಎಂದು ಹೇಳುತ್ತಾ ಬಂದಿದೆ. ಅಷ್ಟು ಸೀಟುಗಳ ಬಂದರೆ ಸಂವಿಧಾನವನ್ನು ಬದಲಿಸುವುದು ಸುಲಭ ಎಂದು ಆ ಪಕ್ಷದ ಮುಖಂಡರು ಹೇಳಿದ್ದರು. ನಮ್ಮ ಅಂದಾಜಿನ…
ಬೆಂಗಳೂರು : ಇಂದು ಕರ್ನಾಟಕಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸಿದ್ದು ಇಂದಿನಿಂದ ಒಂದು ವಾರದ ವರೆಗೆ ರಾಜ್ಯದಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈಋತ್ಯ ಮಾನ್ಸೂನ್ ಹಿನ್ನೆಲೆ ಇವತ್ತು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಯಚೂರು, ಕೊಪ್ಪಳ ಮಂಡ್ಯ, ಮೈಸೂರು ಸೇರಿದಂತೆ ಗುಡುಗು ಸಹಿತ ಭಾರೀ ಮಳೆ ಮೂನ್ಸುಚನೆ ನೀಡಲಾಗಿದೆ. 40-50 ಕಿಮೀ ವೇಗದ ಗಾಳಿಯೊಂದಿಗೆ ಮಳೆ ಸಾಧ್ಯತೆ ಇದೆ. ಹಾಗಾಗಿ ಕರ್ನಾಟಕದಲ್ಲಿ ನೈರುತ್ಯ ಮಾನ್ಸೂನ್ ಪ್ರವೇಶಿಸಿದ್ದರಿಂದ 1 ವಾರದವರೆಗೆ ಮುಂಗಾರು ಮಳೆ ಚುರುಕುಗೊಂಡಿದೆ. ಇಂದಿನಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಂದು ವಾರ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಇನ್ನೂ ನಿನ್ನೆ ಆನೇಕಲ್, ಎಲೆಕ್ಟ್ರಾನಿಕ್ ಸುತ್ತಮುತ್ತ ಮಳೆ ಸುರಿದಿದ್ದು, ಜನ ಪರದಾಡಿದ್ದರು. ಹೊಸೂರು ಹೈವೇಯಲ್ಲಿ ಸುಮಾರು ನಾಲ್ಕು ಕಿಲೋ ಮೀಟರ್ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅತ್ತ, ನೆಲಮಂಗಲದಲ್ಲಿ ಸುರಿದ ಜೋರು ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರು ಪರದಾಡಿದ್ದರು.ಇವತ್ತು ಸಾಯಂಕಾಲ…
ನವದೆಹಲಿ : ಲೋಕಸಭಾ ಚುನಾವಣೆಯ ನಿಖರ ಫಲಿತಾಂಶ ಇದೆ ನಾಲ್ಕರಂದು ಹೊರ ಬೀಳಲಿದೆ. ಆದರೆ ಅದಕ್ಕೂ ಮುನ್ನ ನಿನ್ನೆ ಬಿಜೆಪಿ ಬಹುಮತ ಪಡಿದಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ಬಹಿರಂಗಗೊಳಿಸಿತು. ಇನ್ನು ಈ ಒಂದು ಎಕ್ಸಿಟ್ ಪೋಲ್ ಸಮೀಕ್ಷೆ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಈ ಮತದಾನೋ ತರ ಎಕ್ಸಿಟ್ ಪೋಲ್ ಸರಿಯಲ್ಲ ಕರ್ನಾಟಕದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಸ್ಥಾನಗಳನ್ನು ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ನಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾನು 40 ವರ್ಷದಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ನಾವು ಕೂಡ ಚುನಾವಣಾ ಸಮೀಕ್ಷೆ ಮಾಡಿಸಿದ್ದೇವೆ ಎಂದು ಅವರು ತಿಳಿಸಿದರು. ಹಳ್ಳಿಗಳಿಗೆ ಹೋಗಿ ಎಲ್ಲಾ ವರ್ಗದ ಜನರನ್ನು ಮಾತನಾಡಿಸಿದ್ದೇವೆ. ಆದರೆ ಎಕ್ಸಿಟ್ ಪೋಲ್ ನಲ್ಲಿ ತೋರುತ್ತಿರುವ ಮಾಹಿತಿ ಸರಿಯಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಸ್ಥಾನಗಳನ್ನು ಗೆಲ್ಲುತ್ತದೆ. ಕಾರ್ಯಕರ್ತರು…
ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 6 ದಿನಗಳ ಕಾಲ ಎಸ್ ಐ ಟಿ ಕಸ್ಟಡಿಯಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಎಸ್ಐಟಿ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದು, ನಾನು ಹಿಂಗೆಲ್ಲ ಬದುಕಿಲ್ಲ ನನಗೆ ಸರಿಯಾದ ಟಾಯ್ಲೆಟ್ ಹಾಗೂ ಮಲಗಲು ರೂಮ್ ಕೊಡಿ ಎಂದು ಕಿರಿಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಸಂಸದ ಪ್ರಜ್ವಲ್ ರೇವಣ್ಣರನ್ನ ನ್ಯಾಯಾಲಯ ಆರು ದಿನಗಳ ಎಸ್‌ಐಟಿ ಕಸ್ಟಡಿಗೆ ನೀಡಿದೆ. ಆದರೆ ಎಸ್‌ಐಟಿ ಕಚೇರಿಯಲ್ಲಿ ಶೌಚಾಲಯ, ಕೊಠಡಿ ಶುಚಿಯಾಗಿಲ್ಲ, ಕೆಟ್ಟ ವಾಸನೆ ಬರುತ್ತಿದೆ. ಎಸ್‌ಐಟಿ ಕಚೇರಿಯಲ್ಲಿ ಉಸಿರಾಡಲು ಕಷ್ಟವಾಗಿದೆ ಎಂದು ನ್ಯಾಯದೀಶರ ಮುಂದೆ ಗೋಳು ತೋಡಿಕೊಂಡಿದ್ದ ಪ್ರಜ್ವಲ್. ಇದೀಗ ಮತ್ತೆ ಎಸ್‌ಐಟಿ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ವಾದ ನಡೆದ ವೇಳೆ ವಕೀಲ, ಆರೋಪಿಗೆ ಯಾವುದೇ ಐಷಾರಾಮಿ ವ್ಯವಸ್ಥೆ ಬೇಡ, ಸಾಮಾನ್ಯ ಕೈದಿ ಇರುವಂತೆ ಸಾಮಾನ್ಯ ಕೊಠಡಿಯಲ್ಲಿರಲಿ ಎಂದಿದ್ದರು. ಅದರಂತೆ ಎಸ್ಐಟಿ ಅಧಿಕಾರಿಗಳು ಸಾಮಾನ್ಯ ಆರೋಪಿಗಳಂತೆ ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಸರಿಯಾದ…