Subscribe to Updates
Get the latest creative news from FooBar about art, design and business.
Author: kannadanewsnow05
ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ಜಲಪಾತದ ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಜನವರಿ 01 ರಿಂದ ಮಾರ್ಚ್ 15ರ ವರೆಗೆ 3 ತಿಂಗಳುಗಳ ಕಾಲ ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿರ್ಭಂದಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ. ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ತೊಂದರೆಯಾಗಬಾರದೆAಬ ಕಾರಣದಿಂದ ಪ್ರವೇಶ ನಿರ್ಭಂದಿಸಲಾಗಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-251444 ನ್ನು ಸಂಪರ್ಕಿಸಬಹುದಾಗಿದೆ.
ಬೆಳಗಾವಿ : ಕಳೆದ ಕೆಲವು ದಿನಗಳ ಹಿಂದೆ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯ ಸುವರ್ಣಸೌಧ ಮುತ್ತಿಗೆ ಹಾಕಲು ಪಂಚಮಸಾಲಿ ಹೋರಾಟಗಾರರು ಯತ್ನಿಸಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆಯಲು ಮುಂದಾಗಿದ್ದರು ಕೂಡ ಹೋರಾಟಗಾರರು ಬ್ಯಾರಿಕೇಡ್ ತಳ್ಳಿ ಸುವರ್ಣಸೌಧ ಮತ್ತಿಗೆಗೆ ಹಾಕಲು ಯತ್ನಿಸಿದಾಗ, ಲಾಠಿ ಚಾರ್ಜ್ ನಡೆಸಿದರು. ಈ ವಿಚಾರವಾಗಿ ಇಂದು ಪರಿಷತ್ ನಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಹೌದು ಪಕ್ಷಿಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಟಿಚಾರ್ಜ್ ಮಾಡಿದ್ದನ್ನು ಖಂಡಿಸಿ, ವಿಧಾನ ಪರಿಷತ್ ನಲ್ಲಿ ಸದನದ ಬಾವಿಗಳಿಗೆ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಆಗಿದೆ. ಮೀಸಲಾತಿ ನೀಡುವ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಸರ್ಕಾರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ಮಾಡುತ್ತಿದ್ದಾರೆ.
ತುಮಕೂರು : ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು ಮಳಿಗೆಗಳು ಹೊತ್ತಿ ಉರಿದಿರುವ ಘಟನೆ ತುಮಕೂರು ನಗರದ ವಿಶ್ವವಿದ್ಯಾಲಯದ ಬಳಿಯ ಮಳಿಗೆಗಳಲ್ಲಿ ಇಂದು ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಮೊಬೈಲ್ ಅಂಗಡಿ ಸೇರಿದಂತೆ ಮೂರು ಮಳಿಗೆಗಳು ಸುಟ್ಟು ಭಸ್ಮವಾಗಿವೆ. ಈ ಒಂದು ಘಟನೆ ಶಾರ್ಟ್ ಸರ್ಕ್ಯೂಟ್ ನಿಂದ ಆಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಮೊದಲಿಗೆ ಮೊಬೈಲ್ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಸೌತ್ ಹೋಳಿಗೆ ಮನೆಗೂ ವ್ಯಾಪಿಸಿದೆ. ಆ ನಂತರ ಸಮೀಪದ ಎಸ್‌ಎಂಎಲ್ ತರಕಾರಿ ಅಂಗಡಿಗೂ ಬೆಂಕಿ ಹಬ್ಬಿದೆ. ಅಗ್ನಿ ಅವಘಡದಲ್ಲಿ ಸಿಸಿ ಕ್ಯಾಮೆರಾ, ಮೊಬೈಲ್, ಫ್ರಿಜ್ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ನಾಶವಾಗಿವೆ.ಹೊಸ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ : ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಪಟ್ಟಂತೆ ಅನ್ವರ್ ಮಣಿಪಾಡಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ 150 ಕೋಟಿ ಆಮೀಷ ಒಡ್ಡಿದ್ದರು ಎಂಬ ಆರೋಪದ ವಿಚಾರವಾಗಿ ಇಂದು ವಿಧಾನಸಭೆಯಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ತೀವ್ರ ಕೋಲಾಹಲ ಗಲಾಟೆ ನಡೆಯಿತು. ಈ ವಿಷಯವನ್ನು ಮೊದಲು ಬಿವೈ ವಿಜಯೇಂದ್ರ ಪ್ರಸ್ತಾಪಿಸಿದ್ದು, ವಿರುದ್ಧ 150 ಕೋಟಿ ಆಮೀಷ ಆರೋಪದ ಕುರಿತು, ಸಿಎಂ ಸಿದ್ದರಾಮಯ್ಯ ನನ್ನ ಮೇಲೆ ಈ ಕುರಿತು ಆರೋಪ ಮಾಡಿದ್ದಾರೆ. 150 ಕೋಟಿ ಆಮಿಷ ಎಂದು ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ತನಿಖೆಯನ್ನು CBI ಗೆ ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಗೆ ಕೇಂದ್ರ ತನಿಖಾ ಸಂಸ್ಥೆಯ ಮೇಲೆ ವಿಶ್ವಾಸ ಬಂದಿದ್ದಕ್ಕೆ ಸಂತೋಷವಾಗಿದೆ ಎಂದರು. ಸದನದಲ್ಲಿ ಅನ್ವರ್ ಮಣಿಪಾಡಿ ವರದಿ ಬಗ್ಗೆಯೂ ಚರ್ಚೆಯಾಗಲಿ ಸಿಎಂ ಸಿದ್ದರಾಮಯ್ಯ ಹಗರಣಗಳ ಸರಮಾಲೆಯಲ್ಲಿ ಸಿಲುಕಿಕೊಂಡಿದ್ದಾರೆ.ಸಿಬಿಐ ತನಿಖೆಗೆ ಕೊಡಲು ಸಿಎಂಗೆ ಪರಮಾಧಿಕಾರ ಇದೆ. ಈ ವೇಳೆ ವಿಜಯೇಂದ್ರ ಮಾತನಾಡುತ್ತಿದ್ದ…
ತುಮಕೂರು : ಕೃಷಿಹೊಂಡದಲ್ಲಿ ಸೋಡಿಯಂ ಸ್ಪೋಟಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ್ರೋನ್ ಪ್ರತಾಪ್ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಿತ್ತು.ಬಳಿಕ ಪೊಲೀಸರು ಮಧುಗಿರಿ ತಾಲೂಕಿನ JMFC ಕೋರ್ಟಿಗೆ ಡ್ರೋನ್ ಪ್ರತಾಪ್ ಅವರನ್ನು ಪೊಲೀಸರು ಹಾಜರಿಪಡಿಸಿದ್ದರು. ವಿಚಾರಣೆ ಬಳಿಕ ಡ್ರೋನ್ ಪ್ರತಾಪ್ ಅವರನ್ನು ಡಿಸೆಂಬರ್ 26ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಹೌದು ಡಿಸೆಂಬರ್ 26ರವರೆಗೂ ಡ್ರೋನ್ ಪ್ರತಾಪ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಮಧುಗಿರಿ ಜೆ ಎಂ ಎಫ್ ಸಿ ಕೋರ್ಟ್ ಆದೇಶ ಹೊರಡಿಸಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಿಎಂಎಸ್‌ಸಿ ನ್ಯಾಯಾಲಯವು ಡಿಸೆಂಬರ್ 26ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಡ್ರೋನ್ ಪ್ರತಾಪ್ ಕಳೆದ ಕೆಲವು ದಿನಗಳ ಹಿಂದೆ ಅನುಮತಿ ಪಡೆಯದೆ ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಪೋಟಿಸಿದ್ದ ಘಟನೆ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ವಿಚಾರವಾಗಿ ಮದುಗಿರಿ ತಾಲೂಕು ಮಿಡಿಶೇಸಿ ಠಾಣೆ ಪೋಲಿಸರು…
ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ಬಿಜೆಪಿ ಬೆಂಬಲಿತ ವ್ಯಕ್ತಿಯ ಸಹೋದರನೊಬ್ಬ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಇಡೀ ದೃಶ್ಯ ಸಮೀಪದ ಹೋಟೆಲ್ ನಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಕನ್ನಡ ನ್ಯೂಸ್ ನೌನೊಂದಿಗೆ ಮಾತನಾಡಿದ ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯ ನಾಗೋಡಿ ವಿಶ್ವನಾಥ್, ಸೈದಾಂತಿಕವಾಗಿ ಎದುರಿಸಲು ಆಗದವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದಕ್ಕೆಲ್ಲ ಹೆಸರುವುದಿಲ್ಲ. ಪೊಲೀಸರಿಗೆ ಸೂಕ್ತ ಕಾನೂನು ಕ್ರಮಕ್ಕೆ ದೂರು ನೀಡಿದ್ದೇನೆ. ದೇವರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ ಎಂದರು. ನಾನು ಕಾಂಗ್ರೆಸ್ ಪರ ವ್ಯಕ್ತಿಗೆ ಸಹಕಾರ ಸಂಘದ ಚುನಾವಣೆಯಲ್ಲಿ ಬೆಂಬಲಿಸಿದ್ದೆ. ಇದಕ್ಕೆ ಸಿಟ್ಟಾದಂತ ಬಿಜೆಪಿ ಬೆಂಬಲಿತ ವ್ಯಕ್ತಿಯ ಸಹೋದರ, ಪುಡಿ ರೌಡಿ ದೇವರಾಜ್ ಎಂಬುವವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿದ ನನ್ನ ಏಳಿಗೆ ಸಹಿಸದೇ ಈ ಮಾರಣಾಂತಿಕ ಹಲ್ಲೆ ನಡೆಸಿದ್ದಾಗಿ ಹೇಳಿದರು. ಮಾಜಿ ಶಾಸಕರೇ ಏನಿದು ನಿಮ್ಮ ಬೆಂಬಲಿಗನ ಅಟ್ಟಹಾಸ.? ನಾಗೋಡಿ ವಿಶ್ವನಾಥ್ ಮೇಲೆ ಹಲ್ಲೆ…
ಬೆಳಗಾವಿ : ವಕ್ಫ್ ಆಸ್ತಿಯ ಕಬಳಿಕೆವಿ ಚಾರವಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ 150 ಕೋಟಿ ರೂಪಾಯಿ ಆಮೀಷವಡ್ಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯ ಸುವರ್ಣ ಸಹೋದರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಮಾಣಿಪಾಡ್ಡಿ ಈ ಹಿಂದೆ ಹೇಳಿಕೆ ನೀಡಿದಕ್ಕೆ ತಾನೆ ನಾವು ರಿಯಾಕ್ಟ್ ಮಾಡಿದ್ದು ನಾವು ರಿಯಾಕ್ಟ್ ಮಾಡಿದ್ದು ಸರಿ ಇದೆ ಎಂದು ಸಮರ್ಥಿಸಿಕೊಂಡರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಣಪ್ಪಾಡಿ ಪ್ರಕರಣ ಸಿಬಿಐಗೆ ಕೊಡುವ ಬಗ್ಗೆ ಚರ್ಚೆಯಾಗಿದೆ. ಅನ್ವರ್ ಮಾಣಪಾಡಿ ಈ ಹಿಂದೆ ವಿಜಯೇಂದ್ರ ಆಮಿಷ ಒದ್ದಿದ್ದರು ಎಂದು ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ. ಯಾವುದು ಸರಿ ಯಾವುದು ತಪ್ಪು ನೋಡಬೇಕು. ಮೊದಲು ಅವರು ಹೇಳಿದ ಮೇಲೆ ತಾನೆ ನಾವು ರಿಯಾಕ್ಟ್ ಮಾಡಿದ್ದೇವೆ? ಈಗ ಇಲ್ಲ ಅಂದ್ರೆ ಏನು ಮಾಡಬೇಕು ನೀವೇ ಹೇಳಿ. ನಮ್ಮ ಪ್ರಕಾರ ನಾವು ರಿಯಾಕ್ ಮಾಡಿದ್ದು ಸರಿ ಇದೆ. 150 ಕೋಟಿ ಆಫರ್ ಮಾಡಿದ್ರು ಅಂತ ಅವರೇ ಹೇಳಿದ್ದಾರೆ. ಪ್ರೆಸ್ ಮೀಟ್ ಮಾಡಿ ಅವರೇ ಹೇಳಿದ್ದು…
ವಿಜಯನಗರ : ಜಿಲ್ಲೆಯ ಹೊಸಪೇಟೆಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಈ ಒಂದು ರಸ್ತೆ ಅಪಘಾತದಲ್ಲಿ ಪತಿಸಾವನ್ನಪ್ಪಿದ್ದು ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಗಂಭೀರವಾದಂತಹ ಗಾಯಗಳಾಗಿರುವ ಘಟನೆ ನಡೆದಿದೆ. ಹೊಸಪೇಟೆಯ ಬಳಿ ಪತಿ ಪತ್ನಿ ಹಾಗೂ ಮಕ್ಕಳು ಬೈಕ್ ನಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದರು, ರಸ್ತೆ ಕ್ರಾಸ್ ಮಾಡುತ್ತಿದ್ದ ಬೈಕಿಗೆ ವೇಗವಾಗಿ ಬಂದಂತಹ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದು ಪತ್ನಿ ಮಕ್ಕಳಿಗೆ ಗಂಭೀರವಾದ ಗಾಯಗಳಾಗಿವೆ. ಕೂಡಲೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತ ಭೀಕರತೆಗೆ ಕಾರು ಬೈಕ್ ಸಂಪೂರ್ಣವಾಗಿ ನುಗ್ಗುಜ್ಜಾಗಿದೆ.ಕೂಡಲೇ ಅಲ್ಲಿದ್ದ ಸ್ಥಳೀಯರು ನೆರವಿಗೆ ಬಂದು, ಪತ್ನಿ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದು ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಶಿವಮೊಗ್ಗದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಹಲ್ಲೆ ನಡೆದಿದ್ದು, ಹಳೆ ದ್ವೇಷ ಹಿನ್ನೆಲೆ ಹಾಗೂ ಅಭಿವೃದ್ಧಿ ಕಂಡು ಹೊಟ್ಟೆ ಉರಿಗೆ ಈ ಒಂದು ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಶಿವಮೊಗ್ಗ ಹೊಸನಗರದ ನಿಟ್ಟೂರಿನಲ್ಲಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಹಲ್ಲೆ ಮಾಡುವುದರ ದೃಶ್ಯ ಇದೀಗ ಸಿ ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ದೇವರಾಜ ಎನ್ನುವವರಿಂದ ನಾಗೋಡಿ ವಿಶ್ವನಾಥ್ ಮೇಲೆ ಹಲ್ಲೆ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯ ನಾಗೋಡಿ ವಿಶ್ವನಾಥ್ ಗೆ ಇದೀಗ ಗಂಭೀರವಾದ ಗಾಯಗಳಾಗಿದ್ದು, ಗಾಯಾಳುವಿಗೆ ಹೊಸನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ : ಇತ್ತೀಚಿಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಯುವಕನೊಬ್ಬ ಗೆಳೆಯನ ಮದುವೆ ವೇಳೆ ಡಿಜೆ ಹಾಡಿಗೆ ಕುಣಿಯುತ್ತ ಕುಸಿದುಬಿದು ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಗಡಲಬಂಡಿ ಗ್ರಾಮದಲ್ಲಿ ನಡೆದಿದೆ. ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಗಡಲಬಂಡಿ ಗ್ರಾಮದಲ್ಲಿ ಆದರ್ಶ್ (25) ಎನ್ನುವ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಪಗಡಲಬಂಡಿ ಗ್ರಾಮದ ಆದರ್ಶ ಗೆಳೆಯನ ಮದುವೆ ಮೆರವಣಿಗೆ ವೇಳೆ ಡಿಜಿ ಸೌಂಡ್ ಗೆ ಕುಣಿದಿದ್ದಾನೆ. ಈ ವೇಳೆ ಡ್ಯಾನ್ಸ್ ಕುಣಿಯುತ್ತಲೇ ಕುಸಿದು ಬಿದ್ದಿದ್ದಾನೆ. ಆದರ್ಶನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಪರಶುರಾಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಆದರ್ಶ ಸಾವನ್ನಪ್ಪಿದ್ದಾನೆ. ನವೆಂಬರ್ 14 ರಂದು ನಡೆದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.