Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ ಅದಕ್ಕೆ ಸ್ವಲ್ಪ ಕಾಯಿರಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ. ಇದೀಗ ಈ ಒಂದು ಹೇಳಿಕೆ ಭಾರಿ ಸಂಚಲನ ಮೂಡಿಸಿದ್ದು ಪವರ್ ಶೇರಿಂಗ್ ಕುರಿತು ಡಿಕೆ ಶಿವಕುಮಾರ್ ಸುಳಿವು ನೀಡಿದ್ರಾ ಎನ್ನುವ ಕುತೂಹಲ ಮೂಡಿಸಿದೆ. ಹೌದು ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಯಾರೂ ಬೇಕಾದರೂ ಕೆಪಿಸಿಸಿ ಜವಾಬ್ದಾರಿ ತೆಗೆದುಕೊಳ್ಳಬಹುದು ಎಂದು ಹೇಳುವ ಮೂಲಕ ಪವರ್ ಶೇರ್ ಕುರಿತು ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ. ಸಭೆಯಲ್ಲಿ ಕೆಪಿಸಿಸಿ ಪದಾಧಿಕಾರಿಯೊಬ್ಬರು ಜಿಲ್ಲಾ ಮಟ್ಟದಲ್ಲಿ ಎರಡು ಹುದ್ದೆಗಳ ಬಗ್ಗೆ ಪ್ರಸ್ತಾಪ ಮಾಡಿದರು. ಆಗ ಅಲ್ಲಿಯೇ ಇದ್ದ ಡಿಕೆಶಿ ತಕ್ಷಣವೇ, ನೋಡ್ರಪ್ಪ, ಸಮಯ, ಸಂದರ್ಭ ನೋಡಿಕೊಂಡು ನಮ್ ಪಾರ್ಟಿಯಲ್ಲಿ ಹಂಗೆ ಆಗುತ್ತೆ. ಖರ್ಗೆ ಸಾಹೇಬ್ರು ಎಐಸಿಸಿ ಅಧ್ಯಕ್ಷರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನು ಕೆಪಿಸಿಸಿ…
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಾಯಕನಹಟ್ಟಿ ರಥೋತ್ಸವದ ವೇಳೆ ಸ್ವೀಟ್ ಕಾರ್ನ್ ಗಾಡಿಗೆ ಏಕಾಏಕಿ ಬೆಂಕಿ ತಗುಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಆದರೆ ಸ್ಥಳೀಯ ಸೇವಾ ಕಾರ್ಯಕರ್ತರ ಸಭೆ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ತಪ್ಪಿದೆ. ಹೌದು ಸ್ವೀಟ್ ಕಾರ್ನ್ ಗಾಡಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನಾಯಕನಹಟ್ಟಿ ರಥೋತ್ಸವದ ವೇಳೆ ಈ ದುರಂತ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಸ್ವೀಟ್ ಕಾರ್ನ್ ಗಾಡಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಜಾತ್ರೆಗೆಂದು ಸೇರಿದ ಭಕ್ತರು ದಿಕ್ಕಾಪಾಲಾಗಿ ಓಡಿ ಹೋಗಿ ಪ್ರಣ ಉಳಿಸಿಕೊಂಡಿದ್ದಾರೆ. ಈ ವೇಳೆ ಜಾತ್ರೆಯಲ್ಲಿನ ಸೇವಾ ಕಾರ್ಯಕರ್ತರು ತಕ್ಷಣ ಕಾರ್ಯ ಪ್ರವೃತ್ತರಾಗಿ ಸ್ವೀಟ್ ಕಾರ್ನ್ ಗಾಡಿಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿದ್ದಾರೆ. ಸೇವಾ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಘಟನೆ ಕುರಿತು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯದಲ್ಲಿ : ಮಂಡ್ಯದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಅನಾಥಶ್ರಮದಲ್ಲಿ ಪುಡ್ ಪಾಯಿಸನ್ ನಿಂದಾಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 6ನೇ ತರಗತಿ ವಿದ್ಯಾರ್ಥಿ ಕೇರ್ಲಾಂಗ್ (13) ಮೃತ ಬಾಲಕ ಎಂದು ತಿಳಿದುಬಂದಿದೆ. ಇದೀಗ ಈ ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದ ಪೊಲೀಸರು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ ಕಾಗೆಪುರದಲ್ಲಿ ಈ ಒಂದು ಘಟನೆ ನಡೆದಿತ್ತು. ಗೋಕುಲ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಲಂಕೇಶ್, ಊಟ ಸಪ್ಲೈ ಮಾಡುತ್ತಿದ್ದ ಹೋಟೆಲ್ ಮಾಲೀಕ ಸಿದ್ದರಾಜು, ಮದನ್ ಕಲ್ಯಾಣ ಮಂಟಪದ ಮ್ಯಾನೇಜರ್ ಕೃಷ್ಣ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ ಮೂರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಮಳವಳ್ಳಿಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ವೃದ್ಧ ಅತ್ತೆ ಮಾವನ ಮೇಲೆ ಹಲ್ಲೆ ನಡೆಸಿದ್ದ ವೈದ್ಯೆಗೆ ಇದೀಗ ಶೋಕಾಶ್ ನೋಟಿಸ್ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೊಹ್ಸಿನ್ ಮೇರೆಗೆ ಕಾರಣ ಕೇಳಿ ಇದೀಗ ನೋಟಿಸ್ ನೀಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಡಿಎಂಇ ಡಾ. ಸುಜಾತ ರಾಥೋಡ್ ಅವರಿಂದ ವೈದ್ಯೆ ಪ್ರಿಯದರ್ಶಿನಿಗೆ ನೋಟಿಸ್ ನೀಡಲಾಗಿದೆ ನೋಟಿಸ್ ಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಲಾಗಿಸೆ. ಹೌದು ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ ಪ್ರಿಯದರ್ಶಿನಿ ಎನ್ ಗೆ ಶೋಕಾಶ್ ನೋಟಿಸ್ ನೀಡಲಾಗಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ. ಪ್ರಿಯದರ್ಶನಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೊಹಮ್ಮದ್ ಮೊಹ್ಸಿನ್ ಸೂಚನೆಯ ಮೇರೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ನೋಟಿಸ್ ಗೆ ಲಿಖಿತ ಉತ್ತರ ನೀಡುವಂತೆ ಪ್ರಿಯದರ್ಶಿನಿ ಎನ್ ಗೆ ಸೂಚಿಸಲಾಗಿದೆ.ತಪ್ಪಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.…
ಮಂಗಳೂರು : ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಒಬ್ಬ ಶೌಚಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವಿಚಾರಣಾಧಿನ ಕೈದಿಯನ್ನು ಪ್ರಕಾಶ್ ಮೂಲ್ಯ (48) ಎಂದು ತಿಳಿದುಬದಿದೆ. ಜೈಲಿನ ಶೌಚಾಲಯದಲ್ಲಿ ನೇಣಿಗೆ ಶರಣಾಗಿರುವ ಪ್ರಕಾಶ್ ಮೂಲ್ಯ ಮದ್ಯದ ವ್ಯಸನಿಯಾಗಿದ್ದ. ಪ್ರಕಾಶ್ ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸ್ ನಲ್ಲಿ ಜೈಲು ಸೇರಿದ್ದ. 12 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಪ್ರಕಾಶ್ ಅತ್ಯಾಚಾರ ಎಸಗಿದ್ದ. ಮೂಡಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಬೀಗ ಶೌಚಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚಾಮರಾಜನಗರ : ಇತ್ತೀಚಿಗೆ ಪತ್ನಿಯರ ಕಾಟಕ್ಕೆ ಗಂಡಂದಿರು ತಮ್ಮ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಚಾಮರಾಜನಗರದಲ್ಲಿ ಅಂತದ್ದೇ ಘಟನೆ ವರದಿಯಾಗಿದ್ದು, ತಲೆಯಲ್ಲಿ ಕೂದಲಿಲ್ಲ ಎನ್ನುವ ಕಾರಣಕ್ಕೆ ಪತ್ನಿ ಪತಿಯನ್ನು ಹೀಯಾಳಿಸಿ ಕಿರುಕುಳ ನೀಡಿದ್ದಾಳೆ ಇದರಿಂದ ಮನನೊಂದು ಪ್ರತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹೌದು ಗಂಡನ ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿ ಕಿರುಕುಳ ನೀಡಿದ್ದಾಳೆ. ಇದರಿಂದ ಮನನೊಂದು ಗಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಗುಡಿಗಾಲದಲ್ಲಿ ಈ ಒಂದು ಘಟನೆ ನಡೆದಿದೆ.ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಪರಶಿವಮೂರ್ತಿ (30) ಎಂದು ತಿಳಿದು ಬಂದಿದೆ.ಎರಡು ವರ್ಷದ ಹಿಂದೆ ಕಳಕಿಪುರದ ಮಮತಾ ಜೊತೆಗೆ ಮದುವೆ ಆಗಿತ್ತು. ಮದುವೆ ಹಳಿಕ ಪರಶಿವಮೂರ್ತಿ ತಲೆಕೂದಲು ಉದುರಿತ್ತು. ಹೊರಗೆ ಹೋದರೆ ನನಗೆ ನಾಚಿಕೆ ಆಗುತ್ತದೆ ಎಲ್ಲರೂ ಅಪಹಾಸ್ಯ ಮಾಡುತ್ತಾರೆ ನನ್ನ ಗಂಡ ಎಂದು ಹೇಳೋಕೆ ಮುಜುಗರ ಆಗುತ್ತದೆ ಎಂದು ಕಿರುಕುಳ ನೀಡಿದ್ದಳು. ಇದೀಗ ಪರಶಿವಮೂರ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದಕ್ಕೂ ಮೊದಲು…
ವಿಜಯಪುರ : ಸಿದ್ದರಾಮಯ್ಯ ಇರುವವರೆಗೂ ನಮ್ಮನ್ನು ಯಾರಿಂದಲೂ ಏನೂ ಮಾಡಲಾಗದು ಎಂಬ ಧೈರ್ಯ ಮುಸ್ಲಿಮರಿಗೆ ಬಂದಿದೆ. ಇದನ್ನೆಲ್ಲ ವಿರೋಧಿಸಿ ಹೋರಾಟ ಮಾಡುವಲ್ಲಿ ಬಿಜೆಪಿಯೂ ವಿಫಲವಾಗಿದೆ. ಈ ಮೊದಲೇ ಸರಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದರೆ ಇದೆಲ್ಲಾ ಹೇಗೆ ಆಗುತ್ತಿತ್ತು. ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅಡ್ಜೆಸ್ಟ್ಮೆಂಟ್ ಗಿರಾಕಿ ಎಂದು ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ನಮ್ಮವರು ಕೂಡ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಹಿಂದೆ ಕೆಜೆ ಹಳ್ಳಿ ಡಿಜೆ ಹಳ್ಳಿ, ಹುಬ್ಬಳ್ಳಿ ಗಲಾಟೆಗಳ ಸಂದರ್ಭಗಳಲ್ಲಿ ನಾಲ್ಕಾರು ಎನ್ಕೌಂಟತರ್ ಮಾಡಿದ್ದರೆ ಸರಿಯಾಗಿರುತ್ತಿತ್ತು. ಇಂತಹ ಘಟನೆಗಳಲ್ಲಿ ನಮ್ಮವರು ದೊಡ್ಡದೇನೂ ಮಾಡಿಲ್ಲ. ನಮ್ಮವರು ಮಾಡಿದ ತಪ್ಪಿನಿಂದಲೇ ಹಿಂದೂ ಜನರು ಬೇಜಾರಾದರು. ಹಾಗಾಗಿ ಕೆಟ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. 136 ಸ್ಥಾನಗಳು ಬರಲು ನಮ್ಮ ಮೇಲಿನ ಹಿಂದುಗಳ ಬೇಸರವೇ ಪ್ರಮುಖ ಕಾರಣ ಎಂದರು. ಸಾಮಾನ್ಯ ಶಿಕ್ಷಣ ಕಾಯ್ದೆ ಮದರಸಾಗಳಿಗೆ ಅನ್ವಯವಾಗಬೇಕು. ಅಲ್ಲಿ ರಾಷ್ಟ್ರಗೀತೆ ಹಾಡಿ ಗಣಿತ, ವಿಜ್ಞಾನ. ಸಮಾಜದಂತಹ ವಿಷಯಗಳ ಬೋಧನೆ ಆಗಬೇಕು. ಮದರಸಾಗಳಲ್ಲಿ…
ವಿಜಯಪುರ : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾರಾವ್ ಸದ್ಯ ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಒಂದು ಪ್ರಕರಣದಲ್ಲಿ ಸಚಿವರ ಹೆಸರು ಕೇಳಿ ಬರುತ್ತಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿತ್ತು. ಆದರೆ ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಟಿ ರನ್ಯಾ ಜೊತೆಗೆ ಸಂಪರ್ಕದಲ್ಲಿದ್ದ ಇಬ್ಬರು ಸಚಿವರ ಹೆಸರನ್ನು ನಾಳೆ ಸದನದಲ್ಲಿ ಬಹಿರಂಗಪಡಿಸುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಇಡೀ ಪ್ರಕರಣ ಕುರಿತು ಸೋಮವಾರ ಸದನದಲ್ಲಿ ಮಾತನಾಡುವೆ. ಆಕೆಯೊಂದಿಗೆ ಸಂಪರ್ಕವಿರುವ ಇಬ್ಬರು ಸಚಿವರ ಹೆಸರನ್ನು ಸದನದಲ್ಲಿ ಹೇಳುವೆ. ಈಗ ಆ ಬಗ್ಗೆ ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಇದು ಸದನದ ರಹಸ್ಯ ಎಂದರು. ಆಕೆಗೆ ಪ್ರೊಟೋಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಚಿನ್ನ ಎಲ್ಲಿಂದ ತಂದಿದ್ದಾರೆ? ಎಲ್ಲಿಟ್ಟು ತಂದಿದ್ದಾರೆ ಎಂಬುದು ಗೊತ್ತಿದೆ ಎಂದು ಯತ್ನಾಳ್ ಹೇಳಿದರು. ರನ್ಯಾಗೆ ಕೆಐಎಡಿಬಿಯಿಂದ 12 ಎಕರೆ ಜಮೀನು…
ರಾಜ್ಯಾದ್ಯಂತ ಹಬ್ಬಿರುವ ‘ಡ್ರಗ್ಸ್’ ಜಾಲವನ್ನು ಬೇರುಸಹಿತ ಕಿತ್ತೊಗೆಯುವುದೇ ನಮ್ಮ ಸರ್ಕಾರದ ಗುರಿ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ದೊಡ್ಡ ಡ್ರಗ್ಸ್ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಸುಮಾರು 75 ಕೋಟಿಗೂ ಅಧಿಕ ಮೌಲ್ಯದ MDMA ಅನ್ನು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ. ಮಂಗಳೂರು ಪೊಲೀಸರ ಈ ಒಂದು ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ಲಾಘಿಸಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ ಮಂಗಳೂರು ಪೋಲಿಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ಪತ್ತೆಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಸಿಟಿ ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ. ಸುಮಾರು ₹75 ಕೋಟಿಗೂ ಅಧಿಕ ಮೌಲ್ಯದ 37 ಕೆ.ಜಿ ಎಂಡಿಎಂಎ ಮಾದಕ ದ್ರವ್ಯವನ್ನು ವಶಕ್ಕೆ ಪಡೆದು, ಸಾವಿರಾರು ಯುವ ಜನರ ಬದುಕಿಗೆ ಎದುರಾಗಲಿದ್ದ ಬಹುದೊಡ್ಡ ಅಪಾಯವೊಂದನ್ನು ನಮ್ಮ ಪೊಲೀಸರು ನಿವಾರಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣದ ಪಣತೊಟ್ಟು, ಡ್ರಗ್ಸ್ ಮಾರಾಟ ಮತ್ತು ಸೇವನೆಯ ವಿರುದ್ಧ ಸಮರ ಸಾರಿದ್ದೇವೆ. ಕೆಲವು ತಿಂಗಳುಗಳ ಹಿಂದೆ…
ವಿಜಯಪುರ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯ ಪಾಕಿಸ್ತಾನದ ಒಂದು ಭಾಗದಂತಾಗಿದೆ. ಮದರಸಾಗಳಿಗೆ ಹಣ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಉರ್ದು ಶಾಲೆಗಳಿಗೆ 100 ಕೋಟಿ ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಮದರಸಾದಲ್ಲಿ ದೇಶದ್ರೋಹಿ ವಿಚಾರಗಳನ್ನು ಕಲಿಸುತ್ತಾರೆ. ಇಸ್ಲಾಂ ಎಂದರೆ ಅನ್ಯ ಧರ್ಮಗಳನ್ನು ನಾಶಪಡಿಸುವುದು ಎಂದರ್ಥ ಎಂದು ಶಾಸಕ ಬಚನಗೌಡ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅನ್ಯಕೋಮಿನವರಿಗೆ ಸರ್ಕಾರದ ಬಗ್ಗೆ ಸ್ವಲ್ಪವೂ ಭಯ ಇಲ್ಲದಂತಾಗಿದೆ. ಅವರು ಸ್ವೇಚ್ಛಾಚಾರದಿಂದ ರಾಜ್ಯದಲ್ಲಿ ಜೀವನ ಮಾಡುತ್ತಿದ್ದಾರೆ. ಸಚಿವರು ಕೂಡ ಏನನ್ನು ಮಾಡುತ್ತಿಲ್ಲ ಅವರೆಲ್ಲ ಜೀರೋ ಆಗಿದ್ದಾರೆ. ತಮ್ಮ ಸ್ಥಾನಕ್ಕೆ ಡಾ.ಜಿ ಪರಮೇಶ್ವರ್ ರಾಜೀನಾಮೆ ನೀಡುತ್ತಿಲ್ಲ. ಸಿಎಂಗೆ ಹೇಳಿ ಬೇರೆ ಇಲಾಖೆಯನ್ನಾದರೂ ತೆಗೆದುಕೊಳ್ಳಲಿ ಎಂದು ಗ್ರಹದ ಚಿವರ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಇರೋವರ್ಗು ಮುಸ್ಲಿಮರಿಗೆ ನಮ್ಮನ್ನು ಏನು ಮಾಡೋಕೆ ಆಗಲ್ಲ ಎಂಬ ಧೈರ್ಯ ಬಂದಿದೆ. ಇದನ್ನೆಲ್ಲ ವಿರೋಧಿಸಿ ಹೋರಾಟ ಮಾಡಲು ಬಿಜೆಪಿಯು ಕೂಡ…













