Author: kannadanewsnow05

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿದ್ಯುತ್ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ ಪೋಸ್ಟರ್ ಹಾಗೂ ದೀಪಾಲಂಕಾರದ ಟೀಸರ್ ಅನ್ನು ಇಂದು ಬಿಡುಗಡೆಗೊಳಿಸಲಾಯಿತು. ಅರಮನೆ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದ ವತಿಯಿಂದ ನಡೆಸಲಾಗುವ ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ ಪೋಸ್ಟರ್ ಬಿಡುಗಡೆಗೊಳಿಸಿ, ಟೀಸರ್ ಅನಾವರಣಗೊಳಿಸಿದರು. ದಸರಾ ಮಹೋತ್ಸವದ ಸಂಭ್ರಮಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಡ್ರೋನ್ ಪ್ರದರ್ಶನ ಈ ಬಾರಿ ಮತ್ತಷ್ಟು ಆಕರ್ಷಣೀಯವಾಗಿರಲಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29 ಮತ್ತು ಅಕ್ಟೋಬರ್ 1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಸಲಾಗುತ್ತಿದೆ. ಕಳೆದ ಬಾರಿ 1500 ಡ್ರೋನ್ ಬಳಸಿಕೊಂಡು ಡ್ರೋನ್ ಪ್ರದರ್ಶನ ನಡೆಸಲಾಗಿತ್ತು, ಈ ಬಾರಿ 3000 ಡ್ರೋನ್ ಬಳಸಿಕೊಂಡು ಪ್ರದರ್ಶನ ನಡೆಸಲಾಗುತ್ತಿದೆ. ಎಂದಿನಂತೆ ಈ ಬಾರಿಯೂ ಸೆಸ್ಕ್ ವತಿಯಿಂದ ದೀಪಾಲಂಕಾರ ಮಾಡಲಾಗುತ್ತಿದ್ದು, ನಗರದ 135 ಕಿ.ಮೀ…

Read More

ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಶವ ಸಂಸ್ಕಾರಕ್ಕೆ ಬಾಲಕಿಯ ಶವ ತೆಗೆದುಕೊಂಡ ಹೋದಾಗ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಬಾಲಕಿಯ ಶವ ಶಿಫ್ಟ್ ಮಾಡಿದ್ದಾರೆ. ಹೌದು ಶವ ಸಂಸ್ಕಾರಕ್ಕೆ ಪೋಷಕರು ಮತ್ತು ಸಂಬಂಧಿಕರು ಕೊಂಡೊಯ್ದಿದ್ದರು. ಸ್ಮಶಾನದಲ್ಲಿ ಶವ ಸಂಸ್ಕಾರ ವೇಳೇ ಪೊಲೀಸರು ತಡೆದು ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಅರ್ಚನಾ (17) ಎನ್ನುವ ಬಾಲಕಿಯ ಶವ ಶಿಫ್ಟ್ ಮಾಡಲಾಯಿತು. ಪೊಲೀಸರು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More

ಧಾರವಾಡ : ಧಾರವಾಡ ದಲ್ಲಿ ಲಾರಿ ಕಾರಿನ ಮಧ್ಯ ಭೀಕರವಾದ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವನಪ್ಪಿದ್ದು, ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಬಳಿ ಸಂಭವಿಸಿದೆ. ಮೂಡಲಗಿ ತಾಲೂಕಿನ ವಿಠಲ ಗಾಣಿಗೇರ (40) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದು, ಧಾರವಾಡ ಕೃಷಿ ಮೇಳಕ್ಕೆ ಆಗಮಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನು ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ಕೊಪ್ಪಳ : ಬಿಜೆಪಿ ನಾಯಕರ ಪ್ರಚೋದನಾಕಾರಿ ಭಾಷಣ ಹೇಳಿಕೆ ಕುರಿತು ಸಚಿವ ಶಿವರಾಜ್ ತಂಗಡಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ಅಷ್ಟೆ ಅಲ್ಲ ಎಲ್ಲ ಬಿಜೆಪಿ ನಾಯಕರನ್ನು ಗಡಿಪಾರು ಮಾಡಬೇಕು ಎಂದು ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದರು. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರ ಮಕ್ಕಳು ಗಣೇಶ ಉತ್ಸವದಲ್ಲಿ ಕುಣಿಯುತ್ತಾರಾ? ಯಾವ ನಾಯಕರು ಮಕ್ಕಳು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ? ಬಡವರ ಮಕ್ಕಳನ್ನು ಪ್ರಚೋದಿಸಿ ಜಗಳ ಮಾಡಿಸುತ್ತಾರೆ. ಕೊನೆಗೆ ಅನಾಹುತಕ್ಕೀಡಾಗುವುದು ಹಿಂದೂಗಳ ಮಕ್ಕಳು ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದರು

Read More

ಮುಂಬೈ : ಬೆಟ್ಟಿಂಗ್ ಪ್ರಕರಣದಲ್ಲಿ ನಟಿ ಊರ್ವಶಿ ರೌಟೇಲಾ ಅವರಿಗೆ ಮತ್ತು ಮಾಜಿ ಸಂಸದೆ ಮಿಮಿ ಚಕ್ರವರ್ತಿ ಅವರಿಗೆ ಇಂದು ED ಅಧಿಕಾರಿಗಳಿಂದ ಸಮನ್ಸ್ ಜಾರಿ ಮಾಡಿದೆ. 1xBet ಆ್ಯಪ್ ಪ್ರಕರಣದಲ್ಲಿ ಇಬ್ಬರನ್ನೂ ED ಪ್ರಧಾನ ಕಚೇರಿಗೆ ಹಾಜರಾಗುವಂತೆ ಕೇಳಲಾಗಿದೆ. ಇದಕ್ಕೂ ಮೊದಲು, ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರನ್ನು ED ವಿಚಾರಣೆ ನಡೆಸಿತ್ತು.

Read More

ಬಾಗಲಕೋಟೆ : ಸುಮಾರು 30ಕ್ಕೂ ಹೆಚ್ಚು ಜನರಿಗೆ ಕಚ್ಚಿ ಮಂಗ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಕೊನೆಗೂ ಹುಚ್ಚು ಮಂಗ ಸೆರೆ ಸಿಕ್ಕಿದೆ. ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಹುಚ್ಚು ಮಂಗವು ಸುಮಾರು 30ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿತ್ತು. ಇದೀಗ ಜನರು ಮಂಗನನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಮಂಗನ ಸೆರೆ ಹಿಡಿಯುವ ತಂಡದ ಕಾರ್ಯಚರಣೆ ನಡೆಸಿದ್ದು ಜನರ ಮೈ ಮೇಲೆ ಎರಗಿ ಕರಿಮಂಗ ಕಚ್ಚಿ ಗಾಯಗೊಳಿಸಿತ್ತು. ಇದೀಗ ಮಂಗನನ್ನು ಹಿಡಿದು ಜನರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮಂಗನನ್ನು ಬೋನಿನಲ್ಲಿ ಹಾಕಿಕೊಂಡು ತೆರಳಿದ್ದಾರೆ.

Read More

ಕಲಬುರ್ಗಿ : ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪಟ್ಟಣ ಪ್ರವೇಶಕ್ಕೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧ ವಿಧಿಸಲಾಗಿದೆ. ನಿರ್ಬಂಧ ವಿಧಿಸಿ ಕಲ್ಬುರ್ಗಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಆದೇಶ ಹೊರಡಿಸಿದ್ದಾರೆ. ಜೇವರ್ಗಿ ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದು ಶೋಭಾ ಯಾತ್ರೆಗೆ ಪ್ರಮೋದನೆ ಮುತಾಲಿಕ್ ಚಾಲನೆ ನೀಡಲು ಬರಬೇಕಿತ್ತು ಪ್ರಚೊದನಕಾರಿ ಭಾಷಣ ಹಾಗೂ ಕೋಮುದ್ವೇಷ ಭಾಷಣದ ಹಿನ್ನೆಲೆಯಲ್ಲಿ ಮುತಾಲಿಕ್ ಗೆ ನಿರ್ಬಂಧ ವಿಧಿಸಲಾಗಿದೆ ನಾಳೆ ಬೆಳಿಗ್ಗೆ 6 ಗಂಟೆವರೆಗೆ ಮುತಾಲಿಕೆಗೆ ನಿರ್ಬಂಧ ವಿಧಿಸಲಾಗಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ತನ್ನ ಮಕ್ಕಳನ್ನು ಬಕೆಟ್​ನಲ್ಲಿ ಮುಳುಗಿಸಿ ಕೊಂದು ಬಳಿಕ ತಂದೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರುವಂತಹ ಘಟನೆ ನಡೆದಿದೆ. ಘಟನೆಯಲ್ಲಿ ಪತ್ನಿ ಬಚಾವ್​ ಆಗಿದ್ದಾರೆ. ಹೊಸಕೋಟೆ ಪೊಲೀಸರ ಪತ್ನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಶಿವು ಎಂದು ಗುರುತಿಸಲಾಗಿದೆ. ಶಿವು ಮತ್ತು ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಕೆಲಸಕ್ಕೆ ಹೋಗುತ್ತಿದ್ದ ವೇಳೆ ಪ್ರೀತಿ ಮಾಡಿದ್ದು, ಅನ್ಯ ಜಾತಿಯಾಗಿದ್ದ ಕಾರಣ ಪೋಷಕರ ವಿರೋಧದ ನಡುವೆ ಮದುವೆ ಮಾಡಿಕೊಂಡಿದ್ದರು. ಮದುವೆ ನಂತರ ಚೆನ್ನಾಗಿದ್ದ ಕುಟುಂಬಕ್ಕೆ ಅಪಘಾತದ ಬರೆ ಬಿದ್ದಿತ್ತು. ರಸ್ತೆ ಅಪಘಾತದಲ್ಲಿ ಶಿವು ಕಾಲು ಮುರಿದುಕೊಂಡು ಆಸ್ವತ್ರೆ ಪಾಲಾಗಿದ್ದ. ಎರಡು ಮನೆಯವರ ಸಹಕಾರವಿಲ್ಲದ ಕುಟುಂಬ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಮನೆ ನಿರ್ವಹಣೆಗೆ ಮಹಿಳೆ ಕೆಲಸಕ್ಕೆ ಹೋಗ್ತಿದ್ರೆ, ಗಂಡ ಮನೆಯಲ್ಲೆ ಇರ್ತಿದ್ದ. ಇತ್ತೀಚೆಗೆ ಪತ್ನಿ ಶೀಲದ ಮೇಲೂ ಶಿವು ಅನುಮಾನ ಪಡುತ್ತಿದ್ದ.…

Read More

ಬೆಂಗಳೂರು : ಬೆಂಗಳೂರಲ್ಲಿ ನಾಳೆಯಿಂದ ಮೂರು ದಿನ ಕಾವೇರಿ ನೀರು ಸರಬರಾಜು ಬಂದ್ ಆಗಲಿದೆ. ಸೆಪ್ಟೆಂಬರ್ 15 ರಿಂದ 17ರವರೆಗೆ ಕಾವೇರಿ ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತಿದೆ. ಸುಮಾರು 68 ಗಂಟೆಗಳ ಕಾಲ ನೀರು ಸರಬರಾಜು ಬಂದ್ ಮಾಡಲಾಗುತ್ತಿದೆ. ಹಾಗಾಗಿ ಅಗತ್ಯದಷ್ಟು ನೀರು ಸಂಗ್ರಹಿಸಿಕೊಳ್ಳಲು ಜಳಮಂಡಳಿ ಸೂಚನೆ ನೀಡಿದೆ. ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15, 16 ಹಾಗೂ 17ರಂದು ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಚಿತವಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಜಲಮಂಡಳಿ ಮನವಿ ಮಾಡಿದೆ.ನಿಯಮಿತ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ ವಿವಿಧ ಹಂತಗಳಲ್ಲಿ ಜಲರೇಚಕ ಯಂತ್ರಾಗಾರಗಳನ್ನು ಸೆ.15, 16 ಹಾಗೂ 17ರಂದು ಸ್ಥಗಿತಗೊಳಿಸಲಾಗುತ್ತದೆ. ಕಾವೇರಿ 5ನೇ ಹಂತ ಸೆಪ್ಟೆಂಬರ್.15ರಿಂದ ಬೆಳಿಗ್ಗೆ 1 ರಿಂದ ಸೆಪ್ಟೆಂಬರ್ೆ.17ರ ಮಧ್ಯಾಹ್ನ 1ರವರೆಗೆ ಒಟ್ಟು 60 ಗಂಟೆಗಳ ಕಾಲ ಕಾವೇರಿ 1, 2, 3, 4,ರಲ್ಲಿ ಸೆಪ್ಟೆಂಬರ್ 16ರ ಬೆಳಿಗ್ಗೆ 6ರಿಂದ…

Read More

ಬೆಂಗಳೂರು : ಇತ್ತೀಚಿಗೆ ನಟ ದರ್ಶನ್ ಅಭಿಮಾನಿಗಳು ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ ಹಾಕಿ ನಿಂದನೆ ಮಾಡಿದ್ದ ಪ್ರಕರಣ ಭಾರಿ ಸದ್ದು ಮಾಡಿತ್ತು. ಬಳಿಕ ರಮ್ಯಾ ಈ ಕುರಿತು ಬೆಂಗಳೂರು ಕಮಿಷನರ್ ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ಅರೆಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೆ ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಅಶ್ಲೀಲ ಮೆಸೇಜ್ ಬಂದಿದ್ದು ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ರು ಈ ಕುರಿತು ವಿವರಣೆ ನೀಡುವಂತೆ ಇದೀಗ 2ನೇ ಬಾರಿ ನೋಟಿಸ್ ನೀಡಿದ್ದಾರೆ. ಹೌದು ಕೊಲೆ ಆರೋಪಿ ನಟ ದರ್ಶನ್ ಪತ್ನಿಗೆ ಅಶ್ಲೀಲ ಮೆಸ್ಸೇಜ್ ಮಾಡಿದರ ಕುರಿತು ವಿವರಣೆ ನೀಡುವಂತೆ ಇದೀಗ ಪೊಲೀಸರು ಮತ್ತೊಂದು ನೋಟಿಸ್ ಕಳುಹಿಸಿದ್ದಾರೆ. ಎರಡು ನೋಟಿಸ್ಗು ಸಹ ವಿಜಯಲಕ್ಷ್ಮಿ ಯಾವುದೇ ಉತ್ತರ ನೀಡಿಲ್ಲ. ಘಟನೆ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ನೋಟಿಸ್ ನೀಡಿದ್ದಾರೆ ಆದರೆ ಎರಡನೇ ಬಾರಿ ನೋಟಿಸ್ ನೀಡಿದರು ಕೂಡ ವಿಜಯಲಕ್ಷ್ಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಬಳಿಕ ಮಹಿಳಾ ಆಯೋಗದಿಂದ ಸುಮೊಟೊ ಕೇಸ್ ದಾಖಲಿಸುವಂತೆ…

Read More