Author: kannadanewsnow05

ಕೊಪ್ಪಳ : ಕೂಲಿ ಮಾಡಿದ ಬಾಕಿ ಎರಡು ನೂರು ರೂಪಾಯಿ ಹಣ ಕೊಡಲಿಲ್ಲವೆಂದು ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೇಣುಕಮ್ಮ ಸಿಳ್ಳಿಕ್ಯಾತರ್(57) ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ.ಆರೋಪಿಯನ್ನು ಮಹೇಶ್ ಎಂದು ಹೇಳಲಾಗುತ್ತಿದೆ. ಮೃತ ರೇಣುಕಮ್ಮಳ ಪತಿ ಹಳ್ಳಪ್ಪ, ಕಟ್ಟಡ ನಿರ್ಮಾಣದ ಮಿಸ್ತ್ರಿ ಕೆಲಸ ಮಾಡುತ್ತಾನೆ. ಈತ ಕೆಲ ದಿನಗಳ ಹಿಂದೆ ಗ್ರಾಮದ ಮಹೇಶ್​ ಗೊಲ್ಲರ ಸೇರಿದಂತೆ ಕೆಲ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದ. ಅಲ್ಲಿ ಶಾಲೆಯೊಂದರಲ್ಲಿ ಇದ್ದ ಕೆಲಸವನ್ನು ನಾಲ್ಕು ದಿನಗಳ ಕಾಲ ಮಾಡಿ, ನಂತರ ಎಲ್ಲರೂ ಕೂಡ ಮರಳಿ ಗ್ರಾಮಕ್ಕೆ ಬಂದಿದ್ದರು. ಪ್ರತಿ ದಿನಕ್ಕೆ 650 ರೂಪಾಯಿಯಂತೆ ಕೂಲಿ ಮಾತನಾಡಲಾಗಿತ್ತು. ನಾಲ್ಕು ದಿನಗಳ ಕಾಲ ಮಾಡಿ, ನಂತರ ಎಲ್ಲರೂ ಕೂಡ ಮರಳಿ ಗ್ರಾಮಕ್ಕೆ ಬಂದಿದ್ದರು. ಪ್ರತಿ ದಿನಕ್ಕೆ 650 ರೂಪಾಯಿಯಂತೆ ಕೂಲಿ ಮಾತನಾಡಲಾಗಿತ್ತು. ಹೀಗಾಗಿ ಕೂಲಿ ಕೆಲಸಕ್ಕೆ ಬಂದವರಿಗೆಲ್ಲ ಹಳ್ಳಪ್ಪ, ವಾರದ ಹಿಂದೆ ಪ್ರತಿಯೊಬ್ಬರಿಗೂ ತಲಾ ಎರಡು ಸಾವಿರದಾ ನಾಲ್ಕು…

Read More

ಬೆಳಗಾವಿ : ರಾಜ್ಯದಲ್ಲಿ ಇತ್ತೀಚಿಗೆ ಪೆಟ್ರೋಲ್ ಡೀಸೆಲ್ ಬಳಿಕ ಇದೀಗ KMF ಹಾಲಿನ ದರ ಏರಿಕೆ ಮಾಡಿದೆ. ಇದನ್ನು ವಿರೋಧಿಸಿ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ಅವರು ಹಾಕಿದ್ದು ಜುಲೈ 3 ಅಥವಾ 4ರಂದು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದರು. ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಬೆಲೆ ಏರಿಕೆ ಖಂಡಿಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಜುಲೈ 3 ಅಥವಾ 4ರಂದು ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ. ಕರ್ನಾಟಕ ಸರ್ಕಾರ ಒಂದು ರೀತಿ ಹುಚ್ಚರ ಸಂತೆಯಾಗಿದೆ. ಮೊನ್ನೆಯಷ್ಟೇ ಪೆಟ್ರೋಲ್, ಡೀಸೆಲ್‌ ದರ ಏರಿಕೆ ಮಾಡಿದ್ದಾರೆ. ಈಗ ಹಾಲಿನ ದರ ಲೀಟರ್​ಗೆ 2 ರೂಪಾಯಿ ಏರಿಕೆ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿದ್ದಾರೆ. ಗ್ಯಾರಂಟಿಗೆ ಹಣ ಹೊಂದಿಸಲು ಆಗದೇ ಬೆಲೆ ಏರಿಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವೈಜ್ಞಾನಿಕವಾಗಿ, ಯಾವುದೇ…

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿ ಪವಿತ್ರ ಗೌಡ ಸೇರಿದಂತೆ ದರ್ಶನ್ ಹಾಗೂ ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ನಿನ್ನೆ ನಟ ದರ್ಶನ್ ಅವರನ್ನು ಭೇಟಿಯಾಗಲು ವಿಜಯಲಕ್ಷ್ಮಿ ಹಾಗೂ ಅವರ ಪುತ್ರ ಆಗಮಿಸಿದ್ದರು ಇದನ್ನು ತಿಳಿದ ಪವಿತ್ರ ಗೌಡ ನನ್ನನ್ನು ನೋಡಲು ನನ್ನ ಪೋಷಕರು ಯಾಕೆ ಬಂದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಹೌದು ನಿನ್ನೆ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಭೇಟಿಯಾಗಿದ್ದರು. ಈ ವಿಷಯ ತಿಳಿದು ನಟಿ ಪವಿತ್ರ ಗೌಡ ಸಹಜವಾಗಿ ಬೇಸರಗೊಂಡಿದ್ದು ನನ್ನ ಪೋಷಕರು ಇನ್ನು ಯಾಕೆ ನನ್ನನ್ನು ಭೇಟಿ ಮಾಡಲು ಬಂದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಕುಟುಂಬಸ್ಥರಿಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾರೆ. ಕರೆ ಮಾಡಿ ತಿಳಿಸಿದ ಬೆನ್ನಲ್ಲೆ ಪವಿತ್ರ ಗೌಡರನ್ನು ಕುಟುಂಬಸ್ಥರು ಭೇಟಿಯಾಗಿದ್ದಾರೆ. ಮನೆಯವರಿಗೆ ಕರೆ ಮಾಡಿ ಪವಿತ್ರ ಗೌಡ ಆವಾಜ್ ಹಾಕಿದ್ದಳು ನನ್ನನ್ನು ಏಕೆ ನೋಡಲು ಬಂದಿಲ್ಲ. ನಾನು ಹೇಳಿದ ವಸ್ತುಗಳನ್ನು ಯಾಕೆ ತಂದಿಲ್ಲ…

Read More

ಹಾಸನ : ಹಣ ದುರುಪಯೋಗ ಆರೋಪದ ಅಡಿ ಇದೀಗ ಸೂರಜ್ ರೇವಣ್ಣ ಆಪ್ತ ಎನ್ನಲಾದ ಶಿವಕುಮಾರ್ ವಿರುದ್ಧ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆಯಲ್ಲಿ ​FIR ದಾಖಲಾಗಿದೆ. ಹೌದು ಸೂರಜ್ ವಿರುದ್ದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಹಿನ್ನಲೆ ಜೆಡಿಎಸ್​ ಕಾರ್ಯಕರ್ತ ಠಾಣೆಗೆ ದೂರ ನೀಡಿದ್ದ. ಆದರೆ, ಆತ ಹಣಕ್ಕಾಗಿ ಅರೋಪಿಸಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್, ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ್ದರು. ಇದೀಗ ಹಣ ಆರೋಪದ ಅಡಿಯಲ್ಲಿ ಶಿವಕುಮಾರ್ ವಿರುದ್ಧವೆ ದಾಖಲಾಗಿದೆ. ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆಯಲ್ಲಿ ​ದೂರು ದಾಖಲಾಗಿದೆ. ಆರೋಪಿ ಶಿವಕುಮಾರ್ ಶ್ರೀರಾಮ್ ಫೈನಾನ್ಸ್​ ರಾಮನಾಥಪುರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಆರು ಗ್ರಾಹಕರು ವಾಹನ ಸಾಲದ ವಂತಿಕೆ ಕಟ್ಟಲು ನೀಡಿದ್ದ 2 ಲಕ್ಷ 91 ಸಾವಿರ ರೂಪಾಯಿ ಹಣವನ್ನ ದುರ್ಬಳಕೆ ಮಾಡಿದ್ದ ಆರೋಪದಡಿ ಕೇಸ್​​ ದಾಖಲಾಗಿದ್ದು, ಈ ಕುರಿತು ಜೂ.21ರಂದೇ ಶಾಖೆಯ ಮ್ಯಾನೇಜರ್ ಕೇಶವಮೂರ್ತಿ ದೂರು ನೀಡಿದ್ದರು. ಇನ್ನು ಪ್ರಕರಣ…

Read More

ದಕ್ಷಿಣಕನ್ನಡ : ರಾಜ್ಯದಲ್ಲಿ ಎದುರಾದ ದರ ಬಿಸಿ ಏರಿಕೆ ನಡುವೆ ಕೆಎಂಎಫ್ ಕೂಡ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಹಾಲಿನ ಪ್ರಮಾಣವನ್ನ ಹೆಚ್ಚಿಸೋದ್ರ ಜೊತೆಗೆ ದರವನ್ನೂ ಏರಿಸಿದೆ. ಒಂದು ಲೀಟರ್ ಬದಲಿಗೆ 1050 ಎಂಎಲ್​ನ ಪ್ಯಾಕೆಟ್ ಹಾಲು​ ಸಿಗಲಿದೆ. 50 ಎಂಲ್​ ಹಾಲಿನ ಪ್ಯಾಕೆಟ್​ಗೆ 2 ರೂಪಾಯಿ ದರ ಏರಿಸಲಾಗಿದೆ. ನಾಳೆಯಿಂದಲೇ ಈ ಪರಿಷ್ಕೃತ ದರ ಜಾರಿಗೆ ಬರಲಿದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಾಲಿನ ದರ ಏರಿಕೆ ಕುರಿತು ಸಮರ್ಥಿಸಿಕೊಂಡಿದ್ದು, ನೀರಿನ ಬೆಲೆಯು ಲೀಟರ್ಗೆ 25 ರೂಪಾಯಿ ಆಗಿದೆ. ಹಾಲಿನ ಬೆಲೆ ಜಾಸ್ತಿ ಮಾಡಬೇಕೆಂದು ರೈತರ ಒತ್ತಡವಿತ್ತು. ಹಾಗಾಗಿ ರೈತರ ಒತ್ತಾಯದ ಮೇಲೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಹಾಲಿನ ದರ ಏರಿಕೆ ಮಾಡುವುದು ಸರ್ಕಾರ ಅಲ್ಲ, ಕೆಎಂಎಫ್​. ಬೇರೆ…

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಇದೀಗ ವಿವಿಧ ಜಿಲ್ಲೆಗಳಿಂದ ತಂಡೋಪ ತಂಡವಾಗಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಬಳ್ಳಾರಿ ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ತಂಡೋಪ ತಂಡವಾಗಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹೌದು ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪವಿತ್ರಾ ಗೌಡ ಇನ್ನೂ ಹಲವರ ಬಂಧನವಾಗಿದ್ದು, ಎಲ್ಲರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ದರ್ಶನ್​ ಸೇರಿದಂತೆ ಹಲವು ಆರೋಪಿಗಳನ್ನು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇರಿಸಲಾಗಿದೆ. ನಾಲ್ಕು ಆರೋಪಿಗಳನ್ನು ತುಮಕೂರಿನ ಜೈಲಿಗೆ ಸ್ಥಳಾಂತರಿಸಲಾಗಿದೆ. ದರ್ಶನ್ ಅನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಅವರ ಅಭಿಮಾನಿಗಳು ಬರುತ್ತಲೇ ಇದ್ದಾರೆ. ದರ್ಶನ್ ಬೇಟಿಗೆ ಬಂದಂತಹ ಅಭಿಮಾನಿ ಒಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ, ದರ್ಶನ್ ಅವರು ತಪ್ಪು ಮಾಡಿದರೆ ಶಿಕ್ಷೆಯಾಗಲಿ. ಆದರೆ ಅವರ ಮೇಲಿರುವ ಅಭಿಮಾನ ನಮಗೆ ಯಾವತ್ತಿಗೂ ಕಡಿಮೆಯಾಗುವುದಿಲ್ಲ. ಈ ಒಂದು ಘಟನೆ ನಡೆಯಬಾರದಿತ್ತು ಆದರೂ ಕೂಡ ನಮ್ಮ ದರ್ಶನ್ ಅವರ ಮೇಲೆ ಅಭಿಮಾನ ಎಳ್ಳಷ್ಟು ಕಡಿಮೆಯಾಗಿಲ್ಲ.…

Read More

ಬೀದರ್ : ಸಚಿವ ಈಶ್ವರ ಖಂಡ್ರೆ ಪುತ್ರ ಮುಸ್ಲಿಮರ ಮತಗಳಿಂದಲೇ ಗೆದ್ದಿದ್ದಾನೆ. ಹೀಗಾಗಿ ಮುಸ್ಲಿಮರ ಕೆಲಸವನ್ನು ಮುಲಾಜಿಲ್ಲದೆ ಮಾಡಬೇಕಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಹೌದು ಬೀದರ್ನಲ್ಲಿ ಸಚಿವ ಜಮೀರ್ ಅಹಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಚಿವ ಈಶ್ವರ ಖಂಡ್ರೆ ಪುತ್ರ ಮುಸ್ಲಿಮರ ಮತಗಳಿಂದಲೇ ಗೆದ್ದಿದ್ದಾನೆ. ಹೀಗಾಗಿ ಮುಸ್ಲಿಮರ ಕೆಲಸವನ್ನು ಮುಲಾಜಿಲ್ಲದೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಬೀದರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಬೀದರ್ ಕ್ಷೇತ್ರದಲ್ಲಿ ಸಾಗರ್ ಖಂಡ್ರೆ ಮುಸ್ಲಿಮರ ಮತದಿಂದ ಗೆಲುವು ಕಂಡಿದ್ದಾನೆ. ನಾನು ಈಶ್ವರ ಖಂಡ್ರೆ ಜೊತೆಗೆ ಮಾತನಾಡುತ್ತೇನೆ, ಕೆಲಸ ನಾನು ಮಾಡಿಸುತ್ತೇನೆ. ಸರ್ವೇ ನಂಬರ್ 93ರ ಖಬರಸ್ಥಾನ ಜಾಗದ ವಿಚಾರವಾಗಿ ಜಮೀರ್ ಅಹ್ಮದ್ ಮಾತನಾಡಿದರು. ಅರಣ್ಯ ಪ್ರದೇಶದ ಜಾಗವಾಗಿದ್ದರಿಂದ ಖಬರಸ್ಥಾನಗೆ ಜಾಗ ನೀಡುತ್ತಿಲ್ಲ ಎಂದು ಕಾರ್ಯಕ್ರಮದಲ್ಲಿ ವ್ಯಕ್ತಿ ಒಬ್ಬರು ಅಳಲು ತೋಡಿಕೊಂಡಿದ್ದರು. ಅಕ್ಕ ಪಕ್ಕದಲ್ಲಿ ಎಲ್ಲೂ ಜಾಗ ಇಲ್ಲವಾ ಎಂದು ಸಚಿವ ಜಮೀರ್ ಅಹ್ಮದ್ ಖಾನ್…

Read More

ಚಿಕ್ಕಬಳ್ಳಾಪುರ : ತನ್ನ ಪತ್ನಿಯು ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆಕೆಯ ಶೀಲ ಶಂಕಿಸಿ ಪತಿಯೊಬ್ಬ ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸೋಣೆಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಮುನಿರೆಡ್ಡಿ (60) ತನ್ನ ಮೊದಲನೇ ಪತ್ನಿ ಪದ್ಮಮ್ಮ (50)ಳನ್ನು ಮಚ್ಚಿನಿಂದ ಭೀಕರವಾಗಿ ಕೊಲೆ ಮಾಡಿದ್ದಾನೆ.ಮೃತ ಪದ್ಮಮ್ಮ ಅವರು ಜಮೀನು ವಿವಾದ ಸಂಬಂಧ ಕೋರ್ಟ್​ನಲ್ಲಿ ವ್ಯಾಜ್ಯ ಹೂಡಿದ್ದಾರೆ. ಅಲ್ಲದೆ ತನ್ನ ಪತ್ನಿ ಅದೇ ಗ್ರಾಮದ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಮುನಿರೆಡ್ಡಿ ಮತ್ತು ಅವರ ಮಗ ಇಬ್ಬರೂ ಸೇರಿ ಪದ್ಮಮ್ಮಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್​ ಮೂಗಳು ತಿಳಿಸಿವೆ. ಕೊಲೆ ಮಾಡಿದ ನಂತರ ಆರೋಪಿಗಳು ತಾವೇ ಪೊಲೀಸರಿಗೆ ಶರಣಾಗಿದ್ದಾರೆ. ಕೊಲೆ ಪ್ರಕರಣದ ಹಿನ್ನೆಲೆ ಗ್ರಾಮದಲ್ಲಿ ಆತಂಕ ಮೂಡಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More

ಬೆಂಗಳೂರು : ಎಸ್ ಎಸ್ ಎಲ್ ಸಿ ಫೇಲ್ ಆಗಿ ಮನೆಯಲ್ಲಿ ಇದ್ದಂತಹ ವಿದ್ಯಾರ್ಥಿಯ ಮೇಲೆ ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆಗೈದ ಘಟನೆ ಬೆಂಗಳೂರಿನ YMRAC ಸರ್ಕಲ್ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು 17 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಮಂಜುನಾಥ್ ಅಪ್ಪ ಅಮ್ಮನ ಕಳೆದುಕೊಂಡು ಅಬ್ಬಿಗೆರೆಯಲ್ಲಿ ಚಿಕ್ಕಪ್ಪನ ಆಶ್ರಯದಲ್ಲಿದ್ದ.ಈ ವರ್ಷವಷ್ಟೇ SSLC ಪರೀಕ್ಷೆ ಬರೆದು ಫೇಲ್ ಆಗಿದ್ದ. ಆದರೆ ಮೊನ್ನೆ ರಾತ್ರಿ ಮನೆಯಿಂದ ಹೊರ ಹೋಗಿದ್ದ ಮಂಜುನಾಥ್ ನನ್ನ ಭೀಕರವಾಗಿ ಕೊಲೆ ಮಾಡಲಾಗಿದ್ದು, ಹತ್ಯೆ ಮಾಡಿದ ಪಾಪಿಗಳು ಎಸ್ಕೇಪ್ ಆಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮಂಜುನಾಥ್ ಡ್ರಿಂಕ್ಸ್ ಮಾಡಿದ್ದು ಅಲ್ಲದೆ ಗಾಂಜಾ ಸೇವನೆ ಕೂಡ ಮಾಡಿ ಬೀದಿಯಲ್ಲಿ ನಿಂತಿದ್ದ. ಈ ವೇಳೆ ಪೋಷಕರು ಹೋಗಿ ಮಂಜುನಾಥ್ ನನ್ನ ಮನೆಗೆ ಕರ್ಕೊಂಡ ಬಂದಿದ್ರು. ಆದರೆ ಮತ್ತೆ ಮಂಜುನಾಥ್ ಮಧ್ಯರಾತ್ರಿ ಎದ್ದು ಹೊರಗಡೆ ಹೋಗಿದ್ದವನು ವಾಪಾಸ್ ಬಂದಿಲ್ಲ. ಇದರಿಂದ ಸಹಜವಾಗಿ ಮನೆಯವರು ಗಾಬರಿಗೆ ಒಳಗಾಗಿದ್ದಾರೆ.ಈ ವೇಳೆ ಪೋಷಕರು…

Read More

ಬೀದರ್ : ಕೊಟ್ಟ ಸಾಲವನ್ನು ವಾಪಸ್ ಕೊಡದಿದ್ದಕ್ಕೆ ವ್ಯಕ್ತಿಯೊಬ್ಬ ಬಾಲ್ಯ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ತಾಲೂಕಿನ ಯಾಕತನಪುರ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಬೀದರ್ ತಾಲ್ಲೂಕಿನ ಯಾಕತನಪುರ ಗ್ರಾಮದ ಬಳಿ ಈ ದುಷ್ಕೃತ್ಯ ನಡೆದಿದೆ. ಮೊಹಮ್ಮದ್ ಸಿರಾಜ್ ತಲೆಗೆ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಮೊಹಮ್ಮದ್ ಸಿರಾಜ್ ನ ಬಾಲ್ಯ ಸ್ನೇಹಿತ ಯಾಸಿನಿಂದ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಪ್ರಕರಣದ ಆರೋಪಿಯಾಗಿರುವ ಯಾಸಿನ್ ನನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಮನ್ನಾಖೆಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Read More