Subscribe to Updates
Get the latest creative news from FooBar about art, design and business.
Author: kannadanewsnow05
ಚಾಮರಾಜನಗರ : ಚಾಮರಾಜನಗರದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿ ಒಬ್ಬ ಶೌಚಾಲಯಕ್ಕೆ ತೆರಳಲು ಅನುಮತಿ ಕೇಳಿದ್ದಾನೆ. ಇದಕ್ಕೆ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಹಿಗ್ಗಾಮುಗ್ಗ ಥಳಿಸಿ, ವಿದ್ಯಾರ್ಥಿ ಮೂರ್ಛೆ ಬರುವ ಹಾಗೆ ಹಲ್ಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರಲ್ಲಿ ನಡೆದಿದೆ. 11 ವರ್ಷದ ಬಾಲಕನ ಮೇಲೆ ಮಾರಣಾಂತಿಕವಾಗಿ ಶಿಕ್ಷಕಿ ಭಾನುಮತಿ ಹಲ್ಲೆ ನಡೆಸಿದ್ದಾಳೆ. ಯಳಂದೂರಿನ ಎಸ್ಡಿವಿಎಸ್ ಶಾಲೆಯಲ್ಲಿ ಇವತ್ತು ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಎಳಂದೂರಿನ SDVS ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ ಗುರುಪ್ರಸಾದ್ಗೆ ಶಿಕ್ಷಕಿ ಭಾನುಮತಿ ಥಳಿಸಿದ್ದಾರೆ. ಶಿಕ್ಷಕಿ ಹೊಡೆತಕ್ಕೆ ಗುರುಪ್ರಸಾದ್ ಮೂರ್ಛೆ ಹೋಗಿದ್ದಾನೆ. ವಿದ್ಯಾರ್ಥಿ ಗುರುಪ್ರಸಾದ್ ಗೆ ಗಂಭೀರವಾದ ಗಾಯಗಳಾಗಿದ್ದು, ಯಳಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ ವಿದ್ಯಾರ್ಥಿ ಗುರುಪ್ರಸಾದ್ ಗೆ ಚಿಕಿತ್ಸೆ ನೀಡಲಾಗುತ್ತಿದೆ ಶಿಕ್ಷಕಿ ಭಾನುಮತಿ ವಿರುದ್ಧ ವಿದ್ಯಾರ್ಥಿ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ, ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ : ಕಳೆದ ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಸರಣಿ ಬ್ಯಾಂಕ್ ದರೋಡೆ ಪ್ರಕರಣಗಳು ನಡೆದಿದ್ದವು. ಅಲ್ಲದೆ ಇತ್ತೀಚಿಗೆ ಅಷ್ಟೇ ವಿಜಯಪುರ ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ ದರೋಡೆ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ ವಿಜಯಪುರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗೆ ನುಗ್ಗಿ ದುಷ್ಕರ್ಮಿಗಳು ನಗದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಹೌದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ದರೋಡೆ ನಡೆದಿದೆ. ಮ್ಯಾನೇಜರ್ ಸಿಬ್ಬಂದಿ ಕೈ ಕಾಲು ಕಟ್ಟಿ ಹಾಕಿ ದುಷ್ಕರ್ಮಿಗಳು ಬ್ಯಾಂಕ್ ದರೋಡೆ ನಡೆಸಿದ್ದಾರೆ. ವಿಜಯಪುರದ ಚಡಚಣ ಪಟ್ಟಣದಲ್ಲಿ ಇಂದು ಈ ಒಂದು ಘಟನೆ ನಡೆದಿದೆ. ಸುಮಾರು 5ಕ್ಕೂ ಹೆಚ್ಚು ಮುಸುಕು ಧಾರಿಗಳು ಈ ಒಂದು ಕೃತ್ಯ ಎಸಗಿದ್ದು, ಕಂಟ್ರಿ ಪಿಸ್ತೂಲ್ ಹಾಗೂ ಮಾರಕಸ್ತ್ರಗಳನ್ನು ತೋರಿಸಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳ ಕೈಕಾಲು ಕಟ್ಟಿ ಬ್ಯಾಂಕ್ ನಲ್ಲಿದ್ದ ನಗದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಸದ್ಯ ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಭೇಟಿ…
ಮಂಡ್ಯ :- ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದ ಅನುಕೂಲತೆಗಾಗಿ ಹಲವು ವರ್ಷಗಳಿಂದ ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ನೀಡಿದರೇ ಇನ್ನಷ್ಟು ಲಾಭದಾಯಕ ಸಂಘವಾಗಿ ಮುಂದುವರೆಸಲು ಸಾಧ್ಯವಾಗಲಿದೆ ಎಂದು ಸಂಘದ ಅಧ್ಯಕ್ಷ ಸಿ.ಟಿ.ಶಂಕರ್ ಹೇಳಿದರು. ಮದ್ದೂರು ತಾಲೂಕಿನ ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 6.50 ಲಕ್ಷ ರೂ ಲಾಭಗಳಿಸಿದ್ದು, ಸಂಘದಲ್ಲಿ 1362 ಮಂದಿ ಸದಸ್ಯರಿದ್ದಾರೆ. ಸಂಘದ ವತಿಯಿಂದ ವಾರ್ಷಿಕ 7.53 ಕೋಟಿ ವಹಿವಾಟು ನಡೆಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಂಘದಿಂದ ಕಿಸಾನ್ ಕಾರ್ಡ್ ಸಾಲ 3.55 ಕೋಟಿ. ಮಧ್ಯಮಾವಧಿ ಸಾಲ 27 ಲಕ್ಷ, ಸ್ವಸಹಾಯ ಗುಂಪಿನ ಸಾಲ ರೂ.18 ಲಕ್ಷ ಹಾಗೂ ಗೊಬ್ಬರ ಮಾರಾಟದಿಂದ 18.50 ಲಕ್ಷ ವಹಿವಾಟು ಆಗಿದೆ…
ಮಂಡ್ಯ :- ಅರಣ್ಯ ಇಲಾಖೆ ವತಿಯಿಂದ ಕಾಡಂಚಿನ ಗ್ರಾಮಗಳ ಕುಟುಂಬಗಳಿಗೆ ನೀಡುತ್ತಿರುವ ಉಚಿತ ಗ್ಯಾಸ್ ಸಂಪರ್ಕವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಪರಿಸರಕ್ಕಾಗುವ ಹಾನಿಯನ್ನು ತಡೆಯಬೇಕೆಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು. ಮದ್ದೂರು ತಾಲೂಕಿನ ಸೋಮನಹಳ್ಳಿ ಬಳಿಯ ಅರಣ್ಯ ಇಲಾಖೆಯ ಆವರಣದಲ್ಲಿ ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಕಾಡಂಚಿನ ಗ್ರಾಮಗಳ ಫಲಾನುಭವಿಗಳಿಗೆ ರಿಫಿಲ್ಲಿಂಗ್ ಸಿಲಿಂಡರ್ ಗಳನ್ನು ವಿತರಿಸಿ ಮಾತನಾಡಿದರು. ನಮ್ಮ ಪೂರ್ವಜರ ಕಾಲದಿಂದಲೂ ಅಡುಗೆಗೆ ಸೌದೆಯನ್ನೇ ಉಪಯೋಗಿಸಲಾಗುತ್ತಿತ್ತು. ನಮ್ಮ ತಾಯಂದಿರು ಅಡುಗೆ ಮನೆ ಸೇರಿ ಸೌದೆಯಿಂದ ಬರುವ ಹೊಗೆ ಸೇವಿಸಿ ನಾನಾ ರೋಗಗಳಿಂದ ಬಳಲುತ್ತಿದ್ದರು. ಕಾಲ ಬದಲಾದಂತೆ ನಾವೂ ಬದಲಾಗಬೇಕಿದ್ದು, ಅಡುಗೆಗೆ ಸೌದೆ ಬದಲು ಗ್ಯಾಸ್ ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಕಟ್ಟಿಗೆಗೆ ಕಾಡನ್ನು ಕಡಿದು ನಾಶ ಮಾಡುವುದು ತಪ್ಪಿ. ಕಾಡನ್ನು ಉಳಿಸಿ ನಾಡನ್ನು ಉಳಿಸೋಣ ಎಂದು ಹೇಳಿದರು. ಸೌದೆ ಬಳಸುವುದರಿಂದ ಪರಿಸರ ಕಲುಷಿತಗೊಳ್ಳುವುದರ ಜತೆಗೆ ಮರಗಿಡಗಳನ್ನು ಕಟ್ಟಿಗೆಗಾಗಿ ಕಡಿಯುವುದರಿಂದ ಕಾಡು ನಾಶವಾಗಿ ಕಾಲಕ್ಕೆ ತಕ್ಕಂತೆ ವಾಡಿಕೆ ಮಳೆೆ…
ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪೊಲೀಸರ ಸಮಯ ಪ್ರಜ್ಞೆಯಿಂದ ಭಾರಿ ದುರಂತ ಒಂದು ತಪ್ಪಿದೆ. ದೇವರ ಚಿಕ್ಕನಹಳ್ಳಿಯ ಕೃಷ್ಣ ಲೇಔಟ್ ನಲ್ಲಿ ಈ ಒಂದು ಅಗ್ನಿ ಅನಾಹುತ ಸಂಭವಿಸಿದೆ. ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ನಿಂದ ಕಟ್ಟಡಕ್ಕೆ ಬೆಂಕಿ ಬಿದ್ದಿದೆ. ಅಗ್ನಿ ಅವಘಡ ವಿಚಾರ ತಿಳಿದು ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ತೆರಳಿದ್ದಾರೆ. ಈ ವೇಳೆ ಪೊಲೀಸರು ಕಟ್ಟಡದಲ್ಲಿ ಸಿಲುಕಿದ ಆರು ಜನರನ್ನು ರಕ್ಷಿಸಿದ್ದಾರೆ. ನೆಲ ಮಹಡಿಯಲ್ಲಿ ಸಿಲುಕಿದ್ದ ಶೀಲಾ, ಗೋಪಿ, ಅಭಿಷೇಕ್ ಹಾಗು ರಮ್ಯಾ ರಕ್ಷಣೆ ಮಾಡಿದ್ದಾರೆ. ಸಣ್ಣಪುಟ್ಟ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಮೂರನೇ ಮಹಡಿಯಲ್ಲಿ ಸಿಲುಕಿದ್ದ ಮತ್ತೆ ಇಬ್ಬರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ ಅಗ್ನಿ ಅವಘಡದಲ್ಲಿ ಎರಡು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಮೀಟರ್ ಬೋರ್ಡ್ ಹತ್ತಿರ ನಿಲ್ಲಿಸಿದ್ದ 2 ಬೈಕ್ ಗಳು ಸುಟ್ಟು ಭಾಸ್ಮವಾಗಿವೆ.
ಬೆಂಗಳೂರು : ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ವಿಶೇಷ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು. ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಅವರು ಮಾಹಿತಿ ನೀಡಿದರು. ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ವಿಜಯನಗರ, ಯಾದಗಿರಿ ಸೇರಿದಂತೆ ಏಳು ಜಿಲ್ಲೆಗಳೂ ಒಳಗೊಂಡಂತೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಗದಗ : ಗದಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಇದೀಗ ಅವಾಂತರ ಸೃಷ್ಟಿಯಾಗಿದ್ದು ಹಳ್ಳದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಒಬ್ಬರು ಕೊಚ್ಚಿ ಹೋಗಿರುವ ಘಟನೆ ವರದಿಯಾಗಿದೆ ಇಬ್ಬರೂ ಪ್ರಣಾಪಾಯದಿಂದ ಪಾರಾಗಿದ್ದು ಮಹಿಳಾ ಸಿಬ್ಬಂದಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಹೌದು ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದಲ್ಲಿ ಈ ಒಂದು ಘಟನೆ ಸಂಭವಿಸಿದೆ. ಮಳೆಗೆ ಮೀಸೆನ್ ಕೇರಿ ಹಳ್ಳ ತುಂಬಿ ಹರಿಯುತ್ತಿದೆ. ಘಟನೆಯಲ್ಲಿ ಇಬ್ಬರು ಬಚಾವಾಗಿದ್ದು ಮಹಿಳಾ ಸಿಬ್ಬಂದಿ ಕೊಚ್ಚಿ ಹೋಗಿದ್ದಾರೆ. ಬೆಳವಣಿಕಿ ಯಾ-ಸ ಹಡಗಲಿ ಬಳಿ ಈ ಒಂದು ಘಟನೆ ಸಂಭವಿಸಿದೆ
ಬೆಂಗಳೂರು : ಬಿಜೆಪಿ ಸಂಸದ ಡಾ.ಕೆ ಸುಧಾಕರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ 4.8 ಕೋಟಿ ಹಣ ದೊರೆತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಂಸದ ಡಾಕ್ಟರ್ ಕೆ ಸುಧಾಕರ್ ವಿರುದ್ಧ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ನ್ಯಾ.ಎಂ.ಐ ಅರುಣ್ ಅವರಿದ್ದ ಹೈಕೋರ್ಟ್ ಪೀಠ ಈ ಕುರಿತು ಆದೇಶ ಹೊರಡಿಸಿದ್ದು, ಸಂಸತ್ ಚುನಾವಣೆಯ ವೇಳೆ ಗೋವಿಂದಪ್ಪ ಮನೆಯಲ್ಲಿ ನಾಲ್ಕು ಪಾಯಿಂಟ್ ಎಂಟು ಕೋಟಿ ಹಣ ಜತ್ತಿ ಮಾಡಲಾಗಿತ್ತು ಈ ವೇಳೆ ಐಎಎಸ್ ಅಧಿಕಾರಿ ಮುನೇಶ್ ಮೊದಿಗಿಲ್ ಗೆ ಕೆ ಸುಧಾಕರ್ ಕರೆ ಮಾಡಿದರು ಸಹಾಯ ಮಾಡುವಂತೆ ವಾಟ್ಸಾಪ್ ಮತ್ತು ಮೆಸೇಜ್ ಮಾಡಿ ಸಹಾಯ ಮಾಡುವಂತೆ ಕೇಳಿದರು ಎನ್ನುವ ಆರೋಪ ಕೇಳಿ ಬಂದಿತ್ತು ಮತದಾರರಿಗೆ ಲಂಚ ನೀಡಲು ಮುಂದಾಗಿದ್ದ ಬಗ್ಗೆ ದೂರು ದಾಖಲಾಗಿತ್ತು ಗೋವಿಂದಪ್ಪ ವಿರುದ್ಧ ಆರೋಪಟ್ಟಿ ಸಲ್ಲಿಸಿದ್ದರು ಇದೀಗ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಕಷ್ಟ ಎದುರಾಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ ಲೋಕಾಯುಕ್ತ ಪೊಲೀಸರು ನೊಟೀಸ್ ನೀಡಿದ್ದಾರೆ. ಸಚಿವ ಜಮೀರ್ ಜೊತೆಗೆ ಕಳೆದ 3-4 ವರ್ಷಗಳಿಂದ ಆರ್ಥಿಕ ವ್ಯವಹಾರ ಹೊಂದಿದ್ದ ದಿನೇಶ್ ಗುಂಡೂರಾವ್‌ಗೆ ನೋಟಿಸ್ ನೀಡಿದ್ದು, ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸಚಿವ ಜಮೀರ್ ಅಹ್ಮದ್‌ಗೆ 2.5 ಕೋಟಿ ರೂ. ನೀಡಿದ್ದ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ರಾಧಿಕಾ ಕುಮಾರಸ್ವಾಮಿ ಹಾಗೂ ಗುಜರಿ ಬಾಬು ವಿಚಾರಣೆ ನಡೆಸಲಾಗಿದೆ.
ಬೆಂಗಳೂರು : ಬೆಂಗಳೂರಲ್ಲಿ ಇದೀಗ ಮತ್ತೆ ಲಾಂಗು ಮತ್ತು ಮಚ್ಚುಗಳು ಝಳಪಿಸಿದ್ದು, ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಟೆಂಪೋ ಚಾಲಕನ ಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನ ಇಮ್ಮಡಿಹಳ್ಳಿ ರಸ್ತೆಯಲ್ಲಿ ಈ ಒಂದು ಕೃತ್ಯ ಎಸಗಲಾಗಿದೆ. ಟಿಪೋಚಾಲಕ ಅಡ್ಡಾದಿಡ್ಡಿ ಬೈಕ್ ಯಾಕೆ ಚಲಾಯಿಸುತ್ತೀಯಾ ಎಂದು ಕೇಳಿದ್ದಕ್ಕೆ ಬೈಕ್ ಸವಾರ ತನ್ನ ಗ್ಯಾಂಗ್ ನೋಂದಿಗೆ ಬಂದು ಲಾಂಗು ಮಚ್ಚುಗಳಿಂದ ಟೆಂಪೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೂಡಲೇ ಘಟನಾ ಸ್ಥಳಕ್ಕೆ ವೈಟ್ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.










