Author: kannadanewsnow05

ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯರಿಗೆ ಕರೆ ಮಾಡಲು ಪ್ರಜ್ವಲ್ ರೇವಣ್ಣ ಬಳಿ ಇದ್ದ ಸಿಮ್ ಕಾರ್ಡ್ ಗಳು ಬರೋಬ್ಬರಿ 15 ಎಂದು ಇದೀಗ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೌದು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತನ ಬಳಿ ಒಂದಲ್ಲ, ಎರಡಲ್ಲ 15 ಸಿಮ್‌ಗಳಿದ್ದವು ಎಂದು ತಿಳಿದುಬಂದಿದೆ. ಬರೋಬ್ಬರಿ 15 ಸಿಮ್ ಕಾರ್ಡ್ ಹೊಂದಿದ್ದು, ಇವುಗಳ ಮೂಲಕ ಮಹಿಳೆಯರಿಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಹಿಳೆಯರು ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್‌ನಿಂದ ಕಾಲ್ ಮಾಡಿ, ನಗ್ನ, ಅರೆನಗ್ನ ಸ್ಕ್ರೀನ್ ಶಾಟ್ ಕಳಿಸಿ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ. ಸಹಕರಿಸದಿದ್ದರೆ ಫೋಟೋ, ವಿಡಿಯೋ ವೈರಲ್ ಮಾಡೋ ಬೆದರಿಕೆ ಹಾಕುತ್ತಿದ್ದನಂತೆ. ಪ್ರಜ್ವಲ್‌ಗೆ ಬೆದರಿ ಸಂತ್ರಸ್ತೆಯರು ಬೆತ್ತಲಾಗಿದ್ದರಂತೆ. ಕೆಲಸ ಕೇಳಿಕೊಂಡು ಬಂದವರು, ಮಕ್ಕಳಿಗೆ ಸೀಟ್‌ಗಾಗಿ ಬಂದವರು, ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್ ರೇವಣ್ಣ ಟಾರ್ಗೆಟ್…

Read More

ಬೆಂಗಳೂರು : ನಟಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಜೈಲಿನಲ್ಲಿದ್ದಾರೆ. ಇದಾದ ಬಳಿಕವೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಲವು ನಟಿಯರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ಕಿರುಕುಳ ನೀಡುತ್ತಿದ್ದು ಈ ಕುರಿತಾಗಿ ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಕೂಡ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ವಿಡಿಯೋ ಒಂದರಲ್ಲಿ, ರೇಣುಕಾ ಸ್ವಾಮಿಯದ್ದು ಎನ್ನಲಾಗುತ್ತಿರುವ ಖಾತೆಯಿಂದ ನನಗೂ ಕೆಟ್ಟ ಸಂದೇಶ ಬಂದಿದೆ ಎಂದು ಸೋನು ಗೌಡ ಹೇಳಿದ್ದರು. ಇದೀಗ ಹೊಸ ವಿಡಿಯೋ ಒಂದನ್ನು ಹರಿಬಿಟ್ಟಿರುವ ನಟಿ, ತಮಗೆ ದರ್ಶನ್ ಅಭಿಮಾನಿಗಳಿಂದ ಕೆಟ್ಟ ಸಂದೇಶಗಳು, ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ಸಂದೇಶಗಳು ಬಂದಿವೆ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಸೋನು ಗೌಡ ಯೂಟ್ಯೂಬ್ ಆಗಲಿ ಫೇಸ್ಬುಕ್ ಆಗಲಿ ಇನ್ಸ್ಟಾಗ್ರಾಮ್ ನಲ್ಲಿ ಆಗಲಿ ನನಗೆ ತುಂಬಾ ಕೆಟ್ಟದಾಗಿ ಬ್ಯಾಡ್ ಕಮೆಂಟ್ಸ್ ಬರುತ್ತಿವೆ. ದರ್ಶನ್ ಅವರ…

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಈಗ ಕೇಸ್ಗೆ ಮತ್ತೊಂದು ಸಿಕ್ಕಿದ್ದು, ಕೊಲೆಯ ದಿನ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ, ಪಟ್ಟಣಗೆರೆ ಶೆಡ್ಗೆ ದರ್ಶನ್ ವಿನಯ್ ಜೊತೆಗೆ ಬಂದಿದ್ದರು. ಸಂಜೆ 4:30ಕ್ಕೆ ಬಂದು 5:20ಕ್ಕೆ ಶೆಡ್ ನಿಂದ ತೆರಳಿದ್ದಾರೆ.ಈ ಮಧ್ಯ ರೇಣುಕಾ ಸ್ವಾಮಿ ಮೇಲೆ 30 ನಿಮಿಷ ವರೆಗೂ ಹಲ್ಲೆ ಮಾಡಿದ್ದಾರೆ ಎಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೌದು ದರ್ಶನ್ ಸಿನಿಮಾ ಮಾದರಿಯಲ್ಲಿ ರೇಣುಕಾ ಸ್ವಾಮಿ ಮೇಲೆ ಕ್ರೌರ್ಯ ಮೆರೆದಿದ್ದಾರೆ. ವಾಹನಗಳ ಮೇಲೆ ರೇಣುಕಾ ಸ್ವಾಮಿಯನ್ನು ಬಿಸಾಡಿದ್ದ ದರ್ಶನ. ಬೂಟ್ ಕಾಲಿನಲ್ಲಿ ಒದ್ದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಪವಿತ್ರಾಗೆ ಕಳುಹಿಸಿದ್ದ ಮೆಸೇಜನ್ನು ದರ್ಶನ್ ಸಹಚರರು ಓಪನ್ ಮಾಡಿದ್ದರು.ರೇಣುಕಾ ಸ್ವಾಮಿ ಕಳಿಸಿದ್ದ ಮೆಸೇಜ್ ಓದಲು ದರ್ಶನ್ ಪವನ್ ಗೆ ಹೇಳಿದ್ದಾರೆ. ಜೋರು ಧ್ವನಿಯಲ್ಲಿ ಪವನ್ ಮೆಸೇಜ್ ಓದುತ್ತಿದ್ದ. ಈ ವೇಳೆ ಮೆಸೇಜ್ ಓದುತ್ತಿದ್ದ ಟೋನಲ್ಲೇ ದರ್ಶನ್ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುತ್ತಿದ್ದರು. ಮೊದಲು ಎರಡೇಟು…

Read More

ಹಾವೇರಿ : ಹಾವೇರಿ ದುರಂತ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ 17 ಮಂದಿ ಪೈಕಿ 13 ಮಂದಿ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸ ವಾಹನ ಖರೀದಿಸಿ ಪೂಜೆ ಮಾಡಿ ಮರಳುವಾಗ ಈ ಘಟನೆ ನಡೆದಿದೆ. ವಾಹನ ಟಿಟಿ ಖರೀದಿಸಿ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿ ಮರಳುವಾಗ ಈ ಅಪಘಾತ ಸಂಭವಿಸಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನವರಾಗಿದ್ದಾರೆ. ಮೃತರ ಪೈಕಿ ಆದರ್ಶ್ ಎಂಬವರು ಒಂದೂವರೆ ತಿಂಗಳ ಹಿಂದೆ ಹೊಸ ಟಿಟಿ ವಾಹನ ಖರೀದಿಸಿದ್ದರು. ಅದರಲ್ಲಿ ಕುಟುಂಬದವರನ್ನು, ಸ್ನೇಹಿತರನ್ನು ಕರೆದುಕೊಂಡು ಮನೆ ದೇವರಿಗೆ ಪೂಜೆ ಸಲ್ಲಿಸಲೆಂದು ಪ್ರವಾಸ ಹೊರಟಿದ್ದರು. ಆ ಬಗ್ಗೆ ಆದರ್ಶ್ ಸ್ನೇಹಿತ ಮಾತನಾಡಿದ್ದಾರೆ. ಆದರ್ಶ್ ಅವರ ಗೆಳೆಯ ಸಾಗರ್ ಎನ್ನುವವರು ಮಾತನಾಡಿದ್ದು, ಚಾಲಕ ಆದರ್ಶ್ ಹೊಸ ಟಿಟಿ ವಾಹನ ಖರೀದಿಸಿ ಕುಟುಂಬ ಸಮೇತ ದೇವರ ದರ್ಶನ ಹಾಗೂ ವಾಹನ ಪೂಜೆ ಮಾಡಿಸಲು ತೆರಳಿದ್ದರು. ನಿನ್ನೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ಟೆಂಪಲ್ ನಲ್ಲಿ ವಾಹನ…

Read More

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 52 ಲಕ್ಷ ಮೌಲ್ಯದ 731 ಗ್ರಾಮ ಚಿನ್ನವನ್ನು ಜಪ್ತಿ ಮಾಡಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬ್ಯಾಂಕಾಕ್, ದಮ್ಮಮ್ ಹಾಗೂ ದುಬೈನಿಂದ ಮೂವರು ಚಿನ್ನ ತಂದಿದ್ದರು. ಬಿಸ್ಕೆಟ್ ಮತ್ತು ಆಭರಣಗಳ ಮಾದರಿಯಲ್ಲಿ ತಂದಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಚಿನ್ನದ ಸಮೇತ ಮೂವರನ್ನು ವಶಕ್ಕೆ ಪಡೆದು ಅಧಿಕಾರಿಗಳು ಇದೀಗ ವಿಚಾರಣೆ ನಡೆಸುತ್ತಿದ್ದಾರೆ. ಕೆಎಬಿ ಕಸ್ಟಮ್ಸ್ ಅಧಿಕಾರಿಗಳಿಂದ ಮೂರು ಪ್ರಯಾಣಿಕರ ವಿಚಾರಣೆ ನಡೆಯುತ್ತಿದೆ.

Read More

ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದು, ನಿನ್ನೆ ರಾಜ್ಯದ ನೂತನ ಸಂಸದರ ಜೊತೆಗೆ ಸಭೆ ನಡೆಸಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ನಾಳೆ 3ನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಅವರು ಸೇರಿದಂತೆ ಹಲವು ನಾಯಕರನ್ನು ಸಿದ್ದರಾಮಯ್ಯ ಭೇಟಿಯಾಗಲಿದ್ದಾರೆ. ಪ್ರಧಾನಿಗಳು ಶನಿವಾರ ಭೇಟಿ ಮಾಡಲು ಸಮಯ ಕೊಟ್ಟಿದ್ದಾರೆ. ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಹ ಭೇಟಿಗೆ ಸಮಯ ನೀಡಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್‌ ಅವರನ್ನು ಭೇಟಿ ಮಾಡಲಾಗುವುದು. ಗೃಹ ಸಚಿವ ಅಮಿತ್ ಶಾ ಅವರ ಸಮಯಾವಕಾಶವನ್ನು ಕೇಳಿದ್ದು, ಇನ್ನೂ ಸಮಯ ಕೊಟ್ಟಿಲ್ಲ. ಶೀಘ್ರದಲ್ಲಿಯೇ ಸಮಯ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚಿಸುವ ಸಂಬಂಧ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿಯಾಗಿದ್ದು, ಕೇಂದ್ರದ ವಿವಿಧ ಇಲಾಖೆಗಳ ಸಚಿವರನ್ನು ಸಹ ಭೇಟಿ ಮಾಡಲಾಗುವುದು ಎಂದು…

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ನೋಡಲು ಇದೀಗ ಜೈಲಿನ ಬಳಿ ರಾಜ್ಯದ ಅನೇಕ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರನ್ನು ಭೇಟಿಯಾಗಲು ಆಗಮಿಸುತ್ತಿದ್ದಾರೆ. ಈ ವಿಷಯ ತಿಳಿದು ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದು, ನನ್ನ ಭೇಟಿ ಮಾಡಲು ಯಾರು ಜೈಲಿನ ಬಳಿಗೆ ಬರಬೇಡಿ ಎಂದು ಸಂದೇಶ ರವಾನಿಸಿದ್ದಾರೆ. ಹೌದು ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಇತ್ತ ಅವರ ಅಭಿಮಾನಿಗಳು ಅನೇಕ ಸಂಖ್ಯೆಯಲ್ಲಿ ಅವರನ್ನು ಭೇಟಿ ಆಗಿಲು ಪರಪ್ಪನ ಅಗ್ರಹಾರ ಜೈಲು ಬಳಿ ಜಮಾಯಿಸಿದ್ದಾರೆ. ಈ ವಿಷಯ ತಿಳಿದು ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ದರ್ಶನ್ ಸಂದೇಶ ರವಾನಿಸಿದ್ದು, ಪರಪ್ಪನ ಅಗ್ರಹಾರ ಜೈಲಿನ ಬಳಿ ಅಭಿಮಾನಿಗಳು ಯಾರು ಕೂಡ ಬರಬೇಡಿ.ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಬೇಟಿ ಅಸಾಧ್ಯ ಎಂದು ಮನವಿ ಮಾಡಿದ್ದಾರೆ. ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು. ನನ್ನ ಭೇಟಿಗೆ ಅವಕಾಶ ಸಿಗದೇ ನಿರಾಸೆಯಿಂದ…

Read More

ಮಂಡ್ಯ : ಕಾವೇರಿಯ ಜಲಾನಯ ಪ್ರದೇಶದಲ್ಲಿ ವರುಣ ಅಬ್ಬರಿಸುತ್ತಿದ್ದು, ಇದೀಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್‌ಎಸ್ ಡ್ಯಾಂ‌ ನಲ್ಲಿ ಒಳಹರಿವು ನೀರು ಹೆಚ್ಚಳವಾಗಿದೆ. ಹೌದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ಕಳೆದ ಮೂರು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಳೆ ಮಳೆಯ ಅಬ್ಬರದಿಂದ ಕೆಆರ್‌ಎಸ್‌ಗೆ ಅಧಿಕವಾಗಿ ಒಳಹರಿವು ಹರಿದು ಬಂದಿದೆ. ಇಂದು ಕೆಆರ್‌ಎಸ್‌ಗೆ 13,437 ಕ್ಯೂಸೆಕ್ ಒಳಹರಿವು ಈ ವರ್ಷದಲ್ಲಿ ಸದ್ಯ ಇದೇ ಅಧಿಕ ಪ್ರಮಾಣದ ಒಳಹರಿವು ಎಂದು ಹೇಳಲಾಗುತ್ತಿದ್ದು, ನಿನ್ನೆ 3,856 ಕ್ಯೂಸೆಕ್‌ ಒಳಹರಿವು ಇತ್ತು. 24 ಗಂಟೆಯ ಅವಧಿಯಲ್ಲಿ 10 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಅಲ್ಲದೇ ಒಂದೇ ದಿನದಲ್ಲಿ 1 ಟಿಎಂಸಿಗೂ ಅಧಿಕ ನೀರು ಡ್ಯಾಂಗೆ ಹರಿದು ಬಂದಿದೆ. 49.452 ಟಿಎಂಸಿ ಗರಿಷ್ಠ ಸಾಮಾರ್ಥ್ಯದ ಕೆಆರ್‌ಎಸ್‌ನಲ್ಲಿ 16.118 ಟಿಎಂಸಿ ನೀರು ಸಂಗ್ರಹವಾಗಿದ್ದು,ನಿನ್ನೆ 15.007 ಟಿಎಂಸಿ ನೀರು ಇತ್ತು. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 90.30 ಅಡಿ ನೀರು ಇದೆ.…

Read More

ಕೊಡಗು : ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಇದೀಗ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು ಮಡಿಕೇರಿ ತಾಲೂಕಿನ ದೋಣಿ ಕಡೂರು ಗ್ರಾಮ ಸಂಪೂರ್ಣವಾಗಿ ಜಲಪ್ರತವಾಗಿದೆ. ಅಲ್ಲದೆ 60 ಕುಟುಂಬಗಳು ಜಲ ದಿಗ್ಬಂಧನಕ್ಕೆ ಒಳಗಾಗಿವೆ. ಹೌದು ಮಡಿಕೇರಿಯಲ್ಲಿ ಬೇಂಗೂರು ಪರಂಬು ಪೈಸಾರಿ ಸಂಪರ್ಕ ಕಡಿತವಾಗಿದ್ದು, ಸುಮಾರು 60ಕ್ಕೂ ಅಧಿಕ ಕುಟುಂಬಗಳಿಗೆ ಜಲ ದಿಗ್ಬಂಧನವಾಗಿದೆ. ಪ್ರವಾಹ ದಾಟಲು ಮೋಟಾರ್ ಬೋಟ್ ವ್ಯವಸ್ಥೆ ಮಾಡಲಾಗಿದೆ. ಜನರ ಸಂಕಷ್ಟಕ್ಕೆ ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಿದ್ದು ಫೈಬರ್ ಬೋಟ್ ರವಾನೆ ಮಾಡಿದ್ದು ಜಲಾವೃತವಾಗಿರುವ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

Read More

ಬೆಂಗಳೂರು : ನಂದಿನಿ ಹಾಲಿನ ದರ ಹೆಚ್ಚಳವಾದ ಬೆನ್ನೆಲೆ ಕಾಫಿ ಟೀ ಬೆಲೆ ಏರಿಕೆ ಮಾಡಲು ಮುಂದಾಗಿದ್ದ ಹೋಟೆಲ್ ಮಾಳಿಕರು ನಂತರ ಸಿದ್ದರಾಮಯ್ಯ ಅವರ ಖಡಕ್ ಸೂಚನೆಗೆ ದರ ಹೆಚ್ಚಳ ಮಾಡಲಿಲ್ಲ. ಆದರೆ ನಂದಿನಿ ಹಾಲಿನ ದರ ಹೆಚ್ಚಳ ಪರಿಣಾಮದಿಂದ ಇದೀಗ ಮಿಲ್ಕ್ ಶೇಕ್ ಐಸ್ ಕ್ರೀಮ್ ಹಾಗೂ ಧಾರವಾಡ ಪೇಡ ದರದಲ್ಲಿ ದರ ಏರಿಕೆಯಾಗಿದೆ. ಹೌದು ರಾಜ್ಯದಲ್ಲಿ ನಂದಿನಿ ಹಾಲಿನ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್​​ಗಳಲ್ಲಿ 50 ಎಂಎಲ್​​​ ಹೆಚ್ಚುವರಿ ಹಾಲು ಸೇರಿಸಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಹಾಲಿನಿಂದ ಮಾಡುವ ಉತ್ಪನ್ನಗಳಾದ ಸಿಹಿ ತಿಂಡಿಗಳು, ಐಸ್ ಕ್ರೀಂ ಹಾಗೂ ಮಿಲ್ಕ್ ಶೇಕ್ ದರ ಹೆಚ್ಚಳ‌ ಮಾಡಲು ಮಾಲೀಕರು ‌ಮುಂದಾಗಿದ್ದಾರೆ. ಪ್ರತಿ ಲೀಟರ್ ಐಸ್ ಕ್ರೀಂ ಬಾಕ್ಸ್ ಮೇಲೆ 10 ರಿಂದ 15 ರೂಪಾಯಿ ಹೆಚ್ಚಳವಾದರೆ, ಎಲ್ಲಾ ತರಹದ ಮಿಲ್ಕ್ ಶೇಕ್ ಗಳ ಮೇಲೆ 5 ರಿಂದ 10 ರೂಪಾಯಿ ಹೆಚ್ಚಳವಾಗಲಿದೆ. ಸಾಮಾನ್ಯವಾಗಿ ಹೋಟೆಲ್ಗಳಲ್ಲಿ ಯಾವುದೇ…

Read More