Subscribe to Updates
Get the latest creative news from FooBar about art, design and business.
Author: kannadanewsnow05
ಅಮಾವಾಸ್ಯೆಯಂದು ಮಾಡಬೇಕಾದ ಬಿಳಿ (ಕೂಷ್ಮಾಂಡ) ಕುಂಬಳಕಾಯಿ ಪರಿಹಾರ ಇಂದು, ೨೯-೦೩-೨೦೨೫, ಬಹಳ ಶಕ್ತಿಶಾಲಿ ಅಮಾವಾಸ್ಯೆ. ಈ ಅಮಾವಾಸ್ಯೆಯ ದಿನ ಶನಿವಾರ ಬಂದಿದೆ, ಅಷ್ಟೇ ಅಲ್ಲ, ಈ ದಿನದಂದು ಉತ್ತರಾಧಿ ನಕ್ಷತ್ರವೂ ಇದೆ, ಮತ್ತು ಈ ಉತ್ತರಾಧಿ ನಕ್ಷತ್ರವು ಶನಿಯ ನಕ್ಷತ್ರಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ, ಈ ಅಮಾವಾಸ್ಯೆಯಂದು ಸೂರ್ಯಗ್ರಹಣವೂ ಸಂಭವಿಸಲಿದೆ. ಶನಿಯ ಸಂಚಾರವೂ ಶೀಘ್ರದಲ್ಲೇ ನಡೆಯಲಿದೆ. ಈ ದಿನದಂದು ನಾವು ಮಾಡಬಹುದಾದ ಪರಿಹಾರವು ಹಲವು ವರ್ಷಗಳ ಸಮಸ್ಯೆಗಳನ್ನು ಪರಿಹರಿಸುತ್ತದೆ. ಅಮಾವಾಸ್ಯೆ ಪರಿಹಾರ ಇಂದು ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಬೇಕು. ಬೆಚ್ಚಗಿನ ನೀರಿಗೆ ಒಂದು ಹಿಡಿ ಕಲ್ಲುಪ್ಪು ಮತ್ತು ಒಂದು ಚಿಟಿಕೆ ವಿಭೂತಿ ಸೇರಿಸಿ ಮತ್ತು ಕುಲ ದೇವತೆಯ ಹೆಸರನ್ನು ಜಪಿಸಿ ಸ್ನಾನ ಮಾಡಿ. ನಿಮಗೆ ಪೋಷಕರು ಇಲ್ಲದಿದ್ದರೆ, ತಿಡಿ ತರ್ಪಣಂನ ಎಲ್ಲಾ ಆಚರಣೆಗಳನ್ನು ಸರಿಯಾಗಿ ಮಾಡಿ. ಅಮವಾಸ್ಯೆಯ ಪೂಜೆಯನ್ನು ತಪ್ಪಿಸಿಕೊಳ್ಳಬಾರದು. ಇದು ಮೊದಲನೆಯದು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ…
ಬೆಂಗಳೂರು : ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ರಾಜಕಾರಣಿಗಳ ಹನಿಟ್ರ್ಯಾಪ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಈ ಒಂದು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು. ಇನ್ನು ಇದೇ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರು, ತನಿಖೆ ಮಾಡುವ ಸಂದರ್ಭದಲ್ಲಿ ಏನು ಹೇಳಕ್ಕಾಗಲ್ಲ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದರ ಬಗ್ಗೆ ಇಲಾಖೆಯವರೇ ತನಿಖೆ ಮಾಡುತ್ತಾರೆ. ಡಿಜಿ ಕಳುಹಿಸಿದ ಮೇಲೆ ಡಿಪಾರ್ಟ್ಮೆಂಟ್ ಆದೇಶ ಮಾಡುತ್ತದೆ ಅದಕ್ಕೆ ಸರ್ಕಾರದ ಆದೇಶ ಬರಲ್ಲ.ಸಿಐಡಿ ಅವರು ತನಿಖೆ ಮಾಡುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಸಿಕ್ಕಿರುವ ಮಾಹಿತಿ ಇಲ್ಲ. ತನಿಖೆ ಮಾಡುತ್ತಿದ್ದಾರೆ. ತನಿಖೆ ಮಾಡುವಾಗ ಏನು ಹೇಳಲು ಆಗಲ್ಲ. ತನಿಖೆ ಪೂರ್ಣ ಆದ್ಮೇಲೆ ಎಲ್ಲವನ್ನು ವಿವರವಾಗಿ ಹೇಳುತ್ತಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು. ಸಂಪುಟ ಪುನಾರಚನೆ ಸಂಬಂಧ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗುವ ವಿಚಾರವಾಗಿ ನನಗೆ ಇದರ ಬಗ್ಗೆ ಗೊತ್ತಿಲ್ಲ ನಾನು ಎಲ್ಲಿಯೂ ಹೋಗುವುದಿಲ್ಲ.…
ತುಮಕೂರು : ಸಹಕಾರ ಸಚಿವ ಕೇಂದ್ರ ಅವರ ಪುತ್ರ ಹಾಗೂ ಕಾಂಗ್ರೆಸ್ ಎಂಎಲ್ಸಿ ಆಗಿರುವಂತಹ ರಾಜೇಂದ್ರ ರಾಜಣ್ಣ ಅವರ ಹತ್ಯೆಗೆ ಯತ್ನಿಸಲಾಗಿತ್ತು ಎಂದು ನಿನ್ನೆ ರಾಜೇಂದ್ರ ಅವರು ತುಮಕೂರಿನ ಎಸ್ಪಿ ಕಚರಿಗೆ ಭೇಟಿ ನೀಡಿ ದೂರು ನೀಡಿದ್ದರು. ಒಂದು ದೂರು ಹಿನ್ನೆಲೆಯಲ್ಲಿ ಇದೀಗ ಐವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಅಲ್ಲದೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಕೂಡ ಆಗಿದೆ. ಹೌದು ಎಂಎಲ್ಸಿ ರಾಜೇಂದ್ರ ಹತ್ಯೆಗೆ ಯತ್ನಿಸಿ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಧುಗಿರಿ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆಯನ್ನು ಡಿವೈಎಸ್ಪಿ ತಂಡ ನಡೆಸಲಿದೆ. ತನಿಖಾ ತಂಡದಲ್ಲಿ ಶೀರಾ ಗ್ರಾಮಾಂತರ ಸಿಪಿಐ ರಾಘವೇಂದ್ರ, ಕ್ಯಾತ್ಸಂದ್ರ ಠಾಣೆ ಪಿಎಸ್ಐ ಚೇತನ್ ಕೂಡ ಇದ್ದಾರೆ. ಸದ್ಯ ರಾಜೇಂದ್ರ ದೂರಿನ ಮೇಲೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. A1 ಸೋಮ, A2 ಭರತ್, A3 ಅಮಿತ್ A4 ಗುಂಡಾ ಮತ್ತು A5 ಯತೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.…
ಚಿತ್ರದುರ್ಗ : ಇಂದು ಚಿತ್ರದುರ್ಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಟಿಟಿ ವಾಹನ ಒಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದು ಇವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಟಿಟಿ ವಾಹನ ಪಲ್ಟಿಯಾಗಿ ಮೂವರು ಸಾವನಪ್ಪಿದ್ದಾರೆ. ಶಂಕರಿಬಾಯಿ (65) ಕುಮಾರ್ ನಾಯಕ್ (46) ಮತ್ತು ಶ್ವೇತ (38) ಸಾವನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಐವರಿಗೆ ಗಂಭೀರವಾದ ಗಾಯಗಳಾಗಿದ್ದು ಕೂಡಲೇ ಅವರನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಆಗಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಉಚ್ಚಾಟನೆ ಆದ ಬಳಿಕವೂ ವಾಗ್ದಾಳಿ ಮುಂದುವರಿಸಿದ್ದಾರೆ. ನಾಳೆಯಿಂದ ರಾಜ್ಯದಲ್ಲಿ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹಾಗು ಹೊಂದಾಣಿಕೆ ರಾಜಕಾರಣ ವಿರುದ್ಧ ಮತ್ತೆ ಹೋರಾಟ ಆರಂಭ ಮಾಡುತ್ತೇನೆ ಇಂದಿನಿಂದ ಯಡಿಯೂರಪ್ಪನವರ ಕುಟುಂಬದ ಅಂತ್ಯ ಆರಂಭವಾದಂತೆ ಎಂದು ಮತ್ತೆ ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಗೆ ಉಚ್ಚಾಟನೆ ವಾಪಸ್ ಪಡೆಯುವಂತೆ ನಾನು ಮನವಿ ಮಾಡಲ್ಲ. ನಾಳೆಯಿಂದ ಹೊಸದಾಗಿ ಹೋರಾಟವನ್ನು ಆರಂಭ ಮಾಡುತ್ತೇನೆ. ನಾನು ಯಾವುದೇ ರೀತಿಯಾದ ಹೊಸ ಪಕ್ಷ ಕಟ್ಟುವುದಿಲ್ಲ. ನಮ್ಮ ತಂಡದವರು ಹೈಕಮಾಂಡ್ಗೆ ಉಚ್ಚಾಟನೆ ಬಗ್ಗೆ ಮನವಿ ಮಾಡುತ್ತಾರೆ. ನಾನು ಬಿಜೆಪಿಗೆ ವಾಪಸ್ ಬಂದೆ ಬರುತ್ತೇನೆ ನನ್ನನ್ನು ಗೌರವಯುತವಾಗಿ ವಾಪಸ್ ಕರೆಸಿಕೊಳ್ಳುತ್ತಾರೆ. ಸನಾತನ ಹಿಂದು ಧರ್ಮದ ಬಿಜೆಪಿ ಕಟ್ಟುವುದೇ ನನ್ನ ಗುರಿಯಾಗಿದೆ ನಾಳೆಯಿಂದ ಎಲ್ಲವೂ ಒಳ್ಳೆಯದಾಗುತ್ತದೆ…
ಮ್ಯಾನ್ಮಾರ್ : ಮ್ಯಾನ್ಮಾರ್, ಬ್ಯಾಂಕಾಕ್ ನಲ್ಲಿ ನಿನ್ನೆ ಪ್ರಬಲವಾದ ಭೂಕಂಪ ಸಂಭವಿಸಿದ್ದು, ಇದುವರೆಗೂ 694 ಜನ ಸಾವನಪ್ಪಿದ್ದು, 1670ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ ಅಲ್ಲದೆ 70ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದು ವರದಿಯಾಗಿದೆ. ಇನ್ನು ಬ್ಯಾಂಕಾಕ್ ಗೆ ಪ್ರವಾಸಕ್ಕೆ ಎಂದು ತೆರಳಿದ ಹಾವೇರಿ ಜಿಲ್ಲೆಯ ಐವರು ಹಾಗೂ ಕೆಲಸಕ್ಕೆ ಎಂದು ಅಲ್ಲೇ ಇರುವ ಹುಬ್ಬಳ್ಳಿಯ 42 ಜನರು ಸೇರಿದಂತೆ ಒಟ್ಟು ರಾಜ್ಯದ 47 ಜನರು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಹಾವೇರಿಯಿಂದ ಪ್ರವಾಸಕ್ಕೆ ತೆರಳಿದ್ದವರು ಸಫಾರಿ ವರ್ಲ್ಡ್ ನಲ್ಲಿ ಇರುವಾಗಲೇ ಭೂಕಂಪ ಆಗಿತ್ತು ಆದರೆ ನಮಗೆ ಯಾವುದೇ ರೀತಿಯಾದಂತಹ ಅಪಾಯವಾಗಿಲ್ಲ ಎಂದು ಅವರ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು : ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ನಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಹೌದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಜತ್ ವಿನಯ್ ಗೌಡ ರಿಲೀಸ್ ಆಗಿದ್ದು, ನಿನ್ನೆ ನ್ಯಾಯಾಲಯ ಇಬ್ಬರಿಗೂ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ನಿನ್ನೆ ಜಾಮೀನು ಪ್ರತಿ ತಡವಾಗಿ ಜೈಲು ಅಧಿಕಾರಿಗಳ ಕೈ ಸೇರಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ರಜತ್ ಮತ್ತು ವಿನಯ ಗೌಡ ಬಿಡುಗಡೆ ಆಗಿದ್ದಾರೆ.
ಬೆಂಗಳೂರು : ಬಗರ್‌ಹುಕುಂ ಅರ್ಜಿಗಳ ವಿಲೇವಾರಿ ಬಡವರ ಕೆಲಸ. ಸಾವಿರಾರು ಬಡವರು ಅರ್ಜಿ ಹಾಕಿ ಕಾದು ಕುಳಿತಿದ್ದಾರೆ. ಕೆಲ ತಹಸೀಲ್ದಾರರು ಅಸಡ್ಡೆ ತೋರುತ್ತಿದ್ದು, ಶೀಘ್ರ ಎಚ್ಚೆತ್ತುಕೊಂಡು ಮುಂದಿನ 6 ತಿಂಗಳ ಒಳಗಾಗಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಾಕೀತು ಮಾಡಿದ್ದಾರೆ. ಶುಕ್ರವಾರ ವಿಕಾಸ ಸೌಧದಿಂದ ವಿಡಿಯೋ ಕಾನ್ಸರೆನ್ಸ್ ಮೂಲಕ ರಾಜ್ಯದ ಎಲ್ಲಾ ತಹಸೀಲ್ದಾರರ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು,ಬಗರ್‌ಹುಕುಂ ಕೆಲಸಗಳಿಗೆ ಚುರುಕು ಮುಟ್ಟಿಸಬೇಕು ಎಂದು ಎರಡು ವರ್ಷದಿಂದಜಿಲ್ಲಾ ಪ್ರವಾಸ ಮಾಡಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ. ಆದರೆ ಕೆಲ ಅಧಿಕಾರಿಗಳು ಬಡವರ ಕೆಲಸಕ್ಕೆ ಅಸಡ್ಡೆ ತೋರುತ್ತಿದ್ದಾರೆ ಎಂದರು. ರಾಜ್ಯದ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಬಗರ್ ಹುಕುಂ ಸಮಿತಿ ರಚಿಸಲಾಗಿದ್ದು, ಗ್ರಾಮ ಆಡಳಿತ ಅಧಿಕಾರಿಯಿಂದ ತಹಸೀಲ್ದಾರರ ಎದುರು ಬಂದಿದೆ ಎಂದರೆ ಆ ಅರ್ಜಿ ಬಹುತೇಕ ಅರ್ಹ ಅರ್ಜಿಯೇ ಆಗಿರುತ್ತದೆ. ಹೀಗಾಗಿ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆನಡೆಸಿ ಅರ್ಹರಿಗೆ ಜಮೀನು…
ಬೆಂಗಳೂರು : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿ ಇತ್ತೀಚಿಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಆದೇಶ ಹೊರಡಿಸಿತ್ತು. ಈಗ ಈ ಒಂದು ಉಚ್ಚಾಟನೆ ಆದೇಶ ಹಿಂಪಡೆಯುವ ಸಲುವಾಗಿ ನಿನ್ನೆ ಬೆಂಗಳೂರಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಮ್ ಮಹತ್ವದ ಸಭೆ ನಡೆಸಿತ್ತು. ಹೌದು ಉಚ್ಚಾಟನೆ ಆದೇಶ ವಾಪಸ್ ಪಡೆಯುವಂತೆ ಹೈಕಮಾಂಡ್ ಬಳಿ ರೆಬೆಲ್ ನಾಯಕರ ಮನವಿ ಮಾಡಲು ನಿರ್ಧಾರ ಕೈಗೊಂಡಿದ್ದು, ಮೂರು ರೀತಿಯ ಚಿಂತನೆ ನಡೆಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಹಿಂಪಡೆಯಲು ಮೊದಲನೆಯದಾಗಿ ಬಸನಗೌಡ ಯತ್ನಾಳ್ ಅವರಿಂದಲೇ ಮನವಿ ಪತ್ರ ಬರೆಸುವುದು, ಎರಡನೆಯದಾಗಿ ನಿಯೋಗದಲ್ಲಿ ತೆರಳಿ ವರಿಷ್ಠರನ್ನು ಭೇಟಿ ಮಾಡುವುದು ಮತ್ತು ಮೂರನೇಯದಾಗಿ ಹೈಕಮಾಂಡ್ಗೆ ಸಮೀಪ ಇರುವ ನಾಯಕರಿಂದ ಒತ್ತಡ ಹಾಕಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆದೇಶ ವಾಪಸ್ ಪಡೆಯುವ ಸಂಬಂಧ ವರಿಷ್ಠರು ಚರ್ಚೆಗೆ ಮನಸ್ಸು ಮಾಡಿದರೆ ಅದಕ್ಕೂ ರೆಡಿ ಎಂಬ ಸಂದೇಶವನ್ನು ಯತ್ನಾಳ್ ಟೀಮ್…
ಮ್ಯಾನ್ಮಾರ್ : ಬ್ಯಾಂಕಾಕ್ : ನಿನ್ನೆ ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಕಟ್ಟಡಗಳು, ಸೇತುವೆ ಮತ್ತು ಅಣೆಕಟ್ಟನ್ನು ನಾಶಪಡಿಸಿತು. ನಿನ್ನೆ ಮ್ಯಾನ್ಮಾರ್‌ನಲ್ಲಿ ಕನಿಷ್ಠ 144 ಜನರು ಸಾವನ್ನಪ್ಪಿದ್ದು ಇದೀಗ ಸಾವಿನ ಸಂಖ್ಯೆ 694ಕ್ಕೆ ಏರಿಕೆಯಾಗಿದೆ. ಅಲ್ಲಿ ಎರಡು ತೀವ್ರ ಹಾನಿಗೊಳಗಾದ ನಗರಗಳ ಫೋಟೋಗಳು ಮತ್ತು ವೀಡಿಯೊಗಳು ವ್ಯಾಪಕ ಹಾನಿಯನ್ನು ತೋರಿಸಿದವು. ಹೌದು ಭೂಕಂಪ ದಲ್ಲಿ ಮೃತಪಟ್ಟಿರುವವರ ಸಂಖ್ಯೆ 694ಕ್ಕೆ ಏರಿಕೆಯಾಗಿದ್ದು, ದುರಂತದಲ್ಲಿ 1,670 ಜನರಿಗೆ ಗಾಯಗಳಾಗಿವೆ. 70ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಮ್ಯಾನ್ಮಾರ್ ಮತ್ತು ಬ್ಯಾಂಕಾಕ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 1000 ದಾಟುವ ಸಾಧ್ಯತೆ ಇದೆ. ನಿನ್ನೆ ಮಯನ್ಮಾರ್ ಮತ್ತು ಥೈಲ್ಯಾಂಡ್ ನಲ್ಲಿ ಪ್ರಬಲವಾಗಿ ಭೂಕಂಪ ಸಂಭವಿಸಿತ್ತು.ರಿಟರ್ನ್ ಮಾಪ್ ಪಕ್ಕದಲ್ಲಿ ಕಂಪನದ ತೀವ್ರತೆ 7.7 ರಷ್ಟು ದಾಖಲಾಗಿತ್ತು. ಆದರೆ ತಡರಾತ್ರಿ ಮ್ಯಾನ್ಮಾರ್ ನಲ್ಲಿ ಮತ್ತೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭೂ ಕಂಪನದ 4.2ರಷ್ಟು ತೀವ್ರತೆ ದಾಖಲಾಗಿದೆ. ನೀನೆ 7.7 ರಷ್ಟು…














