Author: kannadanewsnow05

1. ಪ್ರೀತಿ ಮತ್ತು ಸಂತೋಷ ದಿಂದಿರಬೇಕು. 2. ಮನಸ್ಸಿಗೆ ನೋವಾಗುವಂತೆ ಎಂದಿಗೂ ಮಾತನಾಡಬಾರದು. 3. ಕೋಪ ಮಾಡಿಕೊಳ್ಳ ಬಾರದು. 4. ಊಟದಲ್ಲಿ ಕೊರತೆಯನ್ನು ಹೇಳ ಬಾರದು. 5. ಅನ್ಯರ ಮುಂದೆ ಬಯ್ಯಬಾರದು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 6. ಯಾವ ಜಾಗದಲ್ಲಿಯೂ ಬಿಟ್ಟು ಕೊಡಬಾರದು 7. ಮುಖ್ಯವಾದ ಸಮಾರಂಭಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. 8. ಕುಟುಂಬದ ಮುಖ್ಯವಾದ ವಿಷಯಗಳನ್ನು ಹೆಂಡತಿಯ ಜೊತೆಗೂಡಿ ಆಲೋಚಿಸಬೇಕು. 9. ಹೇಳುವುದನ್ನು ಸಮಾದಾನವಾಗಿ ಕೇಳಬೇಕು. 10. ಹೆಂಡತಿಯ ಮಾತನ್ನು ಅನುಸರಿಸಬೇಕು ಆದರಿಸಬೇಕು. 11. ಹಣವು ಮಾತ್ರ ದ್ಯೇಯವಲ್ಲ ಮಕ್ಕಳು ಮತ್ತು ಕುಟುಂಬಕ್ಕೆ ಮುಖ್ಯ ಒತ್ತನ್ನು ನೀಡಬೇಕು. 12. ವಾರಕ್ಕೆ ಒಂದು ಸಲವಾದರು ಮನಸ್ಸು ಬಿಚ್ಚಿ ಮಾತನಾಡಬೇಕು. 13. ವಷ೯ಕ್ಕೆ ಒಂದು ಸಲವಾದರು ಪ್ರವಾಸಕ್ಕೆ ಕರೆದು ಕೊಂಡು ಹೋಗಬೇಕು. 14. ಮಕ್ಕಳ ಶಿಕ್ಷಣದ ಬಗ್ಗೆ ಅಕ್ಕರೆ ತೋರಿಸಬೇಕು 15. ಮುಚ್ಚು ಮರೆ ಇರಕೂಡದು. ಪ್ರಧಾನ ಗುರುಗಳು…

Read More

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಲ್ಲಿರುವ ನಟ ದರ್ಶನ್ & ಗ್ಯಾಂಗ್ ಗೆ ಮತ್ತೊಂದು ಹೊಸ ಸಂಕಷ್ಟ ಶುರುವಾಗಿದೆ. ದರ್ಶನ ಮತ್ತು ಗ್ಯಾಂಗ್ ವಿರುದ್ಧ ಇಂದು ದೋಷರೋಪ ಸಲ್ಲಿಸಲಾಗುತ್ತಿದೆ. ಕೊಲೆ ಪ್ರಕರಣದಲ್ಲಿ ಕೋರ್ಟ್ ದೋಷಾರೋಪ ಹೊರಿಸಲಿದೆ. ದೋಷಾರೋಪದ ಬಳಿಕ ಸಾಕ್ಷಿ ವಿಚಾರಣೆಗೆ ಕೋರ್ಟ್ ದಿನಾಂಕ ನಿಗದಿ ಮಾಡಲಿದೆ. ಹಾಗಾಗಿ ದರ್ಶನ್ ಮತ್ತು ಆರೋಪಿಗಳು ಕೋರ್ಟಿಗೆ ಹಾಜರಾಗಬೇಕಿದ್ದು, ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಇಂದು ದೋಷಾರೋಪ ಹೊರಸಲಿದೆ. ಎಲ್ಲಾ ಆರೋಪಿಗಳ ಹಾಜರಾತಿ ಬಳಿಕ ಚಾರ್ಜಸ್ ಫ್ರೇಮ್ ಪ್ರಕ್ರಿಯೆ ಶುರುವಾಗಲಿದೆ. ಎ೧ ಆರೋಪಿ ಪವಿತ್ರಾಗೌಡ ಅಂತಾ ಕೂಗಿದಾಗ ಕಟಕಟೆಗೆ ಬರಬೇಕಿದೆ, ನಿಮ್ಮ ಮೇಲೆ ಐಪಿಸಿ ಸೆಕ್ಷನ್ 302 ಕೊಲೆಯತ್ನ, 364 ಕಿಡ್ನ್ಯಾಪ್, 202 ಸಾಕ್ಷಿನಾಶ ಕೇಸ್ ದಾಖಲಾಗಿದೆ. ಇದನ್ನ ನೀವು ಒಪ್ಕೊತೀರಾ ಅಥವಾ ಅಲ್ಲಗೆಳೆಯುತ್ತೀರಾ ಅಂತಾ ನ್ಯಾಯಾದೀಶರು ಕೇಳಲಿದ್ದಾರೆ.‌ ಇದೆಲ್ಲಾ ಸುಳ್ಳು ವಿಚಾರಣೆ ನಡೆಯಲಿ ಅಂತಾ ಆರೋಪಿಗಳು ಹೇಳಿಕೆ ನೀಡುವ ಸಾಧ್ಯತೆ ಇದೆ. ಇದೇ ರೀತಿ ಎಲ್ಲಾ 17 ಆರೋಪಿಗಳನ್ನ ಕರೆದು ಅವರ…

Read More

ಶಿವಮೊಗ್ಗ : ನಿನ್ನೆ ಶಿವಮೊದಲ್ಲಿ ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಬಲವಂತವಾಗಿ ಭದ್ರಾವತಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಯುವಕನನ್ನು ಅರೆಸ್ಟ್ ಮಾಡಲಾಗಿದೆ. ಭದ್ರಾವತಿ ತಾಲೂಕು ಅಂತರಗಂಗೆ ಬಳಿ ಯರೇಹಳ್ಳಿಯ ಬೋವಿ ಕಾಲೋನಿಯ ಸ್ವಾತಿ ಅಲಿಯಾಸ್ ಮಹಾಲಕ್ಷ್ಮಿ ಮೃತ ಯುವತಿ. ಯುವತಿಯ ಪೋಷಕರು ನೀಡಿದ ದೂರಿನ ಆಧಾರಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ಸೂರ್ಯನನ್ನು ಬಂಧಿಸಲಾಗಿದೆ. ಯುವತಿಯ ಕುಟುಂಬಸ್ಥರು ಮೊದಲು ನಾಪತ್ತೆ ದೂರು ದಾಖಲಿಸಿದ್ದರು. ಸೆ.24ರಂದು ಕಾಲುವೆಯಲ್ಲಿ ಮಗಳ ಮೃತದೇಹ ಪತ್ತೆಯಾದ ಬಳಿಕ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಇವರಿಬ್ಬರೂ ದೂರದ ಸಂಬಂಧಿಗಳಾಗಿದ್ದರು.‌ ಸೆಪ್ಟಂಬರ್ 21 ರಂದು ಯುವತಿಯನ್ನು ಸೂರ್ಯ ಮನೆಯಿಂದ ಕರೆದುಕೊಂಡು ಹೋಗಿ ಗ್ರಾಮದ ಆಚೆ ಇರುವ ಭದ್ರಾ ಕಾಲುವೆಗೆ ನೂಕಿದ್ದಾನೆಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರೇಯಸಿಯನ್ನು ಕಾಲುವೆಗೆ ನೂಕಿದ ಸೂರ್ಯ ದಡದ ಮೇಲೆ ವಿಷ ಕುಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.

Read More

ಕಲಬುರ್ಗಿ : ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಉಜಿನಿ ಮತ್ತು ಸೀನಾ ಡ್ಯಾಂನಿಂದ ಭೀಮಾ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಬಿಡುಗಡೆ ಮಾಡಿದ್ದರಿಂದ ನದಿಗೆ ಇದುವರೆಗೂ 3.20 ಲಕ್ಷ ನೀರು ಬಿಟ್ಟು ಹಿನ್ನೆಲೆಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಬುರ್ಗಿ ಜಿಲ್ಲೆಯ ಆಫ್ಜಲ್ಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿರುವ ಉತ್ತರಾದಿ ಮಠ ಸಂಪೂರ್ಣವಾಗಿ ಜಲಾವೃತವಾಗಿದೆ. ಮಣ್ಣೂರು ಗ್ರಾಮದಲ್ಲಿನ ದೇಶತೀರ್ಥ ವಿದ್ಯಾಪೀಠ ಉತ್ತರಾದಿ ಮಠಕ್ಕೆ ನದಿ ನೀರು ನುಗ್ಗಿದೆ ಮಠದಲ್ಲಿನ ಸಂಸ್ಕೃತ ಪಾಠ ಶಾಲೆಯ 15 ವಿದ್ಯಾರ್ಥಿಗಳು ಹಾಗೂ ಗೋಶಾಲೆಯಲ್ಲಿದ್ದ ಗೋವುಗಳನ್ನು ತಕ್ಷಣ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಅತಿಯಾದ ಮಳೆಯಾದರೆ ಅಥವಾ ಅಭಿಮಾನದಿಗೆ ಹೆಚ್ಚಿನ ನೀರು ಬಿಟ್ಟರೆ ಗ್ರಾಮದಲ್ಲಿರುವ ಯಲ್ಲಮ್ಮ ದೇವಸ್ಥಾನ ಕೂಡ ಸಂಪೂರ್ಣವಾಗಿ ಜಲಾವೃತವಾಗುತ್ತದೆ.

Read More

ಧಾರವಾಡ : ಯೂಟ್ಯೂಬರ್ ಮುಕಳೆಪ್ಪಾ ವಿವಾಹ ವಿವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಕಳೆಪ್ಪ ವಿರುದ್ಧ ಯುವತಿ ಗಾಯತ್ರಿ ತಾಯಿ ಶಿವಕ್ಕ ಇದೀಗ ಅಕ್ರೋಶ ಹೊರ ಹಾಕಿದ್ದಾರೆ. ನನ್ನ ಮಗಳನ್ನು ಭೇಟಿ ಆದಾಗ ಅವಳ ಕೊರಳಲ್ಲಿ ತಾಳಿಯೆ ಇರಲಿಲ್ಲ. ಹಿಂದೂ ಧರ್ಮದಲ್ಲಿ ವಿವಾಹಿತೆಯರು ತಾಳಿ ಹಾಕಿಕೊಳ್ಳುತ್ತಾರೆ. ನನ್ನ ಮಗಳಿಗೆ ತಾಳಿ ಎಲ್ಲಿದೆ ಅಂತ ಕೇಳಿದಾಗ ಮನೆಯಲ್ಲಿದೆ ಅಂತ ಹೇಳಿದಳು. ನಿಜವಾಗಲು ಮದ್ವೆ ಆಗಿದ್ರೆ ಗಾಯತ್ರಿ ತಾಳಿ ತೋರಿಸುತ್ತಿದ್ದಳು. ಮುಕಳೆಪ್ಪ ನನ್ನ ಮಗಳಿಗೆ ಮೋಸ ಮಾಡುತ್ತಿದ್ದಾನೆ. ಹಿಂದೂ ಆಗಿದ್ದರೆ ಆಕೆ ಹಣೆಗೆ ಕುಂಕುಮ ಏಕೆ ಹಚ್ಚುತ್ತಿಲ್ಲ? ಮೆಹಂದಿಯಲ್ಲಿ ನಿಮ್ಮ ಭಾಷೆಯಲ್ಲಿ ಹೇಗೆ ಬರೆಸಿಕೊಳ್ಳುತ್ತಿದ್ದಳು. ನಿನ್ನ ಭಾಷೆಯಲ್ಲಿ ನಿನ್ನ ಹೆಸರು ಹಾಕಿಕೊಂಡಿದ್ದಾಳೆ. ನನ್ನ ಮಗಳನ್ನು ಇಷ್ಟು ದಿನ ಹೆತ್ತು ಹೊತ್ತು ಸಾಕಿ ಬೆಳೆಸಿದ್ದೇವೆ.

Read More

ಕೋಲಾರ : ಕೋಲಾರದಲ್ಲಿ ಘೋರ ದುರಂತವೊಂದು ನಡೆದಿದ್ದು, ಬ್ಯಾಟರಾಯನಹಳ್ಳಿ ಬಳಿ ರೈಲಿಗೆ ತಡೆಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬ್ಯಾಟರಾಯನ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡವರನ್ನ ಸತೀಶ್ (18) ಹಾಗೂ ಶ್ವೇತ (17) ಆತ್ಮಹತ್ಯೆಗೆ ಶರಣಾದವರ ಎಂದು ತಿಳಿದುಬಂದಿದೆ. ಬ್ಯಾಟರಾಯನಹಳ್ಳಿ ಬಳಿ ಬೈಕ್ ನಿಲ್ಲಿಸಿ ಇಬ್ಬರು ಹೋಗಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಕುರಿತು ಕಂಟ್ರೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಯಾದಗಿರಿ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆಡಿದ್ದು, ಪತ್ನಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಪಾಪಿ ತಂದೆಯೊಬ್ಬ ಕೊಂದಿದ್ದಾನೆ. ಯಾದಗಿರಿ ತಾಲೂಕಿನ ದುಬನ್ನೂರು ಕ್ಯಾಂಪ್ನಲ್ಲಿ ಈ ಒಂದು ಘಟನೆ ನಡೆದಿದೆ. ಮೂವರ ಮಕ್ಕಳ ಪೈಕಿ ಇಬ್ಬರನ್ನು ತಂದೆ ಶರಣಪ್ಪ ಕೊಂದಿದ್ದಾನೆ. ಭಾರ್ಗವ್ (5) ಹಾಗೂ ಸಾನ್ವಿ (2) ಕೊಲೆಯಾದ ಮಕ್ಕಳು ಎಂದು ತಿಳಿದುಬಂದಿದೆ. ಇನ್ನು ಹಿರಿಯ ಮಗ ಹೇಮಂತ್ ಕೊಲೆಗೂ ಶರಣಪ್ಪ ಯತ್ನಿಸಿದ್ದ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಹಿರಿಯ ಮಗನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಶರಣಪ್ಪನ ಬಂಧನಕ್ಕೆ ಪೊಲೀಸರು ಬಲೇ ಬೀಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ (94) ಅವರು ನಿನ್ನೆ ರಾಜಾಜಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇದೀಗ ಇಂದು ಆಸ್ಪತ್ರೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಸಾರ್ವಜನಿಕ ದರ್ಶನಕ್ಕೆ ಎಸ್ಎಲ್ ಭೈರಪ್ಪ ಪಾರ್ಥಿವ ಶರೀರ ಸ್ಥಳಾಂತರಿಸಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎಸ್ಎಲ್ ಬೀರಪ್ಪ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಲವು ಗಣ್ಯರು ಎಸ್ ಎಲ್ ಭೈರಪ್ಪ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ ಬಳಿಕ ಸಂಜೆ ಎಸ್ ಎಲ್ ಭೈರಪ್ಪ ಅವರ ಪಾರ್ಥಿವ ಶರೀರವನ್ನು ಮೈಸೂರಿಗೆ ಸ್ಥಳಾಂತರಿಸಲಾಗುತ್ತೆ. ಇನ್ನು ನಾಳೆ ಮೈಸೂರಿನಲ್ಲಿ ಭೈರಪ್ಪ ಅವರ ಅಂತ್ಯಕ್ರಿಯೆ ನೆರವೇರಲಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಎಸ್ ಎಲ್ ಭೈರಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರ ಭೂಮಿಯಲ್ಲಿ ಎಸ್ಎಲ್ ಭೈರಪ್ಪ ಅವರ ಅಂತ್ಯಕ್ರಿಯೆ ನೆರವೇರಲಿದೆ. ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಸದ್ಯ…

Read More

ವಿಜಯಪುರ : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆಗೂ ಭಾರಿ ಮಳೆ ಸುರಿಯುತ್ತಿದ್ದು ವಿಜಯಪುರದಲ್ಲಿ ಘೋರ ಘಟನೆಯೊಂದು ನಡೆದಿದೆ ಭಾರಿ ಮಳೆಯಿಂದಾಗಿ ಸೇತುವೆಂದು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಆದರೆ ಬೈಕ್ ಸವಾರ ನೊಬ್ಬ ಮುಳುಗಡೆಯಾಗಿದ್ದ ಸೇತುವೆ ದಾಟಲು ಹೋಗಿ ನೀರು ಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದಿದೆ. ಹೌದು ಜಲಿಯಲಿ ಭಾರಿ ಮಳೆ ಸುರಿಯುತ್ತಿದ್ದು, ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ತಾಳಿಕೋಟಿ ಪಟ್ಟಣದಲ್ಲಿ ನದಿಗೆ ನಿರ್ಮಿಸಿದ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಮುಳುಗಡೆಯಾದ ಸೇತುವೆ ದಾಟಲು ಯತ್ನಿಸಿದ ಬೈಕ್ ಸವಾರನೊಬ್ಬ ಬೈಕ್ ಸಮೇತ ನೀರುಪಾಲಾಗಿದ್ದಾನೆ. ನೀರುಪಾಲಾದ ಯುವಕನನ್ನು ಸಂತೋಷ ಹಡಪದ (22) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಹಿಂಬದಿ ಸವಾರ ಅಪಾಯದಿಂದ ಪಾರಾಗಿದ್ದಾನೆ. ಮಹಾಂತೇಶ ಹೊಸಗೌಡ (20) ಅಪಾಯದಿಂದ ಪಾರಾದ ಯುವಕ. ಇಬ್ಬರೂ ವಡವಡಗಿಯಿಂದ ತಾಳಿಕೋಟಿ ಪಟ್ಟಣಕ್ಕೆ ಹೋಗುವ ಸಂದರ್ಭದಲ್ಲಿ ಘಟನೆ ನಡೆದಿದೆ. ಸೇತುವೆ ಮುಳುಗಡೆಯಾಗಿದ್ದರಿಂದ ತಾಳಿಕೋಟಿ ವಿಜಯಪುರ ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಯುವಕರು ಬೈಕ್‍ನಲ್ಲಿ ತೆರಳುವ…

Read More

ಬೆಂಗಳೂರು : ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ (94) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರಳೆದಿದ್ದಾರೆ. ನಾಳೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಸಂಜೆ ಮೈಸೂರಿಗೆ ಶವ ಶಿಫ್ಟ್ ಮಾಡಲಾಗುತ್ತದೆ ಬಳಿಕ ಶುಕ್ರವಾರ ಭೈರಪ್ಪ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರಿಂದ ಮಾಹಿತಿ ತಿಳಿದು ಬಂದಿದೆ. ಎಸ್.ಎಲ್ ಭೈರಪ್ಪ ಅವರ ಬಾಲ್ಯ ಅಷ್ಟೊಂದು ಚೆನ್ನಾಗಿರಲಿಲ್ಲ. ಆಗಿನ ಕಾಲದಲ್ಲಿ ಭೈರಪ್ಪನವರು ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತಾಗಿದ್ದರು. ಆದರೆ ಹೇಗೋ ಇದರಿಂದ ಪಾರಾಗಿದ್ದರೂ ಅವರ ಕುಟುಂಬ ಸದಸ್ಯರು ಪ್ಲೇಗ್‌ ಬಲಿಯಾಗಿದ್ದರು. ಅವರ ತಾಯಿ ಪ್ಲೇಗ್‌ಗೆ ತುತ್ತಾಗಿದ್ದರು. ಇದಕ್ಕೂ ಮೊದಲು ಅವರ ಅಣ್ಣ, ಅಕ್ಕ ಪ್ಲೇಗ್‌ ಬಂದು ಒಂದೇ ದಿವಸ ಒಂದು ಗಂಟೆಯ ಒಳಗಡೆ ಮೃತಪಟ್ಟರು. ತಾಯಿ ಮೃತಪಟ್ಟು 3 ವರ್ಷದ ನಂತರ ತಂಗಿ ಮೃತಪಟ್ಟಳು. ಒಂದು ವರ್ಷದ ಬಳಿಕ ತಮ್ಮ ಸಾವನ್ನಪ್ಪಿದ್ದ. ತಮ್ಮನ ಹೆಣವನ್ನು ನಾನು ಹೊತ್ತುಕೊಂಡು ಹೋಗಿ ಸುಟ್ಟು…

Read More