Author: kannadanewsnow05

ಉತ್ತರಕನ್ನಡ : ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವರುಣ ಅಬ್ಬರಿಸುತ್ತಿದ್ದು ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಮಳೆ ಆಗುತ್ತಿದ್ದು, ನಿನ್ನೆ ಉತ್ತರಕನ್ನಡ ಜಿಲ್ಲೆಯ ಐದು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಇಂದು ಕೂಡ ಮಳೆ ಮುಂದುವರೆದಿದ್ದರಿಂದ ನಾಳೆ ಕೂಡ 5 ತಾಲೂಕಿನ ಶಾಲೆಗಳಿಗೆ ರಜೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟ, ಅಂಕೋಲ, ಭಟ್ಕಳ ತಾಲೂಕು ಹಾಗೂ ಹೊನ್ನಾವರ ತಾಲೂಕಿನ ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ ಮುಂದುವರೆಯಲಿದೆ. ನಾಳೆ ರಜೆ ನೀಡಿ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಆದೇಶ ಹೊರಡಿಸಿದ್ದಾರೆ .

Read More

ಬಳ್ಳಾರಿ : ಬಳ್ಳಾರಿಯಲಿ ಕರ್ತವ್ಯ ನಿರತ ಸಿಐಎಸ್ಎಫ್ ಯೋಧರೊಬ್ಬರು ಸಾವನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈ ಎಂಬಲ್ಲಿ ನಡೆದಿದೆ.ಅನಾರೋಗ್ಯದಿಂದ ಸಿಐಎಸ್ಎಫ್ ಯೋಧ ಯಲ್ಲಪ್ಪ ಬಸವರಾಜ ಸೂರಣಗಿ (34) ಕೊನೆಯುಸಿರೆಳೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈನಲ್ಲಿ ಅವರು ಸಾವನ್ನಪ್ಪಿದ್ದರೆ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬರದ್ವಾಡ ನಿವಾಸಿ ಎಂದು ಹೇಳಲಾಗುತ್ತಿದೆ. ಯೋಧ ಯಲ್ಲಪ್ಪ ದೋಣಿಮಲೈನಲ್ಲಿ ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

Read More

ಬೆಂಗಳೂರು:ಇತ್ತೀಚಿಗೆ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪದಲ್ಲಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.ಇದೀಗ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ ಎಂದು ತಿಳಿದುಬಂದಿದೆ. ನಿರೀಕ್ಷಣಾ ಜಾಮೀನು ಕೋರಿ ಭವಾನಿ ಸಲ್ಲಿಸಿದ್ದ ಮನವಿಯನ್ನು ಜೂನ್‌ 18ರಂದು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ಪೀಠ ಪುರಸ್ಕರಿಸಿತ್ತು. ಈ ಆದೇಶವನ್ನು ಕರ್ನಾಟಕ ಸರ್ಕಾರವು ಪ್ರಶ್ನಿಸಿದ್ದು, ವಿಚಾರಣೆಯನ್ನು ಬುಧವಾರ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುಯಾನ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಲಿದೆ. ಸಂತ್ರಸ್ತೆಗೆ ಆಹಾರ ನೀಡಿಲ್ಲ ಮತ್ತು ಉಡುಪು ಬದಲಿಸಲು ಭವಾನಿ ಅವಕಾಶ ನೀಡಿಲ್ಲ ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು. ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆ ಓದಿದಾಗ ಬಟ್ಟೆ ಮತ್ತು ಊಟವನ್ನು ಭವಾನಿ ಕಳುಹಿಸಿದ್ದರು ಎಂದು ಹೇಳಿದ್ದಾರೆ. ಭವಾನಿ ರೇವಣ್ಣ ಸೇರಿ ಹಲವರ ವಿರುದ್ದ ಐಪಿಸಿ ಸೆಕ್ಷನ್‌ಗಳಾದ 364ಎ, 365 ಮತ್ತು 34 ಅಡಿ ಪ್ರಕರಣ ದಾಖಲಾಗಿದೆ. ಇದೀಗ ಭವಾನಿ ರೇವಣ್ಣಗೆ ಮತ್ತೆ…

Read More

ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳವಾಗಿದ್ದು, ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆರೋಗ್ಯ ಇಲಾಖೆ, ಸಿಎಂ, ಡಿಸಿಎಂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕುರ್ಚಿ ಕಿತ್ತಾಟದಲ್ಲಿ ಡೆಂಗ್ಯೂ ನಿಯಂತ್ರಣವನ್ನು ಕಡೆಗಣಿಸಿದ್ದಾರೆ. ಇವರ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಮಧ್ಯೆ ಝೀಕಾ ವೈರಸ್ ಕೂಡ ಸಂಕಷ್ಟ ತಂದೊಡ್ಡುತ್ತಿದೆ. ಇದರ ಕುರಿತು ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು. ಡೆಂಗ್ಯೂ ಕಾರಣಕ್ಕೆ ಚಿಕ್ಕ ಹುಡುಗ ಮೃತಪಟ್ಟಿದ್ದಾನೆ. ಆರೋಗ್ಯ ಇಲಾಖೆ ನಿದ್ರೆಗೆ ಜಾರಿದೆ. ಸರ್ಕಾರದಲ್ಲೂ ಯಾವುದೇ ಕೆಲಸ ಆಗುತ್ತಿಲ್ಲ. ಕಾಮಗಾರಿಗಳೂ ಅರ್ಧಕ್ಕೆ ನಿಂತಿದೆ. ಹೀಗಾಗಿ ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಜಲಮಂಡಳಿ ಸರಿಯಾದ ಕೆಲಸ ಮಾಡುತ್ತಿಲ್ಲ. ತುಂಬಾ ಕಡೆ ನೀರು ಸೋರಿಕೆಯಾಗಿ ಸೊಳ್ಳೆಗಳು ಉತ್ಪತ್ತಿಗೆ ದಾರಿ ಸುಗಮವಾಗಿದೆ. ಇದ್ಯಾವುದನ್ನೂ ಗಮನಿಸುವ ಕೆಲಸ ಆಗುತ್ತಿಲ್ಲ ಎಂದು ಟೀಕಿಸಿದರು.ಡೆಂಗ್ಯೂ…

Read More

ಗದಗ : ರಾಜ್ಯದಲ್ಲಿ ಇದೀಗ ದಿನದಿಂದ ದಿನಕ್ಕೆ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದರಿಂದ ಸಹಜವಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಕಳೆದ ಒಂದು ವಾರಗಳಿಂದ ರಾಜ್ಯದಲ್ಲಿ 7ಕ್ಕೂ ಹೆಚ್ಚು ಮಕ್ಕಳು ಡೆಂಗ್ಯೂ ಸೋಕಿನಿಂದ ಸಾವನಪ್ಪಿದ್ದಾರೆ.  ಗದಗದಲ್ಲಿ ಡೆಂಗ್ಯೂ ಗೆ 5 ವರ್ಷದ ಬಾಲಕ ಚಿರಾಯಿ ಸಾವನಪ್ಪಿದ್ದಾನೆ. ಇದೀಗ ಈ ಒಂದು ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಹೌದು ಮಗು ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತ ಚಿರಾಯಿ ಪೋಷಕರು ಆರೋಪಿಸಿದ್ದಾರೆ. ಬೆಡ್ ಇಲ್ಲದೆ 2 ಗಂಟೆ ಕಾಲ ಮಗು ನರಳಾಡಿದೆ. ತಂದೆ ಮಂಜುನಾಥ ತಾಯಿ ಸುಜಾತ ಈ ಒಂದು ಆರೋಪ ಮಾಡುತ್ತಿದ್ದಾರೆ. ದಾಖಲಿಸಿಕೊಳ್ಳಲು ಜಿಮ್ಸ್ ವೈದ್ಯರು ಹಿಂದೇಟು ಹಾಕಿದ್ದರು. ನಮ್ಮಲ್ಲಿ ಬೆಡ್ ಇಲ್ಲ ಬೇರೆ ಕಡೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು. ಇದಾದ ಬಳಿಕ ಪೋಷಕರು ತಡವಾಗಿ ಅಡ್ಮಿಟ್ ಮಾಡಿಕೊಂಡರೂ ಕೂಡ ಸರಿಯಾಗಿ ಚಿಕಿತ್ಸೆಯನ್ನು ಕೂಡ ಕೊಟ್ಟಿಲ್ಲ. ಸರಿಯಾದ ಚಿಕಿತ್ಸೆ ನೀಡಲಿಲ್ಲ. ಆಕ್ಸಿಜನ್ ನೀಡದೆ…

Read More

ರಾಯಚೂರು : ಚಿರತೆಯನ್ನು ಹೆದರಿಸಲು ಕೈಗೆ ಸಿಕ್ಕ ಆಯುಧ ತೆಗೆದುಕೊಂಡು ಹೋಗಿದ್ದ ಮೂವರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೌದು ದೇವದುರ್ಗ ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೂವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ರಂಗನಾಥ್ ಎಂಬಾತ ಬಹಿರ್ದೆಸೆಗೆ ಹೋದಾಗ ಚಿರತೆ ಪ್ರತ್ಯಕ್ಷವಾಗಿತ್ತು. ಇನ್ನು ಚಿರತೆ ಪ್ರತ್ಯಕ್ಷವಾದ ಬಗ್ಗೆ ರಮೇಶ್ ಮತ್ತು ಮಲ್ಲಣ್ಣನಿಗೆ ರಂಗನಾಥ್ ಮಾಹಿತಿ ನೀಡಿದ್ದು ಮೂವರು ಸೇರಿ ಆಯುಧ ತೆಗೆದುಕೊಂಡು ಚಿರತೆಗೆ ಬೆದರಿಸಲು ಯತ್ನಿಸಿದ್ದಾರೆ. ಈ ವೇಳೆ ರಂಗನಾಥ್, ಮಲ್ಲಣ್ಣ ಹಾಗೂ ರಮೇಶ್ ಮೇಲೆ ಚಿರತೆ ದಾಳಿ ನಡೆಸಿದೆ. ಇಲಾಖೆ ಸಿಬ್ಬಂದಿ, ಅಧಿಕಾರಿಗಳು, ಚಿರತೆ ಕಾಣಿಸಿರುವ ಬಗ್ಗೆ ಅರಣ್ಯ ಇಲಾಖೆಗೆ ಮುಂಚಿತವಾಗಿಯೇ ತಿಳಿಸಿದ್ದರು ಅರಣ್ಯ್ ಇಲಾಖೆ ನಿರ್ಲಕ್ಷ್ಯ ಮಾಡಿದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಗ್ರಾಮಸ್ಥರೇ ಚಿರತೆ ಮೇಲೆ ಅಟ್ಯಾಕ್ ಮಾಡಿ ಕೊಂದಿದ್ದಾರೆ. ಗಾಯಾಳುಗಳಿಗೆ ದೇವದುರ್ಗ ತಾಲೂಕು ಸರ್ಕಾರಿ…

Read More

ಶಿವಮೊಗ್ಗ : ಕಾಣೆಯಾಗಿದ್ದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಶವ ಪತ್ತೆಯಾಗಿದೆ. ಜೂನ್ 30ರಂದು ಕಾಣೆಯಾಗಿದ್ದ ಆಗುಂಬೆಯ ಕುಶಾಲ್ ಎಂಬುವರ ಪುತ್ರಿ ಪೂಜಾ (24) ಮೃತದೇಹ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಕುಶಾಲ್ ಎಂಬುವವರ ಮಗಳಾದ ಪೂಜಾ(24) ಜೂನ್ 30 ರಂದು ಮನೆಯಿಂದ ಹೊರಹೋದಾಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ಯುವತಿ ನಾಪತ್ತೆಯಾಗಿರುವ ಬಗ್ಗೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗುಂಬೆ ಪೊಲೀಸ್ ಠಾಣೆಯ ಪಿಎಸ್ಐ ರಂಗನಾಥ್ ಅಂತರಗಟ್ಟಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು. ಹೊಂಡಾದಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ಹಲವು ವರ್ಷಗಳಿಂದ ಸ್ನೇಹಿತನಾಗಿದ್ದ ಮಣಿಕಂಠ ಎನ್ನುವಾತನನ್ನು ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಪೂಜಾಳನ್ನು ಕೊಂದಿದ್ದಾಗಿ ಮಣಿಕಂಠ ಒಪ್ಪಿಕೊಂಡಿದ್ದಾನೆ. ಹಣಕಾಸಿ‌ ವಿಚಾರಕ್ಕೆ ಜಗಳ ನಡೆದು ಕೊಲೆ ಮಾಡಿ ಬಳಿಕ ಆಗುಂಬೆ ಅರಣ್ಯ ಪ್ರದೇಶದಲ್ಲಿ ಬಿಸಾಡಿ ಹೋಗಿದ್ದಾನೆ ಎನ್ನುವ ಅಂಶ ತಿಳಿದುಬಂದಿದೆ. ಸದ್ಯ ಆಗುಂಬೆ ಪೊಲೀಸ್ ಠಾಣೆಯಲ್ಲಿ…

Read More

ಬೆಳಗಾವಿ : ಮಳೆಗಾಲ ಆರಂಭವಾಗುತ್ತಿದ್ದಂತೆ ಜಲಪಾತಗಳು ತುಂಬಿ ಹರಿಯುತ್ತವೆ ಈ ವೇಳೆ ಸಹಜವಾಗಿ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುವುದು ಸಹಜ. ಪ್ರವಾಸಿಗರು ಜಲಪಾತಕ್ಕೆ ನೋಡಲು ಹೋದಾಗ ಸುಮ್ಮನೆ ಬರುವುದಿಲ್ಲ, ಏನಾದರೂ ಹುಚ್ಚಾಟ ಕೆಲಸ ಮಾಡಿ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಾರೆ. ಇದೀಗ ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತದಲ್ಲೂ ಕೂಡ ಇಂಥದ್ದೇ ಹಚ್ಚಾಟ ನಡೆಯುತ್ತಿದ್ದು, ಮಳೆ ಅಬ್ಬರದಿಂದ ಇದೀಗ ಗೋಕಾಕ್ ಜಲಪಾತ ಧುಮ್ಮಕಿ ಹರಿಯುತ್ತಿದೆ ಇದೆ ವೇಳೆ ಪ್ರವಾಸಿಗರು ಕೂಡ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗೋಕಾಕ್ ಜಲಪಾತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಕೆಲ ಕಿಡಿಗೇಡಿ ಯುವಕರು ಜಲಪಾತದ ತುತ್ತ ತುದಿಗೆ ಹೋಗಿ ಸೆಲ್ಫಿ ತೆಗೆದುಕೊಳ್ಳುವುದು,ಕೆಲ ಪ್ರವಾಸಿಗರು ಜಲಪಾತದ ಸಮೀಪವೇ ಬಂಡೆ ಮೇಲೆ ಕುಳಿತು ಊಟ ಮಾಡುವುದು, ಮಾಡುತ್ತಿದ್ದಾರೆ. ಇನ್ನು ಇಷ್ಟೇಲ್ಲಾ ಅಗುತ್ತಿದ್ದರೂ ಜಲಪಾತಕ್ಕೆ ಭದ್ರತೆ ‌ಒದಗಿಸದೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಚೂರು ಆಯ ತಪ್ಪಿದರೂ ಸಹ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇನ್ನು ಯುವಕರ, ಮಹಿಳೆಯರು ಮಕ್ಕಳು ಸೇರಿದಂತೆ ಜಲಪಾತದ ತುದಿಯಲ್ಲಿ ಹುಚ್ಚಾಟ ಮಾಡುತ್ತಿದ್ದಾರೆ.

Read More

ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿ ಸಂಸದರಾಗಿ ಆಯ್ಕೆಯಾದ ಡಾಕ್ಟರ್ ಕೆ ಸುಧಾಕರ್ ಅವರಿಗೆ ಇಂದು ಬೆಂಗಳೂರಿನ ನೆಲಮಂಗಲದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಕಾರ್ಯಕ್ರಮಕ್ಕೆ ಬಂದವರಿಗೆ ಭರ್ಜರಿ ಬಾಡೂಟ ಜೊತೆಗೆ ಎಣ್ಣೆಯನ್ನು ಕೂಡ ಆಯೋಜಿಸಲಾಗಿತ್ತು. ಇನ್ನು ಉಚಿತ ಎಣ್ಣೆಗಾಗಿ ಮುಗಿಬಿದ್ದ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುವಂತಾಯಿತು. ಬಾಡೂಟದ ಜೊತೆಗೆ ಉಚಿತವಾಗಿ ಎಣ್ಣೆ ಹಂಚುತ್ತಿದ್ದನ್ನು ನೋಡಿ ಯುವಕರು ವೃದ್ಧರು ಎನ್ನದೆ ಎಣ್ಣೆಗಾಗಿ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು. ಈ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ನೆಲಮಂಗಲ ಮಾಜಿ ಶಾಸಕರಾದ ನಾಗರಾಜು, ಮಾಜಿ ಎಂಎಲ್ಸಿ ಇ.ಕೃಷ್ಣಪ್ಪ ಸೇರಿದಂತೆ ಮೈತ್ರಿ ಪಕ್ಷದ ಹಿರಿಯ ಮುಖಂಡರು, ಮಾಜಿ ಶಾಸಕರು ಭಾಗಿಯಾಗಿದ್ದರು.

Read More

ಬೆಂಗಳೂರು : ರಾಜ್ಯ ಸರ್ಕಾರದ ಬಳಿ ನಯಾಪೈಸೆ ಇಲ್ಲ. ಗಂಡನ ಜೇಬಿಗೆ ಕತ್ತರಿ ಹಾಕಿ ಹೆಣ್ಣು ಮಕ್ಕಳಿಗೆ ಹಣ ನೀಡುತ್ತಿದ್ದಾರೆ. ಕಾಂಗ್ರೆಸ್ನವರು ಮನೆ ಹಾಳು ಮಾಡುತ್ತಿದ್ದಾರೆ.ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಪಾಪರ್ ಆಗಿದೆ ರಾಜ ಸರ್ಕಾರದ ಬಳಿ ನಯಾಪೈಸೆ ಇಲ್ಲವೆಂದು ಆರ್ ಅಶೋಕ್ ಕಿಡಿಕಾರಿದರು. ಲೋಕಸಭಾ ಚುನಾವಣೆಯಲ್ಲಿ ಡಾಕ್ಟರ್ ಕೆ ಸುಧಾಕರ್ ಗೆಲುವು ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ನೆಲಮಂಗಲ ಬರುತ್ತದೆ ಹೀಗಾಗಿ ಇಂದು ಅಲ್ಲಿ ಅಭಿನಂದನ ಕಾರ್ಯಕ್ರಮ ಏರ್ಪಡಿಸಿದ್ದರು. ದಲಿತರ ಹಣ ಲೂಟಿ ಮಾಡಿದ್ದಾರೆ. ಮೈಸೂರಲ್ಲಿ ಮೂಡ ಸೈಟ್ ಕಬಳಿಕೆ ಮಾಡಿದ್ದಾರೆ. ಈಗ ವಿಧಾನಸಭೆ ಚುನಾವಣೆ ನಡೆದರು.ಬಿಜೆಪಿ ಜೆಡಿಎಸ್ ಮೈತ್ರಿಗೆ ಗೆಲುವಾಗಲಿದೆ. ಶಾಸಕರು ಅಭಿವೃದ್ಧಿಯ ಹಣಕ್ಕೆ ಸಚಿವರ ಕೊರಳಪಟ್ಟಿ ಹಿಡಿಯುವ ಸ್ಥಿತಿ ಬಂದಿದೆ.ಇಂಧನ ಕಂದಾಯ ಆಸ್ತಿ ತೆರಿಗೆ ಹೆಚ್ಚಿಸಿ ಜನರ ಜೀವ ಹಿಂಡುತ್ತಿದ್ದಾರೆ ಎಂದು ಅಭಿನಂದನಾ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು

Read More