Subscribe to Updates
Get the latest creative news from FooBar about art, design and business.
Author: kannadanewsnow05
ಚಾಮರಾಜನಗರ : ಸಾಮಾನ್ಯವಾಗಿ ಮನೆಯಲ್ಲಿ ಕರೆಂಟ್ ಹೋದ ಸಂದರ್ಭದಲ್ಲಿ ಮೇಣದಬತ್ತಿ ಹಚ್ಚುವುದು ಹಿಂದಿನಿಂದಲೂ ಬಂದಂತಹ ಒಂದು ವಾಡಿಕೆ. ಆದರೆ ಚಾಮರಾಜನಗರದಲ್ಲಿ ಈ ಒಂದು ಮೇಣದಬತ್ತಿಯಿಂದ ಘೋರವಾದ ದುರಂತ ಒಂದು ಸಂಭವಿಸಿದ್ದು ವ್ಯಕ್ತಿಯೊಬ್ಬರು ಬೆಂಕಿಯಲ್ಲಿ ಸಜೀವವಾಗಿ ದಹನಗೊಂಡಿದ್ದಾರೆ. ಈ ಒಂದು ಘಟನೆ ಚಾಮರಾಜನಗರದ ಮೂಡಗೂರಿನಲ್ಲಿ ಈ ಒಂದು ಘಟನೆ ನಡೆದಿದ್ದು ಸಿದ್ದೇಶ್ (41) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಿದ್ದೇಶ್ ವಿದ್ಯುತ್ ಇಲ್ಲದೆ ಮನೆಯಲ್ಲಿ ಮೇಣದ ಬತ್ತಿಯನ್ನು ಹಚ್ಚಿಟ್ಟಿದ್ದ. ರಾತ್ರಿ ಮಲಗಿದ್ದಾಗ ಮೇಣದಬತ್ತಿ ಹಾಸಿಗೆ ಮೇಲೆ ಬಿದ್ದಿತ್ತು. ಈ ವೇಳೆ ಹಾಸಿಗೆ ಸಮೇತ ಬೆಂಕಿಯಲ್ಲಿ ಬಿದ್ದು ಸಿದ್ದೇಶ್ ನರಳಾಡಿ ಪ್ರಾಣ ಬಿಟ್ಟಿದ್ದಾರೆ.
ತುಮಕೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಡೆಗೆ ರಾಜ್ಯ ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಿತ್ತು. ಆದರೆ ಈ ಒಂದು ಕಾನೂನಿಗೆ ಕ್ಯಾರೆ ಎನ್ನದ ಮೈಕ್ರೋ ಫೈನಾನ್ಸ್ ಗಳು ಇದೀಗ ಕಿರುಕುಳವನ್ನು ಮುಂದುವರಿಸಿದ್ದು, ಇದೀಗ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಹಣ್ಣಿನ ವ್ಯಾಪಾರಿ ವಿಡಿಯೋ ಮಾಡಿ ಲೈವ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಹೌದು ತುಮಕೂರಿನಲ್ಲಿ ವಿಷ ಕುಡಿದ ಹಣ್ಣಿನ ವ್ಯಾಪಾರಿ ಕಿರುಕುಳಕ್ಕೆ ತಾಳದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಲಾಗಿದೆ. ಮಂಡ್ಯ ಮೂಲದ ಮುಜೀಬ್ ಎಂಬ ಹಣ್ಣಿನ ವ್ಯಾಪಾರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೀಟರ್ ಬಡ್ಡಿ ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದರು. ಬಡ್ಡಿ ಕಿರುಕುಳ ತಾಳದೆ ಮುಜೀಬ್ ಮಂಡ್ಯದಿಂದ ತುಮಕೂರಿಗೆ ಬಂದಿದ್ದ. ಈ ವೇಳೆ ಲೈವ್ ವಿಡಿಯೋ ದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ…
ಬಳ್ಳಾರಿ : ಇತ್ತೀಚಿಗೆ ಬಳ್ಳಾರಿಯ ಕಣೆಕಲ್ ರಸ್ತೆಯ ರಾಣಿತೋಟದಲ್ಲಿ ವೆಂಕಟೇಶ್ ಎನ್ನುವ ವ್ಯಕ್ತಿಯ ಭೀಕರ ಕೊಲೆಯಾಗಿತ್ತು. ಈ ಒಂದು ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಕೊಲೆಯಾದ 24 ಗಂಟೆಯೊಳಗೆ 11 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಆದರೆ ಈ ಒಂದು ಕೊಲೆಯ ಹಿಂದಿನ ರಹಸ್ಯ ಬೇಧಿಸಿದ ಪೊಲೀಸರು ಸ್ವತಃ ಬೆಚ್ಚಿಬಿದ್ದಿದ್ದಾರೆ. ಹೌದು ಕೊಲೆ ಸಂಬಂಧ 24 ಗಂಟೆಯಲ್ಲೇ 11 ಆರೋಪಿಗಳ ಬಂಧನವಾಗಿದೆ. ನಿನ್ನೆ ಕಣೆಕಲ್ ರಸ್ತೆಯ ರಾಣಿ ತೋಟದಲ್ಲಿ ವೆಂಕಟೇಶ್ ಕೊಲೆ ಆಗಿತ್ತು. ಶುಕ್ರವಾರ ಬೆಳಗಿನ ಜಾವ ವೆಂಕಟೇಶ್ ಕೊಲೆಯಾಗಿತ್ತು. ಆದರೆ ಈ ಕೊಲೆಯ ಹಿಂದೆ ಪತ್ನಿಯ ಕೈವಾಡ ಇರುವುದು ಪತ್ತೆಯಾಗಿದೆ. ಪತಿಯ ಕೊಲೆಗೆ ಪತ್ನಿ ನೀಲವೇಣಿ ಸುಪಾರಿ ಕೊಟ್ಟಿದ್ದಳು ಎನ್ನಲಾಗಿದೆ. ಹೌದು ಆನಂದ್ ಜೊತೆಗೆ ಪತ್ನಿ ನೀಲವಣಿಗೆ ವ್ಯವಹಾರದ ಸಂಬಂಧ ಸಲುಗೆ ಇತ್ತು. ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ನೀಲವೇಣಿ ನಡತೆಯ ಬಗ್ಗೆ ಪತಿ ವೆಂಕಟೇಶ್ ಸಂಶಯ ಪಟ್ಟಿದ್ದ. ಇದೇ ಕಾರಣಕ್ಕೆ ಪದೇ ಪದೇ ವೆಂಕಟೇಶ್ ಮತ್ತು ಪತ್ನಿ ನೀಲವೇಣಿ ಮಧ್ಯೆ ಗಲಾಟೆ…
ಬೆಂಗಳೂರು : ಸಾಲದ ಹಣದ ಕಂತು ಪಡೆಯಲು ಹೋದ ಬ್ಯಾಂಕ್ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಪ್ರಕರಣ ನಗರದಲ್ಲಿ ನಡೆದಿದೆ. ನಾಗರಭಾವಿಯ 2ನೇ ಹಂತದಲ್ಲಿರುವ ಬಿಡಿಎ ಕಾಂಪ್ಲೆಕ್ಸ್ನಲ್ಲಿ ಏಪ್ರಿಲ್ 1ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬ್ಯಾಂಕ್ ಸಿಬ್ಬಂದಿ ಚಂದನ್ ಬಿ. ಎಂ. ಎಂಬಾತನ ಮೇಲೆ ಕಲ್ಲುಗಳಿಂದ ಮಾರಣಾಂತಿಕವಾಗಿ ಹಲ್ಲೆಗೈದು, ಜೀವಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಹಲ್ಲೆಗೊಳಗಾದ ಚಂದನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ನೀಡಿರುವ ದೂರಿನನ್ವಯ ಏಪ್ರಿಲ್ 4ರಂದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದ್ವಿಚಕ್ರ ವಾಹನ ಖರೀದಿಸಲು ಖಾಸಗಿ ಬ್ಯಾಂಕ್‌ನ ಮೂಲಕ ಸಾಲ ಪಡೆದಿದ್ದ ರಮೇಶ್, ಎರಡು ತಿಂಗಳುಗಳಿಂದ ಇಎಂಐ ಪಾವತಿಸಿರಲಿಲ್ಲ. ಇಎಂಐ ಹಣ ವಸೂಲಿ ಮಾಡಲು ಬ್ಯಾಂಕ್‌ನ ಸಿಬ್ಬಂದಿ ಚಂದನ್ ರಮೇಶ್ ಮನೆ ಬಳಿ ತೆರಳಿದ್ದರು.ಈ ವೇಳೆ ‘ಹಣ ಪಾವತಿ ಮಾಡಲ್ಲ’ ಎಂದು ರಮೇಶ್ ಹೇಳಿದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅದೇ ಸಂದರ್ಭದಲ್ಲಿ ಕೈ ಮತ್ತು ಕಲ್ಲುಗಳಿಂದ ತನ್ನ…
ಬೆಂಗಳೂರು : ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಸಹಕಾರ ಸಚಿವ ಕೆ.ಎನ್ ರಾಜಣ್ಣ ವಿರುದ್ಧ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದೀಗ ಪ್ರಕರಣಕ್ಕೆ ಸಬಂಧಿಸಿದಂತೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಸಿಐಡಿಯ ಡಿಜಿಪಿ ಡಾ.ಎಂ.ಎ.ಸಲೀಂ ಮೌಖಿಕವಾಗಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಶುಕ್ರವಾರ ಭೇಟಿಯಾಗಿ ಈವರೆಗೆ ಹನಿಟ್ರ್ಯಾಪ್ ಯತ್ನ ಪ್ರಕರಣದಲ್ಲಿ ನಡೆದಿರುವ ವಿಚಾರಣೆ ಕುರಿತು ಡಿಜಿಪಿ ವಿವರಣೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ವಿಚಾರಣೆಯಲ್ಲಿ ಹನಿಟ್ರ್ಯಾಪ್ ಯತ್ನ ಆರೋಪಕ್ಕೆ ಪೂರಕವಾದ ಯಾವುದೇ ಪೂರಾವೆಗಳು ಲಭ್ಯವಾಗಿಲ್ಲ ಎನ್ನಲಾಗಿದೆ. ಪ್ರಕರಣ ಸಂಬಂಧ ಸಚಿವ ರಾಜಣ್ಣ ಅವರ ಆಪ್ತ ಸಹಾಯಕ, ವಿಶೇಷಾಧಿಕಾರಿ ಹಾಗೂ ಗನ್ ಮ್ಯಾನ್‌ಗಳನ್ನು ಕೂಡ ವಿಚಾರಣೆ ನಡೆಸಲಾಗಿದೆ. ಆದರೆ ಕೃತ್ಯದ ಬಗ್ಗೆ ತಮಗೇನು ಗೊತ್ತಿಲ್ಲವೆಂದು ಅವರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಚಿವ ರಾಜಣ್ಣ ಅವರ ವಿಚಾರಣೆ ನಡೆಸಬೇಕಿದ್ದು, ಸಚಿವರ…
ಚಾಮರಾಜನಗರ : ಚಾಮರಾಜನಗರದಲ್ಲಿ ಘೋರವಾದ ಘಟನೆ ನಡೆದಿದ್ದು 14 ವರ್ಷದ ಬಾಲಕನೊಬ್ಬ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರಿನ ಅರಗ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಬಾಲಕನನ್ನು ಸುಭಾಷ್ ಎಂದು ತಿಳಿದುಬಂದಿದೆ.ಮೃತ ಸುಭಾಷ್ ಮರಿಯಾಲ ಗ್ರಾಮದ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.ಇಂದು ಮಧ್ಯಾಹ್ನದ ವೇಳೆ ತಮ್ಮ ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಕುರಿತಂತೆ ಸುಭಾಶ್ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಈತ ತನ್ನ ಮನೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಓದಿನ ಬಗ್ಗೆ ನಿರಾಸಕ್ತಿ ಹೊಂದಿದ್ದ ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.
ಬೆಂಗಳೂರು : ಕೋವಿಡ್ 19 ಅವಧಿಯಲ್ಲಿ ನಡೆದ ಅಕ್ರಮದ ವರದಿಯನ್ನು ಇಂದು ನಿವೃತ್ತ ನ್ಯಾ.ಜಾನ್ ಮೈಕಲ್ ಕುನ್ಹಾ ಅಯೋಗವು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು. ಕಾವೇರಿ ನಿವಾಸದಲ್ಲಿ ಕೋವಿಡ್ ಅಕ್ರಮದ ವರದಿಯನ್ನು ನಿವೃತ್ತ ನ್ಯಾ. ಜಾನ್ ಮೈಕಲ್ ಕುನ್ಹಾ ಆಯೋಗ ವರದಿ ಸಲ್ಲಿಸಿತು. ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಆಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುಮಾರು 7 ಸಂಪುಟವುಳ್ಳ ವರದಿ ಸಲ್ಲಿಕೆ ಮಾಡಲಾಯಿತು. ಒಟ್ಟು 7 ವಾಲ್ಯೂಮ್ ನ 1,808 ಪುಟಗಳು ಇರುವ ವರದಿಯನ್ನು ಸಲ್ಲಿಕೆ ಮಾಡಿತು. ಆಯೋಗವು 1,808 ಪುಟಗಳಿರುವ ವರದಿಯನ್ನು ಸಲ್ಲಿಕೆ ಮಾಡಿತು. ಕೊರೋನಾ ಸಂದರ್ಭದಲ್ಲಿ ನಡೆದ ಹಗರಣಗಳ ಕುರಿತಂತೆ ತನಿಖೆ ನಡೆಸಲು, 2023ರ ಅಗಸ್ಟ್ 25 ರಂದು ಆಯೋಗ ರಚಿಸಲಾಗಿತ್ತು. 2024 ಅಕ್ಟೋಬರ್ 31 ರಂದು ಮೊದಲ ಮಧ್ಯಂತರ ಅವಧಿ ಸಲ್ಲಿಕೆ ಮಾಡಲಾಗಿತ್ತು. 11 ಸಂಪುಟಗಳಲ್ಲಿದ್ದ ಮೊದಲ ತನಿಖೆಯ ವರದಿ ಸಲ್ಲಿಸಲಾಗಿತ್ತು. ಇದೀಗ ಎರಡನೇ ಮಧ್ಯಂತರ ವರದಿಯನ್ನು ಆಯೋಗ ಸಲ್ಲಿಸಿದೆ.
ಉತ್ತರಕನ್ನಡ : ಕೆರೆಯಲ್ಲಿ ಈಜಲು ತೆರಳಿದ್ದ 13 ವರ್ಷದ ಬಾಲಕನೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ತಿಮ್ಮಾಪುರ ಕೆರೆಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಹೌದು ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು, ಕೆರೆಯಲ್ಲಿ ಮುಳುಗಿ ನವಾಜ್ ಖಾಜಾ (13} ಎನ್ನುವ ಬಾಲಕ ಸಾವನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ತಿಮ್ಮಾಪುರ ಕೆರೆಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ AI ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈಗ ಇಂಟರ್ನೆಟ್ನಲ್ಲಿ ಘಿಬ್ಲಿ ಸ್ಟೈಲ್ ಇಮೇಜ್ ಧೂಳೆಬ್ಬಿಸುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ಟುಡಿಯೋ ಘಿಬ್ಲಿ ಶೈಲಿಯ ಫೋಟೋಗಳು ಚರ್ಚೆಯ ವಿಷಯವಾಗಿದೆ.ಎಲ್ಲರೂ ಘಿಬ್ಲಿ ಶೈಲಿಯ ಚಿತ್ರವನ್ನು ರಚಿಸುತ್ತಿದ್ದಾರೆ. ಸದ್ಯಕ್ಕೆ ಘಿಬ್ಲಿ ಇದೀಗ ಟ್ರೆಂಡಿಂಗ್ ನಲ್ಲಿದೆ. ಹೌದು ಇನ್ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಒಂದು ಘಿಬ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಒಂದು ಆಪ್ ನಮ್ಮ ಮೆಟ್ರೋಕ್ಕೂ ಕಾಲಿಟ್ಟಿದ್ದು, ಮೆಟ್ರೋ ನಿಲ್ದಾಣದ ಹಲವು ಘಿಬ್ಲಿ ಚಿತ್ರಗಳನ್ನು BMRCL ಹಂಚಿಕೊಂಡಿದೆ. ಬಿಎಂಆರ್‌ಸಿಎಲ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಟ್ಟು 7 ಚಿತ್ರಗಳನ್ನು ಹಂಚಿಕೊಂಡಿದ್ದು, ಮೊದಲನೇ ಚಿತ್ರದಲ್ಲಿ ನಾಗಸಂದ್ರ ಮೆಟ್ರೋ ನಿಲ್ದಾಣದ ಫೋಟೋ ಹಂಚಿಕೊಂಡಿದೆ. ಬಳಿಕ 2ನೇ ಚಿತ್ರದಲ್ಲಿ ಮೆಟ್ರೋ ಅಧಿಕಾರಿಯ ಚಿತ್ರ ಇದ್ದು, 3ನೇ ಚಿತ್ರದಲ್ಲಿ ಟಿಕೆಟ್ ಕೌಂಟರ್ ಫೋಟೋ ಇದೆ. ಅದೇ ರೀತಿಯಾಗಿ ಪೊಲೀಸ್ ಸಿಬ್ಬಂದಿ ನಿಂತಿರುವ, ಪ್ರವೇಶದ್ವಾರ ಹಾಗೂ ನಿಲ್ದಾಣದ ಹೊರಗಡೆಯಿಂದ ಸೇರಿ ಒಟ್ಟು 7 ಚಿತ್ರಗಳನ್ನು…
ರಾಯಚೂರು : ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿದ್ದು, ರಾಯಚೂರು ಜಿಲ್ಲೆಯಲ್ಲಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಪರೀಕ್ಷಾ ಮೇಲ್ವಿಚಾರಕ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಯಚೂರು ತಾಲೂಕಿನ ಸಿಂಗನೋಡಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆ ವೇಳೆ ಅಭ್ಯರ್ಥಿಗಳ ಬದಲಿಗೆ ಬೇರೆಯವರಿಂದ ಪರೀಕ್ಷೆ ಬರೆಯಿಸಿರುವ ಆರೋಪ ಕೇಳಿ ಬಂದಿದೆ. ಇಬ್ಬರು ವಿದ್ಯಾರ್ಥಿಗಳ ಜಾಗದಲ್ಲಿ ಬೇರೆ ಇಬ್ಬರಿಂದ ಪರೀಕ್ಷೆ ಬರೆದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಿಂದಿ ಪರೀಕ್ಷೆ ವೇಳೆ ಈ ಅಕ್ರಮ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪರೀಕ್ಷಾ ಮೇಲ್ವಿಚಾರಕ ಹಾಗೂ ನಾಲ್ಕು ವಿದ್ಯಾರ್ಥಿಗಳ ವಿರುದ್ದ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೀಗೊಂದು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲಿಸಿದಾಗ, ಬೇರೆ ಅಭ್ಯರ್ಥಿ ಪರೀಕ್ಷೆಗೆ ಕುಳಿತಿರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.













