Author: kannadanewsnow05

ನವದೆಹಲಿ : ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪರಹರಿಸಿದ ಪ್ರಕರಣದಲ್ಲಿ ಸುಪ್ರಿಂಕೋರ್ಟ್​ ಭವಾನಿ ರೇವಣ್ಣ ಅವರಿಗೆ ನೋಟಿಸ್​ ಜಾರಿ ಮಾಡಿದೆ. ನ್ಯಾ. ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಪೀಠದ ವಿಚಾರಣೆ ವೇಳೆ ಹಿರಿಯ ವಕೀಲ ಸಿಬಲ್‌, ಇದು ಅತ್ಯಂತ ದುರದೃಷ್ಟಕರ. ವಿಚಾರಣಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಏಕೆ ತಿರಸ್ಕರಿಸಿತು ಎಂಬುದನ್ನು ಹೈಕೋರ್ಟ್ ಪರಿಗಣಿಸಲಿಲ್ಲ ಎಂದು ವಾದಿಸಿದರು. ಅದಕ್ಕೆ ನ್ಯಾಯಾಧೀಶರು, ಸಿಬಲ್ ನಾವು ರಾಜಕೀಯವನ್ನು ಬಿಟ್ಟುಬಿಡೋಣ ಎಂದು ತಿಳಿಸಿದರು. ಸಿಬಲ್‌ ವಾದಿಸಿ, ನಮಗೂ ರಾಜಕೀಯ ಬೇಡ.ಆದರೆ ಹೈಕೋರ್ಟ್‌ ಆದೇಶ ನೋಡೋಣ ಎಂದರು. ಮಗನ ಅಪರಾಧದಲ್ಲಿ ತಾಯಿಯ ಪಾತ್ರವಿಲ್ಲ. ಆದರೆ ಸಂತ್ರಸ್ತೆಯ ಅಪಹರಣದ ಬಗೆಗಿನ ಪ್ರಕರಣ ಇದು. ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಲು ನಿರ್ದೇಶನ ನೀಡಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯಲ್ಲಿ ದಾಖಲಾಗಿದೆ. ಆಕೆ ಆರೋಪದಿಂದ ಮುಕ್ತ ಎನ್ನುವಂತಿಲ್ಲ, ವಿಚಾರಣೆ ಎದುರಿಸಬೇಕು. ಆಕೆಯನ್ನ ಬಂಧನದಿಂದ ರಕ್ಷಿಸಲು ಹೈಕೋರ್ಟ್ ಕಾರಣ ನೀಡಿದೆ. ವಿಚಾರಣಾ ನ್ಯಾಯಾಲಯವೂ ನಿರೀಕ್ಷಣಾ ಜಾಮೀನು ತಿರಸ್ಕರಸಿದೆ. ಆದರೆ, ಜಾಮೀನು ಏಕೆ ತಿರಸ್ಕಾರವಾಯಿತೆಂದು ಹೈಕೋರ್ಟ್ ಪರಿಗಣಿಸಿಲ್ಲ…

Read More

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಎಂಬ ಕಾಲೇಜು ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಲವ್ ಜಿಹಾದ್ ಕುರಿತು ಎಲ್ಲಿಯೂ ಉಲ್ಲೇಖವಾಗಿಲ್ಲ. ಹೌದು ನೇಹಾ ಹಿರೇಮಠ ಹತ್ಯೆಗೆ ಆರೋಪಿಯ ಹತಾಶೆಯೇ ಕಾರಣ ಎಂದು ಸಿಐಟಿ ಪೊಲೀಸರು ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ, ಲವ್ ಜಿಹಾದ್​ ಕುರಿತ ಯಾವುದೇ ವಿಚಾರಗಳನ್ನು ನಮೂದಿಸಿಲ್ಲ. ಒಟ್ಟು 483 ಪುಟಗಳ ಚಾರ್ಜ್​ಶೀಟ್ ಸಲ್ಲಿಸಲಾಗಿದೆ.ಆರೋಪಿ ಫಯಾಜ್ ವಿರುದ್ಧ ಐಪಿಸಿ ಕಲಂ 302 (ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ), 341(ಒಂದು ತಿಂಗಳ ಜೈಲು ಶಿಕ್ಷೆ) ಹಾಗೂ 506 (ಜೀವ ಬೆದರಿಕೆಗಾಗಿ 7 ವರ್ಷಗಳ ಜೈಲು ಶಿಕ್ಷೆ) ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ. ನೇಹಾಳ ತಂದೆ, ತಾಯಿ, ಸಹೋದರ, ಸಹಪಾಠಿಗಳು, ಗೆಳತಿಯರು, ಬಿವಿಬಿ ಕಾಲೇಜಿನ ಉಪನ್ಯಾಸಕರು ಸೇರಿದಂತೆ ಒಟ್ಟು 99 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿಗಳು, ಸಿಸಿಟಿವಿ ದೃಶ್ಯಾವಳಿಗಳು, ದಾಖಲೆಗಳು, ಮರಣೋತ್ತರ ಶವ…

Read More

ಬೆಂಗಳೂರು : ಮುಡಾ ಹಗರಣದ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ತಿಳಿಸಿದರು. ಈ ಒಂದು ವಿಷಯದ ಕುರಿತಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಿಬಿಐಗೆ ವಹಿಸುವ ವಿಚಾರ‌ವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಪೊಲೀಸರನೇ ಸಮರ್ಥರಿಲ್ಲವಾ? ಎಲ್ಲದಕ್ಕೂ ಸಿಬಿಐ ಸಿಬಿಐ ಅನ್ನುವ ಬಿಜೆಪಿ ತಮ್ಮ ಅವಧಿಯಲ್ಲಿ ಎಷ್ಟು ಕೇಸ್​​​ಗಳನ್ನು ಸಿಬಿಐಗೆ ಕೊಟ್ಟಿದ್ದಾರೆ ಹೇಳಿ? ಈಗೀನ ಸಿಬಿಐ ಮುಖ್ಯಸ್ಥ ಕೂಡ ಕರ್ನಾಟಕದಲ್ಲಿ ಕೆಲಸ ಮಾಡಿದವರು. ನಮ್ಮ ಪೊಲೀಸರು ತನಿಖೆ ವಿಚಾರದಲ್ಲಿ ಸಮರ್ಥರಿದ್ದಾರೆ. ಮುಡಾ ಹಗರವನ್ನ ಸಿಬಿಐಗೆ ವಹಿಸುವುದಿಲ್ಲ ಎಂದು ಸಿಎಂ ಸ್ಪಷ್ಟವಾಗಿ ನಿರಾಕರಿಸಿದರು. ಎಷ್ಟು ಸಲ ಇದರ ಬಗ್ಗೆ ಹೇಳುವುದು? ಮುಡಾದಲ್ಲಿ 50:50 ರದ್ದಾಗಿದೆ. ನನ್ನ ಹೆಂಡತಿಯ ವಿಚಾರವನ್ನು ವಿವಾದ ಮಾಡುತ್ತಿದ್ದಾರೆ. ನಾನು ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಕೇಳಿಲ್ಲ.ನಮ್ಮ ಜಮೀನಿನನ್ನು ನಿಯಮಬಾಹಿರವಾಗಿ ಭೂಸ್ವಾಧೀನ ಮಾಡಿಕೊಂಡಿದ್ದರು. ಅದಕ್ಕೆ ಅವರೇ ತಪ್ಪಾಯಿತು ಎಂದು ಹೇಳಿ ಸೈಟ್ ಕೊಟ್ಟಿದ್ದಾರೆ.…

Read More

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ಅವರ ಪಿಎ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದು, ಯಾವುದೇ ಕ್ಷಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರನ್ನು ಕೂಡ ಇಡಿ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೌದು ಈಗಾಗಲೇ ನಾಗೇಂದ್ರ ಅವರ ಪಿಎ ಹರೀಶ್ ಅನ್ನು ಬಂಧಿಸಿರುವ ಇಡಿ ಅಧಿಕಾರಿಗಳು ಹರೀಶ್ ಹೇಳಿಕೆಯನ್ನು ಆಧರಿಸಿ ಮಾಜಿ ಸಚಿವ ನಾಗೇಂದ್ರ ಅವರನ್ನ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ವಾಲ್ಮೀಕಿ ಹಗರಣದಲ್ಲಿ ಯಾವುದೇ ಕ್ಷಣದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನ ಸಾಧ್ಯತೆ ಎನ್ನಲಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪ್ರಕರಣ ಸಂಬಂಧ ಇಡೀ ಅಧಿಕಾರಿಗಳು ಮೊದಲ ಆರೋಪಿಯನ್ನು ಬಂಧಿಸಿದ್ದಾರೆ ನಾಗೇಂದ್ರ ಪಿಎ ಹರೀಶ್ ಅನ್ನು ಹಿಡಿದಿಕಾರಿಗಳು ಬಂಧಿಸಿದ್ದಾರೆ ಮರಿ ಸಚಿವ ಅಭಿ ನಾಗೇಂದ್ರ ಆಪ್ತ ಸಹಾಯಕ ಹರೀಶ್ ನನ್ನು ಈಡೇ ಅಧಿಕಾರಿಗಳು ಬಂಧಿಸಿದ್ದಾರೆ ಅಲ್ಲದೆ ನಾಗೇಂದ್ರ ಹಾಗೂ ಅಧ್ಯಕ್ಷ ಬಸನಗೌಡ ದದ್ದಲ್…

Read More

ಹೈದ್ರಾಬಾದ್ : ಹೈದರಾಬಾದ್​ನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಸ್ಟೆಲ್ ಮೆಸ್‌ನಲ್ಲಿ ತಮಗೆ ಬಡಿಸಿದ ಆಹಾರದಲ್ಲಿ ಇಲಿ ಇರುವುದನ್ನು ಕಂಡು ಅಸಹ್ಯಪಟ್ಟಿದ್ದಾರೆ. ಚಟ್ನಿಯ ಪಾತ್ರೆಯಲ್ಲಿ ಇಲಿ ಮುಳುಗೇಳುತ್ತಿದ್ದ ವಿಡಿಯೋವನ್ನು ಅವರು ಎಕ್ಸ್​ನಲ್ಲಿ ಶೇರ್ ಮಾಡಿದ್ದಾರೆ. ಹೌದು ಹಾಸ್ಟೆಲ್ ಅಲ್ಲಿ ಕಳಪೆ ಆಹಾರ, ಹುಳ ಬರುವುದನ್ನ ನೋಡಿದ್ದೆವು ಕೇಳಿದ್ದೆವು ಆದರೆ ಇಲ್ಲೊಂದು ಹಾಸ್ಟೆಲ್ ಅಲ್ಲಿ ಚಟ್ನಿಯಲ್ಲಿ ಜೀವಂತ ಇಲಿಯೊಂದು ಈಜಾಡಿದೆ.ಹೈದರಾಬಾದ್​ನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮೆಸ್‌ನಲ್ಲಿ ನೀಡಿದ ಆಹಾರದಲ್ಲಿ ಇಲಿ ಕಂಡುಬಂದಿದೆ ಎಂದು ಹೇಳಿಕೊಂಡಿದ್ದಾರೆ. ಆ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಇದು ಗಂಭೀರ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಹಾಸ್ಟೆಲ್‌ನಲ್ಲಿನ ಅಡುಗೆಯಲ್ಲಿ ಇಲಿ ಪತ್ತೆಯಾಗಿದೆ. ಇದು ಭಯಾನಕವಾದ ವಿಡಿಯೋ ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಲಾಗಿದೆ.ದೊಡ್ಡ ಪಾತ್ರೆಯಲ್ಲಿ ಇರಿಸಲಾಗಿರುವ “ಚಟ್ನಿ”ಯಲ್ಲಿ ಇಲಿ ಈಜುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕೆಲವು ವಿದ್ಯಾರ್ಥಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ರೆಕಾರ್ಡ್ ಮಾಡುತ್ತಿರುವುದನ್ನು ನೋಡಬಹುದು. https://twitter.com/IndianTechGuide/status/1810509183646670878?t=rQEAF_P9U8TgPDM8TYW4fQ&s=19

Read More

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮದ ಎಂ ಡಿ ಮತ್ತು ಅಕೌಂಟೆಂಟ್ ಮಾತನಾಡಿರುವ ಸಂಭಾಷಣೆ ವೈರಲ್ ಆಗಿರುವ ಆಡಿಯೋದ ಕುರಿತು ಪ್ರತಿಕ್ರಿಯ ನೀಡಿದ ಅವರು, ಆಡಿಯೋ ಕುರಿತಂತೆ ನನಗೇನು ಗೊತ್ತಿಲ್ಲ. ನಾನು ಆಡಿಯೋವನ್ನು ಕೇಳಿಲ್ಲ. ಅಲ್ಲದೆ ಪ್ರಕರಣದ ಕುರಿತು ಮುಕ್ತವಾಗಿ ತನಿಖೆ ನಡೆಯಬೇಕೆಂದು ಸ್ವತಹ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಅವರು ತಿಳಿಸಿದರು. ಈ ಒಂದು ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಸ್ವತಹ ಸಚಿವರೆ ಹೇಳಿಕೆ ನೀಡಿದ್ದಾರೆ ಅದಾದ ಬಳಿಕ ಎಸ್ಐಟಿ ಅವರು ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ ಹಿಂದೂ ವಿಚಾರಣೆಗೆ ಕೂಡ ಅವರು ಹಾಜರಾಗಿದ್ದರು. ಹಾಗಾಗಿ ಈ ಒಂದು ಹಗರಣದಲ್ಲಿ ನಾನು ಮೂಗು ತೂರಿಸುವುದಿಲ್ಲ. ಭ್ರಷ್ಟಾಚಾರದಲ್ಲಿ ನಮ್ಮ ಮಂತ್ರಿ ಶಾಸಕರ ಪಾತ್ರವಿಲ್ಲ. ಆದರೆ ಇದರಲ್ಲಿ ಬೇರೆಯವರು ಭಾಗಿಯಾಗಿದ್ದಾರೆ…

Read More

ಬೆಂಗಳೂರು : ರಾಜಕೀಯ ಅಥವಾ ಕೋಮುವಾದ ಉದ್ದೇಶದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ನ್ಯಾಯಾಲಯ ಪುರಸ್ಕರಿಸುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ದ್ವೇಷದ ಭಾಷಣಕಾರರ ವಿರುದ್ಧ ವಿಶೇಷ ಕ್ರಮ ಜರುಗಿಸಿ ಎಂದು ಕೋರಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ಇದೀಗ ಹೈಕೋರ್ಟ್ ವಜಾಗೊಳಿಸಿದೆ. ಹೌದು ದ್ವೇಷ ಭಾಷಣಕಾರರ ವಿರುದ್ಧ ವಿಶೇಷ ಕ್ರಮ ಕೋರಿ ಮೊಹಮ್ಮದ್ ಖಲಿ ಮುಲ್ಲಾ ಸಲ್ಲಿಸಿದ ಪಿಐಎಲ್ ಅರ್ಜಿಯನು ಇದೀಗ ಹೈಕೋರ್ಟ್ ವಜಾಗೊಳಿಸಿದೆ. ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಅವರು ಅರ್ಜಿ ಸಲ್ಲಿಸಿ ಕೋರಿದ್ದರು ಎನ್ನಲಾಗಿದೆ. ಅರ್ಜಿ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ರಾಜಕೀಯ ಅಥವಾ ಕೋಮುವಾದ ಉದ್ದೇಶದ ಅರ್ಜಿ ಪುರಸ್ಕರಿಸಲಾಗುವುದಿಲ್ಲ. ಪಿಐಎಲ್ ನ ಅಂಶಗಳು ನಿಖರವಾಗಿರದೆ ಅಸ್ಪಷ್ಟವಾಗಿವೆ. ಸಾರ್ವಜನಿಕ ಹಿತಾಸಕ್ತಿಗಿಂತ ಬೇರೆ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ರಾಜಕೀಯ ಅಥವಾ ಕೋಮುವಾದ ಉದ್ದೇಶದ ಪಿಐಎಲ್ ಪುರಸ್ಕರಿಸಲಾಗದು ಎಂದು ಸಿಜೆ ಎನ್ವಿ ಅಂಜಾರಿಯಾ ಹಾಗೂ ಕೆ.ವಿ ಅರವಿಂದ್ ಅವರಿಂದ ಪೀಠ ಈ ಆದೇಶ ಹೊರಡಿಸಿದೆ. ದ್ವೇಷದ ಭಾಷಣಕಾರರ ವಿರುದ್ಧ ವಿಶೇಷ ಕ್ರಮ ಕೋರಿ…

Read More

ಬೆಂಗಳೂರು : ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದ ಬಹು ಕೋಟಿ ಹಣ ಅಕ್ರಮ ವರ್ಗಾ ವಣೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳ (ಎಸ್‌ಐಟಿ)ದ ವಿಚಾರಣೆಗೆ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಒಂದು ವಿಚಾರಣೆಗೆ ಹಾಜರಾಗಿದ್ದರು. ಆದರೆ ಇದೀಗ ಮತ್ತೆ ಬಿ ನಾಗೇಂದ್ರ ಹಾಗೂ ಅಧ್ಯಕ್ಷ ಬಸನಗೌಡ ದದ್ದಲ್ ಇಬ್ಬರಿಗೂ SIT ನೋಟಿಸ್ ನೀಡಿದ್ದು, ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ ಎನ್ನಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆಯಿಂದ 8 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಇದೀಗ ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ SIT ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳಿಂದ ಹಣ ಜಪ್ತಿಗೆ ತನಿಖಾಧಿಕಾರಿ ಹೆಸರಿ ನಲ್ಲಿ ಬೆಂಗಳೂರಿನ ಸೇಂಟ್ ಮಾರ್ಕ್‌ಸ್ ರಸ್ತೆಯಲ್ಲಿರುವ ಎಸ್ ಬಿಐನಲ್ಲಿ ಎಸ್‌ಐಟಿ ಖಾತೆ ತೆರೆದಿದೆ. ಈ ಖಾತೆಗೆ ಹಣ ಜಮೆ ಪ್ರಕ್ರಿಯೆ ಆರಂಭವಾ ಗಿದೆ. ನಿಗಮದಿಂದ ದೋಚಿದ್ದ ಹಣದಲ್ಲಿ…

Read More

ಬೆಂಗಳೂರು : ಸದ್ಯ ರಾಜ್ಯದಲ್ಲಿ ವರುಣ ಅಬ್ಬರಿಸುತ್ತಿದ್ದು, ಇನ್ನೊಂದು ಕಡೆ ಡೆಂಘಿ ಕೂಡ ತನ್ನ ಆರ್ಭಟವನ್ನು ಮುಂದುವರೆಸಿದೆ. ಇದೀಗ ಕರ್ನಾಟಕದಲ್ಲಿ ಡೆಂಗ್ಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸದ್ಯ ರಾಜ್ಯದಲ್ಲಿ 7 ಸಾವಿರಕ್ಕೂ ಅಧಿಕ ಕೇಸ್‌ಗಳು ಪತ್ತೆಯಾಗಿವೆ. ಇನ್ನು ಸಿಎಂ ಸಿದ್ದರಾಮಯ್ಯ ಮುಂಜಾಗ್ರತೆ ಕೈಗೊಳ್ಳಲು ಟಾಸ್ಕ್‌ ಪೋರ್ಸ್‌ ರಚನೆ ಮಾಡಲು ಸೂಚನೆ ನೀಡಿದ್ದಾರೆ. ಹೌದು ಇಂದು ವಿಧಾನಸೌಧದಲ್ಲಿ ಮಂಗಳವಾರ ಡಿಸಿ ಹಾಗೂ ಸಿಇಓಗಳ ಜೊತೆಗೆ ಸಭೆ ನಡೆಸಿದ ಸಿದ್ದರಾಮಯ್ಯ ಡಿಸಿ, ಸಿಇಒ ಹಾಗೂ ಡಿಹೆಚ್ಒ ಗಳು ಪ್ರತೀ ದಿನ ಸಮನ್ವಯದಿಂದ ಸಭೆ ನಡೆಸಿ ಡೆಂಗ್ಯೂ ಹರಡದಂತೆ ಕ್ರಮ ಕೈಗೊಳ್ಳಿ ಎರಡು ತಿಂಗಳ ಮಟ್ಟಿಗೆ ಟಾಸ್ಕ್ ಫೋರ್ಸ್ ಹೈ ಅಲರ್ಟ್ ಆಗಿದ್ದು ಡೆಂಗ್ಯೂ ತಡೆಗಟ್ಟಬೇಕು ಏನು ಮಾಡಬೇಕು , ಎಷ್ಟು ಹಣ ಅಗತ್ಯವಿದೆ ಎನ್ನುವುದನ್ನು ತಿಳಿಸಿ. ತಕ್ಷಣ ಹಣ ಬಿಡುಗಡೆಗೆ ಸೂಚಿಸಿದ್ದೇನೆ. ಡೆಂಗ್ಯೂ ಹರಡದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು. ಪ್ರತಿಯೊಂದು ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗ್ಯೂ ಸೋಂಕಿತರಿಗೆ ಸೂಕ್ತವಾದ ಚಿಕಿತ್ಸೆ ಒದಗಿಸಬೇಕು. ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ…

Read More

ಶಿವಮೊಗ್ಗ : ರಾಜ್ಯದಲ್ಲಿ ಡೇಂಗಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದುವರೆಗೂ ಸೊಂಕಿಗೆ 7 ಜನರು ಬಲಿಯಾಗಿದ್ದಾರೆ. ಇದೀಗ ಶಿವಮೊಗ್ಗದಲ್ಲಿ ಶಂಕಿತ ಡೆಂಘಿಗೆ ಮಹಿಳೆಯೋಬ್ಬರು ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಹೌದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ರಶ್ಮಿ ಆರ್ ನಾಯಕ್ (42) ಎನ್ನುವ ಮಹಿಳೆ ಸಾವನ್ನಪ್ಪಿದ್ದಾರೆ. ರಶ್ಮಿ ನಾಯಕ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ನಿವಾಸಿ ಎಂದು ತಿಳಿದು ಬಂದಿದೆ.ಕಳೆದ 15 ದಿನಗಳಿಂದ ರಶ್ಮಿ ಅವರು ಜ್ವರದಿಂದ ಬಳಲುತ್ತಿದ್ದರು.ಇದೀಗ ಅವರು ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Read More