Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದೋಷಾರೋಪ ನಿಗದಿಗೆ ಕೋರ್ಟ್ ದಿನಾಂಕ ಗೊತ್ತು ಪಡಿಸಲಿದೆ. ಪ್ರಕರಣ ಸಂಬಂಧ ಸದ್ಯ ಎಲ್ಲಾ 17 ಆರೋಪಿಗಳು ಕೂಡ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಜಾಮೀನು ರದ್ದು ಕೋರಿರುವ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಪರಿಶೀಲನೆಯಲ್ಲಿದೆ.
ಬೆಂಗಳೂರು : ಈಗಾಗಲೇ ಐಪಿಎಲ್ ಹಬ್ಬ ಶುರುವಾಗಿದ್ದು, ಹಲವು ಮ್ಯಾಚ್ ಗಳು ಮುಗಿದಿವೆ. ಇನ್ನು ಇದೇ ಒಂದು ಐಪಿಎಲ್ ಪಂದ್ಯಾವಳಿಯ ವೇಳೆ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತದೆ. ಇದೀಗ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಐಪಿಎಲ್ ಬೆಟ್ಟಿಂಗ್ಗಳನ್ನು ಪ್ರಮೋಷನ್ ಮಾಡುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಸೈಬರ್ ಕ್ರೈಮ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನೋಟಿಸ್ ಕೊಟ್ಟು ಎಚ್ಚರಿಕೆ ನೀಡಿದ್ದಾರೆ. ಹೌದು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಎನಿಸಿಕೊಂಡಿರೋ ವರುಣ್ ಆರಾಧ್ಯ, ಸೋನುಗೌಡ, ಶಿಲ್ಪಾಗೌಡ, ದೀಪಕ್ ಗೌಡ ಸೇರಿ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಸೈಬರ್ ಕ್ರೈಂ ಪೊಲೀಸರಿಂದ ವಾರ್ನಿಂಗ್ ಸಿಕ್ಕಿದೆ. ಇವರ ಇನ್ಸ್ಟಾಗ್ರಾಂ ಚಟುವಟಿಕೆಗಳನ್ನು ನೋಡಿ ಈ ವಾರ್ನಿಂಗ್ ನೀಡಲಾಗಿದೆ.ಇದು ಮರುಕಳಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ವಾರ್ನಿಂಗ್ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಚಟುವಟಿಕೆ ಗಮನಿಸಿರುವ ಪೊಲೀಸರು ಕರೆ ಮಾಡಿ ಇವರುಗಳನ್ನು ವಿಚಾರಣೆಗೆ ಪೊಲೀಸರು ಕರೆದಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಜನ ರೀಲ್ಸ್ ಇನ್ಫ್ಲುಯೆನ್ಸರ್ಗಳ ವಿಚಾರಣೆ ನಡೆದಿದೆ ಎನ್ನಲಾಗಿದೆ. ಇಲ್ಲಿ ಕೇವಲ ಬೆಂಗಳೂರಿನವರು ಮಾತ್ರ…
ಬೆಂಗಳೂರು : ಪತಿಗೆ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಮನನೊಂದ ಪತ್ನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಬ್ಬಾಳದ ಕನಕನಗರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಬಾಹರ್ ಅಸ್ಮಾ (29) ಎಂದು ತಿಳಿಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಬಶೀರ್ ವುಲ್ಲಾ ಎಂಬಾತನನ್ನು ಮದುವೆ ಆಗಿದ್ದರು. ಆತನಿಗೆ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧವಿದೆ ಎಂಬ ಆರೋಪ ಕೇಳಿಬಂದಿದೆ.ಆದರೆ ಪೋಷಕರು ಪತಿಯೇ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಂಗಳೂರು : ರಾಜ್ಯದಲ್ಲಿ ಹಾಲಿನ ದರ, ವಿದ್ಯುತ್ ದರ ಮತ್ತು ಡೀಸೆಲ್ ದರ ಏರಿಕೆಯನ್ನು ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಿನ್ನೆ ಮೈಸೂರಿನಲ್ಲಿ ಜನಾಕ್ರೋಶ ಯಾತ್ರೆ ಆರಂಭ ಮಾಡಿದೆ. ಇದರ ಬದನಲ್ಲೇ ನಿನ್ನೆ ಕೇಂದ್ರ ಸರ್ಕಾರ ಎಲ್ ಪಿ ಜಿ ಸಿಲಿಂಡರ್ ಗ್ಯಾಸ್ ಬೆಲೆ ರೂ.50 ಹಾಗೂ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಸುಂಕ ಹೆಚ್ಚಳ ಮಾಡಿದೆ. ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಜನಾಕ್ರೋಶ ಯಾತ್ರೆ ಬಿಜೆಪಿ ಮುಂದುವರಿಸಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಜನರಿಗೆ ತಿಳಿಸಲಿ ಎಂದು ಟಾಂಗ್ ನೀಡಿದರು. ಈ ಕುರಿತು ಕೇಂದ್ರ ಸರ್ಕಾರದಿಂದಲೂ ಬೆಲೆ ಏರಿಕೆ ವಿಚಾರವಾಗಿ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಡಿಕೆ ಶಿವಕುಮಾರ್ ಇದೀಗ ಆಕ್ರೋಶ ಹೊರ ಹಾಕಿದ್ದಾರೆ. ಈಗ ಬಿಜೆಪಿಯವರು ಬಹಳ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಆಕ್ರೋಶದಲ್ಲಿ ಇವತ್ತೇ ಬೋರ್ಡ್ ಬದಲಾವಣೆ ಮಾಡಬೇಕು. ನನ್ನ ಫೋಟೋ ಸಿದ್ದರಾಮಯ್ಯ ಫೋಟೋ ತೆಗೆಯಬೇಕು ಎಂದು ಕಿಡಿ ಕಾರಿದರು. ಕೇಂದ್ರ ಸರ್ಕಾರ ಸಹ ಬೆಲೆ ಏರಿಕೆ…
ಮಂಡ್ಯ : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ, ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ಆರಂಭವಾಗಿದ್ದು, ನಿನ್ನೆ ಮೈಸೂರಲ್ಲಿ ಈ ಒಂದು ಯಾತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ್ದರು. ಇದೀಗ ಈ ಒಂದು ಜನಾಕ್ರೋಶ ಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಮಂಡ್ಯದಲ್ಲಿ ಯಾತ್ರೆ ಆರಂಭವಾಗಲಿದೆ. ಹೌದು ಕಾಂಗ್ರೆಸ್ ಸರ್ಕಾರದ ವಿರುದ್ಧ ಎರಡನೇ ದಿನದ ಜನಕ್ರೋಶ ಯಾತ್ರೆ ಇಂದು ಆರಂಭವಾಗಲಿದೆ. ಇಂದು ಮಂಡ್ಯದಲ್ಲಿ ಬಿಜೆಪಿಯ ಜನಾಕ್ರೋಶ ಯಾತ್ರೆ ನಡೆಯಲಿದೆ. ಬೆಳಿಗ್ಗೆ 10:30ಕ್ಕೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯ ಬಳಿಯಿಂದ ಜನಾಕ್ರೋಶ ಯಾತ್ರೆ ಆರಂಭವಾಗಿ, ಸಿಲ್ವರ್ ಜೂಬ್ಲಿ ಪಾರ್ಕ್ ವರೆಗೆ ಈ ಒಂದು ಜನಾಕ್ರೋಶ ಯಾತ್ರೆ ಸಾಗಲಿದೆ. ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಪಕ್ಷ ನಾಯಕರಾದ ಆರ್ ಅಶೋಕ, ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಸಿಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಜನಾಕ್ರೋಶ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಸಹ ಇಂದು…
ಮೈಸೂರು : ಮೈಸೂರು ಜಿಲ್ಲೆಯ ನಂಜನಗೂಡಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾವೇರಿ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಅಭಿಯಂತರ ಮತ್ತು ಅಕೌಂಟ್ ಸೂಪರಿಂಟೆಂಡೆಂಟ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ. ಕಾರ್ಯಪಾಲಕ ಅಭಿಯಂತರ ಕಾವೇರಿ ರಂಗನಾಥ್ ಮತ್ತು ಅಕೌಂಟ್ ಸೂಪರಿಂಟೆಂಡೆಂಟ್ ಉಮಾ ಮಹೇಶ್ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಅಧಿಕಾರಿಗಳು 1.45 ಲಕ್ಷ ರೂ.ಲಂಚದ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚಾಮರಾಜನಗರದ ಅಬ್ದುಲ್ ಅಜೀಜ್ ಎಂಬವರಿಂದ ಅಧಿಕಾರಿಗಳು 1.45 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದರು. ಅಬ್ದುಲ್ ಅಜೀಜ್ ಕಾವೇರಿ ನೀರಾವರಿ ನಿಗಮದ ಕಾಮಗಾರಿಗಳ ಪ್ರಥಮ ದರ್ಜೆಯ ಗುತ್ತಿಗೆದಾರರಾಗಿದ್ದು, 5 ಕಾಮಗಾರಿಗಳನ್ನು ಮಾಡಿದ್ದಾರೆ. ಅದರ ಬಾಬ್ತು ಬಿಲ್ 23 ಲಕ್ಷ ರೂ ಬಾಕಿ ಇದ್ದು, ಅದನ್ನು ನೀಡಲು ಶೇ.6 ಕಮಿಷನ್ ಆದ 1.45 ಲಕ್ಷ ರೂ ಹಣ ನೀಡುವಂತೆ ಕಾವೇರಿ ರಂಗನಾಥ್ ಮತ್ತು ಉಮಾ ಮಹೇಶ್ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ಬಾಲಕಿಯರು ಇಬ್ಬರು ತೋಟದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದ ವೇಳೆ ಆಯತಪ್ಪಿ ಕೃಷಿ ಹೊಂಡಕ್ಕೆ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಿನ್ನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಕುರುಪ್ಪಲ್ಲಿ ಗ್ರಾಮದಲ್ಲಿ ಈ ಒಂದು ಘೋರ ಘಟನೆ ನಡೆದಿದ್ದು ಮೃತ ಬಾಲಕಿಯರನ್ನು ರಾಧಮ್ಮ (17), ಸಾಹಿತಿ (14) ಎಂದು ತಿಳಿದುಬಂದಿದೆ. ಚೇಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟ ಬಾಲಕಿಯರು ಕುರುಪ್ಪಲ್ಲಿ ಗ್ರಾಮದವರು. ರಾಧಮ್ಮ ಆದಿನಾರಾಯಣರೆಡ್ಡಿ ಎಂಬವರ ಪುತ್ರಿ. ಬಾಗೇಪಲ್ಲಿಯ ನ್ಯಾಷನಲ್ ಕಾಲೇಜ್ ಪಿಯುಸಿ ವಿದ್ಯಾರ್ಥಿನಿ. ಸಾಹಿತಿ ರಾಮಲಿಂಗ ರೆಡ್ಡಿ ಎಂಬವರ ಪುತ್ರಿ. ಇವರು ಆದರ್ಶ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.
ಬೆಂಗಳೂರು : ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂಬ ಆಧಾರದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಜಾಮೀನು ಕೇಳುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಎರಡನೇ ಬಾರಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಸಿರುವ ಅತ್ಯಾಚಾರ ಘಟನೆ 2021ರಲ್ಲಿ ನಡೆದಿದೆ. ಆದಾದ ನಾಲ್ಕೂವರೆ ವರ್ಷಗಳ ನಂತರ ದೂರು ದಾಖಲಿಸಲಾಗಿದೆ. ಅದಕ್ಕೆ ದೂರುದಾರೆ ಯಾವುದೆ ವಿವರಣೆ ನೀಡಿಲ್ಲ. ಹೀಗಿದ್ದರೂ ಅರ್ಜಿದಾರರು ಜೈಲಿನಲ್ಲಿ ಮುಂದುವರಿಯುವುದು ಹೇಗೆ? ಆದ್ದರಿಂದ ಪ್ರಜ್ವಲ್‌ಗೆ ಜಾಮೀನು ನೀಡಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದ ಇತರೆ ಆರೋಪಿಗಳ ವಿರುದ್ಧ ತಡೆಯಾಜ್ಞೆ ಇದ್ದರೂ ಪ್ರಜ್ವಲ್ ರೇವಣ್ಣ ವಿರುದ್ಧ ನಂಬಲರ್ಹ ಸಾಕ್ಷಿಗಳಿವೆ. ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ…
ಬೆಂಗಳೂರು : ಕಳೆದ ಏಪ್ರಿಲ್ 2 ರಂದು ಬೆಸ್ಕಾಂನ ಸುಂಕದಟ್ಟೆ ಕದಟ್ಟೆ ವ್ಯಾಪ್ತಿಯಲ್ಲಿ ವಿದ್ಯುತ್ ವಿದ್ಯುತ್ ಪರಿವರ್ತಕ (ಟಿಸಿ ರಿಪೇರಿ ವೇಳೆ ವಿದ್ಯುತ್ ಸ್ಪರ್ಶದಿಂದ ತೀವ್ರ ಸುಟ್ಟ ಗಾಯಗಳಾಗಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವರ್ ಮ್ಯಾನ್ ಪ್ರಕಾಶ್ (45) ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಸುಂಕದಕಟ್ಟೆಯ ವಿಭಾಗದ ಬೈರವೇಶ್ವರ ಕೈಗಾರಿಕಾ ಪ್ರದೇಶದ ಬಳಿ ಅವಘಡ ನಡೆದಿತ್ತು. 848ನೇ ಸಂಖ್ಯೆಯ ವಿದ್ಯುತ್ ಪರಿವರ್ತಕ ದುರಸ್ತಿ ಮಾಡುವಾಗ ಶಾಕ್ ತಗುಲಿದ್ದು ಮೈ ಎಲ್ಲಾ ಗಂಭೀರ ಸುಟ್ಟ ಗಾಯಗಳಾಗಿತ್ತು. ತಕ್ಷಣ ಅವರನ್ನು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸೇಂಟ್ ಜಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ವಿಜಯಪುರ : ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಲಾಗುತ್ತೆ ಎಂದು ಅಲಲ್ಲಿ ಈ ಮಾತು ಕೇಳಿ ಬರುತ್ತಿತ್ತು. ಆದರೆ ಯಾವಾಗ ಹೈಕಮಾಂಡ್ ನಾಯಕರು ರಾಜ್ಯದ ನಾಯಕರಿಗೆ ಖಡಕ್ ಎಚ್ಚರಿಕೆ ಕೊಟ್ಟರೊ ಅವಾಗಿನಿಂದ ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಚರ್ಚೆ ನಿಂತು ಹೋಯ್ತು. ಇದೀಗ ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿಯವರು ಉತ್ತರ ಕರ್ನಾಟಕದ ಈ ನಾಯಕನಿಗೆ ಭವಿಷ್ಯದಲ್ಲಿ ಸಿಎಂ ಆಗುವ ಯೋಗ ಇದೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಹೌದು ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ ನುಡಿದು ಗಮನ ಸೆಳೆಯುತ್ತಾರೆ. ಇದೀಗ ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ಭವಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯ ಚರ್ಚೆ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತದೆ. ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿಯವರು ವಿಜಯಪುರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ…














