Author: kannadanewsnow05

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಈ ಮೊದಲು ಪರಪ್ಪನ ಅಗ್ರಹಾರ ಜೈಲು ಸೇರಿದಾಗ ಅಲ್ಲಿನ ರೌಡಿ ಶೀಟರ್ಗಳ ಜೊತೆ ಕುಳಿತು ಹರಟೆ ಹೊರೆಡೆಯುವುದು ಸಿಗರೇಟ್ ಸಿರುವುದು ಭಾರಿ ಚರ್ಚೆಯಾಗಿತ್ತು. ಇದಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು ಕೂಡ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾತಿಥ್ಯ ಮುಂದುವರೆದಿದೆ. ಹೌದು ಜೈಲಿನಲ್ಲಿ ಕೈದಿಗಳ ಕಳ್ಳಾಟ ಇನ್ನೂ ನಿಂತಿಲ್ಲ. ವಿಚಾರಣಾಧೀನ ಕೈದಿಗಳ ಕಳ್ಳಾಟಕ್ಕೆ ಬ್ರೇಕ್ ಇಲ್ಲ ಎಂಬಂತಾಗಿದೆ. ನಟೋರಿಯಸ್ ರೌಡಿಶೀಟರ್ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಜೈಲಲ್ಲೇ ಭರ್ಜರಿಯಾಗಿ ಬರ್ತ್ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾನೆ. ಆ್ಯಪಲ್ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್‌ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಈತ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟೋರಿಯಸ್ ರೌಡಿಶೀಟರ್. ಮೊಬೈಲ್‌ನಲ್ಲಿ ಬರ್ತ್ಡೇ ಪಾರ್ಟಿಯ ವಿಡಿಯೋ, ಪೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಜೈಲಿನಿಂದಲೇ ವಿಡಿಯೋ, ಪೋಟೋ ಪೋಸ್ಟ್ ಆಗಿದೆ. ಗುಬ್ಬಚ್ಚಿ ಸೀನನ ಶಿಷ್ಯಂದಿರಿಂದ ಪೋಸ್ಟ್ ಆಗಿದೆ. ಜೈಲಧಿಕಾರಿಗಳು,…

Read More

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐ ಟಿ ಅಧಿಕಾರಿಗಳು ಶೋಧ ನಡೆಸುವ ವೇಳೆ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲೆಯ ಸೇಷನ್ಸ್ ಕೋರ್ಟ್ ಅಕ್ಟೋಬರ್ 9ಕ್ಕೆ ಆದೇಶ ಕಾಯ್ದಿರಿಸಿದೆ. ಇಂದು ದಕ್ಷಿಣ ಕನ್ನಡ ಜಿಲ್ಲಾ ಸೇಷನ್ಸ್ ನ್ಯಾಯಾಲಯದಲ್ಲಿ ಈ ಒಂದು ಪ್ರಕರಣದ ಕುರಿತು ವಿಚಾರಣೆ ನಡೆಯಿತು.ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಿತಿ. ಈ ವೇಳೆ ವಾದ ಪ್ರತಿವಾದ ಆಲಿಸಿ ನ್ಯಾಯಾಧೀಶರು ಆದೇಶ ಕಾಯ್ದಿಸಿದ್ದಾರೆ. ಅಕ್ಟೋಬರ್ 9ಕ್ಕೆ ಆದೇಶ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.

Read More

ಬೆಂಗಳೂರು : ಬೆಂಗಳೂರಲ್ಲಿ ಭಾರಿ ಅನಾಹುತ ಒಂದು ತಪ್ಪಿದ್ದು ನಮ್ಮ ಮೆಟ್ರೋ ರೈಲುಗಳಿಗೆ ಹಾರಿ ಪ್ರಯಾಣಿಕನ್ನೊಬ್ಬ ಆತ್ಮಹತ್ಯೆಗೆ ಎಪಿಸಿರುವ ಘಟನೆ ವರದಿಯಾಗಿದೆ ಬೆಂಗಳೂರಿನ ಮೆಜೆಸ್ಟಿಕ್ ಬಳಿ ಇರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಈ ಒಂದು ಘಟನೆ ನಡೆದಿದೆ. ನಮ್ಮ ಮೆಟ್ರೋಲ್ ರೈಲುಗಳಿಗೆ ಹಾರಿ ಪ್ರಯಾಣಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಮಾದಾವರ ಮತ್ತು ರೇಷ್ಮೆ ಸಂಸ್ಥೆ ಹಸಿರು ಮಾರ್ಗದ ಹಳಿಗೆ ಪ್ರಯಾಣಿಕ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ನಮ್ಮ ಮೆಟ್ರೋ ರೈಲಿನ ಅಡಿ ಪ್ರಯಾಣಿಕ ಸಿಲುಕಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪ್ರಯಾಣಿಕನ ರಕ್ಷಣೆಯಲ್ಲಿ ತೊಡಗಿದ್ದಾರೆ. ಘಟನೆ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Read More

ಚಾಮರಾಜನಗರ : ಕೌಟುಂಬಿಕ ಕಲಹದಿಂದ ಬೇಸತ್ತ ಪತಿ, ಪತ್ನಿಯ ಎದುರೇ ನದಿಗೆ ಹಾರಿದ ಘಟನೆ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರ ಎಂಬ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಪತ್ನಿ ರಾಜೇಶ್ವರಿ ಎದುರುಗಡೆ ಪತಿ ಮಂಜುನಾಥ್ ನದಿಗೆ ಹಾರಿದ್ದಾರೆ.  ಬೈಕ್ ನಲ್ಲಿ ತೆರಳುತ್ತಿರುವಾಗಲೇ ಪದೇಪದೇ ದಂಪತಿಗಳ ನಡುವೆ ಜಗಳ ಆಗಿದೆ. ಇಬ್ಬರೂ ಬೈಕ್ ನಲ್ಲಿ ತೆರಳುವಾಗ ಕಲಹ ನಡೆದಿದೆ. ನಾ ಸತ್ತರೆ ನಿಮಗೆ ನೆಮ್ಮದಿ ಎಂದು ಪತಿ ಮಂಜುನಾಥ್ ಬೈಕ್ ನಿಲ್ಲಿಸಿ ಪತ್ನಿಯ ಎದುರಲ್ಲೇ ನದಿಗೆ ಹಾರಿದ್ದಾರೆ. ಮಂಜುನಾಥ್ ನದಿಯಲ್ಲಿ ಕಣ್ಮರೆಯಾಗಿದ್ದು, ಸದ್ಯ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಡಿಮೆ ಸ್ಥಳಕ್ಕೆ ಕೊಳ್ಳೇಗಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಮಂಡ್ಯ : ನವೆಂಬರ್ ಗೆ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಲ್ಲರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ ಸೀನಿಯರ್ಗಳು ಇದ್ದಾರೆ ಅವರಿಗೆಲ್ಲ ಮಂತ್ರಿ ಆಸೆ ಇದೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಹೈಕಮಾಂಡ್ಗೆ ಬಿಟ್ಟಿದ್ದು ಎಂದು ವಸತಿ ಸಭಾ ಜಮೀರ್ ಅಹ್ಮದ್ ಖಾನ್ ಸಚಿವ ಸಂಪುಟ ಪುನಾರಚನೆ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿಕೆ ನೀಡಿರುವ ಸಂಸದ ಎಲ್ ಆರ್ ಶಿವರಾಮೇಗೌಡ ಹಾಗೂ ಶಾಸಕ ಡಾ.ರಂಗನಾಥ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ನೀಡಿದ್ದು ಇದರ ಬೆನ್ನಲ್ಲೆ ಸಚಿವ ಜಮೀರ್ ಅಹ್ಮದ್ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಬಯಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.ಡಿಕೆ ಶಿವಕುಮಾರ್ ಗು ಮುಖ್ಯಮಂತ್ರಿ ಆಗಬೇಕು ಅನ್ನುವ ಆಸೆ ಇದೆ ಹಾಗಾಗಿ ಅವರು ಸಹ ಸಿಎಂ ಆಗಬೇಕು ಅಂತ ನಾನು ಬಯಸುತ್ತೇನೆ ಐದು ವರ್ಷ ಸಿಎಂ ಸಿದ್ದರಾಮಯ್ಯ ಅವಧಿ ಪೂರೈಸುತ್ತಾರೆ ಎಂದಿದ್ದಾರೆ.

Read More

ಚಾಮರಾಜನಗರ : ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆಯಲ್ಲಿ ಸ್ಪೋಟಕ ಅಂಶ ಬಯಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಸೇಡಿನ ಹತ್ಯೆ ಎಂಬುದು ಬಯಲಾಗಿದೆ. ಹೌದು ಹುಲಿಯನ್ನು ಕೊಂದಿದ್ದು, ಕಳ್ಳ ಬೇಟೆಗೆ ಅಲ್ಲ ಬದಲಿಗೆ ಸೇಡು ತೀರಿಸಿಕೊಳ್ಳಲು ಎಂದು ತನಿಖೆಯಲ್ಲಿ ಬಯಲಾಗಿದೆ. ಅಲ್ಲದೇ ಮೃತ ಹುಲಿಯ ಇನ್ನುಳಿದ ಕಳೆಬರವನ್ನ ಅರಣ್ಯ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಹುಲಿಯ ತಲೆ ಹಾಗು ಮುಂಗಾಲು ಮಣ್ಣಿನಲ್ಲಿ ಹೂಳಲಾಗಿತ್ತು. ಹುಲಿಯ ಮಧ್ಯ ಭಾಗದ ದೇಹವನ್ನು ಎಲೆಗಳಲ್ಲಿ ಮುಚ್ಚಿಟ್ಟಲಾಗಿತ್ತು. ಹುಲಿಯ ಹಿಂಭಾಗದ ದೇಹವನ್ನು ಮರದ ಕೆಳಗೆ ಎಸೆಯಲಾಗಿತ್ತು. ಹುಲಿಗೆ ವಿಷ ಹಾಕಿ ಸತ್ತ ಬಳಿಕ ಕೊಡಲಿಯಿಂದ ಕತ್ತರಿಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಕೊಡಲಿಯಿಂದ ಕೊಚ್ಚಿ ಮೂರು ಭಾಗ ಮಾಡಿದ್ದಾನೆ. ಹಸು ಕೊಂದಿದ್ದಕ್ಕೆ ಹುಲಿ ಕೊಂದರಾ ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಕಣ್ಮರೆ ಆಗಿರುವ ಹಸುವಿನ ಮಾಹಿತಿಯನ್ನು ಕಲೆ ಹಾಕಲು ಸಿಬ್ಬಂದಿಗಳು ಮುಂದಾಗಿದ್ದಾರೆ.

Read More

ಬೆಂಗಳೂರು : ಗ್ಯಾರಂಟಿ ಯೋಜನೆಗೆ NDRF ಹಣ ಬಳಕೆ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಇದೀಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, NDRF ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, NDRF ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿಲ್ಲ. ಬಿಜೆಪಿಯವರಿಗೆ ಒಂದು ರೀತಿ ಕಾಮಾಲೆ ರೋಗ ಇದ್ದಂತೆ. ಗ್ಯಾರಂಟಿ ಯೋಜನೆ ಸಕ್ಸಸ್ ಆಗಿದ್ದಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಗ್ಯಾರಂಟಿ ಜಾರಿ ಮಾಡಲು ಆಗಲ್ಲ ಎಂದು ಮೋದಿ ಹೇಳಿದ್ದರು. ಕರ್ನಾಟಕದಲ್ಲಿ ಎರಡೂವರೆ ವರ್ಷದಿಂದ ಗ್ಯಾರಂಟಿ ಸಕ್ಸಸ್ ಆಗಿದೆ ಎಂದರು. ಹಾಗಾಗಿ ಬಿಜೆಪಿಯವರಿಗೆ ತಳಮಳ ಆಗಿ ಬಿಟ್ಟಿದೆ. ನಮ್ಮ ಯೋಜನೆಗಳನ್ನು ಬಿಜೆಪಿಯವರು ಕಾಪಿ ಮಾಡುತ್ತಿದ್ದಾರೆ.ಬಿಹಾರ್, ದೆಹಲಿಕ್ಸ್ ರಾಜಸ್ತಾನ್ ಹಾಗು ಮಹಾರಾಷ್ಟ್ರದಲ್ಲಿ ಏನು ಮಾಡಿದ್ದಾರೆ? ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇನ್ನು MLC ಸಿಟಿ ರವಿ ಹೈಕಮಾಂಡ್ ಗೆ ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ, ಬಿಜೆಪಿಯವರಿಗೆ ಯಾಕೆ…

Read More

ಬೆಂಗಳೂರು : ಬೆಂಗಳೂರಲ್ಲಿ ಇಸ್ರೇಲ್ ರಾಯಭಾರಿ ಕಚೇರಿಯಲ್ಲಿ 6 ‘RDX’ ಇಟ್ಟಿರೋದಾಗಿ ಇ-ಮೇಲ್ ಬೆದರಿಕೆ ಸಂದೇಶ ಬಂದಿದ್ದು, ಶುಕ್ರವಾರ ಪ್ರಾರ್ಥನೆ ವೇಳೆ ಬ್ಲಾಸ್ಟ್ ಆಗುತ್ತೆ ಎಂದು ಬೆದರಿಕೆ ಸಂದೇಶ ಬಂದಿದೆ. ಸೆ.22 ರಂದು Cho_ramaswami@hotmail ಎಂಬ ಐಡಿಯಿಂದ ಮೇಲ್ ಸಂದೇಶ ಬಂದಿದೆ.ಜೊತೆಗೆ ಹೈಕೋರ್ಟ್ ಗು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.ಸದ್ಯ ರಾಮಸ್ವಾಮಿ ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಇಷ್ಟು ದಿನ ಕಾಂಗ್ರೆಸ್ ನಲ್ಲಿ ಸೆಪ್ಟೆಂಬರ್, ಅಕ್ಟೊಬರ್ ನವೆಂಬರ್ ನಲ್ಲಿ ಕ್ರಾಂತಿ ಆಗಲಿದೆ ಎಂದು ಕಾಂಗ್ರೆಸ್ ನಾಯಕರು ಸೇರಿ ಬಿಜೆಪಿ ನಾಯಕರು ಹೇಳಿದ್ದೆ ಹೇಳಿದ್ದು, ಇದೀಗ ಶಾಸಕ ಪ್ರದೀಪ್ ಈಶ್ವರ್ ರಾಜ್ಯ ಬಿಜೆಪಿಯಲ್ಲಿ ಅಕ್ಟೊಬರ್ ಕ್ರಾಂತಿ ಆಗಲಿದೆ ಎಂದು ಸ್ಫೋಟಕವಾದ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಅಕ್ಟೊಬರ್ ಕ್ರಾಂತಿ ಆಗುತ್ತದೆ. ಆರ್.ಅಶೋಕ್ ವಿಪಕ್ಷ ಸ್ಥಾನಕ್ಕೆ ಕಂಟಕವಿದೆ. ಆರ್.ಅಶೋಕ್ ಔಟ್ ಗೊಯಿಂಗ್ ವಿಪಕ್ಷ ನಾಯಕ. ಸುನೀಲ್ ಕುಮಾರ್ ಇನ್ ಕಮಿಂಗ್ ವಿಪಕ್ಷ ನಾಯಕ ಎಂದು ಪದ್ಮನಾಭನಗರದ ಜ್ಯೋತಿಷ್ಯಾಲಯ ಸುಳ್ಳು ಹೇಳುತ್ತದೆ. ಹೀಗಾಗಿ ಬೇರೆ ಜ್ಯೋತಿಷ್ಯಾಲಯಕ್ಕೆ ಹೋಗಿದ್ದೆ. ಆರ್.ಅಶೋಕ್ ಚೇರ್ ಅಕ್ಟೊಬರ್ ತಿಂಗಳಲ್ಲಿ ಅಲ್ಲಾಡುತ್ತೆ ಬಿಜೆಪಿಯ ಮನೆ ಒಡೆದು ನೂರು ಬಾಗಿಲು ಆಗಿದೆ ಎಂದರು.

Read More

ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು ಇದುವರೆಗೂ ಬೆಂಗಳೂರು ಹೊರತುಪಡಿಸಿ, 63% ರಷ್ಟು ಜಾತಿ ಗಣತಿ ಸಮೀಕ್ಷೆ ನಡೆದಿದೆ ಇದೀಗ ಇಂದಿನಿಂದ ಬೆಂಗಳೂರಿನಲ್ಲಿ ಜಾತಿ ಗಣತಿ ಸಮೀಕ್ಷೆ ಆರಂಭವಾಗಿದ್ದು, ಆರಂಭದಲ್ಲೇ ಹಲವು ವಿಘ್ನಗಳು ಎದುರಾಗಿವೆ.ಇದೀಗ ಹಲವು ಸಮಸ್ಯೆ ಎದುರಿಸುತ್ತಿರುವ ಸಿಬ್ಬಂದಿಗಳು ಸಮಸ್ಯೆ ಬಗೆಹರಿಸಿ ಎಂದು 200ಕ್ಕೂ ಹೆಚ್ಚು ಸಿಬ್ಬಂದಿಗಳು ಜಾತಿಗಣತಿ ಸಮೀಕ್ಷೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೌದು ಬೆಂಗಳೂರಿನಲ್ಲಿ ಜಾತಿಗಣತಿಗೆ ಆರಂಭದಲ್ಲೇ ವಿಘ್ನವಾಗಿದ್ದು, ಸಿಬ್ಬಂದಿಯನ್ನು ಸೆಲೆಕ್ಟ್ ಮಾಡಿದ್ದೆ ಒಂದು ವಾರ್ಡಿಗೆ ಸಿಬ್ಬಂದಿಯನ್ನು ನಿಯೋಜಿಸಿದ್ದೇ ಮತ್ತೊಂದು ವಾರ್ಡ್ ಗೆ ನೂರಕ್ಕೆ ಎಷ್ಟು ಸಿಬ್ಬಂದಿಗೆ ವಾರ್ಡ್ ಬದಲಾಗಿದೆ. ದೂರ ಹೋಗಿ ಸಮೀಕ್ಷೆ ಮಾಡುವುದು ಹೇಗೆ ಅಂತ ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಹೋಗುವುದರಲ್ಲಿ ನಮಗೆ ಸಮಯ ಆಗುತ್ತದೆ ಸಮೀಕ್ಷೆ ಮಾಡುವುದು ಹೇಗೆ ಅಂತ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ.ಸರ್ಕಾರಿ ನೌಕರರದರೆ ಎಲ್ಲವನ್ನು ಸಹಿಸಿಕೊಳ್ಳಬೇಕಾ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಒಬ್ಬರು ಸಿಬ್ಬಂದಿ ಸಂಪೂರ್ಣವಾಗಿ ಕುರುಡವಾಗಿದ್ದು, ನನಗೆ…

Read More