Author: kannadanewsnow05

ಬೆಂಗಳೂರು : ಇತ್ತೀಚಿಗೆ ರಾಜ್ಯ ಸರ್ಕಾರ ಹಾಲು, ಮೊಸರು ವಿದ್ಯುತ್ ಸೇರಿದಂತೆ ಡೀಸೆಲ್ ದರ ಏರಿಕೆ ಮಾಡಿ ರಾಜ್ಯದ ಜನರಿಗೆ ದರ ಏರಿಕೆಯ ಶಾಕ್ ನೀಡಿತು. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು ಪ್ರತಿ 1 ಲೀಟರ್ ನೀರಿಗೆ 1 ಪೈಸೆ ಹೆಚ್ಚಳಕ್ಕೆ ಇದೀಗ BWSSB ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ ಹಾಗಾಗಿ ಬೆಂಗಳೂರಿನ ಜನತೆಗೆ ಇದೀಗ ಮತ್ತೊಂದು ದರ ಏರಿಕೆಯ ಶಾಕ್ ಎದುರಾಗಿದೆ. ಈ ಕುರಿತು BWSSB ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಅವರು ಮಾಹಿತಿ ನೀಡಿದ್ದು ನೀರಿನ ಬೆಲೆ ಹೆಚ್ಚಿಸಲು ಬೆಂಗಳೂರು ಜಲ ಮಂಡಳಿ ನಿರ್ಧರಿಸಿದೆ.ಒಂದು ಲೀಟರ್ ನೀರಿಗೆ ಗರಿಷ್ಠ 1 ಪೈಸೆ ಹೆಚ್ಚಳಕ್ಕೆ ಬಿಡಬ್ಲ್ಯೂಎಸ್ಎಸ್ಬಿ ನಿರ್ಧಾರ ಕೈಗೊಂಡಿದೆ. ಗೃಹ ಬಳಕೆ ಬಳಕೆ ನೀರು ಸಂಪರ್ಕ ಒಂದು ಲೀಟರ್ 1 ಪೈಸೆ ಹೆಚ್ಚಳ, 8,000 ಲೀಟರ್ ಒಳಗಿನ ನೀರು ಸಂಪರ್ಕಕ್ಕೆ 0.15 ಹೆಚ್ಚಳ 8 ರಿಂದ 25 ಸಾವಿರಕ್ಕೆ 0.40 ಪೈಸೆ…

Read More

ಬೆಳಗಾವಿ : ಬೆಳಗಾವಿಯಲ್ಲಿ ಘೋರವಾದ ಘಟನೆ ನಡೆದಿದ್ದು, ಯುವಕನಿಗೆ ಮೊಬೈಲ್ ಗೀಳು ಇತ್ತು. ಇದರಿಂದ ಆತನ ತಂದೆ ಕಾಲೇಜಿಗೆ ಹೋಗು ಅಂತಾ ಹೇಳಿದ್ದಕ್ಕೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. ಮೃತ ಯುವಕನನ್ನು ಸಾಗರ್ ತುಕಾರಾಂ ಕುರಾಡೆ (20) ಎಂದು ತಿಳಿದುಬಂದಿದೆ. ಸಾಗರ್ ಸದಲಗಾ ಸರ್ಕಾರಿ ಪ್ರಥಮ ವರ್ಷ ಬಿಎ ವ್ಯಾಸಂಗ ಮಾಡುತ್ತಿದ್ದ. ಮೊಬೈಲ್‌ ಗೀಳು ಹೆಚ್ಚಿತ್ತು. ಯಾವಾಗಲೂ ಮನೆಯಲ್ಲಿ ಮೊಬೈಲ್ ನಲ್ಲೇ ಮುಳುಗಿಹೋಗಿದ್ದ.ಕಾಲೇಜಿಗೆ ಹೋಗು ಅಂದರೆ ಕೇಳದೇ ಮೊಬೈಲ್ ನೋಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಕಾಲೇಜಿಗೆ ಹೋಗುವಂತೆ ಪೋಷಕರು ಪದೇ ಪದೇ ಒತ್ತಡ ಹೇರುತ್ತಿದ್ದರಿಂದ ನಗ್ರಾಲ್ ಗ್ರಾಮದ ತನ್ನ ಮನೆಯ ಮುಂದಿರುವ ಹಳೆಯ ಮನೆಯಲ್ಲಿ ಸಾಗರ್ ನೇಣಿಗೆ ಕೊರಳೊಡ್ಡಿದ್ದಾನೆ. ಸಾಗರ್ ಅವರ ತಂದೆ ಚಿಕ್ಕೋಡಿಯ ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಇವರು ತಂದೆ ತಾಯಿ ಹಾಗೂ ಕಿರಿಯ ಸಹೋದರನನ್ನು ಅಗಲಿದ್ದಾರೆ

Read More

ಬೆಳಗಾವಿ : ಬೆಳಗಾವಿಯಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು, ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಇಂಜಿನಿಯರಿಂಗ್ ವಿದ್ಯಾರ್ಥಿ ಒಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ, ಬೆಳಗಾವಿಯ ರಾಮನಗರದಲ್ಲಿರುವ ಚಂದ್ರಕಾಂತ ಕಾಗವಾಡ ಬಾಯ್ಸ್ ಹಾಸ್ಟೇಲ್ ನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಯನ್ನು ಪ್ರಜ್ವಲ್ ಕುಪ್ಪಾನಟ್ಟಿ (20) ಎಂದು ಗುರುತಿಸಲಾಗಿದೆ. ಪ್ರಜ್ವಲ್ ನಿನ್ನೆ ಕಾಲೇಜಿಗೆ ಹೋಗದೆ ತನ್ನ ರೂಮಿನಲ್ಲಿಯೇ ಇದ್ದ. ಸಂಜೆ ಸ್ನೇಹಿತ ಬಂದು ರೂಮಿನ ಬಾಗಿಲು ಬಡಿದಾಗ ಪ್ರಜ್ವಲ್ ಬಾಗಿಲು ತೆಗೆಯಲಿಲ್ಲ. ಈ ವೇಳೆ ಕಿಟಕಿಯಿಂದ ನೋಡಿದಾಗ ಪ್ರಜ್ವಲ್ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ರಾಯಭಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದ ನಿವಾಸಿಯಾಗಿರುವ ಪ್ರಜ್ವಲ್ ಬೆಳಗಾವಿಯ ಇಂಜಿನಿಯರಿಂಗ್ ಕಾಲೇಜು ಒಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಪ್ರಜ್ವಲ್ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.ಸ್ಥಳಕ್ಕೆ ಮಾಳಮಾರುತಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಆಹಾರ ಇಲಾಖೆ ಸಮರ ಸಾರಿದ್ದು, ಆಹಾರ ಗುಣಮಟ್ಟಗಳ ಕುರಿತಂತೆ ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಕಡೆಗಳಲ್ಲಿ ಹಲವು ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿ ಕೆಲವನ್ನು ಈಗಾಗಲೇ ಬ್ಯಾನ್ ಮಾಡಿದೆ. ಇದೀಗ ಆಹಾರ ಇಲಾಖೆಯು ತುಪ್ಪ ಕೋವಾ ಐಸ್ ಕ್ರೀಮ್ ಮತ್ತು ನೀರಿನ ಬಾಟಲ್ ಗಳ ಪರೀಕ್ಷೆ ನಡೆಸಿದ್ದು, ಅದರಲ್ಲಿ ಹಲವು ಮಾದರಗಳಲ್ಲಿ ರಾಸಾಯನಿಕ ಅಂಶ ಪತ್ತೆಯಾಗಿದೆ ಎಂದು ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಸ್ ಕ್ರೀಮ್ ಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದ್ದು, 92 ಐಸ್ ಕ್ರೀಮ್ ಘಟಕಗಳಿಗೆ ನೋಟಿಸ್ ನೀಡಲಾಗಿದೆ. ತಯಾರಿಕಾ ಘಟಕಗಳಲ್ಲಿ ಲೋಪ ಬಂದ ಹಿನ್ನೆಲೆಯಲ್ಲಿ ಇದೀಗ 92 ಘಟಕಗಳಿಗೆ ನೋಟಿಸ್ ನೀಡಲಾಗಿದೆ. ಇನ್ನು 6 ಐಸ್ ಕ್ರೀಂ ಘಟಕಗಳಿಗೆ ಈಗಾಗಲೇ 38 ವಿಧಿಸಲಾಗಿದ್ದು, ಐಸ್ ಕ್ರೀಮ್ ಕೂಡ ಸೇಫ್ ಅಲ್ಲ ಅನ್ನೋದು ಆಹಾರ ಇಲಾಖೆಯ ಪರೀಕ್ಷೆಯಲ್ಲಿ ಬಯಲಾಗಿದೆ ಎಂದು ಸಚಿವ ದಿನೇಶ್…

Read More

ಬೆಂಗಳೂರು : ರಾಜ್ಯದಲ್ಲಿ ಆಹಾರ ಇಲಾಖೆ ಸಮರ ಸಾರಿದ್ದು, ಆಹಾರ ಗುಣಮಟ್ಟಗಳ ಕುರಿತಂತೆ ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಕಡೆಗಳಲ್ಲಿ ಹಲವು ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿ ಕೆಲವನ್ನು ಈಗಾಗಲೇ ಬ್ಯಾನ್ ಮಾಡಿದೆ. ಇದೀಗ ಐಸ್ ಕ್ರೀಮ್ ಮತ್ತು ಪನ್ನೀರ್ ಆದ ಬಳಿಕ ತುಪ್ಪ ಹಾಗು ಕೋವಾ ಸರದಿ ಆಗಿದ್ದು, ಕೋವಾದಲ್ಲೂ ಕೂಡ ಕಲಬೆರಿಕೆ ಅಂಶ ಇದೀಗ ಆಹಾರ ಇಲಾಖೆಯ ಪರೀಕ್ಷೆಯಲ್ಲಿ ಹಾನಿಕಾರಕ ಅಂಶ ಬಯಲಾಗಿದೆ ಎಂದು ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬೆಂಗಳೂರಿನ ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಸಿಹಿ ತಿಂಡಿಗಳಿಗೆ ಬಳಸುವ ಕೋವಾದಲ್ಲಿ ಕಲಬೆರಿಕೆ ಅಂಶ ಬಯಲಾಗಿದೆ. ಕೋವಾದಲ್ಲಿ ಕಲಬೆರಿಕೆ ವಿಚಾರ ಇದೀಗ ಬಹಿರಂಗವಾಗಿದೆ. ಆಹಾರ ಇಲಾಖೆ ಪರೀಕ್ಷೆಯಲ್ಲಿ ಇದೀಗ ಕಲಬೆರಿಕೆ ಬಯಲಾಗಿದೆ. ಐಸ್ ಕ್ರೀಮ್ ಪನ್ನೀರ್ ಆಯ್ತು ಇದೀಗ ಕೊವಾದಲ್ಲಿ ಕಲಬರಿಕೆ ಅಂಶ ಪತ್ತೆಯಾಗಿದ್ದು ಹಾಗಾಗಿ ಜನರು ಈ ಕುರಿತು ಎಚ್ಚರಿಕೆ ವಹಿಸಬೇಕು . ಇನ್ನು 296…

Read More

ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮನೆಗಳ್ಳತನ ಮಾಡುತ್ತಿದ್ದ ನೇಪಾಳಿ ಗ್ಯಾಂಗ್ ಒಂದನ್ನು ಬೆಂಗಳೂರಿನ ತಲಘಟ್ಟಪುರ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಲಾಲ್, ಕಮಲ್, ಕಿರಣ್, ನೇತ್ರ ಹಾಗು ಬಹದ್ದೂರ್ ಮತ್ತು ರಾಜೇಶ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ. ಐವರು ಆರೋಪಿಗಳನ್ನ ಬೆಂಗಳೂರಿನ ತಲಘಟ್ಟಪುರ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬೀಗ ಹಾಕಿದ ಮನೆಗಳನ್ನು ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಇತ್ತೀಚಿಗೆ ನೇಪಾಳ ಮೂಲದವರಿಂದಲೇ ಅತಿ ಹೆಚ್ಚು ದರೋಡೆ ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿತ್ತು.ಬಂಧಿತರಿಂದ 50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದೀಗ ಅರೆಸ್ಟ್ ಆಗಿರುವ ಎಲ್ಲಾ ಐದು ಆರೋಪಿಗಳನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

Read More

ಬಾಗಲಕೋಟೆ : ಮುಡಾ ಆರೋಪದಿಂದ ಸಿಎಂ ಸಿದ್ದರಾಮಯ್ಯ ಮುಕ್ತರಾಗಲಿ ಎಂದು ಪೂಜೆ ನಡೆಸಲಾಗಿದೆ. ಹೌದು ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮಾನಿಯಿಂದ ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬಂದಿರುವ ಎಲ್ಲಾ ಕಂಟಕ ದೂರ ಆಗಲೆಂದು ಅಭಿಮಾನಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸುಮಾರು 10 ಕಿಲೋಮೀಟರ್ ದೀರ್ಘ ದಂಡ ನಮಸ್ಕಾರ ಹಾಕಿ ಅಭಿಮಾನಿ ಪೂಜಿ ಸಲ್ಲಿಸಲಿದ್ದಾರೆ. ಸಂಗಮ ಕ್ರಾಸ್ ನಿಂದ ಕೂಡಲಸಂಗಮದವರೆಗೆ ದೀರ್ಘ ದಂಡ ನಮಸ್ಕಾರ ಹಾಕಲಿದ್ದಾರೆ. ಸಂಗಮನಾಥ ದೇಗುಲಕ್ಕೆ ಪೂಜೆ ಸಲ್ಲಿಸಲಿದ್ದಾರೆ, ವಿಜಯಪುರದ ಯಾರನಾಳ ಗ್ರಾಮದ ನಿವಾಸಿ ಶ್ರೀಶೈಲ್ ವಾಲಿಕಾರ್ ಅವರು ಈ ಒಂದು ಸೇವೆ ಸಲ್ಲಿಸಿದ್ದಾರೆ. ಮೈಮೇಲೆ ಹಸ್ತದ ಬಟ್ಟೆ ತೊಟ್ಟು ಕಾಂಗ್ರೆಸ್ ಶಾಲು ಧರಿಸಿ ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದಾರೆ.

Read More

ರಾಮನಗರ : ಅಪಘಾತ ಒಂದರಲ್ಲಿ ಅಳಿಯ ಸಾವನಪ್ಪಿರುವ ಸುದ್ದಿಯನ್ನು ಕೇಳಿ ಸೋದರತ್ತೆಯು ಕೂಡ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಶಿವನಹಳ್ಳಿಯಲ್ಲಿ ನಡೆದಿದೆ. ಶಿವನಹಳ್ಳಿ ಗ್ರಾಪಂ ಬಿಲ್‌ ಕಲೆಕ್ಟರ್‌ ನಾಗೇಶ್‌(42) ಅಪಘಾತದಲ್ಲಿ ಸಾ*ವಿಗೀಡಾಗಿದ್ದರೆ, ಅವರ ಸೋದರತ್ತೆ ಶಿವರುದ್ರಮ್ಮ(63) ಸುದ್ದಿ ತಿಳಿಯುತ್ತಿದ್ದಂತೆ ಆಘಾತಗೊಂಡು ಸಾವಿಗೀಡಾಗಿದ್ದಾರೆ. ಭಾನುವಾರ ಮೇಲುಕೋಟೆಯಲ್ಲಿ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಮೇಲು ಕೋಟೆಗೆ ಹೋಗಿದ್ದರು.ಮದುವೆ ಮುಗಿಸಿ ಹಿಂದಿರುಗುತ್ತಿರುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಗೇಶ್‌ ಸ್ಥಳದಲ್ಲೇ ಸಾವಿಗೀಡಾದರೆ, ಇವರ ಪತ್ನಿ ನೀಲಮ್ಮ ಪ್ರಜ್ಞೆ ಕಳೆದುಕೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಾಗೇಶ್‌ ಅಪಘಾತದಲ್ಲಿ ಸಾ*ವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ಇತ್ತ ಶಿವನಹಳ್ಳಿ ಗ್ರಾಮದಲ್ಲಿ ಇವರ ಸೋದರತ್ತೆ ಶಿವರುದ್ರಮ್ಮ ತೀವ್ರ ಆಘಾತಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿತ್ತಾದರೂ ಕೂಡ ಶಿವರುದ್ರಮ್ಮ ಹೃದಯಾಘಾತದಿಂದ ಸಾವನಪ್ಪಿದ್ದಾರೆ.

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಕೊಲೆ ಪ್ರಕರಣದ ಪ್ರಮುಖ ಆರೋಪಿ A1ಪವಿತ್ರಾಗೌಡ ಸೇರಿದಂತೆ ಎಲ್ಲ ಆರೋಪಿಗಳು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆಯ ಬಳಿಕ ನ್ಯಾಯಾಧೀಶರು ಮೇ 20ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿದರು. ಇಂದು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ವಿಚಾರಣೆ ನಡೆಯಿತು. A1 ಪವಿತ್ರಾಗೌಡ, ನಂದೀಶ್, , ವಿನಯ್, ನಾಗರಾಜ್, ಪವನ್, ಲಕ್ಷ್ಮಣ್, ದೀಪಕ್, ಕಾರ್ತಿಕ್, ಪ್ರದೋಷ್ ಹಾಗು ಕೇಶವಮೂರ್ತಿ ಸೇರಿದಂತೆ ಎಲ್ಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದರು. ಇನ್ನು A2 ನಟ ದರ್ಶನ್ ಹೊರತುಪಡಿಸಿ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೆ ವೇಳೆ ದರ್ಶನ್ ಪರ ವಕೀಲರು ಅನಾರೋಗ್ಯದಿಂದ ಹಾಜರಾತಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕೋರ್ಟ್ ಗೆ ಗೈರಾಗಿದ್ದ ದರ್ಶನ್ ಪರ ವಕೀಲರಿಗೆ ಎಚ್ಚರಿಕೆ ನೀಡಿದರು. ಕೋರ್ಟ್ ಗೆ ಗೈರಾಗಿದ್ದ ದರ್ಶನ್ ಪರ ವಕೀಲರಿಗೆ ಯಾವುದೇ ಕಾರಣಕ್ಕೂ ಕೋರ್ಟ್ ವಿಚಾರಣೆಗೆ ಗೈರಾಗಬಾರದು…

Read More

ವಿಜಯನಗರ : ಸದ್ಯ ಈರುಳ್ಳಿ ಹಾಗು ಟೊಮೆಟೊ ದರದಲ್ಲಿ ಭಾರಿ ಕುಸಿತ ಕಂಡಿದ್ದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ರೈತರು ಟೊಮೆಟೊ ಮತ್ತು ಈರುಳ್ಳಿಯನ್ನು ರಸ್ತೆಗೆ ಸುರಿದು ಪ್ರತಿಭಟನೆ ಮಾಡಿದರು. ಹೌದು ರೈತರು ಟೊಮೆಟೊ ಬೆಳೆದು ಉತ್ತಮ ಬೆಲೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಮಾರುಕಟ್ಟೆಗೆ ಟೊಮೆಟೊ, ಈರುಳ್ಳಿಯನ್ನು ತಂದಿದ್ದರು.ಮಾರುಕಟ್ಟೆಯಲ್ಲಿ 20 ಕೆಜಿ ಟೊಮೆಟೊ ಟ್ರೇ ದರ ರೂ. 20 ಮತ್ತು 30ಕ್ಕೆ ಕುಸಿತಗೊಂಡಿದೆ. ಅಲ್ಲದೇ ಸಂತೆಯಲ್ಲಿ 3 ಕೆಜಿ ಟೊಮೆಟೊ 10 ರೂ.ಗೆ ಮಾರಾಟವಾಗುತ್ತಿದೆ. ತಾಲೂಕು ಕೇಂದ್ರಗಳಲ್ಲಿ ಟೊಮೆಟೊ ಮತ್ತು ಈರುಳ್ಳಿಯನ್ನು ಖರೀದಿ ಮಾಡಲು ಸರ್ಕಾರ ಮುಂದಾಗಬೇಕು. ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಅದನ್ನು ಖರೀದಿ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂದು ತಹಶೀಲ್ದಾರ್‌ಗೆ ರೈತರ ನಿಯೋಗ ಮನವಿಯನ್ನು ಸಲ್ಲಿಕೆ ಮಾಡಿದೆ. ಖರೀದಿ ಕೇಂದ್ರದಲ್ಲಿ ಕ್ವಿಂಟಾಲ್‌ಗೆ 4 ಸಾವಿರ ರೂ. ನಂತೆ ದರವನ್ನು ನಿಗದಿ ಮಾಡಬೇಕು ಎಂದು ರೈತರು ಅಗ್ರಹಿಸಿದ್ದಾರೆ.

Read More