Author: kannadanewsnow05

ಬೆಂಗಳೂರು : ಮಾಜಿ ಸಚಿವ ಬಿ. ನಾಗೇಂದ್ರಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯಪಾಲ ಥಾವರ್ ಚೆಂದ ಗೆಹ್ಲೊಟ್ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದಾರೆ. ಹೌದು ಬಿ.ನಾಗೇಂದ್ರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದಾರೆ. ED ಅಧಿಕಾರಿಗಳು ಪ್ರಸಿಕ್ಯೂಶನ್ ಗೆ ಅನುಮತಿ ಕೋರಿದ್ದರು. ಹೀಗಾಗಿ ಶನಿವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಸಿಕ್ಯೂಶನ್ ಗೆ ಕಳೆದ ಒಂದು ತಿಂಗಳ ಹಿಂದೆನೇ ಜಾರಿ ನಿರ್ದೇಶನಲಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಶನಿವಾರ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Read More

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂತ ಹಂತವಾಗಿ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಅದರಲ್ಲಿ ಪ್ರಮುಖವಾಗಿ ಮಹಿಳೆಯರಿಗೆ ಎಂದು ಜಾರಿ ಮಾಡಿದ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಸದ್ಯಕ್ಕೆ ಮಾರ್ಚ್ ತಿಂಗಳ ಹಣ ಅಕೌಂಟಿಗೆ ಜಮೆ ಆಗಲ್ಲ ಎಂದು ತಿಳಿದು ಬಂದಿದೆ. ಹೌದು ರಾಜ್ಯ ಸರ್ಕಾರ 16 ನೇ ಕಂತಿನ ಹಣವನ್ನ ಜನವರಿ ತಿಂಗಳಿನಲ್ಲಿ ಮಹಿಳೆಯರ ಖಾತೆಗೆ ಜಮಾ ಮಾಡಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಕಳೆದ ಮೂರ್ನಾಲ್ಕು ತಿಂಗಳ ಗೃಹಲಕ್ಷ್ಮಿ ಹಣ ಸರಿಯಾಗ ಖಾತಗೆ ಜಮಾ ಆಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಹಾಗೂ ರಾಜ್ಯದ ಮಹಿಳೆಯರು ಅಸಮಾಧಾನವನ್ನ ಹೊರಹಾಕಿದ್ದಾರೆ. ಬಳಿಕ ಜನೆವರಿ ಹಾಗು ಫೆಬ್ರವರಿ ತಿಂಗಳ ಹಣ ಮಹಿಳೆಯರ ಖಾತೆಗೆ ಜಮೆ ಆಗಿತ್ತು. ಆದರೆ ಇದೀಗ ರಾಜ್ಯಾಧ್ಯಂತ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.…

Read More

ಗದಗ : ಇತ್ತೀಚಿಗೆ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಗದಗದಲ್ಲಿ ಕಾಮುಕ ತಂದೆ ಒಬ್ಬ ಮಗಳ ಮೇಲೆ ಕಳೆದು ಒಂದು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಹೌದು ಗದಗ ಜಿಲ್ಲೆಯ ಮುಳಗುಂದದಲ್ಲಿ ಈ ಒಂದು ಘಟನೆ ನಡೆದಿದ್ದು, ನನ್ನ ಅತಿ ಕಳೆದ ಒಂದು ವರ್ಷಗಳಿಂದ ತನ್ನ 16 ವರ್ಷದ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಈ ಹಿನ್ನೆಲೆ ಈಗ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ತಾಯಿ ದೂರು ನೀಡಿದ ನಂತರ ಇದೀಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಬಾಲಕಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೆಡಿಕಲ್ ಟೆಸ್ಟ್ ಬಳಿಕ ಬಾಲಕಿ ಗರ್ಭಿಣಿ ಆಗಿರುವುದು ತಿಳಿದುಬಂದಿದೆ. ಇದ್ದ ಆರೋಪಿ ತಂದೆಯನ್ನು ಅರೆಸ್ಟ್ ಮಾಡಿರುವ ಮುಳುಗುಂದ ಠಾಣೆ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Read More

ಚಿಕ್ಕಮಗಳೂರು : ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ನಾಲ್ವರು ಶಿಕ್ಷಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಶೃಂಗೇರಿ ತಾಲೂಕಿನ ಕುಂಚೆಬೈಲು ಗಣಪತಿ ದೇಗುಲ ಬಳಿ ಈ ಒಂದು ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕುಂಚೆಬೈಲು ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಪಲ್ಟಿಯಾಗಿದೆ. ಕೊಗ್ರೆ ಸರ್ಕಾರಿ ಶಾಲೆಯ ಶಿಕ್ಷಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈ ಒಂದು ಘಟನೆ ಕುರಿತು ಪ್ರಕರಣ ದಾಖಲಾಗಿದೆ.

Read More

ಬೆಳಗಾವಿ : ಬೆಳಗಾವಿಯಲ್ಲಿ ಬೀದಿ ನಾಯಿ ಕಚ್ಚಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಶಿವಶಂಕರ್ ಬಸವಣ್ಣಪ್ಪ ಪರಸಪ್ಪಗೋಳ್ ಮೃತ ದುರ್ದೈವಿ ಎಂದು ಬಂದಿದೆ. ಶಿವಶಂಕರಿಗೆ ಕಳೆದ 6 ತಿಂಗಳ ಹಿಂದೆ ಬೀದಿ ನಾಯಿ ಕಚ್ಚಿತ್ತು.ಈ ವೇಳೆ ಗಾಯದ ನಂಜು ಹೆಚ್ಚಾಗಿ ಶಿವಶಂಕರ್ ಊಟ ಮತ್ತು ನೀರನ್ನು ಬಿಟ್ಟಿದ್ದ. ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಶಿವಶಂಕರ್ ದಾಖಲಾಗಿದ್ದ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಶಂಕರ್ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

Read More

ಕಲಬುರ್ಗಿ : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಾಲು ಸಾಲು ಸರಣಿ ದರೋಡೆ ಪ್ರಕರಣಗಳು ನಡೆದಿವೆ. ಮಂಗಳೂರು, ಬೀದರ್ ಬ್ಯಾಂಕಿನ ಹಣ ದರೋಡೆ ಬೆನ್ನಲ್ಲೇ ಇದೀಗ ಖದೀಮರು ಕಲಬುರಗಿಯಲ್ಲಿ ಎಸ್‌ಬಿಐ ಎಂಟಿಎಂಗೆ ಕನ್ನ ಹಾಕಿದ್ದಾರೆ. ಗ್ಯಾಸ್ ಕಟರ್ ಬಳಸಿ ಕಳ್ಳರು ATM ನಿಂದ 18 ಲಕ್ಷ ರೂ. ಕದ್ದೊಯ್ದಿರುವ ಘಟನೆ ಕಲಬುಗರಿಯ ಪೂಜಾರಿ ಚೌಕ್‌ನಲ್ಲಿ ನಡೆದಿದೆ. ಹೌದು ಇತ್ತೀಚೆಗೆ ಬೀದರ್​ನಲ್ಲಿ ಇಬ್ಬರಿಗೆ ಶೂಟ್​ ಮಾಡಿ ಎಟಿಎಂ ಹಣ ದೋಚಿಕೊಂಡು ಹೋಗಿದ್ದರು. ಇದರ ಬೆನ್ನಲ್ಲೇ ಮಂಗಳೂರಿನಲ್ಲಿ ಬ್ಯಾಂಕ್​ ದರೋಡೆಯಾಗಿತ್ತು. ಇದೀಗ ಕಲಬುರಗಿಯಲ್ಲಿ ಮತ್ತೊಂದು ಎಟಿಎಂ ದರೋಡೆಯಾಗಿದೆ. ಕಲಬುರಗಿಯಲ್ಲಿ ಏಪ್ರಿಲ್ 9ರ ನಸುಕಿನ ಜಾವ 3 ಗಂಟೆ ಸುಮಾರಿಗೆ ಹರಿಯಾಣದ ಮೂಲದ ಗ್ಯಾಂಗ್ ಎಟಿಎಂಗೆ ನುಗ್ಗಿದೆ. ತಡರಾತ್ರಿ 2.18ಕ್ಕೆ ಕಾರೊಂದು ಪಾಸ್ ಆಗಿದೆ. ಅದಾಗಿ 48 ನಿಮಿಷದಲ್ಲೇ ಎಂಟಿಎಂ ಕಳ್ಳತನವಾಗಿದೆ. ಹೀಗಾಗಿ ಇದೇ ಕಾರಿನಲ್ಲಿ ಖದೀಮರು ಬಂದಿರುವ ಶಂಕೆ ವ್ಯಕ್ತವಾಗಿದೆ. ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದ್ದನ್ನ ಗಮನಿಸಿ ಎಟಿಎಂಗೆ ನುಗ್ಗಿರುವ ಬಗ್ಗೆ ಪೊಲೀಸರು ಅನುಮಾನ…

Read More

ಉಡುಪಿ : ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ರಾಜೀನಾಮೆ ಕುರಿತಾಗಿ ನಮ್ಮ ಪಕ್ಷದಲ್ಲಿ ರಾಜಿನಾಮೆ ವಿಚಾರ ಬರುವುದಿಲ್ಲ. ಯಾವಾಗ ಬೇಕಾದರೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಗಬಹುದು. ಆದರೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಗುವಾಗ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಉಡುಪಿಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿಕೆ ನೀಡಿದರು. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೊಬ್ಬ ಕಾರ್ಯಕರ್ತ ಪಕ್ಷ ನನಗೆ ಒಂದು ಜವಾಬ್ದಾರಿ ಕೊಟ್ಟಿತ್ತು. ಇನ್ನೊಂದು ಜವಾಬ್ದಾರಿ ಕೊಟ್ಟರು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕೆಲಸ ಮಾಡುವುದು ನನ್ನ ಕರ್ಮ ಏನೇ ಜವಾಬ್ದಾರಿ ಕೊಟ್ಟರೂ ಸಹ ನಾನು ನಿಭಾಯಿಸುತ್ತೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪಳನಿಸ್ವಾಮಿ ಭೇಟಿಯಾಗಿದ್ದಾರೆ. ಎಐಎಡಿಎಂಕೆ ಜೊತೆಗಿನ ಮೈತ್ರಿ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ಕೇಂದ್ರ ಗೃಹ ಸಚಿವರನ್ನು ಭೇಟಿ ಆಗಿರುವುದರಿಂದ ಸಂದೇಶ ಸ್ಪಷ್ಟವಾಗಿದೆ. ನಾನು ಪೊಸಿಷನ್ನಲ್ಲಿ ಇರಬೇಕು ಅನ್ನೋದು ಪಕ್ಷಕ್ಕೆ ಗೊತ್ತಿದೆ. ಮೈತ್ರಿಗೆ ಯಾವುದು ಸರಿಯಾದ ನಿಲುವು ಎಂಬುವುದು ಪಕ್ಷಕ್ಕೆ ಗೊತ್ತು. ಕಾರ್ಯಕರ್ತರಾಗಿ ನಾನು…

Read More

ಬೆಂಗಳೂರು : ರಾಜ್ಯದಲ್ಲಿ ಇತ್ತೀಚಿಗೆ ಹಾಲು ಮೊಸರು ವಿದ್ಯುತ್ ಹಾಗೂ ಡೀಸೆಲ್ ದರ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಪೋಷಕರಿಗೆ ಬಿಗ್ ಶಾಕ್ ನೀಡಲು ಖಾಸಗಿ ಶಾಲೆಗಳು ಮುಂದಾಗಿದ್ದು, ಖಾಸಗಿ ಶಾಲೆಗಳ ವಾಹನದ ಶುಲ್ಕ ದರ ಹೆಚ್ಚಳ ಮಾಡಲು ಖಾಸಗಿ ಶಾಲಾ ವಾಹನ ಸಂಘ ಇದೀಗ ನಿರ್ಧಾರ ಕೈಗೊಂಡಿದೆ. ಹೌದು ಶಾಲಾ ವಾಹನ ಶುಲ್ಕ ಹೆಚ್ಚಳಕ್ಕೆ ಇದೀಗ ನಿರ್ಧರಿಸಲಾಗಿದೆ. ಖಾಸಗಿ ಶಾಲಾ ವಾಹನ ಸಂಘದಿಂದ ಈ ಒಂದು ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರತಿ ಕುಟುಂಬಕ್ಕೆ ತಿಂಗಳಿಗೆ 500 ರಿಂದ 600 ರೂ. ದರ ಹೆಚ್ಚಳ ಆಗುವ ಸಾಧ್ಯತೆ ಇದೆ. ಸದ್ಯ ಶಾಲಾ ವಾಹನ ಶುಲ್ಕ 2 ಸಾವಿರದಿಂದ 2100 ರೂಪಾಯಿ ಶುಲ್ಕ ಇದೆ. ಶಾಲಾ ವಾಹನ ಶುಲ್ಕ ಏರಿಕೆ ಆದರೆ ಸುಮಾರು 2500 ರಿಂದ 3000 ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಪೋಷಕರಿಗೆ ಈ ಒಂದು ಶುಲ್ಕ ಹೊರೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ…

Read More

ಹಾಸನ : ನಿನ್ನೆ ಪ್ರಕಟವಾದ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 79 ಅಂಕ ಬಂದಿದ್ದರೂ ಕಡಿಮೆ ಎಂದು ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ‌‌. ಇಲ್ಲಿನ ಶಿಕ್ಷಕ ಪ್ರಕಾಶ್ ಅವರ ಪುತ್ರ 18 ವರ್ಷದ ಮನೋಜ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಇಲ್ಲಿನ ಶಿಕ್ಷಕ ಪ್ರಕಾಶ್ ಅವರ ಪುತ್ರ 18 ವರ್ಷದ ಮನೋಜ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಮನೋಜ್​ ಅರಸೀಕೆರೆ ನಗರದ ಅನಂತ ಪಿಯು ಕಾಲೇಜಿನಲ್ಲಿ ಪಿಸಿಎಂಬಿ ಸೈನ್ಸ್ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ. ಪರೀಕ್ಷೆಯಲ್ಲಿ ಮನೋಜ್‌ 79% ಅಂಕ ಗಳಿಸಿದ್ದಾನೆ. ಆದರೂ ಅಂಕ ಕಡಿಮೆ ಬಂತೆಂದು ನೊಂದ ಆತ ನಿನ್ನೆ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೋಜ್‌ ಕಾಲೇಜಿನ ಅತ್ಯಂತ ಪ್ರತಭಾನ್ವಿತ ವಿದ್ಯಾರ್ಥಿಯಾಗಿದ್ದ. ಸದಾ ಓದುವುದರಲ್ಲಿ ಟಾಪರ್‌ ಕೂಡಾ ಆಗಿದ್ದ. ಎಸ್‌ಎಸ್‌ಎಲ್‌ಸಿಯಲ್ಲಿ 98% ಅಂಕ ಗಳಿಸುವ ಮೂಲಕ ಇಡೀ ತಾಲೂಕಿನಲ್ಲಿ ಗಮನಸೆಳೆದಿದ್ದ. ಆದರೆ ಇದೀಗ ಆತನ ಆತ್ಮಹತ್ಯೆ ಸ್ಥಳೀಯರನ್ನು ಆಘಾತಕ್ಕೆ…

Read More

ಬೆಂಗಳೂರು : ಕೊಡುಗು ಜಿಲ್ಲೆ ಮೂಲದ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಅತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹೆಣ್ಣೂರು ಠಾಣೆ ಪೊಲೀಸರು, ಇತ್ತೀಚಿಗೆ ಮೃತನ ಮೊಬೈಲ್‌ ಹಾಗೂ ಡೆತ್‌ನೋಟ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಇದೀಗ ಮೃತ ವಿನಯ್ ಅವರ ಮರಣೋತ್ತರ ಪರೀಕ್ಷೆಯ ಹೆಣ್ಣೂರು ಪೊಲೀಸರ ಕೈಗೆ ಸೇರಿದೆ. ಹೌದು ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ಕೈಗೆ ಮರಣೋತ್ತರ ಪರೀಕ್ಷೆ ವರದಿ ವರದಿ ಸೇರಿದೆ. ಪ್ರಕರಣದ ಪರಿಶೀಲನೆಯ ನಡೆಸುತ್ತಿರುವ ಹೆಣ್ಣೂರು ಪೊಲೀಸರು ಈ ವರದಿಯನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ವಿನಯ್ ಸಾವನ್ನಪ್ಪಿದ ನಿಖರವಾದ ಸಮಯ ಯಾವುದು? ವಿನಯ್ ಮೃತ ದೇಹದ ಸ್ಥಿತಿ ಹೇಗಿತ್ತು? ವಿನಯ್ ಮಾಡಿದ ವಾಟ್ಸಾಪ್ ಡೆತ್ ನೋಟ್ ಸಮಯ ಕೂಡ ಪರಿಶೀಲನೆ ಮಾಡಲಿದ್ದಾರೆ. ಅಲ್ಲದೆ ಸಾವನ್ನಪ್ಪಿದ ಸಮಯದ ಬಗ್ಗೆಯೂ ಪೊಲೀಸರು ಪರಿಶೀಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಪತ್ನಿ ಮತ್ತು ಮಗುವಿನ ಜತೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ…

Read More