Author: kannadanewsnow05

ಬೆಂಗಳೂರು : ಕೋಲಾರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಟಿಟಿ ವಾಹನ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿಗಳು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸುಣ್ಣಕಲ್ಲು ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ರಾಮಾಂಜಲು (36) ಹಾಗೂ ಕಲಾವತಿ (27) ಮೃತ ದಂಪತಿಗಳು ಎಂದು ತಿಳಿದುಬಂದಿದೆ. ಮೃತರು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಯರಂವಾರಪಲ್ಲಿ ನಿವಾಸಿಗಳು ಎಂದು ತಿಳಿದುಬಂದಿದೆ. ಸ್ವಗ್ರಾಮದಿಂದ ಬೆಂಗಳೂರಿಗೆ ಕೆಲಸಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದೆ. ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸರಣಿ ಸಾವಿಗೆ ಕೆಮ್ಮಿನ ಸಿರಪ್ ಕಾರಣ ಎಂಬ ಶಂಕೆ ಹಿನ್ನೆಲೆ​​​ಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರವು, ಶ್ರೀಸನ್ ಫಾರ್ಮಾ ಮತ್ತು ಕೇಸನ್ಸ್ ಫಾರ್ಮಾ ಪೂರೈಸುವ ಕೆಮ್ಮಿನ ಸಿರಪ್‌ಗಳ ಮಾರಾಟ ಮತ್ತು ಖರೀದಿಯನ್ನು ರಾಜ್ಯದಲ್ಲಿ ನಿಷೇಧಿಸಿದೆ. ಹೌದು ರಾಜ್ಯ ಪರವಾನಗಿ ಪ್ರಾಧಿಕಾರ ಮತ್ತು ಹೆಚ್ಚುವರಿ ಡ್ರಗ್ಸ್ ಕಂಟ್ರೋಲರ್‌ ಅವರು ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ತಮಿಳುನಾಡಿನ ಕಾಂಚೀಪುರಂ ಮೂಲದ ಶ್ರೀಸನ್ ಫಾರ್ಮಾ ತಯಾರಿಸಿದ ‘ಕೋಲ್ಡ್‌ರಿಫ್ ಸಿರಪ್’ ಮತ್ತು ಜೈಪುರದ ಕೇಸನ್ಸ್ ಫಾರ್ಮಾ ತಯಾರಿಸಿದ ‘ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಸಿರಪ್’ಗಳ ಮಾರಾಟ ಮತ್ತು ಖರೀದಿಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ. ಈ ಸಿರಪ್‌ಗಳು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಈ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್‌ಗಳು ರಾಜ್ಯಕ್ಕೆ ಸರಬರಾಜಾಗಿಲ್ಲದಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಕೆಮ್ಮಿನ ಸಿರಪ್‌ಗಳ ಮಾದರಿಗಳನ್ನು ಪರೀಕ್ಷಿಸುವಂತೆ…

Read More

ಬೆಂಗಳೂರು : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ರಕ್ಷಿತಾ (26) L ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎಂದು ತಿಳಿದು ಬಂದಿದ್ದು, 4 ವರ್ಷದ ಹಿಂದೆ ರವಿಶ್ ಎನ್ನುವ ವ್ಯಕ್ತಿಯ ಜೊತೆ ರಕ್ಷಿತಾ ಮದುವೆಯಾಗಿದ್ದರು. ಲಗ್ಗೆರೆಯ ಮುನೇಶ್ವರ ಬಳಿ ಈ ಒಂದು ಕುಟುಂಬ ವಾಸವಾಗಿತ್ತು. ಮೂರು ವರ್ಷದಿಂದ ರವೀಶ್ ಪತ್ನಿಯ ಜೊತೆಗೆ ಗಲಾಟೆ ಮಾಡುತ್ತಿದ್ದ. ಅಲ್ಲದೇ ರವೀಶ್ ಸಹೋದರ ಲೋಕೇಶ್ ರಕ್ಷಿತಾ ಜೊತೆ ಗಲಾಟೆ ಮಾಡಿದ್ದಾರೆ. ಮನೆಯಲ್ಲೇ ಸಹೋದರ ಲೋಕೇಶ್ ವಾಸವಾಗಿದ್ದ. ಗಲಾಟೆಯಿಂದ ಮನನೊಂದು ರಕ್ಷಿತಾ ಮನೆಯಲ್ಲಿಯೇ ಆತ್ಮಹತ್ಯೆ ಶರಣಾಗಿದ್ದಾರೆ. ಧನಲಕ್ಷ್ಮಿ ಬ್ಯಾಂಕ್ ಮ್ಯಾನೇಜರ್ ಆಗಿರುವ ಮೃತಳ ಪತಿ ರವೀಶ್, ಗಂಡ ರವಿಶನೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ರಕ್ಷಿತಾ ಸಂಬಂಧಿಕರು ಇದೀಗ ರವೀಶ್ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮೂರು ವರ್ಷದ ಮಗಳ ಮೇಲು ಕೂಡ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.ಸದ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಗುಂಡು ತಾಕಿ ವ್ಯಕ್ತಿ ನಿಗೂಢವಾಗಿ ಸಾವನಪ್ಪಿದ್ದಾನೆ ಕಾವಲ್ ಬೈರಸಂದ್ರದ ಮೆಡಿಕಲ್ ಕಾಲೇಜು ಬಳಿ ಈ ಒಂದು ಘಟನೆ ಸಂಭವಿಸಿದೆ. ಸೆಕ್ಯೂರಿಟಿ ಗಾರ್ಡ್ ಲಖನ್ ವಿಶ್ವಕರ್ಮ ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ವಿಶ್ವಕರ್ಮ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ರಾತ್ರಿ ಕ್ವಾರ್ಟರ್ಸ್ ನಲ್ಲಿ ಸೆಕ್ಯೂರಿಟಿ ಸಿಬ್ಬಂದಿ ಸಾವನಪ್ಪಿದ್ದಾನೆ. ಡಬಲ್ ಬ್ಯಾರಲ್ ಗನ್ ಇಂದ ಫೈರಿಂಗ್ ಆಗಿ ಮೃತಪಟ್ಟಿದ್ದಾನೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕೊಪ್ಪಳ : ಉಳಿದ ಅವಧಿಗೂ ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ ಅಂದರೆ ಮುಂದಿನ 2 ವರ್ಷ 8 ತಿಂಗಳು ಸಹ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಇರಲಿದ್ದಾರೆ ಎಂದು ಕೊಪ್ಪಳದಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹಾಗೂ ಶಾಸಕರಾದ ಬಸವರಾಜ್ ರೆಡ್ಡಿ ಹೇಳಿಕೆ ನೀಡಿದರು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಸಿಎಂ ನೇತೃತ್ವದಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲ. ಹಾಗಾಗಿ ಉಳಿದ ಅವಧಿಗೂ ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ ಅಂದರೆ ಮುಂದಿನ 2 ವರ್ಷ 8 ತಿಂಗಳು ಸಹ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಇರಲಿದ್ದಾರೆ ಎಂದು ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದರು.

Read More

ಕೊಪ್ಪಳ : ಸನ್ಮಾನದ ವೇಳೆ ಸಿಎಂ ಸಿದ್ದರಾಮಯ್ಯ ಪೇಟ ಧರಿಸಲು ನಿರಾಕರಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಈ ಒಂದು ಘಟನೆ ನಡೆದಿದ್ದು, ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿ ಈ ಒಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸನ್ಮಾನದ ವೇಳೆ ಸಿಎಂ ಸಿದ್ದರಾಮಯ್ಯಗೆ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಶಾಸಕ ಹಿಟ್ನಾಳ್ ಪೇಟಾ ಹಾಕಲು ಹೋದಾಗ, ಸಿದ್ದರಾಮಯ್ಯ ಪೇಟಾ ಬೇಡ ಅಂತ ನಿರಾಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಅನ್ನು ಉದ್ಘಾಟಿಸಿದರು.

Read More

ಬೆಂಗಳೂರು : ಬೆಂಗಳೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕಾರು ಹರಿದು ಒಂದುವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಮನಿ ಬಳಿ ಈ ಒಂದು ಘಟನೆ ಸಂಭವಿಸಿದ್ದು, ಬೆಳಿಗ್ಗೆ ಮನೆಯಿಂದ ಕಾರು ಹೊರ ತೆಗೆಯುತ್ತಿದ್ದ ವೇಳೆ ಈ ಒಂದು ದುರಂತ ಸಂಭವಿಸಿದೆ. ಮನೆಯ ಮಾಲೀಕ ಸ್ವಾಮಿ ಎಂಬುವವರು ಕಾರು ಹೊರ ತೆಗೆಯುತ್ತಿದ್ದ ವೇಳೆ ಮನೆ ಬಾಡಿಗೆಗೆ ಇದ್ದ ಕುಟುಂಬದ ಮಗು ಸಾವನ್ನಪ್ಪಿದೆ. ಕಾರನ್ನು ರಿವರ್ಸ್ ತೆಗೆಯುವಾಗ ಈ ಒಂದು ದುರ್ಘಟನೆ ಸಂಭವಿಸಿದೆ. ಒಂದುವರೆ ವರ್ಷದ ಮಹಮ್ಮದ್ ಉಮರ್ ಫಾರೂಕ್ ಎನ್ನುವ ಮಗು ಸಾವನ್ನಪ್ಪಿದೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಒಂದು ಮನೆಯಲ್ಲಿ ಕುಣಿಗಲ್ ನಿಂದ ಕುಟುಂಬ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಬಾಡಿಗೆ ಇದ್ದ ಸಂಬಂಧಿಕರ ಮನೆಗೆ ಮಗುವಿನ ಪೋಷಕರು ಬಂದಿದ್ದರು. ಮನೆ ಹೊರಗಡೆ ಮಹಮ್ಮದ್ ಆಟ ಆಡುತ್ತಿದ್ದ ಆಗ ಮನೆಯ ಮಾಲಿಕ ಕಾರು ರಿವರ್ಸ್ ತೆಗೆದುಕೊಳ್ಳುವಾಗ ಮಗುವಿನ ಮೇಲೆ ಕಾರು ಹರಿದು…

Read More

ಬೆಂಗಳೂರು : ಸುಪ್ರೀಂ ಕೋರ್ಟ್ ಸಿಜೆಐ ಬಿಆರ್ ಗವಾಯಿ ಮೇಲೆ ವಕೀಲ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೊಂದು ನಾಚಿಕೆಗೇಡು ವಿಷಯ ವೈಯಕ್ತಿಕವಾಗಿ ಇದನ್ನು ಧಿಕ್ಕರಿಸುತ್ತೇನೆ. ಭಾರತದಲ್ಲಿ ಎಲ್ಲಾ ಧರ್ಮಗಳು ಬಹಳ ವರ್ಷಗಳಿಂದ ಇವೆ ದೇಶ ಯಾವ ದಿಕ್ಕಿನಲ್ಲಿ ಹೋಗಬೇಕೆಂದು ಯುವಕರು ಗಮನಿಸಬೇಕು ಎಂದು ಸಂತೋಷ್ ಲಾಡ್ ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಸನಾತನ ಧರ್ಮ, ಹಿಂದೂ ಧರ್ಮ, ಕ್ರಿಶ್ಚಿಯನ್ನ ಧರ್ಮ, ಮುಸ್ಲಿಂ ಧರ್ಮ ಎಲ್ಲಾ ಧರ್ಮಗಳು ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಇವೆ. ಆದರೆ ದೇಶ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂಬುದನ್ನು ಯೋಚನೆ ಯುವಕರು ವಿಶೇಷವಾಗಿ ಯೋಜನೆ ಮಾಡಲೇಬೇಕು. ಭಾರತ ಧರ್ಮನ ಮತ್ತು ಜಾತಿನ ಸೀಮಿತ ಆಗಿರುವಂತಹ ದೇಶ ಅಲ್ಲ. ಸಿಜೆಐ ಅವರು ಮೊನ್ನೆ ಆರ್ ಎಸ್ ಎಸ್ ಸಭೆಗೆ ಹೋಗಲ್ಲ ಅಂತ ಹೇಳಿಕೆ ನೀಡಿರುವ ಹಿನ್ನೆಲೆಯಿಂದ ಶೂ ಎಸೆದಿರಬಹುದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.

Read More

ದಾವಣಗೆರೆ : ತುಂಗಭದ್ರ ನದಿಯಲ್ಲಿ ತೆಪ್ಪ ಮಗುಚಿ ಇಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ತುಂಗಭದ್ರಾ ನದಿಯಲ್ಲಿ ಈ ಒಂದು ಘಟನೆ ನಡೆದಿದೆ. ತೆಪ್ಪ ಮಗುಚಿ ತಿಪ್ಪೇಶ್ (25) ಹಾಗೂ ಮುಕ್ತಿಯಾರ್ (19) ಸಾವನಪ್ಪಿದ್ದಾರೆ. ಮೀನು ಹಿಡಿಯಲು ಹೋಗಿದ್ದಾಗ ಈ ಒಂದು ದುರಂತ ಸಂಭವಿಸಿದೆ. ಮರಳು ದಂತೆಯಿಂದ ಈ ಒಂದು ಘಟನೆ ನಡೆದಿದೆ ಎನ್ನುವ ಆರೋಪ ಸಹ ಇದೆ ವೇಳೆ ಕೇಳಿ ಬಂದಿದೆ. ಸ್ಥಳಕ್ಕೆ ಹೊನ್ನಾಳಿ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಮೈಸೂರು : ಮುಡಾ ಹಗರಣಕ್ಕೆ ಸಬಂಧಪಟ್ಟಂತೆ ಇದೀಗ ಇಡಿ ಅಧಿಕಾರಿಗಳು ಒಟ್ಟು 252 ನಿವೇಶನಗಳ ಒಟ್ಟು 440 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮುಡಾ ಅಧಿಕಾರಿಗಳು ಅಕ್ರಮವಾಗಿ ನೀಡಿದ 252 ನಿವೇಶನಗಳನ್ನು ಇದೀಗ ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಲ್ಲದೇ ಮುಡಾದ ಮಾಜಿ ಆಯುಕ್ತರಾದ ದಿನೇಶ್ ಕುಮಾರ್ ಬಳಿ ಇದ್ದ 32 ಸೈಟ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 40.8 ಕೋಟಿ ಮೌಲ್ಯದ ನಿವೇಶನಗಳನ್ನು ಇಡಿ ಅಧಿಕಾರಿಗಳು ವರ್ಷಕ್ಕೆ ಪಡೆದುಕೊಂಡಿದ್ದಾರೆ. ಅಧಿಕಾರಿಗಳು ಅಕ್ರಮವಾಗಿ 752 ಸೈಟ್ ಗಳನ್ನು ಅಲಾಟ್ ಮಾಡಿದ್ದರು. ಮುಡಾ ಅಧಿಕಾರಿಗಳೇ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತು ಆಗಿತ್ತು.ಮಾಜಿ ಆಯುಕ್ತ ದಿನೇಶ್ ಬಳಿ ಇರುವ 32 ನಿವೇಶನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಿನೇಶ್ ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿ ಮಾಡಿದ್ದ ಎನ್ನಲಾಗಿದೆ.

Read More