Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ಫ್ಲೆಕ್ಸ್, ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ಇದೀಗ ಬಿಬಿಎಂಪಿ ಹೊಸ ಜಾಹೀರಾತು ಕಾಯ್ದೆಯನ್ನು ಜಾರಿಗೊಳಿಸಿದೆ. ಹೌದು ಹೊಸ ಜಾಹಿರಾತು ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ, ಹೊಸ ಜಾಹೀರಾತು ಕರಡು ನೀತಿಗೆ ಸರ್ಕಾರದಿಂದ ಇದೀಗ ಅನುಮೋದನೆ ದೊರಕಿದೆ. ಸರ್ಕಾರದ ರಾಜ್ಯ ಪತ್ರದ ಮೂಲಕ ಕರುಡು ಪ್ರತಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ 30 ದಿನಗಳ ಕಾಲಾವಕಾಶವಿದೆ. ಬಿಬಿಎಂಪಿ ಹೊಸ ಜಾಹೀರಾತು ನಿತಿಯ ಪ್ರಮುಖ ಅಂಶಗಳು ಹೀಗಿವೆ 1) ಜಾಹೀರಾತು ಟೆಂಡರ್ ನಲ್ಲಿ ಭಾಗವಹಿಸಲು ಪಾಲಿಕೆಯಲ್ಲಿ ನೋಂದಣಿ ಕಡ್ಡಾಯ. 2) ಟೆಂಡರ್ ನಲ್ಲಿ ಭಾಗವಹಿಸಲು ನೋಂದಣಿ ಶುಲ್ಕ 5 ಲಕ್ಷ ರೂಪಾಯಿ ನಿಗದಿ. 3) ಒಮ್ಮೆ ನೋಂದಣಿ ಪಡೆದವರು ಪ್ರತಿ ಮೂರು ವರ್ಷಕ್ಕೆ ನವೀಕರಣ ಮಾಡಬೇಕು. 4) ರಸ್ತೆ, ಸರ್ಕಲ್, ವಲಯವಾರು ಪ್ಯಾಕೇಜ್ ಮಾದರಿಯಲ್ಲಿ ಟೆಂಡರ್. 5) ರಸ್ತೆ ಅಗಲ ಸರ್ಕಲ್ ಗಾತ್ರಕ್ಕೆ ಅನುಗುಣವಾಗಿ ಜಾಹೀರಾತು ಫಲಕಕ್ಕೆ ಅಳವಡಿಸಲು ಅವಕಾಶ. 6) ಒಂದು ಜಾಹಿರಾತು ಫಲಕದಿಂದ ಮತ್ತೊಂದುಕ್ಕೆ 100…
ಬೆಂಗಳೂರು : ಅಂತರ್ಜಾಲದ ಮೂಲಕ ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಣೆ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಅಪರಾಧವಾಗುವುದಿಲ್ಲ ಎಂಬುದಾಗಿ ಜಲೈ 10ರಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಹಿಂಪಡೆದಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67B(b)ಯಲ್ಲಿ ತಿಳಿಸಿರುವಂತೆ, ಯಾವುದೇ ವ್ಯಕ್ತಿಯು ಮಕ್ಕಳ ಆಶ್ಲೀಲ ಚಿತ್ರಗಳನ್ನು ಸಿದ್ಧಪಡಿಸುವುದು ಮತ್ತು ಅದನ್ನು ವಿದ್ಯುನ್ಮಾನ ಉಪಕರಣಗಳ ಮೂಲಕ ಹಂಚಿಕೊಳ್ಳುವುದಕ್ಕೆ ಶಿಕ್ಷೆ ವಿಧಿಸಲು ಅವಕಾಶವಿದೆ. ಅರ್ಜಿದಾರರು ಮಕ್ಕಳ ಆಶ್ಲೀಲ ಚಿತ್ರಗಳನ್ನು ಸಿದ್ಧಪಡಿಸಿಲ್ಲ. ಜೊತೆಗೆ, ಅದನ್ನು ಯಾರೊಂದಿಗೂ ಹಂಚಿಕೊಂಡಿಲ್ಲ, ಕೇವಲ ವೀಕ್ಷಿಸಿದ್ದಾರೆ. ಹೀಗಾಗಿ, ಸೆಕ್ಷನ್ 67B(b) ಅಡಿ ಅಪರಾಧವಾಗುವುದಿಲ್ಲ ಎಂದು ನ್ಯಾಯಪೀಠ ಈ ಹಿಂದೆ ತಿಳಿಸಿತ್ತು. ಅರ್ಜಿದಾರರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67B(b) ಅಡಿ ಪ್ರಕರಣ ದಾಖಲಾಗಿದ್ದು, ಈ ಸೆಕ್ಷನ್ ಮಕ್ಕಳ ಆಶ್ಲೀಲ ಚಿತ್ರಗಳನ್ನು ಅಂತರ್ಜಾಲದಲ್ಲಿ ಹುಡುಕುವುದು, ವೀಕ್ಷಿಸುವುದು, ಡೌನ್‌ಲೋಡ್ ಮಾಡುವುದು ಹಾಗೂ ಪ್ರಚಾರ ಮಾಡುವುದೂ ಸೇರಿದೆ. ಆದ್ದರಿಂದ ಸೆಕ್ಷನ್ 67B(b) ಪ್ರಕಾರ ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಪಡಿಸಲು ಅವಕಾಶವಿಲ್ಲ. ಹೀಗಾಗಿ, ಆದೇಶ ಹಿಂಪಡೆಯುತ್ತಿರುವುದಾಗಿ ಪೀಠ…
ಬೆಳಗಾವಿ : ಹಳ್ಳಿ ಕಡೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಸಿಡಿಮದ್ದು ಸಿಡಿಸುವ ಸಾಂಪ್ರದಾಯವಿದೆ. ಇದೀಗ ಬೆಳಗಾವಿಯಲ್ಲಿ ಈ ಒಂದು ಸಿಡಿಮದ್ದುನಿಂದ ಓರ್ವ ಬಲಿಯಾಗಿದ್ದು, ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟಗೊಂಡಿದ್ದರಿಂದ ಮದ್ದು ತಯಾರಿಕ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹೌದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಪಂಚಮಿ ಹಬ್ಬದಲ್ಲಿ ಸಿಡಿಮದ್ದು ತಯಾರಿಸುತ್ತಿದ್ದ ಮಲ್ಲಪ್ಪ ಈ ಒಂದು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮದ್ದು ತಯಾರಿಸುವಾಗ ಆಕಸ್ಮಿಕವಾಗಿ ಸ್ಪೋಟಗೊಂಡು ಮಲ್ಲಪ್ಪ ಸಾವನ್ನಪ್ಪಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬ್ಯಾಚುಲರ್ಸ್ ಪಾರ್ಟಿ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ’ ಎಂಬ ಸಾಂಗನ್ನು ಅನಧಿಕೃತವಾಗಿ ಬಳಸಿದ್ದರಿಂದ ಕಾಪಿ ರೈಟ್ಸ್ ಉಲ್ಲಂಘನೆ ಮಾಡಿದ ಆರೋಪದಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ FIR ದಾಖಲಿಸಲಾಗಿತ್ತು. ಈ ಕುರಿತಂತೆ ರಕ್ಷಿತ್ ಶೆಟ್ಟಿ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೇಷನ್ಸ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಒಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜುಲೈ 24ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ. ಹೌದು ಕಾಪಿ ರೈಟ್ಸ್ ಉಲ್ಲಂಘನೆ ಆರೋಪದಲ್ಲಿ ಎಫ್ ಆರ್ ಹಿನ್ನೆಲೆ ನಿರೀಕ್ಷಣಾ ಜಾಮೀನು ಕೋರಿ ನಟ ರಕ್ಷಿತ್ ಶೆಟ್ಟಿ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ಸೆಷನ್ಸ್ ಕೋರ್ಟಿಗೆ ರಕ್ಷಿತ್ ಶೆಟ್ಟಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯ ಎಲ್ಲಿದೆ ಸಾಂಗ್ ಗೆ ಕಾಪಿರೈಟ್ಸ್ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ರಕ್ಷಿತ್ ಶೆಟ್ಟಿ ನಿರ್ದೇಶನದ ಪರಮಾವ ಸ್ಟುಡಿಯೋಸ್ ನಿರ್ಮಿಸಿರುವ ಬ್ಯಾಚುಲರ್ ಪಾರ್ಟಿ ಸಿನಿಮಾಗಾಗಿ ಅನಧಿಕೃತವಾಗಿ ನ್ಯಾಯ ಎಲ್ಲಿದೆ ಎಂಬ ಹಾಡನ್ನು ಬಳಸಿದ್ದರಿಂದ, ಎಂ ಆರ್ ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ಯಶವಂತಪುರ…
ಬೆಂಗಳೂರು : ಸ್ಯಾಂಡಲ್ ವುಡ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆದಿದೆ. ಹೌದು ನಾಗರಬಾವಿಯ ತಮ್ಮ ನಿವಾಸದಲ್ಲಿ ಇಂದು ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆಟ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಲದ ಸುಳಿಯಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.ಸದ್ಯ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದ ಎರಡು ವರ್ಷಗಳಿಂದಲೂ ಚಿತ್ರದ ಶೂಟಿಂಗ್ ಕುಂಟುತ್ತಲೇ ಸಾಗಿತ್ತು. ನಿರ್ಮಾಪಕರಾಗಿದ್ದರಿಂದ ಸಾಲದ ಸುಳಿಗೆ ಸಿಲುಕಿದ್ದ ವಿನೋದ್ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆ ನಿನಾಸಂ ಸತೀಶ್ ಮತ್ತು ಚಿತ್ರತಂಡದ ಜೊತೆ ಮಾತನಾಡಿ ವಿನೋದ್ ಮನೆಗೆ ಹಿಂತಿರುಗಿದ್ದರು ಎಂದು ವರದಿಯಾಗಿದೆ.
ಬಳ್ಳಾರಿ : ವಾಲ್ಮೀಕಿ ನಿಗಮದಲ್ಲಿ ಅಕ್ರಮಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿ ನಾಗೇಂದ್ರ ಹಾಗೂ ದದ್ದಲ್ ರಕ್ಷಣೆಗೆ ಸಿಎಂ, ಡಿಸಿಎಂ ನಿಂತಿದ್ದಾರೆ. ಬಿ. ನಾಗೇಂದ್ರ ಬಾಯಿ ಬಿಟ್ಟರೆ ಸಿಎಂ ಮತ್ತು ಡಿಸಿಎಂ ಬುಡಕ್ಕೆ ಬರುತ್ತದೆ ಎಂದು ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಒಪ್ಪಿಕೊಂಡರು. 89 ಕೋಟಿ ಬ್ರಷ್ಟಾಚಾರ ನಡೆದಿದೆ ಅಂತ ಸಿಎಂ ಒಪ್ಪಿಕೊಂಡಿದ್ದಾರೆ. ಆದರೆ ಸರ್ಕಾರಕ್ಕೂ ಹಗರಣಕ್ಕೂ ಸಂಬಂಧ ಇಲ್ಲ ಅಂತ ಹೇಳುತ್ತಾರೆ.ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳೇ ಹಗರಣ ಮಾಡಿದ್ದರೆ ಸಚಿವ ಬಿ ನಾಗೇಂದ್ರ ರಾಜೀನಾಮೆಯನ್ನು ಯಾಕೆ ತೆಗೆದುಕೊಂಡಿದ್ದೀರಿ? ಬಿ ನಾಗೇಂದ್ರ ಹಾಗೂ ದದ್ದಲ್ ರಕ್ಷಣೆಗೆ ಸಿಎಂ, ಡಿಸಿಎಂ ನಿಂತಿದ್ದಾರೆ. ಬಿ. ನಾಗೇಂದ್ರ ಬಾಯಿ ಬಿಟ್ಟರೆ ಸಿಎಂ ಮತ್ತು ಡಿಸಿಎಂ ಬುಡಕ್ಕೆ ಬರುತ್ತದೆ ಎಂದು ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ…
ಧಾರವಾಡ : ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಒಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕನ ಎರಡು ಕಾಲು ಕಟ್ ಆಗಿದ್ದು ನಾಲ್ವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಕ್ರಾಸ್ ಬಳಿ ಈ ಒಂದು ಅಪಘಾತ ಸಂಭವಿಸಿದೆ ಹುಬ್ಬಳ್ಳಿಯಿಂದ ಕುಮಟಾಾಗೆ ಚಲಿಸುತ್ತಿದ್ದ ಈ ಒಂದು ಬಸ್ ನಲ್ಲಿ 30 ಜನರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದವರನ್ನ ತಕ್ಷಣ ಹುಬ್ಬಳ್ಳಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಹಲವಾರು ಐತಿಹಾಸಿಕ ಕಟ್ಟಡಗಳನ್ನು ನೋಡಬಹುದು. ಅದರಲ್ಲಿ ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಸಿಕೊಳ್ಳುವ ವಿಧಾನಸೌಧ ಕೂಡ ಒಂದು. ಇದೀಗ ವಿಧಾನಸೌಧದ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇಂದು ಸ್ಪೀಕರ್ ಯುಟಿ ಖಾದರ್ ಅವರು ಅಧಿಕಾರಿಗಳ ಜೊತೆಗೆ ಆಗಮಿಸಿ ಪರಿಶೀಲನೆ ನಡೆಸಿದರು. ಹೌದು ವಿಧಾನಸೌಧದ ಪೂರ್ವ ದಿಕ್ಕಿನಲ್ಲಿನ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದೆ.ವಿಧಾನಸೌಧದ ಮೊಗಸಾಲೆಯಲ್ಲಿ ಈ ಒಂದು ಗುಮ್ಮಟವಿದ್ದು, ಮಳೆ ನೀರಿನಿಂದ ಬಿರುಕು ಬಿಟ್ಟ ಸ್ಥಳದಿಂದ ಮುಗುಶಾಲೆಯಲ್ಲಿ ನೀರು ಸೋರುತ್ತಿದೆ. ಸ್ಥಳಕ್ಕೆ ಸ್ಪೀಕರ್ ಯುಟಿ ಖಾದರ್ ಅವರು ಆಗಮಿಸಿ ಪರಿಶೀನೇ ನಡೆಸಿದರು. ಇದೊಂದು ಬಹಳ ಹಿಂದಿನ ವರ್ಷದ ಕಟ್ಟಡ ಕೆಲವೊಂದು ಲೋಪದೋಷಗಳು ಆಗಿರಬಹುದು. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ.ಇದು ಡಿಪಿಆರ್ ಲೋಕೋಪಯೋಗಿ ಇಲಾಖೆ ಅಡಿ ಬರುತ್ತದೆ.ಅವರ ಗಮನಕ್ಕೆ ತಂದು ಸರಿಪಡಿಸಲು ಹೇಳುತ್ತೇನೆ ಎಂದರು. ಬಹಳ ಹಳೆಯ ಕಾಲದ ಕಟ್ಟಡವಾಗಿರುವುದರಿಂದ ಈ ರೀತಿ ಆಗಿರಬಹುದು. ಒಂದು ಕಡೆ ಸರಿಪಡಿಸುವಾಗ ಇನ್ನೊಂದು ಕಡೆ ಕೆಲವೊಂದು ಲೋಪದೋಷಗಳಾಗಿರುವುದು ಸಹಜ.…
ವರದಿ, ಮನೋಜ್ ಎಂ ಅಪ್ರೆಂಟಿಸ್, ವಾರ್ತಾ ಇಲಾಖೆ ಒಂದು ದೇಶಕ್ಕೆ ಅದರ ಇತಿಹಾಸ, ಸಂಪನ್ಮೂಲಗಳು, ಜನಸಂಖ್ಯೆ, ಸರ್ಕಾರ, ಸೈನ್ಯಗಳು ಎಷ್ಟು ಮುಖ್ಯವೂ, ಅದೇ ರೀತಿಯಲ್ಲಿ ರಾಷ್ಟ್ರದ ಗುರು ರಾಷ್ಟ್ರ ಧ್ವಜವು ಅಷ್ಟೇ ಪ್ರಮುವಾಗಿರುತ್ತದೆ.ಜನರಲ್ಲಿ ದೇಶಾಭಿಮಾನ ಸೃಷ್ಠಿಸುವುದು, ಐತಿಹಾಸಿಕ ಸ್ಮರಣಾರ್ಥವಾಗಿ, ಏಕತೆ ಮತ್ತು ಗುರುತಿನ ಸಂಕೇತಕ್ಕೆ, ಶೈಕ್ಷಣಿಕ ಮೌಲ್ಯ, ದೇಶ ಭಕ್ತಿಯ ಹಾಗೂ ನಾವೆಲ್ಲರು ಒಂದೇ ಎಂಬ ಭಾವನೆ ಮೂಡಿಸುವುದಕ್ಕೆ ರಾಷ್ಡ್ರ ಧ್ವಜವು ಸಂಕೇತವಾಗಿರುತ್ತದೆ. ಭಾರತೀಯರ ಇತಿಹಾಸದಲ್ಲಿ ಪಾಶ್ಚಿಮಾತ್ಯ ದೇಶಗಳಿಂದ ಸ್ವಾತಂತ್ರ್ಯ ಪಡೆಯಲು ಅನೇಕ ವಿಷಯಗಳು ಪ್ರೇರಣೆಯನ್ನು ನೀಡಿದ್ದು ಅದರಲ್ಲಿ ರಾಷ್ಟ್ರೀಯ ಧ್ವಜ ಎಂಬ ಪರಿಕಲ್ಪನೆಯು ಪ್ರಮುಖ ಪಾತ್ರ ವಹಿಸಿದೆ. ಆದ್ದರಿಂದ 1947 ರಂದು ನಡೆದ ಸಂವಿಧಾನ ಸಭೆಯಲ್ಲಿ ತ್ರಿವರ್ಣ ಧ್ವಜವನ್ನು ಪರಿಚಯಸಲಾಗುತ್ತದೆ. ಈ ಕಾರಣದಿಂದ ದೇಶದ ಧಜವನ್ನು ಗೌರವಿಸುವ ಉದ್ಧೇಶದಿಂದ ಜುಲೈ 22 ರಂದು ರಾಷ್ಟ್ರೀಯ ಧ್ವಜ ದಿನವಾಗಿ ಆಚರಣೆಯನ್ನು ಮಾಡಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯ ಗೀತೆಗಳು, ಘೋಷಣೆಗಳು, ಧ್ಯೇಯವಾಕ್ಯಗಳು, ಜೊತೆಗೆ ಹಲವಾರು ಮಾದರಿಗಳ ಜೊತೆಗೆ ದೇಶದಲ್ಲಿ ಬಾವುಟಗಳ…
ಶಿವಮೊಗ್ಗ : ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆಯು 2024-25ನೇ ಸಾಲಿನಲ್ಲಿ ರೈತ ಮಹಿಳೆಯರಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು/ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ರಾಜ್ಯ ಸರ್ಕಾರದಿಂದ ಶೇ. 6ರ ಬಡ್ಡಿ ಸಹಾಯಧನ ನೀಡಲಾಗುವುದು. ಈ ಸಾಲಿನಲ್ಲಿ ಹೈನುಗಾರಿಕೆಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ ಸಾಲ ಪಡೆಯುವ ಪ್ರತಿ ಫಲಾನುವಿಗಳಿಗೆ ಗರಿಷ್ಟ ರೂ. 65,000/- ಸಾಲದ ಮೊತ್ತಕ್ಕೆ ಶೇ. 6ರ ಬಡ್ಡಿ ಸಹಾಯಧನ ನೀಡಲಾಗುತ್ತಿದ್ದು, ರೈತ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಬಾಬುರತ್ನ ಎ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಯನ್ನು ಆಯಾ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಹಾಗೂ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸುವುದು.