Subscribe to Updates
Get the latest creative news from FooBar about art, design and business.
Author: kannadanewsnow05
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕಳೆದ ಕೆಲವು ತಿಂಗಳಗಳ ಹಿಂದೆ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ನಡೆದಿತ್ತು. ಆ ಘಟನೆಗಳಿಂದಲೇ ಜನರು ಇನ್ನೂ ಹೊರ ಬಂದಿಲ್ಲ, ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಭೀಕರ ಕೊಲೆಯಾಗಿದ್ದು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪೂಜಾರಿ ಒಬ್ಬರನ್ನು ಕೊಲೆ ಮಾಡಿದ್ದಾರೆ. ಹೌದು ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ ಆಗಿದೆ. ಹುಬ್ಬಳ್ಳಿಯ ಈಶ್ವರನಗರದಲ್ಲಿ ವೈಷ್ಣವಿ ದೇವಸ್ಥಾನದ ಪೂಜಾರಿಯನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವಂತಹ ಘಟನೆ ಇಂದು ನಡೆದಿದೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಲ್ಲದೆ ಇದೆ ಪೂಜಾರಿಯ ಮೇಲೆ ಕಳೆದ ಒಂದು ವರ್ಷದ ಹಿಂದೆ ಕೂಡ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದರು. ಅಂದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಇಂದು ಸಾವನ್ನಪ್ಪಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಡಿಮೆ ಸುಳ್ಳಕ್ಕೆ ನಾವಾನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ದುಷ್ಕರ್ಮಿಗಳಿಗಾಗಿ ಬಲೇ ಬೀಸಿದ್ದಾರೆ.
ಬೆಂಗಳೂರು : ಮಹಿಳೆಗೆ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಲವ್ ಮಾಡಿ ನಂತರ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, 41 ಲಕ್ಷ ಹಣ 5 ಲಕ್ಷ ಮೌಲ್ಯದ ಎಲ್ಐಸಿ ಬಾಂಡ್ ಕಿತ್ತುಕೊಂಡು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಮಹಿಳೆಯರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಹೌದು ಚಿಕ್ಕಬಾಣಾವರದ ವಿಶ್ವನಾಥ್ ಅಲಿಯಾಸ್ ವಿಷ್ಣುಗೌಡ ವಿರುದ್ಧ ಮಹಿಳೆ ಇದೀಗ ದೂರು ದಾಖಲಿಸಿದ್ದಾಳೆ. ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ವೈರಲ್ ಮಾಡುವುದಾಗಿ ವಿಶ್ವನಾಥ್ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೆ, ಚೆಕ್ ಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೇ ಮನೆಗೆ ನುಗ್ಗಿ ಮಹಿಳೆಯ ತಂದೆ ತಾಯಿಯ ಮೇಲೆ ವಿಶ್ವನಾಥ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತ ಮಹಿಳೆಯ ತಂಗಿ ಮುಂದೆ ಪ್ಯಾಂಟ್ ಬಿಚ್ಚಿ ವಿಶ್ವನಾಥ ವಿಕೃತಿ ಮೆರೆದಿದ್ದಾನೆ. ತನ್ನನ್ನು ದೈಹಿಕವಾಗಿ ಬಳಸಿಕೊಂಡು ವಂಚನೆ ಮಾಡಿರುವುದಾಗಿ ದೂರು ಸಲ್ಲಿಸಲಾಗಿದೆ. ವಿಶ್ವನಾಥ್ ಅಲಿಯಾಸ್ ವಿಷ್ಣು ಗೌಡ ವಿರುದ್ಧ 40 ವರ್ಷದ…
ಮೈಸೂರು : ಪತಿ ತೀರಿಹೋದ ಬಳಿಕ ಆಕೆಗೆ ಪತಿಯ ವಿಮೆಯಿಂದ ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ಇದೆ ಆಕೆಯ ಸಂಬಂಧಿಕರ ನಿದ್ದೆಗೆಡಿಸಿದೆ. ಹಾಗಾಗಿ ಮಾರಕಾಸ್ತ್ರಗಳಿಂದ ಮಹಿಳೆಯನ್ನು ಭೀಕರವಾಗಿ ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಚೌಥಿ ಗ್ರಾಮದಲ್ಲಿ ನಡೆದಿದೆ. ಹೌದು ಭಾಗ್ಯವತಿ(32) ಮೃತ ಮಹಿಳೆ. ಚೌಥಿ ಗ್ರಾಮದ ಬಸವರಾಜು ಹಾಗೂ ಯಶೋಧಮ್ಮ ದಂಪತಿ ಪುತ್ರಿಯಾದ ಇವರಿಗೆ ಸಂಪತ್ ಕುಮಾರ್ ಎಂಬುವವರ ಜೊತೆ ಮದುವೆ ಮಾಡಲಾಗಿತ್ತು. ಇಬ್ಬರು ಗಂಡು ಮಕ್ಕಳು ಕೂಡ ಇದ್ದರು. ಎಲ್ಲವೂ ಚೆನ್ನಾಗಿತ್ತು. ಆದ್ರೆ, 5 ವರ್ಷದ ಹಿಂದೆ ಪತಿ ಸಂಪತ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪತಿಯನ್ನು ಕಳೆದುಕೊಂಡ ಆಕೆ ಧೈರ್ಯ ಕಳೆದುಕೊಳ್ಳದೆ ಇದ್ದ ಎರಡೂವರೆ ಕೃಷಿ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ತನ್ನ ಕಾಲುಗಳ ಮೇಲೆ ನಿಂತುಕೊಂಡಿದ್ದಳು.ಜೊತೆಗೆ ಲಕ್ಷಾಂತರ ರೂ. ಹಣ ಸಂಪಾದಿಸಿದ್ದರು. ಇದರ ಜೊತೆಗೆ ಇತ್ತೀಚೆಗೆ ಪತಿಯ ವಿಮೆ ಹಣ ಸುಮಾರು 12 ಲಕ್ಷ ರೂಪಾಯಿ ಬರುವುದಿತ್ತು. ಇದು ಸಹಜವಾಗಿ ಆಕೆಯ ಸಂಬಂಧಿಕರ ಕಣ್ಣು…
ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 469 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಲ್ಲಿ 292 ಕೇಸ್ ಗಳು ದಾಖಲಾಗಿವೆ. ಇದುವರೆಗೂ ರಾಜ್ಯದಲ್ಲಿ ಡೆಂಘಿಗೆ 10 ಜನರು ಸಾವನ್ನಪ್ಪಿದ್ದರೆ. ಹಾಗಾಗಿ ರಾಜ್ಯದಲ್ಲಿ ಇವರೆಗೆ ಡೆಂಘಿ ಪ್ರಕರಣಗಳ ಸಂಖ್ಯೆ ಒಟ್ಟು 14,223ಕ್ಕೆ ಏರಿಕೆಯಾಗಿವೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಇತ್ತೀಚಿಗೆ ಬೆಂಗಳೂರಿನ ಜನತೆಗೆ ಆರೋಗ್ಯ ಇಲಾಖೆಯು ಡೆಂಘಿ ರೋಗಕ್ಕೆ ಉಚಿತ ಸಹಾಯವಾಣಿ ಆರಂಭಿಸಿದ್ದು, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಟೋಲ್ ಫ್ರೀ ಸಂಖ್ಯೆ 1800-425-8330 ಆರಂಭಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಗೆ ಕರೆ ಮಾಡಿ ಸೂಕ್ತ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಬೆಳಗಾವಿ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಅವರು ಸ್ವಪಕ್ಷದ ವಿರುದ್ಧವೆ ಇದೀಗ ಹೊಸ ಬಾಂಬ್ ಸಿಡಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 9 ಸ್ಥಾನ ಸೋಲಲು ಒಳ ಒಪ್ಪಂದವೇ ಕಾರಣ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಒಪ್ಪಂದದಿಂದಲೇ ಬಿಜೆಪಿಗೆ ಹಾನಿಯಾಗಿದೆ. 9 ಕಡೆ ಬಿಜೆಪಿ ಸೋಲಲು ಒಳ ಒಪ್ಪಂದವೇ ಕಾರಣ. ಸೋಮಣ್ಣ ಸೋಲಿಸಲು 6 ಕೋಟಿ ನಮ್ಮವರೇ ಕೊಟ್ಟಿದ್ದರು ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಸ್ಫೋಟಕ ಹೇಳಿಕೆ ನೀಡಿದರು. ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಸಿಕೊಂಡಿದ್ದಾರೆ. ಚುನಾವಣೆಗೆ ಸಾರಾಯಿ ಕೊಡಿಸಲು 187 ಕೋಟಿ ರೂಪಾಯಿ ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಇಡೀ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.ವಾಲ್ಮೀಕಿ ನಿಗಮದ ಈ ಹಗರಣದ ಆದ ತಕ್ಷಣ ಅಮಿತ್ ಶಾ ಅವರಿಗೆ ಪತ್ರ ಬರೆದೆ. ಸಿಬಿಐಗೆ ಕೊಡಬೇಕೆಂದು ಹೇಳಿದೆ. ಅವರು ಅದಕ್ಕೆ ಉತ್ತರಿಸಿದರು. 3 ಕೋಟಿಗಿಂತ ಹೆಚ್ಚಿನ ಆದರೆ ಸಿಬಿಐ ಬರುತ್ತದೆ…
ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಪುರದಲ್ಲಿ ಪೊಲೀಸರ ಜೀಪಿನ ಮೇಲೆ ಕಳ್ಳರು ಕಲ್ಲೇಸಿದಿದ್ದಾರೆ. ನಿನ್ನೆ ರಾತ್ರಿ ನಡೆದಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ತಡೆದರು ನಿಲ್ಲಿಸದೆ ಹೋಗಿದ್ದ ಬೊಲೆರೋ ವಾಹನವನ್ನು, ನಾಯಕನಹಟ್ಟಿ ಠಾಣೆಯ ಪೊಲೀಸರು ಬೊಲೆರೋ ವಾಹನವನ್ನು ಚೇಸ್ ಮಾಡಿದರು. ಈ ವೇಳೆ ಪೊಲೀಸ್ ಜೀಪ್ ಮೇಲೆ ಕಳ್ಳರು ಕಲ್ಲೆಸೆದಿದ್ದಾರೆ. ತಕ್ಷಣ ಪಿಎಸ್ಐ ಶಿವಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿದರು. ಇತ್ತ ಗುಂಡು ಹಾರಿಸುತ್ತಿದ್ದಂತೆ ಕುದಾಪುರ ಬಳಿ ಖದೀಮರ ಗ್ಯಾಂಗ್ ಇದೀಗ ಎಸ್ಕೇಪ್ ಆಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾಸನ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಗರಣ, ಮುಡಾದಲ್ಲಿ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ರಾಜ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಈ ಎಲ್ಲಾ ಹಗರಣಗಳಿಂದಲೇ ರಾಜ್ಯ ಸರ್ಕಾರ ಪತನವಾಗುತ್ತೆ ಎಂದು ಸ್ಪೋಟಕ ಹೇಳಿಕೆ ನೀಡಿದರು. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಬರೀ ಹಗರಣಗಳೇ ಬೆಳಕಿಗೆ ಬರುತ್ತಿವೆ. ಎಲ್ಲಾ ಹಗರಣ ದಲಿತರಿಗೆ ಸೇರಬೇಕಿದ್ದ ಹಣದ್ದೇ ಆಗಿದೆ. ವಾಲ್ಮೀಕಿ ಎಸ್ ಟಿ ಪಿ, ಟಿ ಎಸ್ ಪಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ.ಮುಡಾ ಹಗರಣದಂತಹ ಹಗರಣಗಳೆ ಎಲ್ಲಾ ಹಗರಣಗಳು ದಲಿತರಿಗೆ ಮಾಡಿರುವ ಮೋಸಗಳೆ ಆಗಿವೆ ಎಂದರು. ಹಗರಣಗಳು ಹೊರಬಂದ ಮೇಲೆ ಸಿಎಂ ಸಿದ್ದರಾಮಯ್ಯ ಮಂಕಾಗಿದ್ದಾರೆ.ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಶಾಪ ತಟ್ಟಿದೆ. ಈ ಸರ್ಕಾರ ದಲಿತ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಸರ್ಕಾರ ಕೋಮಾ ಸ್ಟೇಜ್ ನಲ್ಲಿದೆ. ಸರ್ಕಾರ ಕೆಲಸಾನು ಮಾಡುತ್ತಿಲ್ಲ ಸುಮ್ಮನೇನು ಇರುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ ಹಾಸನದಲ್ಲಿ ವಾಗ್ದಾಳಿ…
ಮಂಡ್ಯ : ಕುಮಾರಸ್ವಾಮಿ ಕರ್ನಾಟಕಕ್ಕೆ ಯಾಕೆ ಬರುತ್ತಾರೆ ಅಂತಾರೆ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿದು ಜನ ಮೃತಪಟ್ಟಿದ್ದರು. ರಾಜ್ಯ ಸರ್ಕಾರದ ಒಬ್ಬ ಮಂತ್ರಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ. ನಿನ್ನೆ ನಾನು ಹೋಗಿ ಬಂದ ಬಳಿಕ ಈಗ ಸಿಎಂ ಸಿದ್ದರಾಮಯ್ಯ ಹೋಗಿದ್ದಾರೆ. ಪೇಪರ್ ಪೆನ್ನು ಕೇಳಿದ ವ್ಯಕ್ತಿ ಹೇಗೆ ನಡೆದುಕೊಳ್ಳುತ್ತಿದ್ದಾರೆ ಗೊತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಇಂದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ಎಚ್ ಡಿ ಕುಮಾರಸ್ವಾಮಿಯವರಿಗೆ ಅಭಿನಂದನಾ ಸಮಾರಂಭ ಆಯೋಜಿಸಿದ್ದು, ಎಚ್ ಎಂ ಟಿ 25 ಸಾವಿರ ಕೋಟಿ ಲಾಭ ತರುವ ಕಾರ್ಖಾನೆಯಾಗಿದೆ. ಅದನ್ನು ಪುನಶ್ಚೇತನಗೊಳಿಸಬೇಕಿದೆ. ಅಲ್ಲದೆ ಆಂಧ್ರದ ವಿಶಾಖಪಟ್ಟಣದ RNI ಕಾರ್ಖಾನೆ ಪುನಶ್ಚೇತನ ಗೊಳಿಸಬೇಕಿದೆ. ಮಂಡ್ಯದಲ್ಲಿ ಉದ್ಯೋಗ ಕೊಡುವ ಕಾರ್ಖಾನೆ ಸ್ಥಾಪನೆ ಮಾಡಬೇಕು ನನಗೆ 6-7 ತಿಂಗಳ ಕಾಲ ಸಮಯಾವಕಾಶ ಕೊಡಿ ಎಂದು ತಿಳಿಸಿದರು. ಕಾವೇರಿ ನದಿ ನೀರಿನ ವಿವಾದ 125 ವರ್ಷಗಳಿಂದ ಇರುವಂತಹ ಸಮಸ್ಯೆ. ಕಾವೇರಿ ನೀರಿನ ವಿಚಾರವನ್ನು…
ಉತ್ತರಕನ್ನಡ : ಬಹಳ ವರ್ಷಗಳಿಂದ ಲ್ಯಾಂಡ್ ಸ್ಲೈಡ್ ಆಗಿಲ್ಲ, ಈಗ ಆಗಿದೆ. ಘಟನೆ ಸಂಬಂಧಿಸಿ ನಾವು ಯಾವುದೇ ರಾಜಕಾರಣ ಮಾಡಲ್ಲ. ಬಿಜೆಪಿ ಮೇಲೆ ಆರೋಪ ಮಾಡೋ ಮಣ್ಣೆರೆಚಾಟ ಮಾಡಲ್ಲ. ನಾವು ಕೊಡೋ ಪರಿಹಾರದಿಂದ ಜೀವ ವಾಪಸ್ ಬರಲ್ಲ, ಪ್ರಾಕೃತಿಕ ಘಟನೆ. ಅವರ ಮೃತದೇಹ ಹುಡುಕುವ ಕೆಲಸ ಮಾಡಲಾಗ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಡ್ಡ ಕುಸಿತದಲ್ಲಿ 10 ಜನರು ಕಾಣೆಯಾಗಿದ್ದಾರೆ. 7 ಜನರ ಮೃತದೇಹ ದೊರಕಿದ್ದು, ಇನ್ನೂ 3 ಮೃತದೇಹ ದೊರಕಬೇಕಿದೆ. ಎಸ್ ಡಿ ಆರ್ ಎಫ್ 44, ಎನ್ ಡಿ ಆರ್ ಎಫ್ 24, ಆರ್ಮಿಯಿಂದ 44 ಜನರು ಬಂದಿದ್ದಾರೆ. ವಾಹನಗಳು ಕೂಡ ಕಾಣೆಯಾಗಿವೆ. ಟೀ ಅಂಗಡಿಯಿಟ್ಟು ವಾಸವಾಗಿದ್ದವರೂ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತದವರಿಗೆ ಹಾಗೂ ಶಾಸರಿಗೆ ರೆಸ್ಕ್ಯೂ ಆಪರೇಶನ್ ಮಾಡಲು ತ್ವರಿತ ಮಾಡಲು ಹೇಳಿದ್ದೇನೆ.ಯಾರೇ ತಪ್ಪು ಮಾಡಿದ್ರೂ ಕ್ರಮ…
ಬೆಳಗಾವಿ : ಸದ್ಯ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಒಂದೆಡೆ ರೈತರಿಗೆ ಖುಷಿಯಾಗಿದ್ದರೆ, ಇನ್ನೊಂದಡೆ ಹಲವು ರೈತರು ಅತಿಯಾದ ಮಳೆಯಿಂದ ಬೆಳೆ ನಾಶವಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಅಲ್ಲದೆ ಅತಿಯಾದ ಮಳೆಯಿಂದ ಹಲವು ಕಡೆ ಅವಾಂತರ ಸೃಷ್ಟಿಯಾಗಿದ್ದು ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಪಕ್ಕದ ಮನೆ ಗೋಡೆಗೋಸಿದ್ದು ವ್ಯಕ್ತಿ ಸಾವನ ಪರವಾಗಿ ನಡೆದಿದೆ. ಹೌದು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಪಕ್ಕದ ಮನೆ ಗೋಡೆ ಕುಸಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ. ನಿಪ್ಪಾಣಿ ನಗರದ ತಿರುಪತಿ ಹತ್ಕರ (45) ಮೃತರು ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿ ತಗಡಿನ ಶೆಡ್ನಲ್ಲಿ ವಾಸವಿದ್ದರು. ಶನಿವಾರ ತಡರಾತ್ರಿ ಪಕ್ಕದ ಮನೆ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇನ್ನುಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನಿಪ್ಪಾಣಿ ತಹಶೀಲ್ದಾರ್ ಹಾಗೂ ಚಿಕ್ಕೋಡಿ ಉಪವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.