Author: kannadanewsnow05

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖವಾದಂತೆ ಮಹಿಳೆಯರ ದೇಹರ ಭಾಗಗಳ ಗುಣ-ಲಕ್ಷಣಗಳನ್ನು ನೋಡಿ ಅವರ ಅದೃಷ್ಟದ ಬಗ್ಗೆ ತಿಳಿಯಬಹುದಾಗಿದೆ. ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ. ಪುರಾತನ ಕಾಲದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ. ಅದೃಷ್ಟವಂತ ಹೆಣ್ಣಿನ ಗುಣಲಕ್ಷಣ ಯಾವುದೆಂದರೆ- ಮನೆಯ ಹೆಣ್ಣು ಮಗಳು ಸದಾ ನಗು ನಗುತ ಇದ್ದರೆ ಮನೆ ಸದಾ ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರುತ್ತದೆ. ಹೆಣ್ಣಿನ ಹಣೆಯ ಭಾಗವು ಅಗಲವಾಗಿದ್ದರೆ ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಸುಖವಾಗಿರುತ್ತಾಳೆ. ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತನ್ನ ಗಂಡಂದಿರ ಪಾಲಿಗೆ ಅದೃಷ್ಟದ ದೇವತೆ ಇದ್ದಂತೆ. ಹೆಣ್ಣು ಮಕ್ಕಳು ಉದ್ದನೆಯ ಕತ್ತನ್ನು ಹೊಂದಿದ್ದರೆ ಅವರು ಹುಟ್ಟಿದ ಮನೆ ಹೋದ ಮನೆ ಎರಡು ಕಡೆಯೂ ಸಂಪತ್ತು ತರುತ್ತಾಳೆ. ದಪ್ಪವಾಗಿರುವ ಹೆಣ್ಣು…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆ ಸಾಲ ವಸೂತಿ ಕೇಸ್ ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇದೀಗ ಮೂವರನ್ನು ಬಂಧಿಸಿದ್ದಾರೆ. ಸೈಕಲ್ ರವಿ ಹಾಗೂ ಆತನ ಸಹಚರರ ಬಂಧನವಾಗಿದೆ ಎಂದು ತಿಳಿದುಬಂದಿದೆ. ಸೈಕಲ್ ರವಿ ಸಹಜರ ಉಮೇಶ್ ಸುರೇಶ್ ಮಂಜುನಾಥ್ ಅವರನ್ನು ಇದೀಗ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಟ್ರಾವೆಲ್ಸ್ ವ್ಯವಹಾರಕ್ಕಾಗಿ ಮಂಜುನಾಥ್ ಬಳಿ ರಂಗನಾಥ್ ಎನ್ನುವವರು ಸಾಲ ಪಡೆದಿದ್ದರು.ನಂತರ 23 ಲಕ್ಷ ಹಣವನ್ನು ರಂಗನಾಥ್ ಬಡ್ಡಿ ಸಮೇತವಾಗಿ ಹಿಂದಿರುಗಿಸಿದ್ದಾರೆ. ಆದರೆ ಮಂಜುನಾಥ್ ನಾನು ಮೀಟರ್ ಬಡ್ಡಿಗೆ ಹಣವನ್ನು ಕೊಟ್ಟಿರುವುದು ನೀನು ಇನ್ನೂ ಐದು ಲಕ್ಷ ಹಣ ಕೊಡಬೇಕು ಎಂದು ಮಂಜುನಾಥ್ ಪಟ್ಟು ಹಿಡಿದಿದ್ದಾನೆ. ಹಣ ಕೊಡಲು ರಂಗನಾಥರ ಕರಿಸಿದಾಗ ರೌಡಿಶೀಟರ್ ಗೆ ಹೇಳಿದ್ದ ಹಣ ವಸೂಲಿ ಮಾಡಿಕೊಡಲು ಮಂಜುನಾಥ್ ರೌಡಿಶೀಟರ್ ಉಮೇಶ್ ಗೆ ಹೇಳಿದ್ದ ಎನ್ನಲಾಗಿದೆ. ಹೊಸಕೆರೆ ಹಳ್ಳಿ ರೌಡಿಶೀಟರ್ ಉಮೇಶ್ ಎಂದು ಹೇಳಲಾಗುತ್ತಿದ್ದು.ರಂಗನಾಥ್ ಬಳಿ ಹಣವಸೂರಿಗೆ ಉಮೇಶ್ ಹಾಗೂ ಸುರೇಶನ್ನು ಅವರು ಮುಂದಾಗಿದ್ದಾರೆ.ಇವೇ ಹಣ ನೀಡುವಂತೆ ರಂಗನಾಥ್ ಗೆ…

Read More

ಬೆಂಗಳೂರು : ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆದ್ದರಿಂದ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದೇವೇಗೌಡರು, ಶುಕ್ರವಾರ ಬೆಳಗ್ಗೆ ತಮ್ಮ ವಾರ್ಡ್‌ನಲ್ಲಿ ಎಂದಿನಂತೆ ದಿನಪತ್ರಿಕೆಗಳತ್ತ ಕಣ್ಣು ಹಾಯಿಸಿದರು. ಬಳಿಕ ಬಳಿಕ ಕೆಲಹೊತ್ತು ಟಿವಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಮಂಡನೆಯನ್ನ ವೀಕ್ಷಿಸಿದರು ಎಂದು ಮೂಲಗಳು ತಿಳಿಸಿವೆ . ಗುರುವಾರ ಆಸ್ಪತ್ರೆಗೆ ದಾಖಲಾಗಿರುವ ಅವರಿಗೆ ಆಸ್ಪತ್ರೆಯ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆರೋಗ್ಯ ಸ್ಥಿತಿಯ ಬಗ್ಗೆ ನಿಗಾವಹಿಸಲು ಆಸ್ಪತ್ರೆಯಲ್ಲಿಯೇ ಇರಿಸಿ ಕೊಳ್ಳ ಲಾಗಿದೆ. ಶನಿವಾರ ಅಥವಾ ಭಾನುವಾರ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡುವ ಸಾಧ್ಯತೆಯಿದೆ. ಅವರು ತೀವ್ರ ಓಡಾಟದಿಂದ ದೈಹಿಕವಾಗಿ ಆಯಾಸಗೊಂಡಿದ್ದರು.

Read More

ಬೆಂಗಳೂರು : ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ, ವಿ ಎಸ್ ಪುಷ್ಪ ಮಾಹಿತಿ ನೀಡಿರುವ ಪ್ರಕಾರ ಮೇ 31ರವರೆಗೆ  HSRP ನಂಬರ್ ಅಳವಡಿಕೆಗೆ ಅವಕಾಶ ನೀಡಿ ಗಡವು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಸದನದಲ್ಲಿ ಸಾರಿಗೆ ಸಚಿವರು ಮಾಹಿತಿ ನೀಡಿದ್ದರು. ಗಡವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಲಾಗಿದೆ ಎನ್ನಲಾಗುತ್ತಿದೆ.ನಂಬರ್‌ ಪ್ಲೇಟ್‌ ಅಳವಡಿಕೆಗೆ ಫೆಬ್ರವರಿ 17 ರ ಡೆಡ್‌ಲೈನ್‌ ನೀಡಲಾಗಿತ್ತು. ಆದರೆ ಜಿಲ್ಲೆ ಜಿಲ್ಲೆಗಳಲ್ಲೂ ಈ ಪ್ಲೇಟ್‌ ಅಳವಡಿಕೆ ಆಗಿಲ್ಲ. ಇನ್ನೂ ಒಂದೂವರೆ ಕೋಟಿಗೂ ಹೆಚ್ಚು ವಾಹನಗಳಿಗೆ ಈ ಪ್ಲೇಟ್‌ ಅಳವಡಿಕೆ ಆಗಬೇಕಿದೆ ಎಂದು ಕಾಂಗ್ರೆಸ್‌ನ ಪರಿಷತ್‌ ಸದಸ್ಯ ಮಧು ಮಾದೇಗೌಡ ಸದನದಲ್ಲಿ ಪ್ರಸ್ತಾಪಿಸಿದ್ದರು. ಮಧು ಮಾದೇಗೌಡ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ ಸದ್ಯ 18 ಲಕ್ಷ ವಾಹನಗಳಿಗೆ ಮಾತ್ರ ಈ ಪ್ಲೇಟ್ ಅಳವಡಿಕೆ ಆಗಿದೆ. ಇನ್ನೂ ಒಂದು ಕೋಟಿ 82 ಲಕ್ಷ ವಾಹನಗಳಿಗೆ ಈ ಪ್ಲೇಟ್…

Read More

ಬೆಂಗಳೂರು: ಸದಾ ವಿವಾದದ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಯಾವುದೇ ರೀತಿಯಾದಂತಹ ಬಲವಂತ ಕ್ರಮ ಜರುಗಿಸಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ರಾಮಮಂದಿರ ವಿಚಾರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ ಸಂಬಂಧ ಬಿಜೆಪಿ ಸಂಸದ ಅನಂತಕುಮಾರ್‌ಹೆಗಡೆ ವಿರುದ್ಧ ಯಾವುದೇ ಬಲವಂತದಕ್ರಮ ಜರುಗಿಸಬಾರದು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ಮಾಡಿದೆ. ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಹಾಗೂ ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆ ಕೋರಿ ಹೆಗಡೆ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ಪೊಲೀಸರಿಗೆ ನಿರ್ದೇಶಿಸಿದೆ.ಜತೆಗೆ, ಅರ್ಜಿ ಸಂಬಂಧ ಕುಮಟಾ ಪೊಲೀಸರು ಮತ್ತು ದೂರುದಾರ ಮಂಜುನಾಥ್ ಗೌಡರ್ ಅವರಿಗೆ ನೋಟಿಸ್ ಜಾರಿಗೊಳಿಸಿ…

Read More

ಕಲಬುರ್ಗಿ: ಅನುಮತಿ ಪಡೆಯದೆ ಕಬ್ಬು ಅರೆದಿರುವ ಆರೋಪ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘಿಸಿರುವ ಆರೋಪ ಹಿನ್ನೆಲೆಯಲ್ಲಿ ವಿಜಯಪುರದ ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇಲಾಖೆ ಆಯುಕ್ತರು ನಿರ್ದೇಶಕರಿಂದ ಶಾಸಕ ಯತ್ನಾಳ್ಗೆ ನೋಟಿಸ್ ಜಾರಿ ಮಾಡಲಾಗಿದೆ. ಕಬ್ಬುವುದು ಸಕ್ಕರೆ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರು ನಿಮ್ಮ ವಿರುದ್ಧ ಏಕ ಕೇಸ್ ದಾಖಲಿಸಬಾರದೆಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ 24 ಗಂಟೆಯಲ್ಲಿ ನೋಟಿಸ್ ಗೆ ಉತ್ತರಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಉತ್ತರ ನೀಡದಿದ್ದರೆ ದೂರು ದಾಖಲಿಸುವುದಾಗಿಯೂ ಯತ್ನಾಳಿಗೆ ಎಚ್ಚರಿಕೆ ನೀಡಿದ್ದಾರೆ.

Read More

ಬೆಂಗಳೂರು: ಕೇರಳದ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿಜಯನ್ ಅವರ ವಿರುದ್ಧ ಬೆಂಗಳೂರಿನ ಐಟಿ ಕಂಪನಿ ಎಕ್ಸಾಲಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕೊಚ್ಚಿನ್ ಮಿನರಲ್ಸ್ – ರುಟೈಲ್ ಲಿಮಿಟೆಡ್ ನಡುವಿನ ಆರ್ಥಿಕ ವಹಿವಾಟುಗಳ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಗೊಳಿಸಿದೆ. ವೀಣಾ ತಮ್ಮ ವಿರುದ್ಧ ಗಂಭೀರ ವಂಚನೆಗಳ ತನಿಖಾ ಕಚೇರಿಯ (ಎಸ್‌ಎಫ್‌ಐಒ) ತನಿಖೆಗೆ ಆದೇಶಿಸಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಕೋರಿ ಎಕ್ಸಾಲಜಿಕ್ ಸಲ್ಯೂಷನ್ಸ್‌ ಕಂಪನಿಯ ನಿರ್ದೇಶಕಿ ವೀಣಾ ಪಿಣರಾಯಿ ವಿಜಯನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ‌ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯ ಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಶುಕ್ರವಾರ ಪ್ರಕಟಿಸಿದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಎರಡೂ ಕಂಪನಿಗಳ ನಡುವಿನ ಆರ್ಥಿಕ ವ್ಯವಹಾರದ ಮಾಹಿತಿ…

Read More

ಬೆಂಗಳೂರು : ಹಿಟ್ ಅಂಡ್ ರನ್ ಪ್ರಕರಣದಲ್ಲಿ ಪರಾರಿಯಾಗಿದ್ದ ದ್ವಿಚಕ್ರ ವಾಹನ ಸವಾರನನ್ನು ಬಸವನಗುಡಿ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಸವನಗುಡಿ ವೇಣು(25) ಬಂಧಿತ ದ್ವಿಚಕ್ರ ವಾಹನ ಸವಾರ. ಫೆ.12ರಂದು ಮುಂಜಾನೆ 2.45ರ ಸಮಾರಿಗೆ ಹನು ಮಂತನಗರದ 1ನೇ ಮುಖ್ಯ ರಸ್ತೆ ಗವಿ ಪುರ ಎಕ್ಸ್‌ಟೆನ್ಸನ್ ಅಂಚೆ ಕಚೇರಿ ಬಳಿ ಆಟೋರಿಕ್ಷಾಗೆ ದ್ವಿಚಕ್ರ ವಾಹನ ಡಿಕ್ಕಿ ಯಾಗಿತ್ತು. ಈ ವೇಳೆ ಆಟೋ ಚಾಲಕ ರಮೇಶ್ (48) ಮೇಲೆ ಆಟೋರಿಕ್ಷಾ ಬಿದ್ದು ಗಂಭೀರವಾಗಿ ಗಾಯಗೊಂಡಿ ದ್ದರು. ಬಳಿಕ ಸ್ಥಳೀಯರು ಗಾಯಾಳು ಆಟೋ ಚಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವ ವಾಗಿದ್ದ ಪರಿಣಾಮ ಚಿಕಿತ್ಸೆ ಫಲಿಸದೆ ರಮೇಶ್‌ ಮೃತಪಟ್ಟಿದ್ದರು. ಅಪಘಾತ ಎಸಗಿದ ದ್ವಿಚಕ್ರ ವಾಹನ ಸವಾರ ವೇಣು ಘಟನೆ ಬಳಿಕ ದ್ವಿಚಕ್ರ ವಾಹನ ಸಹಿತ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಬಸವನಗುಡಿ ಸಂಚಾರ ಠಾಣೆ ಪೊಲೀಸರಿಗೆ ಅಪಘಾತ ಎಸಗಿದ ದ್ವಿಚಕ್ರ ವಾಹನ ಮತ್ತು…

Read More

ವಿಜಯನಗರ : ಹಳೇ ವೈಷಮ್ಯದ ಕಾರಣದಿಂದ ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಎದೆಗೆ ಚೂರಿ ಹಾಕಿ ರೌಡಿಶೀಟರನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯನಗರದ ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಕಚೇರಿಯ ಬಳಿ ನಡೆದಿದೆ. ಬಂಗಾರಿ ಮಂಜುನಾಥ ( 28) ಕೊಲೆಯಾದ ರೌಡಿಶೀಟರ್. ಹಣಕಾಸಿನ ವಿಚಾರಕ್ಕೆ ನಡೆದಿರುವ ಗಲಾಟೆ ಮತ್ತು ಹಳೆ ವೈಷಮ್ಯದಿಂದ ಎದೆಗೆ ಚೂರಿಗೆ ಹಾಕಿರುವ ದುಷ್ಕರ್ಮಿಗಳು. ಕುಟುಂಬಸ್ಥರೇ ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ. ಕೊಲೆ ಘಟನೆ ಬಳಿಕ ವಿಜಯನಗರ ಎಸ್‌ಪಿ ಶ್ರೀಹರಿಬಾಬು ಬಿಎಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವಿಕಾಸ್, ವೆಂಕಟಸ್ವಾಮಿ ಸೇರಿದಂತೆ ಪೊಲೀಸರು ಸ್ಥಳದಲ್ಲಿ ಮೊಕ್ಕಮ ಹೂಡಿ ವಿಚಾಋಣೇ ಮುಂದುವರಿಸಿದ್ದಾರೆ

Read More

ಬೆಂಗಳೂರು : ರಾಜ್ಯದ ಅಭಿವೃದ್ಧಿಯ ಮುನ್ನೋಟ ನೀಡುವ 2024–25ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿದ್ದಾರೆ. 2024–25ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಇದು ಅವರು ಮಂಡಿಸುತ್ತಿರುವ ದಾಖಲೆಯ 15ನೇ ಬಜೆಟ್ ಆಗಿದ್ದು, ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ಬರೆಯ ಮಧ್ಯೆ ವಿತ್ತೀಯ ಶಿಸ್ತಿನ ಪರಿಮಿತಿಯಲ್ಲಿ ವೆಚ್ಚ, ಸಂಪನ್ಮೂಲ ಕ್ರೋಡೀಕರಣದ ಲೆಕ್ಕಾಚಾರಗಳ ಮೇಲಿನ ಕುತೂಹಲ ಹೆಚ್ಚಿಸಿದೆ. 2024–25ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ ಸಮಾಜ ಕಲ್ಯಾಣ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ವಸತಿ ಶಾಲೆಗಳು ಗ್ಯಾರಂಟಿ ಯೋಜನೆಗಳನ್ನು ಜಗತ್ತೇ ಮೆಚ್ಚಿದೆ.ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ  50,000 ರಿಂದ 55,000 ಕೋಟಿ ಮೊತ್ತದ ಗ್ಯಾರಂಟಿ ಯೋಜನೆಗಳ ಲಾಭ ರಾಜ್ಯದ ಜನರಿಗೆ ಲಭಿಸುತ್ತಿದೆ. ಈ ಯೋಜನೆಗಳನ್ನು ವಿರೋಧ ಪಕ್ಷಗಳು ‘ಬಿಟ್ಟಿ ಭಾಗ್ಯಗಳು’ ಎಂದು ಅಪಹಾಸ್ಯ ಮಾಡಿದ್ದವು. ಆದರೆ, ನಮ್ಮ ಕಲ್ಯಾಣ ಯೋಜನೆಗಳನ್ನು ಇಡೀ ಜಗತ್ತೇ ಮೆಚ್ಚಿದೆ.ವಿದ್ಯಾರ್ಥಿನಿಲಯ…

Read More