Subscribe to Updates
Get the latest creative news from FooBar about art, design and business.
Author: kannadanewsnow05
ಬಾಗಲಕೋಟೆ : ಈ ಸಾವು ಅನ್ನೋದು ಯಾರಿಗೆ ಯಾವಾಗ ಯಾವ ರೂಪದಲ್ಲಿ ಬರುತ್ತದೆ ಅನ್ನೋದು ಗೊತ್ತಾಗುವುದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಂತೂ ಯುವಜನತೆಯಲ್ಲಿ ಹೃದಯಘಾತ ಎನ್ನುವುದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೀಗ ಬಾಗಲಕೋಟೆಯಲ್ಲಿ ಘೋರವಾದ ದುರಂತ ಸಂಭವಿಸಿದ್ದು ತಾಳಿ ಕಟ್ಟಿದ ತಕ್ಷಣವೇ ವರನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ನಡೆದಿದೆ. ಹೌದು ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಹೃದಯಘಾತದಿಂದ ವರ ಸಾವನ್ನಪ್ಪಿದ್ದಾನೆ. ಮದುವೆ ಮಂಟಪದಲ್ಲಿ ಕುಸಿದು ಬಿದ್ದು ವರ ಪ್ರವೀಣ ಕುರ್ನೆ ಇದೀಗ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ತಾಳಿ ಕಟ್ಟಿದ ತಕ್ಷಣ ಪ್ರವೀಣ್ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿರುವ ನಂದೀಕೇಶ್ವರ ಕಲ್ಯಾಣ ಮಂಟಪದಲ್ಲಿ ವರ ಪ್ರವೀಣ್ ಕುರ್ನೆ ಸಾವನ್ನಪ್ಪಿದ್ದಾರೆ. ತಾಳಿ ಕಟ್ಟಿದ ತಕ್ಷಣ ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಹೃದಯಘಾತದಿಂದ ಸಾವನ್ನಪ್ಪಿದ್ದರೆ. ಇಂದು ಪ್ರವೀಣ್ ಕುರ್ನೆಹಾಗೂ ಪೂಜಾ ವಿವಾಹ ಸಮಾರಂಭ ನಡೆದಿತ್ತು. ಪ್ರವೀಣ್ ಕುರ್ವೆ ಜಮಖಂಡಿ ತಾಲೂಕಿನ ಕುಂಬಾರಹಳ್ಳ ನಿವಾಸಿ ಎನ್ನಲಾಗಿದ್ದು ಮದುವೆ ಸಂಭ್ರಮದಲ್ಲಿದ್ದ ಪ್ರವೀಣ್ ಮನೆಯಲ್ಲಿ ಇದೀಗ…
ಬೆಂಗಳೂರು : ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಆಫ್ರಿಕಾ ಪ್ರಜೆಯ ಬಳಿಯಿದ್ದ ಸುಮಾರು ನಾಲ್ಕು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದು ಆಫ್ರಿಕಾ ಪ್ರಜೆಯನ್ನು ಇದೀಗ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಬೆಂಗಳೂರು ಹೊರವಲಯದ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಡೇನಿಯಲ್ ಎಂಬುವವನ್ನು ಬಂಧಿಸಿ ಬರೋಬ್ಬರಿ ನಾಲ್ಕು ಕೋಟಿ ರೂ. ಮೌಲ್ಯದ 2.5 ಕೆಜಿ ಎಂಡಿಎಂಎ ಕ್ರಿಸ್ಟೆಲ್ ಸೀಜ್ ಮಾಡಿದ್ದಾರೆ. ಆರೋಪಿಯು 2023 ರ ಡಿಸೆಂಬರ್ನಲ್ಲಿ ವ್ಯಾಪಾರ ವೀಸಾದ ಮೇಲೆ ಬೆಂಗಳೂರಿಗೆ ಆಗಮಿಸಿ, ಸೋಲದೇವನಹಳ್ಳಿಯಲ್ಲಿ ತನ್ನ ಸ್ನೇಹಿತನೊಂದಿಗೆ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ ಪೊಲೀಸರು 1.48 ಕೆಜಿ ಬಿಳಿ ಬಣ್ಣದ ಎಂಡಿಎಂಎ ಡ್ರಗ್ಸ್ ಮತ್ತು 1.1 ಕೆಜಿ ಕಂದು ಬಣ್ಣದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರ…
ಬೆಂಗಳೂರು : ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದ ಹುಟ್ಟಡಗಿಸಿದ್ದು, ಈ ಯಶಸ್ವಿ ಕಾರ್ಯಾಚರಣೆ ಬೆನ್ನಲೇ ದೇಶಾದ್ಯಂತ ಬಿಜೆಪಿ ತಿರಂಗ ಯಾತ್ರೆಯನ್ನು ಆರಂಭಿಸಿದೆ. ಭಾರತ ಧ್ವಜ ಮತ್ತು ಸೈನಿಕರ ಫೋಟೋ ಒಳಗೊಂಡ ಟ್ಯಾಬ್ಲೋಗಳನ್ನು ಬಿಜೆಪಿ ಪ್ರದರ್ಶಿಸುತ್ತ ಯಾತ್ರೆ ನಡೆಸುತ್ತಿದೆ. ಇದೀಗ ಸದಾ ಒಂದಿಲ್ಲೊಂದು ವಿವಾದ ಹೇಳಿಕೆ ನೀಡುವುದಲ್ಲಿ ಬಹು ಭಾಷಾ ನಟ ಪ್ರಕಾಶ್ ರಾಜ್ ಮುಂದು. ಇದೀಗ ಬಿಜೆಪಿಯನ್ನು ಅಣಕಿಸುವ ಭರದಲ್ಲಿ, ಬಿಜೆಪಿ ಆರಂಭಿಸಿದ ತಿರಂಗಾ ಯಾತ್ರೆ ಬಗ್ಗೆ ‘ವೋಟಿಗಾಗಿ ರಸ್ತೆಯಲ್ಲಿ ಭಿಕ್ಷೆ ಎತ್ತುತ್ತಿರುವ ಭಿಕ್ಷುಕರು’ ಎಂದು ಟ್ವೀಟ್ ಮಾಡಿದ್ದಾರೆ. ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಬಿಜೆಪಿ ತಿರಂಗ ಯಾತ್ರೆ ನಡೆಸಿದ್ದು, ಈ ವೇಳೆ ದೊಡ್ಡ ದೊಡ್ಡ ಟ್ಯಾಬ್ಲೋಗಳ ಪ್ರದರ್ಶನ ಮಾಡಿದೆ. ಈ ಟ್ಯಾಬ್ಲೋಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೈನಿಕನ ಅವತಾರದಲ್ಲಿ ಗನ್ ಹಿಡಿದು ನಿಂತಿರುವುದನ್ನು ಕಾಣಬಹುದು. ಬಿಜೆಪಿಯ ಈ ತಿರಂಗ ಯಾತ್ರೆಯ ಕುರಿತು ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್,…
ದಾವಣಗೆರೆ : ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ಒಂದು ಡೀಲ್ ನಡೆದಿತ್ತು, ರಾಜ್ಯದಲ್ಲಿ ಸರ್ಕಾರ ರಚಿಸಲು ಶಿವಕುಮಾರ್ ಮುಖ್ಯಮಂತ್ರಿ ಮತ್ತು ವಿಜಯೇಂದ್ರ ಉಪ ಮುಖ್ಯಮಂತ್ರಿ ಎಂದು ಡೀಲ್ ಆಗಿದ್ದು ಗೊತ್ತಿಲ್ವ? ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ಉಚ್ಚಾಟನೆಯಾದ ಬಳಿಕ ಕ್ಷಮೆ ಕೋರಿ ಪತ್ರ ಬರೆದಿದ್ದೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗೆ ಒಪ್ಪಂದ ಮಾಡಿಕೊಡುವಂತಹ ಬಿವೈ ವಿಜಯೇಂದ್ರ ಅಂತಹ ಮಹಾಭ್ರಷ್ಟನೇ ಪಕ್ಷದಲ್ಲಿದ್ದಾನೆ. ನಾನು ಯಾಕೆ ಇರಬಾರದು? ನಾನು ಯಾರಿಗೂ ಕ್ಷಮೆ ಕೇಳಲ್ಲ, ಪತ್ರ ಬರೆಯಲ್ಲ, ಕೈ ಮುಗಿಯಲ್ಲ ನನಗೆ ಅಂತಹ ಅವಶ್ಯಕತೆಯೂ ಇಲ್ಲ ಎಂದು ಗುಡುಗಿದರು. ಮುಂದಿನ ನಡೆ ಏನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಇನ್ನೂ ಮೂರು ವರ್ಷ ಇದೆ ನೋಡೋಣ. ಆದರೆ ನನ್ನ ಸತ್ತ ಹೆಣ ಕೂಡ…
ದಾವಣಗೆರೆ : ಸ್ವಪಕ್ಷದ ವಿರುದ್ಧವೇ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಕುರಿತು ಪಕ್ಷ ವಿರೋಧಿ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ಕೇಂದ್ರೀಯ ಬಿಜೆಪಿ ಎಷ್ಟು ಸಮಿತಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಈ ವಿಚಾರವಾಗಿ ಶಾಸಕ ಯತ್ನಾಳ್ ಇದೀಗ ಮತ್ತೆ ಸ್ವಪಕ್ಷದ ವಿರುದ್ಧವೇ ಗುಡುಗಿದ್ದು ನಾನು ಯಾವುದೇ ರೀತಿಯಾಗಿ ಕ್ಷಮೆಯನ್ನು ಕೇಳಲ್ಲ ಪತ್ರಾನು ಬರೆಯಲ್ಲ ಎಂದು ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ಒಬ್ಬ ಹೇಳುತ್ತಾನೆ, ಯತ್ನಾಳರನ್ನು ಶಾಶ್ವತವಾಗಿ ಹೊರಹಾಕಿದ್ದೇನೆ ಅಂತಾ ಹೇಳ್ತಾನೆ. ಬಿಜೆಪಿ ಏನು ಅವರ ಅಪ್ಪನದ್ದ ಪಕ್ಷದಿಂದ ಹೊರ ಹಾಕುವುದಕ್ಕೆ? ಎಂತೆಂಥ ಕಳ್ಳ ನನ್ ಮಕ್ಕಳನ್ನು ಬಿಜೆಪಿಗೆ ಕರೆದುಕೊಂಡಿದ್ದಾರೆ. ನಾನೇನು ಅಂತ ತಪ್ಪು ಮಾಡಿದ್ದೇನೆ? ಡಿಕೆ ಶಿವಕುಮಾರ್ ಜೊತೆಗೆ ಒಳಗಿಂದೊಳಗೆ ಸರಕಾರ ನಡೆಸಲು ಮೀಟಿಂಗ್ ನಡೆಸಿದರು. ಒಳಗೊಳಗೆ ಸರ್ಕಾರ ನಡೆಸಲು ದೆಹಲಿಯಲ್ಲಿ ಸಭೆ ಮಾಡಿಲ್ವಾ? ಅಂತಹ ಭ್ರಷ್ಟರನ್ನೇ…
ಹಾಸನ : ಚಲಿಸುತ್ತಿದ್ದ ಬಸ್ ನಲ್ಲಿ ಏಕಾಏಕಿ ಭಾರಿ ಪ್ರಮಾಣದ ಹೊಗೆ ಕಾಣಿಸಿಕೊಂಡಿದ್ದು, ಎಸಿ ಟರ್ಬೋ ಗ್ಯಾಸ್ ಸೋರಿಕೆಯಾಗಿ ಬಸ್ ನಲ್ಲಿ ಭಾರಿ ಪ್ರಮಾಣದ ಹೊಗೆ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು ಈ ವೇಳೆ ತಕ್ಷಣ ಚಾಲಕ ಸಮಯಪ್ರಜ್ಞೆ ಮೆರೆದು ಬಸ್ನಿಂದ ಪ್ರಯಾಣಿಕರನ್ನು ಕೆಳಗೆ ಇಳಿಸಿ ಭಾರಿ ಅನಾಹುತ ತಪ್ಪಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಹೌದು ಖಾಸಗಿ ಬಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಇದೀಗ ಭಾರಿ ಅನಾಹುತ ಒಂದು ತಪ್ಪಿದೆ. ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಬಳಿ ಮಾರನಹಳ್ಳಿ ಸಮೀಪ ಈ ಒಂದು ಘಟನೆ ನಡೆದಿದೆ. ಬಸ್ ನಲ್ಲಿ ಹೊಗೆ ಆವರಿಸುತ್ತಿದ್ದಂತೆ ಬಸ್ ಚಾಲಕ ತಕ್ಷಣ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ಈ ಒಂದು ಘಟನೆ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಖಾಸಗಿ ಬಸ್ ಹೊರಟಿತ್ತು. ಶಿರಾಡಿ ಘಾಟ್ ಅಪ್ ನಲ್ಲಿ ಬಸ್ ಚಲಿಸುತ್ತಿದ್ದಾಗ ಏಕಾಏಕಿ ಭಾರಿ ಪ್ರಮಾಣದಲ್ಲಿ ಹೊಗೆ ಆವರಿಸಿದೆ. ಎಸಿ ಟರ್ಬೊ…
ಮಂಗಳೂರು ಮೇ 16: ನಾನೇ ಗುದ್ದಲಿಪೂಜೆ ಮಾಡಿದ ಪ್ರಜಾಸೌಧದ ಕಟ್ಟಡವನ್ನು ನಾನೇ ಉದ್ಘಾಟಿಸಿದ್ದೇನೆ. ಮಾಜಿ ಸಚಿವ ರಮಾನಾಥ ರೈ ಅವರ ಕಾಳಜಿಯಿಂದ ಪ್ರಜಾಸೌಧ ಕಟ್ಟಡಕ್ಕೆ ನಾನೇ ಗುದ್ದಲಿಪೂಜೆ ಮಾಡಿದ್ದೆ. ಈಗ ನಾನೇ ಉದ್ಘಾಟಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪ್ರಜಾಸೌಧ ಕಟ್ಟಡವನ್ನು ಪ್ರಜಾರ್ಪಣೆಗೊಳಿಸಿ ಮಾತನಾಡಿದರು. ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗುದ್ದಲಿ ಪೂಜೆ ನೆರವೇರಿಸಿ ಮೊದಲ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡಿದ್ದೆವು. ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ಪ್ರಜಾಸೌಧದ ಕೆಲಸ ನಿಂತು ಹೋಗಿತ್ತು. ಬಿಜೆಪಿ ಸರ್ಕಾರದಲ್ಲಿ ಕಾಮಗಾರಿ ಮುಂದುವರೆಯಲೇ ಇಲ್ಲ. ಇದನ್ನು ಪೂರ್ಣಗೊಳಿಸಲು ಮತ್ತೆ ನಾವೇ ಅಧಿಕಾರಕ್ಕೆ ಬರಬೇಕಾಯಿತು. ಬಿಜೆಪಿ ಅವಧಿಯಲ್ಲಿ ಉದ್ಘಾಟನೆ ಆಗಲಿಲ್ಲ ಏಕೆ ಎಂದು ವೇದಿಕೆಯಲ್ಲೇ ಇದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ…
ಗುಜರಾತ್ : 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿ, ಆತನಿಂದಲೇ ಗರ್ಭಿಣಿಯಾಗಿ ಸದ್ಯ ಪೋಕ್ಸೊ ಕಾಯ್ದೆಯಡಿ ಬಂಧನದಲ್ಲಿರುವ 23 ವರ್ಷದ ಶಿಕ್ಷಕಿಯ ಗರ್ಭಪಾತಕ್ಕೆ ಗುಜರಾತ್‌ನ ಸೂರತ್‌ನ ವಿಶೇಷ ಪೋಕ್ಸೋ ನ್ಯಾಯಾಲಯ ಅನುಮತಿ ನೀಡಿದೆ. ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಕೇಸ್‌ನಲ್ಲಿ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದು, ಸದ್ಯ ಸೂರತ್‌ನ ಜೈಲಿನಲ್ಲಿದ್ದಾಳೆ. ಹೌದು ಇಡಿ ದೇಶವೇ ಬೆಚ್ಚಿ ಬೀಳಿಸೋ ಪ್ರಕರಣ ಇದಾಗಿದ್ದು, ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಆಕೆಯ ಮಾನಸಿಕ ತೊಂದರೆಗಳನ್ನು ಗಣನೆಗೆ ತೆಗೆದುಕೊಂಡು ಈ ತೀರ್ಪು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಬಾಲಕ ನಾಪತ್ತೆಯಾದ ಬಳಿಕ ಈ ಬಗ್ಗೆ ಆತನ ತಂದೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸೂರತ್ ನಗರದ ಪುಣೆ ಠಾಣೆಯ ಪೊಲೀಸರು ಇವರನ್ನು ದೂರು ದಾಖಲಾದ 6 ದಿನಗಳ ಬಳಿಕ ಗುಜರಾತ್-ರಾಜಸ್ಥಾನ ಗಡಿಯಲ್ಲಿ ಪತ್ತೆ ಹಚ್ಚಿದ್ದರು. ಈ ವೇಳೆ ಶಿಕ್ಷಕಿ 20 ವಾರಗಳ ಗರ್ಭಿಣಿಯಾಗಿದ್ದಳು. ಏನಿದು ಪ್ರಕರಣ? ಗುಜರಾತಿನ…
ಕಲಬುರ್ಗಿ : ನಿನ್ನೆ ಕಲ್ಬುರ್ಗಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಈ ವೇಳೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಹಾಗೂ ಪಕ್ಕದ ಯಡ್ರಾಮಿ ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ನಡೆದಿದೆ. ಮೃತರನ್ನು ಜೇವರ್ಗಿ ತಾಲ್ಲೂಕಿನ ರೇವನೂರ್ ಗ್ರಾಮದ ಶ್ರೀನಾಥ್ ಹಾಗೂ ಯಡ್ರಾಮಿ ತಾಲ್ಲೂಕಿನ ಪಡಗದಳ್ಳಿಯ ಸಿದ್ದಪ್ಪ ಪೂಜಾರಿ (33) ಎಂದು ಗುರುತಿಸಲಾಗಿದೆ. ಶ್ರೀನಾಥ್, ಗುರುವಾರ ಗ್ರಾಮದ ತನ್ನ ಹೊಲಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ಸಿಡಿಲು ಬಡಿದು ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಸಿದ್ದಪ್ಪ ಪೂಜಾರಿ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೀದರ್ : ಬೀದರ್ ನಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಪ್ರಥಮ ವರ್ಷದ ಬಿ-ಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ, ಬೀದರ್‌ನ ನೌಬಾದ್‌ನಲ್ಲಿರುವ ಬಿಸಿಎಂ ವಸತಿ ನಿಲಯದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ನವನಾಥ ಬಾಜೀರಾವ್ ದೊಂಡಿಬಾ ಎಂದು ತಿಳಿದುಬಂದಿದೆ.ನವನಾಥ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.ಭಾಲ್ಕಿ ತಾಲೂಕಿನ ಲಖನಗಾಂವ್ ಗ್ರಾಮದ ದೊಂಡಿಬಾ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ನಿನ್ನೆಯಷ್ಟೇ ಬಿ-ಫಾರ್ಮಸಿ ಪರೀಕ್ಷೆ ಮುಕ್ತಾಯಗೊಂಡಿದೆ. ಪರೀಕ್ಷೆ ಮುಗಿದಿದ್ದು ಊರಿಗೆ ಬರ್ತೀನಿ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾನೆ. ಆದ್ರೆ, ಊರಿಗೆ ಹೋಗುವುದಕ್ಕೂ ಮುನ್ನವೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅವರ ಸಹಪಾಠಿಗಳು ಹೇಳಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













