Author: kannadanewsnow05

ಬೆಂಗಳೂರು : ನಟ ದರ್ಶನ್ ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ಕಲ್ಪಿಸುವ ವಿಚಾರವಾಗಿ 57ನೇ ಸಿಸಿಎಚ್ ಕೋರ್ಟ್ ಗೆ ಕಾನೂನು ಸೇವೆಗಳ ಪ್ರಾಧಿಕಾರ ವರದಿ ಸಲ್ಲಿಸಿದೆ. ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾ. ವರದರಾಜ ಸಲ್ಲಿಸಿದ ವರದಿಯಲ್ಲಿ ಹಲವು ಮಾಹಿತಿಗಳು ಇದೀಗ ಲಭ್ಯವಾಗಿದೆ. ನಟ ದರ್ಶನ್ ಪರ ವಕೀಲರು ಎತ್ತಿದ್ದ ಎಲ್ಲಾ ತಕರಾರುಗಳನ್ನು ಪರಿಶೀಲನೆ ಮಾಡಲಾಗಿದೆ. ದರ್ಶನ್ ಬ್ಯಾರಕ್ ನಲ್ಲಿ ಒಂದು ಇಂಡಿಯನ್ ಒಂದು ವೆಸ್ಟರ್ನ್ ಟಾಯ್ಲೆಟ್ ಇದೆ. ದರ್ಶನ್ಗೆ ಹಾಸಿಗೆ ದಿಂಬು ಕೊಟ್ಟಿಲ್ಲವೆಂಬ ಆರೋಪ ವಿಚಾರವಾಗಿ ಕೊಲೆ ಆರೋಪಿ ವಿಚಾರಣಾಧೀನ ಕೈದಿಗೆ ಹಾಸಿಗೆ ದಿಂಬಿಗೆ ಅವಕಾಶವಿಲ್ಲ. ಇತರೆ ಕೈದಿಗಳಂತೆ ಬಿಸಿಲಲ್ಲಿ ದರ್ಶನ್ ನಡೆದಾಡಲು ಬಿಟ್ಟಿಲ್ಲವೆಂಬ ಆರೋಪದ ವಿಚಾರವಾಗಿ ನಿಯಮದಂತೆ 1 ಗಂಟೆ ವಾಕಿಂಗ್ ಆಟವಾಡಲು ಅವಕಾಶ ನೀಡಬಹುದು. ದರ್ಶನ ಸೆಲೆಬ್ರಿಟಿ ಆಗಿರುವುದರಿಂದ ಓಡಾಡಿದರೆ ಇತರೆ ಕೈದಿಗಳು ಕಿರುಚುತ್ತಾರೆ, ಅಕ್ಕ ಪಕ್ಕದ ಅಪಾರ್ಟ್ಮೆಂಟ್ ಗಳಿಂದ ಫೋಟೋ ತೆಗೆಯುತ್ತಾರೆ ಎಂದು ದರ್ಶನ್ ಪರ ವಕೀಲರ ಆಕ್ಷೇಪಕ್ಕೆ, ಹೊರಗಡೆ ಓಡಾಡಲು ಅವಕಾಶ ನೀಡಬೇಕು ಈ ವೇಳೆ…

Read More

ಹಾಸನ : ಒಂದು ಕಡೆ ರಾಜ್ಯ ಸರ್ಕಾರ ಆರ್ ಎಸ್ ಎಸ್ ಸೇರಿದಂತೆ ಇತರೆ ಸಂಘಟನೆಗಳ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಹೇಳಿದೆ. ಇನ್ನೊಂದು ಕಡೆ ಆರ್ಎಸ್ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆರ್‌ಎಸ್‌ ಪಥ ಸಂಚಲನ ನಡೆಸುತ್ತಿದ್ದು ಈ ವಿಚಾರವಾಗಿ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮುಂದಿನ ದಿನಗಳಲ್ಲಿ ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ್ಕರೆ ಆಡಳಿತ ನಡೆಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಇಂದು ಹಾಸನದಲ್ಲಿ ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಯಾವ ಸರ್ಕಾರದಿಂದಲೂ ಆರ್ ಎಸ್ ಎಸ್ ಹತ್ತಿಕ್ಕಲು ಸಾಧ್ಯವಿಲ್ಲ. ಕೊರೋನ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಶಾಖೆ ಮಾಡಿದ್ದೆವು. ಮೈದಾನ ಇಲ್ಲ ಅಂದರೆ ಆರ್ಎಸ್ಎಸ್ ಅನ್ನು ನಿಲ್ಲಿಸಲು ಆಗುತ್ತದ? ರಾಷ್ಟ್ರೀಯ ಸ್ವಯಂಸೇವಕ ಅಂದರೆ ಒಂದು ಕುಟುಂಬ, ಒಂದು ಪರಿವಾರ ಇದ್ದಂತೆ. ನಮಗೆ ಮೈದಾನವೇ ಬೇಕು ಅಂತ ಏನು ಇಲ್ಲ. ರಾಷ್ಟ್ರೀಯ ಸ್ವಯಂಸೇವಕರೇ ಮುಂದೆ ಆಡಳಿತವನ್ನು ನಡೆಸುತ್ತಾರೆ. ಇದು ನಿಮಗೆ ಗೊತ್ತಿರಲಿ ಅಷ್ಟೇ ಎಂದು ಕಾರ್ಕಳ ಶಾಸಕ ಸುನಿಲ್…

Read More

ಬಾಗಲಕೋಟೆ : ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷ ಪೂರೈಸುತ್ತದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ ಹಾಗು CM ಬದಲಾವಣೆ ಸಹ ಆಗುತ್ತೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದೀಗ ಬಿಜೆಪಿಯ ಮಾಜಿ ಸಚಿವ ರಾಜುಗೌಡ ನೆಕ್ಸ್ಟ್ ಸಿಎಂ ಸತೀಶ್ ಜಾರಕಿಹೊಳಿ ಆಗಲಿ ಎಂದು ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ವೀರ ಜಡಗಣ್ಣ ಬಾಲಣ್ಣ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಿ ಅವರು ಮಾತನಾಡಿದ ಅವರು ಸ್ವತಂತ್ರ ವೀರ ಯೋಧ ಜಡಗಣ್ಣ ಬಾಲಣ್ಣಗೆ ಜಾರಕಿಹೊಳಿಯವರನ್ನು ಹೋಲಿಸಿ, ಹಾಡಿ ಹೊಗಳಿದ್ದಾರೆ. ನಮ್ಮ ಸಮಾಜಕ್ಕೆ ಸತೀಶಣ್ಣ ಜಾರಕಿಹೊಳಿ ಜಡಗಣ್ಣ ಬಾಲಣ್ಣ ಇದ್ದಂತೆ. ಮಾತು ಕಡಿಮೆ ಆದ್ರೆ ಪ್ಲ್ಯಾನ್ ಹಾಕಿದ್ರೆ ಕರೆಕ್ಟ್ ಏಟು ಹಾಕ್ತಾನೆ ನಮ್ಮಣ್ಣ. ವೀರ ಯೋಧ ಜಡಗಣ್ಣ ಬಾಲಣ್ಣ ಅವ್ರು ಬ್ರಿಟೀಷರ ಎದುರು ಶಸ್ತ್ರತ್ಯಾಗ ಮಾಡಿರಲಿಲ್ಲ. ನೀನು ಶಸ್ತ್ರ ತ್ಯಾಗ ಮಾಡಬೇಡ ಎಂದಿದ್ದಾರೆ. ಮುಂದಿನ ಸಿಎಂ…

Read More

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಹಿಂಬದಿಯಿಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಾಲಕ ಸೇರಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡಹಳ್ಳಿ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡಹಳ್ಳಿಲ್ಲಿ ಲಾರಿಗೆ ಬಸ್ ಡಿಕ್ಕಿ ಆಗಿದ್ದರಿಂದ ಬಸ್ನಲ್ಲಿಯೇ ಜನರು ಸಿಲುಕಿದ್ದರು.. ಸತತ ಒಂದು ಗಂಟೆಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಯಲಹಂಕ ಮತ್ತು ಹಿಂದೂಪುರ ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ ಘಟನೆ ನಡೆದಿದ್ದು, ಪಿಜಿಯಲ್ಲಿ ನೇಣು ಬಿಗಿದುಕೊಂಡು ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಬೆಂಗಳೂರಿನ ಬಾಗಲೂರಿನ ಪಿಜಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸನಾ ಪರ್ವೀನ್ ಎನ್ನುವ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ಸನಾ ಸಾವಿಗೆ ಆಕೆ ಓದುತ್ತಿದ್ದ ಕಾಲೇಜಿನ ಪಾಸ್ ಔಟ್ ವಿದ್ಯಾರ್ಥಿ ಕಾರಣ ಎಂದು ಹೇಳಲಾಗುತ್ತಿದೆ. ಮೃತ ಸಾನಾ ಕುಟುಂಬದವರಿಂದ ರಿಫಾಸ್ ಎನ್ನುವ ವಿದ್ಯಾರ್ಥಿಯ ವಿರುದ್ಧ ಆರೋಪ ಕೇಳಿ ಬಂದಿದೆ. ಸನಾ ಪರ್ವೀನ್ ಓದುತ್ತಿದ್ದ ಕಾಲೇಜಿನಲ್ಲಿ ರಿಫಾಸ್ ಸಹ ಓದುತ್ತಿದ್ದ. ಈತ ಪಾಸ್ ಔಟ್ ಆಗಿದ್ದರು ಸನಾಗೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. ರಿಫಾಸ್ ಮೂಲತಃ ಕೇರಳ ವಿದ್ಯಾರ್ಥಿಯಾಗಿದ್ದು ಕಳೆದ 10 ತಿಂಗಳ ಹಿಂದೆ ಪರ್ವೀನ್ ಗೆ ಸಾಕಷ್ಟು ಕಿರುಕುಳ ನೀಡಿದ್ದಾನೆ. ಪಾಸ್ ಔಟ್ ಆದ ನಂತರ ಕೂಡ ಈಕೆ ಓದುತ್ತಿದ್ದ ಕಾಲೇಜಿಗೆ ಬರೋದು ಹೋಗೋದು ಮಾಡುತ್ತಿದ್ದ. ಪಿಜಿ ಬಳಿಗೆ ಬಂದು ಸಾಕಷ್ಟು ಹಿಂಸೆ ಕೊಡುತ್ತಿದ್ದ ಎಂದು ಸ್ನೇಹಿತರು ಹೇಳಿದ್ದಾರೆ. ಈ…

Read More

ಕಲಬುರ್ಗಿ : ಆಳಂದ್ ಕ್ಷೇತ್ರದಲ್ಲಿ ಮತಗಳ್ಳತನ ವಿಚಾರಕ್ಕೆ ಸಂಬಂಧಪಟ್ಟಂತೆ ಬಗೆದಷ್ಟು ಕರಾಳತೆ ಬಯಲಾಗುತ್ತಿದೆ. ಇದೀಗ ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಒಡೆತನದ ಅಪ್ನಾ ಬಾರ್ & ರೆಸ್ಟೋರೆಂಟ್ ನಲ್ಲಿ ಮತದಾರರ ವೋಟರ್ ಲಿಸ್ಟ್ ಪತ್ತೆಯಾಗಿದೆ ಎಂದು ಎಸ್ಐಟಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ ಎಸ್ಐಟಿ ದಾಳಿಯ ವೇಳೆ ಮತದಾರರ ಪಟ್ಟಿ ಪತ್ತೆಯಾಗಿದೆ. ಇದೀಗ SIT ತನಿಖೆಯಲ್ಲಿ ಸ್ಪೋಟಕ ಅಂಶಗಳು ಬಯಲಾಗಿದ್ದು, ಕಾಲ್ ಸೆಂಟರ್ ಮೂಲಕ ಮತಗಳ್ಳತನ ಮಾಡುತಿದ್ದರು ಎಂಬುದು ಪತ್ತೆಯಾಗಿದೆ. ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ ವೇಳೆ ಬೆಚ್ಚಿ ಬೀಳಿಸುವ ಅಂಶಗಳು ಪತ್ತೆಯಾಗಿವೆ . ಫಾರ್ಮ್ ನಂಬರ್ 7 ಬಳಕೆ ಮಾಡಿ ವೋಟರ್ ಡಿಲೀಟ್ ಮಾಡುತ್ತಿದ್ದರು. ಅಧಿಕಾರಿಗಳ ದಾಳಿಯ ವೇಳೆ ಕಾಲು ಸೆಂಟರ್‌ನ ಮೂಲ ಪತ್ತೆಯಾಗಿದೆ. ಎಸ್ ಐ ಟಿ ಅಧಿಕಾರಿಗಳು ದಾಳಿ ಮಾಡಿದ್ದಾಗ ಅಕ್ರಮ್, ಅಶ್ಪಾಕ್, ಅಸ್ಲಾಂ ಸೇರಿದಂತೆ ಓಟು 4 ಜನರನ್ನು ಇದಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ. ರೇಡ್ ಆಗುತ್ತೆ ಅಂತ ಗೊತ್ತಾದ ತಕ್ಷಣವೇ ಬಾರ್ ನಲ್ಲಿಯೇ ಮತದಾರರ…

Read More

ಕಲಬುರ್ಗಿ : ಆಳಂದ್ ಕ್ಷೇತ್ರದಲ್ಲಿ ಮತಗಳ್ಳತನ ವಿಚಾರಕ್ಕೆ ಸಂಬಂಧಪಟ್ಟಂತೆ ಬಗೆದಷ್ಟು ಕರಾಳತೆ ಬಯಲಾಗುತ್ತಿದೆ. ಇದೀಗ ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಒಡೆತನದ ಅಪ್ನಾ ಬಾರ್ & ರೆಸ್ಟೋರೆಂಟ್ ನಲ್ಲಿ ಮತದಾರರ ವೋಟರ್ ಲಿಸ್ಟ್ ಪತ್ತೆಯಾಗಿದೆ ಎಂದು ಎಸ್ಐಟಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ ಎಸ್ಐಟಿ ದಾಳಿಯ ವೇಳೆ ಮತದಾರರ ಪಟ್ಟಿ ಪತ್ತೆಯಾಗಿದೆ. ರೇಡ್ ಆಗುತ್ತೆ ಅಂತ ಗೊತ್ತಾದ ತಕ್ಷಣವೇ ಬಾರ್ ನಲ್ಲಿಯೇ ಮತದಾರರ ಪಟ್ಟಿ ಡಿಲೀಟ್ ಗೆ ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ವೋಟ್ ಚೋರರಿಂದ 7 ಬಾರಿ ಬಾರ್ ನಲ್ಲಿ ಮೀಟಿಂಗ್ ನಡೆಸಲಾಗಿದೆ. ನಿನ್ನೆ ಅಪ್ನಾ ಬಾರ್ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ, ದಾಳಿಯ ವೇಳೆ ಬಾರ್ ನಲ್ಲಿ ವೋಟರ್ ಲಿಸ್ಟ್ ಗಳು ಪತ್ತೆಯಾಗಿವೆ. ಅಲ್ಲದೆ ಮತದಾರರ ದಾಖಲೆಗಳನ್ನು ಸುಟ್ಟು ಹಾಕಿದ್ದ ವಿಚಾರವಾಗಿ ಕೂಡಿಸುವ ಹಣವನ್ನು ಆಳಂದ ಠಾಣೆ ಪೋಲಿಸಿರುವ ಶೆಕೆ ಪಡೆದುಕೊಂಡಿದ್ದು ಚಾಲಕ ವಿಶಾಲ್ ಪರಾರಿಯಾಗಿದ್ದಾನೆ. ಆತನ ಹುಡುಕಾಟಕ್ಕಾಗಿ ತೀವ್ರ ಶೋಧ ನಡೆಯುತ್ತಿದೆ. ಅಲ್ಲದೆ SIT…

Read More

ಮೈಸೂರು : ಚಿತ್ತಾಪುರದಲ್ಲಿ ನಾಳೆ ಆರ್ ಎಸ್ ಎಸ್ ಪಥಸಂಚಲನ ಹಿನ್ನೆಲೆಯಲ್ಲಿ ಅನುಮತಿ ಪಡೆಯದ ಕಾರಣ ಆರ್ ಎಸ್ ಎಸ್ ಬ್ಯಾನರ್ ಮತ್ತು ಭಗವಾಧ್ವಜಗಳನ್ನ ತೆರವುಗೊಳಿಸಲಾಗಿದೆ. ಈ ಕುರಿತು ನಾವು ಆರ್ ಎಸ್ ಎಸ್ ಟಾರ್ಗೆಟ್ ಮಾಡಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು ಚಿತ್ತಾಪುರ ಗಲಾಟೆ ಬಗ್ಗೆ ನಾನು ಸಚಿವ ಪ್ರಿಯಾಂಕ ಖರ್ಗೆ ಅವರಿಂದ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು ಯಾವುದೇ ಸಂಘಟನೆಗಳು ಕಾರ್ಯಕ್ರಮ ನಡೆಸಬೇಕಾದರೆ ಅನುಮತಿ ಪಡೆಯಬೇಕು. ಇದು 2013ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗಲೆ ಮಾಡಲಾಗಿತ್ತು. ಅದನ್ನ ನಾವು ಈಗ ರಿಪೀಟ್ ಮಾಡಿದ್ದೇವೆ. ಜಗದೀಶ ಶೆಟ್ಟರ್ ಮಾಡಿದಾಗ ಇವರು ಯಾಕೆ ವಿರೋಧ ಮಾಡಲಿಲ್ಲ? ಹಾಗಾಗಿ ನಾವು ಆರ್ಎಸ್ಎಸ್ ಟಾರ್ಗೆಟ್ ಮಾಡಿಲ್ಲ. ಬಿಜೆಪಿ ಯಾವಾಗಲೂ ರಾಜಕಾರಣನೇ ಮಾಡೋದು ಬಡವರ ಕೆಲಸ ಮಾಡಲ್ಲ ಅವರು ಯಾವಾಗಲೂ ರಾಜಕಾರಣ ಮಾಡುತ್ತಾರೆ ಎಂದರು.

Read More

ಕಲಬುರ್ಗಿ : ಆಳಂದ್ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆಯ ಮೇಲೆ ಎಸ್ಐಟಿ ದಾಳಿ ವಿಚಾರಕ್ಕೆ ಸಂಬಂಧಪಟ್ಟಂತೆ, ಗೂಡ್ಸ್ ವಾಹನದಲ್ಲಿ ಮತದಾರರ ದಾಖಲೆಗಳನ್ನು ತಂದು ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಗೂಡ್ಸ್ ವಾಹನವನ್ನು ಆಳಂದ ಠಾಣೆ ಪೊಲೀಸ್ರು ಅವಶ್ಯಕ ಪಡೆದುಕೊಂಡಿದ್ದು ಚಾಲಕ ವಿಶಾಲ್ ಪರಾರಿ ಆಗಿದ್ದಾನೆ. ಮತದಾರರ ದಾಖಲೆ ಬಂಡಲ್ ಗೆ ಬೆಂಕಿ ಹಚ್ಚಿ ನದಿಗೆ ಎಸೆದಿದ್ದ ಚಾಲಕ ಪರಾಗಿದ್ದಾನೆ. ಸದ್ಯ ಗೂಡ್ಸ್ ವಾಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ವಿಶಾಲ್ ಗಾಗಿ ಆಳಂದ ಠಾಣೆ ಪಡಿಸಲು ತೀವ್ರ ಹುಡುಕಾಟ ನಡೆಸಿದ್ದಾರೆ. SIT ಮತಗಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಕಲಬುರ್ಗಿ ಜಿಲ್ಲೆಯ ಪೊಲೀಸರು ಎಲ್ಲ ಮಾಹಿತಿ ಸಂಗ್ರಹಿಸಿದ್ದಾರೆ.

Read More

ಬೆಂಗಳೂರು : ಆಳಂದದಲ್ಲಿ ಮತದಾರರ ದಾಖಲೆಗಳನ್ನು ಸುಟ್ಟು ಹಾಕಿದ ವಿಚಾರವಾಗಿ ಬಿಜೆಪಿ ಮೇಲೆ ಮತಗಳ್ಳತನ ಆರೋಪ ಮಾಡಿದ್ದು ಸಾಬೀತಾಗಿದೆ.ಆಳಂದದ ಮಾಜಿ ಶಾಸಕನ ಕೈವಾಡ ಇರುವುದು ಎದ್ದು ಕಾಣುತ್ತಿದೆ. ಲೋಕಸಭೆ ಚುನಾವಣೆಯಲ್ಲೂ ಕೂಡ ಕಳ್ಳತನದಿಂದ ಗೆದ್ದು ಸರ್ಕಾರ ರಚನೆ ಮಾಡಿದ್ದಾರೆ. ಕೇಂದ್ರದಲ್ಲಿ ಅಪವಿತ್ರ ಸರ್ಕಾರ ರಚಿಸಿದ್ದಾರೆ. ರಾಹುಲ್ ಗಾಂಧಿ ಆರೋಪ ನಿಜ ಎಂಬುದು ಸಾಬೀತು ಆಗಿದೆ. ಬಿಜೆಪಿಯವರು ಕಳ್ಳರು ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಬಿಜೆಪಿ ವಿರುದ್ಧ ಶಾಸಕ ಪ್ರದೀಪ ಕಿಡಿ ಕಾರಿದರು. ಇನ್ನು ಕಲಬುರ್ಗಿ ಜಿಲ್ಲೆಯ ಚಿತಾಪುರದಲ್ಲಿ ನಾಳೆ ಆರ್ ಎಸ್ ಎಸ್ ಮತ ಸಂಚಲನ ವಿಚಾರವಾಗಿ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ, ಅಶ್ವಥ ನಾರಾಯಣ, ಸಿಟಿ ರವಿಯವರು ತಮ್ಮ ಮಕ್ಕಳಿಗೂ ಆರ್ ಎಸ್ ಎಸ್ ಗಣ ವೇಷ ಹಾಕಿಸಲಿ. ನಮಾಜ್ ನಿಷೇಧಿಸುವಂತೆ ಶಾಸಕ ಯತ್ನಾಳ್ ಪತ್ರ ಬರೆದಿದ್ದಾರೆ ಯತ್ನಾಳ್ ಸಾಹೇಬರೇ ಬ್ರೈನ್ ತಲೆ ಬುರುಡೆ ಒಳಗೆ ಇರುತ್ತದೆ ನಿಮ್ಮ ಬ್ರೈನ್ ಎಲ್ಲಿದೆ ಅಂತ ನನಗೆ ಡೌಟ್. ಅವರು ಮಸೀದಿ ಆವರಣದಲ್ಲಿ…

Read More