Author: kannadanewsnow05

ಬೆಂಗಳೂರು : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನ ಘೋಷಿಸಲಾಗಿದ್ದು, 2022 ರಿಂದ ಚಿತ್ರರಂಗದಲ್ಲಿ ಅತ್ಯುತ್ತಮವಾದುದನ್ನ ಆಚರಿಸಲಾಗುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿಜೇತರನ್ನು ಬಹಿರಂಗಪಡಿಸಿತು. ಕನ್ನಡಿಗ, ನಟ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇದರ ಜೊತೆಗೆ ನಟ ಯಶ್ ನಟಿಸಿರುವ ಕೆಜಿಎಫ್​: ಚಾಪ್ಟರ್​ 2 ಸಿನೆಮಾಗೂ ಕೂಡ 2 ಪ್ರಶಸ್ತಿ. ದೊರಕಿವೆ. ನನಗೆ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಬಂದ ಕೂಡಲೇ ನಟ ಯಶ್ ಅವರು ಇಂದು ಅವರು ಶೂಟಿಂಗ್​ನಲ್ಲಿ ಇದ್ದರಂತೆ. ರಾಷ್ಟ್ರ ಪ್ರಶಸ್ತಿ ಬಂದ ತಕ್ಷಣ ಫೋನ್​ ಮಾಡಿ ವಿಶ್​ ಮಾಡಿದರು ಎಂದು ಮಾಧ್ಯಮಗಳೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು. ಯಶ್​ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾಗೆ ತುಂಬ ದೊಡ್ಡ ಬೆಂಬಲ ನೀಡಿದ್ದರು. ಸಿನಿಮಾ ನೋಡಿ ನನಗೆ ವಿಶ್​ ಮಾಡಿದ್ದರು. ಜನರಿಗೆ ಆ ಸಿನಿಮಾ ತಲುಪಲು ಅವರ ಕೊಡುಗೆ ಇತ್ತು. ಆ ಫೀಲಿಂಗ್​ ಇಂದಿಗೂ ಅವರ ಮೇಲಿದೆ.ಅವರು ವಿಶ್ ಮಾಡಿದಕ್ಕೆ…

Read More

ಮಂಡ್ಯ : ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಇಡಿ ದೇಶದಲ್ಲಿ ಭಾರಿ ಸದ್ದು ಮಾಡಿತ್ತು. ಅದಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಇದೀಗ ಮತ್ತೆ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೌದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆ ದಂಧೆ ಬೆಳಕಿಗೆ ಬಂದಿದೆ.ಭ್ರೂಣಲಿಂಗ ಪತ್ತೆ ಮಾಡುತ್ತಿದ್ದಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರಿಂದ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಾವಿನಕೆರೆ ಗ್ರಾಮದ ಧನಂಜಯ್ ಎಂಬವರಿಗೆ ಸೇರಿದ ತೋಟದ ಮನೆಯಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆ ನಡೆಯುತ್ತಿರುವ ಬಗ್ಗೆ ಡಿಎಚ್‌ಒ ಡಾ.ಮೋಹನ್‌ಗೆ ಎರಡು ತಿಂಗಳ ಹಿಂದೆ ಮಾಹಿತಿ ಬಂದಿತ್ತು. ಹೀಗಾಗಿ ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಯೋಜನೆ ರೂಪಿಸಲಾಗಿತ್ತು. ಅದರಂತೆ, ಡಿಎಚ್‌ಒ ಡಾ.ಮೋಹನ್‌, ಗರ್ಭಿಣಿಯೊಬ್ಬರನ್ನು ಈ ಗ್ಯಾಂಗ್‌ಗೆ ಸಂಪರ್ಕಿಸಿದ್ದರು. ಬಳಿಕ ಗರ್ಭಿಣಿ ಮಹಿಳೆ ಮಗು…

Read More

ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದಲ್ಲಿ ಮಕ್ಕಳಿಗೆ ನೀಡಬೇಕಿದ್ದ ಮೊಟ್ಟೆ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಗರಟಗಿ ಅಂಗನವಾಡಿ ಕಾರ್ಯಕರ್ತೆ ಉಮಾದೇವಿಯನ್ನು ಇದೀಗ ಅಮಾನತು ಮಾಡಲಾಗಿದೆ. ಹೌದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಉಮಾದೇವಿ ಕೆಳತಿಂಗಳಿಂದ ಕಾಳಸಂತೆಯಲ್ಲಿ ಮೊಟ್ಟೆ ಮಾರುತಿದ್ದರು. ಅದರ ಜೊತೆಗೆ ಅಕ್ಕಿ, ಗೋಧಿ, ರವೆ, ಅಡುಗೆ ಎಣ್ಣೆ, ಬೆಲ್ಲ, ಬೆಳೆ ಸಹ ಮಾರಾಟ ಮಾಡುತ್ತಿದ್ದಳು. ಆಹಾರ ಪದಾರ್ಥ ಮಾರಾಟದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ.ಹಾಗಾಗಿ ಇದೀಗ ಉಮಾದೇವಿಯನ್ನು ಅಮಾನತು ಮಾಡಲಾಗಿದೆ. ಹಗರಟಗಿ ಗ್ರಾಮದ‌ ಅಂಗನವಾಡಿ ಕೇಂದ್ರ-2ರ ಅಕ್ರಮ ಬಯಲಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಉಮಾರಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಅಕ್ಕಿ, ಬೇಳೆ, ಶೇಂಗಾ, ಬೆಲ್ಲ, ಚಿಕ್ಕೆ ಹಾಗೂ ಅಡುಗೆ ಎಣ್ಣೆ ಸೇರಿದಂತೆ ಸರ್ಕಾರದಿಂದ ಬರುವ ಆಹಾರ ಪದಾರ್ಥಗಳನ್ನು ಮೂಟೆಯಲ್ಲಿ ಉಮಾ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಸ್ಥಳೀಯರ ಮೊಬೈಲ್​ನಲ್ಲಿ ಅಂಗನವಾಡಿ ಕಾರ್ಯಕರ್ತೆಯ ಕಳ್ಳಾಟ ಬಯಲಾಗಿದೆ.

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಭಾರಿ ಮಳೆ, ಬಿರುಗಾಳಿಯಿಂದಾಗಿ ಬೃಹತ್ ಮರ ಬಿದ್ದು ಆರು ಜನರಿಗೆ ಗಾಯವಾಗಿತ್ತು. ಇದೀಗ ಇಂದು ಕೂಡ ಬೆಂಗಳೂರಿನ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು ವಾಹನ ಸವಾರರು ರಸ್ತೆಯಲ್ಲಿ ಚಲಿಸಲಾಗದೆ ಪರದಾಟ ನಡೆಸಿದರು. ಹೌದು ಬೆಂಗಳೂರಿನ ಇಂದು ವರಮಹಾಲಕ್ಷ್ಮಿ ಹಬ್ಬದಂದೆ ವರುಣನ ಆಗಮನವಾಗಿದೆ. ನಗರದ ವಿಧಾನ ಸೌಧ, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವೆಡೆ ಮಳೆ(Rain) ಆಗಿದ್ದು, ದಿಢೀರ್​ ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಹೆಸರಘಟ್ಟ ಸೇರಿದಂತೆ ಹಲವಾರು ಕಡೆ ಮಳೆ ಆರಂಭವಾಗಿದೆ.

Read More

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳಿಂದ ಅನೇಕ ಅಪಘಾತ ಪ್ರಕರಣಗಳು ನಡೆಯುತ್ತವೆ. ಇದೀಗ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಒಬ್ಬ ಸಚಿವರು ಟ್ವೀಟ್ ಮೂಲಕ ಮನವಿ ಮಾಡಿಕೊಂಡರು ಸಹ ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಸಚಿವರ ಟ್ವೀಟ್ ಚರ್ಚೆಗೆ ಗ್ರಾಸವಾಗಿದೆ. ಹೌದು ವೀರಣ್ಣನ ಪಾಳ್ಳದ ಬಳಿ ರಸ್ತೆ ಗುಂಡಿ ಮುಚ್ಚುವಂತೆ ಕೃಷ್ಣ ಬೈರೇಗೌಡ ವಿಡಿಯೋ ಜೊತೆಗೆ ಸಾಮಾಜಿಕ ಜಾಲತಾಣ ಎಕ್ಷ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಬಿಬಿಎಂಪಿ ಆಯುಕ್ತರಾಗಲಿ ಅಥವಾ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಲಿ ದಯವಿಟ್ಟು ರಸ್ತೆ ಗುಂಡಿಯನ್ನು ಮುಚ್ಚಿ ಎಂದು ಮನವಿ ಮಾಡಿದ್ದರು. ಕಂದಾಯ ಸಚಿವರೇ ರಸ್ತೆ ಗುಂಡಿಯನ್ನು ಮುಚ್ಚಲು ಅಧಿಕಾರಿಗಳ ಬಳಿ ಬಹಿರಂಗವಾಗಿ ಮನವಿ ಮಾಡುವ ಪರಿಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೇ ವಿಚಾರವಾಗಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಅಧಿಕಾರಿಗಳಿಗೆ ಮಾಹಿತಿ ಕೊಡಲು ನಾನಾ…

Read More

ಹಾಸನ : ಅತಿಯಾದ ಮಳೆ ಬೀಳುತ್ತಿರುವುದರಿಂದ ಹಾಸನ ಜಿಲ್ಲೆಯ ಸಕಲೇಶಪುರದ ಆಚಾಂಗಿ ದೊಡ್ಡ ನಾಗರ ರೇಲ್ವೆ ಹಳಿಯ ಬಳಿ ಮತ್ತೆ ಭೂ ಕುಸಿತ ಉಂಟಾಗಿದೆ.ಹಾಗಾಗಿ ಬೆಂಗಳೂರು-ಮಂಗಳೂರು ನಡುವಿನ ಸಂಚಾರ ಸ್ಥಗಿತವಾಗಿದೆ. ವಾರದ ಹಿಂದೆ ಇದೆ ಜಾಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ಬಳಿಕ ಮಣ್ಣು ತೆರವು ಮಾಡಿ ರೈಲು ಸಂಚಾರ ಆರಂಭ ಬಳಿಕ ಇದೀಗ ಮತ್ತೆ ಮಣ್ಣು ಕುಸಿತವಾಗಿದೆ. ಭೂಕುಸಿತದಿಂದಾಗಿ ಮಾರ್ಗಮಧ್ಯೆ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು ಕಳೆದ ಒಂದು ಗಂಟೆಯಿಂದ ಬಾಳ್ಳುಪೇಟೆ ಬಳಿ ನಿಂತುಕೊಂಡಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ರೈಲು ಸಂಚಾರ ಸ್ಥಗಿತವಾಗಿದ್ದರಿಂದ ನೂರಾರು ಪ್ರಯಾಣಿಕರು ಪರದಾಡಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು ಪರಿಶೀಲನೆ ಮಾಡಿದ್ದಾರೆ. ಈ ಮುಂಚೆ ಭೂ ಕುಸಿತವಾದಾಗ ಒಟ್ಟು 6 ಕಡೆ ರೈಲು ಸಂಚಾರದಲ್ಲಿ ವ್ಯತ್ಯಯ ಆಗಿತ್ತು. ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರ, ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರ್ಡೇಶ್ವರ, ಆಲೂರು-ಹಾಸನ, ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಒಟ್ಟು 6 ಕಡೆಗಳಲ್ಲಿನ ರೈಲು ಸಂಚಾರದಲ್ಲಿ…

Read More

ಉತ್ತರಕನ್ನಡ : ಕಾರವಾರದ ಕೋಡಿಭಾಗ್​ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆ ಸೇತುವೆ ಕುಸಿದು ಬಿದ್ದಿದೆ. ಈ ಹಿನ್ನೆಲೆ ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದೀಗ ಅಂಕೋಲಾ ಕಾರ್ವಾರ್ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಹೊಸ ಸೇತುವೆ ಸೇಫ್ ಅಲ್ಲ ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಳಿ ನದಿ ಬಳಿ ಇರುವ ನೂತನ ಸೇತುವೆ ಸೇಫ್ ಅಲ್ಲ. ಹೊಸ ಸೇತುವೆ ಸೇಫ್ ಅಲ್ಲ ಅಂತ ಈ ಹಿಂದೆ ಪ್ರತಿಭಟನೆ ಮಾಡಿದ್ದೆ. ಆದರೆ ಸ್ಥಳೀಯರು ಅದಕ್ಕೆ ರಾಜಕೀಯ ತಿರುವು ಕೊಟ್ಟಿದ್ದರು. ರಾಜಕೀಯ ಮಾಡಿದ್ದಕ್ಕೆ ಬೇಸರಗೊಂಡು ಪ್ರತಿಭಟನೆಯನ್ನು ಕೈ ಬಿಟ್ಟಿದ್ದೆ. ಈಗ ಆ ಸೇತುವೆ ಬಿರುಕು ಬಿಟ್ಟಿರುವ ಫೋಟೋ ಹರಿದಾಡುತ್ತಿದೆ.ವಾರದ ಹಿಂದೆ ಹಳೆಯ ಸೇತುವೆ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳು ಒಂದೇ ಕ್ಷೇತ್ರದ ಮೇಲೆ ಸಂಚರಿಸುತ್ತವೆ. ಸಂಬಂಧಪಟ್ಟವರು ಆದಷ್ಟು ಬೇಗ ಮುನ್ನೆಚ್ಚರಿಕೆಯನ್ನು ವಹಿಸಬೇಕು ಕೂಡಲೇ ಎಚ್ಚೆತ್ತುಕೊಂಡು ಐnಆರ್ ಬಿ ಯವರು ಕೆಲಸ ಮಾಡಬೇಕಿದೆ ಎಂದು…

Read More

ಬೆಂಗಳೂರು : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನ ಘೋಷಿಸಲಾಗಿದ್ದು, 2022 ರಿಂದ ಚಿತ್ರರಂಗದಲ್ಲಿ ಅತ್ಯುತ್ತಮವಾದುದನ್ನ ಆಚರಿಸಲಾಗುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿಜೇತರನ್ನು ಬಹಿರಂಗಪಡಿಸಿತು. ಕನ್ನಡಿಗ, ನಟ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇನ್ನು ಪ್ರಶಸ್ತಿ ಬಂದಿರುವ ಕುರಿತು ನಟ ನಿರ್ದೇಶಕ ರಿಷಬ್ ಶೆಟ್ಟಿ ಮೊದಲ ಪ್ರತಿಕ್ರಿಯೆ ನೀಡಿದ್ದು, ಪ್ರಶಸ್ತಿ ಘೋಷಣೆ ಮಾಡುವಾಗಲೇ ಪ್ರಶಸ್ತಿ ಬಂದಿರುವುದು ಗೊತ್ತಾಗಿದೆ. ಸಿನಿಮಾವನ್ನು ಜನ ನೋಡಿ ಮೆಚ್ಚುವುದು ಮುಖ್ಯವಾಗಿದೆ. ನಮ್ಮ ಸಿನಿಮಾ ತಂಡಕ್ಕೂ ಅಭಿನಂದನೆ ಹೇಳುತ್ತೇನೆ. ಕಾಂತಾರ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಈ ಒಂದು ಪ್ರಶಸ್ತಿಯನ್ನು ನಾನು ದೈವಕ್ಕೆ ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದರು. ಇಡೀ ಚಿತ್ರತಂಡಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೇ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ನನ್ನ ಪತ್ನಿಗೂ ಕೂಡ ಧನ್ಯವಾದ ಹೇಳುತ್ತೇನೆ. ಸಿನಿಮಾವನ್ನು ಜನ ನೋಡಿ ಮೆಚ್ಚುವುದು ಮುಖ್ಯವಾಗಿದೆ. ತುಂಬಾ ಜನ ಕರೆ ಮಾಡಿ ನನಗೆ ಶುಭಾಶಯ ತಿಳಿಸಿದ್ದಾರೆ…

Read More

ದಾವಣಗೆರೆ : ಬಿ ವೈ ವಿಜಯೇಂದ್ರ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ, ಬಿಜೆಪಿಯ ಮಾಜಿ ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದು, ವಿಜಯೇಂದ್ರ ಗೆಲುವಿಗೆ ಯಡಿಯೂರಪ್ಪ ಕಾರಣ. ಅವರಿಂದಲೇ ನಾವು ಶಾಸಕ, ಸಚಿವರು ಆಗಿದ್ದು ಎಂದು ತಿಳಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಿವೈ ವಿಜಯೇಂದ್ರ ಗೆಲುವಿಗೆ ಕಾಂಗ್ರೆಸ್ ಕಾರಣ ಎಂಬುವುದು ಸುಳ್ಳು. ಬಿ ಎಸ್ ಯಡಿಯೂರಪ್ಪ ಅವರು ಬಿ ವೈ ವಿಜಯೇಂದ್ರ ಗೆಲುವಿಗೆ ಕಾರಣ. ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾರಣವೇ ಬಿಎಸ್ ಯಡಿಯೂರಪ್ಪ. ಬಿಎಸ್ ಯಡಿಯೂರಪ್ಪ ಅವರಿಂದಲೇ ನಾವು ಶಾಸಕ ಸಚಿವರಾಗಿದ್ದು ಎಂದು ತಿಳಿಸಿದರು. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಮಾಡಿದ್ದು ವರಿಷ್ಠರು. ವಿಜಯೇಂದ್ರ ಸ್ಥಾನ ಬದಲಾವಣೆ ಅಸಾಧ್ಯ. ವರಿಷ್ಟರು ಅನುಮತಿ ನೀಡಿದರೆ ಯತ್ನಾಳ ಪಾದಯಾತ್ರೆ ಮಾಡಲಿ ನಾವು ಪಾದಯಾತ್ರೆಯಲ್ಲಿ ಭಾಗವಹಿಸುತ್ತೇವೆ. ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಹಾಗೂ ಹಿಂದುತ್ವ ತುಂಬಿದೆ ಎಂದು ಅವರು ತಿಳಿಸಿದರು. ನನಗೆ ಕಾಂಗ್ರೆಸ್ ಅಗತ್ಯವೇ…

Read More

ದಾವಣಗೆರೆ : ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗಲೇ ವಿದ್ಯುತ್ ತಗುಲಿ ಅಲ್ಲೇ ಕೆಲಸ ಮಾಡುತ್ತಿದ್ದ ದಂಪತಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ವ್ಯಾಪ್ತಿಯ ಕಾಟೀಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದಂಪತಿಗಳನ್ನು ಲತಾ ಹಾಗೂ ನಾಗರಾಜ್ ಎಂದು ತಿಳಿದುಬಂದಿದೆ. ನಾಗರಾಜ್ ಹಾಗೂ ಲತಾ ಇಬ್ಬರೂ ರೈತರಾಗಿದ್ದು, ದಿನನಿತ್ಯ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಮಳೆ ಹೆಚ್ಚಾಗಿದ್ದರಿಂದ ಬೆಳೆಯ ಆರೈಕೆ ಮಾಡುತ್ತಿದ್ದರು. ಮಳೆಯಿಂದ ಇಡೀ ಟ್ರಾನ್ಸ್‌ಫಾರ್ಮರ್ ಒದ್ದೆಯಾಗಿದ್ದು, ವಿದ್ಯುತ್ ಗ್ರೌಂಡ್ ಆಗಿದೆ‌. ಇದನ್ನು ಗಮನಿಸದ ಇಬ್ಬರೂ ಕೆಲಸ ಮಾಡುತ್ತಾ ಟ್ರಾನ್ಸ್‌ಫಾರ್ಮರ್ ಬಳಿ ತೆರಳಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.ವಿಷಯ ತಿಳಿದು ಮಾಯಕೊಂಡ ಕಾಂಗ್ರೆಸ್ ಶಾಸಕ ಕೆ.ಎಸ್. ಬಸವಂತಪ್ಪ ತಕ್ಷಣ ಗ್ರಾಮಕ್ಕೆ ತೆರಳಿ ಸಂತಾಪ ಸೂಚಿಸಿದರು. ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.‌ ಘಟನೆ ಸ್ಥಳಕ್ಕೆ ದಾವಣಗೆರೆ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Read More