Author: kannadanewsnow05

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಭೀಕರವಾದ ಮರ್ಡರ್ ಆಗಿದ್ದು 29 ವರ್ಷದ ಯುವಕನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಂದ ಬಳಿಕ ದುಷ್ಕರ್ಮಿಗಳು ಶವವನ್ನು ರಸ್ತೆಯ ಬದಿಯಲ್ಲಿ ಬಿಸಾಕಿ ಹೋಗಿದ್ದಾರೆ. ಹುಬ್ಬಳ್ಳಿಯ ರಾಷ್ಟ್ರೀಯ ದಾರಿಯಲ್ಲಿ ಕಿರಾತಕರು ಶವ ಎಸೆದಿದ್ದಾರೆ. ಗದಗ ರಸ್ತೆಯ ಐಟಿಸಿ ಗೌಡನ್ ಸಮೀಪವಿರುವ ಹೆದ್ದಾರಿಯಲ್ಲಿ ಯುವಕನ ಶವ ಬಿಸಾಕಿದ್ದಾರೆ. ಮಂಜುನಾಥ ಗಾಣಿಗೇರ (29) ಹತ್ಯೆಯಾದ ಯುವಕ ಎಂದು ತಿಳಿದುಬಂದಿದೆ. ಮೃತ ಮಂಜುನಾಥ್ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಬೇರೆ ಕಡೆ ಕೊಲೆ ಮಾಡಿ ನಂತರ ಗುರುತು ಸಿಗದಂತೆ ರಸ್ತೆಯ ಮೇಲೆ ಬಿಸಾಕಿ ಹೋಗಿದ್ದಾರೆ ರಸ್ತೆಯಲ್ಲಿ ಹೋಗುತ್ತಿದ್ದವರಿಂದ ಪೊಲೀಸರಿಗೆ ಮಾಹಿತಿ ಹೋಗುತ್ತದೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸುತ್ತಿದ್ದಾರೆ. ಹತ್ಯೆಗೈದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಇದೀಗ ಬಲೆ ಬೀಸಿದ್ದಾರೆ.

Read More

ಚಿತ್ರದುರ್ಗ : ಮೊಬೈಲ್ಗೆ ಟೆಂಪರ್ ಗ್ಲಾಸ್ ಗಾಗಿ ಜಗಳ ನಡೆದಿದ್ದು ಮೊಬೈಲ್ ಅಂಗಡಿ ಮಾಲೀಕನಿಗೆ ಚಾಕು ಇರಿಲಾಗಿದೆ. ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿದಿರುವ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿ ನಡೆದಿದೆ. ಚಿತ್ರದುರ್ಗದ ಜಿಲಾಸ್ಪತ್ರೆ ಬಳಿ ಸಂತೆ ಮೈದಾನ ಬಳಿಯ ಮೊಬೈಲ್ ಅಂಗಡಿಯಲ್ಲಿ ಈ ಒಂದು ಘಟನೆ ನಡೆದಿದೆ.ಅನ್ಯಕೋಮಿನ ಯುವಕನೊಬ್ಬ ಮೊಬೈಲ್ಗೆ ಟೆಂಪರ್ ಕ್ಲಾಸ್ ವಿಚಾರವಾಗಿ ಗಲಾಟೆ ಆಗಿದೆ. ಈ ವೇಳೆ ಅಂಗಡಿ ಮಾಲೀಕನಿಗೆ ಅನ್ಯಕೋಮಿನ ಯುವಕ ಚಾಕು ಇರಿದಿರುವ ಘಟನೆ ನಡೆದಿದೆ. ಘಟನೆ ಖಂಡಿಸಿ ಚಿತ್ರದುರ್ಗದ ಜಿಲ್ಲಾಸ್ಪತ್ರೆ ಬಳಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮೊಬೈಲ್ ಸ್ಕ್ರೀನ್ ಗಾರ್ಡ್ ಬದಲಿಸಲು ಅನ್ಯಕೊಮಿನ ಯುವಕ ಮೊಬೈಲ್ ಶಾಪ್ ಗೆ ಬಂದಿದ್ದಾನೆ. ಬೇರೆ ಬ್ರಾಂಡ್ ಸ್ಕ್ರೀನ್ ಗಾರ್ಡಿಗೆ ಅಂಗಡಿ ಮಾಲೀಕ ವಿಕ್ರಂ ಹೆಚ್ಚುವರಿ ಹಣ ಕೇಳಿದ್ದಾರೆ. 100 ರೂಪಾಯಿ ಹೆಚ್ಚುವರಿ ಹಣ ಕೇಳಿದ್ದ ವಿಕ್ರಂ ಚೌದರಿ, ಇಲ್ಲವಾದರೆ ಹಣ ವಾಪಸ್ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ. ಹೆಚ್ಚುವರಿ ಹಣ ಕೇಳಿದಕ್ಕೆ ಜಗಳ ಮಾಡಿ…

Read More

ಬೆಂಗಳೂರು : ಬೆಂಗಳೂರಿನ ಬನಶಂಕರಿಯಲ್ಲಿರುವ ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಗಳು ವ್ಯಾಪಾರಿಗೆ ಜಿಎಸ್‌ಟಿ ಅಧಿಕಾರಿಗಳ ಸೋಗಿನಲ್ಲಿ ಬೆದರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ್ ಹಾಗೂ ದಾದಾಪೀರ್ ಬಂಧಿತ ಆರೋಪಿಗಳು. ಬನಶಂಕರಿಯಲ್ಲಿರುವ ಜಿಎಸ್‌ಟಿ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಇಬ್ಬರೂ ಆರೋಪಿಗಳು ಹೊರಗುತ್ತಿಗೆ ಆಧಾರದಲ್ಲಿ ಹೌಸ್‌ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಸಿಎಲ್‌ಟಿಎಸ್ ಹಾಗೂ ಇಂಟಲಿಜೆನ್ಸ್ ಅಧಿಕಾರಿಗಳಂತೆ ನಕಲಿ ಐಡಿ ಕಾರ್ಡ್‌ಗಳನ್ನ ಮಾಡಿಸಿಕೊಂಡಿದ್ದ ಆರೋಪಿಗಳು, ಜನವರಿ 10ರಂದು ಪೀಣ್ಯದಲ್ಲಿ ಓರ್ವ ಗುಟ್ಕಾ ವ್ಯಾಪಾರಿಯನ್ನ ಬೆದರಿಸಿ 5 ಲಕ್ಷ ವಸೂಲಿ ಮಾಡಿದ್ದರು. ಆರೋಪಿತರ ಕಾರ್ಯವೈಖರಿ ಬಗ್ಗೆ ಅನುಮಾನಗೊಂಡ ಕಚೇರಿ‌ ಅಧಿಕಾರಿಗಳು ಫೆಬ್ರವರಿ 17ರಂದು ಅವರು ವಾಸವಿದ್ದ ಕಚೇರಿಯ ಕೊಠಡಿಯಲ್ಲಿ ತಪಾಸಣೆ ನಡೆಸಿದ್ದರು. ಪರಿಶೀಲನೆ ಸಂದರ್ಭದಲ್ಲಿ ನಕಲಿ ಐಡಿ ಕಾರ್ಡ್‌ಗಳು, ಸರ್ಚ್ ವಾರೆಂಟ್ ಪ್ರತಿಗಳು ಪತ್ತೆಯಾಗಿವೆ. ಕೂಡಲೇ ಜಿಎಸ್‌ಟಿ ಅಧಿಕಾರಿಗಳು ಬನಶಂಕರಿ…

Read More

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿರು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಪ್ರತಿಭಟನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ 21 ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಧ್ಯರಾತ್ರಿಯ ಬಂಧನ ಮಾಡಿ ಜಾಮೀನು ಮಂಜೂರು ಮಾಡಲಾಗಿದೆ. ಆನೇಕಲ್ ನ ಸರ್ಜಾಪುರದಲ್ಲಿರುವ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ನಿನ್ನೆ ಏಕಾಏಕಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಾರೆ. ಸ್ಪಾರ್ಕ್ ಎನ್ನುವ ಸಂಘಟನೆ ಈ ಒಂದು ಕಾರ್ಯಕ್ರಮ ಆಯೋಜನೆ ಮಾಡಿತ್ತು. ದೇಶ ವಿರೋಧಿ ಕಾರ್ಯಕ್ರಮ ಆಯೋಜನೆ ಮಾಡಿರುವ ಆರೋಪ ಕೇಳಿ ಬಂದಿದೆ. ಎಬಿವಿಪಿ ಪ್ರತಿಭಟನೆ ವಿರುದ್ಧವಾಗಿ ಕಾಲೇಜಿನ ವಿದ್ಯಾರ್ಥಿಗಳು ಕಳೆದ ರಾತ್ರಿ ಆಕ್ರೋಶ ಹೊರಹಾಕಿದ್ದು ಘೋಷಣೆ ಕೂಗಿ ಕಿಡಿ ಕಾರಿದ್ದಾರೆ. ಇದೇ ವೇಳೆ ಓರ್ವ ವಿದ್ಯಾರ್ಥಿ ಮೇಲೆ ಹಲ್ಲೆ ಕೂಡ ಮಾಡಿರುವ ಆರೋಪ ಕೇಳಿ ಬಂದಿದೆ. ಕಾಶ್ಮೀರ ಮಹಿಳೆಯರ ಧ್ವನಿ ಕುರಿತು ಕಾರ್ಯಕ್ರಮ ಯೋಜನೆ ಮಾಡಲಾಗಿತ್ತು. ಆದರೆ ಎಬಿವಿಪಿ ಪ್ರತಿಭಟನೆ ಮೂಲಕ ಪ್ರತಿಭಟನೆ ಮಾಡಿ ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ. ಬಲವಂತವಾಗಿ ವಿಶ್ವವಿದ್ಯಾಲಯಕ್ಕೆ ನುಗ್ಗಿ…

Read More

ಬೆಂಗಳೂರು: ಮಧ್ಯಾಹ್ನದ ಊಟಕ್ಕೆ ಅಥವಾ ಮಕ್ಕಳಿಗೆ ಲಂಚ್ ಬಾಕ್ಸ್ ಕಳುಹಿಸಲು ಪ್ರತಿದಿನ ಒಂದೇ ರೀತಿಯ ಅಡುಗೆ ಮಾಡಿ ಬೇಸರವಾಗಿದೆಯೇ? ಹಾಗಿದ್ದರೆ, ಮದುವೆ ಮನೆ ಅಥವಾ ಹೋಟೆಲ್‌ನಲ್ಲಿ ಸಿಗುವಂತಹ ಅದ್ಭುತ ರುಚಿಯ ವೆಜ್ ಪಲಾವ್ (Vegetable Pulao) ಅನ್ನು ಕೇವಲ 30 ನಿಮಿಷಗಳಲ್ಲಿ ನಿಮ್ಮ ಮನೆಯಲ್ಲೇ ತಯಾರಿಸಬಹುದು. ಉದುರುದುರಾದ ಅನ್ನ, ಹಸಿರು ಮಸಾಲೆಯ ಘಮ ಮತ್ತು ಕರಿದ ಬ್ರೆಡ್ ತುಂಡುಗಳ ಕ್ರಂಚಿ ರುಚಿ – ಈ ಪಲಾವ್‌ನ ಸ್ಪೆಷಾಲಿಟಿ. ಇದನ್ನು ಮಾಡುವ ಸರಳ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು (Ingredients): ರುಚಿಕರ ಪಲಾವ್ ತಯಾರಿಸಲು ಈ ಕೆಳಗಿನ ಪದಾರ್ಥಗಳನ್ನು ಸಿದ್ಧಪಡಿಸಿಕೊಳ್ಳಿ: ಅಕ್ಕಿ: 1.5 ಕಪ್ (ಸೋನಾ ಮಸೂರಿ ಅಥವಾ ಬಾಸುಮತಿ – 20 ನಿಮಿಷ ನೆನೆಸಿಡಿ). ತರಕಾರಿಗಳು: 1 ಕಪ್ (ಕ್ಯಾರೆಟ್, ಬೀನ್ಸ್, ಆಲೂಗಡ್ಡೆ, ಬಟಾಣಿ, ನೂಲ್ ಕೋಲ್). ಒಗ್ಗರಣೆಗೆ: 1 ಈರುಳ್ಳಿ, 1 ಟೊಮೆಟೊ, 3-4 ಚಮಚ ಎಣ್ಣೆ + ತುಪ್ಪ. ರುಬ್ಬಲು (ಹಸಿರು ಮಸಾಲೆ): ½ ಕಪ್ ತೆಂಗಿನಕಾಯಿ…

Read More

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿಯಾಗಿದ್ದಾನೆ. ಕಲ್ಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ರಾಷ್ಟ್ರೋತ್ಥಾನ ಶಾಲೆಯ ಬಳಿ ಈ ಒಂದು ಘಟನೆ ಸಂಭವಿಸಿದೆ. ಬೈಕ್ ಸವಾರ ಶಿವಲಿಂಗಪ್ಪ ಸ್ಥಳದಲ್ಲೇ ಸಾವನಪ್ಪಿದ್ದರೆ ಮತ್ತೊಬ್ಬ ಮತ್ತೊಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಬೈಕ್ ಸವಾರನಿಗೆ ಥಾರ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದ್ದು, ಮತ್ತೊರ್ವನಿಗೆ ಗಂಭೀರವಾದ ಗಾಯವಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು 175 ಅಂಗಡಿಗಳು ಇರುವ ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಚಿಕ್ಕಪೇಟೆಯ ಕುಂಬಾರಪೇಟೆ ಬಳಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಫ್ಯಾನ್ಸಿ ಸ್ಟೋರ್, ಪ್ಲಾಸ್ಟಿಕ್ ಅಂಗಡಿ ಇವೆಲ್ಲ ಕೂಡ ಹೊತ್ತಿ ಉರಿಯುತ್ತಿವೆ. ವಿನೋದ್ ಎಂಬವರಿಗೆ ಈ ಒಂದು ಕಟ್ಟಡ ಸೇರಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಇಡೀ ಏರಿಯಾದಲ್ಲಿ ದಟ್ಟ ಹೊಗೆ ಆವರಿಸಿದೆ. 5 ಅಗ್ನಿಶಾಮಕ ವಾಹನ ದಳ ಸಿಬ್ಬಂದಿಗಳು ಸಹ ಬೆಂಕಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಸಹ ಭೇಟಿ ನೀಡಿದ್ದಾರೆ.

Read More

ಬೆಂಗಳೂರು : ಮರಕ್ಕೆ ಬುಲೆಟ್ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉನ್ನಿಕೃಷ್ಣ ಜಂಕ್ಷನ್ನಲ್ಲಿ ಒಂದು ಅಪಘಾತ ಸಂಭವಿಸಿದೆ ಮೃತ ಸವಾರರನ್ನ ಕಿರಣ್ (25) ಯಶವಂತ್ (25) ಎಂದು ತಿಳಿದುಬಂದಿದೆ. ಬೆಂಗಳೂರಿನ ಯಲಹಂಕ ನ್ಯೂಟೋನ್ ಉನ್ನಿಕೃಷ್ಣನ್ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದ್ದು, ಮರಕ್ಕೆ ಬುಲೆಟ್ ಬೈಕ್ ಡಿಕ್ಕಿಯಾಗಿ ಪಲ್ಟಿ ಆಗಿದ್ದರಿಂದ ಕಿರಣ ಸ್ಥಳದಲ್ಲಿ ಸಾವನ್ನಪ್ಪಿದದ್ದಾನೆ. ಇನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಯಶವಂತ ಸಾವನಪ್ಪಿದ್ದಾನೆ. ಇನ್ನು ಬೈಕ್ ನಲ್ಲಿ ಇದ್ದ ಮತ್ತೋರ್ವ ಯುವಕ ಗೌತಮ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಧರಿಸದೆ ಬೈಕ್ ನಲ್ಲಿ ತೆರಳುವಾಗ ಈ ಅಪಘಾತ ಸಂಭವಿಸಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More

ಮಂಡ್ಯ : ಅಧಿಕಾರಿಗಳಿಂದ ಸರ್ಕಾರಿ ಜಮೀನು ಅಕ್ರಮ ಪರಭಾರೆ ಆರೋಪ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಚೇರಿ ಸೇರಿ ಮೂರು ಕಡೆ ಲೋಕಾಯುಕ್ತ ದಾಳಿ ಮಾಡಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮ ಖಾತೆ ಮಾಡಿರುವ ಬಗ್ಗೆ ಲೋಕಾಯುಕ್ತರು ಪರಿಶೀಲನೆ ನಡೆಸುತ್ತಿದ್ದಾರೆ ತಾಲೂಕು ಕಚೇರಿ, ಬೆಳಗೋಳ ಗ್ರಾಮ ಸಹಾಯಕ ಬಸವಯ್ಯ, ಆರ್.ಐ ಉಮೇಶ್ ಗೆ ಸೇರಿದ ಮೈಸೂರಿನ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗೋಳ ವ್ಯಾಪ್ತಿಯ ಸರ್ಕಾರಿ ಜಮೀನು ಅಕ್ರಮ ಖಾತೆಯ ಬಗ್ಗೆ ದೂರು ಬಂದಿತ್ತು. ಸಾರ್ವಜನಿಕರಿಂದ ಲೋಕಾಯುಕ್ತರಿಗೆ ವ್ಯಾಪಕವಾದ ದೂರುಗಳು ಬಂದ ಹಿನ್ನೆಲೆಯಲ್ಲಿ ಕಚೇರಿ ಮೇಲೆ ಇಂದು ಏಕಾಏಕಿ ದಾಳಿ ಮಾಡಿದ್ದಾರೆ.ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯ ಕುರಿತು ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Read More

ಬೆಂಗಳೂರು : ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್ 1 ಚಲನಚಿತ್ರದ ಕುರಿತು ಬಾಲಿವುಡ್ ನಟ ರಣವೀರ್ ಸಿಂಗ್ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕರ್ನಾಟಕ ಹೈಕೋರ್ಟ್ ನಟ ರಣವೀರ್ ಸಿಂಗ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರಣವೀರ್ ಸಿಂಗ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಇಂದು ಹೈಕೋರ್ಟ್ ಪೀಠದಲ್ಲಿ ರಣವೀರ್ ಸಿಂಗ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿದರು.ಆದರೆ ರಣವೀರ್ ಸಿಂಗ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದ್ದು, ವಿಚಾರಣೆಗೆ ಸಹಕರಿಸುವಂತೆ ಸೂಚಿಸಿದ್ದಾರೆ.

Read More