Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನ ರಸ್ತೆ ಗುಂಡಿಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದು ಒಂದು ವಾರದೊಳಗೆ ಬೆಂಗಳೂರಿನಲ್ಲಿರುವ ಎಲ್ಲಾ ಗುಂಡಿಗಳನ್ನು ಪುಟ್ಟಿ ಎಂದು ಜಿಬಿಎ ಆಯುಕ್ತರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ಕೊಟ್ಟಿದ್ದಾರೆ. ಹೌದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಗಳೂರು ರಸ್ತೆಗಳ ಗುಂಡಿ ಮುಚ್ಚಲು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಒಂದು ವಾರದ ಗಡುವು ನೀಡಿದ್ದಾರೆ. ಒಂದು ವಾರದೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರಿಗೆ ಸೂಚನೆ ನೀಡಿದ್ದಾರೆ. ರಸ್ತೆಗಳ ಸ್ಥಿತಿಯನ್ನು ಸುಧಾರಿಸಲು ಹೊಸ ಟಾರ್ ಹಾಕುವಂತೆಯೂ ಅವರು ನಿರ್ದೇಶನ ನೀಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗಾಗಿ ಸರ್ಕಾರ ಇಂದಿಗೂ ಹೊಡಿಕೆ ಮಾಡುತ್ತಿದೆ. ಮುಂದೆಯೂ ಮಾಡುತ್ತದೆ. ವಿಶೇಷವಾಗಿ ಬೆಂಗಳೂರಿನ ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿರುವುದರಿಂದ ಉತ್ತಮ ಮೂಲಸೌಕರ್ಯಗಳ ಅಗತ್ಯ ಇದೆ ಎಂದು ಹೇಳಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರ ತೆರಿಗೆ ಮತ್ತು ಹಣಕಾಸು ನಿರ್ವಹಣೆ ಬಗ್ಗೆಯೂ ಟೀಕಿಸಿದ್ದಾರೆ. ಬೆಂಗಳೂರು ಮೆಟ್ರೋಗೆ ಶೇ. 87…
ಬೆಳಗಾವಿ : ನಮ್ಮ ತಂದೆ ಸದ್ಯ ರಾಜಕೀಯ ಕೊನೆಗಾಲದಲ್ಲಿ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಈ ಒಂದು ಹೇಳಿಕೆ ನೀಡಿದ್ದು, ಪ್ರಗತಿಪರ ಸಿದ್ಧಾಂತ ಇರುವ ನಾಯಕರು ರಾಜ್ಯಕ್ಕೆ ಬೇಕು. ಮಾರ್ಗದರ್ಶನ ಮಾಡಿ ನೇತೃತ್ವ ವಹಿಸಲು ಬೇಕು ಸತೀಶ್ ಜಾರಕಿಹೊಳಿ ಆ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಪರೋಕ್ಷವಾಗಿ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಹೇಳಿಕೆ ನೀಡಿದ್ದಾರೆ. ಹೌದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ನಮ್ಮ ತಂದೆ ರಾಜಕೀಯ ಕೊನೆಕಾಲದಲ್ಲಿ ಇದ್ದಾರೆ ಹಾಗಾಗಿ ಮಾರ್ಗದರ್ಶನ ಮಾಡಿ ಪ್ರಗತಿಪರ ಸಿದ್ಧಾಂತ ಇರುವ ನಾಯಕರು ಬೇಕು. ಸಚಿವ ಸತೀಶ್ ಜಾರಕಿಹೊಳಿ ಆ ಒಂದು ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಒಂದು ಹೇಳಿಕೆಯ ಮೂಲಕ ನವೆಂಬರ್ ಕ್ರಾಂತಿ ಸುಳಿವು ಕೊಟ್ರ? ಅಂತ ಗುಸು ಗುಸು ಶುರುವಾಗಿದೆ ಸಿದ್ದರಾಮಯ್ಯ…
ಬೆಳಗಾವಿ : ನಮ್ಮ ತಂದೆ ಸದ್ಯ ರಾಜಕೀಯ ಕೊನೆಗಾಲದಲ್ಲಿ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಈ ಒಂದು ಹೇಳಿಕೆ ನೀಡಿದ್ದು, ಪ್ರಗತಿಪರ ಸಿದ್ಧಾಂತ ಇರುವ ನಾಯಕರು ರಾಜ್ಯಕ್ಕೆ ಬೇಕು. ಮಾರ್ಗದರ್ಶನ ಮಾಡಿ ನೇತೃತ್ವ ವಹಿಸಲು ಬೇಕು ಸತೀಶ್ ಜಾರಕಿಹೊಳಿ, ಆ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಪರೋಕ್ಷವಾಗಿ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಹೇಳಿಕೆ ನೀಡಿದ್ದಾರೆ. ಹೌದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ನಮ್ಮ ತಂದೆ ರಾಜಕೀಯ ಕೊನೆಕಾಲದಲ್ಲಿ ಇದ್ದಾರೆ ಹಾಗಾಗಿ ಮಾರ್ಗದರ್ಶನ ಮಾಡಿ ಪ್ರಗತಿಪರ ಸಿದ್ಧಾಂತ ಇರುವ ನಾಯಕರು ಬೇಕು. ಸಚಿವ ಸತೀಶ್ ಜಾರಕಿಹೊಳಿ ಆ ಒಂದು ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಒಂದು ಹೇಳಿಕೆಯ ಮೂಲಕ ನವೆಂಬರ್ ಕ್ರಾಂತಿ ಸುಳಿವು ಕೊಟ್ರ? ಅಂತ ಗುಸು ಗುಸು ಶುರುವಾಗಿದೆ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ…
ಕಲಬುರ್ಗಿ : ಕಲಬುರ್ಗಿಯಲ್ಲಿ ಎಲ್‍ಪಿಜಿ ಸಿಲಿಂಡರ್ ಸ್ಫೋಟದಿಂದ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಚಿಂಚೋಳಿ ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ನಡೆದಿದೆ. ನಾಗಮ್ಮ ಕಂಠಪ್ಪಾ ಪೂಜಾರಿ ಎಂಬವರ ಮನೆಯಲ್ಲಿ ಈ ಒಂದು ಘಟನೆ ನಡೆದಿದೆ. ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪರದಾರ ಮೂವತ್ತಕ್ಕೆ ಬಳ್ಳಿ ಗ್ರಾಮದಲ್ಲಿ 1 ಲಕ್ಷ ನಗದು, ಚಿನ್ನಾಭರಣ, ಬಟ್ಟೆ, ದವಸ, ಧಾನ್ಯ ಸೇರಿದಂತೆ ಎಲ್ಲ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ದೀಪಾವಳಿ ಹಬ್ಬದ ಸಂಭ್ರಮ ಸಂಭ್ರಮದಲ್ಲಿದ್ದ ನಾಗಮ್ಮ ಕುಟುಂಬಕ್ಕೆ ಶಾಕ್ ಆಗಿದೆ. ಘಟನೆ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ : ಬಾಗಲಕೋಟೆಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ಒಬ್ಬಳು ತನ್ನ 3 ವರ್ಷದ ಮಗನ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಚನ್ನಮ್ಮದೇವಿ ದೇವಸ್ಥಾನದ ಬಳಿ ಈ ಒಂದು ಘಟನೆ ಸಂಭವಿಸಿದೆ. ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಪುತ್ರ ಅಬ್ದುಲ್ (3) ಜೊತೆಗೆ ತಾಯಿ ಫಾತಿಮಾ (21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಿ ಕಟ್ಟಿಯ ಫಾತಿಮಾ ವಾಲಿಕರ್ ಮತ್ತು ಅಬ್ದುಲ್ ರಹಮಾನ್ ಮೃತರು ಎಂದು ತಿಳಿದುಬಂದಿದ್ದು, ಪತಿ ಮಸ್ತಾನ್ ಸಾಬ್ ಕಿರುಕುಳದಿಂದ ಬೆಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. 8 ವರ್ಷದ ಹಿಂದೆ ಆತ ಮೊದಲನೇ ಮದುವೆಯಾಗಿದ್ದು, ನಂತರ ಫಾತೀಮಾಳನ್ನು ಮಸ್ತಾನ್ ಸಾಬ್ ಪ್ರೀತಿಸಿ ಮದುವೆಯಾಗಿದ್ದಾನೆ. ಐದು ತಿಂಗಳ ಗರ್ಭಿಣಿಯಾಗಿದ್ದ ಫಾತಿಮಾಳನ್ನು ಮದುವೆಯಾಗಿದ್ದ. ಗ್ರಾಮಸ್ಥರ ಸಮ್ಮುಖದಲ್ಲಿ ಮಸ್ತಾನ್ ಫಾತಿಮಾಳನ್ನು ಮದುವೆಯಾಗಿದ್ದಾನೆ ಇತ್ತೀಚಿಗೆ ಫಾತಿಮಾಳಿಗೆ ಹೆಚ್ಚು ಕಿರುಕುಳ ನೀಡುತ್ತಿದ್ದ, ಮಗಳು ಫಾತಿಮಾ ಸಾವಿಗೆ ಪತಿ ಕಿರುಕುಳವೇ ಕಾರಣ ಎಂದು…
ಬೆಂಗಳೂರು : ಬೆಂಗಳೂರಿನಲ್ಲಿ ತಿಗಣಿ ಔಷಧಿ ವಾಸನೆಗೆ ವಿದ್ಯಾರ್ಥಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತಿರುಪತಿ ಮೂಲದ ಪವನ್ ಎಂದು ತಿಳಿದುಬಂದಿದೆ. HAL ಪೊಲೀಸ್ ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ಆಗಿರುವಂತಹ ಘಟನೆಗಾಗಿದ್ದು, ಪವನ್ ವಾಸವಿದ್ದ ಪಿಜಿ ಅಲ್ಲಿ ತಿಗಣಿ ಔಷಧಿಯನ್ನು ಸಿಂಪಡಣೆ ಮಾಡಿದ್ದಾರೆ.ಈ ವಿಚಾರ ಗೊತ್ತಿಲ್ಲದೇ ಆದ ತನ್ನ ರೂಮ್ಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ. ಬಿಟೆಕ್ ವಿದ್ಯಾರ್ಥಿಯಾಗಿದ್ದ ಪವನ್ ಈತ ವಾಸವಾಗಿದ್ದ ಕೊಠಡಿ ಯಲ್ಲಿ ತಿಗಣೆ ಔಷಧಿ ಸಿಂಪಡನೆ ಮಾಡಲಾಗಿರುತ್ತದೆ. ಈ ಮಾಹಿತಿ ಪವನ್ ಗೆ ಗೊತ್ತಿರಲಿಲ್ಲ. ನಿನ್ನೆ ರಾತ್ರಿ ಈತ ಹೋಗಿ ಮಲಗಿಕೊಂಡಿದ್ದು ಬೆಳಿಗ್ಗೆ ಎದ್ದ ತಕ್ಷಣ ನೋಡಿದಾಗ ಈತ ಶವವಾಗಿ ಪತ್ತೆ ಆಗಿದ್ದಾನೆ. ಹಾಗಾಗಿ ತಿಗಣೆ ಔಷಧದ ವಾಸನೆಗೆ ಪವನ್ ಸಾವ್ಕಾನ್ನಪ್ಪಿರಬಹುದು ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ HAL ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ದೀಪಾವಳಿ ಹಬ್ಬ ಆರಂಭವಾಗುತ್ತಿದ್ದಂತೆ ಪಟಾಕಿ ಸಿಡಿತದಿಂದ ಗಾಯಗೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇದೀಗ 150ಕ್ಕೆ ಪಟಾಕಿ ಸಿಡಿತದಿಂದ ಗಾಯಗೊಂಡಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಇದುವರೆಗೂ ಎಂಟು ಜನರು ಶಾಶ್ವತವಾಗಿ ತಮ್ಮ ಕಣ್ಣು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಪಟಾಕಿ ಸಿಡಿತ ಪ್ರಕರಣ ಮತ್ತೆ ಏರಿಕೆಯಾಗಿದ್ದು ಪಟಾಕಿ ಹಿಡಿದು 150ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಶಾಶ್ವತವಾಗಿ 8 ಜನರು ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಜನ ನಿಂತು ನೋಡುವಾಗ ಪಟಾಕಿ ಸಿಡಿದು ಕಣ್ಣಿಗೆ ಗಂಭೀರವಾದ ಗಾಯಗಳಾಗಿವೆ. ಶೇಕಡ 60 ರಷ್ಟು ಜನರಿಗೆ ಪಟಾಕಿ ಸಿಡಿದು ಕಣ್ಣಿಗೆ ಹಾನಿಯಾಗಿದೆ. ನಾರಾಯಣ ನೇತ್ರಾಲಯಕ್ಕೆ 75 ಜನರನ್ನು ದಾಖಲು ಮಾಡಲಾಗಿದೆ. ಇನ್ನು ಮಿಂಟೋ ಆಸ್ಪತ್ರೆಯಲ್ಲಿ 25ಕ್ಕೂ ಹೆಚ್ಚು ಜನರು ದಾಖಲಾಗಿದ್ದಾರೆ.
ಬೀದರ್ : ರಾಜ್ಯದಲ್ಲಿ RSS ಪಥ ಸಂಚಲನದಲ್ಲಿ ಸರ್ಕಾರಿ ನೌಕರರು ಭಾಗಿಯಾಗಬಾರದು ಎಂದು ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.ಇದರ ಬೆನ್ನಲ್ಲೀ, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಪಿಡಿಒ ಅಧಿಕಾರಿಯೊಬ್ಬರನ್ನು RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಸಸ್ಪೆಂಡ್ ಮಾಡಲಾಗಿತ್ತು. ಇದೀಗ ಮತ್ತೋರ್ವ ಸರ್ಕಾರಿ ಅಧಿಕಾರಿ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಅಮಾನತುಗೊಳಿಸಲಾಗಿದೆ. ಹೌದು ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾದ ಆರೋಪ ಮೇಲೆ ಮೊನ್ನೆ ಅಷ್ಟೇ ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯ್ತಿ ಪಿಡಿಒ ಒಬ್ಬರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಅಮಾನತು ಮಾಡಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆಗಳ ನಡುವೆ ಇದೀಗ ಮತ್ತೊಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಡುಗೆ ಸಹಾಯಕರಾದ ಪ್ರಮೋದ್ ರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಸೆಪ್ಟೆಂಬರ್ 13 ರಂದು ಬಸವಕಲ್ಯಾಣದಲ್ಲಿ ನಡೆದ RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದರು. ಸರ್ಕಾರದಿಂದ ವೇತನ ಪಡೆದು ಯಾವುದೇ ಸಂಘ…
ಬೆಂಗಳೂರು : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ನೀಡುವ ವಿಚಾರವಾಗಿ ಇದೀಗ ಸಿಎಂ ಸಿದ್ದರಾಮಯ್ಯ ಕೇಂದ್ರ ಬಿಜೆಪಿ ನಾಯಕರು ವಿರುದ್ಧ ಹಾಗೂ ಬಿಜೆಪಿ ಸಂಸದರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯ ದ್ರೋಹ ಮಾಡುತ್ತಿದ್ದಾರೆ ನಮಗೆ ಕೇಂದ್ರ ಸರ್ಕಾರದಿಂದ ಅನುದಾನ ಬರಬೇಕಿತ್ತು, ಆದರೆ ಒಂದು ರೂಪಾಯಿ ಕೂಡ ನೀಡಲಿಲ್ಲ ಎಂದರು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಅನುದಾನ ಕೊಡಲಿಲ್ಲ. ನಿರ್ಮಲ ಸೀತಾರಾಮನ್ ಕೂಡ ಒಂದು ರೂಪಾಯಿ ನೀಡಿಲ್ಲ. ಚುನಾವಣೆಯ ವೇಳೆ ಮೋದಿ ಮೋದಿ ಎಂದು ಮತ ಹಾಕ್ತೀರಾ,? ನಿಮ್ಮ ಪಿ.ಸಿ ಮೋಹನ್ ಮಾತನಾಡಿದ್ದಾನ? ಸಂಸತ್ ನಲ್ಲಿ ಎಂದಾದರೂ ಒಂದು ದಿನ ಮಾತನಾಡಿದ್ದಾನ? ಸೂರ್ಯ ಅಂತ ಸಂಸದ ಇದ್ದಾನೆ, ಅವನನ್ನ ಅಮಾವಾಸ್ಯೆ ಅಂತ ಕರೀತೀನಿ. ಶೋಭಾ ಕುಮಾರಸ್ವಾಮಿ ಕೂಡ ಒಂದು ದಿನ ಬಾಯಿ ಬಿಡಲಿಲ್ಲ. ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನ ಬಗ್ಗೆ ಇವರು ಬಾಯಿ ಬಿಡಲಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಸಾಕು ನಾಯಿಗಳಿಗೆ ವಿಷ ಹಾಕಿ ಕಿಡಿಗೇಡಿಗಳು ಕೊಂದಿರುವ ಘಟನೆ ನಡೆದಿದೆ. ವಿಷದ ಆಹಾರ ತಿಂದು 8 ಸಾಕು ನಾಯಿಗಳು ಮೃತಪಟ್ಟಿವೆ. ಎನ್ಆರ್ ಪುರ ತಾಲೂಕಿನ ಅಬ್ಬಿಗುಂಡಿಯಲ್ಲಿ ಈ ಒಂದು ಅಮಾನವೀಯ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಅಬ್ಬಿಗುಂಡಿ ಗ್ರಾಮದಲ್ಲಿ ಸತ್ಯನಾರಾಯಣ ಎಂಬುವರ ಮನೆಯಲ್ಲಿ ಸಾಕು ನಾಯಿಗಳು ಇದ್ದವು. ಸತ್ತ ಕೋಳಿಗಳನ್ನು 8 ಸಾಕು ನಾಯಿಗಳು ಸೇವಿಸಿ ಇದೀಗ ಸಾವನ್ನಪ್ಪಿವೆ. ಕಿಡಿಗೇಡಿಗಳು ಸತ್ತ ಕೋಳಿಗಳಿಗೆ ಕ್ರಿಮಿನಾಶಕ ಬೆರೆಸಿದ್ದು ಬೆಳಕಿಗೆ ಬಂದಿದೆ. ನಾಯಿಗಳಿಗೆ ವಿಷ ಇಟ್ಟವರೆ ವಿರುದ್ಧ ಸ್ಥಳೀಯರು ಇದೀಗ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಿಡಿಗೇಡಿಗಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.













