Subscribe to Updates
Get the latest creative news from FooBar about art, design and business.
Author: kannadanewsnow05
ರಾಮನಗರ : ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿಕೆಯ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಬಹುತೇಕ ಉದ್ಯಮಗಳು ಗುಜರಾತ್ ರಾಜ್ಯಕ್ಕೆ ಹೋಗುತ್ತಿವೆ. ಹಲವು ಉದ್ಯಮಗಳು ನಮ್ಮ ಕರ್ನಾಟಕಕ್ಕೆ ಬರಲು ತಯಾರಿದ್ದವು. ಆದರೆ ಕೇಂದ್ರ ಸರ್ಕಾರ ಅಡ್ಡ ಬರುತಿದೆ. ಗುಜರಾತ್ ಗೆ ಹೋಗಲು ಒತ್ತಡ ಹಾಕುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅದನ್ನು ತಡೆಯಲಿ. ಚುನಾವಣೆ ಗೆಲ್ಲುವುದಕ್ಕೆ ಮಾತ್ರ ಕಣ್ಣೀರು ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಉಪಚುನಾವಣೆಯಲ್ಲಿ ಎಚ್ ಡಿ ದೇವೇಗೌಡ ಅಗ್ರಸಿವ್ ಆಗಿ ಮಾತನಾಡುತ್ತಿದ್ದಾರೆ. ಮುತ್ಸದ್ದಿ ವ್ಯಕ್ತಿಗಳು ಹೀಗೆ ಮಾತನಾಡಬಾರದು.ಎನ್ ಡಿ ಎ ನಾಯಕರಿಗೆ ಈಗ ಮೇಕೆದಾಟು ವಿಚಾರ ನೆನಪಾಗಿದೆ.ಪ್ರಧಾನಿ ಮೋದಿ ಬಳಿ ನೀವು ಹೋಗುವಾಗ ನಮ್ಮನ್ನು ಕರೆಯಬೇಕಿತ್ತು. ಅದನ್ನು ಬಿಟ್ಟು ಈಗ ದೇವೇಗೌಡರು ಉಪಚುನಾವಣೆಗೆ ಬಂದಿದ್ದಾರೆ.ಮಾಜಿ ಪ್ರಧಾನ ಮಂತ್ರಿ ದೇವೇಗೌಡರಿಗೆ ಈ ಗತಿ ಬರಬಾರದಿತ್ತು ಎಂದರು. ಇವರದ್ದು ಸ್ವಾರ್ಥದ ಕಣ್ಣೀರು ಅನ್ಯಾಯ ಮಾಡಿದ್ದಾರೆ ಎಂದು ಹೇಳುತ್ತಾರೆ. ಇವರಿಗೆ ಯಾರು ಅನ್ಯಾಯ ಮಾಡಿದ್ದಾರೆ. ಇವರದ್ದು ಬರೀ ಡ್ರಾಮಾ. ಚನ್ನಪಟ್ಟಣ…
ಬೆಂಗಳೂರು : ಕರ್ನಾಟಕದ ಪ್ರತಿಷ್ಠಿತ ದೇವಸ್ಥಾನಗಳ ಪ್ರಸಾದವನ್ನು ರಾಜ್ಯದ ಮನೆ ಮನೆಯ ಬಾಗಿಲಿಗೆ ತಲುಪಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದ್ದು, ಆ ಮೂಲಕ ಹೊಸ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಕುರಿತಾಗಿ ಇಲಾಖೆಯ ಆಯುಕ್ತ ವೆಂಕಟೇಶ್ ಮಾಹಿತಿ ನೀಡಿದ್ದು, ಮುಜರಾಯಿ ಸಚಿವರ ಜೊತೆ ಚರ್ಚೆ ಮಾಡಿ ಶೀಘ್ರದಲ್ಲೇ ಜಾರಿ ಮಾಡಲಾಗುವುದು ಎಂದರು. ಕರ್ನಾಟಕ ರಾಜ್ಯ ವ್ಯಾಪಿ ಇರುವ ಯಾವುದೇ ದೇವಸ್ಥಾನ ಪ್ರಸಾದವನ್ನ ಆನ್ ಲೈನ್ಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಪ್ರಸಾದ ತಂದು ಕೊಡುವ ಯೋಜನೆ ಶೀಘ್ರವೇ ಜಾರಿಗೆ ತರಲು ಚಿಂತನೆ ನಡೆದಿದೆ. ಈ ಕುರಿತಾಗಿ ಅಂಚೆ ಇಲಾಖೆ ಮತ್ತು ಖಾಸಗಿ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ. ಪ್ರಸಾದಕ್ಕೆ ಎಷ್ಟು ದರ ಇದೆಯೋ ಅದರ ಜೊತೆಗೆ ಡೆಲಿವರಿ ದರ ಸೇರಿಸಿ ಮನೆ ಬಾಗಿಲಿಗೆ ಪ್ರಸಾದ ನೀಡುವ ದರವನ್ನು ನಿಗದಿ ಮಾಡಲಾಗುತ್ತಿದೆ.ಸದ್ಯ ಮುಜರಾಯಿ ಇಲಾಖೆ ಹೊಸ ಹೊಸ ತಂತ್ರಜ್ಞಾನವನ್ನ ಅಳವಡಿಸಿಕೊಂಡು ಜನರಿಗೆ ಸೇವೆ ನೀಡಲು…
ದಕ್ಷಿಣಕನ್ನಡ : ಕಳೆದ ಎರಡು ವರ್ಷಗಳ ಹಿಂದೆ ಫ್ಯಾಕ್ಟರಿ ಒಂದರಲ್ಲಿ 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಉತ್ತರಭಾರತ ಮೂಲದವರಾದ ಆರೋಪಿಗಳಾದ ಜಯಸಿಂಗ್, ಮುಕೇಶ್ ಸಿಂಗ್, ಮನೀಶ್ ತಿರ್ಕಿಗೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. 2021ರ ನವೆಂಬರ್ 21ರಂದು ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷ ಬಾಲಕಿ ಅತ್ಯಾಚಾರ ಎಸಗಿದ್ದಲ್ಲದೆ ಬಳಿಕ ಕೊಲೆ ಮಾಡಲಾಗಿತ್ತು. ಹೊರ ರಾಜ್ಯದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ನವೆಂಬರ್ 21 ರಂದು ಟೈಲ್ಸ್ ಫ್ಯಾಕ್ಟರಿಯಲ್ಲಿ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ಫ್ಯಾಕ್ಟರಿ ಒಳಗಡೆ ಇದ್ದ ಚರಂಡಿಯಲ್ಲಿ ಬಾಲಕಿ ಮೃತದೇಹ ಎಸೆದಿದ್ದರು. ಮೂವರು ಆರೋಪಿಗಳೂ ಟೈಲ್ಸ್ ಫ್ಯಾಕ್ಟರಿ ಸಿಬ್ಬಂದಿಯಾಗಿದ್ದರು. ಆರೋಪಿಗಳ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಫೋಕ್ಸೊ ಕಾಯ್ದೆ ಮತ್ತು ಐಪಿಸಿ 302 ಅಡಿ ಪ್ರಕರಣ…
ಕೊಪ್ಪಳ : ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿ ಎ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಕೊಪ್ಪಳದಲ್ಲಿ ಆಸಿಡ್ ಸೇವಿಸಿ ವಿದ್ಯುತ್ ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹೌದು ಜೆಸ್ಕಾಂ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಜಯರಾಂ ಎನ್ನುವವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಲ್ಲಿ ಜೆಸ್ಕಾಂ ಅಧಿಕಾರಿಗಳ ಕಿರುಕುಳ ಆರೋಪ ಕೇಳಿ ಬಂದಿದೆ. ಗುತ್ತಿಗೆದಾರ ಜಯರಾಂ ಕೊಪ್ಪಳ ತಾಲೂಕಿನ ಗಿಣಗೆರೆ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗು ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಮೇಲಾಧಿಕಾರಿಗಳು ತುಂಬಾ ಕಿರುಕುಳ ನೀಡುತ್ತಿದ್ದಾರೆ.ಹೀಗಾಗಿ ನಾನು ಯಾವುದೇ ರೀತಿ ಕೆಲಸ ಮಾಡಲು ಆಗುತ್ತಿಲ್ಲ ಅಧಿಕಾರಿಗಳ ಕಿರುಕುಳ ನೀಡಿದ್ದಾರೆ ಎಂದು ಡೆತ್ ನೋಟ್ ಬರೆದಿದ್ದಾರೆ. ಘಟನೆ ಸಂಬಂಧ ಕೊಪ್ಪಳ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರಪ್ರದೇಶ : ವಯಸ್ಸಿಗೆ ಬಂದ ಯುವಕರಿಗೆ ಸಾಮಾನ್ಯವಾಗಿ ಹಿರಿಯರು, ಸಂಬಂಧಿಕರು ಹಾಗೂ ಫ್ರೆಂಡ್ಸ್ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ ಮದುವೆ ಯಾವಾಗ? ಅಂತ. ಆದರೆ ಇದೀಗ ಈ ರೀತಿ ಪ್ರಶ್ನೆ ಕೇಳುವ ಮುಂಚೆ ಈ ಸುದ್ದಿಯನ್ನು ಒಮ್ಮೆ ಓದಿ. ಉತ್ತರ ಪ್ರದೇಶದಲ್ಲಿ ಮದುವೆ ಯಾವಾಗ ಎಂದು ತಮಾಷೆ ಮಾಡಿದ ಅತ್ತಿಗೆಯನ್ನೇ ಮೈದುನನೊಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹೌದು ಉತ್ತರ ಪ್ರದೇಶದ ಬಂದಾ ಪಟ್ಟಣದಲ್ಲಿ ಈ ಒಂದು ಕೊಲೆ ನಡೆದಿದ್ದು, ಕೊಲೆ ಆರೋಪಿಯನ್ನು ಸುನೀಲ್ ಹಾಗೂ ಕೊಲೆಯಾದ ಆತನ ಅತ್ತಿಗೆಯನ್ನು ಆಶಾದೇವಿ ಎಂದು ಗುರುತಿಸಲಾಗಿದೆ. ಆಶಾದೇವಿ ತನ್ನ ಮೈದುನನೊಂದಿಗೆ ಆಗಾಗ್ಗೆ ಮದುವೆ ವಿಚಾರವಾಗಿ ತಮಾಷೆ ಮಾಡುತ್ತಲೇ ಇದ್ದಳು. ಇದರಿಂದ ಮನನೊಂದಿದ್ದ ಮೈದುನ ಆಕೆಯನ್ನು ಕೊಂದೇಬಿಟ್ಟಿದ್ದಾನೆ. ಕೊಲೆಯಾದ ಆಶಾದೇವಿ ಮೈದುನ ಸುನೀಲ್ ಗೆ ಆಗಾಗ ತಮಾಷೆಯಾಗಿ ಮದುವೆ ಯಾವಾಗ ಆಗುತ್ತೀಯ ಎಂದು ಕಿಚಾಯಿಸುತ್ತಿದ್ದಳು. ಅಲ್ಲದೆ ಸುನೀಲ್ ಆಗಾಗ ಆಶಾದೇವಿಗೆ ಹಣದ ಸಹಾಯ ಮಾಡುತ್ತಿದ್ದ. ಈ ವಿಷಯ ಸುನಿಲ್ ತಾಯಿಗೆ ಅಸಮಾಧಾನ ತಂದಿದೆ.…
ಬೆಂಗಳೂರು : ಎಲ್ಲರಿಗೂ ತಿಳಿದಿರುವಂತೆ ಬೆಂಗಳೂರಿನಲ್ಲಿರುವ ವಿಧಾನಸೌಧವನ್ನು ದೇವಸ್ಥಾನಕ್ಕೆ ಹೋಲಿಸುತ್ತಾರೆ. ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಕೂಡ ಪ್ರತಿಯೊಬ್ಬ ಜನಪ್ರತಿನಿಧಿಗಳು ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ನಂತರ ಒಳಗಡೆ ಪ್ರವೇಶಿಸುತ್ತಾರೆ. ಆದರೆ ಇಂತಹ ವಿಧಾನಸೌಧದ ಗಾರ್ಡನ್ ಏರಿಯಾದಲ್ಲಿ ಬಿಯರ್ ಬಾಟಲ್ ಕಂಡು ಬಂದಿದೆ. ಹೌದು ವಿಧಾನಸೌಧದ ಗಾರ್ಡನ್ನಲ್ಲಿ ಬಿಯರ್ ಬಾಟಲ್ ಒಂದು ಕಂಡು ಬಂದಿದೆ.ಪಶ್ಚಿಮ ಭಾಗದ ಗಾರ್ಡನ್ ನಲ್ಲಿ ಬಿಯರ್ ಬಾಟಲ್ ಬಿದ್ದಿರುವುದು ಕಂಡುಬಂದಿದೆ. ಗಾರ್ಡನ್ ನಲ್ಲಿ ಬಿಯರ್ ಸೇವಿಸಿ ಬಾಟಲ್ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ಕಾಣ್ತಪ್ಪಿಸಿ ಬಿಯರ್ ಬಾಟಲ್ ತಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ತುಮಕೂರು : ತುಮಕೂರಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಮನೆಯಿಂದ ಗುರುವಾರ ಸಂಜೆ ಕಾಣೆಯಾಗಿದ್ದ ಇಬ್ಬರು ಮಕ್ಕಳು ಇಂದು ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ತುಮಕೂರು ತಾಲೂಕಿನ ತಿಪಟೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಮೃತ ಮಕ್ಕಳನ್ನು ತಿಪಟೂರು ತಾಲೂಕಿನ ಹುಚ್ಚನಹಟ್ಟಿಯ ಮನೋಹರ್(8), ಯದುವೀರ್ (10) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಇವರಿಬ್ಬರು ಬಳಿಕ ಹೊರಗಡೆ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ.ಇದರಿಂದ ಆತಂಕಗೊಂಡ ಪೋಷಕರು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಳಿಕ ತಿಪಟೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಇಂದು ಬೆಳಗ್ಗೆ ಮತ್ತೆ ಹುಡುಕಾಡಿದಾಗ ಇಬ್ಬರು ಬಾಲಕರ ಮೃತದೇಹಗಳು ನಗರಕ್ಕೆ ಹೊಂದಿಕೊಂಡಿರುವ ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆಯ ಕಾಮಗಾರಿಗೆ ತೆಗೆದಿದ್ದ ಗುಂಡಿಯಲ್ಲಿ ಪತ್ತೆಯಾಗಿವೆ. ನೀರಿನಲ್ಲಿ ಆಟವಾಡಲು ಹೋದ ವೇಳೆ ಮಕ್ಕಳು ಗುಂಡಿಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಮಕ್ಕಳ ಮೃತದೇಹ ಕಂಡು ಹೆತ್ತವರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು…
ರಾಮನಗರ : ನಿನ್ನೆ ಬಳ್ಳಾರಿಯ ಸಂಡೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಮೂರುವರೆ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರಲಿದ್ದು, ನಾನೆ ಪೂರ್ಣಾವಧಿ ಸಿಎಂ ಆಗುತ್ತೇನೆ ಎಂದು ತಿಳಿಸಿದ್ದಾರೆ. ಇದೀಗ ಇಂದು ಡಿಕೆ ಶಿವಕುಮಾರ್ ಬೆಂಬಲಿಗರು ಮುಂದಿನ ಸಿಎಂ ಡಿಕೆ ಶಿವಕುಮಾರ್ ಅಂತ ಘೋಷಣೆ ಕೂಗಿದರು. ಈ ವೇಳೆ ಡಿಕೆ ಶಿವಕುಮಾರ್ ಏನು ಪ್ರತಿಕ್ರಿಯಿಸದೆ ಸೈಲೆಂಟಾಗಿದ್ದರು. ಹೌದು ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಈ ಹೊತ್ತಿನಲ್ಲೇ ಮುಖ್ಯಮಂತ್ರಿ ಸ್ಥಾನ ಕುರಿತಾದ ಚರ್ಚೆ ಆರಂಭವಾಗಿದೆ. ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ವೇಳೆ ಸಿಎಂ ಸಿದ್ದರಾಮಯ್ಯ ಮುಂದಿನ ಮೂರುವರೆ ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಅವರ ಪರವಾಗಿ ಪ್ರಚಾರಕ್ಕೆ ತೆರಳಿದ್ದರು.ಈ ವೇಳೆ ಅವರ ಬೆಂಬಲಿಗರು ಮುಂದಿನ ಸಿಎಂ ಡಿಕೆ ಶಿವಕುಮಾರ್ ಅಂತ ಘೋಷಣೆ…
ವಿಜಯಪುರ : ವಕ್ಫ್ ಅವಾಂತರಕ್ಕೆ ಬಿಜೆಪಿಯೇ ಕಾರಣ ಸದ್ಯ ರಾಜ್ಯದಲ್ಲಿ ಭುಗಿಲೆದ್ದಿರುವ ವಕ್ಫ್ ವಿವಾದಕ್ಕೆ ಬಿಜೆಪಿಗೆ ಕಾರಣ.ಹಾಗಂತ ನಾನು ವಕ್ಫ್ ಪರವಾಗಿ ಇಲ್ಲ. ಅದರಲ್ಲೂ ಕೂಡ ಸಾಕಷ್ಟು ತಪ್ಪುಗಳಾಗಿವೆ. ಅಂತ ತಪ್ಪುಗಳನ್ನು ಖಂಡಿಸುತ್ತೇನೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದರು. ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಅವಾಂತರಕ್ಕೆ ಬಿಜೆಪಿಯೇ ಕಾರಣ. ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ರಕ್ಷಣೆ ಮಾಡ್ತೇವೆ ಎಂದಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಕ್ಫ್ ಪರವಾಗಿ ಪ್ರಶ್ನೆಗಳನ್ನ ಪಾರ್ಲಿಮೆಂಟ್ ನಲ್ಲಿ ಕೇಳಿದ್ದಾರೆ. ವಿಜಯಪುರದಲ್ಲಿ ಬಂದು ರಸ್ತೆ ಮೇಲೆ ಹೋರಾಟ ಮಾಡಿದ್ದಾರೆ ಎಂದು ಕರಂದ್ಲಾಜೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 1974 ರ ವಕ್ಫ್ ಗೆಜೆಟ್ ನೋಟಿಪಿಕೇಶನ್ ರದ್ದು ಮಾಡಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, 10 ವರ್ಷ ಬಿಜೆಪಿ ಸರ್ಕಾರ ಮಲಗಿತ್ತಾ?. ಇಷ್ಟು ವರ್ಷ ಏನ್ ಮಾಡ್ತಿದ್ರು, ಈಗ ನೆನೆಪಾಯ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ಒಂದು ಇಂಚು ಹಿಂದೂ,…
ಉತ್ತರಕನ್ನಡ : ಚಲಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 25 ಜನರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿರುವ ಘಟನೆ ಉತ್ತರ ನ್ನಡ ಜಿಲ್ಲೆಯ ವಿರ್ಜಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಖಾಸಗಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬೆಂಕಿಯ ಕೆನ್ನಾಲಿಗೆ ಸಂಪೂರ್ಣವಾಗಿ ಬಸ್ ಅನ್ನು ಆವರಿಸಿದೆ. ಈ ಒಂದು ಬಸ್ ನಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರದ ಉದ್ಯೋಗಿಗಳು ನಲ್ಲಿ ಪ್ರಯಾಣಿಸುತ್ತಿದ್ದರು. ಬೆಂಕಿ ಕಾಣಿಸುತ್ತಿದಂತೆ ಬಸ್ ನಲ್ಲಿ ಇದ್ದಂತಹ 25ಕ್ಕೂ ಹೆಚ್ಚು ಜನರು ಬಸ್ಸಿನಿಂದ ಕೆಳಗಿಳಿದಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಘಟನಾ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಘಟನೆ ಕುರಿತಂತೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಈ ಒಂದು ಪ್ರಕರಣ ದಾಖಲಾಗಿದೆ.