Author: kannadanewsnow05

ಧಾರವಾಡ : ಧಾರವಾಡದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ರೈತರೊಬ್ಬರು ಬೋರ್ವೆಲ್ ತಂತಿಯನ್ನು ಕಂಬಕ್ಕೆ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ವಿದ್ಯುತ್ ಪ್ರವಹಿಸಿ ರೈತ ಸಾವನ್ನಪ್ಪಿರುವ ಘಟನೆ ಕಲಿಕೇರಿ ಮತ್ತು ಮುಗದ ರಸ್ತೆಯಲ್ಲಿನ ಜಮೀನಿನಲ್ಲಿ ಈ ಒಂದು ಘಟನೆ ನಡೆದಿದೆ. ವಿದ್ಯುತ್ ಪ್ರವಹಿಸಿ ರೈತ ನಿಂಗಪ್ಪ (50) ಸಾವನ್ನಪ್ಪಿದ್ದರೆ. ಬೋರ್ವೆಲ್ ನ ತಂತಿ ಕಂಬಕ್ಕೆ ಕಟ್ಟುವಾಗ ಈ ಒಂದು ದುರಂತ ಸಂಭವಿಸಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ತಂದೆಯೊಬ್ಬ ತನ್ನ ಹೆಣ್ಣು ಮಗುವಿನ ಮೇಲೆ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಕ್ರೂರವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಬಾಲಾಜಿ ಲೇಔಟ್‌ನಲ್ಲಿ ನಡೆದಿದೆ. ಬಾಲಾಜಿ ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ನೇಪಾಳ ಮೂಲದ ದಂಪತಿಗಳಾದ ಲೋಕೇಶ್ ಮತ್ತು ಅಮೃತ ದಂಪತಿಗಳ ಮಗುವಿನ ಮೇಲೆ ಈ ದೌರ್ಜನ್ಯ ನಡೆದಿದೆ. ಲೋಕೇಶ್, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರೆ, ಅಮೃತ ಮನೆಕೆಲಸಗಾರರಾಗಿ ಜೀವನ ನಿರ್ವಹಿಸುತ್ತಿದ್ದರು. ಲೋಕೇಶ್ ತನ್ನ ಮಗಳಿಗೆ ಕೈ, ಕಾಲು ಮತ್ತು ದೇಹದಾದ್ಯಂತ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಇದರಿಂದ ಮಗುವಿನ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ. ಮಗುವು ಬೇಡ ಎಂದು ಕೂಗಾಡಿದರೂ, ತಂದೆ ಹಲ್ಲೆಯನ್ನು ನಿಲ್ಲಿಸಲಿಲ್ಲ. ಘಟನೆಯಿಂದ ಸ್ಥಳೀಯರು ಆಘಾತಕ್ಕೊಳಗಾಗಿದ್ದು, ಮಗುವಿನ ಕಿರುಚಾಟ ಕೇಳಿ ಓಡಿಬಂದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರಣ್ಯಪುರ ಹೊಯ್ಸಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ತಂದೆ ಲೋಕೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಭಾರತೀಯ ದಂಡ ಸಂಹಿತೆ…

Read More

ಬೆಂಗಳೂರು : ಬಿಡದಿಯಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ರಿಕ್ಕಿ ರೈ ವಿಚಾರಣೆ ಅಂತ್ಯವಾಯಿತು. ಸತತ 4 ಗಂಟೆಗಳ ಕಾಲ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು. ಪ್ರಕರಣದ ಕುರಿತು ಪೊಲೀಸರು ಸಂಪೂರ್ಣ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ರಾಮನಗರದ ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಬಿಡದಿ ಇನ್ಸ್ಪೆಕ್ಟರ್ ಶಂಕರನಾಯಕ್ ನೇತೃತ್ವದಲ್ಲಿ ಈ ಒಂದು ವಿಚಾರಣೆ ನಡೆದಿದೆ. ವಿಚಾರಣೆ ಬಳಿಕ ಬಿಡದಿ ಪೊಲೀಸ್ ಠಾಣೆಯ ಬಳಿಕ ರಿಕ್ಕಿ ರೈ ಹೇಳಿಕೆ ನೀಡಿದ್ದು, ಏಪ್ರಿಲ್ 18ರಂದು ನನ್ನ ಮೇಲೆ ಅಟ್ಯಾಕ್ ಆಯ್ತು ಮನೆಯಿಂದ ಹೊರ ಬರುವಾಗ ನನ್ನ ಮೇಲೆ ಫೈರಿಂಗ್ ಮಾಡಿದರು. ಕಾರಿನ ಮೇಲೆ ಫೈರಿಂಗ್ ಆಗಿ ನನ್ನ ಮೂಗು ಕಟ್ ಆಗಿದೆ. ದಾಳಿಯಲ್ಲಿ ನನ್ನ ಕೈಗೂ ಸಹ ಗುಂಡು ತಗುಲಿತ್ತು. ದೇವರ ದಯೆಯಿಂದ ಏನು ಆಗಿಲ್ಲ. ನಾನು ಸ್ಟ್ರಾಂಗ್ ಆಗಿ ಇದ್ದೇನೆ ಪ್ರಕರಣದಲ್ಲಿ ಇನ್ನೂ ಕೆಲವರು ಶಂಕಿತರಿದ್ದಾರೆ. ಅದರ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಕೊಡಲಾಗಿದೆ. ತನಿಖೆ ನಡೆಯುತ್ತಿದೆ…

Read More

ತುಮಕೂರು : ಹೇಮಾವತಿ ಕೆನಾಲ್ ಲಿಂಕ್ ವಿಚಾರವಾಗಿ ಇತ್ತೀಚಿಗೆ ತುಮಕೂರಿನಲ್ಲಿ ರೈತರು, ವಿವಿಧ ಮಠಾಧೀಶರು, ರಾಜಕೀಯ ನಾಯಕರು ಭಾರಿ ಪ್ರತಿಭಟನೆ ನಡೆಸಿದರು. ಈ ಒಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸ್ವಾಮೀಜಿಗಳ ವಿರುದ್ಧ ಹಾಗೂ ಹಲವು ಮುಖಂಡರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ವಿಚಾರವಾಗಿ ಬಿಜೆಪಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು, ಮಠಾಧೀಶ್ವರ ಮೇಲೆ ದಾಖಲಾಗಿರುವ fir ಗಳನ್ನು ರದ್ದು ಮಾಡಿ ಸರ್ವ ಪಕ್ಷ ಸಭೆ ಕರೆದು ಹೇಮಾವತಿ ಕೆನಲ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಪಕ್ಷಾತೀತವಾಗಿ ಈ ಯೋಜನೆಯನ್ನು ವಿರೋಧ ಮಾಡುತ್ತಿದ್ದೇವೆ. ಹೇಮಾವತಿ ಕೆನಾಲ್ ಕಾಮಗಾರಿ ವಿಚಾರವಾಗಿ ಸಂಕಾಪುರ ಗ್ರಾಮದ ಬಳಿ ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಂಕಾಪುರ ಗ್ರಾಮದಲ್ಲಿ ಮಾತನಾಡಿದ ಅವರು, ನಿಷೇಧಾಜ್ಞೆ ಜಾರಿ ಮಾಡಿದರು ನಾವು ವಿರೋಧ ಮಾಡಿದ್ದೆವು. ಈ ಹೋರಾಟಕ್ಕೆ ಸುಮಾರು 20 ಸಾವಿರ ರೈತರು ಕೈ ಜೋಡಿಸಿದರು. ತುಮಕೂರಿ ಇತಿಹಾಸದಲ್ಲಿ ಇಂತಹ ಹೋರಾಟ ನಡೆದಿರಲಿಲ್ಲ. ರೈತರು…

Read More

ಚಾಮರಾಜನಗರ : ಚಾಮರಾಜನಗರದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಠಾಣೆಯ ಸಮೀಪದಲ್ಲಿಯೇ ಕೊಡಲಿ ಇಂದ ಕೊಚ್ಚಿ ಪ್ರತಿಯೊಬ್ಬ ತನ್ನ ಪತ್ನಿಯನ್ನು ಬರ್ಬರ ಹತ್ಯೆಗೈದಿದ್ದಾನೆ. ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯ ಸಮೀಪ ಈ ಒಂದು ಘಟನೆ ನಡೆದಿದೆ. ಕೊಡಲಿಯಿಂದ ಕೊಚ್ಚಿ ಪತ್ನಿ ವಿದ್ಯಾಳನ್ನು ಪತಿ ಗಿರೀಶ್ ಕೊಲೆ ಮಾಡಿದ್ದಾನೆ. ಅನ್ಯ ಜಾತಿಯ ಯುವಕನೊಂದಿಗೆ ಪತ್ನಿ ವಿದ್ಯಾ ಓಡಿ ಹೋಗಿದ್ದಳು. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿಯನ್ನು ಗಿರೀಶ್ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ರಕ್ತ ಸ್ರಾವದಿಂದ ಬಿದ್ದಿದ್ದ ವಿದ್ಯಾಳನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದಾಳೆ.ಸದ್ಯ ಪೋಲೀಸರು ಕೊಲೆ ಆರೋಪಿಗೆ ಗಿರೀಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಡುಪಿ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಕರುಳಿನ ಕ್ಯಾನ್ಸರ್ನಿಂದ ಸಾವನ್ನಪ್ಪಿದ ವ್ಯಕ್ತಿ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದು ಬೆಳಕಿಗೆ ಬಂದಿದೆ.ಹೌದು ಕರುಳಿನ ಕ್ಯಾನ್ಸರ್ ಇಂದ ಮೃತಪಟ್ಟ ವ್ಯಕ್ತಿಗೆ ಕೊರೊನ ಸೋಂಕು ದೃಢಪಟ್ಟಿದೆ. ಗ್ರಾಮದ ಪೀಟರ್ ಮಥಾಯಸ್ (65) ಎನ್ನುವವರಿಗೆ ಕೊರೊನ ಸೋಂಕು ದೃಢಪಟ್ಟಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳ್ಳೆ ಗ್ರಾಮದ ನಿವಾಸಿ ಪೀಟರ್ ಕರುಳಿನ ಕ್ಯಾನ್ಸರ್ ಮತ್ತು ಹೈಪರ್ ತೆನ್ಶನ್ ನಿಂದ ಕೊಳ್ಳುತ್ತಿದ್ದರು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸದೆ ಪೀಟರ್ ಸಾವನ್ನಪ್ಪಿದ್ದಾರೆ. ಮೃತಪಟ್ಟ ಪೀಟರ್ ಮಥಾಯಸ್ ಗೆ ಕರೋನಾ ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸದ್ಯ ಪೀಟರ್ ಕುಟುಂಬ ಸದಸ್ಯರಿಗೆ ಯಾವುದೇ ರೋಗದ ಲಕ್ಷಣಗಳಿಲ್ಲ. ಕರೋನಾದಿಂದ ಪೀಟರ್ ಮೃತಪಟ್ಟಿದ್ದಾರೆ ಎಂದು ಪರಿಗಣಿಸುವುದಿಲ್ಲ. ಮೇ 29ರಂದು ಪೀಟರ್ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು.ಕಾಪು ತಹಶೀಲ್ದಾರ್ ಪ್ರತಿಭಾ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಈ ಕುರಿತು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮಾಹಿತಿ…

Read More

ಬೆಂಗಳೂರು : ಕನ್ನಡ ಭಾಷೆಯ ಬಗ್ಗೆ ತಮ್ಮ ಹೇಳಿಕೆಗಳ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ, ನಟ-ರಾಜಕಾರಣಿ ಕಮಲ್ ಹಾಸನ್ ತಮ್ಮ ಇತ್ತೀಚಿನ ಚಿತ್ರ ‘ಥಗ್ ಲೈಫ್’ ಕರ್ನಾಟಕದಲ್ಲಿ ಸುಗಮ ಬಿಡುಗಡೆಗೆ ರಕ್ಷಣೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದು, ಈ ವೇಳೆ ಕಮಲ್ ಹಾಸನರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೀಗ ಮತ್ತೆ ವಿಚಾರಣೆ ನಡೆಸಿದ ಹೈಕೋರ್ಟ್ ಜೂನ್ 10 ರಂದು ವಿಚಾರಣೆ ಮಂದೂಡಿ ಆದೇಶ ಹೊರಡಿಸಿತು. ಇಂದು ಹೈ ಕೋರ್ಟ್ ನಲ್ಲಿ ಕಮಲ್ ಹಾಸನ್ ಸಲ್ಲಿಸಿರುವ ಅರ್ಜಿ ಮತ್ತೆ ಆರಂಭವಾಯಿತು. ನ್ಯಾ. ಎಂ.ನಾಗಪ್ರಸನ್ನ ಅವರಿಂದ ಪೀಠದಲ್ಲಿ ವಿಚಾರಣೆ ಆರಂಭವಾಯಿತು. ವಿಚಾರಣೆ ವೇಳೆ ನಿರ್ಮಾಪಕರ ಪರ ವಕೀಲರಾದ ಧ್ಯಾನ್ ಚಿನ್ನಪ್ಪ ಕರ್ನಾಟಕದಲ್ಲಿ ನಾವು ಕಮಲ್ ಹಾಸನವರ ಚಿತ್ರ ಬಿಡುಗಡೆ ಮಾಡಲ ಎಂದು ಸ್ಪಷ್ಟನೆ ನೀಡಿದರು. ಈ ವೇಳೆ ನ್ಯಾಯಮೂರ್ತಿಗಳಾದ ಎಂ. ನಾಗಪ್ರಸನ್ನ ಅವರು ಬಹುಶಹ ಅವರಿಗೆ ಆತ್ಮಪ್ರತಿಷ್ಠೆ ಅಡ್ಡ ಬರುತ್ತಿರಬಹುದು ಎಂದು ಜೂನ್ 10 ರಂದು ವಿಚಾರಣೆ ಮುಂದೂಡಿದರು. ನ್ಯಾಯಮೂರ್ತಿಗಳು ಹೇಳಿದ್ದನ್ನು…

Read More

ಬೆಂಗಳೂರು : ಕನ್ನಡ ಭಾಷೆಯ ಬಗ್ಗೆ ತಮ್ಮ ಹೇಳಿಕೆಗಳ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ, ನಟ-ರಾಜಕಾರಣಿ ಕಮಲ್ ಹಾಸನ್ ತಮ್ಮ ಇತ್ತೀಚಿನ ಚಿತ್ರ ‘ಥಗ್ ಲೈಫ್’ ಕರ್ನಾಟಕದಲ್ಲಿ ಸುಗಮ ಬಿಡುಗಡೆಗೆ ರಕ್ಷಣೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದು, ಈ ವೇಳೆ ಕಮಲ್ ಹಾಸನರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೀಗ ಹೈ ಕೋರ್ಟ್ ನಲ್ಲಿ ಕಮಲ್ ಹಾಸನ ಸಲ್ಲಿಸಿರುವ ಅರ್ಜಿ ಮತ್ತೆ ಆರಂಭವಾಯಿತು. ನ್ಯಾ. ಎಂ.ನಾಗಪ್ರಸನ್ನ ಅವರಿಂದ ಪೀಠದಲ್ಲಿ ವಿಚಾರಣೆ ಆರಂಭವಾಯಿತು. ಉದಾಹರಣೆಯ ವೇಳೆ ನಿರ್ಮಾಪಕರ ಪರ ವಕೀಲರಾದ ಧ್ಯಾನ್ ಚಿನ್ನಪ್ಪ ಕರ್ನಾಟಕದಲ್ಲಿ ನಾವು ಕಮಲ್ ಹಾಸನವರ ಚಿತ್ರ ಬಿಡುಗಡೆ ಮಾಡಲ ಎಂದು ಸ್ಪಷ್ಟನೆ ನೀಡಿದರು ಈ ವೇಳೆ ನ್ಯಾಯಮೂರ್ತಿಗಳಾದ ಎಂ. ನಾಗಪ್ರಸನ್ನ ಅವರು ಬಹುಶಹ ಅವರಿಗೆ ಆತ್ಮಪ್ರತಿಷ್ಠೆ ಅಡ್ಡ ಬರುತ್ತಿರಬಹುದು ಎಂದು ಚಾಟಿ ಬೀಸಿದೆ. ನ್ಯಾಯಮೂರ್ತಿಗಳು ಹೇಳಿದ್ದನ್ನು ಕಮಲ್ ಹಾಸನ್ ಗೆ ತಿಳಿಸಿದ್ದೇವೆ. ಕಮಲ್ ಹಾಸನ್ ಬರೆದ ಪತ್ರವನ್ನು ಒಮ್ಮೆ ದಯವಿಟ್ಟು ಓದಿ ಕಮಲ್ ಹಾಸನ್ ನಟನೆಯ ರಿಲೀಸ್…

Read More

ಮಂಗಳೂರು : ಕಳೆದ ಹಲವು ದಿನಗಳಿಂದ ಹೃದಯಘಾತದಿಂದ ಅನೇಕರು ಸಾವನ್ನಪ್ಪುತ್ತಿದ್ದಾರೆ. ಇದೀಗ ಮಂಗಳೂರಿನಲ್ಲಿ ಆಟೋ ಚಲಿಸುತ್ತಿರುವಾಗಲೇ ಏಕಾಏಕಿ ಹೃದಯಾಘಾತವಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕೊಕ್ಕಡದಲ್ಲಿ ನಡೆದಿದೆ. ಮೃತ ಆಟೋ ಚಾಲಕನನ್ನು ಶರತ್ ಕುಮಾರ್ ಕೆ (36) ಎಂದು ತಿಳಿದುಬಂದಿದೆ. ಶರತ್ ಕುಮಾರ್ ಅವರು ಪ್ರತಿದಿನದಂತೆ ಇಂದು ಬೆಳಿಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ಮರುಪಯಣದಲ್ಲಿ ತಮ್ಮ ಸ್ವಂತ ಆಟೋ ರಿಕ್ಷಾ ಚಲಾಯಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ರಿಕ್ಷಾ ಚಲಾಯಿಸುವ ನಡುವೆಯೇ ನಿಧನರಾದರು. ಸ್ಥಳೀಯರು ಕೂಡಲೇ ವಿಷಯ ಗಮನಿಸಿ ಶರತ್‌ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಆದರೆ, ಅದಾಗಲೇ ಅವರು ನಿಧನ ಹೊಂದಿದ್ದರು.

Read More

ಬೆಂಗಳೂರು : ಇಂದು ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ನಡುವೆ ಐಪಿಎಲ್ ಫೈನಲ್ ಮ್ಯಾಚ್ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮ ಆಚರಣೆಯ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಟ್ಟರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ. ಹೌದು ಪಂದ್ಯದ ಬಳಿಕ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈಗಾಗಲೇ ನಗರದ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಿದ್ರೆ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ಇಲ್ಲದೇ ಎಲ್‌ಇಡಿ ಸ್ಕ್ರೀನ್ ಅಳವಡಿಸಿದ್ರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸೂಚನೆ ನೀಡಿದ್ದಾರೆ. 18 ವರ್ಷಗಳ ಕನಸನ್ನು ಹೊತ್ತುಕೊಂಡು ಫೈನಲ್‌ಗೆ ಲಗ್ಗೆಯಿಟ್ಟಿರುವ ಆರ್‌ಸಿಬಿ ಇಂದು ಪಂಜಾಬ್ ವಿರುದ್ಧ ಕೊನೆಯ…

Read More