Subscribe to Updates
Get the latest creative news from FooBar about art, design and business.
Author: kannadanewsnow05
ಉಡುಪಿ: ಪದವೀಧರ ಶಿಕ್ಷಕರ ಚುನಾವಣೆಗೆ ಈಗಾಗಲೇ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ಆದರೆ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹೌದು ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿತ್ತು. ಆ ಸಂದರ್ಭದಲ್ಲಿಯೂ ಭಟ್ ಅವರು ಬೇಸರಗೊಂಡಿದ್ದರು. ಬಳಿಕ ಪಕ್ಷದ ವರಿಷ್ಠರು ವಿಧಾನ ಪರಿಷತ್ ನಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ, ಅಭ್ಯರ್ಥಿಯ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲೂ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿಕೊಂಡು ಅಭ್ಯರ್ಥಿಯ ಪರವಾಗಿ ಉತ್ತಮವಾಗಿ ಕೆಲಸ…
ಧಾರವಾಡ : ಬೆಂಕಿಯನ್ನು ದೇವರು ಅಂತಿರಲ್ಲ? ದೇವರು ಎಂದು ಅದರ ಜೊತೆ ಸ್ವಲ್ಪ ಹೊತ್ತು ಮಲಗುತ್ತೀರಾ? ಎಂದು ಸನಾತನ ಸಂಸ್ಕೃತಿ, ನಂಬಿಕೆ ಬಗ್ಗೆ ತೋಂಟದ ಶ್ರೀ ನಿಜಗುಣಾನಂದ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ‘ಬಸವಣ್ಣ-ಸಾಂಸ್ಕೃತಿಕ ನಾಯಕ’ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿರುವ ಶ್ರೀ ನಿಜಗುಣಾನಂದ ಸ್ವಾಮೀಜಿ, ಬಸವಣ್ಣನವರಿಗೆ ಎಲ್ಲಿಯೂ ಕೆಟ್ಟವರು ಕಾಣಲಿಲ್ಲ. ಆತನ ಸಂಸ್ಕೃತಿ, ಸಂಸ್ಕಾರ ಯಾರಿಗೂ ಕೊಡಲು ಆಗುವುದಿಲ್ಲ. ಕಾಣುವ ಮನುಷ್ಯರನ್ನು ಪ್ರೀತಿ ಮಾಡಲಾರದವರು. ಕಾಣದೇ ಇರೋ ದೇವರನ್ನು ಪ್ರೀತಿ ಮಾಡಲು ಸಾಧ್ಯವೇ? ಎಂದು ಬಸವೇಶ್ವರರ ವಿಚಾರ ಹೇಳುತ್ತ ದೇವರ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರಾಣಿದಯವಾದ ಸಂಸ್ಕೃತಿ ಬಸವಣ್ಣನವರದ್ದು. ಹಬ್ಬ-ಹರಿದಿನಗಳಲ್ಲಿ ಕುರಿ, ಕೋಣ ತಂದಿಟ್ಟು ಕಡಿಯುತ್ತಿದ್ದರು. ಆಗ ಬಸವಣ್ಣ ಯಾವ ಸಂಸ್ಕೃತಿ ನಿಮ್ಮದು? ಎಂದು ಕೇಳಿದ್ದರು ದೇವರ ಹೆಸರಿನಲ್ಲಿ ಪ್ರಾಣಿ ವಧೆ ಮಾಡುವುದು ನಿಮ್ಮ ಸಂಸ್ಕೃತಿಯೇ? ದೇವರ ಹೆಸರಲ್ಲಿ ಹೋಮ ಮಾಡಿ ತಿನ್ನುವ ಪದಾರ್ಥ ಹಾಕುತ್ತಿರಲ್ಲ? ಏನಿದು ನಿಮ್ಮ ಸಂಸ್ಕೃತಿನಾ? ಎಂದು ಪ್ರಶ್ನಿಸಿದ್ದಾರೆ. ಬೆಂಕಿಯನ್ನು ದೇವರು ಅಂತಿರಲ್ಲ.…
ಹಾಸನ : ಮಹಿಳೆ ಒಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡಗೆ ಇದೀಗ ಹೊಳೆನರಸೀಪುರ JMFC ಕೋರ್ಟ್ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ನಾಳೆ ಬೆಳಿಗ್ಗೆ 9 ರಿಂದ ಮೇ16ರ ರಾತ್ರಿ ಅವರಿಗೆ ಪೊಲೀಸ್ ಕಸ್ಟಡಿಗೆ ಆದೇಶ ಹೊರಡಿಸಿದೆ. ವಕೀಲ ದೇವರಾಜೇಗೌಡ ಮಹಿಳೆಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಯಿಸಿದ ಹೊಳೆನರಸೀಪುರ ಜೆಎಂಎಫ್ ಸಿ ಕೋರ್ಟ್ ನ್ಯಾಯಾಧೀಶ ಪ್ರವೀಣ್ ದೇವರಾಜ ಗೌಡಗೆ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ತಮ್ಮ ಬಂಧನದ ಸುಳಿವು ಸಿಗುತ್ತಿದ್ದಂತೆ ಪರಾರಿಯಾಗಲು ದೇವರಾಜೇಗೌಡ ಯತ್ನಿಸಿದ್ದು, ಅವರ ಮೊಬೈಲ್ ಲೊಕೇಶನ್ ಆಧರಿಸಿ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಸಮೀಪ ಅವರನ್ನು ಬಂಧಿಸಲಾಗಿತ್ತು. ಇದೀಗ ಹಳೆ ನರಸೀಪುರ ಜೆಎಂಎಫ್ ಸಿ ಕೋರ್ಟ್ ದೇವರಾಜ…
ಬೆಂಗಳೂರು : ಕರ್ನಾಟಕದಲ್ಲಿ ಸರ್ಕಾರ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ಪತನದ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಹಿಂದೆ ಹೇಳಿಕೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ತಿರುಗೇಟು ನೀಡಿದ್ದು ಪಾರ್ಲಿಮೆಂಟ್ ಚುನಾವಣೆಯ ಬಳಿಕ ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತದೆ ಎಂದು ಭವಿಷ್ಯ ನುಡಿದರು. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಏಕನಾಥ್ ಶಿಂದೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರ್ಕಾರದಲ್ಲಿ ಯಾವುದೇ ಶಿಂಧೆ ಇಲ್ಲ. ನಮಗೆ ಯಾವ ಭಯ ಇಲ್ಲ. ಮಹಾರಾಷ್ಟ್ರದಲ್ಲಿ ಪಾರ್ಲಿಮೆಂಟ್ ಚುನಾವಣೆ ಬಳಿಕ ನಮ್ಮ ಸರ್ಕಾರ ಬರುತ್ತದೆ.ಅವರ ಸರ್ಕಾರದ ಬಗ್ಗೆ ಅವರಿಗೆ ಅನಮಾನವಿದೆ. ಎಲೆಕ್ಷನ್ ಆದ ಬಳಿಕ ರಾಜ್ಯದಲ್ಲಿ ಯಾವುದೇ ಭಯವಿಲ್ಲ. ಮಹಾರಾಷ್ಟ್ರ ಸರ್ಕಾರ ಉಳಿಯುತ್ತಾ ಎಂನ ಅನುಮಾನವಿದೆ ಎಂದರು. ಮುಂದುವರೆದು ಅಲ್ಲಿ ಶಾಸಕರು ಯೂಟರ್ನ್ ಹೊಡೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಅಲ್ಲಿ ನಮ್ಮ ಪಕ್ಷದ ಸರ್ಕಾರ ಬರಲಿದೆ. ಅಲ್ಲಿ ಮೈತ್ರಿ ಸರ್ಕಾರ ಬರಲಿದೆ. ಎನ್ಸಿಪಿ, ಶಿವಸೇನೆಯ ಶಾಸಕರು ವಾಪಸ್ ಆಗುತ್ತಿದ್ದಾರೆ. ಅದಕ್ಕೆ ಅಲ್ಲಿ…
ಬೆಂಗಳೂರು : ಲೋಕಸಭೆ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ ನೀಡಿದ್ದರು. ಇದಕ್ಕೆ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಏಕನಾಥ ಶಿಂಧೆಗೆ ತಿರುಗೇಟು ನೀಡಿದ್ದು ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಮಾಜಿ ಆಗ್ತಾರೆ ‘ಮಹಾ’ ಸರ್ಕಾರವೇ ಬೀಳುತ್ತದೆ ಎಂದು ಭವಿಷ್ಯ ನುಡಿದರು. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳುದ ಶಿಂಧೆ, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಓದಲಿ.ನಮ್ಮ ಪಕ್ಷದಲ್ಲಿ ಅಂತಹ ಶಾಸಕರಿಲ್ಲ. ಬೇರೆ ಪಕ್ಷದ ಐದಾರು ಮಂದಿ ನಮ್ಮ ಜೊತೆಗಿದ್ದಾರೆ. ನಮ್ಮ ಜೊತೆ ಬಹಿರಂಗವಾಗಿ ಕೆಲವರು ಗುರ್ತಿಸಿಕೊಂಡಿದ್ದಾರೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನ ಆಗಲಿದೆ ಎಂದು ಹೇಳಿಕೆ ನೀಡಿರುವ ಏಕನಾಥ್ ಶಿಂಧೆ ಅವರ ಸರ್ಕಾರ ಪತನವಾಗಲಿದೆ ಎಂದರು. ಕರ್ನಾಟಕದಲ್ಲಿ 89 ಶಾಸಕರು ಹೋದರೆ ಸರ್ಕಾರ ಬೀಳಬಹುದು. ಆದರೆ ಬಿಜೆಪಿ,ಜೆಡಿಎಸ್ ನಿಂದ 15, 20 ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ನಮ್ಮ ಸಂಪರ್ಕದಲ್ಲಿ ಅವರಿದ್ದಾರೆ. ಇದರ…
ಹುಬ್ಬಳ್ಳಿ : ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಕಳೆದ ಏಪ್ರಿಲ್ 18 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ನೇಹಾ ಹಿರೇಮಠ್ ಹತ್ಯೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಸದ್ಯದಲ್ಲೇ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದೆ. ಈ ಸಂಬಂಧ ಆರೋಪಿ ಯುವಕ ಫಯಾಜ್ನನ್ನು ಪೊಲೀಸರು ಬಂಧಿಸಿದ್ದರು.ಆರಂಭದಲ್ಲಿ ಆರೋಪಿ ಫಯಾಜ್ನನ್ನು ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದ ಸಿಐಡಿ ಅಧಿಕಾರಿಗಳ ತಂಡ ಕೊಲೆ ನಡೆದ ಸ್ಥಳ, ಚಾಕು ಖರೀದಿಸಿದ ಸ್ಥಳ ಹಾಗೂ ಕ್ಯಾಂಪಸ್ನಲ್ಲಿ ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳ ಸೇರಿದಂತೆ ಹಲವು ಕಡೆ ಕರೆದೊಯ್ದು ಸ್ಥಳ ಮಹಜರು ನಡೆಸಿತ್ತು. ಜೊತೆಗೆ ವಿದ್ಯಾರ್ಥಿನಿ ನೇಹಾಳ ಪೋಷಕರ ವಿಚಾರಣೆಯನ್ನೂ ನಡೆಸಲಾಗಿತ್ತು. ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ, ಹೋರಾಟ ನಡೆಸಿದ್ದವು. ಘಟನೆಯು ಸಾರ್ವಜನಿಕ ವಲಯದಲ್ಲಿಯೂ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ರಾಜ್ಯ ಸರ್ಕಾರವು ಪ್ರಕರಣದ ತನಿಖೆ…
ದಾವಣಗೆರೆ : ದಾವಣಗೆರೆಯಲ್ಲಿ ಒಂದು ಮನಕಲಕುವ ಘಟನೆ ನಡೆದಿದ್ದು, ತನ್ನ ತಂದೆಯ ಸಾವಿನಿಂದ ಮನನೊಂದ ಮಗನೊಬ್ಬ ಮನನೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಸಮೀಪದ ಚೀಲಾಪುರ ಗ್ರಾಮದಲ್ಲಿ ನಡೆದಿದೆ. ಹೌದು, ಚೀಲಾಪುರ ಗ್ರಾಮದ ಚಂದ್ರನಾಯ್ಕ (65) ಗುರುವಾರ ಬೆಳಗ್ಗೆ ಮೃತಪಟ್ಟಿದ್ದರು. ಇದರಿಂದ ಬೇಸತ್ತು ಪುತ್ರ ಶಿವಕುಮಾರ್ (32) ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 8 ವರ್ಷಗಳ ಹಿಂದೆ ಕಬ್ಬು ಕಟಾವು ಮಾಡುವ ವೇಳೆ ಶಿವಕುಮಾರ್ ಕೈ ತುಂಡಾಗಿತ್ತು. ಹಾಗಾಗಿ ಅವರ ತಂದೆ ಶಿವಕುಮಾರ್ ಗಾಗಿ ಎಲ್ಲಕಡೆಗೂ ಆಸ್ಪತ್ರೆಗೆ ತೋರಿಸಿ ಸಾಲ ಸೋಲ ಮಾಡಿ ಆತನ ಆರೈಕೆ ಮಾಡಿದ್ದರು. ಹೀಗಾಗಿ ತಂದೆಯ ಸಾವಿನ ನಂತರ ತನ್ನ ಮುಂದಿನ ಭವಿಷ್ಯ ಏನು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಿವಕುಮಾರ ಸಹೋದರ ರವಿಕುಮಾರ್ ತಿಳಿಸಿದ್ದಾರೆ.ಘಟನೆ ಕುರಿತಂತೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ : ಒಂಟೆಗಳನ್ನು ಹುಡುಕಿಕೊಂಡು ಮನೆಯಿಂದ ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ ವಿಜಯಪುರದ ಇಂಡಿ ರಸ್ತೆಯಲ್ಲಿರುವ ತ್ಯಾಜ್ಯ ನೀರಿನ ಸಂಸ್ಕರಣ ಘಟಕದಲ್ಲಿ ಕಾಣೆಯಾಗಿದೆ ಮೂವರು ಮಕ್ಕಳು ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ನಗರದ ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದ ಶವಗಳು ಪತ್ತೆ ಆಗಿವೆ. ಗದಗ ಮೂಲದ ಅನುಷ್ಕಾ ಅನೀಲ ದಹಿಂಡೆ (9) ವಿಜಯ ಅನಿಳ ದಹಿಂಡೆ (7) ಮತ್ತು ವಿಜಯಪುರ ಮೂಲದ ಮಿಹಿರ್ ಶ್ರೀಕಾಂತ ಜಾನಗೌಳಿ (7) ಮೃತ ಬಾಲಕರು ಎಂದು ಹೇಳಲಾಗುತ್ತಿದೆ. ಗದಗ ಮೂಲದ ಅನುಷ್ಕಾ ಹಾಗೂ ವಿಜಯ ಬೇಸಿಗೆ ರಜೆಗಾಗಿ ವಿಜಯಪುರದಲ್ಲಿರುವ ಮಾವನ ಮನೆಗೆ ಬಂದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿಜಯಪುರದ ಚಾಬಕಸಾಬ್ ದರ್ಗಾದ ಬಳಿಯ ಮನೆಯ ಮುಂದೆ ಒಂಟೆ ಸವಾರಿ ಮಾಡಿದ್ದಾರೆ. ನಂತರ ಒಂಟೆಗಳನ್ನು ಹುಡುಕಿಕೊಂಡು ಮನೆಯಿಂದ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಟಿಟಿಸಿವಿಯಲ್ಲಿ ಸೆರೆಯಾಗಿದ್ದು, ಬಹಳ ಸಮಯವಾದರೂ ಮನೆಗೆ ಮಕ್ಕಳು ಬಾರದ ಕಾರಣ…
ಬೆಂಗಳೂರು : ಮಹಾರಾಷ್ಟ್ರದ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕೂಡ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, ಕರ್ನಾಟಕದಲ್ಲಿ ಸರ್ಕಾರ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದೆ ಎಂಬ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಹಿಂದೆ ಹೇಳಿಕೆ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ. ಈ ಒಂದು ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ್ ಉತ್ತರಿಸಿದ್ದಾರೆ. ಬಿವೈ ವಿಜಯೇಂದ್ರ ಹೇಳಿದ್ದೇನು? ಇನ್ನು ಇದೇ ವಿಷಯವಾಗಿ ಬಿವೈ ವಿಜಯೇಂದ್ರ ಮಾತನಾಡಿದ್ದು ವಿರೋಧ ಪಕ್ಷವಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ ಸರ್ಕಾರ ಬಿಡಿಸುವ ಕೆಲಸ ನಾವು ಮಾಡುವುದಿಲ್ಲ ಆದರೆ ಚುನಾವಣಾ ರಿಸಲ್ಟ್ ಸರಕಾರದ ಮೇಲೆ ಪರಿಣಾಮ ಬೀರುತ್ತದೆ ಯಾವ ರೀತಿ ಪರಿಣಾಮ ಬೀಳುತ್ತೆ ಎಂಬುದಕ್ಕೆ ನಾವು ಹೊಣೆಗಾರರಲ್ಲ. ವಿರೋಧ ಪಕ್ಷದಲ್ಲೇ ನಾವು ಜವಾಬ್ದಾರಿಯಾಗಿ ಕೆಲಸ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು. ಅಶ್ವಥ್ ನಾರಾಯಣ ಹೇಳಿದ್ದೇನು? ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಾ. ಅಶ್ವತ್ ನಾರಾಯಣ್…
ಬೆಂಗಳೂರು : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶಾಸಕ ಎಚ್ ಡಿ ರೇವಣ್ಣ ಅವರ ಅರ್ಜಿ ವಿಚಾರಣೆ ನಡೆಯುತ್ತಿದ್ದು ಇದೀಗ ವಿಚಾರಣೆಯನ್ನು ಕೋರ್ಟ್ 2.45ಕ್ಕೆ ಮುಂದೂಡಿದೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಧ್ಯಾಹ್ನ 2:45 ಕ್ಕೆ ವಿಚಾರಣೆಯನ್ನು ಮುಂದೂಡಿತು. ಕಳೆದ ಎರಡು ಗಂಟೆಯಿಂದ ಎಚ್ಡಿ ರೇವಣ್ಣ ಅವರ ಜಾಮಿನ್ ಅರ್ಜಿ ವಿಚಾರಣೆ ನಡೆಯುತ್ತಿದ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಾದ ಮತ್ತು ಪ್ರತಿವಾದ ನಡೆಯುತ್ತಿದೆ. ಶಾಸಕ ಎಚ್ ಡಿ ರೇವಣ್ಣ ಪರ ಸಿ ಎಸ್ ನಾಗೇಶ್ ಅವರು ವಾದ ಮಾಡುತ್ತಿದ್ದಾರೆ. ಎಸ್ ಐ ಟಿ ಪರ ಎಸ್ಪಿಪಿ ಜಾಯ್ನ ಕೊಥರಿ ಅವರು ವಾದ ಮಾಡುತ್ತಿದ್ದಾರೆ.