Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 150 ಕೊರೊನ ಕೇಸ್ ಪತ್ತೆಯಾಗಿವೆ. ಅಲ್ಲದೇ ಸೋಂಕಿತರಾದಂತ 18 ಜನರು ಗುಣಮುಖರಾಗಿದ್ದಾರೆ ಹಿಂದೂರಾಜ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಈ ಕುರಿತು ಮಾಹಿತಿ ನೀಡಿದೆ. ಇನ್ನು ರಾಜ್ಯದಲ್ಲಿ ಕೊರೊನ ಸೋಂಕಿ ತರ ಸಂಖ್ಯೆ 1,705 ಕ್ಕೆ ಏರಿಕೆಯಾಗಿದ್ದು ಪ್ರಸ್ತುತ ರಾಜ್ಯದಲ್ಲಿ ಕೋರೋನ ಆಕ್ಟಿವ್ ಪ್ರಕರಣಗಳ ಸಂಖ್ಯೆ 527 ಇದೆ. ಕಳೆದ 24 ಗಂಟೆಯಲ್ಲಿ 496 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು 150 ಮಂದಿಗೆ ಕೊರೋನಾ ಸೋಂಕು ಪತ್ತೆಯಾದ ಕಾರಣ ಸಕ್ರೀಯ ಸೋಂಕಿತರ ಸಂಖ್ಯೆ 527ಕ್ಕೆ ಏರಿಕೆಯಾಗಿದೆ. ಇವರಲ್ಲಿ 520 ಮಂದಿ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ, 7 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದೆ.
ಅಹಮದಾಬಾದ್ : ನಿನ್ನೆ ಗುಜರಾತಿನ ಅಹಮದಾಬಾದ್ ಏರ್ಪೋರ್ಟ್ ಬಳಿ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ವಿಮಾನದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ. ಹೌದು ಅಹ್ಮದಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ನಿನ್ನೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿತ್ತು. ಈ ಒಂದು ದುರಂತದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ. ಇನ್ನು ಗಾಯಾಳು 24 ವೈದ್ಯಕೀಯ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರೆದಿದೆ. ಇನ್ನು ಕೆಲವರ ಮೃತ ದೇಹಗಳು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿದ್ದು, ಡಿಎನ್ಎ ವರದಿಯ ಬಳಿಕ 8 ಕುಟುಂಬಸ್ಥರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲಾಗಿದೆ. ಅನೇಕ ಜನರ ಗುರುತುಪತೆಯಾಗದ ಹಿನ್ನೆಲೆಯಲ್ಲಿ ಡಿಎನ್ಎ ಪರೀಕ್ಷೆ ಮಾಡಿದ ನಂತರ ಕುಟುಂಬಸ್ಥರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ.
ಬೆಂಗಳೂರು : ಓಲಾ, ಊಬರ್ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಗಳಿಗೆ ಹೈಕೋರ್ಟ್ ಶಾಕ್ ನೀಡಿದ್ದು, ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಮಧ್ಯಂತರ ಅನುಮತಿಗೆ ಹೈಕೋರ್ಟ್ ನಿರಾಕರಿಸಿದೆ. ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಜೂನ್ 24ಕ್ಕೆ ನಿಗದಿಪಡಿಸಿದೆ. ವಿಚಾರಣೆ ವೇಳೆ ಸರ್ಕಾರದ ಪರವಾಗಿ ಎಜಿ ಶಶಿಕಿರಣ ಶೆಟ್ಟಿ ವಾದ ಮಂಡಿಸಿದರು. ಬೈಕ್ ಟ್ಯಾಕ್ಸಿಗಳ ಪರ್ಮಿಟ್ ನಿಮ್ಮ ರೂಪಿಸಲು ಸರ್ಕಾರ ಸಿದ್ಧವಿಲ್ಲ 8 ರಾಜ್ಯಗಳಲ್ಲಿ ಮಾತ್ರ ಬೈಕ್ ಟ್ಯಾಕ್ಸಿಗೆ ಪರ್ಮಿಟ್ ನೀಡಲಾಗಿದೆ. ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಅನುಮತಿ ನೀಡಲಾಗಿಲ್ಲ. ಕರ್ನಾಟಕದಲ್ಲಿ ಸರ್ಕಾರ ಬೈಕ್ ಟ್ಯಾಕ್ಸಿಗೆ ಪೆರ್ಮಿಟ್ ನೀಡಿಲ್ಲ 4 ವರ್ಷಗಳಿಂದ ಮಧ್ಯಂತರ ಆದೇಶದ ಮೇಲೆ ಬೈಕ್ ಟ್ಯಾಕ್ಸಿ ನಡೆಯುತ್ತಿದೆ ಸುಪ್ರೀಂಕೋರ್ಟ್ ಕೂಡ ಮಧ್ಯಂತರ ಆದೇಶ ನಿರಾಕರಿಸಿದೆ ಎಂದು ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು. ಅಲ್ಲದೆ, ಬೈಕ್ ಟ್ಯಾಕ್ಸಿಗಳ ಸೇವೆ ಕಾರ್ಯಚರಣೆ ಮುಂದುವರೆಸುವ ಸಂಬಂಧ ಮದ್ಯಂತರ ಪರಿಹಾರ ನೀಡಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ಬೈಕ್ ಟ್ಯಾಕ್ಸಿ ಸೇವೆ…
ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಹಾಗೂ ಸಿಸಿಬಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಚಿಕ್ಕಜಾಲ ಠಾಣೆಯ ಪೊಲೀಸರು ಹಾಗೂ ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 10 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಹೌದು ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ವಿದೇಶಿ ಮಹಿಳೆ ಪ್ರಿನ್ಸೆಸ್ ಎನ್ನುವವಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತಳ ಬಳಿ ಇಂದ 10 ಕೋಟಿ ರೂಪಾಯಿ ಮೌಲ್ಯದ 5.325 ಕೆಜಿ ಎಂಡಿಎಂಎ ಡ್ರಗ್ಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪೊಲೀಸರು ವಿದೇಶಿ ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು : ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಕೋರ್ಟಿಗೆ ಶರಣಾಗಲು ಮತ್ತಷ್ಟು ಕಾಲಾವಕಾಶಕ್ಕೆ ಯತ್ನಿಸಿದರು. ಸುಪ್ರೀಂ ಕೋರ್ಟ್ ನಲ್ಲಿ ಶಾಸಕ ವಿನಯ್ ಕುಲಕರ್ಣಿ ಪರ ವಕೀಲರು ಶರಣಾಗಲು ಕಾಲಾವಕಾಶ ಕೋರಿದ್ದರು. ಆದರೆ ಅವರ ಯತ್ನ ವಿಫಲವಾಗಿದೆ. ಶಾಸಕ ಮತ್ತು ಕರ್ನಾಟಕ ನೀರು ಸರಬರಾಜು ಮಂಡಳಿ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಪೂರ್ವ ನಿಗದಿ ಕಾರ್ಯಕ್ರಮಗಳು ಇರುವುದರಿಂದ ಶರಣಾಗಲು ಕಾಲಾವಕಾಶ ಕೋರಿದ್ದರು. ಆದರೆ ಸುಪ್ರೀಂ ಕೋರ್ಟ್ ವಿನಯ್ ಕುಲಕರಣಿಗೆ ಕಾಲಾವಕಾಶ ನೀಡಲು ನಿರಾಕರಿಸಿದೆ. ಈ ಹಿನ್ನೆಲೆ ಇಂದು ಶಾಸಕವನ್ನೇ ಕುಲಕರ್ಣಿ ಅವರನ್ನು ಕೋರ್ಟ್ ಬಳಿ ಸಿಬಿಐ ವಶಕ್ಕೆ ಪಡೆದುಕೊಂಡಿತ್ತು. ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ರದ್ದು ಹಿನ್ನೆಲೆಯಲ್ಲಿ ಸಿಬಿಐ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದುಕೊಂಡು ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದಾರೆ.
ಬೆಂಗಳೂರು : ಮದುವೆಯಾಗಿದ್ದರು ಸಹ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಅಲ್ಲದೇ, ಭರತನಾಟ್ಯ ಕಲಾವಿದೆಯಾಗಿರುವ ಪತ್ನಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ಇಂದು ನಿರಾಕರಿಸಿತು. ಅರ್ಜಿದಾರ ಪತಿಯು ಪತ್ನಿಯ ಕೈಯನ್ನು ತಿರುಗಿಸಿ, ಗಾಯವಾಗುವಂತೆ ಮಾಡಿ ಆಸ್ಪತ್ರೆಗೆ ಸೇರುವಂತಾಗಿದೆ ಎಂಬ ಅಂಶ ವೈದ್ಯರ ವರದಿಯಿಂದ ಗೊತ್ತಾಗಿದೆ. ದೂರಿನಲ್ಲಿ ದಂಪತಿ ಮದುವೆಯಾದ ಒಂದ ವರ್ಷದಲ್ಲಿ ಏನೆಲ್ಲಾ ನಡೆದಿದೆ ಎಂಬ ಅಂಶಗಳನ್ನು ವಿವರಿಸಲಾಗಿದೆ. ಈ ಎಲ್ಲ ಪತ್ನಿಯ ಮೇಲೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದು ಗೊತ್ತಾಗಲಿದೆ. ಹೀಗಾಗಿ ಪ್ರಕರಣದ ಪೂರ್ಣ ಪ್ರಮಾಣದ ವಿಚಾರಣೆ ಅಗತ್ಯವಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸುತ್ತಿರುವುದಾಗಿ ಪೀಠ ಹೇಳಿದೆ. ಇದೇ ವೇಳೆ, ಭರತನಾಟ್ಯ ಮುಂದುವರಿಸದಂತೆ ಸೂಚನೆ ನೀಡಿದ್ದ ಆರೋಪ ಎದುರಿಸುತ್ತಿದ್ದ ಅತ್ತೆ ಮತ್ತು ಮಾವನ ವಿರುದ್ದ ಪ್ರಕರಣ ರದ್ದುಪಡಿಸಿ ನ್ಯಾಯಪೀಠ ಆದೇಶಿಸಿದೆ. ತಮ್ಮ ವಿರುದ್ಧ ಪತ್ನಿ ದಾಖಲಿಸಿರುವ ಪ್ರಕರಣ ರದ್ದು ಕೋರಿ…
ಬೆಂಗಳೂರು : ಕಳೆದ ಜೂನ್ ನಾಲ್ಕರಂದು ತೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ತಂಡಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಸ್ಟೇಡಿಯಂನಲ್ಲಿ ಕಾಲ್ತುಳಿತದಲ್ಲಿ 11 ಜನ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಈಗ ಈ ಒಂದು ಪ್ರಕರಣದ ತನಿಖಾಧಿಕಾರಿ ಜಗದೀಶ್ ಅವರು ಅಧಿಕಾರಿಗಳ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಹೌದು ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನ ಸಾವನ್ನಪ್ಪಿದ್ದರು. ಇ ಹಿನ್ನೆಲೆ ಗಾಯಾಳುಗಳ ಹೇಳಿಕೆಗಳನ್ನು ಇದೀಗ ಜಿಲ್ಲಾಧಿಕಾರಿ ದಾಖಲಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಜಗದೀಶ್ ಅವರು ಗಾಯಾಳುಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಡಿಸಿ ನ್ಯಾಯಾಲಯ ಸಭಾಂಗಣದಲ್ಲಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಯಾವ ಸಮಯದಲ್ಲಿ ಘಟನೆ ಸಂಭವಿಸಿತು? ಯಾವ ಕಾರಣದಿಂದ ಕಾಲ್ತುಳಿತ ಉಂಟಾಯಿತು? ಘಟನೆ ದಿನವೇ ಗಾಯಾಳುಗಳು ಸಮಸ್ಯೆಯ ಬಗ್ಗೆ ಹೇಳಿಕೆ ನೀಡಿದ್ದರು. ಇದೀಗ ಇಂದು ಅಧಿಕಾರಿಗಳ ಹೇಳಿಕೆಯನ್ನು ತನಿಖಾಧಿಕಾರಿ ಜಗದೀಶ್ ರವರು ಪಡೆದಿದ್ದಾರೆ. ಅಲ್ಲದೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಕೂಡ ತನಿಖೆಯನ್ನು ಚುರುಕುಗೊಳಿಸಿದೆ.
ತುಮಕೂರು : ಸಾಲಭಾದೇ ತಾಳಲಾರದೆ ವ್ಯಕ್ತಿಯೊಬ್ಬರು ಮರಕ್ಕೆ ನೇಣು ತೆಗೆದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಹಿರೇಹಳ್ಳಿ ಬಳಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಹಿರೇಹಳ್ಳಿ ಗ್ರಾಮದ ರವೀಂದ್ರ (52) ಎಂದು ತಿಳಿದುಬಂದಿದೆ. ರವೀಂದ್ರ ಅವರು, ಯಲಹಂಕ ಬಳಿ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದರು. ಕಳೆದ ನಾಲ್ಕೈದು ದಿನಗಳಿಂದ ಮನೆಬಿಟ್ಟು ನಾಪತ್ತೆಯಾಗಿದ್ದು, ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಲಾಗಿತ್ತು. ಇಂದು ಬೆಳ್ಳಂಬೆಳಗ್ಗೆ ಹಿರೇಹಳ್ಳಿಯ ಜಮೀನೊಂದರ ಬಳಿ ಹುಣಸೇಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರವೀಂದ್ರ ಅವರ ಶವ ಪತ್ತೆಯಾಗಿದೆ. ತನ್ನ ಹುಟ್ಟೂರಿನ ಮನೆ ಮುಂದೆ ಇದ್ದ ಹುಣಸೇಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲಬಾಧೆಯೇ ಇದಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಕಲಬುರ್ಗಿ : ನಿನ್ನೆ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಗುಜರಾತ್ನ ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡು ಪೈಲಟ್, ಸಿಬ್ಬಂದಿಗಳು ಸೇರಿದಂತೆ ಒಟ್ಟು 242 ಪ್ರಯಾಣಿಕರು ಸಾವನಪ್ಪಿದ್ದಾರೆ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ಕೇಂದ್ರ ಸರ್ಕಾರ ಈ ಘಟನೆ ಹೊಣೆ ಹೊರಬೇಕು ತಕ್ಷಣ ವಿಮಾನಯಾನ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಕಲ್ಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿಮಾನ ದುರಂತದ ಘಟನೆ ಹೊಣೆ ಹೊರಬೇಕು. ಘಟನೆ ಸಂಭಂದ ಕೂಡಲೇ ವಿಮಾನಯಾನ ಸಚಿವರು ರಾಜೀನಾಮೆ ಕೊಡಬೇಕು. ಇಂತಹ ದುರಂತ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ಆ ವರದಿ ಜನರ ಮುಂದೆ ಇಡಬೇಕು. ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಚಿನ್ನಸ್ವಾಮಿ ಕಾಲ್ತುಳೀತ ಘಟನೆ ಆದಾಗ ಬಿಜೆಪಿಯವರು ರಾಜೀನಾಮೆ ಕೇಳುತ್ತಿದ್ದರು. ಆದರೆ ಕುಂಭಮೇಳ ಮತ್ತು ಪಹಲ್ಗಾಮ್ ಘಟನೆಯಲ್ಲಿ…
ಬೆಂಗಳೂರು : ಬೆಂಗಳೂರಲ್ಲಿ ಹೋಟೆಲ್ ರೂಮ್‌ನಲ್ಲಿ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕ್ರಿಷ್ ಮಾಲಿ (23) ಎಂದು ತಿಳಿದುಬಂದಿದೆ. ಟಸ್ಕರ್ ಟೌನ್‌ನಲ್ಲಿರುವ ಹೋಟೆಲ್‌ನಲ್ಲಿ ಜೂನ್ 1ರಂದು ರೂಮ್ ಬುಕ್ ಮಾಡಿದ್ದ ಆರೋಪಿ, ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ. ಅಲ್ಲದೇ ಜೂನ್ 7ರಂದು ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕ ಬಿಲ್ ಪಾವತಿಸಿದ್ದ. ಬ್ಯಾಗ್‌ನಲ್ಲಿ ಪ್ರಿಂಟರ್, ಸ್ಕ್ಯಾನರ್‌ಗಳನ್ನು ತಂದಿದ್ದ ಆರೋಪಿ ಹೋಟೆಲ್‌ನಲ್ಲಿ ಕುಳಿತೇ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿದ್ದ. ಬಳಿಕ ಜೂನ್ 7ರಂದು ಮಧ್ಯಾಹ್ನ ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕವೇ 3 ಸಾವಿರ ರೂ. ಬಿಲ್ ಪಾವತಿಸಿ ತೆರಳಿದ್ದ.ಅದೇ ದಿನ ಬೆಳಗ್ಗೆ ಹೋಟೆಲ್‌ನಿಂದ ಸಂಗ್ರಹಿಸಲಾದ ತ್ಯಾಜ್ಯದಲ್ಲಿ ಕೆಲ ನಕಲಿ ನೋಟುಗಳು ಪತ್ತೆಯಾಗಿರುವುದನ್ನು ಪೌರಕಾರ್ಮಿಕ ಸಿಬ್ಬಂದಿ ಹೋಟೆಲ್ ಮ್ಯಾನೇಜರ್ ಬಳಿ ಹೇಳಿದ್ದ.ಆರೋಪಿಯ ಚೆಕ್ ಔಟ್ ಆದ ಕೆಲ ಸಮಯದ ಬಳಿಕ…












