Subscribe to Updates
Get the latest creative news from FooBar about art, design and business.
Author: kannadanewsnow05
ಮಂಗಳೂರು : ಬಿಎಂಡಬ್ಲ್ಯು ಕಾರೊಂದು ಹೆದ್ದಾರಿ ಮಧ್ಯೆ ಹೊತ್ತಿ ಉರಿದ ಘಟನೆ ಮಂಗಳೂರು ನಗರದ ಅಡ್ಯಾರ್ ನಲ್ಲಿ ನಡೆದಿದೆ. ಬೆಂಕಿ ಅನಾಹುತಕ್ಕೆ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಏನೋ ಸಮಸ್ಯೆ ಇದೆಯೆಂದು ಅಡ್ಯಾರಿನ ಬಿಎಂಡಬ್ಲ್ಯು ಗ್ಯಾರೇಜ್ ಗೆ ತರುತ್ತಿದ್ದರು. ಅಷ್ಟರಲ್ಲೇ ಬೆಂಕಿ ಹತ್ತಿಕೊಂಡಿದ್ದು ಸುಟ್ಟು ಭಸ್ಮವಾಗಿದೆ. ಬಿಸಿ ರೋಡ್ ಕಡೆಯಿಂದ ಚಾಲಕ ಗುರುದೀಪ್ ಎಂಬವರು ಕಾರನ್ನು ಚಲಾಯಿಸಿಕೊಂಡು ಬಂದಿದ್ದು ಸಹ್ಯಾದ್ರಿ ಕಾಲೇಜು ಮುಂಭಾಗಕ್ಕೆ ತಲುಪುತ್ತಿದ್ದಂತೆ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು ಕೂಡಲೇ ಕಾರಿನಿಂದ ಹೊರಕ್ಕೆ ಇಳಿದಿದ್ದಾನೆ. ಅನಂತರ, ಎಲ್ಲರೂ ನೋಡುತ್ತಿರುವಾಗಲೇ ನಡುರಸ್ತೆಯಲ್ಲೇ ಧಗ ಧಗನೆ ಕಾರು ಹೊತ್ತಿ ಉರಿದಿದೆ.
ಬೆಂಗಳೂರು : ಸಾಮಾನ್ಯವಾಗಿ ಲವರ್ಸ್ ಗಳ ಮಧ್ಯ ಯಾವುದು ಒಂದು ಜಗಳಕ್ಕೆ ಬ್ರೇಕ್ ಅಪ್ ಆಗುವುದನ್ನು ನುಡಿರುತ್ತವೆ ಕೇಳಿರುತ್ತೇವೆ ಆದರೆ ಬೆಂಗಳೂರಿನಲ್ಲಿ ಸುಂದರಿಯೊಬ್ಬಳು ಬ್ರೇಕಪ್ ಗಾಗಿ ತನ್ನ ಪ್ರಿಯಕರಣ ಮೇಲೆ ತಾನೆ ರಾಬರಿ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ. ಇದೀಗ ಕಳ್ಳತನ ಮಾಡಿಸಿದ ಟೆಕ್ಕಿ ಶೃತಿ ಸೇರಿ ನಾಲ್ವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಹೌದು ಈ ಒಂದು ಘಟನೆ ನಡೆದಿದ್ದು, ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯುವತಿ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಮೊಬೈಲ್ ಕಸಿಯೋದು ಹೇಗೆ ಅನ್ನೋದು ಪ್ಲಾನ್ ಮಾಡಿದ್ಲು. ಕಳೆದ ಸೆಪ್ಟೆಂಬರ್ 20 ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶೃತಿ ಭೇಟಿಗೆ ತೆರಳಿದ್ದ. ಅದರಂತೆ ಭೇಟಿಯಾಗಿ ಆಕೆಯನ್ನು ಕರೆದುಕೊಂಡು ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದವರು, ವಂಶಿಕೃಷ್ಣನ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಜಗಳ ತೆಗೆದು ಆತನ ಬಳಿಯಿದ್ದ ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲದೇ ವಂಶಿಕೃಷ್ಣನ ಜೊತೆಯಲ್ಲಿಯೇ ಇದ್ದ ಶೃತಿಯ ಮೊಬೈಲ್ನ್ನು ಸಹ ಕಸಿದು ಕೊಂಡಿದ್ದಾರೆ. ನಂತರ ದೂರು ಕೊಡುವುದು ಬೇಡ,…
ಬೆಂಗಳೂರು : ಮಹಿಳೆಯ ಮೇಲೆ ಅತ್ಯಾಚಾರ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಮುನಿರತ್ನ ಸದ್ಯ ಎಸ್ಐಟಿ ವಶದಲ್ಲಿ ಇದ್ದು ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಇದರ ಮಧ್ಯ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮುನಿರತ್ನ ಅವರ ಗನ್ ಮ್ಯಾನ್ ಶ್ರೀನಿವಾಸ್ ನಾಪತ್ತೆಯಾಗಿದ್ದಾನೆ. ಹಾಗಾಗಿ SIT ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಇಂದು ಶ್ರೀನಿವಾಸ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಹೌದು ಬೆಂಗಳೂರಿನ ಸಿಂಗನಾಯಕನಹಳ್ಳಿಯ ಗನ್ ಮ್ಯಾನ್ ಶ್ರೀನಿವಾಸ್ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ವಾಹನಗಳಲ್ಲಿ ಬಂದಿರುವ ಎಸ್ಐಟಿಯ 8 ಅಧಿಕಾರಿಗಳ ತಂಡ ಇದೀಗ ಪರಿಶೀಲನೆ ನಡೆಸುತ್ತಿದ್ದಾರೆ. ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇದೀಗ ತನಿಖೆ ಮುಂದುವರೆದಿದೆ. ಬೇರೆ ಬೇರೆ ಆಯಾಮಗಳಲ್ಲಿ ಎಸ್ಐಟಿ ತನಿಖೆ ಚುರುಗೊಳಿಸಿದೆ.ಸಂತ್ರಸ್ತ ಮಹಿಳೆ ಮತ್ತು ಆರೋಪಿ ನಡುವೆ ಗನ್ ಮ್ಯಾನ್ ಮಧ್ಯವರ್ತಿ ಆಗಿರುವಂತಹ ಶಂಕೆ ವ್ಯಕ್ತವಾಗಿದೆ. ಸಂತ್ರಸ್ತೆಯನ್ನು ಬೈಕಿನಲ್ಲಿ ಪಿಕ್ ಅಪ್ ಮತ್ತು ಡ್ರಾಪ್ ಮಾಡಿದ ಆರೋಪ ಕೇಳಿ ಬಂದಿದೆ. ಪ್ರಕರಣದಲ್ಲಿ ಶ್ರೀನಿವಾಸ್ ಪಾತ್ರದ ಬಗ್ಗೆ SIT…
ಬೆಂಗಳೂರು : ಚುನಾವಣಾ ಬಾಂಡ್ ಗಳ ಮೂಲಕ ಸುಲಿಗೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ತಿಲಕ ನಗರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ A1 ಆರೋಪಿ ಎಂದು ಉಲ್ಲೆಖಿಸಿ FIR ದಾಖಲಿಸಲಾಗಿದೆ. ಹೌದು ಚುನಾವಣಾ ಬಾಂಡ್ ಗಳ ಮೂಲಕ ಹಣ ಸುಲಿಗೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ A1 ಆರೋಪಿಯಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, A2 ಆರೋಪಿಯಾಗಿ ಇಡಿ, A3 ಕೇಂದ್ರ ಬಿಜೆಪಿ ಪದಾಧಿಕಾರಿಗಳು, A4 ಆರೋಪಿಯಾಗಿ ನಳಿನ್ ಕುಮಾರ್ ಕಟೀಲ್, A5 ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ A6 ಆರೋಪಿಗಳನ್ನಾಗಿ ಮಾಡಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಆದರ್ಶ ಅಯ್ಯರ್ ಎಂಬುವವರು ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ. ದೂರಿನ ಪ್ರತಿ, ದಾಖಲೆಗಳನ್ನು ಠಾಣೆಗೆ ಕಳುಹಿಸಲು ನಿನ್ನೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಸೂಚನೆ ನೀಡಿತ್ತು. ಬೆಂಗಳೂರಿನ ತಿಲಕ ನಗರ ಠಾಣೆಗೆ ಕಳುಹಿಸುವಂತೆ ಜಡ್ಜ್…
ಮೈಸೂರು : ಮುಡಾ ಅಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ದಾಖಲಾಗಿದೆ. ಇದೀಗ ಲೋಕಾಯುಕ್ತ ಎಸ್ ಪಿ ಉದೇಶ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ನಾಲ್ಕು ತಂಡಗಳನ್ನು ರಚನೆ ಮಾಡಿದ್ದಾರೆ.ಇದೆ ವೇಳೆ ಸಿದ್ದರಾಮಯ್ಯ ಎಲ್ಲವನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ. ಇಂದು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ ಮತ್ತು ಕಲ್ಯಾಣ’ ಕೃತಿ ಬಿಡುಗಡೆಗೊಳಿಸಿ, ಸಂವಾದದಲ್ಲಿ ಪಾಲ್ಗೊಂಡು ಸಿಎಂ ಸಿದ್ದರಾಮಯ್ಯ ಮಾತನಾಡಿ, ಅವಕಾಶಗಳಿಂದ ವಂಚಿತರಾಗಿರುವವರಿಗೆ ಸಮಾನ ಅವಕಾಶಗಳು ಸಿಕ್ಕಾಗ ಸಮ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರು, ಬುದ್ದ ಕೂಡ ಸಮ ಸಮಾಜದ ಬಗ್ಗೆ ಹೇಳಿದ್ದಾರೆ. ಕೇವಲ ಭಾಷಣಳಿಂದ ಸಮ ಸಮಾಜದ ಆಶಯ ಈಡೇರಲ್ಲ. ಈ ಕಾರಣಕ್ಕೇ ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜಾರಿ ಮಾಡಿದೆ. ಆದರೂ ಕೂಡ ಗ್ಯಾರಂಟಿಗಳಲ್ಲಿ ಜಾರಿ ಮಾಡಿದಾಗ ಹಲವು ಟೀಕೆ ಮಾಡುತ್ತಿದ್ದರು.…
ಬೆಂಗಳೂರು : ಚುನಾವಣಾ ಬಾಂಡ್ ಗಳ ಮೂಲಕ ಸುಲಿಗೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ತಿಲಕ ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೌದು ಚುನಾವಣಾ ಬಾಂಡ್ ಗಳ ಮೂಲಕ ಹಣ ಸುಲಿಗೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಇಡಿ, ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿ ಹಲವರ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ತಿಲಕ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಆದರ್ಶ ಅಯ್ಯರ್ ಎಂಬುವವರು ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ. ದೂರಿನ ಪ್ರತಿ, ದಾಖಲೆಗಳನ್ನು ಠಾಣೆಗೆ ಕಳುಹಿಸಲು ನಿನ್ನೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಸೂಚನೆ ನೀಡಿತ್ತು. ಬೆಂಗಳೂರಿನ ತಿಲಕ ನಗರ ಠಾಣೆಗೆ ಕಳುಹಿಸುವಂತೆ ಜಡ್ಜ್ ಸೂಚಿಸಿದ್ದರು. ಹಾಗಾಗಿ ಇದೀಗ ಚುನಾವಣಾ ಬಾಂಡ್ ಗಳ ಮೂಲಕ ಸುಲಿಗೆ ಆರೋಪ…
ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡಲ್ಲ ಎಂದು ಪದೇಪದೇ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದು, ಈ ರೀತಿ ಪದೇಪದೇ ಹೇಳಿದರೆ ನೀವು ತಪ್ಪು ಮಾಡಿದ್ದೀರಿ ಎಂದು ಜನರಲ್ಲಿ ಭಾವನೆ ಮೂಡುತ್ತದೆ ಎಂದರು. ಇದೆ ವೇಳೆ ಸಿಎಂ ಪತ್ನಿ ಮುಗ್ದರು ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ತಾಯಿ ಎಂದೂ ಹೊರಬಂದವರಲ್ಲ. ಅವರು ಮುಗ್ದರು. ನೀವು ಈಗ ಅವರ ಸಹಿ ಹಾಕಿಸಿಕೊಂಡು ಅವರ ಹೆಸರಿನಲ್ಲಿ ಹಲವು ಸೈಟು ಮಾಡಿಸಿಕೊಂಡಿದ್ದೀರಿ. ಹೀಗಾಗಿ ಆ ತಾಯಿಗೆ ಯಾವುದೇ ತೊಂದರೆಯಾಗಬಾರದು ಎಂದು ನನ್ನ ಅಭಿಪ್ರಾಯ ಎಂದು ಈಶ್ವರಪ್ಪ ಹೇಳಿದ್ದಾರೆ. ಈ ಹಿಂದೆ ನಾನು ಏನೂ ತಪ್ಪು ಮಾಡಿಲ್ಲ. ನನ್ನ ಮೇಲೆ ಎಫ್‌ಐಆರ್ ಹಾಕಲಾಯಿತು. ಕೊನೆಗೆ ತನಿಖೆಯಾಗಿ ಕ್ಲೀನ್ ಚಿಟ್ ಬಂತು. ಆಗ ನನ್ನ ರಾಜೀನಾಮೆಗೆ ಇದೇ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ನಿಮಗೊಂದು ಕಾನೂನು ನಮಗೊಂದು ಕಾನೂನಾ. ಅದೇ…
ಮೈಸೂರು : ಮುಡಾ ಹಗರಣ ಸಂಬಂಧ ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ 4 ತಂಡಗಳ ರಚನೆ ಮಾಡಲಾಗಿದೆ. ಲೋಕಾಯುಕ್ತ ಎಸ್ ಪಿ ಉದೇಶ, ಡಿವೈಎಸ್ಪಿಎಸ್ ಮಾಲತೀಶ್, ಚಾಮರಾಜನಗರ ಡಿ ವೈ ಎಸ್ ಪಿ ಮ್ಯಾಥ್ಯು ಥಾಮಸ್ ಹಾಗೂ ಇನ್ಸ್ಪೆಕ್ಟರ್ ಸೇರಿದಂತೆ 4 ತಂಡಗಳನ್ನು ರಚನೆ ಮಾಡಲಾಗಿದೆ. ಈ ವೇಳೆ ಲೋಕಾಯುಕ್ತ ಎಸ್ ಪಿ ಉದೇಶ ಎಲ್ಲಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಓದಿಕೊಂಡು ಇದೀಗ ತಂಡಗಳು ಪಾಯಿಂಟ್ಸ್ ಮಾಡಿಕೊಳ್ಳುತ್ತಿದ್ದಾರೆ. ಕೇಸಿನ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ, ಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರಾಮನಗರ : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ಅಧಿಕಾರಿಗಳು ತನಿಖೆಗೆ ಒಳಪಡಿಸಲಿದ್ದಾರೆ. ಇದರ ಮಧ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ. ಹಾಗಾದರೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು? ಇಲ್ಲಿದೆ ವಿವರ ರಾಮನಗರ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಸೇವೆ ಮಾಡಬೇಕು ಅಂತ ಅಂದುಕೊಂಡಿದ್ದೇನೆ. ಜೊತೆಗೆ ದೊಡ್ಡ ಹೋರಾಟವೂ ಕೂಡ ನಡೆಯುತ್ತಿದೆ ಈಗ ಮಾತನಾಡಿದರೆ ವಿವಿಧ ರೀತಿಯಲ್ಲಿ ಬಿಂಬಿಸುತ್ತಾರೆ. ಕನಕಪುರ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ರಾಜ್ಯದ ಸೇವೆ ಮಾಡಬೇಕು ಅಂತ ದೊಡ್ಡ ಪ್ರಯತ್ನ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು. ಹಾಗಾಗಿ ಮತ್ತೆ ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದರಾ ಎಂಬ ಅನುಮಾನ ದಟ್ಟವಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ಇದೀಗ ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ಬಾರಿ…
ಬೆಳಗಾವಿ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಎಫ್ಐಆರ್ ವಿಚಾರದ ಕುರಿತಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುವ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ಸಿದ್ದರಾಮಯ್ಯ ಹಿಂದೂ ದೇವರ ಆಶೀರ್ವಾದ ಪಡೆದುಕೊಂಡು ಮುಸ್ಲಿಮರನ್ನು ಓಲೈಸುತ್ತಾರೆ. ನಾವು ಎರಡು ಮಕ್ಕಳು ಎಂದರೆ ಮುಸ್ಲಿಂರು ಹಮ್ ಪಾಂಚ್ ಹಮಾರಾ ಪಂಚಿಸ್ ಅಂತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೌದು ಸಿದ್ದರಾಮಯ್ಯ ಅವರು ಕುಂಕುಮ ಹಚ್ಚಿಕೊಳ್ಳಲು ಹಿಂದೇಟು ಹಾಕ್ತಿದ್ದರು. ಪೇಟ ತೊಟ್ಟುಕೊಳ್ಳಲು ನಿರಾಕರಣೆ ಮಾಡುತ್ತಿದ್ದರು. ಆದರೆ ಈಗ ಚಾಮುಂಡಿ ದರ್ಶನ ಯಾಕೆ ಪಡೆಯುತ್ತಿದ್ದಾರೆ? ಎಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು. ಸಿದ್ದರಾಮಯ್ಯ ಹಿಂದೂ ದೇವಸ್ಥಾನದಲ್ಲಿ ಆಶೀರ್ವಾದ ಪಡೆಯುತ್ತಾರೆ. ಆದರೆ ಮುಸ್ಲಿಮರ ಪರ ಕೆಲಸ ಮಾಡುತ್ತಾರೆ.ಎಸ್ ಟಿ ಎಸ್ ಸಿ ಸಮುದಾಯದ ಹಣ ನುಂಗಿದ್ದಿರಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನುಂಗಿ ನೀರು ಕುಡಿದ್ರಿ. ಹಾಲುಮತದ ಸಮುದಾಯಕ್ಕೆ ಈವರೆಗೂ ಏನು ಮಾಡಿಲ್ಲ. ಆದರೆ…