Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೀದರ್ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಬ್ರಿಡ್ಜ್ ಗೆ ಬೈಕ್ ಡಿಕ್ಕಿಯಾಗಿ ದಂಪತಿ ಹಾಗೂ ಓರ್ವ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಬಳಿಯ ನಾಗಣ್ಣ ಕ್ರಾಸ್ ಬಳಿ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಹಾಗೂ ಮಗಳು ಸ್ಥಳದಲ್ಲಿ ಸಾವನಪ್ಪಿದ್ದಾರೆ. ರಾಜೇಶ್ವರ ಗ್ರಾಮದ ನಿವಾಸಿಗಳಾದ ವೆಂಕಟ ಕರಟ್ಮಲ್ (40) ಪತ್ನಿ ಶಿಲ್ಪ (35) ಹಾಗೂ ಅವರ ಪುತ್ರಿ ರಕ್ಷಿತ (12) ಸ್ಥಳದಲ್ಲೆ ಸಾವನಪ್ಪಿದ್ದಾರೆ. ಇನ್ನು ಮಗ ದಿಗಂಬರ್ (15) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀದರ್ ನಿಂದರಾಜೇಶ್ವರ ಗ್ರಾಮಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ ನಾಲ್ವರು ಒಂದೇ ಬೈಕ್ನಲ್ಲಿ ಬರುವಾಗ ಈ ಅಪಘಾತ ಸಂಭವಿಸಿದೆ.
ಬೆಂಗಳೂರು : ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಕುರಿತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ಹಗ್ಗ ಜಗ್ಗಾಟ ನಡೆದಿತ್ತು. ಅಷ್ಟೇ ಅಲ್ಲದೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಿನ್ನೆ ಟಿಕೆಟ್ ದರ ಕಡಿಮೆ ಆಗಲಿದೆ ಎಂದು ಹೇಳಿಕೆ ನೀಡಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿಲ್ಲ ಕೇಂದ್ರದವರು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮೆಟ್ರೋ ಟಿಕೆಟ್ ಪ್ರಯಾಣದ ದರ ಏರಿಕೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿದೆ. ಹಾಗಾಗಿ ನಾಳೆಯಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಅವರಿಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಮೂಲಕ ಸೂಚನೆ ಬಂದಿದ್ದು, ನಾಳೆಯಿಂದ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಬೇಡಿ ಎಂದು ಇ-ಮೇಲ್ ಬಂದಿದೆ ಹಾಗಾಗಿ…
ಬೆಂಗಳೂರು : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಜೊತೆಗಿನ ಅಕ್ರಮ ಸಂಬಂಧದ ಕುರಿತು ಮಗಳು ಬಯಲು ಮಾಡಿದ್ದರಿಂದ, ಪತಿಯ ಸಹೋದರನನ್ನೇ ಕೊಲೆ ಮಾಡಿ ಸದ್ಯ ಜೈಲಿನಲ್ಲಿ ಇರುವ ಸುಚಿತ್ರಾಳ ಕಾಮಪುರಾಣ ಇದೀಗ ಮತ್ತಷ್ಟು ಬಯಲಾಗಿದೆ. ಹೌದು ಕಲಬುರಗಿಯ ಜಮೀನ್ದಾರನ ಜೊತೆ ಮೂರು ವರ್ಷ ಲವ್ವಿಡವ್ವಿಯಲ್ಲಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಕಲಬುರಗಿಯ ಜಮೀನ್ದಾರ ಶರಣಬಸಪ್ಪ ಜೊತೆ ಮೂರು ವರ್ಷದಿಂದ ಲಿವ್-ಇನ್‌ನಲ್ಲಿದ್ದ ಸುಚಿತ್ರಾ, ಅಪ್ಪು ಮೆಲೋಡಿಸ್ ಗುಲ್ಬರ್ಗ ಎಂದು ಆತನ ಹಣದಿಂದ ಆರ್ಕೆಸ್ಟ್ರಾ ಮಾಡಿಕೊಂಡಿದ್ದಳು ಕೇವಲ ಶರಣಬಸಪ್ಪ ಅಷ್ಟೇ ಅಲ್ಲದೆ ಇನ್ನು ಎಷ್ಟೋ ಅನೇಕ ಯುವಕರ ತಲೆಕೆಡಿಸಿ ತನ್ನ ಗಾಳಕ್ಕೆ ಬೀಳಿಸಿಕೊಂಡಿದ್ದಳು ಎಂದು ತಿಳಿದುಬಂದಿದೆ. ಕಲಬುರಗಿಗೆ ಹೋಗಿ ಆತನೊಂದಿಗೆ ಸುಚಿತ್ರಾ ಸುತ್ತಾಡುತ್ತಿದ್ದಳು. ಗಂಡನಿಲ್ಲದ ಸಂದರ್ಭದಲ್ಲಿ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಆತ ನೀಡಿದ ಹಣದಲ್ಲಿ ಸಿದ್ದಾಪುರದಲ್ಲಿ ಬಡ್ಡಿಗೆ ಹಣ ನೀಡುತ್ತಿದ್ದಳು. ಈ ವಿಷಯ ಜ್ಯೋತಿಷಿ ಕಮಲಾಕರ್ ಭಟ್‌ಗೆ ತಿಳಿದು ಇಬ್ಬರ ನಡುವೆ ಮನಸ್ತಾಪ ಮೂಡಿತ್ತು. ಕೊನೆಗೆ ಜಮೀನ್ದಾರನ ಬಿಟ್ಟು ಜ್ಯೋತಿಷಿ ಕಮಲಾಕರ್ ಭಟ್ ಕೈ ಹಿಡಿದಿದ್ದಳು.…
ಬೆಂಗಳೂರು : ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಕುರಿತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ಹಗ್ಗ ಜಗ್ಗಾಟ ನಡೆದಿತ್ತು. ಅಷ್ಟೇ ಅಲ್ಲದೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಿನ್ನೆ ಟಿಕೆಟ್ ದರ ಕಡಿಮೆ ಆಗಲಿದೆ ಎಂದು ಹೇಳಿಕೆ ನೀಡಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿಲ್ಲ ಕೇಂದ್ರದವರು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮೆಟ್ರೋ ಟಿಕೆಟ್ ಪ್ರಯಾಣದ ದರ ಏರಿಕೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿದೆ. ಹಾಗಾಗಿ ನಾಳೆಯಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಅವರಿಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಮೂಲಕ ಸೂಚನೆ ಬಂದಿದ್ದು, ನಾಳೆಯಿಂದ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಬೇಡಿ ಎಂದು ಇ-ಮೇಲ್ ಬಂದಿದೆ ಹಾಗಾಗಿ…
ಮೈಸೂರು : ಸಿಎಂ ಸಿದ್ದರಾಮಯ್ಯಗೆ ಎಚ್ ಡಿ ದೇವೇಗೌಡ ಕುಮಾರ ಸ್ವಾಮಿಯೇ ಟಾರ್ಗೆಟ್ ಆಗಿದ್ದಾರೆ. ದೇವೇಗೌಡರು ಹಾಗೂ ನನ್ನನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಯಾವ ರೀತಿ ದುರುಪಯೋಗ ಮಾಡಿಕೊಂಡರು ಎಂದು ಗೊತ್ತಿದೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದರು. ಸಿನಿಮಾ ರಂಗದಲ್ಲಿ ದುಡಿದ ದುಡ್ಡಿನಲ್ಲಿ 43 ಎಕರೆ ತೆಗೆದುಕೊಂಡಿದ್ದೆ ನನಗೆ ಸೇರಿದ ನಾಲ್ಕು ಎಕರೆ ವಶಪಡಿಸಿಕೊಳ್ಳಲು SIT ರಚನೆ ಮಾಡುತ್ತೀರಾ? ಇಷ್ಟೊಂದು ಕಿರುಕುಳ ಕೊಡುತ್ತೀರಾ? ನ್ಯಾಯಾಲಯದಲ್ಲಿ ಇನ್ನೂ ಎರಡು ಕೇಸುಗಳು ಎದುರಿಸುತ್ತಿದ್ದೇನೆ ಎಂದು ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಹೆಚ್‍ಡಿ ದೇವೇಗೌಡರ ಜೊತೆಗೆ ಬೆಳೆದು ಈ ರೀತಿ ಮಾಡುತ್ತಿದ್ದಾರೆ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಮುಂದಿನ ಚುನಾವಣೆಯಲ್ಲಿ ಮೈಸೂರಿನ 11 ಕ್ಷೇತ್ರ ಗೆದ್ದರೂ ಆಶ್ಚರ್ಯವಿಲ್ಲ ಜೆಡಿಎಸ್ ಬಿಜೆಪಿ ಮೈತ್ರಿ 11ಕ್ಕೆ 11 ಸೀಟ್ ಗೆದ್ದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ…
ಚಿಕ್ಕಬಳ್ಳಾಪುರ : ಕಾರು ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹೊರವಲಯದಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಬೈಕ್ ಸವಾರರಾದ ನಾಗರಾಜು (68) ಹಾಗು ವೆಂಕಟರೆಡ್ಡಿ (50) ಮೃತ ದುರ್ದೈವಿಗಳು ಬೈಕ್ ಗೆ ಕಾರು ಡಿಕ್ಕಿ ಹೊಡೆದು ಸುಮಾರು 200 ಮೀಟರ್ ವರೆಗೂ ಎಳೆದೊಯ್ದಿದೆ. ಅಪಘಾತ ನಂತರ ಕಾರು ನಿಲ್ಲಿಸಿ ಚಾಲಕ ಮತ್ತು ಇತರರು ಪರಾರಿಯಾಗಿದ್ದಾರೆ. ಅಪಘಾತದ ಕುರಿತು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ : ನವದೆಹಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು, ಕಾರಿನಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಅದರಲ್ಲಿ ಓರ್ವ ಮಹಿಳಾ ಸಿಬ್ಬಂದಿ ಹಾಗೂ ಇಬ್ಬರು ಪುರುಷ ಸಿಬ್ಬಂದಿಗಳ ಶವ ಪತ್ತೆಯಾಗಿದೆ.ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಪತ್ತೆಯಾದ ಶವಗಳ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲ. ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಮೂವರು ಪೊಲೀಸರ ಶವ ಪತ್ತೆಯಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಪೊಲೀಸ ಸಿಬ್ಬಂದಿಗಳ ಶವಗಳನ್ನು ಸ್ಥಳಾಂತರಿಸಲಾಗಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಹುಬ್ಬಳ್ಳಿ : ಬಿಜೆಪಿಯವರು ಮೋಸಗಾರರು ಅವರನ್ನು ನಂಬಬೇಡಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ನಾಲ್ಕುವರೆ ಲಕ್ಷ ಕೋಟಿಗು ಹೆಚ್ಚು ತೆರಿಗೆ ಕಟ್ಟುತ್ತೇವೆ ಆದರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ಬರುತ್ತಿಲ್ಲ ನೂರು ರೂಪಾಯಿ ತೆರಿಗೆ ನೀಡಿದರೆ ಕೇವಲ 13 ರೂಪಾಯಿ ಅಷ್ಟೇ ಬರುತ್ತೆ ಎಂದು ಈ ವರ್ಷ ಕೇಂದ್ರದಿಂದ 20,000 ಕೋಟಿ ಹಣ ಬರಲಿಲ್ಲ ರಾಜ್ಯಕ್ಕೆ ಜಿಎಸ್ಟಿ ಹಣ ನೀಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು : ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ನಾಳೆಯಿಂದ ನಮ್ಮ ಮೆಟ್ರೋ ಪ್ರಯಾಣದ ದರ ಶೇಕಡ 5 ರಷ್ಟು ಏರಿಕೆ ಆಗಲಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಸ್ಪಷ್ಟನೆ ನೀಡಿದ್ದಾರೆ. ಇದರ ಬೆನ್ನಲೆ ರಾಜ್ಯದ ಜನತೆಗೆ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರದಲ್ಲಿಯೇ ವಿದ್ಯುತ್ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹೌದು ರಾಜ್ಯದಲ್ಲಿ ವಿದ್ಯುತ್ ಬಿಲ್ ಏರಿಕೆ ಆಗುವ ಸಾಧ್ಯತೆ ಇದೆ ಎಸ್ಕಾಂಗಳ ನಷ್ಟ ಸರಿದೂಗಿಸಲು ದೊರೆ ಏರಿಕೆಗೆ ಚಿಂತನೆ ನಡೆಸಲಾಗುತ್ತಿದೆ. ಆದಾಯ ಕೊರತೆಯಿಂದ ಕರೆಂಟ್ ಬಿಲ್ ಹೆಚ್ಚಿಸಲು ಚಿಂತಿಸಲಾಗುತ್ತಿದೆ ವಿದ್ಯುತ್ ಸರಬರಾಜು ಕಂಪನಿಗಳು ನಷ್ಟದ ಹಳಿಯಲ್ಲಿವೆ. ಆದಾಯ ಸರಿದೂಗಿಸಲು ವಿದ್ಯುತ್ ದರ ಏರಿಕೆಗೆ ಬೆಸ್ಕಾಂ, ಎಸ್ಕಾಂ ಗಳು ಪಟ್ಟು ಹಿಡಿದಿವೆ. ಏಪ್ರಿಲ್ 1 ರಿಂದ ವಿದ್ಯುತ್ತರ ಏರಿಕೆ ಆಗುವ ಸಾಧ್ಯತೆ ಇದೆ. ವಿದ್ಯುತ್ ದರ ಏರಿಕೆಗೆ ಕೆ ಇ ಆರ್ ಸಿ ಅಸ್ತು ಎನ್ನುತ್ತಾ ಎಂದು ಕಾಡುನೋಡ್ಬೇಕಾಗಿದೆ. ಬೆಸ್ಕಾಂ ಸೇರಿ ಎಸ್ಕಾಂಗಳಿಂದ ಕೆಇಆರ್‌ಸಿಗೆ…
ಬೆಂಗಳೂರು : ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿಯಿಂದ ಸ್ಕೂಟಿಯಲ್ಲಿ ತೆರಳುತ್ತಿದ್ದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಬಾಗಲೂರಿನ ಗುಂಡಪ್ಪ ಕ್ರಾಸ್ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಬಾಗಲೂರು ಗ್ರಾಮದಲ್ಲಿ ಅಪಘಾತ ನಡೆದಿದೆ. ಬೂದಿಗೆರೆಯ ವಿರಗ ನಗರ ನಿವಾಸಿ ಮಾನಸ ಮೃತ ಗರ್ಭಿಣಿ ಎಂದು ತಿಳಿದು ಬಂದಿದೆ. ಹಿಂಬದಿಯಿಂದ ಡಿಕ್ಕಿ ಹೊಡೆದು ಗರ್ಭಿಣಿ ಮೇಲೆ ಲಾರಿ ಹರಿದಿದ್ದರಿಂದ ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ. ಪೊಲೀಸರು ಸದ್ಯ ಸಿಮೆಂಟ್ ಮಿಕ್ಸರ್ ಲಾರಿ ಚಾಲಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













