Author: kannadanewsnow05

ಮೈಸೂರು : ಜೆಡಿಎಸ್ ವರಿಷ್ಠ ದೇವೇಗೌಡರು ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಟ್ಟರು ಈಗ ಜೆಡಿಎಸ್ ಅನ್ನು ಎಚ್ ಡಿ ಕುಮಾರಸ್ವಾಮಿ ಬಿಜೆಪಿಯವರಿಗೆ ಮಾರಿಬಿಟ್ಟಿದ್ದಾರೆ ಎಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಹಾಗೂ ಎಚ್ ಡಿ ಕುಮಾರಸ್ವಾಮಿ ಕುರಿತು ಲೇವಡಿ ಮಾಡಿದರು. ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಯಾವ ಮೋದಿ ಅಲೆಯೂ ಇಲ್ಲ. ರಾಜ್ಯದಲ್ಲಿ ಶೇಕಡ 82 ರಷ್ಟು ಮಹಿಳೆಯರು ಕಾಂಗ್ರೆಸ್ ಪರ ಇದ್ದಾರೆ. ಇನ್ನು ಮುಂದೆ ದಳ ಇರಲ್ಲ ಕುಮಾರಣ್ಣ ನಿಮ್ಮ ಪಾರ್ಟಿ ಮಾರಿ ಆಗೋಯ್ತು. ಜನತಾ ಪಕ್ಷವನ್ನು ಹೆಚ್ ಡಿ ಕುಮಾರಸ್ವಾಮಿ ಅಡಮಾನ ಇಟ್ಟಾಯ್ತು. ಜನತಾದಳ ಕಾರ್ಯಕರ್ತರು ಕಾಂಗ್ರೆಸ್ ಸೇರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ನಾನು ವಿಷ ಹಾಕಿದ್ದೇನೆ ಅಂತ ಎಚ್ ಡಿ ಕುಮಾರಸ್ವಾಮಿ ಹೇಳುತ್ತಾರೆ. ತಮ್ಮ ಸರ್ಕಾರ ಬೀಳಿಸಿದವರನ್ನೇ ಆದಿಚುಂಚನಗಿರಿ ಮಠಕ್ಕೆ ಕರೆದೊಯ್ದಿದ್ದಾರೆ.ನಿಮಗೆ ಮಾನ ಮರ್ಯಾದೆ ಬೇಡವಾ ಎಂದು ಎಚ್ಡಿಕೆ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಸೂರ್ಯ…

Read More

ಮೈಸೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ಪಕ್ಷಗಳು ಭರ್ಜರಿಯಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದು ಇಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜೈ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯುತ್ತಿದ್ದು ಈ ಒಂದು ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಆಡೋ ಹೈಕ್ಳಿಗೆ ಅಧಿಕಾರ ಕೊಟ್ಟರೆ ಹೊಡೆ ಗದ್ದೆ ಕುಯ್ತಿದ್ದರಂತೆ ಎಂದು ಎಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಕುರಿತಾಗಿ ಲೇವಡಿ ಮಾಡಿದರು. ಆಡೋ ಹೈಕ್ಳಿಗೆ ಅಧಿಕಾರ ಕೊಟ್ಟರೆ ಹೊಡೆ ಗದ್ದೆ ಕುಯ್ತಿದ್ದರಂತೆ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯುತ್ತಿದ್ದು, ಈ ಒಂದು ಸಮಾವೇಶದಲ್ಲಿ ಮಾತನಾಡಿದ ಅವರು ಜೆಡಿಎಸ್ ಬಗ್ಗೆ ಮಾತನಾಡುವುದು ಬೇಡ ಬಿಡಿ ಎಂದರು. ಜೆಡಿಎಸ್ ವರಿಷ್ಠ ದೇವೇಗೌಡರು ಕುಮಾರಸ್ವಾಮಿಗೆ ಅಧಿಕಾರ ಕೊಟ್ಟರು. ಈಗ ಜೆಡಿಎಸ್ ಅನ್ನ ಹೆಚ್‍ಡಿ ಕುಮಾರಸ್ವಾಮಿ ಬಿಜೆಪಿಗೆ ಮಾರಿಬಿಟ್ಟಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್…

Read More

ಕೋಲಾರ : ಮೀನು ಹಿಡಿಯುವ ವಿಚಾರವಾಗಿ ಸೋದರ ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, ರಾಜಿ ಪಂಚಾಯಿತಿಯ ವೇಳೆ ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ನಡೆದಿದೆ. ಈ ಒಂದು ದುರ್ಘಟನೆಯಲ್ಲಿ ಕೊಲೆಯಾದ ಯುವಕನನ್ನು ಲೋಕೇಶ್ ಎಂದು ಹೇಳಲಾಗುತ್ತಿದ್ದು, ಮತ್ತೊಬ್ಬ ಯುವಕ ದರ್ಶನ್ ಗೆ ಗಂಭೀರವಾದಂತಹ ಗಾಯಗಳಾಗಿದೆ. ರಾಜಿ ಪಂಚಾಯಿತಿ ವೇಳೆ ಸಹೋದರ ಸಂಬಂಧಿ ಪ್ರಮೋದ್ ದಿಂದ ಈ ಕೃತ್ಯ ನಡೆದಿದೆ. ಈಶ್ವರ ಕೆರೆಯಲ್ಲಿ ಮೀನು ಹಿಡಿಯುವಾಗ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಕುರಿತಂತೆ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿ ನಡೆಯುತ್ತಿತ್ತು, ಈ ವೇಳೆ ಪ್ರಮೋದ್ ಲೋಕೇಶ್ ಗೆ ಚಾಕು ಇರಿದು ಭೀಕರವಾಗಿ ಗಾಯಗೋಳಿಸಿದ್ದಾನೆ. ತಕ್ಷಣ ಲೋಕೇಶ್ ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಗಾಯಾಳು ಲೋಕೇಶ್ ಸಾವನಪ್ಪಿದ್ದಾನೆ. ಮತ್ತೊಬ್ಬ ಗಾಯಾಳು ದರ್ಶನಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ ಭೇಟಿ ನೀಡಿ…

Read More

ಮೈಸೂರು : ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ? ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಆದರೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕಲಬೆರಿಕೆ ಎಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಜಾದೋನಿ ಸಮಾವೇಶದಲ್ಲಿ ಪಶು ಸಂಗೋಪನ ಸಚಿವ ಕೆ ವೆಂಕಟೇಶ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. https://kannadanewsnow.com/kannada/aap-to-observe-save-constitution-eradicate-dictatorship-day-across-the-country-on-april-14/ ಸಿಎಂ ಸಿದ್ದರಾಮಯ್ಯ ಸುಕ್ಷೇತ್ರ ಮೈಸೂರಿನಲ್ಲಿ ಗೆಲ್ಲಲೇಬೇಕಿದೆ. ಮೈಸೂರಲ್ಲಿ ಸೋತರೆ ಸಿಎಂಗೆ ಅಪಮಾನವಾಗುತ್ತದೆ ಕೆಟ್ಟ ಮೆಸೇಜು ಹೋಗುತ್ತದೆ. ಸಿಎಂ ಮೈಸೂರಿನವರೇ ಆಗಿದ್ದಾರೆ ಹೀಗಾಗಿ ಮೈಸೂರು ಕ್ಷೇತ್ರವನ್ನು ಗೆಲ್ಲಿಸಿ ಎಂದು ಪ್ರಜಾಧ್ವನಿ ಸಮಾವೇಶದಲ್ಲಿ ಸಚಿವ ವೆಂಕಟೇಶ್ ಭಾಷಣದ ವೇಳೆ ಮಾತನಾಡಿದರು. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಕಾಂಗ್ರೆಸ್ ಪ್ರಜಾಧನಿ ಸಮಾವೇಶ ನಡೆಯುತ್ತಿದೆ. ಈ ಸಮಾವೇಶದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ? ಮೂರು ಜಿಲ್ಲೆಯಲ್ಲಿ ಮಾತ್ರ ಇದೆ. ಜೆಡಿಎಸ್ ನವರು ಅವಕಾಶವಾದಿಗಳು ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಜೆಡಿಎಸ್ ಬಿಜೆಪಿ ಮೈತ್ರಿ ಕಲಬೆರಕೆ ಎಂದು ಸಚಿವ ವೆಂಕಟೇಶ್ ವಾಗ್ದಾಳಿ ನಡೆಸಿದರು. https://kannadanewsnow.com/kannada/gadag-couple-commits-suicide-within-a-week-of-their-marriage-commits-suicide-along-with-lover/…

Read More

ಗದಗ : ಗದಗದಲ್ಲಿ ಬಿಚ್ಚಿ ಬಿಡಿಸುವಂತಹ ಜೋಡಿ ಆತ್ಮಹತ್ಯೆ ನಡೆದಿದ್ದು, ಇವತ್ತಿಗೆ ನಾಲ್ಕು ದಿನಗಳ ಹಿಂದೆ ಯುವತಿಗೆ ಬೇರೊಬ್ಬನ ಜೊತೆಗೆ ಮದುವೆಯಾಗಿತ್ತು. ನಾಲ್ಕು ದಿನಗಳ ನಂತರ ತವರಿಗೆ ಬಂದಿದ್ದ ಯುವತಿ ರಾತ್ರಿ ಮನೆಯವರಿಗೆ ತಿಳಿಸಿದೆ ರಾತ್ರೋರಾತ್ರಿ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಮರುದಿನ ನೋಡಿದರೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರಿಬ್ಬರ ಶವ ಪತ್ತೆಯಾಗಿತ್ತು. ಹೌದು ಪರಸ್ಪರ ಪ್ರೀತಿ ಮಾಡಿ ಇಬ್ಬರು ಬಿಟ್ಟಿರಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದಿದೆ.ಅಪ್ಪಣ್ಣ ಗೊರಕಿ ಹಾಗೂ ಲಲಿತಾ ಹಲಗೇರಿ ಮೃತ ರ್ದುದೈವಿಗಳು ಎಂದು ತಿಳಿದುಬಂದಿದೆ. ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದ್ರೆ, ಕುಟುಂಬಸ್ಥರಿಗೆ ಹಾಗೂ ತಮ್ಮ ಸ್ನೇಹಿತರ ಮುಂದೆ ಕೂಡ ತಮ್ಮ ಪ್ರೀತಿ-ಪ್ರೇಮದ ವಿಷಯವನ್ನು ಹೇಳಿರಲಿಲ್ಲ. ಈ ಹಿನ್ನಲೆ ಲಲಿತಾ ಕುಟುಂಬಸ್ಥರು ಏಪ್ರಿಲ್ 4 ರಂದು ಬೇರೆ ಯುವಕನ ಜೊತೆಗೆ ಅದ್ದೂರಿಯಾಗಿ ಮದುವೆ ಮಾಡಿದ್ದಾರೆ. ನಾಲ್ಕೈದು ದಿನ ಗಂಡನ ಮನೆಯಲ್ಲಿದ್ದು, ತವರೂ ಮನೆಗೆ ಬಂದಿದ್ದ ಲಲಿತಾ, ನಿನ್ನೆ…

Read More

ಮೈಸೂರು : ಮೈಸೂರು ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಎರಡು ಬಾರಿ ಸಂಸದ ರಾಗಿದ್ದರು ಆದರೆ ಈ ಬಾರಿ ಅವರು ಸೋಲುತ್ತಾರೆ ಎಂಬ ಮಾಹಿತಿ ಬಂದಮೇಲೆ ಅವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. https://kannadanewsnow.com/kannada/update-rs-1-40-crore-cash-found-in-car-in-jayanagar-bengaluru-officials/ ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ, ಪ್ರತಾಪ್ ಸಿಂಹ ಸಾಧನೆ ಶೂನ್ಯ. ಮೈಸೂರು ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ ಎರಡು ಬಾರಿ ಸಂಸದರಾಗಿದ್ದರು.ರಾಜ್ಯಕ್ಕೆ ಆದ ಅನ್ಯಾಯದ ವಿರುದ್ಧ ಬಿಜೆಪಿ ಸಂಸದರು ಪ್ರಶ್ನೆ ಮಾಡಲಿಲ್ಲ. ಪ್ರತಾಪ್ ಸಿಂಹನನ್ನು ಬದಲಿಸಿ ಬೇರೆಯವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ ಸೋಲುತ್ತಾರೆ ಎನ್ನುವ ಮಾಹಿತಿಯ ಮೇರೆಗೆ ಪ್ರತಾಪ್ ಸಿಂಹಗೆ ಟಿಕೆಟ್ ಕೊಟ್ಟಿಲ್ಲ ಎಂದರು. https://kannadanewsnow.com/kannada/bjp-and-aimim-are-working-hand-in-hand-congress-leader-digvijaya-singh/ ನಾನು ಮಾಡಿದ್ದನ್ನು ಬಿಜೆಪಿ ತಾವು ಮಾಡಿದ್ದೇವೆ ಎಂದು ಹೇಳಿಕೊಂಡರು.ಬಿಜೆಪಿಯವರು ರಾಜ್ಯದಲ್ಲಿ ಹಿಂಬಾಗಿಲಿನಿಂದ ಬಂದು ಅಧಿಕಾರ ಮಾಡಿದರು. ಮೂರು ವರ್ಷ 10 ತಿಂಗಳ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳಾದರು. ಬಿಜೆಪಿಯವರಿಗೆ ಸುಭದ್ರ ಸರ್ಕಾರ ಕೊಡಲು ಸಾಧ್ಯವಾಗಲಿಲ್ಲ.…

Read More

ಬೆಂಗಳೂರು : ಬೆಂಗಳೂರಿನ ಜಯನಗರದಲ್ಲಿ ಐಷಾರಾಮಿ ಕಾರಿನಲ್ಲಿ ಪತ್ತೆಯಾಗಿದ್ದು 1.40 ರೂಪಾಯಿ ಎಂದು ಇದೀಗ ಚುನಾವಣಾ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದ್ದು ಸತತ ಎರಡು ಗಂಟೆಗಳ ಕಾಲ ಎರಡು ಮಿಷನ್ ಗಳಲ್ಲಿ ಹಣವನ್ನು ಎಣಿಸಿದ್ದು ಇದೀಗ ಎಣಿಕೆ ಕಾರ್ಯ ಮುಕ್ತವಾಗಿದ್ದು ಚುನಾವಣಾ ಅಧಿಕಾರಿಗಳು ಐಷಾರಾಮಿ ಕಾರಿನಲ್ಲಿ ಒಂದು ಕೋಟಿ ನಲವತ್ತು ಲಕ್ಷ ಹಣ ಪತ್ತೆಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. https://kannadanewsnow.com/kannada/bjp-and-aimim-are-working-hand-in-hand-congress-leader-digvijaya-singh/ ಈ ಕುರಿತು ಚುನಾವಣೆ ಅಧಿಕಾರಿ ಮನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದು ಎರಡು ಕಾರಿನಲ್ಲಿ ಹಣ ಇರಬಹುದು ಎಂಬ ಮಾಹಿತಿ ಬಂದಿತು ನಾನು ತಕ್ಷಣ ನಿಕಿತಾ ಅವರಿಗೆ ಕರೆ ಮಾಡಿದೆ. ಚುನಾವಣಾ ಅಧಿಕಾರಿ ನಿಕಿತಾ ಅವರು ಕಾರಿನಲ್ಲಿದ್ದ ಎರಡು ಬ್ಯಾಗ್ ಗಳನ್ನು ಗಳಿಸಿಕೊಂಡಿದ್ದರು ಒಂದು ಕಾರ್ ಅಲ್ಲಿಂದ ಪರಾರಿಯಾಗಿ ಹೋಗಿದ್ದು ಅದರಲ್ಲಿ ಇವರು ತಪ್ಪಿಸಿಕೊಂಡು ಹೋಗಿದ್ದಾರೆ ಒಂದು ಮರ್ಸಿಡಿಸ್ ಬೆಂಜ್ ಇನ್ನೊಂದು ವೋಕ್ಸ್ ವ್ಯಾಗನ್ ಕಾರ್ಲೆಂದು ಇನ್ನೊಂದು ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮನೀಶ್ ಮೌದ್ಗಿಲ್ ಮಾಹಿತಿ ನೀಡಿದರು.…

Read More

ಹುಬ್ಬಳ್ಳಿ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, NIA ಕಠಿಣ ಪರಿಶ್ರಮದಿಂದ ಉಗ್ರರ ಬಂಧನವಾಗಿದೆ. ಆದರೆ ಕಾಂಗ್ರೆಸ್ ಜನರ ಜೀವ ಹಾಗೂ ಹೆಣದ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು. https://kannadanewsnow.com/kannada/bengaluru-gokavaram-gang-arrested-for-stealing-mobile-phones-in-bmtc-bus-posing-as-passengers/ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಹೆಣದ ಮೇಲೆ ರಾಜಕಾರಣ ಮಾಡುತ್ತಿದೆ.ಗುಪ್ತಚರ ಇಲಾಖೆ ಶ್ರಮಪಟ್ಟು ಮಾಹಿತಿ ಸಂಗ್ರಹಿಸಿ ಎನ್ಐಎಗೆ ಮಾಹಿತಿ ನೀಡಿದೆ. ರಾಮೇಶ್ವರಂ ಕೆಫೆಯಲ್ಲಿ ಸ್ಪೋಟವಾದಾಗ ದಾರಿ ತಪ್ಪಿಸುವ ಕೆಲಸ ನಡೆದಿತ್ತು. ಸಿಲಿಂಡರ್ ಫೋಟೋ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂದು ಡಿಸಿಎಂ ಹಾಗೂ ಗೃಹ ಸಚಿವರು ತನಿಖೆಯ ದಾರಿ ತಪ್ಪಿಸುವ ಕೆಲಸ ಮಾಡಿದ್ದರು ಎಂದು ಆರೋಪಿಸಿದರು. ಸರ್ಕಾರದ ವರ್ತನೆಯಿಂದ ಇಂತಹ ಘಟನೆಗಳಿಗೆ ಕುಮ್ಮಕ್ಕು ಸಿಗುತ್ತಿದೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಎನ್ ಐ ಎ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.ನಕಲಿ ದಾಖಲೆ ಸೃಷ್ಟಿಸಿ…

Read More

ಬೆಂಗಳೂರು : ಅವರು ಮೂಲತಃ ಆಂಧ್ರಪ್ರದೇಶದ ಗೋಕವರಂ ಗ್ರಾಮದವರು, ಅವರ ವೃತ್ತಿ ಕಳ್ಳತನ ಮಾಡೋದು, ಹೀಗಾಗಿ ಅವರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಸಹಪ್ರಾಣಿಕರ ಮೊಬೈಲ್ ಗಳನ್ನು ಯಾಮರಿಸಿ ಗೊತ್ತಿಲ್ಲದೆ ಎಗರಿಸುತ್ತಿದ್ದರು.ಇದೀಗ 6ಜನರನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/breaking-foreign-handler-al-hind-link-revealed-in-rameswaram-cafe-blast/ ಬಂಧಿತರನ್ನು ರವಿತೇಜ, ವೆಂಕಟೇಶ್‌, ಬಾಲರಾಜ್‌, ಪೆದ್ದರಾಜ್‌, ರಮೇಶ್‌ ಹಾಗೂ ಸಾಯಿಕುಮಾರ್‌ ಎನ್ನಲಾಗಿದ್ದು, ಆರೋಪಿಗಳಿಂದ 30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 107 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.ಇನ್ನೊಂದು ಆಶ್ಚರ್ಯ ಸಂಗತಿ ಏನೆಂದರೆ ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿರುವ ಆರು ಮಂದಿ ಆರೋಪಿಗಳ ಪೈಕಿ ರವಿತೇಜ ಮತ್ತು ಪೆದ್ದರಾಜು ಒಡಹುಟ್ಟಿದ ಅಣ್ಣತಂಮ್ಮಂದಿರು. ಮತ್ತೊಬ್ಬ ಆರೋಪಿ ವೆಂಕಟೇಶ್‌, ರವಿತೇಜನ ಬಾವಮೈದುನ(ಪತ್ನಿಯ ತಮ್ಮ). ಈ ಮೂವರು ಹಾಗೂ ಉಳಿದ ಮೂವರು ಆರೋಪಿಗಳು ಗೋಕವರಂ ಹಳ್ಳಿ ನಿವಾಸಿಗಳೇ ಆಗಿದ್ದಾರೆ. https://kannadanewsnow.com/kannada/hassan-three-persons-were-seriously-injured-in-a-wild-elephant-attack-on-plantation-workers-in-hassan/ ಆರೋಪಿಗಳು ಬಿಎಂಟಿಸಿ ಬಸ್‌ಗಳಲ್ಲಿ ಕದ್ದ ಮೊಬೈಲ್ ಫೋನ್‌ಗಳನ್ನು ತಾವು ತಂಗಿದ್ದ ರೂಮ್‌ಗಳಲ್ಲಿ ಸಂಗ್ರಹಿಸುತ್ತಿದ್ದರು. ಒಮ್ಮೆಗೆ ನೂರು-ಇನ್ನೂರು ಮೊಬೈಲ್‌ ಸಂಗ್ರಹವಾದ ಬಳಿಕ ಆಂಧ್ರಪ್ರದೇಶಕ್ಕೆ…

Read More

ಹಾಸನ : ದಕ್ಷಿಣ ಕರ್ನಾಟಕ ಭಾಗದಲ್ಲಿ ಆಗಾಗ ಮನುಷ್ಯರ ಮೇಲೆ ಕಾಡಾನೆ ದಾಳಿಗಳು ಸಂಭವಿಸುತ್ತದೆ ಇದೀಗ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೆಹಳ್ಳಿ ಹಾಗೂ ಹುಲಿಮಕ್ಕಿ ಎಂಬಲ್ಲಿ ಕಾಡಾನೆ ದಾಳಿ ಮಾಡಿದ್ದರಿಂದ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೆಹಳ್ಳಿ, ಹುಲಿಮಕ್ಕಿ ಗ್ರಾಮದಲ್ಲಿ ಕಾಫಿ ತೋಟದಲ್ಲಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡಾನೆ ದಾಳಿ ಮಾಡಿದೆ.ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹರೇಹಳ್ಳಿ ಹಾಗೂ ಹುಲೇಮಕಿ ಎಂಬ ಗ್ರಾಮದಲ್ಲಿ ಕಾಡಾನೆ ದಾಳಿ ಮಾಡಿದೆ. ದಾಳಿಯಿಂದ ಮಹಿಳೆ ಸೇರಿ ಮೂವರಿಗೆ ಗಂಭೀರವಾದಂತಹ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಎರಡು ಕಾಡಾನೆಗಳಿಂದ ಪುಂಡಾಟ ನಡೆದಿದ್ದು, ಹಮೀದ್ ಎಂಬುವರ ತೋಟದಲ್ಲಿ ಸುಮಾರು 15 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕಾಡಾನೆ ಕಾರ್ಮಿಕರ ಮೇಲೆ ದಾಳಿ ಮಾಡಿದೆ. ಮಹಿಳೆ ಸೇರಿ ಇಬ್ಬರನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ ಬಿಸಾಡಿದೆ ಎಂದು ಹೇಳಲಾಗುತ್ತಿದ್ದು ಪಕ್ಕದ…

Read More