Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಜಾನಪದ ಕಲಾವಿದ ಜೋಗಿಲ ಸಿದ್ದರಾಜುಗೆ ಜಾತಿನಿಂದನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎಂ ಗಾಯತ್ರಿ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಎಸ್‌ಜೆ ಪಾರ್ಕ್ ಠಾಣೆಯಲ್ಲಿ ಗಾಯತ್ರಿ ಅವರ ವಿರುದ್ಧ FIR ದಾಖಲಾಗಿದೆ. ಜುಲೈ 11ರಂದು ಇಲಾಖೆಯ ನಿರ್ದೇಶಕಿಯನ್ನು ಭೇಟಿಯಾಗಿದ್ದರು. ಪ್ರಾಯೋಜಿತ ತಂಡಗಳ ಸಂಭಾವನೆ ಕೇಳಲು ಸಿದ್ದರಾಜು ಇಲಾಖೆಗೆ ಬಂದಿದ್ದರು. ಸಂಭಾವನೆ ನೀಡುವಂತೆ ಸಿದ್ದರಜು ಮನವಿ ಮಾಡಿದ್ದಾರೆ. ಈ ವೇಳೆ ಜಾತಿ ನಿಂದನೆ ಮಾಡಿದ್ದು ಅಲ್ಲದೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಟೇಬಲ್ ಮೇಲೆ ವಸ್ತುಗಳನ್ನು ಬಿಸಾಡಿ ಹಲ್ಲೆ ಮಾಡಿದ್ದಾರೆ ಎಂದು ಸಿದ್ದರಾಜು ಆರೋಪಿಸಿದ್ದು, ಈ ಸಂಬಂಧ ಸಿದ್ದರಾಜು ಎಸ್ ಜೆ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಹಾಗಾಗಿ ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆಎಂ ಗಾಯತ್ರಿ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.
ದಕ್ಷಿಣಕನ್ನಡ : ರಾಜ್ಯದಲ್ಲಿ ಹೃದಯಾಘಾತ ಸರಣಿ ಸಾವು ಮುಂದುವರೆದಿದ್ದು ಇಂದು ಬೆಳಿಗ್ಗೆ ತಾನೇ ಬಳ್ಳಾರಿಯಲ್ಲಿ ಶಾಲೆಗೆ ತೆರಳುವಾಗಲೇ ಕುಸಿದುಬಿದ್ದು 6ನೇ ತರಗತಿ ವಿದ್ಯಾರ್ಥಿನಿ ಸಾವನಪ್ಪಿದ್ದಳು. ಇದೀಗ ದಕ್ಷಿಣ ಕನ್ನಡದಲ್ಲಿ ಕಚೇರಿಗೆ ತೆರಳುವಾಗಲೇ FDA ನೌಕರರೊಬ್ಬರು ಕುಸಿದು ಬಿದ್ದು ಸಾವನಪ್ಪಿರುವ ಘಟನೆ ವರದಿಯಾಗಿದೆ. ಹೌದು ಹೃದಯಾಘಾತದಿಂದ FDA ನೌಕರ ಬಲಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈ ಒಂದು ಘಟನೆ ನಡೆದಿದೆ. ಹೃದಯಘಾತದಿಂದ ಹಾಸನ ಮೂಲದ ಸತೀಶ್ (46) ಇದೀಗ ಸಾವನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಸತೀಶ್ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಳಿಗ್ಗೆ ಮನೆಯಲ್ಲಿ ಸ್ನಾನ ಮಾಡಿ ಬರುವಾಗ ಸತೀಶ್ ಕುಸಿದು ಬಿದ್ದಿದ್ದಾರೆ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಪತ್ನಿ ಜಯಶ್ರೀ ತೆರಳಿದ್ದಾರೆ.ಆಸ್ಪತ್ರೆಗೆ ಹೋದಾಗ ಸತೀಶ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಬಳ್ಳಾರಿ : ರಾಜ್ಯದಲ್ಲಿ ಹೃದಯ ಘಾತದಿಂದ ಸರಣಿ ಸಾವುಗಳು ಮುಂದುವರೆದಿದ್ದು ಇದೀಗ ಬಳ್ಳಾರಿಯಲ್ಲಿ ವಿದ್ಯಾರ್ಥಿಯೊಬ್ಬಳು, ಸಾವನ್ನಪ್ಪಿರುವ ಘಟನೆ ನಡೆದಿದ್ದು, ಶಾಲೆಗೆ ತೆರಳುತ್ತಿರುವಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿಯೊಬ್ಬಳು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಕಾಳಿಂಗೇರಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕಾಳಂಗೇರಿಯ ದೀಕ್ಷಾ (12) 6ನೇ ತರಗತಿಯಲ್ಲಿ ಓದುತ್ತಿದ್ದ ದೀಕ್ಷಾ ಎಂದಿನಂತೆ ಸಿದ್ಧಳಾಗಿ ಶಾಲೆಗೆ ಹೋಗುತ್ತಿದ್ದಳು. ಶಾಲೆಗೆ ತೆರಳುವಾಗ ಏಕಾಏಕಿ ಕುಸಿದು ಬಿದ್ದಿದ್ದ ಬಾಲಕಿ ದೀಕ್ಷಾಳನ್ನ ಕೂಡಲೇ ಕುಟುಂಬಸ್ಥರು ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ದೀಕ್ಷಾ ಮೃತಪಟ್ಟಿದ್ದಾಳೆ. ದೀಕ್ಷಾ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಂಗಳೂರು : ಆಟೋ ಚಾಲಕರು ಇದನ್ನು ಗಮನಿಸಲೇಬೇಕು ಏಕೆಂದರೆ, ಬಹಳಷ್ಟು ಆಟೋ ಚಾಲಕರು ಹಣದಾಸೆಗೆ ಹೆಚ್ಚಿನ ಹಣ ಪಡೆಯುವುದುಗೋಸ್ಕರ ಆಟೋ ಹಿಂದೆ ಜಾಹಿರಾತು ಹಾಕಿಕೊಂಡು ಓಡಾಡುತ್ತಾರೆ ಆದರೆ, ಇದೀಗ ಹೇಳಿದ ಕೇಳಿದೆ ತಮ್ಮ ಆಟಗಳ ಹಿಂದೆ ಚಾಲಕರು ಜಾಹೀರಾತು ಪ್ರದರ್ಶನ ಮಾಡಿದರೆ ಅಂತಹ ಆಟೋ ಚಾಲಕರಿಗೆ ಭಾರಿ ದಂಡ ಬೀಳಲಿದೆ. ಹೌದು ನಗರದಲ್ಲಿ ಅನೇಕ ಆಟೋಗಳ ಹಿಂದೆ ಕಲರ್ ಕಲರ್ ಜಾಹೀರಾತು ಹಾಕಿ ಓಡಾಡುತ್ತಿದ್ದ ಆಟೋ ಚಾಲಕರಿಗೆ ಆರ್‌ಟಿಓ ಬಿಸಿ ಮುಟ್ಟಿಸಿದೆ.ಆಟೋಗಳ ಮೇಲೆ ಪೋಸ್ಟರ್ ಅಂಟಿಸಿದವರಿಗೆ ಆರ್‌ಟಿಓ ಫೈನ್ ಅಸ್ತ್ರ ಪ್ರಯೋಗ ಮಾಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 5,000 ರೂ. ದಂಡ ಪ್ರಯೋಗ ಮಾಡಿರುವುದು ಆಟೋ ಚಾಲಕರ ಪಾಲಿಗೆ ಬಿಗ್ ಶಾಕ್ ಆಗಿದೆ. ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳಲ್ಲಿ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ವಾರ್ಷಿಕವಾಗಿ ಅನುಮತಿ ಪಡೆದಿರಬೇಕು. ಏನೇ ಜಾಹೀರಾತು ಅಳವಡಿಕೆ ಮಾಡಿದರೂ ವರ್ಷಕ್ಕೆ 5,000 ರೂ. ಕಟ್ಟಬೇಕು. ಹಾಗೊಮ್ಮೆ ಅನುಮತಿ ಪಡೆದಿದ್ದರೆ, ವರ್ಷವಿಡೀ ಜಾಹೀರಾತು ಅಳವಡಿಕೆಗೆ ಅವಕಾಶ ಇದೆ.…
ಬೆಳಗಾವಿ : ಬೆಳಗಾವಿಯಲ್ಲಿ ಕೀಟನಾಶಕ ಮಿಶ್ರಿತ ನೀರು ಕುಡಿದು 12 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಎಂಬ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ ಗ್ರಾಮದ ಶಾಲೆಯ ವಾಟರ್ ಟ್ಯಾಂಕಿಗೆ ಕೀಟನಾಶಕ ಬೆರೆಸಿದ ಆರೋಪ ಕೇಳಿ ಬಂದಿದೆ. ಇದನ್ನು ತಿಳಿಯದೆ ಟ್ಯಾಂಕರ್ ನಲ್ಲಿರುವ ನೀರು ಕುಡಿದಿದ್ದ 12 ಮಕ್ಕಳಿಗೆ ತಲೆಸುತ್ತು ಮತ್ತು ವಾಂತಿ ಭೇದಿ ಆಗಿದೆ. ತಕ್ಷಣ ಮಕ್ಕಳನ್ನು ಸವದತ್ತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಘೋರವಾದ ದುರಂತ ಒಂದು ನಡೆದಿದ್ದು, ನೇಣು ಬಿಗಿದುಕೊಂಡು ತಾಯಿ ಮತ್ತು ಮಗಳು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ನಗೋಂಡನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ತಾಯಿ ರಚಿತಾ ರೆಡ್ಡಿ (46) ಮಗಳು ಶ್ರೀಜಾರೆಡ್ಡಿ (24) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಖಾಸಗಿ ಕಂಪನಿಯಲ್ಲಿ ಶ್ರೀಜರೆಡ್ಡಿ ಡೇಟಾ ಅನಾಲಿಸಿಸ್ ಆಗಿ ಕೆಲಸ ಮಾಡುತ್ತಿದ್ದರು. ಮೃತ ರಚಿತಾ ರೆಡ್ಡಿ ಮತ್ತು ಶ್ರೀಜಾರೆಡ್ಡಿ ಮೂಲತಃ ಆಂಧ್ರಪ್ರದೇಶ ನಿವಾಸಿಗಳು ಎಂದು ತಿಳಿದುಬಂದಿದೆ. ನಾಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ತಾಯಿ ಮತ್ತು ಮಗಳು ವಾಸವಿದ್ದರು. ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಪುತ್ರಿ ಶ್ರೀಜಾರೆಡ್ಡಿ ಆತ್ಮಹತ್ಯೆ ಶರಣಾಗಿದ್ದಾರೆ. ಮಗಳ ಆತ್ಮಹತ್ಯೆಯ ಸುದ್ದಿ ರಚಿತಾ ಅಳಿಯನಿಗೆ ತಿಳಿಸಿದ್ದಾರೆ. ಬಳಿಕ ರಚಿತಾ ರೆಡ್ಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬದುಕಲು ಇಷ್ಟ ಇಲ್ಲ ಅಂತ ಹೇಳಿ ಅಳಿಯನಿಗೆ ತಿಳಿಸಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಸದ್ಯ ಘಟನಾ ಸ್ಥಳಕ್ಕೆ…
ಕಲಬುರ್ಗಿ : ಕಳೆದ ಎರಡು ದಿನಗಳ ಹಿಂದೆ ಕಲ್ಬುರ್ಗಿ ನಗರದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಹಾಡಹಗಲೇ ಚಿನ್ನದ ಅಂಗಡಿಗೆ ನುಗ್ಗಿ ಮಾಲೀಕನಿಗೆ ಗನ್ ತೋರಿಸಿ 82 ಲಕ್ಷಕ್ಕೂ ಅಧಿಕ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಲ್ಬುರ್ಗಿ ಪೊಲೀಸ್ರು ಇಬ್ಬರನ್ನು ಅರೆಸ್ಟ್ ಮಾಡಿದ್ದು, ಉಳಿದವರನ್ನು ಬಂಧಿಸಲು ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಇಂಥದ್ದೇ ಚಿನ್ನದಂಗಡಿಯಲ್ಲಿ ದರೋಡೆ ನಡೆಸುವಂತೆ ಸುಪಾರಿ ನೀಡಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯ ಬೆನ್ನು ಬಿದ್ದಿರುವ ಪೊಲೀಸರು, ಇದೀಗ ಮುಂಬೈ ನಗರದಲ್ಲಿ ಅವಿತು ಕುಳಿತಿರುವ ದರೋಡೆಕೋರರ ಸುಳಿವು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಚಿನ್ನಾಭರಣ ಅಂಗಡಿ ಮಾಲೀಕನ ಹಣೆಗೆ ಗನ್ ಹಿಡಿದು ಬೆದರಿಕೆ ಹಾಕಿ, ಆತನ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ್ದ ದರೋಡೆಕೋರರ ಬೆನ್ನು ಹತ್ತಿರುವ ಕಲಬುರಗಿ ಪೊಲೀಸರು ಈಗಾಗಲೇ ಮುಂಬೈ ತಲುಪಿದ್ದು, ಕಳ್ಳರು ಎಲ್ಲಿ ಅವಿತು ಕುಳಿತಿದ್ದಾರೆ ಎಂಬ ಸುಳಿವು ಸಹ ಪೊಲೀಸರಿಗೆ ಲಭಿಸಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಪ್ರಕರಣದಲ್ಲಿ…
ಬೆಂಗಳೂರು : ಬೆಂಗಳೂರಿನಲ್ಲಿ ಎಣ್ಣೆ ಪಾರ್ಟಿ ಮಾಡುವ ಬೆಲೆ ಗಲಾಟೆ ಶುರುವಾಗಿದೆ ಈ ವೇಳೆ ಸ್ನೇಹಿತರೆ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಅಲ್ಲದೆ, ಈ ವೇಳೆ ಯುವಕನ ಒಂದು ಕಾಲು ಕಟ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ನೇಹಿತರಿಂದಲೇ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ತೇಜಸ್ (24) ಎಂದು ತಿಳಿದುಬಂದಿದೆ. ಜುಲೈ 11ರಂದು ರಾತ್ರಿ ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ರುದ್ರಪ್ಪ ಗಾರ್ಡನ್‌ನಲ್ಲಿ ಘಟನೆ ನಡೆದಿದ್ದು, ಆಟೋ ಚಾಲಕನಾಗಿದ್ದ ತೇಜಸ್, ಶುಕ್ರವಾರ ರಾತ್ರಿ ಕೆಲಸ ಮುಗಿದ ಬಳಿಕ ಸ್ನೇಹಿತ ಸಂತೋಷ್ ಜೊತೆ ರುದ್ರಪ್ಪ ಗಾರ್ಡನ್‌ನಲ್ಲಿರುವ ಮಂಜು ಬಾರ್‌ಗೆ ತೆರಳಿದ್ದ. ಇಬ್ಬರೂ ಪಾರ್ಟಿ ಮಾಡುತ್ತಿದ್ದಾಗ ಸಂತೋಷ್‍ನ ಸ್ನೇಹಿತರಾದ ರಾಹುಲ್, ಪ್ರಜ್ವಲ್ ಹಾಗೂ ಅಭಿಷೇಕ್ ಬಾರ್‌ಗೆ ಬಂದಿದ್ದರು.ಒಟ್ಟಿಗೆ ಕುಳಿತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಸಂತೋಷ್ ಹಾಗೂ ರಾಹುಲ್, ಪ್ರಜ್ವಲ್, ಅಭಿಷೇಕ್‌ನ ನಡುವೆ ಜಗಳ ಆರಂಭವಾಗಿತ್ತು. ಈ ವೇಳೆ ಸಂತೋಷ್‍ನ ಪರವಾಗಿ ತೇಜಸ್ ಮಾತನಾಡಿದ್ದ. ಜಗಳ ಅತಿರೇಕಕ್ಕೆ ತಿರುಗಿದಾಗ ಇಲ್ಲೇ ಇರು ಬರುತ್ತೇವೆ ಎಂದು ಆರೋಪಿಗಳು ಹೊರ ಹೋಗಿದ್ದರು.…
ಕಲಬುರ್ಗಿ : ಮಹಾರಾಷ್ಟ್ರದ ಕಲ್ಯಾಣದಲ್ಲಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಕಾಂಗ್ರೆಸ್ ಮುಖಂಡ ಲಿಂಗರಾಜ್ ಕಣ್ಣಿಯನ್ನು ಮಹಾರಾಷ್ಟ್ರ ಪೊಲೀಸರು ಇಂದು ಅರೆಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರದ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ಲಿಂಗರಾಜ್ ಕಣ್ಣಿ ವಿರುದ್ಧ NDPS ಅಡಿ ಪ್ರಕರಣ ದಾಖಲಾಗಿದ್ದು, ಇದೀಗ ಪ್ರಾಥಮಿಕ ಸದಸ್ಯತ್ವದಿಂದ ಲಿಂಗರಾಜ ಕಣ್ಣಿ ಉಚ್ಚಾಟನೆ ಮಾಡಿ ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಅದೇಶಿಸಿದ್ದಾರೆ. ಹೌದು ಕಲ್ಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿಯನ್ನು ಉಚ್ಚಾಟನೆ ಮಾಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್ ಆದೇಶ ಹೊರಡಿಸಿದ್ದಾರೆ. ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಕಾಂಗ್ರೆಸ್ ಮುಖಂಡ ಲಿಂಗರಾಜ್ ಮಹಾರಾಷ್ಟ್ರದ ಠಾಣೆ ನಗರದಲ್ಲಿ ಪೊಲೀಸರು ಇಂದು ಅರೆಸ್ಟ್ ಮಾಡಿದ್ದರು. ಅಲ್ಲದೇ ಬಂಧಿತ ಆರೋಪಿ ಕಲ್ಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಆಪ್ತ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದ ಕಲ್ಯಾಣ ಪೊಲೀಸರು ಲಿಂಗರಾಜ್ ಕಣ್ಣಿಯನ್ನು ಇಂದು ಅರೆಸ್ಟ್ ಮಾಡಿದ್ದರು. ಈ ಹಿನ್ನೆಲೆ ಇಂದು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಲಿಂಗರಾಜ ಕಣ್ಣೀಯನ್ನು ಉಚ್ಚಾಟನೆಗೊಳಿಸಿ ಜಗದೇವ…
ಮೈಸೂರು : ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಆದರೆ ಯಾವಾಗ ಅಂತ ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಉತ್ತರ ಕೊಟ್ಟಿದ್ದಾರೆ ನಾನೇ 5 ವರ್ಷ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ನಾನೇನು ಹೇಳುವ ಅವಶ್ಯಕತೆ ಇಲ್ಲ ಎಂದರು. ಪವರ್ ಶೇರಿಂಗ್ ಬಗ್ಗೆ ಪಕ್ಷದಲ್ಲಿ ಏನು ಚರ್ಚೆ ಆಗಿತ್ತು ಎನ್ನುವುದು ಗೊತ್ತಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಧೀಪ್ ಸಿಂಗ್ ಶಾಸಕರ ಅಹವಾಲು ಕೇಳಿದ್ದಾರೆ. ಯಾವ ಸಚಿವ ಸಚಿವರ ಬಗ್ಗೆ ಕೂಡ ದೂರು ಬಂದಿದೆ ಅವು ಗೊತ್ತಿಲ್ಲ. ಎಲ್ಲವನ್ನು ಹೈಕಮಾಂಡ್ ಸರಿ ಮಾಡುತ್ತದೆ ಹೊರಗಿನಿಂದ ಬಂದ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದಾರೆ ಎನ್ನುವ ವಿಚಾರವಾಗಿ ಸಿದ್ದರಾಮಯ್ಯ ಈಗ ಕಾಂಗ್ರೆಸ್ ನಾಯಕರು ಅವರು ಜನಪ್ರಿಯ ನಾಯಕರು ಹಾಗಾಗಿ ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ…














