Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಚಿನ್ನಯ್ಯ ತಂದುಕೊಟ್ಟ ಬುರುಡೆ ಎಲ್ಲಿಯದ್ದು ಅನ್ನೋ ಯಕ್ಷ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮುಸುಕುಧಾರಿಯನ್ನ 10 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿರುವ SIT ಸ್ಫೋಟಕ ರಹಸ್ಯಗಳನ್ನ ಬಯಲಿಗೆಳೆಯುತ್ತಿದೆ. ಚಿನ್ನಯ್ಯ ತಂದಿದ್ದ ʻಬುರುಡೆʼ ಅಧಿಕಾರಿಗಳು ಧರ್ಮಸ್ಥಳ ನೋಡುವುದಕ್ಕೂ ಮುನ್ನವೇ ದೆಹಲಿ ನೋಡಿತ್ತು ಅನ್ನೋದು ಗೊತ್ತಾಗಿದೆ. ಹೌದು. ಷಡ್ಯಂತ್ರದ ಗ್ಯಾಂಗ್ ಚಿನ್ನಯ್ಯನ ಸಮೇತ ಬುರುಡೆಯನ್ನ ದೆಹಲಿಗೆ ತೆಗೆದುಕೊಂಡು ಹೋಗಿತ್ತು. ಅಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನ ಭೇಟಿಯಾಗಿ ಬುರುಡೆಯನ್ನ ತೋರಿಸಲಾಗಿತ್ತು. ಬುರುಡೆ ಸಮೇತ ಇಡೀ ಪ್ರಕರಣದ ಕಥೆಯನ್ನು ಅಲ್ಲಿ ಹೇಳಲಾಗಿತ್ತು. ಮೆಗಾ ಡೀಲ್ ಕೂಡ ನಡೆದಿತ್ತು ಅನ್ನೋ ರಹಸ್ಯ ಬೆಳಕಿಗೆ ಬಂದಿದೆ. ಈ ಮಧ್ಯೆ ಬುರುಡೆಯಲ್ಲಿದ್ದ ಮಣ್ಣು ಧರ್ಮಸ್ಥಳ ಪರಿಸರದ್ದೇ ಅಲ್ಲ ಎನ್ನುವುದು ವಿಧಿವಿಜ್ಞಾನ ಪ್ರಾಯೋಗಾಲಯದಲ್ಲಿ ದೃಢಪಟ್ಟಿತ್ತು. ಇದು ಪಕ್ಕಾ ಆಗುತ್ತಿದ್ದಂತೆ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತ ಬೇರೆ ಜಾಗದಿಂದ ಈ ಬುರುಡೆ ತಂದಿದ್ದೇನೆ. ಬೇರೆಯವರು ಹೇಳಿದಂತೆ ನಾನು ಈ ಪ್ರಕರಣಕ್ಕೆ ಬಂದಿದ್ದೇನೆ ಎಂದು ಬಾಯಿಬಿಟ್ಟಿದ್ದ.
ಬೆಂಗಳೂರು : ಆರ್ ಎಸ್ ಎಸ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಇದೀಗ ಮತ್ತೆ ಆರ್ ಎಸ್ ಎಸ್ ಕುರಿತು ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣ ಟ್ವೀಟ್ ನಲ್ಲಿ ವಾಗ್ದಾಳಿ ನಡೆಸಿದ್ದು, ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ ಭಾರತದ ಪ್ರತಿ ಪ್ರಜೆಯೂ “RSSಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು“ ಎಂಬ ಪ್ರತಿಜ್ಞೆ ಕೈಗೊಳ್ಳಬೇಕು. ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ನರ ನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ RSS ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ. ಏಕೆಂದರೆ, ಆರ್ಎಸ್ಎಸ್ ಸಂವಿಧಾನಕ್ಕೆ ಶತ್ರು, ಆರ್ಎಸ್ಎಸ್ ಐಕ್ಯತೆಗೆ ಶತ್ರು, ಆರ್ಎಸ್ಎಸ್ ರಾಷ್ಟ್ರಧ್ವಜಕ್ಕೆ ಶತ್ರು, ಆರ್ಎಸ್ಎಸ್ ರಾಷ್ಟ್ರಗೀತೆಗೆ ಶತ್ರು, ಆರ್ಎಸ್ಎಸ್ ಏಕತೆಗೆ, ಸಾರ್ವಭೌಮತೆಗೆ ಶತ್ರು. ಬಾಬಾ ಸಾಹೇಬರು, ಸರ್ದಾರ್ ಪಟೇಲರು ದಶಕಗಳ ಹಿಂದೆಯೇ ಆರ್ಎಸ್ಎಸ್ ಕುರಿತು ನಿಷ್ಠುರವಾಗಿ ಎಚ್ಚರಿಕೆಯ ಸಂದೇಶ ನೀಡಿ ಹೋಗಿದ್ದಾರೆ, ಆ ಮಹನೀಯರ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಮನುವಾದಿಗಳನ್ನು ದೂರ ಇಡಬೇಕಿದೆ.…
ಬೆಂಗಳೂರು : ಎಂ ಕೆ ದೊಡ್ಡಿ ಠಾಣೆ ಶೌಚಾಲಯದಲ್ಲಿ ಆರೋಪಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಂ ಕೆ ದೊಡ್ಡ ಠಾಣೆಯ ASI ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ. ASI ಪ್ರತಾಪ್, ಕಾನ್ಸ್ಟೇಬಲ್ ಗಳಾದ ಲಕ್ಷ್ಮೀನಾರಾಯಣ ಹಾಗೂ ಸೋಮನಾಥ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಂ.ಕೆ ದೊಡ್ಡಿ ಠಾಣೆಯಲ್ಲಿ ಆಗಸ್ಟ್ 20ರಂದು ಆರೋಪಿ ರಮೇಶ್ (59) ಆತ್ಮಹತ್ಯೆ ಮಾಡಿಕೊಂಡಿದ್ದ. ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡನಹಳ್ಳಿ ನಿವಾಸಿಯಾಗಿರುವ ರಮೇಶ್ ಆಗಸ್ಟ್ 20ರಂದು ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಳ್ಳತನ ಆರೋಪದ ಮೇಲೆ ಅರೆಸ್ಟ್ ಆಗಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದ.
ಬೆಂಗಳೂರು : ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಟಿ ಹೆಚ್ ಓ ಒಬ್ಬರು ಸಾವನ್ನಪ್ಪಿದ್ದರೆ. ದೇವನಹಳ್ಳಿ ತಾಲೂಕು, ಆರೋಗ್ಯ ಅಧಿಕಾರಿ ಸಂಜಯ್ (52) ಇದೀಗ ಹೃದಯಘಾತದಿಂದ ಸಾವನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಟಿ ಎಚ್ ಓ ಆಗಿದ್ದ ಸಂಜಯ್ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯಯುಸಿರೆಳಿದಿದ್ದಾರೆ. ಐದು ವರ್ಷಗಳಿಂದ ದೇವನಹಳ್ಳಿಯಲ್ಲಿ ಟಿ ಎಚ್ ಆಗಿ ಸಂಜಯ್ ಕಾರ್ಯ ನಿರ್ವಹಿಸುತ್ತಿದ್ದರು ಉತ್ತಮ ಸೇವೆಯಿಂದ ಸಂಜಯ್ ಜನಮನ್ನಣೆ ಗಳಿಸಿದ್ದರು. ಅಂತಾರಾಷ್ಟ್ರೀಯ ಏರ್ಪೋರ್ಟ್ ಸೇರಿದಂತೆ ದೇವನಹಳ್ಳಿ ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು. ಖಾಸಗಿ ಕಾರ್ಯಕ್ರಮ ನಿಮಿತ್ಯವಾಗಿ ಅವರು ಚೆನ್ನೈಗೆ ತೆರಳಿದಾಗ ತೀವ್ರ ಹೃದಯಘಾತದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಇದೀಗ ಚಿಕಿತ್ಸೆ ಫಲಿಸದೆ ಸಂಜಯ್ ಸಾವನಪ್ಪಿದ್ದಾರೆ ಮೃತ ಸಂಜಯ್ ಪತ್ನಿ ಮತ್ತು ಓರ್ವ ಮಗಳನ್ನು ಅಗಲಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬಾಶೆಟ್ಟಿ ಪಟ್ಟಣದ ಹೆದ್ದಾರಿಯಲ್ಲಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿ ಹಳ್ಳಿಯಲ್ಲಿ ರಸ್ತೆಯಿಂದ ಬೈಕ್ ಸಮೇತ ಸವಾರನನ್ನು ಲಾರಿ ಸೈಡಿಗೆ ಎಳೆದೊಯ್ದಿದೆ. ಅಪಘಾತದ ರಭಸಕ್ಕೆ ಲಾರಿಯ ಮುಂಭಾಗ ಹಾಗೂ ಬೈಕ್ ಸಂಪೂರ್ಣವಾಗಿ ನಜ್ಗುಗುಜ್ಜಾಗಿದೆ. ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಬೈಕ್ ಸವಾರನ ಶವ ಶಿಫ್ಟ್ ಮಾಡಲಾಗಿದೆ.ಮೃತ ಬೈಕ್ ಸವಾರನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ್ದಾಗಿ ಹೇಳಿದ ದೂರುದಾರ ಚೆನ್ನಯ್ಯ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿನ್ನಯ್ಯ ಬಾಯಿ ಬಿಟ್ಟಿರುವ ಅವರ ವಿರುದ್ಧ ಇದೀಗ ಎಸ್ಐಟಿ ತನಿಖಾ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆಶ್ರಯ ಕೊಟ್ಟವರಿಂದ ಷಡ್ಯಂತರ ಮಾಡಿದವರಿಗೆ ತನಿಖಾ ಬಿಸಿ ತಟ್ಟಲಿದೆ. ಇಂದಿನಿಂದ ಪೊಲೀಸ್ ಸ್ಟೈಲ್ ನಲ್ಲಿ ಎಸ್ಐಟಿ ತನಿಖೆ ನಡೆಸಲಿದೆ ಚೆನ್ನಯ್ಯ ಹೇಳಿರುವ ಎಲ್ಲರಿಗೂ ಪ್ಲಾನ್ ಮಾಡಿಕೊಳ್ಳುತ್ತಿದೆ. ಇಂದು ಬಿಎನ್ಎಸ್ 183 ಅಡಿ ಚಿನ್ನಯ್ಯ ಹೇಳಿಕೆ ದಾಖಲು ಸಾಧ್ಯತೆ ಇದೆ ಪ್ರಧಾನ ನ್ಯಾಯಾಧೀಶರು ಇಂದು ಚಿನ್ನಯ ಹೇಳಿಕೆ ದಾಖಲು ಮಾಡುವ ಸಾಧ್ಯತೆ ಇದೆ ಇದಕ್ಕೂ ಮುನ್ನ ವಿಚಾರಣ ಹೇಳಿಕೆಯ ಆಧಾರದಲ್ಲಿ ನೋಟಿಸ್ ನೀಡಲು ಪ್ಲಾನ್ ಮಾಡಿದೆ.
ಲವಂಗದಿಂದ ಈ ಪರಿಹಾರವನ್ನು ಮಾಡಿಕೊಳ್ಳಿ ಮೂರು ಶುಕ್ರ ವಾರ ಗಳ ಕಾಲ ಈ ಪರಿಹಾರವನ್ನು ನೀವು ಪಾಲಿಸಿಕೊಂಡು ಬಂದಿದೆ ಅದರೆ ನಿಮ್ಮ ಜೀವನದಲ್ಲಿ ಎದುರಾಗುತ್ತ ಇರುವಂತಹ ಹಣಕಾಸಿಗೆ ಸಂಬಂಧಪಟ್ಟ ವಿಚಾರಗಳು ಬೇಗ ಪರಿಹರವಾಗುತ್ತದೆ. ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ 9686268564 ಅದು ಹೇಗೆ ಅಂತೀರಾ ಈ ಲವಂಗಕ್ಕೆ ಬಹಳ ವಿಶೇಷವಾದ ಶಕ್ತಿ ಇದೆ ಹಾಗೂ ದುಷ್ಟಶಕ್ತಿಯನ್ನು ದೂರ ಮಾಡುವಂತಹ…
ಮಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಮಾತನಾಡಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಈಗ ಒಂದೊಂದೇ ಸತ್ಯಗಳು ಹೊರ ಬರುತ್ತಿವೆ. ಇದರ ಬಗ್ಗೆ ನಾನು ಈಗ ಹೆಚ್ಚೇನೂ ಮಾತನಾಡುವುದಿಲ್ಲ. ಎಲ್ಲಾ ಆರೋಪಗಳು ತೊಳೆದು ಹೋದಂತಾಗಿದೆ ಎಂದು ತಿಳಿಸಿದ್ದಾರೆ. ತನಿಖೆಯಿಂದ ಇನ್ನೂ ಎಲ್ಲಾ ವಿಚಾರಗಳು ಗೊತ್ತಾಗಲಿವೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೇಯೇ ಇರಲಿ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು SIT ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆ ಬಳಿಕ ಬೆಳ್ತಂಗಡಿ ಸಿವಿಲ್ ಮತ್ತು JMFC ಕೋರ್ಟ್ ಗೆ ಹಾಜರುಡಿಸಿದ್ದರು. ವಿಚಾರಣೆ ನಡೆಸಿದ ಜಡ್ಜ್ ವಿಜಯೇಂದ್ರ ಅವರು 10 ದಿನಗಳ ಕಾಲ ಚಿನ್ನಯ್ಯನನ್ನು SIT ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
ಮಂಗಳೂರು : ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ಮ್ಯಾನ್ ಚಿನ್ನಯ್ಯನ ಬಂಧನವಾದ ಬೆನ್ನಲ್ಲೇ ಧರ್ಮಸ್ಥಳ ದೇವಸ್ಥಾನದ ಅಧಿಕೃತ ಸಾಮಾಜಿಕ ಜಾಲತಾಣ ಪುಟದಲ್ಲಿ ಶಿವ ರುದ್ರತಾಂಡವ ಮಾಡುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಲಾಗಿದೆ.ಧರ್ಮ ವಿಜಯದ ಸಂಕೇತವಾಗಿ ಧರ್ಮಸ್ಥಳ ದೇವಸ್ಥಾನದ ಹಿಂದೆ ಶಿವ ರುದ್ರತಾಂಡವದ ಫೋಟೋ ಅನಾವರಣವಾಗಿದೆ. ಧರ್ಮಸ್ಥಳ ದೇವರ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಷಡ್ಯಂತ್ರ ಮಾಡಿ ಗ್ಯಾಂಗ್ ಸುಳ್ಳಿನ ಕೋಟೆ ಕಟ್ಟಿತ್ತು. ಒಂದೊಂದೇ ಸುಳ್ಳಿನ ಕೋಟೆಗಳು ಕಳಚಿ ಬಿದ್ದು ಷಡ್ಯಂತ್ರ ಮಾಡುತ್ತಿದವರು ಬಂಧನವಾಗುತ್ತಿದ್ದಂತೆ ಆಡಳಿತ ಮಂಡಳಿ ಶಿವರುದ್ರ ತಾಂಡವದ ಫೋಟೋ ಹಾಕಿ ನಮೋ ಮಂಜುನಾಥ ಎಂದು ಬರೆದು ಅಪಪ್ರಚಾರ ಮಾಡಿದವರಿಗೆ ಸಂದೇಶ ಕಳುಹಿಸಿದೆ. ಶಿವ ರುದ್ರ ತಾಂಡವ ಸಂತೋಷ ಮತ್ತು ಭಾವಪರಾವಶತೆಯನ್ನು ಕೋಪವನ್ನು ಸಂಕೇತಿಸುತ್ತದೆ. ಅಧರ್ಮದ ವಿನಾಶವನ್ನು , ಅಹಂಕಾರದ ನಾಶವನ್ನು ಶಿವರುದ್ರತಾಂಡವ ಸೂಚಿಸುತ್ತದೆ. ಢಮರುಗ ಹಿಡಿದ ರೌದ್ರತೆ ತೋರುವ ಶಿವನ ಉಗ್ರ ಮತ್ತು ವಿನಾಶಕಾರಿ ಸ್ವರೂಪವನ್ನು ಬಿಂಬಿಸುತ್ತದೆ.
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಸ್ಕ್‌ಮ್ಯಾನ್ ಚಿನ್ನಯ್ಯನ ಅಣ್ಣ ತಾನಾಸಿಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ತಾನಾಸಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮಾಡುತ್ತಿದ್ದ ಜಾಗಕ್ಕೆ ಹೋಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಸ್‌ಐಟಿ (SIT) ವಿಚಾರಣೆಯ ಸಂದರ್ಭದಲ್ಲಿ ಚಿನ್ನಯ್ಯ ಅಣ್ಣ ತಾನಾಸಿಯ ಬಗ್ಗೆ ಕೆಲ ಮಾಹಿತಿ ತಿಳಿಸಿದ್ದ ಹಿನ್ನೆಲೆಯಲ್ಲಿ ಈಗ ಅಣ್ಣನನ್ನು ವಶಕ್ಕೆ ಪಡೆದಿದೆ. ಎಸ್‌ಐಟಿ ಚಿನ್ನಯ್ಯನ ವಿಚಾರಣೆ ನಡೆಸುತ್ತಿದ್ದ ವೇಳೆ ತಾನು ಹೆಣ ಹೂಳುತ್ತಿರುವ ವಿಚಾರ ಅಣ್ಣ ತಾನಾಸಿಗೂ ತಿಳಿದಿತ್ತು ಎಂದು ಹೇಳಿದ್ದ. ಈ ಕಾರಣಕ್ಕೆ ತಾನಾಸಿಯನ್ನು ಎಸ್‌ಐಟಿ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಬೆಳ್ತಂಗಡಿ ಕೋರ್ಟ್ ಈಗ ಚಿನ್ನಯ್ಯನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಶುಕ್ರವಾರ ವಿಚಾರಣೆಗೆ ಬಂದಿದ್ದ ಚಿನ್ನಯ್ಯನಿಗೆ ಎಸ್‌ಐಟಿ ಪೊಲೀಸರು ನಿರಂತರ ಪ್ರಶ್ನೆ ಕೇಳಿದ್ದರು. ರಾತ್ರಿಯೂ ಬೆಳ್ತಂಗಡಿ ಠಾಣೆಯಲ್ಲೇ ಇದ್ದ ಚಿನ್ನಯ್ಯನನ್ನು ಇಂದು ಬೆಳಗ್ಗೆ ಬಂಧಿಸಿದ್ದರು.














