Subscribe to Updates
Get the latest creative news from FooBar about art, design and business.
Author: kannadanewsnow05
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ್ದ ಚಿನ್ನಯ್ಯ ಬಂಧನ ವಿಚಾರವಾಗಿ ಇದೀಗ ಚಿನ್ನಯ್ಯ ಪ್ರಕರಣದ ಯಾವುದೇ ಮಾಹಿತಿ ನೀಡದಂತೆ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.ವಿಚಾರಣ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡದಿಂದ ಅರ್ಜಿ ಸಲ್ಲಿಸಲಾಗಿದೆ. FIR, ಪ್ರಕರಣ ಸೇರ್ಪಡೆ ಇತರೆ ಮಾಹಿತಿ ಗೌಪ್ಯವಾಗಿಸಲು SIT ಮನವಿ ಮಾಡಿದೆ. 39/2025 ಪ್ರಕರಣ ಗೌಪ್ಯವಾಗಿರಿಸಲು SIT ಅರ್ಜಿ ಸಲ್ಲಿಸಿದೆ. ಇನ್ನೊಂದು ಕಡೆ ಅನನ್ಯ ಭಟ್ ಧರ್ಮಸ್ಥಳಕ್ಕೆ ತೆರಳಿದ್ದಾಗ ನಾಪತ್ತೆ ದೂರು ವಿಚಾರವಾಗಿ ಇದೀಗ ದೂರುದಾರೆ ಸುಜಾತಾ ಭಟ್ ಅವರನ್ನು SIT ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಸುಜಾತಾ ಭಟ್ ವಿಚಾರಣೆ ಎದುರಿಸುತ್ತಿದ್ದಾರೆ. ಅನನ್ಯ ಭಟ್ ನನ್ನ ಮಗಳೆಂದು ಬಿಂಬಿಸಿದ್ದ ಸುಜಾತಾ ಭಟ್ ಸುಳ್ಳು ದೂರು ನೀಡಿ ಪೊಲೀಸರ ದಿಕ್ಕು ತಪ್ಪಿಸಿದ ಹಿನ್ನೆಲೆಯಲ್ಲಿ, ಸುಳ್ಳು ದೂರು ಸುಳ್ಳು ಸಾಕ್ಷಿ ಸೃಷ್ಟಿಸಿದ ಆರೋಪದ ಮೇಲೆ SIT ಪೋಲಿಸರು ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ದಕ್ಷಿಣಕನ್ನಡ : ಅನನ್ಯ ಭಟ್ ಧರ್ಮಸ್ಥಳಕ್ಕೆ ತೆರಳಿದ್ದಾಗ ನಾಪತ್ತೆ ದೂರು ವಿಚಾರವಾಗಿ ಇದೀಗ ದೂರುದಾರೆ ಸುಜಾತಾ ಭಟ್ ಅವರನ್ನು SIT ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಸುಜಾತಾ ಭಟ್ ವಿಚಾರಣೆ ಎದುರಿಸುತ್ತಿದ್ದಾರೆ. ಅನನ್ಯ ಭಟ್ ನನ್ನ ಮಗಳೆಂದು ಬಿಂಬಿಸಿದ್ದ ಸುಜಾತಾ ಭಟ್ ಸುಳ್ಳು ದೂರು ನೀಡಿ ಪೊಲೀಸರ ದಿಕ್ಕು ತಪ್ಪಿಸಿದ ಹಿನ್ನೆಲೆಯಲ್ಲಿ, ಸುಳ್ಳು ದೂರು ಸುಳ್ಳು ಸಾಕ್ಷಿ ಸೃಷ್ಟಿಸಿದ ಆರೋಪದ ಮೇಲೆ SIT ಪೋಲಿಸರು ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬೆಂಗಳೂರು : ಕನ್ನಡದ ಖ್ಯಾತ ನಿರೂಪಕಿ ಆಂಕರ್ ಅನುಶ್ರೀ ಅವರು ಕೊನೆಗೂ ಹಸೆಮಣೆ ಏರಿದ್ದಾರೆ. ಕೊಡಗು ಮೂಲದ ರೋಷನ್ ಅವರೊಂದಿಗೆ ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಅನುಶ್ರೀ ರೋಷನ್ ಮದುವೆ ಇಂದು ನೆರವೇರಿತು. ಇದಕ್ಕೂ ಮುನ್ನ ನಿನ್ನೆ ಅನುಶ್ರೀ ರೋಷನ್ ಅರಿಶಿಣ ಶಾಸ್ತ್ರ ನೆರವೇರಿತ್ತು. ಇಂದು ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಅನುಶ್ರೀ ಹಾಗೂ ರೋಷನ್ ಮದುವೆ ಬಹಳ ಅದ್ದೂರಿಯಾಗಿ ನೆರವೇರಿತು ಈ ವೇಳೆ ಅನುಶ್ರೀ ಹಣೆಗೆ ಖುಷಿಯಿಂದ ಅವರು ಮುತ್ತಿಟ್ಟಿದ್ದಾರೆ ಈ ಒಂದು ಮದುವೆ ಸಮಾರಂಭದಲ್ಲಿ ಹಲವು ಸೆಲೆಬ್ರಿಟಿಗಳು ಗಣ್ಯರು ಭಾಗವಹಿಸಿದ್ದರು.
ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಒಂದು ನಡೆದಿದ್ದು ಗಣೇಶ ವಿಸರ್ಜನೆಯ ವೇಳೆ ನೀರಿನಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಬೇಲೂರು ಗ್ರಾಮದ ಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ. ಬೇಲೂರು ಕೆರೆಯಲ್ಲಿ ಯುವಕರು ಗಣೇಶ ವಿಸರ್ಜನೆ ಮಾಡುತ್ತಿದ್ದರು ಈ ವೇಳೆ ನೀರಿನಲ್ಲಿ ಮುಳುಗಿ ಯರವಳ್ಳಿಯ ಪ್ರದೀಪ್ (28) ಸಾವನ್ನಪ್ಪಿದ್ದಾನೆ.ತಕ್ಷಣ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿಗಳು ಪ್ರದೀಪ್ ಮೃತದೇಹವನ್ನು ಹೊರಗಡೆ ತೆಗೆದಿದ್ದಾರೆ. ಘಟನೆ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇಂದಿನ ಕಾಲದಲ್ಲಿ, ಹಣ ಎಷ್ಟು ಮುಖ್ಯವೋ, ಶಿಕ್ಷಣವೂ ಅಷ್ಟೇ ಮುಖ್ಯ. ಅನೇಕ ಜನರು ಶಿಕ್ಷಣದ ಆಧಾರದ ಮೇಲೆ ತಮ್ಮ ಜೀವನವನ್ನು ನಡೆಸುತ್ತಾರೆ. ಇಂದಿನ ಕಾಲದಲ್ಲಿ ಮಾತ್ರವಲ್ಲದೆ ನಮ್ಮ ಪೂರ್ವಜರ ಕಾಲದಲ್ಲೂ ಶಿಕ್ಷಣವನ್ನು ಪಡೆಯುವುದು ಬಹಳ ಮುಖ್ಯವಾದ ಅಗತ್ಯವಾಗಿತ್ತು. ಆದರೆ, ಇಂದಿನ ಕಾಲದಲ್ಲಿ, ನಾವು ಬಯಸಿದ ಕೆಲಸಕ್ಕೆ ಸೇರಲು ಮತ್ತು ನಮ್ಮ ಅಪೇಕ್ಷಿತ ವೃತ್ತಿಯನ್ನು ಮಾಡಲು ಸಾಕಷ್ಟು ಶಿಕ್ಷಣವಿದ್ದರೆ ಮಾತ್ರ, ನಾವು ಅದನ್ನು ಉತ್ತಮ ರೀತಿಯಲ್ಲಿ ಮಾಡಬಹುದು ಮತ್ತು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಅಂತಹ ಶಿಕ್ಷಣವನ್ನು ಪಡೆಯುವಲ್ಲಿ ಏನೇ ಅಡೆತಡೆಗಳು ಉದ್ಭವಿಸಬಹುದು, ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನಾವು ಆ ಅಡೆತಡೆಗಳನ್ನು ತೆಗೆದುಹಾಕಲು ಮನೆಯಲ್ಲಿ ಬೆಳಗಿಸಬೇಕಾದ ಪಂಚಕಾವ್ಯ ದೀಪವನ್ನು ನೋಡಲಿದ್ದೇವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ…
ತುಮಕೂರು : ತುಮಕೂರಿನ ಅಶ್ವಿನಿ ಆತ್ಮಹತ್ಯೆ ಕೇಸಿಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಅಶ್ವಿನಿ ಮೊಬೈಲ್ ನಲ್ಲಿ ಆತ್ಮಹತ್ಯೆ ರಹಸ್ಯ ಬಯಲಾಗಿದ್ದು, ಪುತ್ರಿ ಅಶ್ವಿನಿ ಲವ್ ಸ್ಟೋರಿ ಮತ್ತು ಕಿರುಕುಳ ಬೆಳಕಿಗೆ ಬಂದಿದೆ. ಹೊಟ್ಟೆ ನೋವಿನಿಂದ ಆತ್ಮಹತ್ಯೆ ಎಂದು ಪೋಷಕರು ಭಾವಿಸಿದ್ದರು. ಆದರೆ ಆತ್ಮಹತ್ಯೆಗು ಮುನ್ನ ಕುಣಿಕೆಯ ಜೊತೆ ಅಶ್ವಿನಿ ಸೆಲ್ಫಿ ತೆಗೆದುಕೊಂಡಿದ್ದಳು. ಇದಿಗ ಅಶ್ವಿನಿ ಮೊಬೈಲ್ ನಲ್ಲಿ ಮೆಸೇಜ್ ಮತ್ತು ಸಂಭಾಷಣೆ ಕುರಿತು ಪತ್ತೆಯಾಗಿದೆ. ವಾಟ್ಸಾಪ್ನಲ್ಲಿ ಮೆಸೇಜ್ ಮಾಡಿರುವುದು ಪತ್ತೆಯಾಗಿದೆ. ಅಶ್ವಿನಿ ತಮ್ಮದೇ ಊರಿನ ಯುವಕನನ್ನು ಪ್ರೀತಿಸುತ್ತಿದ್ದಳು ಆತ್ಮಹತ್ಯೆಗೆ ಮುನ್ನ ಅಶ್ವಿನಿ ಸೆಲ್ಫಿ ತೆಗೆದುಕೊಂಡಿದ್ದಳು. ಅಂತ್ಯಕ್ರಿಯೆ ಮುಗಿಸಿ ಬಂದಾಗ ಮೊಬೈಲ್ ನಲ್ಲಿ ಆತ್ಮಹತ್ಯೆ ರಹಸ್ಯ ಪತ್ತೆಯಾಗಿದೆ. ಪೋಷಕರಿಗೆ ಸಿಕ್ಕಿದ್ದ ಮೊಬೈಲ್ ನಲ್ಲಿ ತನ್ನ ಪ್ರಿಯಕರನಿಗೆ ಮಾಡಿದ ಮೆಸೇಜ್ ಪತ್ತೆಯಾಗಿದೆ ಸಿದ್ದನಕಟ್ಟೆ ಗ್ರಾಮದ ಅಶ್ವಿನಿ ಅದೇ ಗ್ರಾಮದ ಯುವಕನೊಂದಿಗೆ ಪ್ರೀತಿಸುತ್ತಿದ್ದಳು. ಆದರೆ ಯುವಕನಿಗೆ ಮತ್ತೋರ್ವ ಯುವತಿಯ ಜೊತೆಗೆ ಸಂಬಂಧ ಶಂಕೆ ವ್ಯಕ್ತವಾಗಿದೆ. ಈ ವಿಚಾರವಾಗಿ ಅಶ್ವಿನಿ ಮತ್ತು ಪ್ರಿಯಕರ ನಡುವೆ ಗಲಾಟೆ…
ಮಂಡ್ಯ : ಮಂಡ್ಯದಲ್ಲಿ ಯುವಕನ ಭೀಕರ ಕೊಲೆಯಾಗಿದ್ದು, ರಾಮಂದೂರಿನಲ್ಲಿ ಅಪ್ರಾಪ್ತೆಯನ್ನು ಪ್ರೀತಿಸಿದ್ದಕ್ಕೆ ಯುವಕನ ಬರ್ಬರವಾಗಿ ಕೊಲೆಗೈಯ್ಯಲಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಮಂದೂರು ಗ್ರಾಮದಲ್ಲಿ ಯುವಕನು ಕೊಂದು ಅಪಘಾತ ಎಂದು ಬಿಂಬಿಸಿದ್ದಾಗಿ ಪೋಷಕರು ಆರೋಪಿಸಿದ್ದಾರೆ ರಾಮಂದೂರು ಕೆರೆಯ ಬಳಿ ಕಲ್ಕುಣಿ ನಿವಾಸಿ ಮಂಜು (21) ಶವ ಸಿಕ್ಕಿತ್ತು. ರಾಮಂದೂರಿನ ಕೆರೆಯಲ್ಲಿ ಮೀನು ಹಿಡಿಯಲು ಮಂಜು ಬಂದಿದ್ದ. ಈ ವೇಳೆ ಕೆರೆಯ ಪಕ್ಕದ ಹಳ್ಳದಲ್ಲಿ ಮಂಜು ಶವ ಪತ್ತೆಯಾಗಿತ್ತು. ಆಟೋ ಪಲ್ಟಿಯಾಗಿ ಮೃತಪಟ್ಟಂತೆ ಮಂಜು ಮೃತ ದೇಹ ಮತ್ತೆಯಾಗಿದೆ ಮಂಜುನನ್ನು ಕೊಂದು ಆಟೋದಲ್ಲಿ ಶವ ಬಿಟ್ಟು ಹಳ್ಳಕ್ಕೆ ದೂಡಿರುವ ಶಂಕೆ ವ್ಯಕ್ತವಾಗಿದೆ ಮಂಜು ಸಾವಿನ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸರಲ್ಲೂ ಕೂಡ ಅನುಮಾನ ವ್ಯಕ್ತವಾಗಿದೆ ಮಂಜುವನ್ನು ಕೊಲೆಗೈದಿದ್ದಾರೆ ಎಂದು ಪೋಷಕರು ಆರೋಪಿಸಿದ್ದು ಮಂಜು ಪ್ರೀತಿಸುತ್ತಿದ್ದ ಅಪ್ರಾಪ್ತೇ ಸಂಬಂಧಿಕರಿಂದ ಕೊಲೆ ಆರೋಪ ಕೇಳಿ ಬಂದಿದೆ. ಎರಡು ವರ್ಷದಿಂದ ಮಂಜು ಸಂಬಂಧಿಕರ ಪುತ್ರಿ ಯನ್ನು ಪ್ರೀತಿಸುತ್ತಿದ್ದ. ಆಕೆಯು ಮಂಜುನಾಥ್ ಮದುವೆಯಾಗುವುದಾಗಿ ಹೇಳುತ್ತಿದ್ದಳು 18 ವರ್ಷ ತುಂಬಿದ…
ದಾವಣಗೆರೆ : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 22.40 ಲಕ್ಷ ವಂಚಿಸಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ದಾವಣಗೆರೆ ಸೆನ್ ಠಾಣೆ ಪೊಲೀಸರಿಂದ ಅರುಣ್ ಕುಮಾರ್ (35) ಎನ್ನುವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ದಾವಣಗೆರೆ ಮೂಲದ ಶಿಕ್ಷಕನಿಗೆ 22.40 ಲಕ್ಷ ರೂಪಾಯಿ ವಂಚನೆ ಎಸಗಿದ್ದು, ಬ್ಯಾಂಕ್ ಖಾತೆಯಲ್ಲಿ 19 ಲಕ್ಷ ಫ್ರೀಜ್ ಮಾಡುವಂತೆ ಮನವಿ ಮಾಡಿದ್ದಾರೆ. ಕೋರಟಿಕೆರೆ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಮತ್ತೆ ಇಬ್ಬರು ಆರೋಪಿಗಳಿಗೆ ಪೊಲೀಸರು ಶೋಧ ನಡೆಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೋರಟಿಕೆರೆ ಮೂಲದವರು ಮಾರ್ಚ್ 12 ರಂದು ಬ್ಲೂಡಾರ್ಟ್ ಕೊರಿಯರ್ ಹೆಸರಿನಲ್ಲಿ ಮುಂಬೈನಿಂದ ದುಬೈಗೆ ಕಳುಹಿಸುತ್ತಿದ್ದ ಪಾರ್ಸಲ್ನಲ್ಲಿ ಡ್ರಗ್ಸ್ ಸಿಕ್ಕಿದೆ. ನಿಮಗೆ ತಿಂಗಳಿಗೆ 20 ಲಕ್ಷ ಆದಾಯವಿದೆ ಎಂದು ಕರೆ ಮಾಡಿದ್ದರು. ಪಾರ್ಸಲ್ ನಲ್ಲಿ ಡ್ರಗ್ಸ್ ಸಿಕ್ಕಿದೆ ಡಿಜಿಟಲ್ ಅರೆಸ್ಟ್ ಮಾಡ್ತೇವೆ ಎಂದು ಶಿಕ್ಷಕನನ್ನು ಬೆದರಿಸಿ ಹಣ ಪಡೆದಿದ್ದರು. ಶಿಕ್ಷಕನ ಬ್ಯಾಂಕ್ ಖಾತೆ ಮಾಹಿತಿ ಪಡೆದು 22.40 ಲಕ್ಷ ವಂಚಿಸಿದ್ದರು . ವಂಚನೆಗೆ ಒಳಗಾದ ಶಿಕ್ಷಕನ ದೂರು ಆದರಿಸಿ…
ಬೆಂಗಳೂರು : ಬೆಂಗಳೂರಿನ ಪಬ್, ಕ್ಲಬ್, ಹೋಟೆಲ್, ಬಾರ್‌ಗಳಿಗೆ ಬಿಬಿಎಂಪಿ ಬಿಗ್‌ಶಾಕ್ ನೀಡಿದೆ. ಬಿಬಿಎಂಪಿ ನೋಟಿಸ್ ಜಾರಿ ಮಾಡಿದರೂ ಪ್ರತಿಕ್ರಿಯಿಸದ ಹೋಟೆಲ್‌ಗಳು, ಪಬ್, ಕ್ಲಬ್, ರೆಸ್ಟೋರೆಂಟ್ ಪರವಾನಗಿ ರದ್ದು ಮಾಡಲು ಬಿಬಿಎಂಪಿ ಮುಂದಾಗಿದೆ. ಹೌದು ಬೆಂಗಳೂರಿನಲ್ಲಿರುವ ಎಲ್ಲಾ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳು ನಿಯಮಾನುಸಾರ ಕ್ರಮವಹಿಸಬೇಕು. ಸ್ಮೋಕಿಂಗ್ ಝೋನ್ ಕಡ್ಡಾಯ ಇರಲೇಬೇಕು. ಇಲ್ಲದೇ ಹೋದರೆ ಕೇಸ್ ಹಾಕಿ ಪರವಾನಗಿ ರದ್ದು ಮಾಡಲು ಬಿಬಿಎಂಪಿ ಮುಂದಾಗಿದೆ.ಇನ್ನೂ ಬಿಬಿಎಂಪಿ ಮುಂದಿನ ವಾರ ನೋಟಿಸ್ ನೀಡಿದ್ದ ಸ್ಥಳಗಳನ್ನು ಪರಿಶೀಲನೆ ನಡೆಸಲಿದೆ. ಪರಿಶೀಲನೆ ನಡೆಸಿ ನೋಟಿಸ್ ಕೊಟ್ಟ ಮೇಲೂ ಸ್ಮೋಕಿಂಗ್ ಝೋನ್ ಅಳವಡಿಸಿಕೊಂಡಿಲ್ಲ ಎಂಬುದು ಕಂಡು ಬಂದರೆ ಪರವಾನಗಿ ರದ್ದು ಮಾಡಲಿದ್ದಾರೆ. ಕಳೆದ 15 ದಿನಗಳ ಹಿಂದೆ BBMP ಸುಮಾರು 300ಕ್ಕೂ ಹೆಚ್ಚು ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿತ್ತು. ಸ್ಮೋಕಿಂಗ್ ಝೋನ್ ನಿರ್ಮಾಣ ಮಾಡಿಲ್ಲ ಅಂತಾ ನೋಟಿಸ್ ನೀಡಿ ಎಚ್ಚರಿಸಿತ್ತು. ನೋಟಿಸ್ ಜಾರಿ ಮಾಡಿದರೂ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳು ಸರಿಪಡಿಸಿಕೊಂಡಿಲ್ಲ ಎಂಬ…
ಮಂಗಳೂರು : ಅನನ್ಯ ಭಟ್ ನಾಪತ್ತೆ ದೂರು ವಿಚಾರವಾಗಿ ಎರಡು ದಿನಗಳ ಕಾಲ ನಡೆದ ವಿಚಾರದಲ್ಲಿ ಅನನ್ಯಾ ಭಟ್ ತನ್ನ ಮಗಳು ಎಂದು ದಾಖಲೆ ನೀಡಲಾಗದೆ ಸುಸ್ತಾಗಿದ್ದಾರೆ. ಅನನ್ಯಾ ಭಟ್ ಕಥೆ ಸೃಷ್ಟಿಯ ಹಿಂದೆ ಇದ್ದ ಗ್ಯಾಂಗ್‌ನ ಮುಖವಾಡ ಅನಾವರಣ ಮಾಡಿದ ಸುಜಾತ ಭಟ್ ಹೇಳಿಕೆಯಿಂದ ಬುರುಡೆ ಗ್ಯಾಂಗ್‌ಗೆ ಸಂಕಷ್ಟಕ್ಕೆ ಸಿಲುಕಿದೆ. ಹೌದು ಮಂಗಳವಾರ ಕರೆಯದಿದ್ದರೂ ಬೆಳ್ಳಂಬೆಳಗ್ಗೆ ಎಸ್‌ಐಟಿ ಕಚೇರಿಯಲ್ಲಿ ಪ್ರತ್ಯಕ್ಷವಾಗಿದ್ದ ಸುಜಾತಾ ಭಟ್‌ಗೆ ಅಧಿಕಾರಿಗಳು ಸತತ 6 ಗಂಟೆಗಳ ಕಾಲ ಗ್ರಿಲ್ ಮಾಡಿದರು. ಶಿವಮೊಗ್ಗದ ರಿಪ್ಪನ್ ಪೇಟೆ, ಉಡುಪಿಯ ಪರಿಕದ ಪರಿಸರ, ಕೊಡಗಿನ ವಿರಾಜಪೇಟೆ ಲಿಂಕ್ ಸಂಬಂಧ ವಿಚಾರಣೆ ನಡೆಸಿದ್ದ ಎಸ್‌ಐಟಿ ಬುಧವಾರ ಮತ್ತೆ ಪ್ರಶ್ನೆ ಕೇಳಿತು.ನಾನು ಹೇಳಿದ್ದ ಅನನ್ಯಾ ಭಟ್ ಕಥೆ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ನನಗೆ ಬುರುಡೆ ಗ್ಯಾಂಗ್ ಹೇಳಿದಂತೆ ಮಾಡಿದ್ದೇನೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ನನ್ನ ಹಿರಿಯರ ಆಸ್ತಿ ನನಗೆ ಬೇಕಿತ್ತು. ಈ ಕಾರಣಕ್ಕೆ ಅನನ್ಯಾ ಭಟ್ ಪಾತ್ರ ಸೃಷ್ಟಿಯಾಗಿತ್ತು. ಬೇರೆ ನನಗೆ ಏನು…














