Author: kannadanewsnow05

ಮೈಸೂರು : ಡಿಸೆಂಬರ್ ನಲ್ಲಿ ಹೊಸ ಮನೆ ಗೃಹ ಪ್ರವೇಶ ಮಾಡುತ್ತೇನೆ. ಗೃಹಪ್ರವೇಶ ಒಂದು ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸುವುದಿಲ್ಲ ಎಂದು ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಹೊಸಮನೆ ಕೆಲಸ ಬಹುತೇಕ ಮುಕ್ತಾಯವಾಗಿದೆ. ಈಗಿರುವ ಮನೆ ನನ್ನದಲ್ಲ ಮರಿಸ್ವಾಮಿ ಅವರದು. ಮರಿಸ್ವಾಮಿ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತರಾಗಿದ್ದಾರೆ. ನನಗೆ ನನ್ನ ಮಗ ಮತ್ತು ಸ್ನೇಹಿತರಿಗೆ ಊಟ ಹಾಕುವುದು ಮರಿಸ್ವಾಮಿ. ಗೃಹಪ್ರವೇಶ ಮಾಡಿದ ಬಳಿಕ ಹೊಸ ಮನೆಗೆ ಹೋಗುತ್ತೇನೆ. ಜನರನ್ನು ಭೇಟಿ ಮಾಡಲು ಈ ಮನೆ ಬೆಳಸಿಕೊಳ್ಳುತ್ತೇನೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.

Read More

ಬೆಳಗಾವಿ : ಒಂದೆಡೆ ನಿನ್ನೆ ಮುಂದಿನ ವರ್ಷ ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಪೂರ್ಣವಧಿ ನಾನೇ ಸಿಎಂ ಆಗಿರುತ್ತೇನೆ ಎಂದು ಪರೋಕ್ಷವಾಗಿ ಹೇಳಿದ್ದು, ಇನ್ನೊಂದೆಡೆ ಮುಂದಿನ ನವೆಂಬರ್-ಡಿಸೆಂಬರ್ ತಿಂಗಳೊಳಗೆ ರಾಜ್ಯದಲ್ಲಿ ಕ್ರಾಂತಿ ಆಗುವುದು ನಿಶ್ಚಿತ. ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಜ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಭವಿಷ್ಯ ನುಡಿದರು. ಬೆಳೆ ಹಾನಿ ಸಮೀಕ್ಷೆಗೆ ಭೇಟಿ ನೀಡುವ ಮುನ್ನ ಇಂದು ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ಈಗ ಜಗಳ ಆರಂಭವಾಗಿದೆ‌. ಈಗಾಗಲೇ ಕ್ರಾಂತಿ ಅಂತ ಹೇಳಿ ಸಚಿವ ರಾಜಣ್ಣ ಮನೆಗೆ ಹೋಗಿದ್ದಾರೆ‌.‌ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಡಿ.ಕೆ.ಶಿವಕುಮಾರ್ ಹಠ ಬಿಡುತ್ತಿಲ್ಲ. ಕಾಂಗ್ರೆಸ್ ಜಗಳದಲ್ಲಿ ಸರ್ಕಾರ ಪತನವಾದರೆ ನಾವೇನೂ ಸರ್ಕಾರ ಮಾಡಲ್ಲ. ನಾವು ಚುನಾವಣೆಗೆ ಹೋಗಲು ಸಿದ್ದರಿದ್ದೇವೆ‌ ಎಂದರು. ಸಿಎಂ ಸಿದ್ದರಾಮಯ್ಯ ಗ್ಯಾಂಗ್‌ಗೆ ಜಾತಿ ಸಮೀಕ್ಷೆ ಮಾತ್ರ ಮುಖ್ಯ. ಜಾತಿಗಳ ಮಧ್ಯೆ ಬೆಂಕಿ…

Read More

ಬೆಂಗಳೂರು : ದೇವಸ್ಥಾನಕ್ಕೆ ಪೂಜೆಗೆ ಹೋಗಿದ್ದಾಗ ಕುಟುಂಬದ ಮೇಲೆ ಅಟ್ಯಾಕ್ ಮಾಡಲಾಗಿದೆ. ಕುಟುಂಬ ಸಮೇತ ಪೂಜೆ ಮುಗಿಸಿ ಬರುವಾಗ ದಾಳಿ ನಡೆಸಲಾಗಿದೆ. ಕೆಆರ್ ಪುರಂ ನ ಬೆಂಡಿಗಾನಹಳ್ಳಿ ಈ ಒಂದು ಘಟನೆ ನಡೆದಿದ್ದು, ಸಿನಿಮಾ ಸ್ಟೈಲ್ ನಲ್ಲಿ ದೊಣ್ಣೆ ಮತ್ತು ಮಾರಕಾಸ್ತ್ರಗಳಿಂದ ಒಂದು ಕುಟುಂಬದ ಮೇಲೆ ಮತ್ತೊಂದು ಕುಟುಂಬದಿಂದ ಹಲ್ಲೆ ನಡೆದಿದೆ. ಕಾಟೇರಮ್ಮ ದೇವಾಲಯದ ಬಳಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ನಾರಾಯಣಸ್ವಾಮಿ ಕಿರಣ್, ಚಂದ್ರು ಹಾಗು ಹತ್ತು ಜನರಿಂದ ಶ್ರೀನಿವಾಸ್ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ಶ್ರೀನಿವಾಸ್, ಮಂಜುಳಾ, ಗಗನ್ ಮತ್ತು ಗಾನವಿಗೆ ಹಲ್ಲೆಯಿಂದ ಗಾಯಗೊಂಡಿದ್ದಾರೆ. ಸಾರ್ವಜನಿಕರ ಎದುರು ದೊಣ್ಣೆ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಶ್ರೀನಿವಾಸ್ ಮತ್ತು ಚಂದ್ರು ಕುಟುಂಬದ ನಡುವೆ ಜಮೀನು ವಿವಾದ ಸಂಬಂಧ ಈ ಒಂದು ಘಟನೆ ನಡೆದಿದೆ. ಜಮೀನು ವಿಚಾರವಾಗಿ ಪ್ರಕರಣ ಕೋರ್ಟ್ ನಲ್ಲಿ ಇತ್ತು. ಚಂದ್ರು ಮತ್ತು ಶ್ರೀನಿವಾಸ್ ಮನೆ ಕಾಂಪೌಂಡ್ ವಿಚಾರಕ್ಕೆ ಪ್ರಕರಣ ದಾಖಲಾಗಿತ್ತು. ಈ ಹಿಂದೆಯೂ ಗಲಾಟೆಯಾಗಿ ಕೌಂಟರ್ ಕೇಸ್…

Read More

ವಿಜಯನಗರ : ವಿಜಯನಗರದಲ್ಲಿ ಇನ್ಸೂರೆನ್ಸ್ ಹಣಕ್ಕಾಗಿ ಗ್ಯಾಂಗ್ ಒಂದು ಖತರ್ನಾಕ್ ಐಡಿಯಾ ಮಾಡಿದ್ದು, ವಿಜಯನಗರದ ವಸೂಲಿ ಗ್ಯಾಂಗಿನ ಖತರ್ನಾಕ್ ಪ್ಲಾನ್ ಅನ್ನು ಪೊಲೀಸರು ಬಯಲು ಮಾಡಿದ್ದಾರೆ. ಹಣಕ್ಕಾಗಿ ಕೊಲೆ ಮಾಡಿ ಅಪಘಾತ ಎಂದು ಪ್ಲಾನ್ ಮಾಡಿದ್ದ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಡಿದ್ದಾರೆ. ಮೊಪೆಡ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆಸಿದ್ದಾರೆ. ಕಾರಿನಿಂದ ಅಪಘಾತ ನಡೆಸಿ ಗ್ಯಾಂಗ್ ಕೊಲೆ ಮಾಡಿತ್ತು. ಗಂಗಾಧರ ಎಂಬತನನ್ನು ಖದೀಮರು ಕೊಲೆ ಮಾಡಿದ್ದಾರೆ. ಹೊಸಪೇಟೆ ನಗರದ ಕೌಲ್ ಪೇಟೆ ನಿವಾಸಿ ಗಂಗಾಧರ ಕೊಲೆ ಮಾಡಿದ್ದಾರೆ. ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇನ್ನು ಕೊಲೆಯಾದ ಗಂಗಾಧರನ ಹೆಂಡತಿ ಶಾರದಾ ದೂರು ನೀಡಿದ್ದಾರೆ. ಗಂಗಾಧರ್ ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಮಹಿಳೆ ಸೇರಿ ಒಟ್ಟು ಪೊಲೀಸರು 6 ಜನರನ್ನು ಅರೆಸ್ಟ್ ಮಾಡಿದ್ದಾರೆ ನಕಲಿ ಹೆಂಡತಿ ಹುಲಿಗೆಮ್ಮಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಪ್ಪಳದ…

Read More

ಶಿವಮೊಗ್ಗ : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು, ಪುತ್ರಿಯನ್ನು ಮಚ್ಚಿನಿಂದ ಕೊಲೆ ಮಾಡಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಮಚ್ಚಿನಿಂದ ಕೊಚ್ಚಿ ತಾಯಿ ಸೂಸೈಡ್ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯ ಕ್ವಾಟರ್ಸ್ ನಲ್ಲಿ ಈ ಒಂದು ಘಟನೆ ನಡೆದಿದೆ. ಕೊಲೆ ಮಾಡಿ 36 ವರ್ಷದ ಶ್ರುತಿ ಪುತ್ರಿ ಪೂರ್ವಿಕಳನ್ನು (11) ಮಚ್ಚಿನಿಂದ ಕೊಂದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಮೊಗ್ಗದ ಶರಾವತಿ ನಗರದಲ್ಲಿ ಜಿಲ್ಲಾ ಆಸ್ಪತ್ರೆ ಕ್ವಾರ್ಟರ್ ನಲ್ಲಿ ಈ ಘಟನೆ ನಡೆದಿದ್ದು ಪತಿ ರಾಮಣ್ಣ ಕೆಲಸಕ್ಕೆ ತೆರಳಿದ್ದಾಗ ಪುತ್ರಿಯನ್ನು ಕೊಂದು ಶೃತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡ್ಯೂಟಿ ಮುಗಿಸಿ ರಾಮಣ್ಣ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಶೃತಿ ಮಾನಸಿಕ ಅಸ್ವಸ್ಥತೆ ಎಂದು ತಿಳಿದುಬಂದಿದೆ. ಈ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

Read More

ಚಾಮರಾಜನಗರ : ಕಳೆದ ಕೆಲವು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಮಾದಪ್ಪನ ಬೆಟ್ಟದಲ್ಲಿ 5 ಹುಲಿಗಳಿಗೆ ವಿಷ ಉಣಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿತ್ತು, ಇದೀಗ ಆ ಮತ್ತೊಂದು ಘಟನೆ ವರದಿಯಾಗಿದ್ದು, ಮಾದಪ್ಪನ ಬೆಟ್ಟದಲ್ಲಿ ಹುಲಿಯ ಅರ್ಧ ಕಳೆಬರ ಪತ್ತೆ ಆಗಿರುವ ಘಟನೆ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದ ಪಚೆದೊಡ್ಡಿ ಗ್ರಾಮದ ಹತ್ತಿರ ಹುಲಿಯ ಅರ್ಧ ಕಳೆಬರಹ ಪತ್ತೆಯಾಗಿದೆ. ಹುಲಿಯ ಅರ್ಧ ಕಳೆಬರ ಹುದಗಿಸಿಟ್ಟಿದ್ದು ಪತ್ತೆಯಾಗಿದೆ. ಹುಲಿಯ ತಲೆ, ಭುಜ ಮುಂಗಾಲುಗಳು ಮಾತ್ರ ಪತ್ತೆಯಾಗಿದ್ದು, ಉಳಿದ ಭಾಗಗಳು ನಾಪತ್ತೆಯಾಗಿವೆ. ಈ ಕುರಿತು ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಹುಲಿಯ ಕಳ್ಳ ಬೇಟೆ ಆಡಿರುವ ಬಗ್ಗೆ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ. ಇನ್ನು ಹುಲಿ ನಿಗೂಢ ಸಾವಿನ ತನಿಖೆಗೆ ಈಶ್ವರ ಖಂಡ್ರೆ ಆದೇಶ ನೀಡಿದ್ದಾರೆ. ಪಿಸಿಸಿಎಫ್ ಸ್ಮಿತಾ ಬಿಜ್ಜುರು ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ. ಎಂಟು ದಿನಗಳಲ್ಲಿ ಘಟನೆ ಕುರಿತು ವರದಿ ಸಲ್ಲಿಸುವಂತೆ ಈಶ್ವರ ಖಂಡ್ರೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಹುಲಿ ಹಂತಕರನ್ನು ಪತ್ತೆ…

Read More

ಶಿವಮೊಗ್ಗ : ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು ಆರಂಭದಲ್ಲಿ ಸರ್ವರ್ ಹಾಗೂ ಕೆಲವು ತಾಂತ್ರಿಕ ದೋಷಗಳು ಕಂಡು ಬಂದು ಸಮೀಕ್ಷೆ ಕುಂಟಿತವಾಗಿತ್ತು ಇದೀಗ ರಾಜ್ಯದಲ್ಲಿ 56 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜಾತಿ ಜಾತಿ ನಡುವೆ ಬೆಂಕಿ ಹಚ್ಚುತ್ತಿದ್ದಾರೆ ಎನ್ನುವ ಆರೋಪದ ವಿಚಾರವಾಗಿ ಬಿಜೆಪಿ ನಾಯಕರಿಗೆ ಈ ರೀತಿ ಹೇಳೋದಕ್ಕೆ ನಾಚಿಕೆ ಆಗಬೇಕು. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಜಾತಿಗಣತಿ ವಿರೋಧಿಸುತ್ತಿದ್ದಾರೆ. ಈಗ ಶೇಕಡ 56 ರಷ್ಟು ಸಮೀಕ್ಷೆ ಆಗಿದೆ ಎಂದು ಸ್ಪಷ್ಟಪಡಿಸಿದರು. ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯಶಸ್ವಿ ಆಗಲಿದೆ. ಪ್ರಣಾಳಿಕೆಯಲ್ಲಿ ಜಾತಿ ಗಣತಿ ಮಾಡುವುದಾಗಿ ಉಲ್ಲೇಖ ಮಾಡಿದ್ದೆವು. ಯಡಿಯೂರಪ್ಪರಿಂದಲೇ ಜಾತಿಗಳ ನಡುವೆ ಭೇದ ಭಾವ ಆಗಿದ್ದು ಬಿ.ವೈ ವಿಜಯೇಂದ್ರ ಹಿಂದುಳಿದ ವರ್ಗದವರ ಅಭಿವೃದ್ಧಿ ಬೇಡವಾಗಿದೆ ಎಂದು ಶಿವಮೊಗ್ಗದಲ್ಲಿ ಬಿವೈ ವಿಜಯೇಂದ್ರ ವಿರುದ್ಧ…

Read More

ಬೆಂಗಳೂರು : ಬೆಂಗಳೂರಲ್ಲಿ ಗಣೇಶ ಉತ್ಸವ ವೇಳೆ ಬೆಚ್ಚಿ ಬೀಳಿಸಿದ್ದ ಸರಗಳ್ಳನನ್ನ ಇದೀಗ ಅರೆಸ್ಟ್ ಮಾಡಲಾಗಿದೆ. ಸರಗಳ್ಳ ಕೆಂಗೇರಿಯ ಪ್ರವೀಣನ್ನು ಇದೀಗ ಗಿರಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಮನಗರ ಮೂಲದ ಮತ್ತೋರ್ವ ಕಳ್ಳ ಯೋಗಾನಂದಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 14ರ ರಾತ್ರಿ 5 ಕಡೆ ಪ್ರವೀಣ್ ಮತ್ತು ಯೋಗಾನಂದ ಸರಗಳು ತರ ಮಾಡಿದ್ದರು. ಗಿರಿನಗರ, ಹನುಮಂತನಗರ ಕೋಣನಕುಂಟೆಯಲ್ಲಿ ಸರಗಳ್ಳತನ ಮಾಡಿದ್ದರು. ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು ದುಷ್ಟರು ಸರಗಳ್ಳತನ ಮಾಡಿದ್ದರು. ಈ ವೇಳೆ ಮಹಿಳೆ ಒಬ್ಬರು ವಿರೋಧ ವ್ಯಕ್ತಪಡಿಸಿದಕ್ಕೆ ಮಹಿಳೆ ಮೇಲೆ ಲಾಂಗ್ ಬೀಸಿದ್ದರು. ಸರಗಳ ಲಾಂಗ್ ಏಟಿಗೆ ಮಹಿಳೆಯ ಕೈಬೆರಳು ತುಂಡಾಗಿದ್ದವು. ಇದೀಗ ಗಿರಿನಗರಠಾಣೆ ಪೊಲೀಸರು ಪ್ರವೀಣ್ ನನ್ನ ಅರೆಸ್ಟ್ ಮಾಡಲಾಗಿದೆ. ಪ್ರವೀಣ್ ಅನ್ನು ಬಂಧಿಸುತ್ತಿದ್ದಂತೆ ಯೋಗಾನಂದ ಪರಾರಿ ಆಗಿದ್ದಾನೆ. ಸೆಂಟ್ರಲ್ ರೈಲಿನಲ್ಲಿ ಪ್ರವೀಣ್ ಮತ್ತು ಯೋಗಾನಂದ ಪರಸ್ಪರ ಪರಿಚಯವಾಗಿದ್ದಾರೆ. ಜೈಲಿನಿಂದ ಹೊರಬಂದ ನಂತರವೂ ಇಬ್ಬರೂ ಸರಗೊಳ್ಳತನ ಮುಂದುವರಿಸಿದರು.

Read More

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಸೈಕೋ ಪಾತ್ ಪತಿರಾಯ ಒಬ್ಬ ಬೆಡ್ ರೂಮ್ನಲ್ಲಿ ಸೀಕ್ರೆಟ್ ಕ್ಯಾಮರಾ ಫಿಕ್ಸ್ ಮಾಡಿದ್ದಾನೆ. ಅಲ್ಲದೇ ಪತ್ನಿ ಜೊತೆಗೆ ಲೈಂಗಿಕ ಕ್ರಿಯೆ ರೆಕಾರ್ಡ್ ಮಾಡಿದ ಈ ಪಾಪಿ ಪತಿಯ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ಸಯ್ಯದ್ ಇನಾಮುಲ್ ಹಕ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ. ಖಾಸಗಿ ವಿಡಿಯೋ ಇಟ್ಟುಕೊಂಡು ಪತ್ನಿಗೆ ಸಯ್ಯದ್ ಬ್ಲಾಕ್ ಮೇಲ್ ಮಾಡುತ್ತಿದ್ದ. ಸ್ನೇಹಿತರೊಂದಿಗೆ ಮಲಗುವಂತೆ ಆತ ಒತ್ತಾಯ ಮಾಡುತ್ತಿದ್ದ ಅಲ್ಲದೆ ಪತ್ನಿಯ ಖಾಸಗಿ ವಿಡಿಯೋವನ್ನು ತನ್ನ ಸ್ನೇಹಿತರಿಗೂ ಕೂಡ ಹಂಚಿದ ಆರೋಪ ಕೇಳಿ ಬಂದಿದೆ. ದುಬೈನಲ್ಲಿರುವ ತನ್ನ ಸ್ನೇಹಿತರಿಗೆ ಫೋಟೋ ಮತ್ತು ವಿಡಿಯೋಗಳನ್ನು ಈತ ಶೇರ್ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸೈಯದ್ ಮಹಿಳೆಯನ್ನು ಮದುವೆಯಾಗಿದ್ದ. ಆದರೆ ಈ ಮದುವೆ ಮೊದಲೇ ಈಗಾಗಲೇ ಆತನಿಗೆ ಮದುವೆ ಆಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಮೊದಲನೇ ಮದುವೆ ಆಗಿದ್ದು ತಿಳಿಸದೆ ಎರಡನೇ…

Read More

ನಾಳೆ, ಗುರುವಾರ, ಅಕ್ಟೋಬರ್ 2, ಗುರುವರಾಯ ವಿಜಯದಶಮಿ. ಇದರ ಜೊತೆಗೆ, ಈ ದಿನದಂದು, ಪೆರುಮಾಳ್‌ಗೆ ಸೇರಿದ ತಿರುವೋಣ ನಕ್ಷತ್ರವೂ ಬರುತ್ತದೆ. ಇದೇ ದಿನದಂದು, ಅತ್ಯಂತ ಶಕ್ತಿಶಾಲಿ ಅಭಿಜಿತ್ ನಕ್ಷತ್ರ ಸಮಯವೂ ಬರುತ್ತದೆ. ಈ ಶಕ್ತಿಶಾಲಿ ದಿನದಂದು, ಈ ಶಕ್ತಿಶಾಲಿ 24 ನಿಮಿಷಗಳಲ್ಲಿ, ನಾವು ಈ ವಿಶ್ವಕ್ಕೆ ಮಾಡುವ ಯಾವುದೇ ಪ್ರಾರ್ಥನೆಯೂ ಈಡೇರುತ್ತದೆ. ನಿಮ್ಮ ಜೀವನದ ಕಷ್ಟಗಳು ದೂರವಾಗುತ್ತವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ,…

Read More