Subscribe to Updates
Get the latest creative news from FooBar about art, design and business.
Author: kannadanewsnow05
ಶಾಸ್ತ್ರಾನುಸಾರ ಪ್ರಾಕ್ ಶಿರಾ ಶಯನೇ ವಿಂದ್ಯಾತ್ ಧನಮಾಯುಶ್ಚ ದಕ್ಷಿಣೇ | ಪಶ್ಚಿಮೇ ಪ್ರಬಲಾ ಚಿಂತಾ ಹಾನಿಮೃತ್ಯುರಥೋತ್ತರೇ || ಪೂರ್ವಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಧನ ಪ್ರಾಪ್ತಿಯಾಗುವುದು.ಲೌಕಿಕ ಐಶ್ವರ್ಯ ಬಯಸಿದರೆ ಆ ಪ್ರಕಾರ ಸಂಕಲ್ಪ ಮಾಡಿಕೊಂಡು ಪೂರ್ವಕ್ಕೆ ನಿತ್ಯ ರಾತ್ರಿಯಲ್ಲಿ ಮಲಗುವಾಗ ತಲೆಯನ್ನು ಹಾಕಬಹುದು. ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಆಯುಸ್ಸು, ಮಾನಸಿಕ ನೆಮ್ಮದಿ, ಶಾಂತಿ ಹೆಚ್ಚುತ್ತದೆ. ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ, ಪ್ರಬಲವಾದ ಚಿಂತೆಗಳು ಯಾವಾಗಲೂ ಎಲ್ಲಾ ವಿಭಾಗಗಳಲ್ಲಿಯೂ ಬರುತ್ತಲೇ ಇರುತ್ತವೆ. ಉತ್ತರಕ್ಕೆ ತಲೆ ಇಟ್ಟು ಮಲಗಿದರೆ,ಧನ ನಷ್ಟ ಮತ್ತು ಮರಣ ಸಂಭವಿಸುತ್ತದೆ, ಅಂದರೆ ಆಯುಷ್ಯ ಹಾನಿಯಾಗುತ್ತದೆ. ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕು. ಆರೋಗ್ಯಂ ಭಾಸ್ಕರಾದಿಚ್ಛೇತ್, ಸೂರ್ಯನಿಂದ ಆರೊಗ್ಯವನ್ನು ಬಯಸಿ, ಎಂಬುದು ಸ್ಮೃತಿ ವಾಕ್ಯ. ಸೂರ್ಯನು ಐಶ್ವರ್ಯಕ್ಕೆ, ಆರೋಗ್ಯಕ್ಕೆ ಪ್ರಧಾನ ದೇವತೆ. ಪೂರ್ವಕ್ಕೆ ತಲೆ ಮಾಡಿ ಮಲಗಿದರೆ, ಐಶ್ವರ್ಯ ಮತ್ತು ಆರೋಗ್ಯ ಸಿದ್ಧಿಸುತ್ತದೆ. ದಕ್ಷಿಣವು ಪಿತೃದೇವತೆಗಳು ಮತ್ತು ಯಮನ ದಿಕ್ಕು. ದಕ್ಷಿಣಕ್ಕೆ ತಲೆಮಾಡಿ ಮಲಗಿದರೆ ಆಯುಸ್ಸು ವೃದ್ಧಿಯಾಗುತ್ತದೆ. ಪಶ್ಚಿಮಕ್ಕೆ ತಲೆ ಇಟ್ಟು…
ಚಿಕ್ಕಬಳ್ಳಾಪುರ : ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿದೆ. ಹೀಗಾಗಿ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವಂತ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಕಳೆದ ರಾತ್ರಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯಾಘಾತ ಉಂಟಾಗಿದೆ. ಡ್ಯಾನ್ಸ್ ಮಾಡುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್ ನಿಂದಾಗಿ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬೋದಗೂರು ಗ್ರಾಮದಲ್ಲಿ 40 ವರ್ಷದ ಲಕ್ಷ್ಮೀಪತಿ ಎಂಬಾತ ಡ್ಯಾನ್ಸ್ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಮೈಸೂರು : ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಹಿನ್ನೆಲೆಯಲ್ಲಿ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮೈಸೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆ 10 ನಿಮಿಷಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಲ್ಲಿದ್ದಾರೆ.ಮಧ್ಯಾಹ್ನ 3:45 ಕ್ಕೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಯಾರ್ಡಿಸನ್ ಬ್ಲೂ ಹೋಟೆಲ್ ಗೆ ದ್ರೌಪದಿ ಮುರ್ಮು ಭೇಟಿ ನೀಡಲಿದ್ದಾರೆ. ಬಳಿಕ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದು ಇಂದು ರಾತ್ರಿ ಯಾರ್ಡಿಸನ್ ಬ್ಲೂ ಹೋಟೆಲಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 8:50ಕ್ಕೆ ಮೈಸೂರು ಅರಮನೆಗೆ ಭೇಟಿ ನೀಡಲಿದ್ದು ಅರಮನೆಯಲ್ಲಿ ರಾಜಾತಿಥ್ಯ ಸ್ವೀಕರಿಸಿ ಉಪಹಾರ ಸೇವಿಸಲಿದ್ದಾರೆ.ನಂತರ ಅರಮನೆ ವೀಕ್ಷಣೆ ಮಾಡಲಿದ್ದಾರೆ ಅರಮನೆ ವೀಕ್ಷಣೆ ನಂತರ ಮೈಸೂರು ವಿಮಾನ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಲಿದ್ದು ಬೆಳಿಗ್ಗೆ 10:30 ಕ್ಕೆ ಚೆನ್ನೈಗೆ ತೆರಳಲಿದ್ದಾರೆ.
ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ವೇಳೆ ನಾನು ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಎರಡು ಕೋಟಿ ರೂಪಾಯಿ ಸಾಲ ನೀಡಿದ್ದು ನಿಜ ಎಂದು ಹೇಳಿಕೆ ದಾಖಲಿಸಿದ್ದಾರೆ. ಎರಡು ಕೋಟಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ವಿಚಾರಣೆಗೆ ಒಳಪಟ್ಟಿದ್ದು ಚಿತ್ರ ನಿರ್ಮಾಣದಿಂದ ಬಂದ ಹಣದಿಂದ ಜಮೀರ್ ಅಹ್ಮದ್ಗೆ ನೆರವು ನೀಡಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳ ತನಿಖೆಯ ವೇಳೆ ಹಣಕಾಸು ವ್ಯವಹಾರ ಬೆಳಕಿಗೆ ಬಂದಿದೆ ಈ ಬಗ್ಗೆ ವಿವರಣೆ ನೀಡುವಂತೆ ಲೋಕಾಯುಕ್ತ ನೋಟಿಸ್ ನೀಡಿದೆ ನೋಟಿಸ್ ಹಿನ್ನೆಲೆ ಕಳೆದ ವಾರ ರಾಧಿಕಾ ಕುಮಾರಸ್ವಾಮಿ ವಿಚಾರಣೆಗೆ ಹಾಜರಾಗಿದ್ದರು.ಹಣಕಾಸು ವ್ಯವಹಾರದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿಕೆ ದಾಖಲಿಸಿದ್ದಾರೆ.
ಬೆಂಗಳೂರು : ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಇರುವುದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಹೆಚ್ಚಿನ ಪ್ರಮಾಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಸೆ.1 ಮತ್ತು ಸೆ.4 ರಿಂದ 6 ರವರೆಗೆ ಯೆಲ್ಲೋ ಅಲರ್ಟ್, ಸೆ.2 ಮತ್ತು 3 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಕಲಬುರ್ಗಿ : ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಿಂದ ಒಂದು ಕಾಲು ಹೊರಗಿಟ್ಟಿದ್ದು, ಬಿಜೆಪಿ ಸಹಕಾರದೊಂದಿಗೆ ಸರ್ಕಾರ ರಚಿಸಲು ಮುಂದಾಗಿದ್ದರು ಎಂಬುದಾಗಿ ಶಾಸಕ ಬಸಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಸದ್ಯ ಡಿಕೆ ಶಿವಕುಮಾರ್ ಒಂದು ಕಾಲು ಕಾಂಗ್ರೆಸ್ ನಲ್ಲಿದೆ. ಇನ್ನೊಂದು ಕಾಲು ಬಿಜೆಪಿಯಲ್ಲಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೊಂದಿಗೆ ರಹಸ್ಯ ಸಭೆಯನ್ನು ನಡೆಸಿದ್ದರು.ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆಗೆ ಮುಂದಾಗಿದ್ದರು ಎಂದರು. ಡಿ.ಕೆ ಶಿವಕುಮಾರ್, ವಿಜಯೇಂದ್ರ ಮಾತುಕತೆಯ ಸಂದರ್ಭದಲ್ಲಿ ಡಿಕೆಶಿ ಮುಖ್ಯಮಂತ್ರಿ, ವಿಜಯೇಂದ್ರ ಉಪಮುಖ್ಯಮಂತ್ರಿ ಆಗುವಂತೆ ಚರ್ಚೆ ನಡೆದಿತ್ತು. ಆದರೇ ಡಿಕೆ ಶಿವಕುಮಾರ್ ಅವರ ಹಿಂದೆ ಹೆಚ್ಚಿನ ಸಂಖ್ಯೆಯ ಶಾಸಕರು ಇರಲಿಲ್ಲ. ಹೀಗಾಗಿ ಸುಮ್ಮನಾಗಿದ್ದಾರೆ ಎಂಬುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಂಬೈ: ಗೋವಿನ ಮಾಂಸ ಸೇವನೆ ಇಸ್ಲಾಂ ನಲ್ಲಿ ನಿಷಿದ್ದ. ನಮ್ಮ ಕುಟುಂಬದಲ್ಲಿ ಯಾರೂ ಗೋಮಾಂಸ ಸೇವಿಸುವುದಿಲ್ಲ ಎಂದು ಖ್ಯಾತ ನಟ ಸಲ್ಮಾನ್ ಖಾನ್ರ ತಂದೆ ಸಲೀಂ ಖಾನ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಸಲೀಂ ಖಾನ್, ‘ಪ್ರವಾದಿ ಮೊಹಮ್ಮದರು ತಮ್ಮ ಪಾಠದಲ್ಲಿ ಗೋವಿನ ಹಾಲು ತಾಯಿಯ ಹಾಲಿನಷ್ಟೇ ಪವಿತ್ರ ಎಂದು ಸ್ಪಷ್ಟವಾಗಿ ಹಾಲಿನಷ್ಟೇ ತಿಳಿಸಿದ್ದಾರೆ. ಗೋವನ್ನು ಕೊಲ್ಲಬಾರದು, ಗೋಮಾಂಸ ನಿಷೇಧ ಎಂದು ಅವರು ಪ್ರತಿಪಾದಿಸಿದ್ದಾರೆ. ಆದರೂ ಕೆಲ ಮುಸ್ಲಿಮರು ಅದು ಕಡಿಮೆ ಬೆಲೆಗೆ ಸಿಗುವ ಮಾಂಸ ಎಂದು ಬಳಸುತ್ತಾರೆ. ಆದರೆ ನಾನಾಗಲೀ ನಮ್ಮ ಕುಟುಂಬದ ಸದಸ್ಯರಾಗಲೀ ಎಂದಿಗೂ ಗೋವಿನ ಮಾಂಸ ಸೇವಿಸಿಲ್ಲ ಎಂದು ಹೇಳಿದ್ದಾರೆ. ನಾವು ಬಾಲ್ಯದಿಂದಲೂ ಹಿಂದೂಗಳ ಒಡನಾಟದಲ್ಲಿಯೇ ಬೆಳೆದಿದ್ದೇವೆ. ನಾವು ಹಿಂದೂಗಳು ಆಚರಿಸುವ ಹಬ್ಬಗಳನ್ನು ಆಚರಿಸು ತ್ತೇವೆ. ಸಲ್ಮಾ ಖಾನ್ (ಹಿಂದಿನ ಹೆಸರು ಸುಶೀಲಾ ಚರಕ್) ಜತೆ ವಿವಾಹವಾದಾಗ ನಮ್ಮ ಮನೆಯವರ ಅಭ್ಯಂ ತರವಿರಲಿಲ್ಲ. ನಮ್ಮ ಮಾವ ನನ್ನ ಶಿಕ್ಷಣದ ಬಗ್ಗೆ ಗೌರವ ಹೊಂದಿದ್ದರು. ನಾನು ಯಾವುದೇ…
ಬೆಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳ ಸತ್ಯ ಯಾತ್ರೆ ನಡೆಸಲಾಗಿತ್ತು. ಇದೀಗ ಇಂದು ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಧರ್ಮಸ್ಥಳದಲ್ಲಿ ಸುಮಾರು ಅರ್ಧ ಕಿಲೋಮೀಟರ್ ವರೆಗೂ ಪಾದಯಾತ್ರೆ ನಡೆಸಿ ಬಳಿಕ ಮಧ್ಯಾಹ್ನ 2 ರಿಂದ 4.30 ವರೆಗೆ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಹೌದು ಇಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಮಧ್ಯಾಹ್ನ ಧರ್ಮಸ್ಥಳದಲ್ಲಿ ಬಿಜೆಪಿ ನಾಯಕರಿಂದ ಪಾದಯಾತ್ರೆ ನಡೆಯಲಿದೆ. ಅರ್ಧ ಕಿಲೋಮೀಟರ್ ವರೆಗೂ ಪಾದಯಾತ್ರೆ ನಡೆಸಿದ ಬಳಿಕ ಬೃಹತ್ ಸಮಾವೇಶ ಮಾಡಲಿದ್ದಾರೆ. ಧರ್ಮಸ್ಥಳದಲ್ಲಿ ಎಸ್ ಡಿ ಎಮ್ ಕಾಲೇಜ್ ಮೈದಾನದಲ್ಲಿ ಈ ಒಂದು ಸಮಾವೇಶ ನಡೆಯಲಿದೆ ಇಂದು ಮಧ್ಯಾಹ್ನ 2 ರಿಂದ ಸಂಜೆ 4:30ರ ವರೆಗೆ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಸದಾನಂದ…
ಮೈಸೂರು : ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದರಿಂದ ರಾಜ್ಯಕ್ಕೆ ಪ್ರತಿ ವರ್ಷ 15 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಭಾನು ವಾರ ಸುದ್ದಿಗಾರರ ಜೊತೆ ಅವರು ಮಾತ್ರ ನಾಡಿದರು. ಜಿಎಸ್ಟಿ ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದ ರಿಂದ ರಾಜ್ಯಕ್ಕೆ 15 ಸಾವಿರ ಕೋಟಿ ನಷ್ಟ ವಾಗಲಿದೆ ಎಂದು ಅಂದಾಜಿಸಲಾಗಿದೆ. 8 ರಾಜ್ಯಗಳು ಸೇರಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಹೀಗಾ ಗಿ, ರಾಜ್ಯಗಳಿಗೆ ಆಗುವ ಈ ನಷ್ಟವನ್ನು ಕೇಂದ್ರ ಸರ್ಕಾರ S ವರ್ಷಗಳವರೆಗೆ ಭರಿಸ ಬೇಕೆಂದು ಆಗ್ರಹಿಸಿದರು. 2017ರಲ್ಲಿ ಜಿಎಸ್ಟಿ ಮಾ ಡಿದಾಗ 5 ವರ್ಷ ಮಾತ್ರ ಪರಿಹಾರ ಕೊಡ ಲಾಯಿತು. ಅಂದಿಗಿಂತ ಇಂದು ಶೇ.12 ರಿಂದ 13ರಷ್ಟು ಹೆಚ್ಚಿನ ತೆರಿಗೆ ಸಂಗ್ರಹವಾ ಗುತ್ತದೆ. ಅದನ್ನು ರಾಜ್ಯಗಳಿಗೆ ಕೊಡಲಿ ಎಂದು ಆಗ್ರಹಿಸುತ್ತಿದ್ದೇವೆ. ಸಿಗರೇಟ್, ಗುಟ್ಕಾ, ಪಾನ್ ಮಸಾಲ…
ಉತ್ತರಕನ್ನಡ : ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರು ಆಹಾರದ ವಿಚಾರವಾಗಿ ಬಹಳ ಪದ್ಧತಿ ಅನುಸರಿಸುತ್ತಿದ್ದರು ಹೇಗೆ ಕುಳಿತುಕೊಂಡು ಊಟ ಮಾಡಬೇಕು ಯಾವ ರೀತಿ ತಿನ್ನಬೇಕು ಬಾಯಲ್ಲಿ ಎಷ್ಟು ಸಲ ಅನ್ನ ಅಗಿಯಬೇಕು ಎನ್ನುವುದರ ಕುರಿತು ಸಂಪೂರ್ಣವಾಗಿ ಹೇಳಿದ್ದಾರೆ. ಆದರೆ ಇಂದಿನ ವೇಗದ ಜಗತ್ತಿನಲ್ಲಿ ಜನಕ್ಕೆ ತಿನ್ನೋದು ಬಿಡಿ ನೀರು ಕುಡಿಯೋಕು ಸಹ ಸಮಯ ಇಲ್ಲ ಇದೀಗ ಉತ್ತರ ಕನ್ನಡದಲ್ಲಿ ಊಟ ಮಾಡುವಾಗ ಅನ್ನದ ಅಗಳು ಗಂಟಲಲ್ಲಿ ಸಿಲುಕಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಹೌದು ಅನ್ನದ ಅಗಳು ಗಂಟಲಿಗೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಬಿಣಗಾ ಗ್ರಾಮದಲ್ಲಿ ಅಮಿತ್ ಮಾಳಸೇರ (38) ಎನ್ನುವ ಯುವಕ ಗಂಟಲಲ್ಲಿ ಅನ್ನ ಸಿಲುಕಿ ಸಾವನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದ ನಿವಾಸಿಯಾಗಿದ್ದು ಅನ್ನ ಗಂಟಲಿನಲ್ಲಿ ಸಿಲುಕಿಕೊಂಡು ಅಮಿತ್ ತೀವ್ರ ನರಳಾಡಿದ್ದ ಮನೆಯವರು ನೀರು ಕುಡಿಸಿದ ತಕ್ಷಣ ಕುಸಿದು ಬಿದ್ದಿದ್ದ. ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನಪ್ಪಿದ್ದಾನೆ. ಘಟನೆ ಕುರಿತು ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












