Subscribe to Updates
Get the latest creative news from FooBar about art, design and business.
Author: kannadanewsnow05
ಕೊಪ್ಪಳ : ಶಾಲಾ ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡಿದರೆ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೀಡುತ್ತೇನೆ ಎಂದು ಗ್ರಾಮಸ್ಥರಿಗೆ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೀಗೆ ಒಂದು ಆಫರ್ ನೀಡಿದ್ದಾರೆ. ಪ್ರತೀ ಎಕರೆಗೆ ರೂ. 1 ಲಕ್ಷ ನೀಡುವುದಾಗಿ ಬಸವರಾಜ ರಾಯರೆಡ್ಡಿ ಆಫರ್ ನೀಡಿದ್ದಾರೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡಬೇಕು ಎಂದು ಬಸವರಾಜ್ ರೆಡ್ಡಿ ಮನವಿ ಮಾಡಿದ್ದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲಿಗುಡ್ಡ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ. ಕುಕನೂರ ತಾಲೂಕಿನ ನೆಲಜೇರಿ ಸೋಂಪುರದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಎರಡು ಕೋಟಿ ರೂಪಾಯಿ ಮಂಜೂರಾಗಿದೆ. ಆದರೆ ಜಮೀನು ಲಭ್ಯವಿರದ ಕಾರಣ ಕಟ್ಟಡ ಪ್ರಾರಂಭ ಮಾಡಲು ಆಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗ್ರಾಮಸ್ಥರು ಜಮೀನು ನೀಡಬೇಕು ಸರಕಾರ ಪ್ರತ್ಯೇಕವಾಗಿ ಅಂದಾಜು ಆರರಿಂದ ಏಳು ಲಕ್ಷ ರೂಪಾಯಿ ನೀಡುತ್ತದೆ. ನಾನು ಕೂಡ ವಯಕ್ತಿಕವಾಗಿ ಒಂದು ಲಕ್ಷ ನೀಡುತ್ತೇನೆ. ಕೂಡಲೇ ಗ್ರಾಮಸ್ಥರು ಜಮೀನು ನೀಡಬೇಕು…
ಮಂಡ್ಯ : ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಈ ಒಂದು ಘಟನೆ ನಡೆದಿದ್ದು ನೇಣು ಬಿಗಿದುಕೊಂಡು ಶಂಕುತಲಾದೇವಿ (46) ಪ್ರಿಯಾಂಕ (19) ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಿಯಾಂಕಾಳ ಮದುವೆಗೆ ಕುಟುಂಬದ ಸದಸ್ಯರು ಸಿದ್ಧತೆ ನಡೆಸಿದರು ಮದುವೆ ಸಿದ್ಧತೆ ನಡುವೆ ತಾಯಿ ಮತ್ತು ಮಗಳು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ವಿರೋಧಿಸಿ ಇಂದು ಬೆಂಗಳೂರಿನ ಅರವಿ ರೋಡ್ ಮೆಟ್ರೋಲ್ ನಿಲ್ದಾಣದ ಬಳಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾಲಿ ಟ್ರಂಕ್ ಸರ್ಕಾರ ಎಂದು ವಿನೂತನ ಪ್ರತಿಭಟನೆ ಮಾಡಿದರು. ಹೌದು ಖಾಲಿ ಟ್ರಂಕ್ ಹಿಡಿದು ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಟ್ರಂಕ್ ಮೇಲೆ ಪೋಸ್ಟರ್ ಅಂಟಿಸಿದ್ದಾರೆ ಖಾಲಿ ಟ್ರಂಕ್ ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಫೋಟೋ ಹಾಕಿ ಪ್ರದರ್ಶಿಸಿದರು. ಬೆಂಗಳೂರಿನ ಆರ್ ವಿ ರೋಡ್ ಮೆಟ್ರೋನ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಆರ್ ವಿ ರೋಡ್ ಮೆಟ್ರೋ ನಿಲ್ದಾಣದ ಬಳಿ ಹೈಡ್ರಾಮಾ ನಡೆಸಿದ್ದು ತೇಜಸ್ವಿ ಸೂರ್ಯನನ್ನು ವಶಕ್ಕೆ ಪಡೆದು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಜೊತೆಗೆ ಸಂಸದ ತೇಜಸ್ವಿ ಸೂರ್ಯ ವಾಗ್ವಾದ ನಡೆಸಿದ್ದಾರೆ. ಏಕೆಂದರೆ ಆರ್ ವಿ ರೋಡ್ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಿ ಸಂಸದ ತೇಜಸ್ವಿ ಸೂರ್ಯಗೆ…
ಮೈಸೂರು : ಕಾರ್ ರೇಸ್ ನಲ್ಲಿ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಆಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಳಿಮಾವು ಎಂಬಲ್ಲಿ ನಡೆದಿದೆ. ಹುಳಿಮಾವು ಸಮೀಪದ ಫಿಲ್ಮಿ ಸಿಟಿ ಬಳಿ ಆಯೋಜಿಸಿದ ಕಾರು ರೇಸ್ ನಲ್ಲಿ ನಿಯಂತ್ರಣ ಕಳೆದುಕೊಂಡು ಕಾರು ಪಲ್ಟಿಯಾಗಿದೆ. ಖಾಸಗಿ ಸಂಸ್ಥೆಯೊಂದು ಕಾರು ರೇಸ್ ಆಯೋಜನೆ ಮಾಡಿತ್ತು. ರೇಸ್ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಪ್ರಜ್ವಲ್ ಕೈಗೆ ಗಂಭೀರವಾದ ಗಾಯವಾಗಿದೆ. ಇನ್ನು ಘಟನೆ ಕುರಿತು ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಬೀದರ್ : ನಿನ್ನೆ ರಾತ್ರಿ ಬೀದರ್ ನಲ್ಲಿ ಭೀಕರ ಅಪಘಾತವಾಗಿದ್ದು, ರಸ್ತೆ ಬದಿಯ ಸೇತುವೆಗೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಹಾಗೂ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮಗ ಗಂಭೀರ ಗಾಯಗೊಂಡ ದಾರುಣ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್(ಬಿ) ಪಟ್ಟಣದ ಬಳಿ ಭಾನುವಾರ ಸಂಜೆ ಸಂಭವಿಸಿದೆ. ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ವೆಂಕಟ್ ರಾಮರಾವ (40), ಅವರ ಪತ್ನಿ ಶಿಲ್ಪಾ (35) ಹಾಗೂ ಮಗಳು ರಕ್ಷಿತಾ (11) ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಗ ರತ್ನಜೀತ (15) ನಿಗೆ ಗಂಭೀರ ಗಾಯಗಳಾಗಿವೆ. ಆತನಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶ : ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲಬೆರಕೆ ಬಗ್ಗೆ ಮಾಹಿತಿ ಇದ್ದರೂ ಕೂಡ ಟಿಟಿಡಿ ಯಿಂದ ತುಪ್ಪ ಖರೀದಿಸಲಾಗುತ್ತಿತ್ತು ಎಂದು ಸಿಬಿಐ ಸಲ್ಲಿಸಿದ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೌದು ಕಳೆದ 2019 ರಿಂದ 2024 ರ ಅವಧಿಯಲ್ಲಿ ಕಲಬೆರಕೆ ತುಪ್ಪ ಬಳಕೆ ಆಗಿರುವುದು ಇದೀಗ ಪತ್ತೆಯಾಗಿದೆ. ರಾಸಾಯನಿಕಯುಕ್ತ ಬಳಕೆಯಾಗಿರುವುದು ಲ್ಯಾಬ್ ಪರೀಕ್ಷೆಯಲ್ಲಿ ಬಯಲಾಗಿದೆ. ಮೈಸೂರಿನ CFTRI (ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ) ಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕಲಬೆರಕೆ ತುಪ್ಪ ಬಳಸಿರುವುದು ದೃಢಪಟ್ಟಿತ್ತು. ತುಪ್ಪದಲ್ಲಿ ಬೀಟ ಸೆಟೊಸ್ಟೆರಲ್ ಎಂಬ ಕೆಮಿಕಲ್ ಅಂಶ ಇರುವುದು ಪತ್ತೆಯಾಗಿದೆ.
ಶಿವಮೊಗ್ಗ : ನಗರದ ಸೈಬರ್ ಕ್ರೈಂ ಪೊಲೀಸರು ಬಹುದೊಡ್ಡ ಪ್ರಕರಣ ಭೇದಿಸಿದ್ದು, ಹವಾಲಾ ಹಣ ಸೇರಿ ಇನ್ನಿತರ ಅಕ್ರಮ ಚಟುವಟಿಕೆಗಳಿಗಾಗಿ ಬಳಕೆಯಾ ಗುತ್ತಿದ್ದ 19 ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚಿದ್ದಾರೆ. ಇದುವರೆಗೆ ಈ ಖಾತೆಯಲ್ಲಿ 55.43 ಕೋಟಿ ರೂ.ಗೂ ಹೆಚ್ಚು ವಂಚಿಸಿರುವುದು ಗಮನಕ್ಕೆ ಬಂದಿದೆ. ಶರತ್ ಅಲಿಯಾಸ್ ಗುಂಡ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ಬೇರೆಯವರ 19 ಖಾತೆಗಳನ್ನು ಬಳಸಿ ಐದು ತಿಂಗಳಲ್ಲಿ 55.43 ಕೋಟಿ ರೂ. ವಂಚನೆ ಮಾಡಿದ್ದು, ಅದಕ್ಕಾಗಿ 11.48 ಕೋಟಿ ರೂ.ಗೂ ಹೆಚ್ಚು ಕಮಿಷನ್ ಪಡೆದಿದ್ದಾನೆ. ಈ ಖಾತೆಗಳ ಮೇಲೆ 96 ಪ್ರಕರಣಗಳು ದಾಖಲಾಗಿವೆ. ಇಂಡಿಯನ್ ಓವರ್ಸಿಸ್ ಬ್ಯಾಂಕ್‌ನ ವಿನೋಬನಗರ ಶಾಖೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಗಣೇಶ್ ಟಿ ಅಂಗಡಿ ಹೆಸರಿನ ಖಾತೆ ತೆರೆದಿದ್ದ. ಅದರ ಪಾಸ್ ಬುಕ್, ಎಟಿಎಂ ಕಾರ್ಡ್ ಮತ್ತು ಖಾತೆಗೆ ಲಿಂಕ್ ಮಾಡಿಸಿರುವ ಮೊಬೈಲ್ ಸಂಖ್ಯೆಯನ್ನು ನೀಡಿದರೆ 15 ದಿನಗಳಿಗೊಮ್ಮ ಕಮಿಷನ್ ನೀಡುವುದಾಗಿ ಶರತ್ ನಂಬಿಸಿದ್ದ. ಈ ಕುರಿತು ವಿನೋಬನಗರ ಠಾಣೆಯಲ್ಲಿ ದಾಖಲಾದ…
ದಾವಣಗೆರೆ : ಇಂದು ರಾಜನಹಳ್ಳಿ ವಾಲ್ಮೀಕಿ ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ಹಿಂಡಲಿದ್ದಾರೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠಕ್ಕೆ ಭೇಟಿ ನೀಡಲಿದ್ದು ಮಧ್ಯಾಹ್ನ 12 15ಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ರಾಜನಹಳ್ಳಿ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಮಹರ್ಷಿ ವಾಲ್ಮೀಕಿ ಜಾತ್ರಾ 2026 ಜನ ಜಾಗೃತಿ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು ಇಂದು ವಾಲ್ಮೀಕಿ ಗುರುಪೀಠದಿಂದ ಇಬ್ಬರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ ನೇತ್ರತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಿಎಂ ಸಿದ್ದರಾಮಯ್ಯ ಇಬ್ಬರು ಸಾಧಕರಿಗೆ ಪ್ರಶಸ್ತಿ ಪ್ರಧಾನಿ ಮಾಡಲಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹನುಮಂತಪ್ಪ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರಧಾನಿ ಮಾಡಲಿದ್ದು, ಇನ್ನೂ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ ಅವರಿಗೆ ರಾಜ ವೀರಮದಕರಿ ನಾಯಕ ಪ್ರಶಸ್ತಿ ಪ್ರಧಾನಿ ಮಾಡಲಿದ್ದಾರೆ. ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಮಂಡಳಿ
ಉಡುಪಿ : ರಾಜ್ಯದಲ್ಲಿ ಒಂದು ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು ನಿವೃತ್ತ ಅಂಚಿನಲ್ಲಿ ಇರುವ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ್ದಾರೆ ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆಯೇ ಅವರ ರುಂಡ ಬೇರ್ಪಟ್ಟು ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ನಗರದ ಅಂಬಾಗಿಲು ವಾರ್ಡ್‌ನ ಕಕ್ಕುಂಜೆ ಪ್ರದೇಶದಲ್ಲಿ ಶನಿವಾರ ತಡರಾತ್ರಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಅವರ ರುಂಡ ಬೇರ್ಪಟ್ಟು ಹೃದಯವಿದ್ರಾವಕ ಘಟನೆ ನಡೆದಿದೆ. ಮೃತರನ್ನು ಪುರುಷೋತ್ತಮ ನಾಯಕ್ (52) ಎಂದು ಗುರುತಿಸಲಾಗಿದೆ. ಮೃತ ಪುರುಷೋತ್ತಮ ನಾಯಕ್ ಅವರು ತಮ್ಮ ಮನೆಯ ಬಾವಿಯಲ್ಲಿ ಹಗ್ಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ರುಂಡ ಬೇರ್ಪಟ್ಟ ಪರಿಣಾಮ ಬಾವಿಯ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರು ಅರ್ಚಕ ವಾಸುದೇವ ನಾಯಕ್ ಅವರ ದ್ವಿತೀಯ ಪುತ್ರರಾಗಿದ್ದಾರೆ. ಮೃತರು ಮಣಿಪಾಲದ ವ್ಯಾಲಿ ವ್ಯೂ ಹೊಟೇಲ್ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅವರು ನಿವೃತ್ತಿ ಅಂಚಿನಲ್ಲಿದ್ದರು.ಆರ್ಥಿಕ ಸಮಸ್ಯೆಯಿಂದ…
ಬೆಂಗಳೂರು : ಇಂದಿನಿಂದ 2 ದಿನಗಳ ಕಾಲ ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಶೃಂಗಸಭೆ ನಡೆಯಲಿದ್ದು, ಬಿಗ್ ಕ್ಯಾಟ್ ಶೃಂಗಸಭೆ ಹೆಸರಿನಲ್ಲಿ ಹುಲಿಗಳ ಕುರಿತಾದ ಸೆಮಿನಾರ್ ಆಯೋಜನೆ ಮಾಡಲಾಗಿದೆ. ಬಂಡಿಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿಯಿಂದ ಈ ಶೃಂಗಸಭೆ ಆಯೋಜನೆ ಮಾಡಲಾಗಿದೆ. ಈ ಒಂದು ಸಭೆಯಲ್ಲಿ ಬರೋಬ್ಬರಿ 23 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿಯೇ ಬಿಗ್ ಕ್ಯಾಟ್ ಶೃಂಗಸಭೆ ಹೊಸ ಇತಿಹಾಸ ಸೃಷ್ಟಿಸಲಿದೆ. ಅರ್ಮೆನಿಯ, ಭೂತಾನ್, ಕಾಂಗೋ, ಮೆಕ್ಸಿಕೋ ಕಿನ್ಯಾ ಹಾಗು ರಷ್ಯಾಸೇರಿದಂತೆ 23 ದೇಶಗಳ ಸಂಶೋಧಕರು ಈ ಒಂದು ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಶೃಂಗಸಭೆ ಕರ್ನಾಟಕದಲ್ಲಿ ನಡೆಯುತ್ತಿರುವುದು ಮಹತ್ವ ಪಡೆದಿದೆ. ದಕ್ಷಿಣ ಭಾರತದ ವನ್ಯಜೀವಿ ಸಂರಕ್ಷಣೆ ಹಾಗೂ ಅತಿ ಹೆಚ್ಚಾಗಿರುವ ಹುಲಿಗಳ ಬಗ್ಗೆ ಈ ಶೃಂಗಸಭೆಯಲ್ಲಿ ಜಾಗತಿಕ ಗಮನ ಸೆಳೆಯಲಿದೆ. ಫೆಬ್ರವರಿ 9 ಮತ್ತು 10 ರಂದು ಬಂಡಿಪುರದಲ್ಲಿ ಹಾಗೂ ಫೆಬ್ರವರಿ 11 ಮತ್ತು 13 ರಂದು ನಾಗರಹೊಳೆಯಲ್ಲಿ ಈ ಶೃಂಗಸಭೆ ನಡೆಯಲಿದೆ. ನಾಲ್ಕು ದಿನಗಳ ಶೃಂಗಸಭೆಯಲ್ಲಿ ಹುಲಿಗಳ…














