Subscribe to Updates
Get the latest creative news from FooBar about art, design and business.
Author: kannadanewsnow05
ಕೊಪ್ಪಳ : ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.ಇಂದು ಹೈಕೋರ್ಟ್ ಪ್ರತಾಪ್ ಸಿಂಹ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಶಿವರಾಜ್ ತಂಗಡಗಿ ಪ್ರತಾಪ್ ಸಿಂಹಗೆ ಬಿಜೆಪಿಯವರೇ ಟಿಕೆಟ್ ಕೊಟ್ಟಿಲ್ಲ ಟಿಕೆಟ್ ತಪ್ಪಿದೆ ಅಂದರೆ ಅವರ ಯೋಗ್ಯತೆ ಏನೆಂದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಬಾನು ಮುಷ್ತಾಕ್ ಕನ್ನಡದ ಹೆಮ್ಮೆ, ನಾಡಹಬ್ಬ ದಸರಾಗೆ ಎಲ್ಲಾ ಸಮುದಾಯದ ಜನರು ಬರುತ್ತಾರೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದ ದೇವೇಗೌಡರನ್ನು ಬಿಜೆಪಿ ಯಾಕೆ ತಮ್ಮ ಪಕ್ಷಕ್ಕೆ ಕರೆದುಕೊಂಡಿದೆ? ಪ್ರತಾಪ್ ಸಿಂಹಗೆ ಬಿಜೆಪಿಯವರೇ ಟಿಕೆಟ್ ಕೊಟ್ಟಿಲ್ಲ ಟಿಕೆಟ್ ತಪ್ಪಿದೆ ಅಂದರೆ ಅವರ ಯೋಗ್ಯತೆ ಏನೆಂದು ಗೊತ್ತಾಗುತ್ತದೆ. ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಬಿಜೆಪಿ ನಾಯಕರ ಮಕ್ಕಳೆಲ್ಲ ವಿದೇಶದಲ್ಲಿ ಇದ್ದಾರೆ. ಬಿಜೆಪಿಯವರು ಬಡವರ ಮಕ್ಕಳನ್ನು ಹೋರಾಟಕ್ಕೆ ಕಳುಹಿಸುತ್ತಾರೆ. ಬಿಜೆಪಿಯವರು ತಮ್ಮ ಮಕ್ಕಳ ಜೊತೆ ಹೋರಾಟಕ್ಕೆ ಬನ್ನಿ. ಭಾರತ ಪಾಕಿಸ್ತಾನ ಕ್ರಿಕೆಟ್…
ಬೆಂಗಳೂರು : ಕರ್ನಾಟಕ ಕೆರೆ ಸಂರಕ್ಷಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ವಾಪಸ್ ಕಳುಹಿಸಿದ್ದಾರೆ. ಕೆರೆ ವಿಸ್ತೀರ್ಣ ಅನುಗುಣವಾಗಿ ಬಫರ್ ಜೋನ್ ನಿಗದಿಗೊಳಿಸಿದ ಬಿಲ್, ರಾಜಪಾಲರ ಅಂಕಿತಕ್ಕೆ ಕಳುಹಿಸಲಾಗಿದ್ದ ವಿಧೇಯಕವನ್ನು ಗವರ್ನರ್ ವಾಪಸ್ ಕಳುಹಿಸಿದ್ದಾರೆ. ಕೆಲವು ಸ್ಪಷ್ಟನೆ ಕೇಳಿ ರಾಜಪಾಲರು ರಾಜ್ಯ ಸರ್ಕಾರಕ್ಕೆ ವಿದೇಕವನ್ನು ವಾಪಸ್ ಕಳುಹಿಸಿದ್ದಾರೆ. ಕರ್ನಾಟಕ ಟ್ಯಾಂಕ್ ಸುರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ-2014 ಕಾಯ್ದೆಯ ಸೆಕ್ಷನ್ -12 ತಿದ್ದುಪಡಿ ಮಾಡಲು ಪ್ರಸ್ತಾಪಿಸಿದೆ. ಬಿಲ್ಗೆ ಒಪ್ಪಿಗೆ ನೀಡಿದಂತೆ ರಾಜಪಾಲರ ಕಚೇರಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಬೆಂಗಳೂರು ಟೌನ್ ಹಾಲ್ ಅಸೋಸಿಯೇಷನ್ ಆಕ್ಷೆಪಣೆ ಸಲ್ಲಿಸಿದೆ. ತಜ್ಞರ ಅಭಿಪ್ರಾಯದ ಪ್ರಕಾರ 30 ಮೀಟರ್ ಬಫರ್ ಜೋನ್ ಸಾಕಾಗುವುದಿಲ್ಲ. ಪರಿಸರ ವ್ಯವಸ್ಥೆ ಸಮತೋಲನಕ್ಕಾಗಿ 300 ಮೀಟರ್ ಅವಶ್ಯಕತೆ ಇದೆ. ರಾಜ್ಯ ಸರ್ಕಾರ ಬಫರ್ ಜೋನ್ ಕಡಿಮೆ ಮಾಡದೆ ಹೆಚ್ಚಳ ಮಾಡಬೇಕು. ರಾಜ್ಯ ಸರ್ಕಾರವು ತಜ್ಞರ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿಲ್ಲ. ತಿದ್ದುಪಡಿ ಪರಿಣಾಮಗಳ ಬಗ್ಗೆ ಸಾರ್ವಜನಿಕರ ಜೊತೆಗೆ ಚರ್ಚೆ ನಡೆಸಿಲ್ಲ…
ಕೊಡಗು : ರಾಜ್ಯದಲ್ಲಿ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ನಾಳೆ ಕುರುಬ ಸಮಾಜದ ಮುಖಂಡರ ಜೊತೆಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಲಿದ್ದಾರೆ. ಇದರ ಮಧ್ಯ ಜಾತಿ ಜನಗಣತಿ ಕಾಲಂನಲ್ಲಿ ತಾವಾಗಿಯೇ ಮತಾಂತರ ಆಗುವವರಿಗೆ ಅವಕಾಶ ಇದೆ ಎಂದು ಸಚಿವ ಎನ್.ಎಸ್ ಬೋಸರಾಜು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಮರು ಸಮೀಕ್ಷೆ ಕುರಿತು ಮಾತನಾಡಿ, ಜಾತಿಗಣತಿ ಕಾಲಂನಲ್ಲಿ ತಾವಾಗಿಯೇ ಮತಾಂತರ ಆಗುವುದಕ್ಕೆ ಅವಕಾಶ ಇದೆ. ಒತ್ತಾಯವಾಗಿ ಯಾರನ್ನೂ ಸೇರಿಸಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದ್ರೂ ಬಿಜೆಪಿಯವರು ತಪ್ಪು ಹುಡುಕುವ ಕೆಲಸ ಮಾಡ್ತಿದ್ದಾರೆ, ಅದೇ ಅವರ ಅಜೆಂಡಾ ಆಗಿದೆ. ಅಲ್ಲದೇ ಉತ್ತಮ ಆಡಳಿತದ ವಿರುದ್ಧ ಜನರಲ್ಲಿ ಗೊಂದಲ ಸೃಷ್ಟಿಮಾಡೋದು ಅವರ ಕೆಲಸವಾಗಿಬಿಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಾಸನ : ಕಳೆದ ಎರಡು ದಿನಗಳ ಹಿಂದೆ ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಎಂಬಲ್ಲಿ ಗಣೇಶ ಮೆರವಣಿಗೆ ವೇಳೆ ಲಾರಿಯ ನಿರಂತರಣ ತಪ್ಪಿ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುತ್ತಿದ್ದವರ ಮೇಲೆ ಹರಿದು 10 ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಈ ಒಂದು ಘಟನೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಶಾಸಕ ಎಚ್ ಡಿ ರೇವಣ್ಣ ಗಂಭೀರವಾಗಿ ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹತ್ತು ಜನರ ಸಾವಿಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವಾಗಿದೆ. ಉಸ್ತುವಾರಿ ಸಚಿವರು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಘಟನೆಯ ದಿನ 500 ಮೀಟರ್ ಇರೋದು ಹಿಂದೆ ಬ್ಯಾರಿಕೆಡ್ ಹಾಕಬಹುದಾಗಿತ್ತು. ಸೂಕ್ತ ಕ್ರಮ ಕೈಗೊಂಡಿದ್ದರೆ, 10 ಜನರ ಜೀವ ಉಳಿಯುತ್ತಿತ್ತು. ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಕೊಡಲಿ 10 ರಿಂದ 15 ಲಕ್ಷ ಪರಿಹಾರ ಕೊಡಬೇಕು. ಗೃಹ ಸಚಿವರು ಬೇಕಿದ್ದರೆ ಸ್ಥಳ ಪರಿಶೀಲನೆ ನಡೆಸಲಿ ಎಲ್ಲೆಂದರಲ್ಲಿ ಮದ್ಯದ ಅಂಗಡಿಗೆ ಓಪನ್ ಮಾಡಲು ಲೈಸೆನ್ಸ್…
ಹುಬ್ಬಳ್ಳಿ : ಇತ್ತೀಚಿಗೆ ಗುಜರಾತಿನ ಅಹಮದಾಬಾದ್ ನಲ್ಲಿ ವಿಮಾನ ದುರಂತದಲ್ಲಿ 275 ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಅದಾದ ಬಳಿಕ ಇದೀಗ ಹುಬ್ಬಳ್ಳಿಯಲ್ಲಿ ಭಾರಿ ಅನಾಹುತ ಒಂದು ತಪ್ಪಿದೆ. ಪ್ರಯಾಣಿಕನೋರ್ವ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಸಹಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಹೌದು ಕಳೆದ ಶುಕ್ರವಾರ ಸಂಜೆ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಸಹಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಅಪ್ರೊನ್ ರ‍್ಯಾಂಪ್ ಬೇನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯ ಶಹಾಪುರದ ನಿರಂಜನ ಎಂಬಾತ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಆತಂಕ ಸೃಷ್ಟಿಸಿದ ಪ್ರಯಾಣಿಕ. ನಿರಂಜನ ಹುಬ್ಬಳ್ಳಿಯಿಂದ ಪುಣೆಗೆ ಹೊರಟಿದ್ದ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಏರಿ, ತನ್ನ ಆಸನದ ಪಕ್ಕದಲ್ಲೇ ಇದ್ದ ತುರ್ತು ನಿರ್ಗಮನ ಬಾಗಿಲನ್ನು ತೆರೆದಿದ್ದಾನೆ. ಇದರಿಂದ ಸಹಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾಗುವಂತಾಯಿತು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ…
ಬೆಂಗಳೂರು : ಈ ಬಾರಿ ಮೈಸೂರು ದಸರಾ ಉದ್ಘಾಟನೆಗೆ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಇದೀಗ ವಿಪಕ್ಷಗಳು ತೀವ್ರ ಅಕ್ರೋಶ ವ್ಯಕ್ತಪಡಿಸಿವೆ. ಇದೀಗ ಇದೇ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ದಸರಾ ಉದ್ಘಾಟನೆ, ಮುಲ್ಲಾರ ಪ್ರಕಾರ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇದೆ ವಿಚಾರವಾಗಿ ಮಾತನಾಡಿದ ಅವರು, ದಸರಾ ಉದ್ಘಾಟನೆ ಮುಳ್ಳಾರ ಪ್ರಕಾರ ನಡೆಯುತ್ತಿದೆ , ಮುಸ್ಲಿಮರ ಹಬ್ಬವನ್ನು ಹಿಂದುಗಳ ಕೈಯಲ್ಲಿ ಮಾಡಿಸಲಿ ಬಲವಂತವಾಗಿ ಮುಸ್ಲಿಮರಿಂದ ಯಾಕೆ ಉದ್ಘಾಟಿಸಬೇಕು? ಉದ್ಘಾಟನೆಗೆ ಭಾನುಮಷ್ಟಾಕ್ ಅವರನ್ನು ಕರೆಯುವುದು ಸರ್ಕಾರದ ಅಧಿಕಾರ ಅಂತ ಮಾಡಿರಬಹುದು ಏನೋ ಕಾನೂನು ಇರಲಿಲ್ಲ ಹಾಗಾಗಿ ಕೋರ್ಟ್ ನಲ್ಲಿ ಪ್ರತಾಪ್ ಸಿಂಹ ಸಲ್ಲಿಸಿದ ಅರ್ಜಿ ವಜಾ ಆಗಿದೆ. ದಸರಾ ಹಬ್ಬ ಹಿಂದೂ ಸಂಪ್ರದಾಯ ಹಿಂದೂ ಪಂಚಾಂಗದ ಪ್ರಕಾರ ನಡೆದುಕೊಂಡು ಬಂದಿದೆ. ಸಿದ್ದರಾಮಯ್ಯ ಅವರು ಬಂದ ಮೇಲೆ ಒಂದು ರೀತಿ ಮುಲ್ಲಾ lಗಳ ಸರ್ಕಾರ ತಾliಬಾನ್ ಸರ್ಕಾರ ಆಗಿರುವುದರಿಂದ ಪಂಚಾಂಗ ತೆಗೆದು ಪಕ್ಕಕ್ಕೆ…
ಬೆಂಗಳೂರು : ದೇಶದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ ಇದೀಗ, ಬೆಂಗಳೂರಿನಲ್ಲಿ ರೈಲ್ವೆ ಇಲಾಖೆಯಿಂದ ಹಿಂದಿ ದಿವಸ್ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದ್ದು, ಈ ವೇಳೆ ಕಾರ್ಯಕ್ರಮಕ್ಕೆ ನುಗ್ಗಿ ಕರವೇ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ನಗರದ ಗಾಂಧಿನಗರ ಒಳಿಯ ಖಾಸಗಿ ಹೋಟೆಲ್ ನಲ್ಲಿ ಹಿಂದಿ ದಿವಸ್ ಕಾರ್ಯಕ್ರಮ ಆಚರಣೆ ಮಾಡಲಾಗಿತ್ತು. ಈ ವೇಳೆ ಏಕಾಏಕಿ ಕಾರ್ಯಕ್ರಮಜಕ್ಕೆ ನುಗ್ಗಿ ಬ್ಯಾನರ್ ಹರಿದು ಕರವೇ ಮಹಿಳಾ ಕಾರ್ಯಕರ್ತರು ಆಕ್ರೋಶ ಹೊರಹಕಿದ್ದಾರೆ. ಬೆಂಗಳೂರರಿನ ಗಾಂಧಿನಗರ ಬಳಿಯ ಖಾಸಗಿ ಹೋಟೆಲ್ ನಲ್ಲಿ ರೈಲ್ವೆ ಇಲಾಖೆಯವರು ಈ ಒಂದು ಹಿಂದಿ ದಿವಸ್ ಕಾರ್ಯಕ್ರಮ ಯೋಜನೆ ಮಾಡಿದ್ದರು ಏಕಾಏಕಿ ಕರವೇ ಮಹಿಳಾ ಕಾರ್ಯಕರ್ತೆಯರು ಕಾರ್ಯಕ್ರಮದ ಸ್ಥಳಕ್ಕೆ ನುಗ್ಗಿ ಕಾರ್ಯಕ್ರಮದಲ್ಲಿ ಶೀಲ್ಡ್ ಎಲ್ಲ ಒಡೆದು ಹಾಕಿ ಆಕ್ರೋಶ ಹೊರಹಾಕಿದ್ದಾರೆ ಈ ವೇಳೆ ಪೊಲೀಸರು ಬಂದು ಕರವೇ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದುಕೊಂಡರು.
ಮಂಡ್ಯ : ಮಂಡ್ಯದಲ್ಲಿ ಘೋರ ಘಟನೆ ನಡೆದಿದ್ದು, ಸೇತುವೆ ಕಾಮಗಾರಿ ನಡೆಯುತ್ತಿದ್ದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಟ್ಟದಾಸನದೊಡ್ಡಿಯಲ್ಲಿ ಈ ಒಂದು ಘಟನೆ ಸಂಭವಿಸಿದೆ. ನಿಯಂತ್ರಣ ತಪ್ಪಿ ಕಾಮಗಾರಿ ನಡೆಯುತ್ತಿದ್ದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವನಪ್ಪಿದ್ದಾನೆ. ಕೆಸ್ತೂರು ಗ್ರಾಮದ ನಿವಾಸಿ ರಾಮು (50) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾಮಗಾರಿ ಮಾಹಿತಿ ಫಲಕ ಅಳವಡಿಸದೆ ಕಾಮಗಾರಿ ನಡೆಸಲಾಗುತ್ತಿತ್ತು ಎನ್ನುವ ಆರೋಪ ಕೇಳಿ ಬಂದಿದೆ. ಇನ್ನು ಘಟನೆ ಕುರಿತಂತೆ ಕೆಸ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರೈತ ಮಹಿಳೆ ನೀಡಿದ್ದ ದೂರಿನ ಅನ್ವಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರು ಸೇರಿ 15 ಮಂದಿ ವಿರುದ್ದ ಭಾನುವಾರ ಪ್ರಕರಣ ದಾಖಲಾಗಿದೆ. ಬೊಮ್ಮಲಾಪುರ ಗ್ರಾಮದ ರೈತ ಮಹಿಳೆ ಕಮಲಮ್ಮ ಎಂಬುವರು, ಅರಣ್ಯ ಇಲಾಖೆಯವರು ತನ್ನ ಕೈ ಹಿಡಿದು ಎಳೆದಾಡಿ, ಕಪಾಳಕ್ಕೆ ಹೊಡೆದು, ತಳ್ಳಿ ಬೀಳಿಸಿದ್ದಾರೆ. ಅಲ್ಲದೆ, ನನ್ನ ಮಗ ಗಂಗಾಧರ ಸ್ವಾಮಿ ಮತ್ತು ನಮ್ಮ ಜಮೀನಿನ ಬಾಜುದಾರರಾದ ರಘು, ಪ್ರದೀಪ್, ರೇವಣ್ಣ ಅವರುಗಳಿಗೆ ಕೈನಿಂದ ಹೊಡೆದು ನನ್ನ ಮಗನನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತು ಹಿಡಿದು ಹಿಸುಕಲು ಯತ್ನಿಸಿದ್ದಾರೆ. ಪ್ರಸಾದ್ ಮೇಲೆ ಜೀಪ್ ಹತ್ತಿಸಿ ಹತ್ಯೆಗಯ್ಯಲು ಯತ್ನ ಮಾಡಲಾಗಿದೆ ಎಂದು ಆರೋಪಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದರು. ಅರಣ್ಯ ಇಲಾಖೆ ಡಿಆರ್ಎಫ್ಒ ಜ್ಞಾನಶೇಖರ್, ಡಿಆರ್ಎಫ್ಒ ಕಾರ್ತಿಕ್ ಯಾದವ್, ಎಸಿಎಫ್ ಸುರೇಶ್, ಡಿಆರ್ಎಫ್ಒ ಶಿವಕುಮಾರ್ ಇತರ ನೌಕರರಾದ ಶಿವಣ್ಣ, ಸುಚಿತ್ರ, ಸುಬ್ರಹ್ಮಣ್ಯ, ನಾಗೇಶ್, ಸೋಮು, ಪ್ರವೀಣ್, ಮಣಿಕಂಠ,…
ಬಳ್ಳಾರಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬಳ್ಳಾರಿ ಉದ್ಯಮಿ ಕುಮಾರಸ್ವಾಮಿ ಮನೆ ಮೇಲೆ ಸಿಬಿಐ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದೆ. ಉದ್ಯಮಿ ಕುಮಾರಸ್ವಾಮಿ ಮಗ ಗೋವಿಂದರಾಜು ಮನೆಗಳ ಮೇಲೆ ಇದೀಗ ಸಿವಿಐ ನಡೆಸಿದೆ. ಕುಮಾರಸ್ವಾಮಿ ಪುತ್ರ ಗೋವಿಂದರಾಜು ಬಳ್ಳಾರಿಯ ಹಾಲಿ ಕಾರ್ಪೊರೇಟರ್ ಆಗಿದ್ದು, ಬಳ್ಳಾರಿಯ ಗಾಂಧಿನಗರದಲ್ಲಿರುವ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ನೆಕ್ಕಂಟಿ ನಾಗರಾಜ್ ಖಾತೆಯಿಂದ ಗೋವಿಂದರಾಜು ಖಾತೆಗೆ ಅಕ್ರಮ ಹಣ ವರ್ಗಾವಣೆ ಸಂಬಂಧ ಗೋವಿಂದರಾಜು ಮನೆಯಲ್ಲಿ ಸಿಬಿಐ ದಾಖಲೆ ಪರಿಶೀಲನೆ ನಡೆಸುತ್ತಿದೆ.












