Author: kannadanewsnow05

ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಯಂಕಚ್ಚಿ ಬಳಿ ಗೂಡ್ಸ್ ವಾಹನ ಪಲ್ಟಿಯಾಗಿ ಕಾರ್ಮಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಕೂಲಿ ಕೆಲಸಕ್ಕೆ ಹೊರಟಿದ್ದ 32 ಕೂಲಿ ಕಾರ್ಮಿಕರಿಗೆ ಗಂಭೀರವಾದ ಗಾಯಗಳಾಗಿವೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಂಕಚ್ಚಿ ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಸತ್ತಿ ಗ್ರಾಮದಿಂದ ಅಡಳ್ಳಿ ಗ್ರಾಮಕ್ಕೆ ತೆರಳುವಾಗ ಅಪಘಾತ ಸಂಭವಿಸಿದ್ದು, ಗೂಡ್ಸ್ ವಾಹನದ ಟೈರ್ ಸ್ಪೋಟಗೊಂಡು ವಾಹನ ಪಲ್ಟಿಯಾಗಿದೆ. ತಕ್ಷಣ ಎಲ್ಲಾ ಕೂಲಿ ಕಾರ್ಮಿಕರನ್ನು ಅಥಣಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಇತ್ತೀಚಿಗೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆಗೆ 200 ರೂಪಾಯಿ ಟಿಕೆಟ್ ದರ ನಿಗದಿ ಮಾಡಿ ಮಹತ್ವದ ಆದೇಶ ಹೊರಡಿಸಿತ್ತು. ಇದೀಗ ಈ ವಿಚಾರವಾಗಿ, ಸಿನಿಮಾ ಟಿಕೆಟ್ಗೆ 200 ದರ ಮಿತಿ ಪ್ರಶ್ನಿಸಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿ ಆದೇಶ ಹೊರಡಿಸಿತು. ಸಿನಿಮಾ ಟಿಕೆಟ್ ದರ 200 ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಮಂಡಳಿಯ ಮನವಿಯ ಮೇರೆಗೆ ಸರ್ಕಾರ ನಿರ್ಧರಿಸಿದೆ ಎಂದು ವಾದ ಮಂಡಿಸಲಾಯಿತು. ಈ ವೇಳೆ ಮಂಡಳಿ ಅರ್ಜಿಗೆ ಅರ್ಜಿದಾರರಿಂದ ತಕರಾರು ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ಕಡೆ ವಾದ ಆಲಿಸಿ ಹೈಕೋರ್ಟ್ ಇದೀಗ ಆದೇಶ ಕಾಯ್ದಿರಿಸಿದೆ. ನ್ಯಾ.ರವಿ ವಿ.ಹೊಸಮನಿ ಅವರಿದ್ದ ಪೀಠ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿದೆ. ಹೊಂಬಾಳೆ ಫಿಲಂ ಪರ ಹಿರಿಯ ವಕೀಲ ಧ್ಯಾನ್ ಚಿನಪ್ಪ ಇಂದು ಹೈಕೋರ್ಟ್ ನಲ್ಲಿ ವಾದಿಸಿದರು.ಹೊಂಬಾಳೆ…

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ಧಿಗಳಿಗೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಇದೀಗ ವಿರೋಧ ಪಕ್ಷದ ಶಾಸಕರಿಗೆ ಕೂಡ ಸಿಎಂ ಸಿದ್ದರಾಮಯ್ಯ ತಲಾ 25 ಕೋಟಿ ಅನುದಾನ ಬಿಡುಗಡೆಗೆ ತೀರ್ಮಾನಿಸಿದ್ದಾರೆ. ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ‌ ಅನುದಾನ ನೀಡಲಾಗುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಧಿವೇಶನದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ತಮಗೂ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ವಿಪಕ್ಷಗಳ ಶಾಸಕರಿಗೂ ತಲಾ 25 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಅನುದಾನ ಹಂಚಿಕೆ ಸಂಬಂಧ ಪ್ರತಿಪಕ್ಷ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. 2025-26ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರೂ. ವಿಶೇಷ ಅನುದಾನ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಅದರನ್ವಯ ಕಾಮಗಾರಿವಾರು ಅನುದಾನದ ಹಂಚಿಕೆಯ ಪ್ರಮಾಣವನ್ನು…

Read More

ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕಲಿ ದಾಖಲೆ ಸೃಷ್ಟಿ ಮಾಡುತಿದ್ದವರ ಸೆಂಟರ್ ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸೆಂಟರ್ ಗಳ ಮೇಲೆ ದಾಳಿ ನಡೆಸಿ, ನಕಲಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಆಧಾರ್ ಕಾರ್ಡ್ ಮಾರ್ಕ್ಸ್ ಕಾರ್ಡ್ ಎಲ್ಲಾ ಫೋರ್ಜರಿ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಯಶವಂತ್ (20) ಹಾಗೂ ರಘುವೀರ್ (26) ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೈಬರ್ ಸೆಂಟರ್ ಒಂದರಲ್ಲಿ ಇವರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಕಲಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಧಾರ್ ಕಾರ್ಡ್ ಮಾರ್ಕ್ಸ್ ಕಾರ್ಡ್ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Read More

ಬೆಂಗಳೂರು : ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಕೆವೈ ನಂಜೇಗೌಡ ಆಯ್ಕೆಯನ್ನು ಎಂದು ಹೈಕೋರ್ಟ್ ಹಸಿಂದು ಗೊಳಿಸಿ ಆದೇಶ ಹೊರಡಿಸಿದೆ ಬಳಿಕ ಶಾಸಕರ ವಕೀಲರ ಮನವಿ ಪುರಸ್ಕರಿಸಿ 30 ದಿನಗಳ ಕಾಲ ಕೆ ವೈ ನಂಜೇಗೌಡ ಗೆ ಸುಪ್ರೀಂ ಕೋರ್ಟಿಗೆ ಮೇಲ್ಮಾನ್ವಿ ಸಲ್ಲಿಸಲು ಅವಕಾಶ ನೀಡಿ ತನ್ನದೇ ತೀರ್ಪಿಗೆ ತಡೆ ನೀಡಿತು ಕಾಂಗ್ರೆಸ್ ವಿರುದ್ಧ ಹರಿ ಹಾಯ್ದಿದ್ದಾರೆ. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ವೇಳೆ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಈ ಕುರಿತು ಆರ್ ಅಶೋಕ್ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದು ಕಾಂಗ್ರೆಸ್ ಶಾಸಕರ ವೋಟ್ ಚೋರಿ ವಿರುದ್ಧ ಅಭಿಯಾನ ಮಾಡಲು ಈಗ ರಾಹುಲ್ ಗಾಂಧಿ ಅವರು ಮಾಲೂರಿಗೆ ಬರುತ್ತಾರಾ? ಮಹದೇವಪುರದ ಮತದಾರರ ಪಟ್ಟಿಗೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಟುಸ್ ಪಟಾಕಿ “ಆಟಂ ಬಾಂಬ್” ಸಿಡಿಸಿದ ರೀತಿ, ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿರುವ ಅಕ್ರಮದ ಬಗ್ಗೆಯೂ ರಾಹುಲ್ ಗಾಂಧಿ…

Read More

ಬೆಂಗಳೂರು : ಕ್ರಿಶ್ಚಿಯನ್ ಕಾಲಂನಲ್ಲಿ ಹಿಂದೂ ಜಾತಿಗೆ ಸೇರ್ಪಡೆಗೆ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯಪಾಲರಿಗೆ ಇದೀಗ ಬಿಜೆಪಿ ನಾಯಕರ ನಿಯೋಗ ದೂರು ನೀಡಿದೆ. ದುಂಡುಮೇಜಿನ ಸಭೆಯ ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರಿಗೆ ದೂರು ಸಲ್ಲಿಸಿದೆ. ಇಂದು ಬಿಜೆಪಿ ನಾಯಕರ ನಿಯೋಗ ಖಾಸಗಿ ಹೋಟೆಲ್ ನಲ್ಲಿ ದುಂಡುಮೇಜಿನ ಸಭೆ ನಡೆಸಿತು. ಬಳಿಕ ರಾಜ ಭವನಕ್ಕೆ ಪಾದಯಾತ್ರೆ ಮೂಲಕ ಬಿಜೆಪಿ ನಿಯೋಗದ ನಾಯಕರು ರಾಜಭವನಕ್ಕೆ ಆಗಮಿಸಿ, ಬಿಜೆಪಿ ಸಂಸದ ಯದುವೀರ್ ಒಡೆಯರ್, ಪಿ ಸಿ ಮೋಹನ್, ಶಾಸಕ ಸುನಿಲ್ ಕುಮಾರ್ ಎಂಎಲ್ಸಿ ಎನ್ ರವಿ ಕುಮಾರ್ ಪಾದಯಾತ್ರೆ ಮೂಲಕ ರಾಜಭವನಕ್ಕೆ ಆಗಮಿಸಿ ರಾಜ್ಯಪಾಲರಿಗೆ ದೂರು ನೀಡಿದರು. ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ನಾಯಕರ ದುಂಡು ಮೇಜಿನ ಸಭೆಯಲ್ಲಿ 6 ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿತು. 1) ಕಾಲಂನಲ್ಲಿ  ಸೇರಿಸಿರೋ ಕ್ರಿಶ್ಚಿಯನ್  ಹೆಸರು ತೆಗೆಯಬೇಕು 2) ಹೊಸದಾಗಿ ಸೇರಿಸಿದ 47 ಹೆಸರು ಕೈಬಿಡಬೇಕು 3) ಕ್ರಿಶ್ಚಿಯನ್ ಹೆಸರಿದ್ದರೆ ಮೀಸಲಾತಿ ಏರುಪೇರು ಆಗುತ್ತದೆ. ಅದನ್ನು…

Read More

ಬೆಂಗಳೂರು : ಯಶ್ ತಾಯಿ ಅವರು ನಿರ್ಮಾಣ ಮಾಡಿದ್ದ ‘ಕೊತ್ತಲವಾಡಿ’ ಚಿತ್ರದ ಸಹ ನಟ ನಟಿಗೆ ಸಂಭಾವನೆ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಕೊತ್ತಲವಾಡಿ ಚಿತ್ರದಲ್ಲಿ ಸಹನಟ ಮಾತ್ರವಲ್ಲ ಸಹನಟಿಗೂ ಸಂಭಾವನೆ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಯಶ್ ತಾಯಿ ಪುಷ್ಪ ವಿರುದ್ಧ ಸಹನಟ ಮತ್ತು ನಟಿ ಗಂಭೀರವಾದ ಆರೋಪ ಮಾಡಿದ್ದಾರೆ. ಸಂಭಾವನೆಗೆ ನಿರ್ದೇಶಕನ ಬಳಿ ನಟಿಯ ತಾಯಿ ಗೋಗರಿದಿದ್ದಾರೆ. ಪುತ್ರಿ ಸ್ವರ್ಣ ನಟನೆಗೆ ಸಂಭಾವನೆ ಕೊಡಿ ಎಂದು ತಾಯಿ, ಗೋಗರೆದಿದ್ದು ಸಹನಟಿ ತಾಯಿ ಮತ್ತು ನಿರ್ದೇಶಕ ಶ್ರೀ ರಾಜ್ ಆಡಿಯೋ ಸಂಭಾಷಣೆ ಕೂಡ ವೈರಲ್ ಆಗಿದೆ. ಪುತ್ರಿ ಕೆಲಸ ಮಾಡಿದ್ದ ಪೇಮೆಂಟ್ ಕೊಡಲು ನಿಮಗೆ ಆಗಲ್ವಾ ನನ್ನ ಮಗಳು ನಿಮ್ಮನ್ನು ನಂಬಿಕೊಂಡು ಮೂರು ತಿಂಗಳು ಕೆಲಸ ಮಾಡಿದ್ದಾಳೆ ಅಪ್ಪ ಇಲ್ಲ ನಾನೇ ಅವಳನ್ನು ನೋಡಿಕೊಳ್ಳಬೇಕು ಎಂದು ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

Read More

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳಿಗೆ ಇದೀಗ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. 5 ಪಾಲಿಕೆಗಳಿಗೆ ಒಟ್ಟು 125 ಕೋಟಿ ರೂಪಾಯಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಐದು ಮಹಾನಗರ ಪಾಲಿಕೆಗಳಿಗೆ ತಲಾ 25 ಕೋಟಿಯಂತೆ ಒಟ್ಟು 125 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಆಸ್ತಿ ತೆರಿಗೆ ಸಂಗ್ರಹದಲ್ಲಿ 500 ಕೋಟಿ ಸಂಗ್ರಹ ಆಗಿತ್ತು. ಅದರಲ್ಲಿ 125 ಕೋಟಿ ರಿಲೀಸ್ ಮಾಡಿದೆ. ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆಗೆ 25 ಕೋಟಿ, ಬೆಂಗಳೂರು ಉತ್ತರ ಮಹಾನಗರ ಪಾಲಿಕೆಗೆ 25 ಕೋಟಿ, ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆಗೆ 25 ಕೋಟಿ, ಬೆಂಗಳೂರು ಪೂರ್ವ ಮಹಾನಗರ ಪಾಲಿಕೆಗೆ 25 ಕೋಟಿ, ಹಾಗೂ ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಗೆ 25 ಕೋಟಿ ಅನುದಾನ ಬಿಡುಗಡೆ ಮಾಡಿದೆ.

Read More

ಬೆಂಗಳೂರು : ಕೃಷ್ಣಾ ಮೇಲ್ದಂಡೆ ಭೂಸ್ವಾಧೀನ ಪರಿಹಾರ ನಿಗದಿಪಡಿಸಿ ರಾಜ್ಯ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಈ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಸಂಪುಟ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ವಿಶೇಷ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂ ಸ್ವಾಧೀನ ಪರಿಹಾರ ನಿಗದಿಪಡಿಸಲಾಗಿದೆ. ಕೃಷಿ ಭೂಮಿಗೆ ಎಕರೆಗೆ 40 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಲಾಗಿದೆ. ಇನ್ನು ಒಣ ಭೂಮಿಗೆ ಎಕರೆಗೆ 30 ಲಕ್ಷ ಪರಿಹಾರ ನಿಗದಿಪಡಿಸಲಾಗಿದೆ. ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಳದಿಂದ ಜಮೀನು ಮುಳುಗಡೆ ಆಗುತ್ತವೆ, ಸುಮಾರು 75,000ಕ್ಕೂ ಹೆಚ್ಚು ಎಕರೆ ಭೂಮಿ ಮುಳುಗಡೆ ಆಗುತ್ತವೆ. ಈ ಭೂಮಿಗೆ ಪರಿಹಾರ ನೀಡಬೇಕಾಗುತ್ತದೆ. 5 ಲಕ್ಷ ಹೆಕ್ಟರ್ ಗಿಂತ ಹೆಚ್ಚು ನೀರಾವರಿ ಸೌಲಭ್ಯ ಸಿಗಲಿದೆ. ಆ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಮುಳುಗಡೆಯಾಗುವ ಭೂಮಿಗೆ ಪರಿಹಾರ ನಿಗದಿಗೆ ವಿಶೇಷ ಸಂಪುಟ…

Read More

ಬೆಂಗಳೂರು : ರಾಜ್ಯದಲ್ಲಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಕಾರ್ಡ್ ಗಳನ್ನು ರದ್ದು ಮಾಡುವ ವಿಚಾರವಾಗಿ, ಬಿಪಿಎಲ್ ಕಾರ್ಡ್ ಬಗ್ಗೆ ಸೆಕ್ರೆಟರಿ ಮೀಟಿಂಗ್ ಮಾಡುತ್ತಿದ್ದೇನೆ. ನಾಳೆ ಬೆಳಿಗ್ಗೆ ಸುದ್ದಿಗೋಷ್ಠಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ ನೀಡಿದರು. ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಮೀಟಿಂಗ್ ನಡೆಯುತ್ತಿದೆ. ಈ ಬಗ್ಗೆ ನಾಳೆ ಮಾತನಾಡುತ್ತೇನೆ ಎಂದು ತಿಳಿಸಿದರು. ರಾಜ್ಯದಲ್ಲಿ ಬರೋಬ್ಬರಿ 8 ಲಕ್ಷ ಬಿಪಿಎಲ್ ಕಾರ್ಡ್ ರದ್ದಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಸುಮಾರು 8 ಲಕ್ಷಕ್ಕೂ ಅಧಿಕ ಕಾರ್ಡ್ ಇದೀಗ ರದ್ದಾಗುವ ಆಗುವ ಸಾಧ್ಯತೆ ಇದೆ. ಅಕ್ರಮ ಬಿಪಿಎಲ್ ಕಾರ್ಡ್ ಇರುವುದು ಪತ್ತೆಯಾಗಿದೆ. ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ ಗಳ ಮೇಲೆ ಇದೀಗ ಹದ್ದಿನ ಕಣ್ಣು ಇಡಲಾಗಿದೆ. ಆಹಾರ ಇಲಾಖೆಯ ವಿಶೇಷ ಕಾರ್ಯಚರಣೆಯಲ್ಲಿ ಇದು ಬಹಿರಂಗವಾಗಿದೆ ಒಟ್ಟು 12,68,097 ಅನುಮಾನಾಸ್ಪದ ರೇಷನ್ ಕಾರ್ಡ್ ಪತ್ತೆಯಾಗಿದೆ.…

Read More