Author: kannadanewsnow05

ಬೆಂಗಳೂರು : ಬಿಜೆಪಿ ಸಂಸದ ಡಾ.ಕೆ ಸುಧಾಕರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ 4.8 ಕೋಟಿ ಹಣ ದೊರೆತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಂಸದ ಡಾಕ್ಟರ್ ಕೆ ಸುಧಾಕರ್ ವಿರುದ್ಧ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ನ್ಯಾ.ಎಂ.ಐ ಅರುಣ್ ಅವರಿದ್ದ ಹೈಕೋರ್ಟ್ ಪೀಠ ಈ ಕುರಿತು ಆದೇಶ ಹೊರಡಿಸಿದ್ದು, ಸಂಸತ್ ಚುನಾವಣೆಯ ವೇಳೆ ಗೋವಿಂದಪ್ಪ ಮನೆಯಲ್ಲಿ ನಾಲ್ಕು ಪಾಯಿಂಟ್ ಎಂಟು ಕೋಟಿ ಹಣ ಜತ್ತಿ ಮಾಡಲಾಗಿತ್ತು ಈ ವೇಳೆ ಐಎಎಸ್ ಅಧಿಕಾರಿ ಮುನೇಶ್ ಮೊದಿಗಿಲ್ ಗೆ ಕೆ ಸುಧಾಕರ್ ಕರೆ ಮಾಡಿದರು ಸಹಾಯ ಮಾಡುವಂತೆ ವಾಟ್ಸಾಪ್ ಮತ್ತು ಮೆಸೇಜ್ ಮಾಡಿ ಸಹಾಯ ಮಾಡುವಂತೆ ಕೇಳಿದರು ಎನ್ನುವ ಆರೋಪ ಕೇಳಿ ಬಂದಿತ್ತು ಮತದಾರರಿಗೆ ಲಂಚ ನೀಡಲು ಮುಂದಾಗಿದ್ದ ಬಗ್ಗೆ ದೂರು ದಾಖಲಾಗಿತ್ತು ಗೋವಿಂದಪ್ಪ ವಿರುದ್ಧ ಆರೋಪಟ್ಟಿ ಸಲ್ಲಿಸಿದ್ದರು ಇದೀಗ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ.

Read More

ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಕಷ್ಟ ಎದುರಾಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ ಲೋಕಾಯುಕ್ತ ಪೊಲೀಸರು ನೊಟೀಸ್ ನೀಡಿದ್ದಾರೆ. ಸಚಿವ ಜಮೀರ್ ಜೊತೆಗೆ ಕಳೆದ 3-4 ವರ್ಷಗಳಿಂದ ಆರ್ಥಿಕ ವ್ಯವಹಾರ ಹೊಂದಿದ್ದ ದಿನೇಶ್ ಗುಂಡೂರಾವ್‌ಗೆ ನೋಟಿಸ್ ನೀಡಿದ್ದು, ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸಚಿವ ಜಮೀರ್ ಅಹ್ಮದ್‌ಗೆ 2.5 ಕೋಟಿ ರೂ. ನೀಡಿದ್ದ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ರಾಧಿಕಾ ಕುಮಾರಸ್ವಾಮಿ ಹಾಗೂ ಗುಜರಿ ಬಾಬು ವಿಚಾರಣೆ ನಡೆಸಲಾಗಿದೆ.

Read More

ಬೆಂಗಳೂರು : ಬೆಂಗಳೂರಲ್ಲಿ ಇದೀಗ ಮತ್ತೆ ಲಾಂಗು ಮತ್ತು ಮಚ್ಚುಗಳು ಝಳಪಿಸಿದ್ದು, ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಟೆಂಪೋ ಚಾಲಕನ ಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನ ಇಮ್ಮಡಿಹಳ್ಳಿ ರಸ್ತೆಯಲ್ಲಿ ಈ ಒಂದು ಕೃತ್ಯ ಎಸಗಲಾಗಿದೆ. ಟಿಪೋಚಾಲಕ ಅಡ್ಡಾದಿಡ್ಡಿ ಬೈಕ್ ಯಾಕೆ ಚಲಾಯಿಸುತ್ತೀಯಾ ಎಂದು ಕೇಳಿದ್ದಕ್ಕೆ ಬೈಕ್ ಸವಾರ ತನ್ನ ಗ್ಯಾಂಗ್ ನೋಂದಿಗೆ ಬಂದು ಲಾಂಗು ಮಚ್ಚುಗಳಿಂದ ಟೆಂಪೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೂಡಲೇ ಘಟನಾ ಸ್ಥಳಕ್ಕೆ ವೈಟ್ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸಾರಕ್ಕಿ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 18.09.2025 (ಗುರುವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಶಾಕಂಬರಿ ನಗರ, ಪೈಪ್ ಲ್ಯೆನ್ ರೋಡ್, ರಾಘವೇಂದ್ರ ಸ್ವಾಮಿ ಮಟ, ಜೆ.ಪಿ ನಗರ ಮೊದಲನೇ ಹಂತ, 14ನೇ ಅಡ್ಡ ರಸ್ತೇ, ಸಲಾರ್ಪುರಿಯಾ ಅಪಾಟ್ ಮೆಂಟ್, ನಾಗಜುನ ಅಪಾಟ್ ಮೆಂಟ್ ಪುಟ್ಟೇನಹಳ್ಳಿ, ಜಯನಗರ 8, 5, 7 ನೇ ಬ್ಲಾಕ್, ಐಟಿಐ ಲೇಹ್ಔಟ್, ಎಸ್. ಬಿ.ಐ ಕಾಲೋನಿ, ಅರ್.ವಿ.ಡೆಂಟಲ್ ಕಾಲೇಜ್ ಸುತ್ತಮುತ್ತಲ ಪ್ರದೇಶಗಳು, 24ನೇ ಮ್ಯೇನ್, ಎಲ್ಐಸಿ ಕಚೇರಿ ಹಿಂಬಾಗ, ಎಲ್ಐಸಿ ಕಾಲೋನಿ, ಕೆ ಆರ್ ಲೇಔಟ್, ವೆಂಕಟಾದ್ರಿ ಲೇಔಟ್, ಜಿ.ಪಿ.ನಗರ 5ನೇ ಹಂತ, ಸಾಯಿ ನಸರಿ ರಸ್ತೇ, ಜಿ.ಪಿ.ನಗರ 6ನೇ ಹಂತ, 15ನೇ ಕ್ರಾಸ್, 16 & 12 ನೇ ಕ್ರಾಸ್, ಆದರ್ಶ ರೆಸಿಡೆನ್ಸಿ ಅಪಾರ್ಟ್ಮೆಂಟ್, ಬನ್ನೇರಘಟ್ಟ ರೋಡ್, ಡಾಲರ್ಸ್ ಲೇಔಟ್, ಕಲ್ಯಾಣಿ ಮ್ಯಾಗ್ನಮ್ ಅಪಾರ್ಟ್ಮೆಂಟ್,…

Read More

ಬೆಂಗಳೂರು 17: 66/11 kV ಕಟ್ಟಿಗೇನಹಳ್ಳಿ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 17.09.2025 ರಂದು ಬೆಳಗ್ಗೆ 11:00 ಯಿಂದ ಮಧ್ಯಾಹ್ನ 4:30 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಉತ್ತರ ಗೇಟ್ 1, 2,3, ರಾಯಭಾರ ಕಚೇರಿ, ಫಿಲಿಪ್ಸ್ ಕಂಪನಿ, ದ್ವಾರಕಾನಗರ, ಬಾಬಾನಗರ, ಕಟ್ಟಿಗೇನಹಳ್ಳಿ ಸೌರ್ಡಿಂಗ್, ಬಾಗಲೂರು ಕ್ರಾಸ್, ಮತ್ತು ಬಾಗಲೂರು ಮುಖ್ಯ ರಸ್ತೆ, ಮಣಿಪಾಲ ಕಾಲೇಜು, BSF, PDMS, ಬಾಗಲೂರು ಕ್ರಾಸ್ ವಿನಾಯಕನಗರ, ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Read More

ರಾಜನಿಗೆ ಕಿರೀಟ ಹೇಗೆ ಮುಖ್ಯವೋ ಹಾಗೆಯೇ, ನಮ್ಮ ತಲೆಯ ಮೇಲಿನ ಕೂದಲು ನಮ್ಮಲ್ಲಿ ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಕೂದಲು ಉದುರುವ ಬಗ್ಗೆ ಚಿಂತಿತರಾಗಿರುವ ಅನೇಕ ಜನರಿದ್ದಾರೆ. ಈ ಬ್ಯೂಟಿ ಟಿಪ್ಸ್ ವಿಭಾಗದಲ್ಲಿ, ಕೂದಲು ಉದುರುವಿಕೆಯಿಂದ ವಿವಿಧ ಮುಜುಗರಗಳನ್ನು ಎದುರಿಸುವ ಜನರು ಆ ಮುಜುಗರದಿಂದ ಹೊರಬರಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುವ ಪೌಡರ್ ಅನ್ನು ನಾವು ನೋಡಲಿದ್ದೇವೆ. ಕೂದಲು ವೇಗವಾಗಿ ಬೆಳೆಯುತ್ತದೆ ಕೂದಲು ಉದುರುವುದು ತುಂಬಾ ಸಾಮಾನ್ಯ ಪ್ರಕ್ರಿಯೆ. ಒಂದು ದಿನದಲ್ಲಿ ನಿರ್ದಿಷ್ಟ ಪ್ರಮಾಣದ ಕೂದಲು ಉದುರುವುದು ಅನಿವಾರ್ಯ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ…

Read More

ದಕ್ಷಿಣಕನ್ನಡ : ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿ ವಜಾ ಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜೆಎಂಎಫ್ ಸಿ ಕೋರ್ಟ್ ಆರೋಪಿ ಚಿನ್ನಯ್ಯ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ವಿಚಾರವಾಗಿ ಆರೋಪಿ ಚಿನ್ನಯ್ಯ ಬಂಧನ ವಿಚಾರವಾಗಿ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈಗಲೂ ಸಹ ತನಿಖೆ ಮುಂದುವರೆದಿದೆ. ಇಂತಹ ಸಮಯದಲ್ಲಿ ಜಾಮೀನು ಕೊಟ್ಟರೆ ಮುಂದೆ ತನಿಖೆಗೆ ಸಮಸ್ಯೆ ಆಗುತ್ತದೆ ಎಂದು ಎಸ್ಐಟಿ ಕೋರಿಕೆಯಾಗಿತ್ತು . ಇದೆ ವಿಚಾರವನ್ನು ಜಡ್ಜ್ ಮುಂದೆ ಇಟ್ಟಿದ್ದರು. ಹಾಗಾಗಿ ಆರೋಪಿ ಚೆನ್ನಯ್ಯನ ಜಾಮೀನು ರದ್ದುಗೊಳಿಸಿದೆ. ಸದ್ಯ ಶಿವಮೊಗ್ಗದ ಜೈಲಲ್ಲಿ ಚಿನ್ನಯ್ಯ ಇದ್ದಾನೆ.

Read More

ಬೆಂಗಳೂರು : ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಜನ್ಮ ದಿನಾಚರಣೆ ಮಾಡಲು ಸಿದ್ಧತೆಯಲ್ಲಿದ್ದರು. ಆದರೆ ಹೈಕೋರ್ಟ್ ಇದೀಗ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ. ಸೆಪ್ಟೆಂಬರ್ 18ರಂದು ಡಾಕ್ಟರ್ ವಿಷ್ಣುವರ್ಧನ್ ಜನ್ಮ ದಿನಾಚರಣೆಗೆ ಅವಕಾಶ ನೀಡಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ. ವಿಷ್ಣುವರ್ಧನ್ ಪುಣ್ಯ ಭೂಮಿ ಟ್ರಸ್ಟ್ (ರಿ) ರಿಟ್ ಅರ್ಜಿ ಸಲ್ಲಿಸಿತ್ತು. ಅಭಿಮಾನಿ ಸ್ಟುಡಿಯೋ ಮಾಲೀಕತ್ವದ ಬಗ್ಗೆ ಹೈಕೋರ್ಟ್ ಆದೇಶವಿದೆ. 2025 ಜನವರಿ 13 ಆದೇಶದ ಇರುವಾಗ ವಿಭಿನ್ನ ರೀತಿಯ ಆದೇಶ ಸಾಧ್ಯವಿಲ್ಲ ಎಂದು ನ್ಯಾ. ಬಿ.ಎಂ ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಅಭಿಮಾನಿ ಜನ್ಮದಿನಾಚರಣೆಗೆ ಹೈಕೋರ್ಟ್ ಅವಕಾಶ ನೀಡಲು ನಿರಾಕರಿಸಿದೆ. ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಮತ್ತು ಡಿಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿಷ್ಣುವರ್ಧನ್ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಹಾಗು ಅಭಿಮಾನ್ ಸ್ಟುಡಿಯೋದ ಬಿ ಎಸ್ ಕಾರ್ತಿಕ್ ಅವರಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಇದೇ ಸಂದರ್ಭದಲ್ಲಿ ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿತು.a

Read More

ಶಿವಮೊಗ್ಗ : ಶಿವಮೊಗ್ಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಉರುಳಿ ಬಿದ್ದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ವೃದ್ದೆ ಸ್ಥಳದಲ್ಲಿ ಸಾವ್ಕಾನ್ನಪ್ಪಿದ್ದು, ಉಳಿದ ಇಬ್ಬರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಮೃತ ವೃದ್ದೆಯನ್ನು ಪಾರ್ವತಮ್ಮ ಎಂದು ತಿಳಿಬಂದಿದೆ. ಚಿಪ್ಪಿಗರ ಬಳಿ ಮಾರುತಿ ಬಲೇನೋ ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಶಿವಮೊಗ್ಗದ ಹೊಸನಗರ ತಾಲೂಕಿನ ಚಿಪ್ಪಿಗರ ಎನ್ನುವ ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ತ್ಯಾಗತಿಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವರ ದರ್ಶನಕ್ಕೆ ಹೋಗಿದ್ದರು ದೇವಸ್ಥಾನದಿಂದ ಬರುವಾಗ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದಿದೆ. ಈ ವೇಳೆ ತಕ್ಷಣ ಇಬ್ಬರೂ ಕಾರಿನಿಂದ ಹೊರಗಡೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಕಾರಿನಲ್ಲಿದ್ದ ವೃದ್ದೆ ಪಾರ್ವತಮ್ಮ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಮಂಜುನಾಥ್ ಮತ್ತು ಅಕ್ಷತ ಗೆ ಚಿಕಿತ್ಸೆ ನೀಡಲಾಗುತ್ತಿದ್ದು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೃದ್ದೆ ಪರ್ವತಮ್ಮ ಮೃತದೇಹ ರಿಬ್ಬನ್ ಪೇಟೆ ಆಸ್ಪತ್ರೆಯ ಶವಾಗಾರದಲ್ಲಿದೆ.

Read More

ಬೆಂಗಳೂರು : ಇತ್ತೀಚೆಗೆ ಬೆಂಗಳೂರು ನಗರದ ಮಹದೇವಪುರ ಕ್ಷೇತ್ರದ ಪಣತ್ತೂರು ಬಳಗೆರೆ ರಸ್ತೆಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ತುಂಬಾ ನೀರು ಹರಿಯುತ್ತಿತ್ತು. ಶಾಲಾ ಬಸ್ ಒಂದು ರಸ್ತೆ ಕಾಣದೆ ಪಕ್ಕದಲ್ಲಿ ಜಾರಿತ್ತು ಇದೇ ಘಟನೆ ಸಂಬಂಧಿಸಿದಂತೆ ಇದೀಗ ಶಾಲಾ ಮಕ್ಕಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ವಿಡಿಯೋ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯಗೆ ಶಾಲಾ ಮಕ್ಕಳು ಮನವಿ ಮಾಡಿಕೊಂಡಿದ್ದು, ಪತ್ರ ಬರೆದು ರಸ್ತೆ ಗುಂಡಿ ಸಮಸ್ಯೆಯನ್ನು ಮಕ್ಕಳು ವಿವರಿಸಿದ್ದಾರೆ. ಮೋದಿ ತಾತ ಸಿದ್ದರಾಮಯ್ಯ ತಾತ ನಮ್ಮ ರೋಡ್ ಹೀಗೆ ಯಾಕಿದೆ? ಎಲ್ಲಿ ನೋಡಿದರೂ ಗುಂಡಿ, ಕಲ್ಲು, ಮಣ್ಣು ತುಂಬಿದೆ ಅಪ್ಪ ಟ್ಯಾಕ್ಸ್ ಕಟ್ಟುತ್ತಾರೆ ಅಮ್ಮನು ಟ್ಯಾಕ್ಸ್ ಕಟ್ಟುತ್ತಾರೆ . ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಪತ್ರದ ಮೂಲಕ ವಿವರಣೆ ಮಾಡಿದ್ದಾರೆ. ಸ್ಕೂಲ್ ಬಸ್ ಒಳಗೆ ಕೂತು ಮಕ್ಕಳು ವಿಡಿಯೋ ಮಾಡಿದ್ದಾರೆ.

Read More