Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 422 ಸೀಟ್ ಗಳನ್ನು ಹೆಚ್ಚಳ ಮಾಡಲಾಗಿದೆ. ಪ್ರಸಕ್ತ ವರ್ಷದ ಸರ್ಕಾರಿ ಕೋಟದಲ್ಲಿ 422 ಸೀಟ್ ಹೆಚ್ಚಳ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದರು. ಪ್ರಸಕ್ತ ವರ್ಷದಲ್ಲಿ ಕೆಇಎ ಸೀಟ್ ಗೆ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. 1,100 ಖಾಸಗಿ ಮೆಡಿಕಲ್ ಸೀಟ್ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ 12395 ಸರ್ಕಾರಿ ಕೋಟ ಇತ್ತು.ಈ ಮೂಲಕ ಒಟ್ಟು 13945 ಸರ್ಕಾರಿ ಕೋಟ ಏರಿಕೆಯಾಗಿದೆ. ಈ ವರ್ಷದಲ್ಲಿ ಮೆಡಿಕಲ್ ಸೀಟ್ ಗಳಿಗೆ ತುಂಬಾ ಬೇಡಿಕೆ ಇತ್ತು. ಸರ್ಕಾರಿ ಕೋಟಾದ ಅಡಿ ಹೆಚ್ಚುವರಿಯಾಗಿ 572 ಪಿಜಿ ಸೀಟ್ ಕೇಳಿದ್ವಿ. ಈ ಬಾರಿ 422 ಪಿಡಿ ಸೀಟ್ ಸಿಕ್ಕಿರುವ ಮಾಹಿತಿ ಇದೆ ಎಂದು ಬೆಂಗಳೂರಿನಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದರು.
ಬೆಂಗಳೂರು : ಬೆಂಗಳೂರಲ್ಲಿ ಜಯನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಖೋಟಾ ನೋಟಿನ ಗ್ಯಾಂಗ್ ಒಂದನ್ನು ಅರೆಸ್ಟ್ ಮಾಡಿದ್ದಾರೆ. ಒರಿಜಿನಲ್ ನೋಟಿಗೆ ಖೋಟಾ ನೋಟಿನ ಆಫರ್ ನೀಡುತ್ತಿದ್ದ ಖದೀಮರನ್ನು ಅರೆಸ್ಟ್ ಮಾಡಿದ್ದಾರೆ. ಹೌದು 10 ಲಕ್ಷ ಅಸಲಿ ನೋಟಿಗೆ 30 ಲಕ್ಷ ಖೋಟಾ ನೋಟಿನ ಆಫರ್ ನೀಡಿದ್ದರು. ಖೋಟಾ ನೋಟು ಆಫರ್ ನೀಡಿ ಗ್ಯಾಂಗ್ ವಂಚನೆ ಎಸಗುತ್ತಿತ್ತು. ತಮಿಳುನಾಡಿನ ತಿರುನೆಲ್ವೇಲಿಯ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಒಟ್ಟು 30 ಲಕ್ಷ ಕೊಟ್ಟ ಖೋಟಾ ನೋಟನ್ನು ವಶಕ್ಕೆ ಪಡೆದ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಒಂದು ಗ್ಯಾಂಗ್ ಸೂಟ್ಕೇಸ್ ಮೇಲ್ಭಾಗದಲ್ಲಿ ಅಸಲಿ ನೋಟುಗಳನ್ನು ಇಟ್ಟು ಮಧ್ಯದ ಭಾಗದಲ್ಲಿ ಮಾತ್ರ ಬಳಿ ಹಾಳೆಗಳನ್ನು ಇಟ್ಟು ಜನರಿಗೆ ವಂಚಿಸುತ್ತಿದ್ದರು. ಇವರು ಜಯನಗರದಲ್ಲಿ ಸೂಟ್ಕೇಸ್ ಸಮೇತ ನಿಂತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಳಿಕ ಸೂಟ್ಕೇಸ್ ನಲ್ಲಿದ್ದ ಹಣವನ್ನು ಜಪ್ತಿ…
ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧದ ಬೆನ್ನಲ್ಲೆ, ಚಿತ್ತಾಪುರದಲ್ಲಿ ನಾಳೆ ಆರ್ ಎಸ್ ಎಸ್ ಪಥಸಂಚಲನ ಹಮ್ಮಿಕೊಂಡಿದೆ. ಆದರೆ ಈ ಒಂದು ಪಥ ಸಂಚಲನಕ್ಕೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಬ್ಯಾನರ್ ಹಾಗೂ ಭಗವಾಧ್ವಜಗಳನ್ನು ತೆರವುಗೊಳಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಬ್ಯಾನರ್, ಧ್ವಜ, ಪಥಸಂಚಲನ ಯಾವುದೇ ಇರಬಹುದು ಆಯೋಜಕರು ಅನುಮತಿ ತೆಗೆದುಕೊಂಡಿದ್ದಾರ? ಅಂತ ಪ್ರಶ್ನಿಸಿದರು. ಅನಧಿಕೃತವಾಗಿ ನಮ್ಮ ಪಕ್ಷದ ಬ್ಯಾನರ್ ಹಾಕಿದಾಗಲೇ ನನಗೆ ಕಮಿಷನರ್ ಫೈನ್ ಹಾಕಿದ್ದರು. ಎಲ್ಲದಕ್ಕೂ ನಿಯಮ ಅಂತ ಇರುತ್ತದೆ. ಅನುಮತಿ ಪಡೆದು ಶುಲ್ಕ ಪಾವತಿಸಲಿ. ಇನ್ನು RSS ಪಥ ಸಂಚಲನಕ್ಕೆ ಅನುಮತಿ ತೆಗೆದುಕೊಂಡಿಲ್ಲ ಕೇವಲ ಮಾಹಿತಿ ಕೊಡುವುದಲ್ಲ ಪಥ ಸಂಚಲನಕ್ಕೆ ಅನುಮತಿ ಕೇಳಬೇಕು. ನೋಂದಣಿ ಸಂಖ್ಯೆ ಎಷ್ಟು ಜನರು ಸೇರುತ್ತಾರೆ ಏನಾದರೂ ಆದರೆ ನಾವು 10 ಜನರಿದ್ದೇವೆ ಅಂತ ಅನುಮತಿ ಪಡೆಯಲಿ ಎಂದು…
ಬೆಂಗಳೂರು : ಬೆಂಗಳೂರಿನಲ್ಲಿ ಪುತ್ತೂರು ಮೂಲದ ಯುವಕ ನಿಗೂಢವಾಗಿ ಸಾವನಪ್ಪಿದ್ದಾನೆ. ಗ್ರಾಂಡ್ ಚಾಯ್ಸ್ ಲಾಡ್ಜ್ ನಲ್ಲಿ ತಕ್ಷಿತ್ (20) ಶವವಾಗಿ ಪತ್ತೆಯಾಗಿದ್ದಾನೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. 8 ದಿನದ ಹಿಂದೆ ಪ್ರೇಯಸಿಯ ಜೊತೆಗೆ ತಕ್ಷಿತ್ ಬೆಂಗಳೂರಿಗೆ ಬಂದಿದ್ದಾರೆ. 8 ದಿನಗಳ ಕಾಲ ಪ್ರೇಮಿಗಳು ಲಾಡ್ಜ್ ನಲ್ಲೆ ವಾಸವಿದ್ದರು. 8 ದಿನಗಳ ಕಾಲ ಊಟ ತಿಂಡಿಯನ್ನು ಪಾರ್ಸೆಲ್ ತರಿಸಿಕೊಂಡಿದ್ದರು. ಊಟ ಸೇವಿಸಿದ ಬಳಿಕ ಇಬ್ಬರಿಗೂ ಫುಡ್ ಪಾಯಿಸನ್ ಆಗಿತ್ತು ಈ ವೇಳೆ ಪ್ರೇಮಿಗಳು ಮೆಡಿಕಲ್ ಹೋಗಿ ಮಾತ್ರೆಗಳನ್ನು ತಂದು ನುಂಗಿದ್ದರು. ಸ್ವಲ್ಪ ಸುಧಾರಿಸಿದ ಬಳಿಕ ಯುವತಿ ಪ್ರಿಯಾಂಕಾ ಲಾಡ್ಜ್ ನಿಂದ ತೆರಳಿದ್ದಾಳೆ. ಆದರೆ ರೂಮ್ನಲ್ಲಿ ಇದ್ದ ತಕ್ಷಿತ್ ಮಲಗಿದ್ದಲ್ಲಿಯೇ ಶವವಾಗಿ ಪತ್ತೆಯಾಗಿದ್ದಾನೆ. ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಾಸನ : ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನಕ್ಕೆ ಕಳೆದ ಒಂದು ವಾರದಲ್ಲಿ 13 ಲಕ್ಷಕ್ಕೂ ಹೆಚ್ಚು ಜನರು ದೇವಿಯ ದರ್ಶನ ಪಡೆದಿದ್ದಾರೆ.ಆದರೆ ನಿನ್ನೆ ಶುಕ್ರವಾರ ಒಂದೇ ದಿನ 3.10ಲಕ್ಷ ಜನರು ದರ್ಶನ ಪಡೆದಿದ್ದಾರೆ. ದೇವಿಯ ದರ್ಶನ ಪಡೆಯುವ ಮೂಲಕ ಹಾಸನಾಂಬೆ ಹೊಸ ದಾಖಲೆ ಬರೆದಿದ್ದಾಳೆ. ಇಷ್ಟು ಭಕ್ತರು ಒಂದೇ ದಿನ ಯಾವುದೇ ಗೋವಾದಲ್ಲಿಯೂ ಕೂಡ ದರ್ಶನ ಮಾಡಿಲ್ಲ ಹಾಸನಾಂಬೆದಿ ಅವರದೆಯಲ್ಲಿ ಈ ವರ್ಷ ಇತಿಹಾಸ ನಿರ್ಮಾಣ ಆದಂತಾಗಿದೆ ಭಕ್ತರು ದರ್ಶನಕ್ಕಾಗಿ ನೀಡಲು ಮಾನಸಿಕವಾಗಿ ರೆಡಿಯಾಗಿ ಬಿಡಬೇಕು ಭಕ್ತರು ಹೆಚ್ಚು ಬರುತ್ತಿರುವುದರಿಂದ ಸಮಯ ಕೂಡ ಹೆಚ್ಚಾಗುತ್ತದೆ ಎಂದು ನಾಳೆ ಭಕ್ತರ ಸಂಖ್ಯೆ ನಿನಗಿಂತ ಜಾಸ್ತಿ ಕೂಡ ಆಗಬಹುದು ಗಣ್ಯರ ಹೆಸರಿನಲ್ಲಿ ಶಿಫಾರಸು ಪತ್ರ ಹಿಡಿದು ಬಂದರೆ ಅವಕಾಶ ಇಲ್ಲ ಗಣ್ಯರು ಬಂದರೆ ಮಾತ್ರ ಅವರೊಂದಿಗೆ ನವರನ್ನು ಕಳುಹಿಸುತ್ತೇವೆ. ನಿಕದಿತ್ಯ ಸಮಯದಲ್ಲಿ ಹಾಸನಾಂಬೆಯ ದರ್ಶನಕ್ಕೆ ಕಳುಹಿಸುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಹೌದು ಗುರುವಾರ ಒಂದೇ ದಿನ 2.58 ಲಕ್ಷ ಭಕ್ತರು…
BREAKING : ಚಟುವಟಿಕೆಗಳಿಗೆ ನಿರ್ಬಂಧ ಬೆನ್ನಲ್ಲೆ, ‘RSS’ ಸಂಬಂಧಿತ ಜಮೀನುಗಳಿಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಚಿಂತನೆ
ಬೆಂಗಳೂರು : ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗೆ ನಿರ್ಬಂಧ ಹೇರಿದ್ದಾಯಿತು ಇದೀಗ ಮತ್ತೊಂದು ಪ್ಲಾನ್ ಮಾಡಿಕೊಂಡಿರುವ ರಾಜ್ಯ ಸರ್ಕಾರ ಆರ್ ಎಸ್ ಎಸ್ ಸಂಬಂಧಿತ ಸಂಸ್ಥೆಗಳ ಜಮೀನುಗಳಿಗೆ ಅಂಕುಶ ಹಾಕುವ ಚಿಂತನೆ ನಡೆಸುತ್ತಿದೆ. ಸಚಿವ ಪ್ರಿಯಾಂಕ ಖರ್ಗೆಗೆ ಕಾಂಗ್ರೆಸ್ ನಾಯಕರು ಈ ಕುರಿತು ಸಲಹೆ ನೀಡಿದ್ದು, ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಿದ್ದ ಭೂಮಿಯನ್ನು ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ. ಸರ್ಕಾರ ಮಂಜೂರು ಮಾಡಿದ ಭೂಮಿ ಪರಿಶೀಲನೆಗೆ ಇದೀಗ ಚಿಂತನೆ ನಡೆಯುತ್ತಿದೆ. 2023ರಲ್ಲೂ ಸರ್ಕಾರ ಬಂದ ಆರಂಭದಲ್ಲೇ ಈ ಕುರಿತು ಪರಿಶೀಲನೆ ನಡೆದಿತ್ತು. ಬಳಿಕ ಆರ್ ಎಸ್ ಎಸ್ ಲ್ಯಾಂಡ್ ಆಡಿಟ್ ಸ್ಥಗಿತಗೊಂಡಿತ್ತು. ಹಂಚಿಕೆಯಾದ ವಿವಾಹಿತ ಭೂಮಿಗಳ ಶಾರ್ಟ್ ಲೀಸ್ಟ್ ಅಲ್ಲಿ ಪರಿಶೀಲನೆ ಕುರಿತು ಚಿಂತನೆ ನಡೆಸಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್ ಎಸ್ ಎಸ್ ಕೆ ಹಂಚಿದ್ದ ಜಮೀನು ಇದಾಗಿದ್ದು, ಹಂಚಿಕ ಮಂಡಿಸಿದ ಭೂಮಿಯನ್ನು ಸರ್ಕಾರ ಪರಿಶೀಲನೆ ಮಾಡಲಿದೆ. ಬೆಂಗಳೂರಿನ ದೇವನಹಳ್ಳಿಯ ಗ ಹರಳೂರಿನಲ್ಲಿ ಚಾಣಕ್ಯ ವಿವಿಸ್ಥಾಪನೆಗೆ ಭೂಮಿ ಮಂಜೂರು ಮಾಡಿತ್ತು.…
ಕಲಬುರ್ಗಿ : ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧದ ಕೋರುತ್ತಂತೆ ಪ್ರತಿಭಾ ಪ್ರಿಯಾಂಕ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಸಚಿವ ಸಂಪುಟದಲ್ಲಿ ಆರ್ ಎಸ್ ಎಸ್ ಸೇರಿದಂತೆ ಸಂಘ ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯುವುದು ಕಡ್ಡಾಯ ಎಂದು ಮಹತ್ವದ ನಿರ್ಧಾರ ತೆಗೆದುಕೊಂಡಿತು. ಇದರ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆಗೆ ಸಡ್ಡು ಹೊಡೆಯಲು ಆರ್ಎಸ್ಎಸ್ ನಾಳೆ ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಪಥಸಂಚಲನ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರದ ಚಿತ್ತಾಪುದರಲ್ಲಿ ಭಗವಾ ಧ್ವಜಗಳನ್ನು ತೆರವುಗೊಳಿಸಲಾಗಿದೆ. ತಡರಾತ್ರಿ ಪುರಸಭೆ ಅಧಿಕಾರಿಗಳು ಬ್ಯಾನರ್ ಅದೆಲ್ಲವನ್ನು ತೆರವು ಮಾಡಿದ್ದಾರೆ. ಪ್ರವೀಣ್ ಪರವಾನಿಗೆ ಇಲ್ಲದೆ ಅನುಮತಿ ಪಡೆಯದೆ ಭಗವಧ್ವಜ ಬ್ಯಾನರ್ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಅಧಿಕಾರಿಗಳ ಈ ನಡೆಗೆ ಆರ್ ಎಸ್ ಎಸ್ ನ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭೆ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವಂತೆ ಸಚಿವ ಪ್ರಿಯಾಂಕ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಬೆನ್ನಲ್ಲೆ, ಸಂಪುಟ ಸಭೆಯಲ್ಲಿ ಆರ್ ಎಸ್ ಎಸ್ ಸೇರಿದಂತೆ ಖಾಸಗಿ ಸಂಘ ಸಂಸ್ಥೆಗಳು ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮ ನಡೆಸಬೇಕಾದರೆ, ಅನುಮತಿ ಪಡೆಯುವುದು ಕಡ್ಡಾಯ ಎಂದು ನಿರ್ಧಾರ ತೆಗೆದುಕೊಂಡಿತು. ಇದೀಗ ಒಂದಡೆ ಆರ್ ಎಸ್ ಎಸ್ ಚಟುವಟಿಕೆಗಳಿಗೆ ಪರೋಕ್ಷವಾಗಿ ನಿಷೇಧದ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದು ಕಡೆ ಆರ್ ಎಸ್ ಎಸ್ ಸಂಬಂಧಿತ ಕಾರ್ಯಕ್ರಮಗಳು ಮುಂದುವರೆದಿದೆ. ಹೌದು ಆರ್‌ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ಇದೀಗ ಬೌದ್ಧಿಕ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಬೌದ್ಧಿಕ ಕಾರ್ಯಕ್ರಮ ನಡೆಯಲಿದೆ. ಈ ಒಂದು ಕಾರ್ಯಕ್ರಮ ಎರಡು ದಿನ ನಡೆಯಲಿದ್ದು ಮೋಹನ್ ಭಾಗವತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ 8 ಮತ್ತು 9ರಂದು ಹೊಸಕೆರೆಹಳ್ಳಿಯ ಪಿ ಇ ಎಸ್ ಕಾಲೇಜಿನಲ್ಲಿ ಈ ಒಂದು ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಭಾರತ ಭಾಗದಿಂದ ಸುಮಾರು 1000…
ಆಂಧ್ರಪ್ರದೇಶ : ಹೋಟೆಲ್ ನಲ್ಲಿ ಉಪಹಾರ ಸೇವಿಸಿದ 20ಕ್ಕೂ ಹೆಚ್ಚು ಜನರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಆಂಧ್ರಪ್ರದೇಶದ ಅಂಬೇಡ್ಕರ್ ಕೋನಸಿಮಾ ಜಿಲ್ಲೆಯಲ್ಲಿ ನಡೆದಿದೆ. ಅಸ್ವಸ್ಥಗೊಂಡ 16 ಜನರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಪಹಾರ ಸೇವಿಸಿದ ಬಳಿಕ ವಾಂತಿ ಭೇಧಿ ಕಾಣಿಸಿಕೊಂಡು ಗ್ರಾಹಕರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಎರಡು ದಿನಗಳ ಹಿಂದೆ ಜನರು ಈ ಹೋಟೆಲ್ನಲ್ಲಿ ಉಪಹಾರ ಸೇವಿಸಿದ್ದರು. ಅಂಬಾಜಿಪೇಟೆ ಮಂಡಲದ ಮಹಾಚವರಂ ನಲ್ಲಿ ಈ ಒಂದು ಘಟನೆ ನಡೆದಿದೆ.
ಬೆಂಗಳೂರು : ರಾಜ್ಯದ ಸರ್ಕಾರಿ ಆವರಣಗಳಲ್ಲಿ RSS ಸೇರಿದಂತೆ ಯಾವುದೇ ಸಂಘಟನೆಗಳು ಖಾಸಗಿ ಕಾರ್ಯಕ್ರಮ ನಡೆಸಬೇಕೆಂದರೆ ಇನ್ಮುಂದೆ ಅನುಮತಿ ಪಡೆಯೋದು ಕಡ್ಡಾಯ ಎಂದು ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಇದೀಗ ಇದೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವೇ ಪರಿಚಯಿಸಿರುವ ನಿಯಮಾವಳಿಗಳ ಅನುಸಾರ ಸಾರ್ವಜನಿಕ ಹಾಗೂ ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದೆಂದು ಆಗ್ರಹಿಸಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಟ್ವೀಟ್ ನಲ್ಲಿ ಸರ್ಕಾರವೇ ಪರಿಚಯಿಸಿರುವ ನಿಯಮಾವಳಿಗಳ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದೆಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ಸವಿವರವಾಗಿ ಪತ್ರ ಬರೆದಿದ್ದೇನೆ. ಸ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಸರ್ಕಾರದ ಆಶಯ ಎಲ್ಲರಿಗೂ ಅನ್ವಯ ಆಗಬೇಕು. ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ. https://twitter.com/BasanagoudaBJP/status/1979102508816429269?t=53V2LbGDJexKpV1PvTV6kA&s=19














