Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಸೆಪ್ಟೆಂಬರ್ 22ರಂದು ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆ ನಡೆಯಲಿದ್ದು ಈ ವಿಚಾರವಾಗಿ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಿತು. ಅಲ್ಲದೇ ಕುರುಬ ಸಮುದಾಯವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಕುರಿತು ಕೆಲ ಸಚಿವರು ಟೇಬಲ್ ಕುಟ್ಟಿ ಆಕ್ರೋಶ ಹೊರಹಾಕಿದ್ದಾರೆ ಸಚಿವರ ಈ ಒಂದು ನಡೆಗೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಹೌದು ಜಾತಿ ಗಣತಿ ಸಮೀಕ್ಷೆ ಮುಂದೂಡುವ ವಿಚಾರವಾಗಿ ಇಂದು ಸಚಿವರ ಜೊತೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಿತು. ಸಿದ್ದರಾಮಯ್ಯ ಮಾತಿಗೂ ಕೂಡ ಅವಕಾಶ ನೀಡಿದಂತೆ ಸಚಿವರು ಆಕ್ರೋಶ ಹೊರ ಹಾಕಿದ್ದಾರೆ. ಜಾತಿ ಗಣತಿ ಗೊಂದಲದ ಕುರಿತು ಸಚಿವರು ಟೇಬಲ್ ಕುಟ್ಟಿ ಆಕ್ರೋಶ ಹೊರ ಹಾಕಿದ್ದಾರೆ. ಸಚಿವರ ಆಕ್ರೋಶಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಸೀಟ್ ನಿಂದ ಗೆದ್ದು ಅತ್ತಿತ್ತ ಓಡಾಡಿದ್ದಾರೆ. ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಎಂದೂ ಕೂಡ ಹೀಗೆ ಅದು ಓಡಾಡಿರಲಿಲ್ಲ. ಸಚಿವರ ಆಕ್ರೋಶದ ಅರಿವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ.…
ಗದಗ : ಗದಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಕಾರು ಒಂದಕ್ಕೆ ಗೋವಾ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ರವಿ ನೆಲ್ಲೂರು ಅರ್ಜುನ್ ನೆಲ್ಲೂರು ಸೇರಿದಂತೆ ಸ್ಥಳದಲ್ಲೇ ಮೂವರು ಸಾವನಪ್ಪಿದ್ದಾರೆ ಮೃತಪಟ್ಟವರು ಹಾವೇರಿ ಜಿಲ್ಲೆಯ ಹುನಗುಂದ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಅಪಘಾತದ ಕುರಿತು ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಲಾರಿ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿ ಇಬ್ಬರು ಸಾವನಪ್ಪಿದ್ದಾರೆ. ಕಂಚಿನ ಬಾಗಿಲು ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕಂಚಿನ ಬಾಗಿಲು ಎಂಬಲ್ಲಿ ಅಪಘಾತ ಸಂಭವಿಸಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ದಿಂದ ಲಾರಿ ಯಲ್ಲಾಪುರ ಕಡೆಗೆ ತೆರಳುತ್ತಿತ್ತು. ಈ ವೇಳೆ KSRTC ಬಸ್ ಲಾರಿ ಮಧ್ಯ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಲಾರಿ ಚಾಲಕ ಮತ್ತು ಬಸ್ ನಲ್ಲಿ ಇದ್ದಂತ ಓರ್ವ ಪ್ರಯಾಣಿಕ ಸಾವನಪ್ಪಿದ್ದಾರೆ. ಗಾಯಾಳುಗಳನ್ನು ಅಂಕೋಲಾ ತಾಲೂಕು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಧರ್ಮಸ್ಥಳದಲ್ಲಿ ಗುರುತಿಸಿದ ಸ್ಥಳ ಅಲೆಯಲು ಸೂಚನೆ ಕೋರಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಪುರಂದರ ಗೌಡ ಮತ್ತು ತುಕಾರಾಮ ಗೌಡ ವಿಚಾರಣೆ ನಡೆಯಿತು. ವಿಚಾರಣೆಯ ವೇಳೆ ಎಸ್ ಪಿ ಪಿ ಬಿ ಏನ್ ಜಗದೀಶ್ ವಾದ ಮಂಡಿಸಿದರು. ಯಾವ ಕಾರಣಕ್ಕೆ ಷಡ್ಯಂತರವಿದೆ ಎಂದು ಹೈಕೋರ್ಟ್ ಪ್ರಶ್ನಿಸಿತು. ಷಡ್ಯಂತ್ರ ಏಕೆ ಎಂಬುವುದರ ಬಗ್ಗೆ ಇನ್ನೂ ತಿಳಿದು ಬರಬೇಕಿದೆ. ಸ್ವತಂತ್ರವಾದ ಮಾಹಿತಿಯನ್ನೇ ನೀಡಿಲ್ಲ ಎಂದು ಜಗದೀಶ್ ಉತ್ತರಿಸಿದರು. ನಿಮ್ಮ ಮನವಿಯೇ ಚಿನ್ನಯ್ಯನ ಹೇಳಿಕೆಯನ್ನು ಆಧರಿಸಿದೆ. ನಿಮ್ಮ ಮನವಿ ಪರಿಗಣಿಸಿದರೆ ನಾಳೆ ಮತ್ತಷ್ಟು ಜನ ಬರಬಹುದು ಎಂದು ಜಡ್ಜ್ ಇದೆ ವೇಳೆ ತಿಳಿಸಿದರು. ಚಿನ್ನಯ ಎರಡು ವರ್ಷದ ಹಿಂದೆಯೇ ಧರ್ಮಸ್ಥಳಕ್ಕೆ ಮರಳಿದ್ದ ತಲೆ ಬುರುಡೆಯನ್ನು ಬೇರೆಯವರು ತನಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ. ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಲು ಇಂದು ಕರೆದೊಯ್ಯಲಾಗಿದೆ. ಆದರೆ ಮ್ಯಾಜಿಸ್ಟ್ರೇಟ್ ಇಂದು ಚೆನ್ನಯ್ಯನ ಹೇಳಿಕೆ ದಾಖಲಿಸಿಲ್ಲ. ಪುರಂದರ ಮತ್ತು ತುಕಾರಾಂ ಕೂಡ ಚಿನ್ನಯ ಹೇಳಿಕೆ ಆಧರಿಸಿ ದೂರು ನೀಡಿದ್ದಾರೆ ಸ್ವತಂತ್ರವಾದ ಮಾಹಿತಿ…
ಉತ್ತರಕನ್ನಡ : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ಘಟನೆ ಮಾಸುವ ಮುನ್ನವೇ, ಉತ್ತರ ಕನ್ನಡದಲ್ಲಿ ಮತ್ತೊಂದು ಘೋರ ಘಟನೆ ನಡೆದಿದ್ದು, ಬೈಕ್ ಓವರ್ ಟೆಕ್ ವಿಚಾರವಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವಕನಿಗೆ ಚಾಕು ಇರಿದಿದ್ದಾನೆ . ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ರಸ್ತೆಯ ಮಾವಿಹೊಳೆ ಎಂಬಲ್ಲಿ ಈ ಒಂದು ಘಟನೆ ನಡೆದಿದೆ. ವಿವೇಕ್ ನಾಯಕಗೆ ಅದ್ನಾನ್ ನದೀಮ್ ಶೇಕ್ ಎನ್ನುವ ಮುಸ್ಲಿಂ ಯುವಕ ಚಾಕು ಇರಿದಿದ್ದಾನೆ. ಗಾಯಗೊಂಡ ವಿವೇಕ್ ಸುರೇಶ್ ನಾಯಕ್ ಸದ್ಯ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಕುರಿತಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಲೋಕಸಭೆ ಚುನಾವಣೆಯ ವೇಳೆ ಬೆಂಗಳೂರಿನ ಮಹದೇವಪುರದಲ್ಲಿ ಮತಗಳ್ಳತನ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ದಾಖಲೆ ಸಮೇತ ಆರೋಪ ಮಾಡಿದ್ದರು. ಇದೀಗ ಆಳಂದ ಕ್ಷೇತ್ರದಲ್ಲಿ ಕೂಡ ಮತಪಟ್ಟಿಯಿಂದ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ ಎಂದು ಮತ್ತೊಂದು ಆರೋಪ ಮಾಡಿದ್ದಾರೆ ಇದೇ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರು ಅಧಿಕೃತ ಮತಗಳ್ಳತನ ಮಾಡುತ್ತಿರುವ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಗೂ ಮುನ್ನ 7,250 ಮತದಾರರ ಹೆಸರು ಏಕಾಏಕಿ ಮತದಾರರಿಗೆ ಗೊತ್ತಿಲ್ಲದೆ ಡಿಲೀಟ್ ಆಗ್ತಿತ್ತು. ಅದರ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಮತ್ತು ನಾನು ಎಲೆಕ್ಷನ್ ಕಮಿಷನ್ಗೆ ದೂರು ಕೊಟ್ಟಿದ್ದೆವು. ಅದರ ಆಧಾರದ ಮೇಲೆ ಕಲಬುರಗಿಯಲ್ಲಿ ಎಫ್ಐಆರ್ ದಾಖಲಿಸಲಾಯಿತು. ಪರಿಶೀಲನೆ ಮಾಡಿದಾಗ 6018 ಮತದಾರರಲ್ಲಿ ಯಾರ್ಯಾರು ಅರ್ಜಿ ಹಾಕಿದ್ರು, ಅದರಲ್ಲಿ 28 ಜನಕ್ಕೆ ಮಾತ್ರ ಮಾಹಿತಿ ಇತ್ತು. ಉಳಿದ ಅರ್ಜಿದಾರರಿಗೆ ಯಾವುದೇ ಮಾಹಿತಿಯೇ ಇರಲಿಲ್ಲ ಎಂದು…
ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 22ರಂದು ಜಾತಿಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಈಗಾಗಲೇ ಈ ಕುರಿತು ಆದೇಶ ಹೊರಡಿಸಿದೆ. ಇದರ ಮಧ್ಯ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕುರಿತು ಕೆಲವು ಸಚಿವರಿಂದ ಪರ ವಿರೋಧ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಜಾತಿಗತಿ ಸಮೀಕ್ಷೆ ಕುರಿತು ಬಿಡುಗಡೆ ಮಾಡಿರುವ ಕೈಪಿಡಿ ಮೂಲೆಗುಂಪಾಗಿದೆ. ಹೌದು ಹಿಂದುಳಿದ ವರ್ಗದ ಆಯೋಗದ ಮಹಾ ಎಡವಟ್ಟಿನಿಂದ ಜಾತಿ ಸಮೀಕ್ಷೆ ತಯಾರಿ ಎಡವಟ್ಟಿನ ಹಿನ್ನೆಲೆಯಲ್ಲಿ 2 ಲಕ್ಷ ಹೊಸ ಜಾತಿಗತಿ ಕೈಪಿಡಿ ಇದೀಗ ತಿಪ್ಪೆಗೆ ಸೇರಿದೆ. ಮೊನ್ನೆ ಮೊನ್ನೆ ಅಷ್ಟೇ ಸಿಎಂ ಸಿದ್ದರಾಮಯ್ಯ ಕೈಪಿಡಿ ಬಿಡುಗಡೆ ಮಾಡಿರುವ ಕೈಪಿಡಿ ಮೂಲೆಗುಂಪಾಗಿದೆ. ಹಿಂದುಳಿದ ಆಯೋಗದ ಮಹಾ ಎಡವಟ್ಟಿನಿಂದ ಇದೀಗ ಸಿಎಂ ಸಿದ್ದರಾಮಯ್ಯ ಅವರೇ ಬಿಡುಗಡೆಗೊಳಿಸಿರುವ ಕೈಪಿಡಿ ಮೂಲೆಗುಂಪಾಗಿದೆ. ಸುಮಾರು 1 ಕೋಟಿ ಖರ್ಚಿನಲ್ಲಿ ಈ ಒಂದು ಕೈಪಿಡಿ ತಯಾರಿಸಲಾಗಿತ್ತು. ಈಗ ಮತ್ತೆ ಹೊಸ ಕೈಪಡಿ ತಯಾರಿಕೆಗೆ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ. ಸೆಪ್ಟೆಂಬರ್ 22 ರಿಂದ ಆರಂಭ…
ಬೆಂಗಳೂರು : ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವಡೆ ಭಾರಿ ಮಳೆ ಸುರಿಯುತ್ತಿದ್ದು ಇನ್ನೂ ಹಲವು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಇದೀಗ ಬೆಂಗಳೂರಿನಲ್ಲಿ ನಗರದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಬೆಂಗಳೂರು ನಗರದ ಶಾಂತಿನಗರ ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಕೆ ಆರ್ ಮಾರ್ಕೆಟ್, ಮೆಜೆಸ್ಟಿಕ್, ಕಬ್ಬನ್ ಪಾರ್ಕ್ ಹಾಗು ವಿಧಾನಸೌಧ ಸೇರಿದಂತೆ ನಗರದ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಭಾರಿ ಮಳೆ ಹಿನ್ನೆಲೆ ವಾಹನ ಸವಾರರು ಪರದಾಟ ನಡೆಸಿದರು.
ಬೆಂಗಳೂರು : ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಆಗಿದೆ. ನಗರದ ಅವಲಹಳ್ಳಿ ಖಾಸಗಿ ಕಾಲೇಜಿನಲ್ಲಿ ಈ ಒಂದು ಗಲಾಟೆ ನಡೆದಿದೆ. ಕಾರಣ ಏನು ಅಂದರೆ ಓಣಂ ವಿಚಾರವಾಗಿ ಕೇರಳ ವಿದ್ಯಾರ್ಥಿಗಳ ನಡುವೆ ಈ ಒಂದು ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಹೌದು ಓಣಂ ವಿಚಾರವಾಗಿ ಪರಸ್ಪರ ವಿದ್ಯಾರ್ಥಿಗಳ ಗುಂಪು ಹೊಡೆದಾಡಿಕೊಂಡಿದೆ. ಕಾಲೇಜಿನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳು ಗಲಾಟೆ ನಡೆಸಿದ್ದಾರೆ. ಓಣಂ ವಿಚಾರವಾಗಿ ಕೇರಳ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ ಕಾಲೇಜಿನಲ್ಲಿ ಸೀನಿಯರ್ಸ್ ಮತ್ತು ಜೂನಿಯರ್ಸ್ ನಡುವೆ ಗಲಾಟೆ ನಡೆದಿದೆ. ಪೊಲೀಸರು ವಿದ್ಯಾರ್ಥಿಗಳ ಗಲಾಟೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ಐಟಿ ಅಧಿಕಾರಿಗಳು ಬಂಗ್ಲೆ ಗುಡ್ಡದಲ್ಲಿನ ಶೋಧ ಸಂಪೂರ್ಣವಾಗಿ ಮುಕ್ತಾಯಗೊಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಈ ಒಂದು ಬಂಗ್ಲೆಗುಡ್ಡದಲ್ಲಿ 7 ಮಾನವನ ತಲೆ ಬುರುಡೆ ಸೇರಿದಂತೆ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ. ಇದೀಗ ಶೋಧ ಮುಕ್ತಾಯಗೊಳಿಸಿ ಎಸ್ಐಟಿ ಅಧಿಕಾರಿಗಳು ಕಚೇರಿಗೆ ಮರಳಿದ್ದಾರೆ. ಇಂದು ಧರ್ಮಸ್ಥಳದಲ್ಲಿ ಎಸ್ಐಟಿ ತಂಡ ಶೋಧ ಕಾರ್ಯ ಸಂಪೂರ್ಣವಾಗಿ ಅಂತ್ಯಗೊಳಿಸಿದೆ. ಬುರುಡೆ ಮತ್ತು ಅಸ್ತಿ ಪಂಜರದ ಬಳಿ ವ್ಯಕ್ತಿ ಒಬ್ಬರ ಐಡಿ ಕಾರ್ಡ್ ಪತ್ತೆಯಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೇಟಗೇರಿ ಗ್ರಾಮದ ಯುಬಿ ಐಯಪ್ಪ ಎನ್ನುವವರ ಐಡಿ ಕಾರ್ಡ್ ಪತ್ತೆಯಾಗಿದೆ. 7 ವರ್ಷಗಳ ಹಿಂದೆ ವೃದ್ಧ ಯುಬಿ ಐಯ್ಯಪ್ಪ ನಾಪತ್ತೆಯಾಗಿದ್ದರು. ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ಹೇಳಿದಾಗ ಯು.ಬಿ ಅಯ್ಯಪ್ಪ ನಾಪತ್ತೆಯಾಗಿದ್ದರು.ಈ ಕುರಿತು ಸಂಬಂಧಿಕರು ಕುಟ್ಟ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಅಯ್ಯಪ್ಪ ಅವರಿಗಾಗಿ ಕುಟುಂಬಸ್ಥರು ಬಹಳಷ್ಟು ಹುಡುಕಾಡಿದರು. ಇದೀಗ ಇದು ಎಸ್ಐಟಿ ಶೋಧದ ವೇಳೆ ಯು.ಬಿ…









