Subscribe to Updates
Get the latest creative news from FooBar about art, design and business.
Author: kannadanewsnow05
ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಭೀಕರವಾದಂತಹ ಕೊಲೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ KSRTC ಬಸ್ ನಲ್ಲೆ ವ್ಯಕ್ತಿಗೆ ಚಾಕು ಇರಿದು ಹತ್ಯೆಗೈದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ದುಂಡಸಿನಗರದ ಸರ್ಕಾರಿ ಆಸ್ಪತ್ರೆಯ ಬಳಿ ನಡೆದಿದೆ. ದುಂಡಸಿನಗರದ ಪ್ರೀತಂ ಡಿಸೋಜ ಎನ್ನುವ ವ್ಯಕ್ತಿಯನ್ನು ಹತ್ಯೆಗೈಯ್ಯಲಾಗಿದೆ. ಕೊಲೆ ಮಾಡಿದ ವ್ಯಕ್ತಿಯನ್ನು ಗಂಗಾಧರ ಎಂದು ತಿಳಿದುಬಂದಿದೆ. ಪ್ರೀತಂ ಶಿರಸಿಯ ಪತ್ನಿ ಮನೆಗೆ ಬಂದಿದ್ದ. ಪತ್ನಿ ಜೊತೆ ಬಸ್ ನಲ್ಲಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಚಲಿಸುತ್ತಿದ್ದ ಸರ್ಕಾರಿ ಬಸ್ ನಲ್ಲಿ ಪ್ರೀತಂ ಡಿಸೋಜ ಭೀಕರ ಕೊಲೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸರ್ಕಾರಿ ಆಸ್ಪತ್ರೆಯ ಬಳಿ ಈ ಒಂದು ಘಟನೆ ನಡೆದಿದೆ. ಪ್ರಯಾಣಿಕ ಪ್ರೀತಂ ಡಿಸೋಜಗೆ ಗಂಗಾಧರ ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಆ ಕೊಲೆ ಆರೋಪಿ ಗಂಗಾಧರ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿ : ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಬೆನ್ನಲ್ಲೇ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಇದೀಗ ಪರಿಸ್ಥಿತಿ ಉದ್ವಿಗ್ನವಾಗಿದೆ. ಈ ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ನಿನ್ನೆಯಿಂದ ಕರ್ನಾಟಕಕ್ಕೆ ತಮ್ಮ ಸರ್ಕಾರಿ ಪಾಸ್ ಗಳನ್ನು ಪಡೆದೆ ಬೆಳಗಾವಿಯ ಗಡಿ ಪ್ರದೇಶದಲ್ಲಿ ನಿಲ್ಲಿಸುತ್ತೇವೆ ಆದರೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ರಾಜ್ಯ ಸರ್ಕಾರ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ನಡೆಸುತ್ತಿದೆ. ನಿನ್ನೆ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತೆ ಬಾಲ ಬಿಚ್ಚಿದ್ದು ಕೆಎಸ್ಆರ್ಟಿಸಿ ಬಸ್ಗೆ ಮಸಿ ಬೆಳೆದು ಪುಂಡಾಟಿಕೆ ಮೆರೆದಿದ್ದಾರೆ. ಹೌದು ಮಹಾರಾಷ್ಟ್ರದಲ್ಲಿ ಮುಂದುವರಿದ ಶಿವ ಸೇನೆ ಕಾರ್ಯಕರ್ತರ ಪುಂಡಾಟ. ಕೆಎಸ್ಆರ್ಟಿಸಿ ಅಂಬಾರಿ ಬಸ್ ಮೇಲೆ ಕಪ್ಪು ಮಸಿ ಬಳಿದು ಪುಂಡಾಟೀಕೆ ಮರೆದಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಪುಣೆಯ ಸ್ವರ ಗೇಟ್ ನಲ್ಲಿ ಬಸ್ಗೆ ಮಸಿ ಬಳಿಯಲಾಗಿದೆ. ನಿನ್ನೆ ಪುಣೆಗೆ ತೆರಳಿದ್ದ ಅಂಬಾರಿ ಬಸ್ ಗೆ ವಾಪಸ್ ಬರುವಾಗ ಮಸಿ ಬಳಿದಿದ್ದಾರೆ. ಮಹಾರಾಷ್ಟ್ರದಿಂದ ಬೆಳಗಾವಿಗೆ ಆಗಮಿಸುವಾಗ ಕೆಎಸ್ಆರ್ಟಿಸಿಯ ಅಂಬಾರಿ ಬಸ್ಗೆ…
BIG NEWS : ‘ಗೃಹಲಕ್ಷ್ಮಿ’ ಹಣ ಕೂಡಿಟ್ಟು, ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಕೊಡುಗೆ ನೀಡಿದ ಗೃಹಿಣಿ!
ಮಂಡ್ಯ : ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಎಷ್ಟೋ ಹೆಣ್ಣುಮಕ್ಕಳು ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದೀಗ ಮಂಡ್ಯದಲ್ಲಿ ಮತ್ತೋರ್ವ ಮಹಿಳೆ ಸಮಾಜಕ್ಕೆ ಮಾದರಿಯಾಗಿದ್ದು, ಗೃಹಲಕ್ಷ್ಮಿಯಿಂದ ಬಂದ 30 ಸಾವಿರ ಹಾಗೂ ತಾವು ಕೂಡಿಟ್ಟ 20 ಸಾವಿರ ಹಣವನ್ನು ಸೇರಿಸಿ ತಮ್ಮೂರಿನ ಸರ್ಕಾರೀ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ ನೀಡಿದ್ದಾರೆ. ಹೌದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯ ಕೊಪ್ಪಲು ಗ್ರಾಮದ ಗೃಹಿಣಿ ವಿಜಯಲಕ್ಷ್ಮಿ ಅವರು ತಮ್ಮೂರಿನ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ತಮಗೆ ಬಂದಿದ್ದ ಗೃಹಲಕ್ಷಿ ಯೋಜನೆಯ 30 ಸಾವಿರ ಹಣದ ಜೊತೆಗೆ ತಾವು ಕೂಡಿಟ್ಟಿದ್ದ ಸ್ವಲ್ಪ ಹಣದ ಜೊತೆ 50 ಸಾವಿರ ರೂ. ಮೌಲ್ಯದ ಕುಡಿಯುವ ನೀರಿನ ವಾಟರ್ ಫಿಲ್ಟರ್ ಅನ್ನು ಕೊಡಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.ಗ್ರಾಮದಲ್ಲಿನ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕುಡಿಯುವ ನೀರಿನ ಸಮಸ್ಯೆ ಅರಿತು, ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ಕೊಟ್ಟ ದಂಪತಿಯ ಕಾರ್ಯಕ್ಕೆ…
ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣವನ್ನು ಕೈಬಿಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಈ ಒಂದು ಅರ್ಜಿಗೆ ಸಿಐಡಿ ಎಸ್ ಪಿ ಪಿ ಬಿ ಎನ್ ಜಗದೀಶ್ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ವಿಚಾರಣೆಯನ್ನು ಫೆಬ್ರವರಿ 28ಕ್ಕೆ ಮುಂದೂಡಿ ಆದೇಶಿಸಿತು. ಕ್ರೈಂ ನಂಬರ್ 20/2024 ಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ಸಲ್ಲಿಕೆ ಮಾಡಲಾಗಿದೆ. ಗುರುತರವಾದ ಆರೋಪ ಇರುವುದರಿಂದ ಕೇಸ್ ನಿಂದ ಕೈ ಬಿಡದಂತೆ ಜಗದೀಶ್ ಮನವಿ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಪರ ವಕೀಲರು ವಾದ ಮಂಡಿಸಲು ಸದ್ಯ ವಿಚಾರಣೆ ಮುಂದೂಡಿಕೆ ಮಾಡಲಾಯಿತು. ಫೆಬ್ರವರಿ 28ಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಿಗದಿಪಡಿಸಿದೆ.
ಕಲಬುರ್ಗಿ : ಇಂದು ಬೆಳಿಗ್ಗೆ ತಾನೇ ತುಮಕೂರು ಜಿಲ್ಲೆಯಲ್ಲಿ ಹೃದಯಾಘಾತದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಒಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಈಗ ಕಲ್ಬುರ್ಗಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಒಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿ ನಗರದಲ್ಲಿ ನಡೆದಿದೆ. ಹೌದು ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು ಕಲ್ಬುರ್ಗಿ ಗಂಗಾನಗರ ನಿವಾಸಿ ರವಿಕುಮಾರ್ (19) ಎನ್ನುವ ವಿದ್ಯಾರ್ಥಿ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ.ಬೆಳಿಗ್ಗೆ ಮನೆಯಲ್ಲಿ ಕಲ್ಬುರ್ಗಿ ಪಿಡಿಎ ಇಂಜಿನಿಯರ್ ಕಾಲೇಜಿನಲ್ಲಿ ರವಿಕುಮಾರ್ 4ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇಂದು ಮನೆಯಲ್ಲಿ ಇದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ವಿದ್ಯಾರ್ಥಿ ರವಿಕುಮಾರ್ ಸಾವನ್ನಪ್ಪಿದ್ದಾನೆ.
ಹಾವೇರಿ : ಕಳೆದ ಒಂದುವಾರದಿಂದ ಹಾವೇರಿ ಜಿಲ್ಲೆಯಲ್ಲಿ ಶಿರತೆಯೊಂದು ತೀವ್ರ ಆತಂಕ ಮೂಡಿಸಿದ ಹಾವೇರಿ ಜಿಲ್ಲೆಯ ಮಾಳಾಪುರ ಹಾಗೂ ಅಗಡಿ ಗ್ರಾಮದ ಜನರಲ್ಲಿ ಚಿರತೆ ಹಾವಳಿಯಿಂದ ಜನರು ನಿದ್ದೆಗೆಟ್ಟಿದ್ದರು. ಇದೀಗ ಸತತ 8 ಗಂಟೆಗಳ ಕಾರ್ಯಾಚರಣೆಯ ಫಲವಾಗಿ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಹಿಡಿದಿದ್ದಾರೆ. ಹೌದು ಸತತ 8 ಗಂಟೆಗಳ ಬಳಿಕ ಚಿರತೆ ಸೆರೆ ಸಿಕ್ಕಿದೆ. ಹಾವೇರಿ ತಾಲೂಕಿನ ಮಾಳಾಪುರ ಬಳಿ ಚಿರತೆ ಇದೀಗ ಸರಿ ಸಿಕ್ಕಿದೆ. ಮಾಳಾಪುರ ಬಳಿ ಚಿರತೆ ಕಾಲುವೆಯಲ್ಲಿ ಅವಿತು ಕುಳಿತುಕೊಂಡಿತು. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ಒಂದು ವಾರದಿಂದ ಮಾಳಾಪುರ ಮತ್ತು ಭೂವಿರಾಪುರ ಮತ್ತು ಅಗಡಿ ಗ್ರಾಮದ ಸುತ್ತಮುತ್ತಲು ಈ ಒಂದು ಚರತೆ ಆತಂಕ ಹುಟ್ಟಿಸಿತ್ತು.ಇದೀಗ ಚಿರತೆಯ ಹೆಸರೆಯಿಂದ ಮೂರು ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ದಾವಣಗೆರೆ : ದಾವಣಗೆರೆಯಲ್ಲಿ ಪೊಲೀಸರು ಭರ್ಜರಿ ಕಯಾಚರಣೆ ನಡೆಸಿದ್ದು ಖಾಸಗಿ ಹೋಟೆಲ್ ನಲ್ಲಿ ಅಕ್ರಮವಾಗಿ ಜೂಜು ಆಡುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 26 ಜನರನ್ನು ವಶಕ್ಕೆ ಪಡೆದುಕೊಂಡು 25 ಲಕ್ಷ ನಗದು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಹೌದು ನಗರದ ಡೆಂಟಲ್ ಕಾಲೇಜ್ ರಸ್ತೆಯ ಹೋಟೆಲ್ ಒಂದರಲ್ಲಿ ನಡೆಸುತ್ತಿದ್ದ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 26 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಹೋಟೆಲ್ ನಲ್ಲಿ ಅಕ್ರಮವಾಗಿ ಜೂಜು ಆಡುತ್ತಿದ್ದಾಗ ಈ ವೇಳೆ ಅಲ್ಲೇ ಜೂಜಾಡುತ್ತಿದ್ದ 26 ಮಂದಿಯನ್ನು ವಶಕ್ಕೆ ಪಡೆದಿದ್ದು, ಅಡ್ಡೆಯಲ್ಲಿದ್ದ 24,86,500 ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ತುಮಕೂರು : ಸದ್ಯಕ್ಕೆ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ವಿಚಾರ ಅಪ್ರಸ್ತುತ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ತುಮಕೂರಿನಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇ ತಿಂಗಳೊಳಗೆ ಬಿಬಿಎಂಪಿ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಆಗಬೇಕು ಎಂದು ಕೋರ್ಟ್ ಹೇಳಿದೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸರ್ಕಾರಕ್ಕೆ ಜನ ಉತ್ತರ ಕೊಡುತ್ತಾರೆ. ಸಿಎಂ, ಡಿಸಿಎಂ ಸಚಿವರ ನಡುವೆ ಸಮನ್ವಯ ಇಲ್ಲ. ಅವರ ಒಳಜಗಳದಿಂದಲೇ ಚುನಾವಣೆ ಮುಂದೂಡುತ್ತಿರಬಹುದು. ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯ ಬಗ್ಗೆ ನಾಯಕರು ನಿರ್ಧರಿಸುತ್ತಾರೆ. ಸಮನ್ವಯ ಸಮಿತಿ ಮಾಡಿ ಕಾರ್ಯಕರ್ತರಿಗೆ ಸಿಹಿ ಸುದ್ದಿ ನೀಡುತ್ತಾರೆ ಎಂದರು. ಎಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ ಮೇಲೆ ಕೆಲಸ ಮಾಡುತ್ತಿಲ್ಲ ಅನ್ನೋದಿದೆ. ವಯಸ್ಸಿಗೆ ಮೀರಿ ಎಚ್ ಡಿ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷರ ವಿಚಾರ ಸದ್ಯಕ್ಕೆ ಅಪಪ್ರಸ್ತುತ. ಸದ್ಯಕ್ಕೆ ಜೆಡಿಎಸ್ ಅಧ್ಯಕ್ಷರಾಗಿ ಎಚ್ ಡಿ…
ಧಾರವಾಡ : ಧಾರವಾಡದಲ್ಲಿ ಗ್ಯಾಸ್ ಲೀಕ್ ಆಗಿ ಮನೆ ಒಂದು ಹೊತ್ತಿ ಉರಿದು ಛಿದ್ರ ಛಿದ್ರವಾಗಿರುವ ಘಟನೆ ಧಾರವಾಡ ತಾಲೂಕಿನಲ್ಲಿ ಈ ಒಂದು ಘಟನೆ ನಡೆದಿದೆ. ಸಿದ್ದವ ದಾನಪ್ಪ ನವರಿಗೆ ಸೇರಿದ ಮನೆ ಗ್ಯಾಸ್ ಲೀಕ್ ನಿಂದ ಮನೆ ಸ್ಫೋಟಗೊಂಡಿದೆ. ಈ ವೇಳೆ ಮನೆಯವರು ಎಲ್ಲರೂ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಮನೆಯಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.ಅಗ್ನಿಶಾಮಕದಳ ಕೂಡಲೇ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ : ನಿನ್ನೆ ಬೆಳಗಾವಿಯಲ್ಲಿ ಕನ್ನಡ ಮಾತಾಡು ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಮಹಾರಾಷ್ಟ್ರದ ಹಲವು ಪುಂಡರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ತನ್ನ ಬಸ್ ಗಳ ಸಂಚಾರವನ್ನು ಇದೀಗ ಸ್ಥಗಿತಗೊಳಿಸಿದೆ. ಹೌದು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಿದೆ. ಸಾರಿಗೆ ಬಸ್ ಸಂಚಾರ ಬಂದ್ ಮಾಡಿ ಮಹಾರಾಷ್ಟ್ರ ಸರ್ಕಾರ. ಬೆಳಗಾವಿ ಗಡಿಯವರೆಗೆ ಮಾತ್ರ ಮಹಾರಾಷ್ಟ್ರದ ಸಾರಿಗೆ ಬಸ್ ಗಳು ಇದೀಗ ಬರುತ್ತವೆ. ಕರ್ನಾಟಕದಿಂದ ಎಂದಿನಂತೆ ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರ ನಡೆಸುತ್ತಿವೆ. ಮಹಾರಾಷ್ಟ್ರದ ವಿವಿಧ ಕಡೆಗೆ ಕರ್ನಾಟಕದ ಸಾರಿಗೆ ಬಸ್ಗಳು ಸಂಚರಿಸುತ್ತಿವೆ. ಪ್ರಕರಣ ಹಿನ್ನೆಲೆ? ಮರಾಠಿ ಬರಲ್ಲ ಕನ್ನಡ ಮಾತನಾಡಿ ಎಂದಿದ್ದಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಗೆ ಮರಾಠಿ ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಹದೇವ್ ಹಲ್ಲೆಗೊಳಗಾದ ಕಂಡೆಕ್ಟರ್ ಎಂದು ತಿಳಿದುಬಂದಿದೆ. ಬೆಳಗಾವಿಯಲ್ಲಿ ಮತ್ತೆ ಮರಾಠಾ ಯುವಕರು ಗೂಂಡಾಗಿರಿ ಮೆರೆದಿದ್ದಾರೆ. ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಯುವತಿಯೊಬ್ಬಳು ಮರಾಠಿಯಲ್ಲಿ…