Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ A1 ಪವಿತ್ರ ಗೌಡ ಹಾಗೂ A2 ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಏಪ್ರಿಲ್ 8ಕ್ಕೆ ವಿಚಾರಣೆ ಮುಂದೂಡಿ ಆದೇಶ ನೀಡಿದರು. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗ್ಲೇ ರೆಗ್ಯುಲರ್ ಬೇಲ್ ಪಡೆದು ಬಿಡುಗಡೆಯಾಗಿರುವ ನಟ ದರ್ಶನ್ ಹಾಗೂ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾಗೌಡ ಸೇರಿದಂತೆ ಎಲ್ಲ ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾಗಿದ್ದರೆ. ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಇಂದು ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ನಟ ದರ್ಶನ್ ಹಾಜರಾಗಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ಏಪ್ರಿಲ್ 8ರಂದು ವಿಚಾರಣೆ ಮುಂದೂಡಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ವಿಚಾರಣೆ ಫೆ.25 ಕ್ಕೆ ಮುಂದೂಡಿ ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ಆದೇಶ…
ಬೆಳಗಾವಿ : ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಕೆಎಸ್ಆರ್ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಕಾನೂನು ಅನ್ನು ದುರ್ಬಳಕೆ ಮಾಡಿಕೊಂಡ ಆರೋಪಿಗಳು ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲೇನೆ ಪ್ರಕರಣ ದಾಖಳಿಸಿದ್ದಾರೆ. ಇದೀಗ ಇದೆ ಪ್ರಕರಣ ದಾಖಲಿಸಿದಕ್ಕೆ ಸಿಪಿಐ ವರ್ಗಾವಣೆಯಾಗಿದ್ದಾರೆ. ಹೌದು ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿಕೊಂಡಿದ್ದ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ಮಾರಿಹಾಳ ಠಾಣೆಯಿಂದ ಬೆಳಗಾವಿಯ ಸಿಸಿಆರ್‌ಬಿಗೆ ಗುರುರಾಜ್ ಅವರನ್ನು ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದಾರೆ. ಸಧ್ಯ ಮಾರಿಹಾಳ ಠಾಣೆಯ ನೂತನ ಸಿಪಿಐ ಆಗಿ ಮಂಜುನಾಥ ನಾಯಕ ಅವರನ್ನು ನೇಮಕ ಮಾಡಲಾಗಿದೆ. ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಡಕ್ಟರ್ ವಿರುದ್ಧ ಅಪ್ರಾಪ್ತ ಬಾಲಕಿಯಿಂದ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಿಸಿದ ಬಳಿಕ… ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಮಾರಿಹಾಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.…
ಬೆಳಗಾವಿ : ಟಿಕೆಟ್ ವಿಚಾರವಾಗಿ ಕನ್ನಡ ಮಾತನಾಡುವ ಎಂದಿದ್ದಕ್ಕೆ ಬೆಳಗಾವಿಯಲ್ಲಿ ಕಂಡಕ್ಟರ್ ಮಹದೇವಪ್ಪ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವತಿ ಕಂಡಕ್ಟರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಳು. ಇದೀಗ ಸಂತ್ರಸ್ತ ಯುವತಿಯ ತಾಯಿ ಪೋಕ್ಸೋ ಪ್ರಕರಣವನ್ನು ಹಿಂಪಡೆದಿದ್ದೇವೆ. ಈ ಒಂದು ಪ್ರಕರಣ ಇಲ್ಲಿಗೆ ಬಿಟ್ಟುಬಿಡಿ ಬೆಳೆಸಬೇಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ವಿಡಿಯೋ ಹೇಳಿಕೆಯಲ್ಲಿ ಅವರು, ನಾವು ಸಹ ಕನ್ನಡಿಗರು ಇದನ್ನು ಬೆಳೆಸಬೇಡಿ ನಾವು ಮರಾಠಿಗರು ಆದರೂ ಕನ್ನಡ ಭಾಷೆ ಮಾತನಾಡುತ್ತೇವೆ. ಹಾಗಾಗಿ ಈ ಒಂದು ಘಟನೆ ಮುಂದಕ್ಕೆ ತೆಗೆದುಕೊಂಡು ಹೋಗದೆ ಬೆಳೆಸದೆ ಇಲ್ಲಿಗೆ ಬಿಟ್ಟುಬಿಡಿ. ಪೋಕ್ಸೋ ಕೇಸ್ ಹಿಂಪಡೆದಿದ್ದೇವೆ. ನಾವು ಸಹ ಕನ್ನಡಿಗರು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಟಿಕೆಟ್ ವಿಚಾರವಾಗಿ ನಮ್ಮಮಗಳ ಹಾಗೂ ಕಂಡಕ್ಟರ್ ನಡುವೆ ಜಗಳ ನಡೆದಿದೆ. ಬಳಿಕ ನನ್ನ ಮಗಳು ಕಂಡಕ್ಟರ್ ವಿರುದ್ಧ ಹೋಗ್ತೋ ಕೇಸ್ ದಾಖಲಿಸಿದ್ದಾಳೆ ಭಾಷೆ ವಿಚಾರವಾಗಿ ಕರ್ನಾಟಕ ಮಹಾರಾಷ್ಟ್ರ ನಡುವೆ ಗಲಾಟೆ ನಡೆಯುವುದು ಬೇಡ. ಭಾಷೆ ಮರಾಠಿಯ ಆಗಿದ್ದರು ನಾವು…
ಬೆಳಗಾವಿ : ಬೆಳಗಾವಿಯಲ್ಲಿ ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಡಕ್ಟರ್ ಅವರನ್ನು ಭೇಟಿಯಾದ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಮಾದೇವಪ್ಪ ಹುಕ್ಕೇರಿ ಅವರ ಆರೋಗ್ಯವನ್ನು ವಿಚಾರಿಸಿದರು. ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಭೇಟಿಯಾಗಿ ಮಹದೇವಪ್ಪ ಆರೋಗ್ಯ ಅವರ ವಿಚಾರಿಸಿದರು. ಕರವೇ ಕಾರ್ಯಕರ್ತರು ಈ ವೇಳೆ ಅವರಿಗೆ ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಡಕ್ಟರ್ ಅವರನ್ನು ಭೇಟಿ ಮಾಡಿದೆ ಅವರಿಗೆ ಇನ್ನು ತುಂಬಾ ಎದೆ ನೋವು ಇದೆ. ಮಹಾರಾಷ್ಟ್ರದ ಪುಂಡರು ಅವರ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಅವರಿಗೆ ಇನ್ನೂ ನೋವು ಕಡಿಮೆ ಆಗಿಲ್ಲ ನನ್ನ ಎದುರುಗಡೆ ಕಣ್ಣೀರು ಹಾಕಿದರು. ಬೆಳಗಾವಿಯಲ್ಲಿ ಕನ್ನಡ ಮಾತನಾಡು ಎಂದಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಗೆ ಹಾಕುತ್ತಾರೆ ಅಂದರೆ ಇಲ್ಲಿಯ ಅಧಿಕಾರಿಗಳು ಜಿಲ್ಲಾಡಲೀಟ್ ರಾಜಕಾರಣಿಗಳು ಯಾಕೆ ಇದಾರೆ ಯಾಕೆ ಇಲ್ಲಿ ಬದುಕುತ್ತಾ ಇದ್ದೀರಿ ನೀವು? ಆ ವಯಸ್ಸಲ್ಲಿ ಒದೆ ತಿಂದು ಕನ್ನಡಿಗ ಬೆಡ್ ಮೇಲೆ ಮಲಗಿಕೊಂಡು ಕಣ್ಣೀರು ಹಾಕುತ್ತಾನಲ್ಲ ನಿಮಗೆ ಏನಾದರೂ…
ಕೊಪ್ಪಳ : ರಾಜ್ಯದಲ್ಲಿ ಸಾಲಗಾರರ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ವಿಷ ಸೇವಿಸಿ ಪಡಿತರ ವಿತರಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಹಾಳ ಗ್ರಾಮದಲ್ಲಿ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಯಂಕಪ್ಪ ಬಂಗಿ (38) ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ರಾತ್ರಿ ಯಂಕಪ್ಪ ಬಂಗಿ ವಿಷ ಸೇವಿಸಿದ್ದು, ಕೂಡಲೇ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ಯಂಕಪ್ಪ ವಿವಿಧೆಡೆ 20 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದ. ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ವಿಚಾರವಾಗಿ ಪುತ್ರ ಎಂಎಲ್ಸಿ ಯತೀಂದ್ರ ಅವರು ಹೇಳಿಕೆ ನೀಡಿದ್ದು, ನ್ಯಾಯ ಸತ್ಯ ನಮ್ಮ ಪರವಾಗಿ ಇದೆ ಎಂದು ಮೊದಲಿನಿಂದಲೂ ಹೇಳುತ್ತಿದ್ದೆವು. ಹಾಗಾಗಿ ಈಗ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಅವರು ತಿಳಿಸಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬಸ್ಥರು ಯಾರು ಕಾನೂನುಬಾಹಿರವಾಗಿ ಕೆಲಸ ಮಾಡಿಲ್ಲ. ಮುಡಾ ಸೈಟ್ ಪಡೆದ ವಿಚಾರವಾಗಿ ಕಾನೂನುಬಾಹಿರ ಕೆಲಸ ಮಾಡಿಲ್ಲ. ಮುಡಾದವರು ಅನಧಿಕೃತವಾಗಿ ನಮ್ಮ ಜಮೀನು ವಶಪಡಿಸಿಕೊಂಡಿದ್ದರು. ಅನಧಿಕೃತವಾಗಿ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ಕೊಡಬೇಕಿತ್ತು. ಬೇರೆಯವರಿಗೆ ಪರಿಹಾರ ಕೊಟ್ಟಂತೆ ಅದೇ ರೀತಿ ನಮಗೂ ಕೊಟ್ಟಿದ್ದಾರೆ. ಇದನ್ನು ದೊಡ್ಡ ಹಗರಣ ಅಂತ ಬಿಂಬಿಸಿ ವರ್ಚಸ್ಸು ಕುಗ್ಗಿಸಲು ಯತ್ನಿಸಲಾಯಿತು. ಸಿಎಂ ಸಿದ್ದರಾಮಯ್ಯನವರು ವರ್ಚಸ್ಸು ಕೂಗ್ಗಿಸಲು ಪ್ರಯತ್ನ ಮಾಡಿದರು. ಲೋಕಾಯುಕ್ತ ತನಿಖೆ ಮಾಡಿ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದೆ. ಕೋರ್ಟ್ ಕೂಡ ಇದನ್ನು ಒಪ್ಪಿಕೊಂಡಿದೆ. ಲೋಕಾಯುಕ್ತ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ಮಾಡಿದ್ದಾರೆ. ಇಡಿ ಏನೇ…
ವಿಜಯಪುರ : ನಿನ್ನೆ ತಾನೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಯಾಗ್ರಾಜ್ ನ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ 6 ಜನರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೀಗ ಗುಜರಾತ್ ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು ರಾಜ್ಯದ ವಿಜಯಪುರ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಗುಜರಾತ್ ನ ಪೋರ್ ಬಂದರ್ ಬಳಿ ಭೀಕರ ಅಪಘಾತ ಸಂಭವಿಸಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಬ್ಬರು ಸಾವನಪ್ಪಿದ್ದಾರೆ. ನಿಂತಿದ್ದ ಟಿಪ್ಪರ್ ಗೆ ವಾಹನವೊಂದು ವೇಗವಾಗಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ಇಬ್ಬರೂ ಸಾವನಪ್ಪಿದ್ದಾರೆ. ವಿಶ್ವನಾಥ ಅವಜಿ (55) ಹಾಗೂ ಮಲ್ಲಿಕಾರ್ಜುನ ಸದ್ದಲಗೆ (40) ಮೃತ ದುರ್ದೇವಿಗಳು ಎಂದು ತಿಳಿದುಬಂದಿದೆ.
ಚಾಮರಾಜನಗರ : ಕಳೆದ ಎರಡು ದಿನಗಳ ಹಿಂದೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಇದೀಗ ಮಾದೇಶ್ವರ, ಕಾವೇರಿ ವನ್ಯಧಾಮಗಳಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ. ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಮಹದೇಶ್ವರ ವನ್ಯಧಾಮದ ಹನೂರು ವಲಯ ಹೂಗ್ಯಮ ಪಿ.ಜಿ ಪಾಳ್ಯ ಅರಣ್ಯ ವಲಯದಲ್ಲಿ ಈ ಒಂದು ಬೆಂಕಿ ಕಾಣಿಸಿಕೊಂಡಿದೆ. ಕಾವೇರಿ ವನ್ಯಧಾಮದ ಕೊತ್ತನೂರು, ಅಲ್ದಾಳುಗಳಲ್ಲಿ ಬೆಂಕಿ ಅವಗಡ ಸಂಭವಿಸಿದೆ. ಬೆಂಕಿಯಿಂದಾಗಿ ನೂರಾರು ಎಕರೆಯ ಅರಣ್ಯ ಪ್ರದೇಶ ನಾಶವಾಗಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಮಾದೇಶ್ವರ ಕಾವೇರಿ ವನ್ಯಧಾಮದಲ್ಲಿ ಈ ಒಂದು ಅಗ್ನಿ ಅವಘಡಕ್ಕೆ ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗುತ್ತಿದೆ. ಕೊನೆಗೂ ಬೆಂಕಿ ನಂದಿಸುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾದರು.
BREAKING : ಬೆಂಗಳೂರಲ್ಲಿ ‘ಪ್ರೆಸ್ಟೀಜ್ ಗ್ರೂಪ್’ ಕಛೇರಿ ಮೇಲೆ ‘IT’ ಅಧಿಕಾರಿಗಳಿಂದ ಏಕಾಏಕಿ ದಾಳಿ : ದಾಖಲೆ ಪರಿಶೀಲನೆ
ಬೆಂಗಳೂರು : ಬೆಂಗಳೂರಿನಲ್ಲಿ ಪ್ರೆಸ್ಟೀಜ್ ಗ್ರೂಪ್ ಕಚೇರಿ ಮೇಲೆ ಐಟಿ ದಾಳಿ ಎಂಡಿ ರಸ್ತೆಯಲ್ಲಿರುವ ಮುಖ್ಯ ಕಚೇರಿ ಸೇರಿದಂತೆ ನಾಲ್ಕು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಚೇರಿ ಮೇಲೆ ನಾಲ್ಕು ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು ಸುಮಾರು 50ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ, ಪ್ರೆಸ್ಟೀಜ್ ಗ್ರೂಪ್ ಕಚೇರಿಯ ಮೇಲೆ ನಾಲ್ಕು ತಂಡಗಳನ್ನು ಒಳಗೊಂಡ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಈ ಗ್ರೂಪ್ ನಿಂದ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ದಾಳಿ ಮಾಡಿ ತಪಾಸಣೆ ನಡೆಸಲಾಗುತ್ತದೆ. ಅಪಾರ್ಟ್ಮೆಂಟ್ ನಿರ್ಮಾಣ ಸೇರಿ ಹಲವು ಉದ್ಯಮಗಳನ್ನು ಪ್ರೆಸ್ಟೀಜ್ ಗ್ರೂಪ್ ಹೊಂದಿದೆ. ಪ್ರೆಸ್ಟೀಜ್ ಗ್ರೂಪ್ ಗೆ ಸಂಬಂಧಿಸಿದಂತೆ ನಾಲ್ಕು ಕಡೆ ಏಕಾಏಕಿ ದಾಳಿ ಮಾಡಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ : ಮನೆಯಲ್ಲಿ ಗ್ಯಾಸ್ ಲೀಕ್ ಆಗಿ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡು ರಾಜಸ್ಥಾನ ಮೂಲದ ಮೂವರು ಕಾರ್ಮಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಹಾಳ ಬಳಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ರಾಜಸ್ಥಾನ ಮೂಲದ ಸುಭಾಸ್, ಅಶೋಕ್, ಮಾಂಗಿಲಾಲ್ ಎಂದು ಗುರುತಿಸಲಾಗಿದೆ. ಇವರು ಕಳೆದ ಒಂದು ವರ್ಷದಿಂದ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿನ ಓಂ ಸಾಯಿ ಗ್ಯಾಸ್ ಏಜನ್ಸಿಯಲ್ಲಿ ಡಿಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ತಾರಿಹಾಳ ತೋಟದ ಮನೆಯೊಂದರಲ್ಲಿ ಅಡುಗೆ ಮಾಡಲು ಹೋದ ಸಂದರ್ಭದಲ್ಲಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಮಲಗಿದ್ದ ಇಬ್ಬರು ಕಾರ್ಮಿಕರು ಹಾಗೂ ಅಡುಗೆ ಮಾಡಲು ಹೋಗಿದ್ದ ಓರ್ವ ಕಾರ್ಮಿಕ ಸೇರಿ ಒಟ್ಟು ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಳುಗಳನ್ನು ಹುಬ್ಬಳ್ಳಿಯ ಕೆಎಂಸಿಆರ್ಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.