Author: kannadanewsnow05

ಬೆಂಗಳೂರು : ಬೆಂಗಳೂರಲ್ಲಿ ಅಕ್ರಮವಾಗಿ ವಾಸವಿದ್ದ ವಿದೇಶಿ ಪ್ರಜೆಗಳ ವಿರುದ್ಧ ಇದೀಗ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಶ್ರೀಲಂಕಾದ ಮೂವರು ಪ್ರಜೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ದೇವನಹಳ್ಳಿ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ನಲ್ಲಿ ಶ್ರೀಲಂಕಾದ ಮೂವರು ಪ್ರಜೆಗಳು ವಾಸವಿದ್ದರು. ಇದೀಗ ಮೂವರು ಶ್ರೀಲಂಕಾ ಪ್ರಜೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಶ್ರೀಲಂಕಾದ ಜಾಫ್ನ ದಿಂದ ಬೋಟ್ ಮೂಲಕ ತಮಿಳುನಾಡಿಗೆ ಮೂವರು ಶ್ರೀಲಂಕಾ ಪ್ರಜೆಗಳು ಎಂಟ್ರಿ ಆಗಿದ್ದಾರೆ. ಅಲ್ಲಿಂದ ನೇರವಾಗಿ ರಾಮೇಶ್ವರಂ ಗೆ ಹೋಗಿದ್ದ ಮೂವರು ಶ್ರೀಲಂಕಾ ಪ್ರಜೆಗಳು, ಬಳಿಕ ಸ್ಥಳೀಯ ವ್ಯಕ್ತಿಯ ಸಹಾಯ ಪಡೆದು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಅಕ್ರಮವಾಗಿ ಮೂವರು ವಾಸವಿದ್ದರು. ಇದೀಗ ಶ್ರೀಲಂಕಾದ ಮೂವರು ಪ್ರಜೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಕುರಿತು ನಿನ್ನೆ ತಾನೆ ಸಿಎಂ ಸಿದ್ದರಾಮಯ್ಯ ಬೆಂಗಳೂರು ಸಿಟಿ ರೌಂಡ್ ಮಾಡಿ ಅಧಿಕಾರಿಗಳಿಗೆ ಒಂದು ತಿಂಗಳಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಕಡಕ್ ಸೂಚನೆ ನೀಡಿದ್ದಾರೆ.ಇದರ ಬೆನ್ನಲ್ಲೆ, ರಸ್ತೆ ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ದ್ವಿತೀಯ ವರ್ಷದ ಬಿಕಾಂ ಪದವಿ ಓದುತ್ತಿದ್ದ ಧನುಶ್ರೀ (22) ವಿದ್ಯಾರ್ಥಿನಿ ದುರ್ಮರಣ ಹೊಂದಿದ್ದಾಳೆ. ಬೆಂಗಳೂರಿನ ಬೂದಿಗೆರೆ ಕ್ರಾಸ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ವಿದ್ಯಾರ್ಥಿನಿ ಧನುಶ್ರೀ ರಸ್ತೆಯಲ್ಲಿ ಗುಂಡಿ ಇರುವುದರಿಂದ ಅದನ್ನು ತಪ್ಪಿಸಲು ಹೋಗಿ ವಿದ್ಯಾರ್ಥಿಗೆ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಟಿಪ್ಪರ್ ಹರಿದಿದೆ. ಸದ್ಯ ಘಟನಾ ಸ್ಥಳಕ್ಕೆ ಕೆಆರ್ ಪುರಂ ಸಂಚಾರಿ ಠಾಣೆ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Read More

ಚಿಕ್ಕಮಗಳೂರು : ರಾಜ್ಯ ಸರಕಾರದಿಂದ ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುತ್ತಿದ್ದು, ಸಮೀಕ್ಷೆಗೆ ಗೈರಾಗಿದ್ದ ಶಿಕ್ಷಕರಿಗೆ ಕಾರಣ ಕೇಳಿ ಇದೀಗ ನೋಟಿಸ್ ಜಾರಿಗೊಳಿಸಲಾಗಿದೆ. ಶಿಕ್ಷಕರಿಗೆ ಕಾರಣ ಕೇಳಿ ಚಿಕ್ಕಮಗಳೂರು ಡಿಡಿಪಿಐ ನೋಟಿಸ್ ಜಾರಿ ಮಾಡಿದ್ದಾರೆ. ಸಮೀಕ್ಷೆ ಆರಂಭವಾದ ದಿನದಿಂದ ಶಿಕ್ಷಕರು ಗೈರಾಗಿದ್ದಾರೆ. ಗೈರಾದ 18 ಶಿಕ್ಷಕರಿಗೆ ಡಿಡಿಪಿಐ ತಿಮ್ಮರಾಜು ನೋಟಿಸ್ ನೀಡಿದ್ದಾರೆ. ಗೈರು ಆಗಿರುವುದಕ್ಕೆ ಕಾರಣ ಕೇಳಿ ಕ್ರಮದ ಎಚ್ಚರಿಕೆ ನಡೆಯನ್ನು ನೋಟಿಸ್ ನೀಡಿದ್ದಾರೆ. ಡಿಡಿಪಿಐ ಅಥವಾ ತಹಶೀಲ್ದಾರ್ ಗೆ ದಾಖಲೆ ನೀಡುವಂತೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 2882 ಶಿಕ್ಷಕರು ಸಮೀಕ್ಷೆಗೆ ನೇಮಕವಾಗಿದ್ದಾರೆ. ನೇಮಕವಾದ 2882 ಶಿಕ್ಷಕರ ಪೈಕಿ 18 ಶಿಕ್ಷಕರು ಮೊದಲ ದಿನದಿಂದಲೇ ಸಮೀಕ್ಷೆಗೆ ಗೈರಾಗಿದ್ದಾರೆ. ಕಳಸ ಹಾಗೂ ಶೃಂಗೇರಿ ತಾಲೂಕಿನಲ್ಲಿ ಅತಿ ಕಡಿಮೆ ಸಮೀಕ್ಷೆ ನಡೆದಿದೆ. ಹಾಗಾಗಿ ಸಮೀಕ್ಷೆಗೆ ಗೈರಾಗಿದ್ದಕ್ಕೆ ಕಾರಣ ಕೇಳಿ ಎಚ್ಚರಿಕೆ ಕ್ರಮ ನೀಡಿ ನೋಟಿಸ್ ನೀಡಿದ್ದಾರೆ.

Read More

ದಕ್ಷಿಣಕನ್ನಡ : ಧರ್ಮಸ್ಥಳ ಪ್ರಕರಣದ ತನಿಖೆ ಚುರುಕುಗೊಳಿಸಿದ ಎಸ್ಐಟಿ ಧರ್ಮಸ್ಥಳ ಗ್ರಾಂ ಪಂಚಾಯಿತಿ ಮಾಜಿ ಅಧ್ಯಕ್ಷರಿಗೆ ಬುಲಾವ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ನಾಲ್ವರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ವಿಚಾರಣೆಗೆ ಹಾಜರಾಗಿದ್ದಾರೆ. ಧರ್ಮಸ್ಥಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೇಶವ ಬೆಳಾಲು, ಗೀತಾ, ಚಂದನ್ ಕಾಮತ್, ಪ್ರಭಾಕರ್ ವಿಚಾರಣೆಗೆ ಹಾಜರಾಗಿದ್ದಾರೆ. ಶವ ಹೂತು ಹಾಕಿರುವ ಕುರಿತು ಎಸ್ಐಟಿ ಅಧಿಕಾರಿಗಳು ಗ್ರಾಂ ಪಂಚಾಯಿತಿ ಮಾಜಿ ಅಧ್ಯಕ್ಷರಿಗೆ ಬುಲಾವ್ ನೀಡಿದ್ದರು. ಹೀಗಾಗಿ ಗ್ರಾಮ ಪಂಚಾಯತಿ ನಾಲ್ವರು ಅಧ್ಯಕ್ಷರು ಬೆಳ್ತಂಗಡಿ ತಾಲೂಕಿನಲ್ಲಿರುವ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

Read More

ಬೆಂಗಳೂರು : ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 7.8 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಎಂಡಿಎಂಎ ಕ್ರಿಸ್ಟಲ್ 3.8 ಕೆಜಿ ಹಾಗೂ ಎಂಡಿಎಂಎ ಬ್ರೌನ್ ವೈಟ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಇನ್ನು ದಾಳಿಯ ವೇಳೆ 42 ಗ್ರಾಂ ತೂಕದ 82 ಎಕ್ಸೆಟ್ಸಿ ಮಾತ್ರೆಗಳು, 23 ಕೆಜಿ ಗಾಂಜಾ, ಹಾಗು 482 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆದಿದ್ದಾರೆ ಇನ್ನು ನೈಜೀರಿಯಾ ಮೂಲದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಇದೆ ವೇಳೆ ಅರೆಸ್ಟ್ ಮಾಡಿದ್ದಾರೆ. ಕೆಮಿನ್ ರೋಜರ್ ಮತ್ತು ಥಾಮಸ್ ನವೀದ್ ಬಂಧಿತರು. ಸಿಸಿಬಿ ಮತ್ತು ಮಹದೇವಪುರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಇಬ್ಬರು ಆರೋಪಿಗಳು ದೆಹಲಿ ಮತ್ತು ಮುಂಬೈನಿಂದ ಡ್ರಗ್ಸ್ ತರಿಸುತ್ತಿದ್ದರು. ಹೆಬ್ಬಗೋಡಿಯ ಮನೆ ಒಂದರಲ್ಲಿ ಡ್ರಗ್ಸ್ ಡೀಲ್ ಮಾಡುತ್ತಿದ್ದರು. ವಾಟ್ಸಾಪ್ ಮೂಲಕ ಲೊಕೇಶನ್ ಡ್ರಾಪ್ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಟೆಕ್ಕಿಗಳು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಇತ್ತೀಚಿಗಷ್ಟೇ ಆರೋಪಿಗಳಾದ ಕೆವಿನ್…

Read More

ಮಂಡ್ಯ : ಮಂಡ್ಯದಲ್ಲಿ 18 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ ಮಂಡ್ಯ ಜಿಲ್ಲೆಯ ಹಲಗೂರು ಗ್ರಾಮದಲ್ಲಿ ನಾಯಿಗಳ ದಾಳಿಯಿಂದ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದ ಮೂರು ದಿನಗಳಲ್ಲಿ 18 ಜನರ ಮೇಲೆ ಬೀದಿನಾಯಿಗಳು ಡೆಡ್ಲಿ ಅಟ್ಯಾಕ್ ನಡೆಸಿವೆ. ಹಾಗಾಗಿ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಮಕ್ಕಳು, ವೃದ್ದರು ಹೊರಗೆ ಓಡಾಡುವುದಕ್ಕೆ ಹೆದರುತ್ತೀದ್ದಾರೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸುದಕ್ಕೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮಕ್ಕಳು ಸೇರಿದಂತೆ ಇದುವರೆಗೂ 18 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ.

Read More

ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದರೋಡೆ ಗ್ಯಾಂಗ್ ಒಂದನ್ನು ಪೊಲೀಸರು ಇದೀಗ ಹೆಡೆಮುರಿ ಕಟ್ಟಿದ್ದಾರೆ. ಮಾದನಾಯಕನಹಳ್ಳಿ, ಸೂರ್ಯನಗರ, ನೆಲಮಂಗಲ ದೊಡ್ಡಬಳ್ಳಾಪುರ ಮತ್ತು ಬ್ಯಾಡರಹಳ್ಳಿ ಸುತ್ತಮುತ್ತಲು ಕೇವಲ ಮೂರೇ ಮೂರು ದಿನಗಳಲ್ಲಿ 37 ದರೋಡೆ ಪ್ರಕರಣಗಳು ನಡೆದಿದ್ದವು. ಸದ್ಯ 6 ಮಂದಿ ಅಪ್ರಾಪ್ತರು ಸೇರಿದಂತೆ ಒಟ್ಟು 7 ಜನ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಾಕು ತೋರಿಸಿ ಮೊಬೈಲ್ ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದರು. ಹಣ ಕೊಟ್ಟರೆ ಸೈಲೆಂಟಾಗಿ ತಗೊಂಡು ಎಸ್ಕೇಪ್ ಆಗುತ್ತಿದ್ದರು. ಅಕಸ್ಮಾತ್ ಹಣ ಮೊಬೈಲ್ ಕೊಡಲು ನಿರಾಕರಿಸಿದರೆ ಚಾಕು ಇರಿಯುತ್ತಿದ್ದರು. ಮಾದನಾಯಕನಹಳ್ಳಿ ಠಾಣೆಯಲ್ಲಿ ಚಾಕು ಇರಿದ ಪ್ರಕರಣ ದಾಖಲಾಗಿತ್ತು. ಪೊಲೀಸರು ಅಲರ್ಟ್ ಆಗಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದಾರೆ. ಸೆಪ್ಟೆಂಬರ್ 26ರಂದು ಆಟೋದಲ್ಲಿ ಬಂದು ಕಾರ್ ಮೇಲೆ ಅಟ್ಯಾಕ್ ಮಾಡಿದ್ದಾರೆ, ಆಟೋ ಜಾಡು ಹಿಡಿದು ಪೊಲೀಸರು ರಾಬರ್ಸ್ ರನ್ನ ಬಂಧಿಸಿದ್ದಾರೆ. ಇದೀಗ 6 ಅಪ್ರಾಪ್ತರು ಸೇರಿದಂತೆ ಒಟ್ಟು 7 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಗೆ ಆಗಾಗ ಅನೇಕ ಬೈಕ್ ಸವಾರರು ಸಾವನಪುತ್ತಿರುವ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಇದೀಗ ಹಿಟ್ ಅಂಡ್ ರನ್ ಗೆ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ದ್ವಿತೀಯ ವರ್ಷದ ಬಿಕಾಂ ಪದವಿ ಓದುತ್ತಿದ್ದ ವಿದ್ಯಾರ್ಥಿನಿ ದುರ್ಮರಣ ಹೊಂದಿದ್ದಾಳೆ. ಬೆಂಗಳೂರಿನ ಬೂದಿಗೆರೆ ಕ್ರಾಸ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿ ಹೊಡೆದಿದೆಯಾ? ಅಥವಾ ರಸ್ತೆಯಲ್ಲಿ ಗುಂಡಿ ಇರುವುದರಿಂದ ಅದನ್ನು ತಪ್ಪಿಸಲು ಹೋಗಿ ವಿದ್ಯಾರ್ಥಿಗೆ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಟಿಪ್ಪರ್ ಏನಾದರೂ ವಿದ್ಯಾರ್ಥಿನಿ ಮೇಲೆ ಹರಿದಿದೆಯಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ ಕೆಆರ್ ಪುರಂ ಸಂಚಾರಿ ಠಾಣೆ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆಸಿದ ಘಟನೆ ಇಡಿ ರಾಜ್ಯಾದ್ಯಂತ ಹಿಂದೂ ಕಾರ್ಯಕರ್ತರನ್ನು ಕೆರಳಿಸಿತ್ತು. ಇದೀಗ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪೂರ್ವಯೋಜಿತ ಕೃತ್ಯವೆಂಬುದು ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ 32 ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಹೌದು ಪೊಲೀಸರ ತನಿಖೆಯಲ್ಲಿ ಕಲ್ಲುತೂರಾಟ ಪೂರ್ವ ನಿಯೋಜಿತ ಎನ್ನುವ ಸ್ಫೋಟಕ ಅಂಶ ಬಯಲಾಗಿದೆ ಈ ವಿಚಾರವಾಗಿ, ತನಿಖೆಯ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದು, ಸ್ವಾಮಿ ಎಂಬುವವರ ನೇತೃತ್ವದಲ್ಲಿ ಕೂರಿಸಿದ್ದ ಗಣೇಶ ಮೂರ್ತಿ ಮೇಲೆ ಕಲ್ಲು ತೂರಲು ಪೂರ್ವಯೋಜನೆ ಮಾಡಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಟಾರ್ಗೆಟ್ ಮಾಡಿದ್ದ ಗಣೇಶ ಮೆರವಣಿಗೆಯ ಬದಲು ಬೇರೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿರುವುದು ಪತ್ತೆಯಾಗಿದೆ. ಮದ್ದೂರಿನ ರಾಮ್​ ರಹೀಮ್ ನಗರದಲ್ಲಿ ಗಣೇಶ ಮೆರವಣಿಗೆ ವೇಳೆ ಸೆಪ್ಟೆಂಬರ್ 7 ರಂದು ಸಂಜೆ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿತ್ತು. ಘಟನೆ ನಂತರ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ…

Read More

ಬಾಗಲಕೋಟೆ : ಬಾಗಲಕೋಟೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಅಪಘಾತ ಸಂಭವಿಸಿದ್ದು, ಇನೋವಾ ಕಾರು ಹಾಗೂ ಟಂಟಂ ವಾಹನ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಬ್ರಿಡ್ಜ್ ಬಳಿ ಒಂದು ಘಟನೆ ನಡೆದಿದೆ. ಮಹೇಶ್ ನಾಯ್ಕರ್ (27) ಹಾಗೂ ಮಹಬೂಬ್ ಶೇಖ್ (30) ಮೃತ ದುರ್ದವಿಗಳು, ಇನ್ನು ಅಪಘಾತದಲ್ಲಿ ವಿಶಾಲ ವರತಿಲ್ಲೆ, ವಿಜಯಕುಮಾರ್ ಹಾಗೂ ಗುರುಪ್ರಸಾದ್ ಎನ್ನುವವರಿಗೆ ಗಂಭೀರವಾದ ಗಾಯಗಳಾಗಿವೆ.  ಮೃತರು ಮತ್ತು ಗಾಯಾಳುಗಳು ನವನಗರದ 45 ನೇ ಸೆಕ್ಟರ್ ನಿವಾಸಿಗಳೇ ಆಗಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಇನ್ನೋವಾ ಕಾರು ಚಾಲಕನ ಅಜಾಗರೂಕತೆ ಚಾಲನೆ ಕಾರಣ ಎಂದು ಹೇಳಲಾಗುತ್ತಿದೆ. ಮುಂದೆ ಹೋಗುತ್ತಿದ್ದ ಮಹಿಂದ್ರಾ ಪಿಕ್ ಅಪ್ ವಾಹನ್ ಡಿಕ್ಕಿ ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಟಂ ಟಂ ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More